Tag: ನಿರುದ್ಯೋಗಿ ಶಿಕ್ಷಕರು

  • ಸಿಎಂ ರ‍್ಯಾಲಿ ವೇಳೆ ನಿರುದ್ಯೋಗಿ ಶಿಕ್ಷಕರ ಮೇಲೆ ಪೊಲೀಸರ ದಬ್ಬಾಳಿಕೆ – ವೀಡಿಯೋ ವೈರಲ್

    ಸಿಎಂ ರ‍್ಯಾಲಿ ವೇಳೆ ನಿರುದ್ಯೋಗಿ ಶಿಕ್ಷಕರ ಮೇಲೆ ಪೊಲೀಸರ ದಬ್ಬಾಳಿಕೆ – ವೀಡಿಯೋ ವೈರಲ್

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ವಿರುದ್ಧ ಸಂಗ್ರೂರ್‌ನಲ್ಲಿ ನಡೆಸಿದ ಪ್ರತಿಭಟನೆ ವೇಳೆ ನಿರುದ್ಯೋಗಿ ಶಿಕ್ಷಕರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಂಗ್ರೂರಿನ ಫತೇಘರ್ ಸನ್ನಾ ಗ್ರಾಮದ ಸಿಮೆಂಟ್ ಕಾರ್ಖಾನೆ ಉದ್ಘಾಟನೆಗೆ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರು ಮಂಗಳವಾರ ಆಗಮಿಸಿದ್ದರು. ಈ ವೇಳೆ ಚರಂಜಿತ್ ಸಿಂಗ್ ಚನ್ನಿ ಅವರು ಭಾಷಣವನ್ನು ಆರಂಭಿಸಲು ಮುಂದಾದಾಗ, ಬಿ.ಎಡ್ ಶಿಕ್ಷಣ ಅರ್ಹತೆ ಪಡೆದಿರುವ ಶಿಕ್ಷಕರ ಗುಂಪು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು. ಜೊತೆಗೆ ಉದ್ಯೋಗ ನೀಡುವಂತೆ ಒತ್ತಾಯಿಸಿದರು.

    ಹೀಗಾಗಿ ಪೊಲೀಸರು ಮಹಿಳೆಯರು ಸೇರಿದಂತೆ ಪ್ರತಿಭಟನಾಕಾರರನ್ನು ಸ್ಥಳದಿಂದ ಎಳೆದೊಯ್ದು ವಾಹನಗಳಲ್ಲಿ ತುಂಬಿದರು. ಅಲ್ಲದೇ ಘೋಷಣೆ ಕೂಗಲು ಮುಂದಾದ ಶಿಕ್ಷಕರ ಬಾಯಿ ಮುಚ್ಚಿ ಧರಧರನೇ ಎಳೆದೊಯ್ದಿದ್ದಾರೆ. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್‍ಗೈದ್ರು

    ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿ ನಮ್ಮನ್ನು ನಡೆಸಿಕೊಳ್ಳುತ್ತಿದ್ದಾರೆ. ಆದರೆ ಇಂದಿಗೂ ಉದ್ಯೋಗ ಸಿಕ್ಕಿಲ್ಲ. 9,000 ಶಿಕ್ಷಕರ ಹುದ್ದೆಗಳಿಗೆ ಸರ್ಕಾರ ಇನ್ನೂ ನೇಮಕಾತಿಯನ್ನು ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿಗಳು ಭರವಸೆ ನೀಡುವುದರಲ್ಲಿ ಮಾತ್ರ ನಿಪುಣರು ಎಂದು ನಿರುದ್ಯೋಗಿ ಶಿಕ್ಷಕರು ತಮ್ಮ ಅಳನ್ನು ತೋಡಿಕೊಂಡಿದ್ದಾರೆ.

    ವೇತನವನ್ನು ಹೆಚ್ಚಿಸುವಂತೆ ಮತ್ತು ಉದ್ಯೋಗ ಖಾಯಂಗೊಳಿಸುವ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪಂಜಾಬ್‍ನಾದ್ಯಂತ ಶಿಕ್ಷಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!