Tag: ನಿಯಮ ಉಲ್ಲಂಘನೆ

  • ನಮ್ಮ ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ನಿಯಮ ಉಲ್ಲಂಘನೆ ಪ್ರಕರಣ ದಾಖಲು

    ನಮ್ಮ ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ನಿಯಮ ಉಲ್ಲಂಘನೆ ಪ್ರಕರಣ ದಾಖಲು

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಕಳೆದ 6 ತಿಂಗಳಲ್ಲಿ ಒಟ್ಟು 27 ಸಾವಿರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿವೆ.ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ವಜಾ – ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ಪ್ರಜ್ವಲ್ ರೇವಣ್ಣ

    ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿಯಮ ಉಲ್ಲಂಘಿಸಿದ್ದು, ಕಳೆದ 6 ತಿಂಗಳಲ್ಲಿ ಒಟ್ಟು 27 ಸಾವಿರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಭದ್ರತಾ ಸಿಬ್ಬಂದಿ ದಂಡ ವಿಧಿಸದೇ ಎಚ್ಚರಿಕೆ ನೀಡಿದ್ದಾರೆ.

    ಒಟ್ಟು 27 ಸಾವಿರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಆ ಪೈಕಿ ಮೊಬೈಲ್‌ನಲ್ಲಿ ಜೋರಾಗಿ ಸಂಗೀತ ಹಾಕಿದ್ದಕ್ಕಾಗಿ 11,922 ಪ್ರಕರಣಗಳು, ವಿಶೇಷ ಚೇತನರು, ಗರ್ಭಿಣಿಯರು, ಹಿರಿಯ ನಾಗರಿಕರಿಗೆ ಆಸನ ನೀಡದಿದ್ದಕ್ಕಾಗಿ 14,162 ಪ್ರಕರಣಗಳು, ಮೆಟ್ರೋದಲ್ಲಿ ಆಹಾರ ಸೇವಿಸಿದ್ದಕ್ಕಾಗಿ 554 ಹಾಗೂ ದೊಡ್ಡ ಗಾತ್ರದ ಲಗೇಜ್ ಸಾಗಿಸಿದ್ದಕ್ಕೆ 474 ಪ್ರಕರಣಗಳು ದಾಖಲಾಗಿವೆ.ಇದನ್ನೂ ಓದಿ: ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಆಸ್ತಿ ವಿವರ ಬಹಿರಂಗ – ವೆಬ್‍ಸೈಟ್‌ಲ್ಲಿ ಮಾಹಿತಿ ಅಪ್ಲೋಡ್‍ಗೆ ನಿರ್ಧಾರ

  • ವಿಮಾನ ನಿಯಮ ಕಾಯ್ದೆ ಉಲ್ಲಂಘನೆ- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ

    ವಿಮಾನ ನಿಯಮ ಕಾಯ್ದೆ ಉಲ್ಲಂಘನೆ- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ

    ಶಿವಮೊಗ್ಗ: ವಿಮಾನ ನಿಯಮ ಕಾಯ್ದೆ (Aviation Rules) ಉಲ್ಲಂಘಿಸಿದ್ದಕ್ಕೆ ವಿಮಾನಯಾನ ನಿರ್ದೇಶನಾಲಯವು (DGCA) ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga Airport) ನೋಟಿಸ್ ಜಾರಿ ಮಾಡಿದ್ದು, 20 ಲಕ್ಷ ರೂ. ದಂಡ (Penalty) ವಿಧಿಸಿದೆ. ನೊಟೀಸ್ ತಲುಪಿದ 30 ದಿನಗಳ ಒಳಗೆ ದಂಡ ಪಾವತಿಸಬೇಕು ಎಂದು ಆಪರೇಷನ್ಸ್ ವಿಭಾಗದ ನಿರ್ದೇಶಕ ಚಂದ್ರ ಮಣಿ ಪಾಂಡೆ ಆದೇಶಿಸಿದ್ದಾರೆ.

    ಕಳೆದ ಜುಲೈ 10 ರಿಂದ 12ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಸಿಎ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭ ನಿರ್ವಹಣೆ ಕೊರತೆ ಗಮನಕ್ಕೆ ಬಂದಿತ್ತು. ವಿಮಾನಯಾನಕ್ಕೆ ಅಗತ್ಯ ಮಾನದಂಡ ಮತ್ತು ಸುರಕ್ಷತೆ ಕ್ರಮ ಕೈಗೊಳ್ಳದ ಹಿನ್ನೆಲೆ ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಗತ್ಯ ಸಂಖ್ಯೆಯ ಉಸಿರಾಟದ ಉಪಕರಣಗಳು, ರಕ್ಷಣಾ ಉಡುಪು ಇಲ್ಲ. ಅಗ್ನಿಶಾಮಕ ವಿಭಾಗದಲ್ಲಿ 18 ಸಿಬ್ಬಂದಿ ಇದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಹಾಜರಾತಿ ಪುಸ್ತಕದ ಪರಿಶೀಲನೆ ವೇಳೆ 13 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಕ್ರಾಶ್ ಫೈರ್, ಟೆಂಡರ್ ಫೈರ್ ಇಂಜಿನ್ ನಿರ್ವಹಣೆಗೆ ಸಿಬ್ಬಂದಿ ಇಲ್ಲ. ಸಿಎಫ್‌ಟಿ ವಾಹನ ಟೆಸ್ಟ್ಗಳ ರೆಕಾರ್ಡ್ ಇರಲಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ನಿಮ್ಮದಲ್ಲದ ಸೈಟ್‌ಗೆ ಪರಿಹಾರ ಕೇಳೋದು ಆತ್ಮಸಾಕ್ಷಿಯಾ?: ಕಾರಜೋಳ

    ರನ್ ವೇ ಆ್ಯಂಡ್ ಸೇಫ್ಟಿ ಏರಿಯಾ ನಿರ್ವಹಣೆ ಸಮರ್ಪಕವಾಗಿಲ್ಲ. ರನ್ ವೇನ ಟ್ರಾನ್ಸ್‌ವರ್ಸ್ ಭಾಗದಲ್ಲಿ ಮಣ್ಣು ಕುಸಿತ ಸೇರಿದಂತೆ ಕೆಲವು ನ್ಯೂನತೆಗಳಿದ್ದು, ನಿರ್ವಹಣೆ ಸರಿ ಇಲ್ಲ. ರನ್ ವೇ ಭಾಗದಲ್ಲಿ ಕಲ್ಲುಗಳು ಪತ್ತೆಯಾಗಿವೆ. ರನ್ ವೇ ಅಂಚಿನಲ್ಲಿ ಲೈಟ್ ಪ್ಯಾನಲ್‌ಗಳ ನಿರ್ವಹಣೆ ಸರಿ ಇಲ್ಲ ಎಂದು ತಿಳಿಸಲಾಗಿದೆ. ನ್ಯೂನತೆಗಳ ಕುರಿತು ವಿಮಾನಯಾನ ನಿರ್ದೇಶನಾಲಯವು ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಆ.1ರಂದು ನೊಟೀಸ್ ಜಾರಿ ಮಾಡಿತ್ತು. ಹತ್ತು ದಿನದ ಬಳಿಕ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಉತ್ತರ ನೀಡಿತ್ತು. ಆದರೆ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿ ನೋಟಿಸ್ ನೀಡಿದೆ. ಇದನ್ನೂ ಓದಿ: ಸಿಎಂ ಪತ್ನಿ ಸೈಟ್‌ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ:  ತಿಮ್ಮಾಪುರ್‌ ಪ್ರಶ್ನೆ

  • ಪೇಟಿಎಂಗೆ ನೋಟಿಸ್ ನೀಡಿದ ಆರ್‌ಬಿಐ

    ಪೇಟಿಎಂಗೆ ನೋಟಿಸ್ ನೀಡಿದ ಆರ್‌ಬಿಐ

    ಬೆಂಗಳೂರು: ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ (Violation of Rules) ಹಿನ್ನೆಲೆ ಪೇಟಿಎಂಗೆ (Paytm) ಆರ್‌ಬಿಐ (RBI) ನೋಟಿಸ್ ನೀಡಿದ್ದು, ಪೇಟಿಎಂ ಹೊಸ ಡೆಪಾಸಿಟ್ ಪಡೆಯುವಂತಿಲ್ಲ ಎಂದು ಸೂಚನೆ ನೀಡಿದೆ.

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಖಾತೆ ರಚಿಸಲು ಮತ್ತು ಡೆಪಾಸಿಟ್ ಪಡೆಯುವಂತಿಲ್ಲ. ವಿವಿಧ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೋಟಿಸ್ (Notice) ನೀಡಲಾಗಿದೆ. ಇದನ್ನೂ ಓದಿ: ಆಳವಾದ ಕಂದಕಕ್ಕೆ ಉರುಳಿದ ಕ್ಯಾಬ್ – 7 ಮಂದಿ ದುರ್ಮರಣ

    ಇನ್ನು ಫೆಬ್ರವರಿ 29ರ ನಂತರ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ವ್ಯಾಲಟ್, ಫಾಸ್ಟ್ಟ್ಯಾಗ್ ಇತ್ಯಾದಿ ಪ್ರೀಪೇಯ್ಡ್ ಯಂತ್ರಗಳಿಗೆ ಟಾಪ್‌ಅಪ್ ಹಾಕಿಸುವಂತಿಲ್ಲ ಎಂದು ಆರ್‌ಬಿಐ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಇಂದು ಬಹುನಿರೀಕ್ಷಿತ ಮಧ್ಯಂತರ ಬಜೆಟ್ – ನಿರ್ಮಲಾ ಸೀತಾರಾಮನ್‌ರಿಂದ 6ನೇ ಬಾರಿಗೆ ಆಯವ್ಯಯ ಮಂಡನೆ

  • ಎಕ್ಸ್‌ಪ್ರೆಸ್ ವೇಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ದಂಡ

    ಎಕ್ಸ್‌ಪ್ರೆಸ್ ವೇಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ದಂಡ

    ರಾಮನಗರ: ದಶಪಥ ಹೆದ್ದಾರಿಯಲ್ಲಿ ಮಂಗಳವಾರದಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳ ನಿಷೇಧ ಹಿನ್ನೆಲೆ ಎಕ್ಸ್‌ಪ್ರೆಸ್ ಹೈವೇಯಲ್ಲಿ (Expressway) ಪೊಲೀಸರ ತಪಾಸಣೆ ಮುಂದುವರೆದಿದೆ.

    ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ವಾಹನಗಳ ಡೈವರ್ಟ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೆದ್ದಾರಿಯಲ್ಲಿ ಬೈಕ್ ಸಂಚಾರ ಬಹುತೇಕ ವಿರಳವಾಗಿದೆ. ಬೈಕ್, ಆಟೋ, ಟ್ರಾಕ್ಟರ್‌ಗಳು ಸರ್ವಿಸ್ ರಸ್ತೆಯಲ್ಲೇ ಸಂಚಾರ ಮಾಡುತ್ತಿವೆ. ಇನ್ನೂ ಹೆದ್ದಾರಿಯಲ್ಲಿ ನಿಯಮ ಉಲ್ಲಂಘನೆ (Violation Of Rules) ಮಾಡುತ್ತಿರುವ ವಾಹನಗಳಿಗೆ ಸ್ಥಳದಲ್ಲೇ ದಂಡ (Fine) ವಿಧಿಸಲಾಗುತ್ತಿದೆ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್‌ಐಆರ್

    ರಾಮನಗರದ (Ramanagara) ಸಂಘಬಸವನ ದೊಡ್ಡಿ ಎಂಟ್ರಿ ಬಳಿ ಪೊಲೀಸರು ತಪಾಸಣೆ ನಡೆಸಿ ಹಲವು ಬೈಕ್ ಸವಾರರಿಗೆ ದಂಡ ವಿಧಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಕೂಡಾ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ 8ರಿಂದ 11ಗಂಟೆಯವರೆಗೆ ಬೈಕ್ ಸವಾರರಿಗೆ ಜಾಗೃತಿ ಮೂಡಿಸಿದ ಪೊಲೀಸರು ಬಳಿಕ ದಂಡಾಸ್ತ್ರ ಆರಂಭಿಸಿದ್ದಾರೆ. ಅಲ್ಲದೇ ಹೈವೇಯಲ್ಲಿ ಓವರ್ ಸ್ಪೀಡ್, ಲೇನ್ ಡಿಸಿಪ್ಲೀನ್ ಉಲ್ಲಂಘನೆ ಮಾಡಿದವರಿಗೂ ದಂಡ ಹಾಕಲಾಗಿದೆ. ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಪ್ರವಾಸ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಚಾರಿ ನಿಯಮ ಉಲ್ಲಂಘನೆ – ಆರು ತಿಂಗಳಲ್ಲಿ 1 ಕೋಟಿ 3 ಲಕ್ಷ ದಂಡ ವಸೂಲಿ

    ಸಂಚಾರಿ ನಿಯಮ ಉಲ್ಲಂಘನೆ – ಆರು ತಿಂಗಳಲ್ಲಿ 1 ಕೋಟಿ 3 ಲಕ್ಷ ದಂಡ ವಸೂಲಿ

    ದಾವಣಗೆರೆ: ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 1 ಕೋಟಿ ದಂಡ ವಸೂಲಿಯಾಗಿದೆ. ದಾವಣಗೆರೆ ಉತ್ತರ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ 1 ಕೋಟಿ 3 ಲಕ್ಷ ರೂ. ದಂಡ ವಸೂಲಿ ಮಾಡಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    ದಾವಣಗೆರೆ ನಗರದಲ್ಲಿ ಸಂಚಾರ ಸುರಕ್ಷತೆ ದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ ಮಾಡಲಾಗಿದ್ದು, ತ್ರಿಬಲ್ ರೈಡ್‍ಗೂ ಭಾರೀ ಪ್ರಮಾಣದ ದಂಡ ವಸೂಲಿ ಆಗಿದೆ. ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರರ ಮೇಲೆ ದಂಡ ಪ್ರಯೋಗ ಮಾಡಲು ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ. ಇದನ್ನೂ ಓದಿ: ಗುರೂಜಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ – ಪೊಲೀಸ್ ಆಯುಕ್ತ ಲಾಭೂರಾಮ್ 

    ದಾವಣಗೆರೆ ಜಿಲ್ಲಾ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರಿಂದ ಆರು ತಿಂಗಳಲ್ಲಿ ಒಟ್ಟು 25,088 ಕೇಸ್‍ಗಳಲ್ಲಿ 1 ಕೋಟಿ 3 ಲಕ್ಷ ದಂಡವನ್ನು ಸಂಚಾರಿ ಪೊಲೀಸರು ಸಂಗ್ರಹಿಸಿದ್ದಾರೆ. ಇದಲ್ಲದೆ 83 ತ್ರಿಬಲ್ ರೈಡಿಂಗ್, 76 ರ‍್ಯಾಶ್ ಡ್ರೈವಿಂಗ್‍ನಲ್ಲಿ ಲೈಸೆನ್ಸ್ ಕ್ಯಾನ್ಸಲ್, 52 ಡಿಫೆಕ್ಟಿವ್ ಸೈಲೆನ್ಸರ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದ್ದಾರೆ.

    ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. ಇದಲ್ಲದೆ ದಾವಣಗೆರೆ ನಗರದಲ್ಲಿ ಕರ್ಕಷವಾಗಿ ಶಬ್ಧ ಮಾಡುತ್ತಿದ್ದ ಬುಲೆಟ್‍ಗಳಿಗೆ ಅಳವಡಿಸಿದ್ದ 52 ಸೈಲೆನ್ಸರ್ ಪೈಪ್‍ಗಳನ್ನು ವಶಕ್ಕೆ ಪಡೆದು ಎಸ್.ಪಿ.ಸಿಬಿರಿಷ್ಯಂತ್ ಸಮ್ಮುಖದಲ್ಲಿ ರೋಲರ್ ಹತ್ತಿಸುವ ಮೂಲಕ ನಾಶ ಪಡಿಸಿದ್ರು. ಸಂಚಾರಿ ಠಾಣೆ ಪೊಲೀಸರ ಈ ಸಾಧನೆಗೆ ಎಸ್‍ಪಿಸಿಬಿ ರಿಷ್ಯಂತ್ ಅಭಿನಂಧನೆ ತಿಳಿಸಿದರು. ಇದನ್ನೂ ಓದಿ: ಟ್ರೈನಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – IAS ಅಧಿಕಾರಿ ವಶ 

    Live Tv
    [brid partner=56869869 player=32851 video=960834 autoplay=true]

  • ಅದ್ಧೂರಿಯಾಗಿ ಚಿಕ್ಕಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಬಿಜೆಪಿ ಮುಖಂಡ

    ಅದ್ಧೂರಿಯಾಗಿ ಚಿಕ್ಕಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಬಿಜೆಪಿ ಮುಖಂಡ

    ಚಿಕ್ಕೋಡಿ: ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಜಾರಿ ಮಾಡಿದರೂ ಬಿಜೆಪಿ ಮುಖಂಡರಿಂದಲೇ ನಿಯಮಗಳನ್ನು ಉಲ್ಲಂಘಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿವಾಡಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಅದ್ಧೂರಿ ಸಮಾರಂಭದಲ್ಲಿ ಚಿಕ್ಕಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟಗೊಳ್ಳುತ್ತಿದ್ದು, ಗಡಿ ಜಿಲ್ಲೆಯಲ್ಲೆ ಈ ರೀತಿ ಸರ್ಕಾರದ ನಿಯಮಗಳನ್ನು ಬಿಜೆಪಿ ಮುಖಂಡರು ಗಾಳಿಗೆ ತೂರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: Mekedatu Padayatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

    ಮಾಸ್ಕ್, ಸಾಮಾಜಿಕ ಅಂತರ ಮರೆತು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಇದರಿಂದ ಕೊರೊನಾ ತಡೆಯಲು ಸರ್ಕಾರ ವಿಧಿಸಿದ್ದ ನಿಯಮಗಳನ್ನು ಉಲ್ಲಂಘನೆ ಆಗಿದೆ. ಸರ್ಕಾರ ರಚನೆ ಮಾಡಿರುವ ನಿಯಮಗಳನ್ನು ಬಿಜೆಪಿ ಅವರೇ ಪಾಲನೆ ಮಾಡದೇ ಇದ್ದಲ್ಲಿ ಹೇಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘನೆ – ಪ್ರಭು ಚವ್ಹಾಣ್ ವಿರುದ್ಧ ದೂರು

  • ಕುರಿಗಳ ಸಂತೆ ಸಾವಿರಾರು ಜನ ಭಾಗಿ – ಕಾಟಾಚಾರಕ್ಕೆ ಅಧಿಕಾರಿಗಳ ಭೇಟಿ

    ಕುರಿಗಳ ಸಂತೆ ಸಾವಿರಾರು ಜನ ಭಾಗಿ – ಕಾಟಾಚಾರಕ್ಕೆ ಅಧಿಕಾರಿಗಳ ಭೇಟಿ

    – ಮಾಸ್ಕ್, ಸಾಮಾಜಿಕ ಅಂತರ ಇಲ್ಲ

    ಯಾದಗಿರಿ: ಜಿಲ್ಲೆಯಲ್ಲಿ ನಿತ್ಯವೂ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದು, ಸರಕಾರ ಈಗಾಗಲೇ ಕೋವಿಡ್ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಜನರು ಡೋಂಟ್ ಕೇರ್ ಎನ್ನುತ್ತಿದ್ದಾರೆ.

    ಯಾದಗಿರಿ ನಗರದ ಹೊರಭಾಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಮಂಗಳವಾರ ಕುರಿಗಳ ಸಂತೆ ಹಾಗೂ ಜಾನುವಾರು ಸಂತೆ ನಡೆಸಲಾಗುತ್ತಿದೆ. ಆದರೆ ಯಾವುದೇ ಕೋವಿಡ್ ನಿಯಮ ಪಾಲನೆ ಜನ ಮಾಡುತ್ತಿಲ್ಲ.

    ಕುರಿ ಹಾಗೂ ಜಾನುವಾರು ಮಾರಾಟ ಹಾಗೂ ಖರೀದಿ ಮಾಡಲು ತೆಲಂಗಾಣ, ಕಲಬುರಗಿ, ವಿಜಯಪುರ ಮೊದಲಾದ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಕುರಿಗಳ ಸಮೇತ ಜನ ಮಾರುಕಟ್ಟೆಗೆ ಬರುತ್ತಿದ್ದಾರೆ. ಆದರೆ ಕೋವಿಡ್ ನಿಯಮ ಮಾತ್ರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ.

    ಸಾವಿರಾರು ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಸೇರಿ ಸಂತೆಯಲ್ಲಿ ಭಾಗವಹಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಹೆಚ್ಚಿನ ಜನಸಂದಣಿ ಸೇರುವುದಕ್ಕೆ ನಿಷೇಧವಿದ್ದರೂ ಜನರು ಮಾತ್ರ ಜಿಲ್ಲಾಡಳಿತದ ಆದೇಶ ಪಾಲನೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.

    ನಗರಸಭೆ ಅಧಿಕಾರಿ ಬಿ.ಟಿ.ನಾಯಕ ಹಾಗೂ ಪೊಲೀಸರು ಕೂಡ ಕೇವಲ ರಸ್ತೆ ಬದಿ ನಿಂತು ಕ್ಯಾಮೆರಾಗಳ ಮುಂದೆ ಪೋಸ್ ಕೊಟ್ಟು ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಕುರಿಗಳ ಸಂತೆ ನಡೆಯುತ್ತಿದ್ದರೂ ಮೌನ ವಹಿಸಿದಕ್ಕೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ.

    ಸಂತೆಯಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕುವ ಕೆಲಸ ಕೂಡ ಮಾಡಿಲ್ಲ. ಕೇವಲ ಕಾಟಾಚಾರಕ್ಕೆ ಎಂಬಂತೆ ಕುರಿಗಳ ಸಂತೆ ನಡೆಯುವ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ಕೇಸ್ – ವಶಕ್ಕೆ ಪಡೆದ ಅಶೋಕ ನಗರ ಪೊಲೀಸರು

    ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ಕೇಸ್ – ವಶಕ್ಕೆ ಪಡೆದ ಅಶೋಕ ನಗರ ಪೊಲೀಸರು

    ಬೆಂಗಳೂರು: ಕ್ವಾರಂಟೈನ್‍ನಲ್ಲಿ ಇದ್ದರು ನಿಯಮ ಉಲ್ಲಂಘನೆ ಮಾಡಿದಕ್ಕೆ ಡ್ರೋನ್ ಪ್ರತಾಪನ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು, ಅಶೋಕ ನಗರ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.

    ಈ ಹಿಂದೆ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಅಧಿಕಾರಿಗಳು ಹೇಳಿದ್ದರು ಪ್ರತಾಪ್ ನಿಯಮ ಉಲ್ಲಂಘನೆ ಮಾಡಿದ್ದ. ಆದ್ದರಿಂದ ಆತನ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆದು ಬೆಂಗಳೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

    ಇಂದಿಗೆ ಪ್ರತಾಪ್ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದ ಕಾರಣ ತಲಘಟ್ಟಪುರ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಆದರೆ ಖಾಸಗಿ ಹೋಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿ ಇದ್ದ ಪ್ರತಾಪ್ ಇನ್ನೊಂದು ಎಡವಟ್ಟು ಮಾಡಿದ್ದು, ಹೋಟೆಲ್‍ಗೆ ಲಾಯರ್ ಒಬ್ಬರನ್ನು ಕರೆಸಿ ಮಾತಾಡಿದ್ದ. ಹೀಗಾಗಿ ಆತನ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು, ಅಶೋಕ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಡ್ರೋನ್ ಪ್ರತಾಪ್ ಜುಲೈ 15ರಂದು ಹೈದರಾಬಾದ್‍ನಿಂದ ಬೆಂಗಳೂರಿಗೆ ಬಂದಿದ್ದ. ತಲಘಟ್ಟಪುರದ ಅಪಾಟ್ರ್ಮೆಂಟ್‍ವೊಂದರಲ್ಲಿ ಈತ ಕ್ವಾರಂಟೈನ್ ಆಗಿದ್ದ. ಆತನ ಕೈಗೆ ಬಿಬಿಎಂಪಿಯಿಂದ ಕ್ವಾರಂಟೈನ್ ಸ್ಟಿಕರ್ ಕೂಡ ಅಂಟಿಸಲಾಗಿತ್ತು. ಆದರೆ, ಅದಾಗಿ ಎರಡೇ ದಿನಕ್ಕೆ ಈತ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದ. ಹೀಗಾಗಿ ಪಶುವೈದ್ಯ ಹಾಗೂ ವಿಧಿ ವಿಜ್ಞಾನ ತಜ್ಞ ಡಾ.ಎಚ್.ಎಸ್.ಪ್ರಯಾಗ್ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಪ್ರಕರಣ ದಾಖಲಾಗುತ್ತಿದ್ದಂತೆ ಡ್ರೋನ್ ಪ್ರತಾಪ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ನಂತರ ಪ್ರತಾಪ್ ಮೈಸೂರಿನಲ್ಲಿರುವುದನ್ನು ತಿಳಿದು ವಿಶೇಷ ತಂಡ ಮೈಸೂರಿಗೆ ತೆರಳಿತ್ತು. ಅಲ್ಲಿ ಆತನನ್ನು ವಶಕ್ಕೆ ಪಡೆದು ಜುಲೈ 20ರಂದು ಆತನನ್ನು ಬೆಂಗಳೂರಿಗೆ ಕರೆ ತಂದು ಕೆಂಗೇರಿಯ ಖಾಸಗಿ ಹೋಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇಂದಿಗೆ ಕ್ವಾರಂಟೈನ್ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ.

    ವಶಕ್ಕೂ ಮುನ್ನ ಮೈಸೂರಿನಲ್ಲಿ ಕ್ವಾರಂಟೈನ್ ಆಗುತ್ತೇನೆ ಎಂದು ಪ್ರತಾಪ್ ಪಟ್ಟು ಹಿಡಿದಿದ್ದ. ಆದರೆ ಬೆಂಗಳೂರಿನಲ್ಲೇ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಿ ಅಧಿಕಾರಿಗಳು ಕರೆತಂದಿದ್ದರು. ಪ್ರತಾಪನ ವಿರುದ್ಧ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಲ್ಲಿ ಎಮ್‍ಡಿಎಮ್ ಎ ಆಕ್ಟ್ ಆಡಿ ಕೇಸ್ ದಾಖಲಾಗಿತ್ತು.

  • ಕೊರೊನಾದಿಂದ ಗುಣಮುಖನಾದ ಪಾಷಾಗೆ ಅದ್ಧೂರಿ ಸ್ವಾಗತ – ಪಟಾಕಿ ಸಿಡಿಸಿ, ತೆರೆದ ಕಾರಿನಲ್ಲಿ ಸಂಭ್ರಮ

    ಕೊರೊನಾದಿಂದ ಗುಣಮುಖನಾದ ಪಾಷಾಗೆ ಅದ್ಧೂರಿ ಸ್ವಾಗತ – ಪಟಾಕಿ ಸಿಡಿಸಿ, ತೆರೆದ ಕಾರಿನಲ್ಲಿ ಸಂಭ್ರಮ

    – ಸಾಮಾಜಿಕ ಅಂತರವಿಲ್ಲ, ರೂಲ್ಸ್ ಬ್ರೇಕ್ ಮಾಡಿದ ಪಾಷಾ ಬೆಂಬಲಿಗರು

    ಬೆಂಗಳೂರು: ಕೊರೊನಾದಿಂದ ಗುಣಮುಖನಾಗಿ ಬಂದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಜೊತೆಗೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ.

    ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಇಮ್ರಾನ್ ಪಾಷಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಮ್ರಾನ್ ಪಾಷಾ ಅವರನ್ನು 7 ದಿನಕ್ಕೊಮ್ಮೆ ಕೋವಿಡ್-19 ಟೆಸ್ಟ್ ಮಾಡಲಾಗಿತ್ತು. ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ.

    ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ ಇಮ್ರಾನ್ ಪಾಷಾರನ್ನು ಸ್ವಾಗತ ಮಾಡಲು ಅವರ ಬೆಂಬಲಿಗರು ಆಸ್ಪತ್ರೆಯಿಂದ ಪಾದಾರಾಯನಪುರವರೆಗೂ ಸೇರಿದ್ದಾರೆ. ಮಾಸ್ಕ್ ಧರಿಸದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ನಿಯಮಗಳನ್ನು ಬ್ರೇಕ್ ಮಾಡಿದ್ದಾರೆ. ಜೊತೆಗೆ ಇಮ್ರಾನ್ ಅವರನ್ನು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡುತ್ತಿದ್ದು, ರಸ್ತೆಯುದ್ದಕ್ಕೂ ಹೂ ಹಾಕಿ ಸ್ವಾಗತ ಮಾಡಲಾಗುತ್ತಿದೆ. ಈ ಕಾರದಿಂದ ಮೈಸೂರ್ ರೋಡ್ ಫುಲ್ ಜಾಮ್ ಆಗಿದ್ದು, ಜನ ಸಮಾನ್ಯರಿಗೆ ತೊಂದರೆಯಾಗಿದೆ.

    ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಹೊರಗೆ ಬಂದ ತಕ್ಷಣ ಅವರಿಗೆ ಶಾಲು ಹಾಕಿ ಹೂಮಾಲೆಯಾಕಿ ಅವರ ಅಭಿಮಾನಿಗಳು ಬರಮಾಡಿಕೊಂಡಿದ್ದಾರೆ. ಜೊತೆಗೆ ಡಿಸ್ಚಾರ್ಜ್ ಮಾಡಿದ ತಕ್ಷಣ ಮನಸೋ ಇಚ್ಛೆ ಓಡಾಡುವಂತಿಲ್ಲ. 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರಬೇಕು ಎಂದು ವೈದ್ಯರು ಸೂಚಿದ್ದರು, ಅವರ ಮಾತಿಗೆ ಬೆಲೆ ಕೊಡದ ಪಾಷಾ ಕೊರೋನಾ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದಂತೆ ಆಸ್ಪತ್ರೆಯಿಂದ ಬಂದ ತಕ್ಷಣ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ.

    ಇಷ್ಟೇಲ್ಲ ನಿಯಮಗಳನ್ನು ಪಾಲಿಸದೇ ರಸ್ತೆಯಲ್ಲಿ ಮೆರೆವಣಿಗೆ ಮಾಡುತ್ತಿದ್ದರೂ ಅದನ್ನು ಕೇಳಲು ಸ್ಥಳದಲ್ಲಿ ಒಬ್ಬ ಪೊಲೀಸ್ ಕೂಡ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಕೊಂಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಬೈಕ್ ರ‌್ಯಾಲಿಯನ್ನು ತಡೆದಿದ್ದಾರೆ. ಜೊತೆಗೆ ಪಾಷಾ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿರಬಹುದು ಎಂದು ಜನರು ಹೇಳುತ್ತಿದ್ದಾರೆ.

  • ಸಚಿವ, ಶಾಸಕರಿಂದಲೇ ಲಾಕ್‍ಡೌನ್ ನಿಯಮ ಉಲ್ಲಂಘನೆ – ರೈತ ಸಂಘದಿಂದ ದೂರು

    ಸಚಿವ, ಶಾಸಕರಿಂದಲೇ ಲಾಕ್‍ಡೌನ್ ನಿಯಮ ಉಲ್ಲಂಘನೆ – ರೈತ ಸಂಘದಿಂದ ದೂರು

    ಚಾಮರಾಜನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಇದೀಗ ಜಿಲ್ಲೆಯಲ್ಲಿ ಸಚಿವ ಮತ್ತು ಶಾಸಕರು ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮತ್ತು ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಇಬ್ಬರು ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ರೈತ ಸಂಘದಿಂದ ಎಸ್‍ಪಿಗೆ ಇವರ ವಿರುದ್ಧ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ನೂರಾರು ಬೆಂಬಲಿಗರೊಂದಿಗೆ ಬಡಜನರು ನೆಲೆಸಿರುವ ಕಡೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡುವ ನೆಪದಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ರಾಜಕೀಯ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ 144 ಸೆಕ್ಷನ್ ಮತ್ತು ಲಾಕ್‍ಡೌನ್ ಉಲ್ಲಂಘನೆ ಮಾಡಿ, ಮಾಸ್ಕ್ ಇನ್ನಿತರ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಅನುಸರಿಸದೆ ನಿರ್ಲಕ್ಷದಿಂದ ಕೊರೊನಾ ಸೋಂಕು ಹರಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಷ್ಟೇ ಅಲ್ಲದೇ ಇಂತಹ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳತ್ತಿರುವ ನಿರಂಜನ್ ಕುಮಾರ್ ಮತ್ತು ಸುರೇಶ್ ಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಚಾಮರಾಜನಗರ ಜಿಲ್ಲಾ ರೈತ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮನವಿ ಮಾಡಿಕೊಂಡಿದ್ದಾರೆ.