Tag: ನಿಮಯ

  • ಫಾಲ್ಸ್‌ನಲ್ಲಿ ಮೋಜು ಮಸ್ತಿ- ಕೊರೊನಾ ರೂಲ್ಸ್ ಬ್ರೇಕ್

    ಫಾಲ್ಸ್‌ನಲ್ಲಿ ಮೋಜು ಮಸ್ತಿ- ಕೊರೊನಾ ರೂಲ್ಸ್ ಬ್ರೇಕ್

    ಬಾಗಲಕೋಟೆ: ಕೊರೊನಾ ಮಹಾಮಾರಿಯ ಹಾವಳಿಯ ನಡುವೆಯೂ ಕೆಲವರು ಫಾಲ್ಸ್‌ನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಫಾಲ್ಸ್‌ನಲ್ಲಿ ಸ್ನಾನ ಮಾಡುವ ಮೂಲಕ ನಿಯಮಾವಳಿಗಳನ್ನ ಗಾಳಿಗೆ ತೂರಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡ ತಾಲೂಕಿನ ಕೋಟೆಕಲ್ ಫಾಲ್ಸ್ ನಲ್ಲಿ ನಡೆಯುತ್ತಿದೆ.

    ಹೌದು ಮಳೆಗಾಲ ಆರಂಭವಾದರೆ ಕೋಟೆಕಲ್ ಗ್ರಾಮದ ವಲಯದಲ್ಲಿ ಫಾಲ್ಸ್ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈ ಹಿಂದೆ ಜನರು ಇಲ್ಲಿಗೆ ಬಂದು ಸ್ನಾನ ಮಾಡಿ ಎಂಜಾಯ್ ಮಾಡುತ್ತಿದ್ದರು. ಆದರೆ ಇದೀಗ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿಯೂ ಜನರು ಬಿಂದಾಸ್ ಆಗಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

    ಕೊರೊನಾ ಇರೋದ್ರಿಂದ ಸರ್ಕಾರ ಸಾಕಷ್ಟು ಮುಂಜಾಗೃತ ಕ್ರಮಗಳನ್ನ ತೆಗೆದುಕೊಳ್ಳಲು ತಿಳಿಸಿದೆ. ಆದರೆ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿದ ಯುವ ಜನತೆ ಸಾಮಾಜಿಕ ಅಂತರ ಮರೆತು ಸಾಮೂಹಿಕವಾಗಿ ಫಾಲ್ಸ್‍ನಲ್ಲಿ ಸ್ನಾನದಲ್ಲಿ ತೊಡಗಿದ್ದಾರೆ. ಹೀಗೆ ಬೇಕಾಬಿಟ್ಟಿ ತಿರುಗಾಟಕ್ಕೆ ಸ್ಥಳೀಯ ಆಡಳಿತ ಬ್ರೆಕ್ ಹಾಕುವುದರ ಮೂಲಕ ಕೊರೊನಾ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕಿದೆ ಎನ್ನುವದು ಕೆಲ ಸ್ಥಳೀಯರ ಆಗ್ರಹವಾಗಿದೆ.

  • ಭೂಮಿ ಮೇಲೆ ಕೊರೊನಾ ಇದೆ – ವಿಶೇಷ ವಿಮಾನದಲ್ಲಿ ಮದುವೆ

    ಭೂಮಿ ಮೇಲೆ ಕೊರೊನಾ ಇದೆ – ವಿಶೇಷ ವಿಮಾನದಲ್ಲಿ ಮದುವೆ

    ಚೆನ್ನೈ: ಭೂಮಿ ಮೇಲೆ ಕೊರೊನಾ ಇದೆ. ಭೂಮಿ ಸಹವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗುವ ಮೂಲಕವಾಗಿ ನವದಂಪತಿ ಸುದ್ದಿಯಾಗಿದ್ದಾರೆ.

    ಮಧುರೈ ನಿವಾಸಿಗಳಾದ ರಾಕೇಶ್, ಧೀಕ್ಷಣಾ ಜೋಡಿ ತಮ್ಮ ಮದುವೆಗಾಗಿ ವಿಶೇಷ ವಿಮಾನವೊಂದನ್ನು ಬುಕ್ ಮಾಡಿದ್ದರು. 2 ಗಂಟೆಗಳ ಕಾಲ ಬಾಡಿಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿದ್ದು, ಹೆಚ್ಚು ಜನರನ್ನು ಸೇರಿಸುವ ಮೂಲಕವಾಗಿ ಕೊರೊನಾ ನಿಯಮವನ್ನು ಉಲ್ಲಂಘಿಸಿದ್ದಾರೆ.

    130 ಮಂದಿ ಸಂಬಂಧಿಕರನ್ನು ಸೇರಿಸಿ ಮದುವೆಯಾಗಿದ್ದಾರೆ. ಮದುವೆಗೆ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಹಾಜಾರಾಗಿದ್ದರು ಎಂದು ಹೇಳಲಾಗುತ್ತಿದೆ. ವಿಮಾನ ಮಧುರೈ ನಿಂದ ತೂತುಕುಡಿಗೆ ಸಂಚರಿಸುವ ಸಂದರ್ಭದಲ್ಲಿ ನಡೆದಿದೆ. ವಿವಾಹದ ಫೋಟೋ, ವೀಡಿಯೋಗಳು ಭಾರೀ ವೈರಲ್ ಆಗುತ್ತಿವೆ.

    ಭೂಮಿ ಮೇಲೆ ಕೊರೊನಾ ಇದೆ, ಕೊರೊನಾ ನಿಮಗಳು ಇವೆ. ಅದಕ್ಕೇ ಭೂಮಿಯ ಸಹವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗಿದ್ದಾರೆ. ಮದುವೆಗೆ 130 ಮಂದಿ ಆಗಮಿಸಿದ್ದು, ಕೊರೊನಾ ನಿಯಮದ ಪ್ರಕಾರ 130 ಮಂದಿ ಸೇರುವ ಹಾಗಿಲ್ಲ. ಮದುವೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸಂಬಂಧಿಕರಿಗೂ RTPCR ಟೆಸ್ಟ್ ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ.

    ಕೊರೊನ ಇರುವುದನ್ನು ಲೆಕ್ಕಿಸದೇ 130 ಜನರನ್ನು ಸೇರಿಸಿ ವಿಮಾನದಲ್ಲಿ ಮದುವೆ ಆಗಿರುವುದು ಟೀಕೆಗೆ ಗುರಿಯಾಗಿದೆ. ತಮಿಳುನಾಡು ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹೊಸ ಗೈಡ್‍ಲೈನ್ಸ್ ಪ್ರಕಾರ ಎಲ್ಲಾ ಖಾಸಗಿ ಸಂಸ್ಥೆ ನೌಕರರಿಗೆ ಮನೆಯಲ್ಲಿಯೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಖಾಸಗಿ ಸಂಸ್ಥೆ ವಿಮಾನವೊಂದು ಮದುವೆಗೆ ವೇದಿಕೆ ಕಲ್ಪಸಿರೋದು ಕೊರೊನಾ ನಿಯಮದ ಪ್ರಕಾರ ತಪ್ಪಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

  • ಕೊರೊನಾ ನಿಯಮ ಉಲ್ಲಂಘನೆ – ಯುವಕನ ಕಪಾಳಕ್ಕೆ ಥಳಿಸಿದ ಡಿಸಿಗೆ ಬಿಸಿ ಮುಟ್ಟಿಸಿದ ಸಿಎಂ

    ಕೊರೊನಾ ನಿಯಮ ಉಲ್ಲಂಘನೆ – ಯುವಕನ ಕಪಾಳಕ್ಕೆ ಥಳಿಸಿದ ಡಿಸಿಗೆ ಬಿಸಿ ಮುಟ್ಟಿಸಿದ ಸಿಎಂ

    ರಾಯ್ಪುರ: ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗಳಿಗೆ ಅಧಿಕಾರಿಗಳು ಥಳಿಸುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇಂಥಹದ್ದೇ ಘಟನೆ ಛತ್ತೀಸ್ ಗಢದದಲ್ಲಿ ನಡೆದಿದ್ದು, ಜಿಲ್ಲಾಧಿಕಾರಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ.

    ಸೂರಜ್ ಪುರ ಜಿಲ್ಲೆಯ ಜಿಲ್ಲಾಧಿಕಾರಿ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ಥಳಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಅಧಿಕಾರಿ ಕ್ಷಮೆ ಕೋರಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿದೆ. ಆದರೆ ಅಮಾನ್ ಮಿತ್ತಲ್ (23) ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಅಧಿಕಾರಿಗಳು ಆತನನ್ನು ತಡೆದಿದ್ದರು. ತಾನು ಸಂಚರಿಸುತ್ತಿರುವುದಕ್ಕೆ ಕಾರಣ ಹೇಳಲು ಯತ್ನಿಸುತ್ತಿದ್ದ ಯವಕ ಮೊಬೈಲ್ ಫೋನ್ ಹಾಗೂ ಕಾಗದವನ್ನು ತೋರಿಸುತ್ತಿದ್ದದ್ದು ವೀಡಿಯೋದಲ್ಲಿ ದಾಖಲಾಗಿದೆ. ಆದರೆ ಅಧಿಕಾರಿ ಅದನ್ನು ಕಸಿದುಕೊಂಡು ಎಸೆದಿರುವುದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

    ಈ ಬೆನ್ನಲ್ಲೇ ಹಿರಿಯ ಅಧಿಕಾರಿಯೊಬ್ಬರು ಯುವಕನನ್ನು ಥಳಿಸಲು ಪ್ರಾರಂಭಿಸಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಥಳಿಸುವಂತೆ ಹೇಳಿದ್ದಾರೆ. ಪರಿಣಾಮ ಯುವಕನಿಗೆ ಅಧಿಕಾರಿಗಳು ದೊಣ್ಣೆಯಿಂದ ಹೊಡೆದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ರಣ್ ಬೀರ್ ಶರ್ಮಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಯುವಕನೋರ್ವನಿಗೆ ಥಳಿಸುತ್ತಿರುವ ವೀಡಿಯೋ ವೈರಲ್ ಆಗತೊಡಗಿದೆ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

    ಈ ಸಾಂಕ್ರಾಮಿಕದ ಅವಧಿಯಲ್ಲಿ ಸೂರಜ್ ಪುರ ಜಿಲ್ಲೆ ಅಪಾರ ಪ್ರಮಾಣದ ಜೀವ ಹಾನಿಯನ್ನು ಕಂಡಿದೆ. ಈ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ನಾವು ರಾಜ್ಯ ಸರ್ಕಾರದ ಅಧಿಕಾರಿಗಳು ಶ್ರಮಿಸುತ್ತಿದ್ದೇವೆ ಎಂದು ತಮ್ಮ ಹೇಳಿಕೆಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸೂರಜ್‍ಪುರ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರು ಯುವಕನ ಮೇಲೆ ವರ್ತಿಸಿದ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇದು ತುಂಬಾ ದುಃಖಕರ ಮತ್ತು ಖಂಡನೀಯ. ಛತ್ತೀಸ್‍ಗಢದಲ್ಲಿ ನಡೆಯುವ ಅಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರನ್ನು ತಕ್ಷಣ ಕರ್ತವ್ಯದಿಂದ ತಗೆದು ಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಛತ್ತೀಸ್‍ಗಢ ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದಾರೆ.

  • ನೆಲಕ್ಕುರುಳಿದ ಗಗನಚುಂಬಿ ಕಟ್ಟಡ- 4 ಅಪಾರ್ಟ್​ಮೆಂಟ್​ಗಳ ಪೈಕಿ 2 ನೆಲಸಮ

    ನೆಲಕ್ಕುರುಳಿದ ಗಗನಚುಂಬಿ ಕಟ್ಟಡ- 4 ಅಪಾರ್ಟ್​ಮೆಂಟ್​ಗಳ ಪೈಕಿ 2 ನೆಲಸಮ

    – 800 ಕೆಜಿ ಸ್ಫೋಟಕ ಬಳಸಿ ಬ್ಲಾಸ್ಟ್

    ತಿರುವನಂತಪುರಂ: ನಿಯಮಮೀರಿ ಕೆರೆದಂಡೆಯ ಮೇಲೆ ಅಕ್ರಮವಾಗಿ ಕಟ್ಟಿದ್ದ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡುವ ಕೆಲಸವನ್ನು ಕೇರಳ ಸರ್ಕಾರ ಶುರುಮಾಡಿದೆ.

    ಸುಪ್ರೀಕೋರ್ಟ್ ನ ಆದೇಶದ ಬೆನ್ನಲ್ಲೇ ಸುಮಾರು ನಾಲ್ಕು ತಿಂಗಳ ನಂತರ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ಮುಂದಾಗಿದೆ. ಕೇರಳದ ಕೊಚ್ಚಿಯ ತೀರ ಪ್ರದೇಶದ ಮರಡು ವಸತಿ ಪ್ರದೇಶದ ಹಿನ್ನೀರಿನಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ನಾಲ್ಕು ಗಗನಚುಂಬಿ ಅಪಾರ್ಟ್​ಮೆಂಟ್​ಗಳ ನೆಲಸಮ ಶುರುವಾಗಿದೆ. ಇಂದು 4 ಅಪಾರ್ಟ್​ಮೆಂಟ್​ಗಳ ಪೈಕಿ 2 ಅಪಾರ್ಟ್​ಮೆಂಟ್​ಗಳನ್ನು 800 ಕೆಜಿ ಸ್ಫೋಟಕ ಬಳಸಿ ನೆಲಸಮ ಮಾಡಲಾಗಿದೆ.

    ಈ ನಾಲ್ಕು ಅಪಾರ್ಟ್​ಮೆಂಟ್​ಗಳಲ್ಲಿ 350 ಫ್ಲ್ಯಾಟ್‍ಗಳು ಇದ್ದವು. 90 ಫ್ಲ್ಯಾಟ್ ಹೊಂದಿದ್ದ 19 ಫ್ಲೋರ್ ನ 60 ಮೀಟರ್ ಎತ್ತರದ H2O ಹೋಲಿಫೇತ್ ಅಪಾರ್ಟ್​ಮೆಂಟ್​ ಮತ್ತು 73 ಫ್ಲ್ಯಾಟ್ ಹೊಂದಿದ್ದ ಆಲ್ಫಾ ಸಿರೀನ್ ಅಪಾರ್ಟ್​ಮೆಂಟ್​ಗಳ ಧ್ವಂಸವಾಗಿದೆ. ಈ ಅಪಾರ್ಟ್​ಮೆಂಟ್​ಗಳಲ್ಲಿ 240 ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು.

    ಕೋಸ್ಟಲ್ ರೆಗ್ಯುಲೇಷನ್ ಝೋನ್ ರೂಲ್ಸ್ ಉಲ್ಲಂಘಿಸಿ ಅಪಾರ್ಟ್​ಮೆಂಟ್​ ನಿರ್ಮಾಣ ಮಾಡಲಾಗಿತ್ತು. ನದಿಯ ಪಕ್ಕ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇದರಿಂದ ಎಲ್ಲಾ ಕಾನೂನು ನಿಯಮಗಳನ್ನು ಮೀರಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಪಾರ್ಟ್​ಮೆಂಟ್​ಗಳ ಧ್ವಂಸಕ್ಕೆ ಸೂಚನೆ ಕೊಟ್ಟಿತ್ತು.

    ಅಲ್ಲದೇ ಸುಪ್ರೀಕೋರ್ಟ್ ಅಕ್ರಮ ಗಗನಚುಂಬಿ ಕಟ್ಟಡಗಳ ತೆರವಿಗೆ 138 ದಿನಗಳ ಡೆಡ್‍ಲೈನ್ ನೀಡಿತ್ತು. ಇದೀಗ ಕೋರ್ಟ್ ಆದೇಶದಂತೆ ನಾಲ್ಕು ಕಟ್ಟಗಳಲ್ಲಿ ಇಂದು ಎರಡು ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಎರಡು ಅಪಾರ್ಟ್ ಮೆಂಟ್​ಗಳ ನೆಲಸಮ ಮಾಡಲು ಸುಮಾರು 800 ಕೆಜಿ ಸ್ಫೋಟಕವನ್ನು ಬಳಸಲಾಗಿದೆ. ಕ್ಷಣಾರ್ಧದಲ್ಲಿ ಕಟ್ಟಡಗಳು ನೆಲಕ್ಕುರುಳಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ನೆರೆಹೊರೆಯವನ್ನು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಗಿತ್ತು. ಅಲ್ಲದೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಸೂಚನೆ ನೀಡಿದೆ. ಭಾನುವಾರ ಜೈನ್ ಕೋರಲ್ ಕೋವ್ ಮತ್ತು ಗೋಲ್ಡನ್ ಕಯಾಲೋರಾಂ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡಲಾಗುತ್ತದೆ.