– ಸೆನೆಕ್ಸ್‌ನಲ್ಲಿ 1600, ನಿಫ್ಟಿಯಲ್ಲಿ 500 ಪಾಯಿಂಟ್‌ಗಳ ಏರಿಕೆ
– ಆಟೋ ಸೆಕ್ಟರ್ ಷೇರುಗಳಲ್ಲಿ ಹೆಚ್ಚಿನ ಏರಿಕೆ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರತಿಸುಂಕ ವಾರ್‌ಗೆ ತಾತ್ಕಾಲಿಕ ಬ್ರೇಕ್ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Share Market) ಚೇತರಿಕೆ ಕಂಡುಬಂದಿದೆ.
ಇಂದು ಬೆಳಗ್ಗೆ ಭಾರತೀಯ ಷೇರುಪೇಟೆಗಳು ಶೇ. 2 ಕ್ಕಿಂತ ಹೆಚ್ಚು ಏರಿಕೆ ಕಂಡವು. ಸೆನೆಕ್ಸ್‌ನಲ್ಲಿ 1600 ಪಾಯಿಂಟ್, ನಿಫ್ಟಿಯಲ್ಲಿ 500 ಪಾಯಿಂಟ್‌ಗಳ ಏರಿಕೆ ಕಂಡುಬಂದಿದೆ. ಆಟೋ ಸೆಕ್ಟರ್ ಷೇರುಗಳಲ್ಲಿ ಹೆಚ್ಚಿನ ಏರಿಕೆಯಾಗಿದೆ. ಇದನ್ನೂ ಓದಿ: ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್?

ಮುಂಬೈ ಷೇರುಪೇಟೆಯ 30 ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,600 ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡರೆ, ನಿಫ್ಟಿ ಮತ್ತೆ 23,000 ಮಟ್ಟವನ್ನು ತಲುಪಿತು. ಆದಾಗ್ಯೂ, ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತ ಮುಂದುವರಿಯಲಿದೆ ಎಂದು ತಜ್ಞರು ಸೂಚಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಟ್ರಂಪ್ ಆಟೋ ಆಮದಿನ ಮೇಲೆ ಶೇ. 25 ರಷ್ಟು ಸುಂಕ ವಿಧಿಸಿದ್ದರು. ಆಟೋ ಸುಂಕಗಳ ಕುರಿತು ಟ್ರಂಪ್ ಅವರ ಸಂಭಾವ್ಯ ರಾಜಿ ಏಷ್ಯಾದ ಷೇರುಗಳಿಗೂ ಉಸಿರು ನೀಡಿತು. ಇದನ್ನೂ ಓದಿ: ವಕ್ಫ್ ಸದ್ಬಳಕೆ ಆಗಿದ್ದರೆ ಮುಸ್ಲಿಮರು ಪಂಕ್ಚರ್ ಹಾಕುತ್ತಿರಲಿಲ್ಲ: ಮೋದಿ
ಟೋಕಿಯೊ ಮತ್ತು ಸಿಯೋಲ್ ಮಾರುಕಟ್ಟೆಗಳು ಜಪಾನಿನ ವಾಹನ ತಯಾರಕರಾದ ಟೊಯೋಟಾ, ಮಜ್ದಾ ಮತ್ತು ನಿಸ್ಸಾನ್ ಭಾರಿ ಲಾಭವನ್ನು ಗಳಿಸಿವೆ. ತಾಂತ್ರಿಕ ಮತ್ತು ಔಷಧೀಯ ಉತ್ಪನ್ನಗಳ ಆಮದಿನ ಮೇಲೆ ಟ್ರಂಪ್ ಅವರ ಹೊಸ ತೆರಿಗೆಗಳು ಷೇರು ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯನ್ನು ಉಳಿಸಿಕೊಂಡವು. ಆಟೋ ಏರಿಕೆಯ ಪರಿಣಾಮವನ್ನು ಕಡಿಮೆ ಮಾಡಿದವು.




















