Tag: ನಿನ್ನ ಸನಿಹಕೆ

  • `ಹೈಡ್ ಆ್ಯಂಡ್ ಸೀಕ್’ ಆಡಲು ರೆಡಿಯಾದ ಧನ್ಯಾ ರಾಮ್‌ಕುಮಾರ್‌

    `ಹೈಡ್ ಆ್ಯಂಡ್ ಸೀಕ್’ ಆಡಲು ರೆಡಿಯಾದ ಧನ್ಯಾ ರಾಮ್‌ಕುಮಾರ್‌

    ಸ್ಯಾಂಡಲ್‌ವುಡ್‌ಗೆ `ನಿನ್ನ ಸನಿಹಕೆ’ ಚಿತ್ರದ ಮೂಲಕ ಪರಿಚಿತರಾದ ನಟಿ ಧನ್ಯಾ ರಾಮ್‌ಕುಮಾರ್‌ಗೆ ಸಾಲು ಸಾಲು ಸಿನಿಮಾ ಅವಕಾಶಗಳು ಹರಿದು ಬರುತ್ತಿದೆ. ಸದ್ಯ ಹೊಸ ಚಿತ್ರದ ಕುರಿತು ಧನ್ಯ ಸುದ್ದಿಯಲ್ಲಿದ್ದಾರೆ. ನಟ ಅನೂಪ್ ರೇವಣ್ಣಗೆ ನಾಯಕಿಯಾಗಿ ಧನ್ಯ ರಾಮ್‌ಕುಮಾರ್ ಆಯ್ಕೆಯಾಗಿದ್ದಾರೆ.

    ಪುನೀತ್ ಗೌಡ ನಿರ್ದೇಶನದ ಚಿತ್ರದಲ್ಲಿ ಅನೂಪ್ ರೇವಣ್ಣಗೆ ಜೋಡಿಯಾಗಿ ಪ್ರತಿಭಾನ್ವಿತ ನಟಿ ಧನ್ಯಾ ರಾಮ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಎಂದೂ ಮಾಡಿರದ ಭಿನ್ನ ಪಾತ್ರದಲ್ಲಿ ಥ್ರಿಲರ್ ಸಬ್‌ಜೆಕ್ಟ್‌ನಲ್ಲಿ ಧನ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಅರ್ಜುನ್ ಜನ್ಯ ಆ್ಯಕ್ಷನ್ ಕಟ್

    ಇನ್ನು ಈಗಾಗಲೇ `ಲಕ್ಷ್ಮಣ’ ಮತ್ತು `ನಾ ಪಂಟ ಕಣೋ’ ಚಿತ್ರದಲ್ಲಿ ನಟಿಸಿರುವ ನಟ ಅನೂಪ್ ರೇವಣ್ಣಗೆ ನಾಯಕಿಯಾಗಿ ಅಣ್ಣಾವ್ರ ಮೊಮ್ಮಗಳು ಧನ್ಯಾ ಕಾಣಿಸಿಕೊಳ್ಳಲಿದ್ದಾರೆ. ಭಿನ್ನ ಕಥೆಯನ್ನ ತೆರೆಯ ಮೇಲೆ ತರಲು ಪುನೀತ್ ಗೌಡ ರೆಡಿಯಾಗಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಕುರಿತು ಅಧಿಕೃತವಾಗಿ ಅನೌನ್ಸ್‌ ಮಾಡಲಿದ್ದಾರೆ. ಹೊಸ ಜೋಡಿ ಅನೂಪ್ ಮತ್ತು ಧನ್ಯಾ ತೆರೆಯ ಮೇಲೆ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.

    ಇನ್ನು ಕನ್ನಡದ ʻಕಾಲಾಪತ್ಥರ್‌ʼ ಸದ್ಯದಲ್ಲೇ ತೆರೆಗೆ ಬರಲಿದ್ದು, ಈಗ ಮತ್ತೊಂದು ಹೊಸ ಚಿತ್ರಕ್ಕೆ ಧನ್ಯಾ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.  ಸೌತ್‌ ಸಿನಿರಂಗದಿಂದಲೂ ಧನ್ಯಾಗೆ ಅವಕಾಶಗಳು ಹರಿದುಬರುತ್ತಿದೆ. ಒಳ್ಳೆಯ ಕಥೆಯ ಆಯ್ಕೆಯ ದೃಷ್ಟಿಯಿಂದ ಯೋಚಿಸಿ ಈ ನಟಿ ಆಯ್ಕೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ನಿನ್ನ ಸನಿಹಕೆ’ ವೀಡಿಯೋ ಹಾಡಿಗೆ ಎಲ್ಲರೂ ಫಿದಾ..!

    ‘ನಿನ್ನ ಸನಿಹಕೆ’ ವೀಡಿಯೋ ಹಾಡಿಗೆ ಎಲ್ಲರೂ ಫಿದಾ..!

    – ರಘು ದೀಕ್ಷಿತ್, ವಾಸುಕಿ ವೈಭವ್ ಮತ್ತೆ ಮೋಡಿ

    ಟ ಸೂರಜ್ ಗೌಡ ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ‘ನಿನ್ನ ಸನಿಹಕೆ’ ಚಿತ್ರದ ಮೊದಲ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ರಘು ದೀಕ್ಷಿತ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಬ್ಯೂಟಿಫುಲ್ ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದು ಸಿದ್ದಾರ್ಥ್ ಬೆಲ್ಮಣ್ಣು, ರಕ್ಷಿತಾ ಸುರೇಶ್ ಹಾಡಿಗೆ ಜೀವತುಂಬಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಮಳೆ ಮಳೆ ಲಿರಿಕಲ್ ವೀಡಿಯೋ ಸಾಂಗ್ ರಘು ದೀಕ್ಷಿತ್ ಕಂಠದಲ್ಲಿ ಮೋಡಿ ಮಾಡಿತ್ತು. ಇದೀಗ ಬಿಡುಗಡೆಯಾಗಿರುವ ‘ನೀ ಪರಿಚಯ’ ವೀಡಿಯೋ ಹಾಡು ಕೂಡ ಸೊಗಸಾಗಿ ಮೂಡಿ ಬಂದಿದ್ದು ಗಾನಪ್ರಿಯರು ಮತ್ತೆ ಮತ್ತೆ ಕೇಳುತ್ತಾ ತಲೆದೂಗುತ್ತಿದ್ದಾರೆ.

    ರಾಮ್ಕುಮಾರ್ ಪುತ್ರಿ ಧನ್ಯ ರಾಮ್ಕುಮಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಚೊಚ್ಚಲ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಒಂದು ಕಡೆ ರಾಜ್ ಕುಟುಂಬದ ಕುಡಿ ಮೊದಲ ಬಾರಿ ನಟಿಸಿರೋ ಚಿತ್ರ, ಇನ್ನೊಂದು ಕಡೆ ಮೊಟ್ಟ ಮೊದಲ ಬಾರಿಗೆ ಸೂರಜ್ ಗೌಡ ಸ್ವತಃ ಕಥೆ, ಚಿತ್ರಕಥೆ ಬರೆದು ನಿರ್ದೇಶಕನಾಗಿಯೂ ಬಡ್ತಿ ಪಡೆದಿರೋದು ‘ನಿನ್ನ ಸನಿಹಕೆ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಚಂದನವನದಲ್ಲಿ ಹೆಚ್ಚು ಮಾಡಿದೆ.

    ಇದೊಂದು ರೊಮ್ಯಾಂಟಿಂಕ್ ಕಾಮಿಡಿ ಸಿನಿಮಾವಾಗಿದ್ದು ಸೂರಜ್ ಹಾಗೂ ಧನ್ಯಾ ರಾಮ್ ಕುಮಾರ್ ಜೋಡಿ ತುಂಬಾ ಮುದ್ದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಸೂರಜ್ ಗೌಡ ಆಕ್ಷನ್ ಹೀರೋ ಆಗಿಯೂ ತೆರೆ ಮೇಲೆ ಮಿಂಚಲಿದ್ದಾರೆ. ಕೊರೋನಾ ಆರಂಭಕ್ಕೂ ಮುನ್ನವೇ ಚಿತ್ರೀಕರಣ ಕಂಪ್ಲೀಟ್ ಮಾಡಿರೋ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕುಡ್ಲಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಅಭಿಲಾಷ್ ಕಲತಿ ಛಾಯಾಗ್ರಹಣ ‘ನಿನ್ನ ಸನಿಹಕೆ’ ಚಿತ್ರಕ್ಕಿದೆ.

  • ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರದ ಫಸ್ಟ್ ಲುಕ್ ರಿಲೀಸ್

    ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರದ ಫಸ್ಟ್ ಲುಕ್ ರಿಲೀಸ್

    ಬೆಂಗಳೂರು: ಡಾ. ರಾಜ್‍ಕುಮಾರ್ ಕುಟುಂಬದಿಂದ ಈಗಾಗಲೇ ಇಬ್ಬರು ಮೊಮ್ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ ಮೊದಲ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

    ಪೂರ್ಣಿಮಾ ಮತ್ತು ರಾಮ್‍ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದು, ಅವರ ಮೊದಲ ಸಿನಿಮಾಗೆ ‘ನಿನ್ನ ಸನಿಹಕೆ’ ಎಂಬ ಟೈಟಲ್ ಇಡಲಾಗಿದೆ. ಇದೀಗ ಈ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ಧನ್ಯಾ ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ನೋಡಿದರೆ ಇದೊಂದು ಲವ್ ಸ್ಟೋರಿ ಸಿನಿಮಾ ಎಂಬುದು ತಿಳಿಯುತ್ತದೆ. ನಟ ಸೂರಜ್ ಗೌಡ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಪೋಸ್ಟರ್‌ನಲ್ಲಿ ಧನ್ಯಾ ಹಾಗೂ ಸೂರಜ್ ಜೋಡಿ ಮುದ್ದಾಗಿ ಕಾಣಿಸುತ್ತಿದ್ದಾರೆ.

    ನಟ ಸೂರಜ್ ಗೌಡ ಈ ಹಿಂದೆ ‘ಮದುವೆಯ ಮಮತೆಯ ಕರೆಯೋಲೆ’, ‘ಸಿಲಿಕಾನ್ ಸಿಟಿ’ ಹಾಗೂ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿದ್ದರು. ವಿಶೇಷ ಎಂದರೆ ನಟ ಸೂರಜ್ ಗೌಡ ಅವರೇ ಈ ಚಿತ್ರದ ಕಥೆ ಬರೆದಿದ್ದಾರೆ.

    ವೈಟ್ ಅಂಡ್ ಗ್ರೇ ಮೀಡಿಯಾ ಸಂಸ್ಥೆ ಈ ಸಿನಿಮಾಗೆ ಬಂಡವಾಳ ಹಾಕಿದ್ದು, ಸುಮನ್ ಜಾದುಗರ್ ನಿರ್ದೇಶಕರಾಗಿದ್ದಾರೆ. ರಘು ದೀಕ್ಷಿತ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಪ್ರೀ ಪ್ರೊಡಕ್ಷನ್‍ನಲ್ಲಿ ಬ್ಯುಸಿಯಿದೆ.

    https://www.instagram.com/p/B0x2c0xh5Nj/