Tag: ನಿಧಿ ಅಗರ್ವಾಲ್

  • ನಿಧಿ ಜೊತೆ ಪವನ್ ಕಲ್ಯಾಣ್ ಮಸ್ತ್ ಡ್ಯಾನ್ಸ್- ‘ಹರಿ ಹರ ವೀರ ಮಲ್ಲು’ ಚಿತ್ರದ ಸಾಂಗ್ ರಿಲೀಸ್

    ನಿಧಿ ಜೊತೆ ಪವನ್ ಕಲ್ಯಾಣ್ ಮಸ್ತ್ ಡ್ಯಾನ್ಸ್- ‘ಹರಿ ಹರ ವೀರ ಮಲ್ಲು’ ಚಿತ್ರದ ಸಾಂಗ್ ರಿಲೀಸ್

    ತೆಲುಗು ನಟ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ (Hari Hara Veera Mallu) ಮೊದಲ ಸಾಂಗ್ ರಿಲೀಸ್ ಆಗಿದೆ. ಕನ್ನಡತಿ ನಿಧಿ ಅಗರ್ವಾಲ್ ಜೊತೆ ಪವನ್ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.

    ಕ್ರಿಶ್ ಮತ್ತು ಜ್ಯೋತಿ ಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್‌ಗೆ ನಾಯಕಿಯಾಗಿ ನಿಧಿ ನಟಿಸಿದ್ದಾರೆ. ಈ ಚಿತ್ರವು ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ. ‘ಹರಿ ಹರ ವೀರ ಮಲ್ಲು ಭಾಗ 1’ರ ಮೊದಲ ಹಾಡು ರಿಲೀಸ್ ಆಗಿದೆ. ‘ತಾರಾ ತಾರಾ ನಾ ಕಲ್ಲು’ ಸಾಂಗ್‌ನಲ್ಲಿ ನಿಧಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪವನ್ ಜೊತೆಗಿನ ನಿಧಿ (Nidhhi Agerwal) ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಜೋಡಿ ಅಭಿಮಾನಿಗಳಿಗೂ ಇಷ್ಟವಾಗಿದೆ.

    17ನೇ ಶತಮಾನದ ಕಥೆಯಲ್ಲಿ ಯೋಧನಾಗಿ ನಟ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಮತ್ತು ನಿಧಿ ಜೊತೆ ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ರಾಜಕೀಯದಲ್ಲಿ ಪವನ್ ಕಲ್ಯಾಣ್ ಬ್ಯುಸಿಯಿದ್ದ ಹಿನ್ನೆಲೆ ಈ ಚಿತ್ರ ಅರ್ಧಕ್ಕೆ ನಿಂತಿತ್ತು. ಕೊನೆಗೂ ಬಿಡುವು ಮಾಡಿಕೊಂಡು ‘ಹರಿ ಹರ ವೀರ ಮಲ್ಲು’ ಚಿತ್ರವನ್ನು ನಟ ಮುಗಿಸಿಕೊಟ್ಟಿದ್ದಾರೆ. ಜೂನ್ 12ರಂದು ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ.


    ಈ ಚಿತ್ರದ ಜೊತೆ ಓಜಿ, ಶ್ರೀಲೀಲಾ ಜೊತೆಗಿನ ಉಸ್ತಾದ್ ಭಗತ್ ಸಿಂಗ್ ಚಿತ್ರಗಳು ಪವನ್ ಕಲ್ಯಾಣ್ ಕೈಯಲ್ಲಿದೆ.

  • ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ನಿಧಿ ಅಗರ್ವಾಲ್ ತಿರುಗೇಟು

    ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ನಿಧಿ ಅಗರ್ವಾಲ್ ತಿರುಗೇಟು

    ತೆಲುಗು ನಟಿ ನಿಧಿ ಅಗರ್ವಾಲ್ (Nidhhi Agerwal) ಅವರು ಪ್ರಭಾಸ್ ಜೊತೆಗಿನ ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ (Sreeleela) ಜೊತೆ ಹೋಲಿಕೆ ಮಾಡಿದ ನೆಟ್ಟಿಗನಿಗೆ ಖಡಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ‘ಕಿಸ್ಸಿಕ್‌’ ಬೆಡಗಿ ಶ್ರೀಲೀಲಾ ಜೊತೆ ಹೋಲಿಕೆ ಮಾಡಿ ನಿಧಿ ಅವರನ್ನು ಕೆಣಕಿದ್ದಾರೆ. 2019ರಲ್ಲಿ ‘ಇಸ್ಮಾಟ್ ಶಂಕರ್’ ಬಳಿಕ ನಿಧಿ ಎಷ್ಟು ಸಿನಿಮಾ ಮಾಡಿದ್ದಾರೆ. ಆದರೆ ಅದೇ 2021ರಲ್ಲಿ ಬಂದ ಶ್ರೀಲೀಲಾ 20 ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ನೆಟ್ಟಿಗನೊಬ್ಬ ಎಕ್ಸ್ ಖಾತೆಯಲ್ಲಿ ಕಾಮೆಂಟ್ ಮಾಡಿದ್ದಾನೆ. ಅದಕ್ಕೆ ನಿಧಿ ತಕ್ಕ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ

    ‘ಇಸ್ಮಾರ್ಟ್‌ ಶಂಕರ್‌’ (Ismart Shankar) ಚಿತ್ರ ಆದ್ಮೇಲೆ ‘ಹೀರೋ’ ಸಿನಿಮಾ ಮಾಡಿದ್ದೀನಿ. ಬಳಿಕ 3 ತಮಿಳು ಸಿನಿಮಾದಲ್ಲಿ ನಟಿಸಿದ್ದೇನೆ. ನಾನು ನನ್ನ ಸಮಯ ತೆಗೆದುಕೊಂಡು ಒಳ್ಳೆಯ ಸ್ಕ್ರೀಪ್ಟ್ ಎಂದು ನನಗೆ ಅನಿಸುವ ಚಿತ್ರಗಳಿಗೆ ಸಹಿ ಹಾಕುತ್ತೇನೆ. ಕೆಲವೊಮ್ಮೆ ನನ್ನ ಆಯ್ಕೆ ತಪ್ಪಾಗಿರಬಹುದು. ಆದರೆ ನನ್ನ ಉದ್ದೇಶ ಒಳ್ಳೆಯ ಸಿನಿಮಾದ ಭಾಗವಾಗುವುದು. ನನಗೆ ಯಾವುದೇ ಆತುರವಿಲ್ಲ. ನಾನು ಇಲ್ಲೇ ಉಳಿಯಬೇಕು ಎಂದುಕೊಂಡಿದ್ದೇನೆ ಸಹೋದರ. ನನ್ನ ಬಗ್ಗೆ ನೀವು ಚಿಂತಿಸಬೇಡಿ ಎಂದು ನಯವಾಗಿ ತಿರುಗೇಟು ಕೊಟ್ಟಿದ್ದಾರೆ ನಿಧಿ ಅಗರ್ವಾಲ್. ನಟಿಯ ನಡೆಗೆ ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

    ಅಂದಹಾಗೆ, ಪ್ರಭಾಸ್‌ ನಟನೆಯ ‘ದಿ ರಾಜಾ ಸಾಬ್’, ಪವನ್ ಕಲ್ಯಾಣ್ ಜೊತೆ ‘ಹರಿಹರ ವೀರ ಮಲ್ಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ನಿಧಿ ಬ್ಯುಸಿಯಾಗಿದ್ದಾರೆ.

  • ನಿಧಿ ಅಗರ್ವಾಲ್ ಜೊತೆ ಸಿಂಬು ಮದುವೆ?- ಕೊನೆಗೂ ಹೊರಬಿತ್ತು ವಿಷ್ಯ

    ನಿಧಿ ಅಗರ್ವಾಲ್ ಜೊತೆ ಸಿಂಬು ಮದುವೆ?- ಕೊನೆಗೂ ಹೊರಬಿತ್ತು ವಿಷ್ಯ

    ಕಾಲಿವುಡ್ ನಟ ಸಿಂಬು (Actor Simbu) ಅವರ ಮದುವೆ ಬಗ್ಗೆ ಹಲವು ವಿಚಾರಗಳು ಕೆಲ ತಿಂಗಳುಗಳಿಂದ ಸದ್ದು ಮಾಡುತ್ತಿವೆ. ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ ಜೊತೆ ಸಿಂಬು ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಇದೀಗ ಮದುವೆ ಸುದ್ದಿ ಕುರಿತು ನಟ ಸಿಂಬು ಟೀಮ್ ಸ್ಪಷ್ಟನೆ ಕೊಟ್ಟಿದೆ.

    ತೆಲುಗು ನಟಿ ನಿಧಿ ಅಗರ್ವಾಲ್ (Nidhhi Agerwal) ಜೊತೆ ಸಿಂಬು ಮದುವೆ ಆಗಲಿದ್ದಾರೆ. ಸದ್ಯದಲ್ಲೇ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಇದೀಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದಕ್ಕೆ ಸಿಂಬು ಟೀಮ್ ಸ್ಪಷ್ಟನೆ ನೀಡಿದೆ. ಇದೊಂದು ಬೇಸ್ ಲೆಸ್ ಸುದ್ದಿ. ಈ ವಿಚಾರ ವದಂತಿಯಷ್ಟೇ, ಸತ್ಯವಲ್ಲ ಎಂದು ಸಿಂಬು ತಂಡ ಕ್ಲ್ಯಾರಿಟಿ ಕೊಟ್ಟಿದೆ.

    ಅಂದಹಾಗೆ, 2021ರಲ್ಲಿ ‘ಈಶ್ವರನ್’ ಎಂಬ ಸಿನಿಮಾದಲ್ಲಿ ಸಿಂಬುಗೆ ನಾಯಕಿಯಾಗಿ ನಿಧಿ ನಟಿಸಿದ್ದರು. ಈ ಸಿನಿಮಾ ನಂತರ ಇಬ್ಬರ ಡೇಟಿಂಗ್ ಬಗ್ಗೆ ವದಂತಿ ಹಬ್ಬಿತ್ತು. ಇದನ್ನೂ ಓದಿ:‘ಪ್ರಾಪ್ತಿ’ ಸಿನಿಮಾ: ವರ್ತಮಾನಕ್ಕೆ ಹಿಡಿದ ಕನ್ನಡಿ

    ಇನ್ನೂ ಈ ಹಿಂದೆ ತ್ರಿಷಾ, ಹನ್ಸಿಕಾ ಮೋಟ್ವಾನಿ, ನಯನತಾರಾ ಜೊತೆ ಸಿಂಬು ಡೇಟಿಂಗ್ ಮಾಡಿದ್ದರು ಎನ್ನಲಾದ ಸುದ್ದಿಗಳು ಹರಿದಾಡಿತ್ತು. ಯಾವುದು ಮದುವೆಯವರೆಗೂ ಬರಲಿಲ್ಲ.

  • ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾದ ಬೆಂಗಳೂರಿನ ಬೆಡಗಿ

    ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾದ ಬೆಂಗಳೂರಿನ ಬೆಡಗಿ

    ಬಾಹುಬಲಿ ನಟ ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚ್ತಿರೋ ಸ್ಟಾರ್ ಹೀರೋ. ಅವರ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಬೇಕು ಎಂಬುದು ಹಲವರ ಕನಸು. ಇದೀಗ ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಲಕ್ಕಿ ಚಾನ್ಸ್ ಅನ್ನು ಬೆಂಗಳೂರಿನ ಬ್ಯೂಟಿ ನಿಧಿ ಅಗರ್ವಾಲ್ (Nidhhi Agerwal) ಬಾಚಿಕೊಂಡಿದ್ದಾರೆ.

    ಸೌತ್ ಸಿನಿಮಾರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ನಟಿ ನಿಧಿ ಈಗ ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಆಗಸ್ಟ್ 17ರಂದು ನಿಧಿ ಹುಟ್ಟುಹಬ್ಬದಂದು ಪ್ರಭಾಸ್ ನಟನೆಯ ರಾಜಾ ಡಿಲಕ್ಸ್ ಸಿನಿಮಾಗೆ ನಿಧಿ ಹೀರೋಯಿನ್ ಎಂದು ನಿರ್ದೇಶಕ ಮಾರುತಿ ಅನೌನ್ಸ್ ಮಾಡಿದ್ದಾರೆ.

    ‘ರಾಜಾ ಡಿಲಕ್ಸ್’ (Raja Deluxe)  ಸಿನಿಮಾ ಇದೊಂದು ಹಾರರ್-ಕಾಮಿಡಿ ಜೊತೆ ಚೆಂದದ ಲವ್ ಸ್ಟೋರಿ ಕೂಡ ಚಿತ್ರದಲ್ಲಿ ಇರಲಿದೆ. ಪ್ರಭಾಸ್- ನಿಧಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನೂ ನಟ ಪ್ರಭಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸೂಕ್ತ ಚಿಕಿತ್ಸೆಗಾಗಿ ಸದ್ಯ ಪ್ರಭಾಸ್ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಸರ್ಜರಿ ಮತ್ತು ವಿಶ್ರಾಂತಿಯ ಬಳಿಕ ಮತ್ತೆ ಸಿನಿಮಾಗಳತ್ತ ನಟ ಮುಖ ಮಾಡಲಿದ್ದಾರೆ.

    ‘ಸಲಾರ್’ (Salaar) ಮುಗಿಸಿಕೊಟ್ಟಿರೋ ಪ್ರಭಾಸ್, ಚಿಕಿತ್ಸೆಯ ಬಳಿಕ ದೀಪಿಕಾ ಪಡುಕೋಣೆ (Deepika Padukone) ಜೊತೆಗಿನ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ‘ರಾಜಾ ಡಿಲಕ್ಸ್’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಇನ್ನೂ ನಟಿ ನಿಧಿಗೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಇದನ್ನೂ ಓದಿ:ತೆಲುಗು ನಟ ಬ್ರಹ್ಮಾನಂದಂ ಪುತ್ರನ ಮದುವೆಗೆ ಬಂದ ಸೆಲೆಬ್ರಿಟಿಗಳು

    ನಿಧಿ ಅಗರ್ವಾಲ್ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರ ವಿದ್ಯಾಭ್ಯಾಸ ಕೂಡ ಬೆಂಗಳೂರಿನಲ್ಲಿಯೇ ಪೂರ್ಣಗೊಳಿಸಿದ್ದರು. ಹಿಂದಿ ‌’ಮುನ್ನಾ ಮೈಖಲ್’ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ತೆಲುಗಿನ ಸವ್ಯಸಾಚಿ, ಮಿಸ್ಟರ್ ಮಜ್ನು, ಇಸ್ಮಾರ್ಟ್ ಶಂಕರ್, ಹೀರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪ್ರಸ್ತುತ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ನಿಧಿ ನಾಯಕಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಕಾಬಿಟ್ಟಿ ಪೋಸ್ಟ್ ಮಾಡುವವರ ವಿರುದ್ಧ ನಿಧಿ ಕಿಡಿ- 12 ಚಟುವಟಿಕೆ ಮಾಡಿ ಎಂದ ನಟಿ

    ಬೇಕಾಬಿಟ್ಟಿ ಪೋಸ್ಟ್ ಮಾಡುವವರ ವಿರುದ್ಧ ನಿಧಿ ಕಿಡಿ- 12 ಚಟುವಟಿಕೆ ಮಾಡಿ ಎಂದ ನಟಿ

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಬಹುತೇಕ ಎಲ್ಲರೂ ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಕೆಲವರು ತಮ್ಮ ಹವ್ಯಾಸಗಳತ್ತ ಗಮನಹರಿಸಿದರೆ, ಇನ್ನೂ ಕೆಲವರು ಯಾವುದೋ ಪೋಸ್ಟ್ ಗೆ ಬೇಕಾಬಿಟ್ಟಿಯಾಗಿ ಕಮೆಂಟ್ ಮಾಡುವುದು, ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಓಡಾಡುವುದನ್ನು ಮಾಡುತ್ತಿದ್ದಾರೆ. ಇನ್ನೂ ಹಲವರು ಸಹಾಯ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೇಕಾಬಿಟ್ಟಿಯಾಗಿ ಏನೇನೋ ಕಿತಾಪತಿ ಮಾಡುವವರಿಗೆ ನಟಿ ನಿಧಿ ಅಗರ್ವಾಲ್ ಕೆಲವೊಂದಿಷ್ಟು ಸಲಹೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ನಿಧಿ ಅಗರ್ವಾಲ್, ಲಾಕ್‍ಡೌನ್ ಪರಿಸ್ಥಿತಿಯನ್ನು ನೋಡುತ್ತಿದ್ದಾರೆ. ಕೆಲವರು ಮಾಡುತ್ತಿರುವ ಅನಗತ್ಯ ಪೋಸ್ಟ್ ಗಳು ಹಾಗೂ ಕಮೆಂಟ್‍ಗಳು, ಬೇಡವಾದ ಕೆಲಸಗಳನ್ನು ಸಹ ನೋಡುತ್ತಿದ್ದಾರೆ. ಇದರಿಂದ ಬೇಸತ್ತ ನಿಧಿ, ಈ ಕುರಿತು ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಹಾರವನ್ನೂ ಸೂಚಿಸಿದ್ದಾರೆ.

    ತುಂಬಾ ಜನ ಮನೆಯಲ್ಲೇ ಕುರಿತು ಬೇಡವಾದದ್ದನ್ನು ಹರಡುತ್ತಾರೆ. ಹೀಗಾಗಿ ಕೆಲವಂದಿಷ್ಟು ಚಟುವಟಿಕೆಗಳನ್ನು ನಾನಿಲ್ಲಿ ಪಟ್ಟಿ ಮಾಡಿದ್ದೇನೆ. ನೀವು ಬಿಡುವಾದಾಗಲೆಲ್ಲ ಇದರಲ್ಲಿ ನಿಮಗಿಷ್ಟವಾದದ್ದನ್ನು ಮಾಡಿ. ಯಾರೊಬ್ಬರ ಬದುಕಿನ ಪ್ರಯಾಣದ ಬಗ್ಗೆ ನಿಮಗೆ ತಿಳಿದಿಲ್ಲ. ಹೀಗಾಗಿ ನಾಲ್ಕು ಗೋಡೆಯ ಮಧ್ಯೆ ಕುಳಿತುಕೊಂಡು ಪೋಸ್ಟ್ ಮಾಡುವ ಮೊದಲು ಯೋಚಿಸಿ. ಅನಾಮಧೇಯರಾಗಿರುವುದು ಸೂಪರ್ ಪವರ್ ಅಲ್ಲ. ಬದಲಿಗೆ ಸಕಾರಾತ್ಮಕವಾಗಿ ಪರಿಣಾಮ ಬೀರುವುದೇ ನಿಜವಾದ ಸೂಪರ್ ಪವರ್ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ 12 ಚಟುವಟಿಕೆಗಳನ್ನು ಪಟ್ಟಿ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಮನೆ ಸ್ವಚ್ಛಗೊಳಿಸಿ, ವ್ಯಾಯಾಮ-ಧ್ಯಾನ ಮಾಡಿ, ಚಿತ್ರ ಬರೆಯಿರಿ, ಅಡುಗೆ ಮಾಡಿ, ಪುಸ್ತಕ ಓದಿ, ಏನಾದರೂ ಬರೆಯಿರಿ-ಏನಾದರೂ ಕ್ರಿಯೇಟಿವಿಟಿ ಮಾಡಿ, ಸಾಕು ಪ್ರಾಣಿಗಳಿದ್ದರೆ ಅವುಗಳಿಗೆ ತರಬೇತಿ ನೀಡಿ, ಅವುಗಳೊಂದಿಗೆ ಕಾಲ ಕಳೆಯಿರಿ, ಮಿಸ್ ಮಾಡಿಕೊಂಡ ಸಿನಿಮಾ ಮತ್ತು ಕಾರ್ಯಕ್ರಮಗಳನ್ನು ನೋಡಿ, ಹೊಸ ಕೌಶಲ್ಯ ಹವ್ಯಾಸಗಳನ್ನು ಕಲಿಯಿರಿ, ಆನ್‍ಲೈನ್‍ನಲ್ಲಿ ಕೋರ್ಸ್ ಮಾಡಿ, ನಿಮ್ಮ ಕೆಲಸದ ಬಗೆಗಿನ ಪುಸ್ತಕಗಳನ್ನು ಓದಿ, ನೀವು ಕೆಲಸಕ್ಕೆ ಮರಳಿದ ನಂತರ ಸಹಾಯವಾಗುತ್ತದೆ. ಇನ್ನೂ ಅನೇಕ ಉತ್ತಮ ಕೆಲಸಗಳನ್ನು ಮಾಡಬಹುದು ಎಂದು ಹೇಳಿದ್ದಾರೆ.

    ಸದ್ಯ ಜೇಮ್ಸ್ ಸಿನಿಮಾಗೆ ನಾಯಕಿಯಾಗಿ ನಿಧಿ ಅಗರ್ವಾಲ್ ಆಯ್ಕೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಕೊರೊನಾ ಅವಾಂತರ ಸೃಷ್ಟಿಯಾಗದಿದ್ದಲ್ಲಿ ಏಪ್ರಿಲ್ 1ರಿಂದ ಜೇಮ್ಸ್ ಶೂಟಿಂಗ್ ಆರಂಭವಾಗಬೇಕಿತ್ತು. ನಿರ್ದೇಶಕ ಚೇತನ್ ಕುಮಾರ್ ಪ್ರಿ ಪ್ರೊಡಕ್ಷನ್ ಕೆಲಸವನ್ನು ಸಹ ಮಾಡಿದ್ದಾರೆ. ಚಿತ್ರೀಕರಣ ಪ್ರಾರಂಭಿಸುವುದು ಮಾತ್ರ ಬಾಕಿ ಇದೆ. ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆ ಜೇಮ್ಸ್ ಚಿತ್ರತಂಡದ ಮೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ.

    ನಿಧಿ ಅಗರ್ವಾಲ್ ಬೆಂಗಳೂರಿನಲ್ಲಿ ಬೆಳೆದ ಹುಡುಗಿಯಾಗಿದ್ದು, ಚಿತ್ರರಂಗಕ್ಕೆ ಕಾಲಿಟ್ಟು ಕೇವಲ ಮೂರ್ನಾಲ್ಕು ವರ್ಷಗಳಾಗಿವೆ. ನಿಧಿ ಬಾಲಿವುಡ್‍ನಿಂದಲೇ ಸಿನಿಮಾ ಪಯಣ ಆರಂಭಿಸಿದ್ದು, ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ಬಿಡುಗಡೆಯಾಗಿದ್ದ ಅವರ ‘ಇಸ್ಮಾರ್ಟ್ ಶಂಕರ್’ ಚಿತ್ರ ಸೂಪರ್ ಹಿಟ್ ಆಗಿತ್ತು. ಇದಾದ ಬಳಿಕ ಕೆಲ ಚಿತ್ರಗಳಲ್ಲಿ ನಿಧಿ ನಟಿಸಿದ್ದಾರೆ.