Tag: ನಿಧಿ

  • ನಿಧಿ ನಿಕ್ಷೇಪ ತೋರಿಸುವುದಾಗಿ 16 ಲಕ್ಷ ರೂ. ನಾಮ – ವಂಚಿತರಿಂದ ಜ್ಯೋತಿಷಿಯ ಕಿಡ್ನಾಪ್

    ನಿಧಿ ನಿಕ್ಷೇಪ ತೋರಿಸುವುದಾಗಿ 16 ಲಕ್ಷ ರೂ. ನಾಮ – ವಂಚಿತರಿಂದ ಜ್ಯೋತಿಷಿಯ ಕಿಡ್ನಾಪ್

    ತುಮಕೂರು: ನಿಧಿ (Treasure) ನಿಕ್ಷೇಪ ತೋರಿಸುವುದಾಗಿ ಜ್ಯೋತಿಷಿಯೊಬ್ಬರು (Astrologer) 16 ಲಕ್ಷ ರೂ. ಪಡೆದು ನಾಮ ಹಾಕಿದ್ದು, ನಿಧಿ ಸಿಗದ ಹಿನ್ನೆಲೆ ಬೆಂಗಳೂರಿನ ಕಮಲಾ ನಗರ ನಿವಾಸಿಗಳು ಜ್ಯೋತಿಷಿಯನ್ನು ಕಿಡ್ನಾಪ್ (Kidnap) ಮಾಡಿದ ಘಟನೆ ಪಾವಗಡ (Pavagada) ತಾಲೂಕಿನ ರಾಜವಂತಿ ಗ್ರಾಮದಲ್ಲಿ ನಡೆದಿದೆ.

    ರಾಜವಂತಿ ಗ್ರಾಮದ ಜ್ಯೋತಿಷಿ ರಾಮಣ್ಣ ಸ್ವಾಮಿ ಎನ್ನುವವರನ್ನು ಬೆಂಗಳೂರಿನ ಕಮಲಾನಗರದ ನಿವಾಸಿಗಳು ಕಿಡ್ನಾಪ್ ಮಾಡಿದ್ದು, ಪಾವಗಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವರಾಜು (32), ಮೇದರಹಳ್ಳಿ ಚಿಕ್ಕಬಾಣಾವರದ ಅನಂತಕೃಷ್ಣ (21), ಆಂಧ್ರದ ಮಡಕಶಿರಾ ತಾಲೂಕಿನ ಕೊತಾಲಗುಟ್ಟದ ನರೇಶ್ (25) ಬಂಧಿತ ಆರೋಪಿಗಳು. ಅತಿಯಾಸೆಗೆ ಬಿದ್ದು ಹಣ ಕೊಟ್ಟವರು ಹಣ ವಸೂಲಿಗಾಗಿ ಜ್ಯೋತಿಷಿಯ ಕಿಡ್ನಾಪ್ ಪ್ಲಾನ್ ಮಾಡಿದ್ದು, ಪೊಲೀಸರು ಕಿಡ್ನಾಪ್ ಮಾಡಿದ ಟೀಂ ಅನ್ನು ಕೇವಲ 12 ಗಂಟೆಯೊಳಗೆ ಬಂಧಿಸಿದ್ದಾರೆ. ಇದನ್ನೂ ಓದಿ: ಕೆಪಿಎಸ್‍ಸಿ ಪರೀಕ್ಷೆಗೆ ತಾಳಿ, ಕಾಲುಂಗುರ ತೆಗೆಸಿ ಸಿಬ್ಬಂದಿ ಯಡವಟ್ಟು – ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು

    ರಾತ್ರಿ 9 ಗಂಟೆಗೆ ಜ್ಯೋತಿಷಿಯನ್ನು ರಕ್ಷಿಸಿ ಕಿಡ್ನಾಪರ್ಸ್‌ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮತ್ತೊಬ್ಬ ಆರೋಪಿ ಹರೀಶ್ ಎಸ್ಕೇಪ್ ಆಗಿದ್ದಾನೆ. ಬೈಕ್‌ನಲ್ಲಿ ಹೊರಟಿದ್ದ ಜ್ಯೋತಿಷಿ ರಾಮಣ್ಣನವರನ್ನು ಎರಡು ಕಾರುಗಳಲ್ಲಿ ಬಂದು ಕಿಡ್ನಾಪ್ ಮಾಡಿದ್ದರು. ಪಾವಗಡದ ಅರಣ್ಯ ಇಲಾಖೆ ಕಚೇರಿ ಎದುರು ಆರೋಪಿಗಳು ರಾಮಣ್ಣನವರನ್ನು ಕಿಡ್ನಾಪ್ ಮಾಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ನ.19ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ – ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ ವೀಡಿಯೋ

    ರಾಮಣ್ಣನವರ ಮೊಬೈಲ್‌ನಿಂದಲೇ ಆರೋಪಿಗಳು ರಾಮಣ್ಣರ ಮಗನಿಗೆ ಕರೆ ಮಾಡಿದ್ದರು. ನಿಮ್ಮ ತಂದೆ 16 ಲಕ್ಷ ರೂ. ಸಾಲ ಪಡೆದಿದ್ದಾರೆ. ಆ ಹಣ ಕೊಟ್ಟು ನಿಮ್ಮ ತಂದೆಯನ್ನು ಬಿಡಿಸಿಕೊಂಡು ಹೋಗಿ ಎಂದು ಹೇಳಿದ್ದರು. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಬೆಂಗಳೂರಿನ ಉಳ್ಳಾಲ ಬಳಿ ರಾಮಣ್ಣನವರನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕು ಇರಿದು ಉಪನಿರ್ದೇಶಕಿಯ ಬರ್ಬರ ಹತ್ಯೆ

  • ನಿಧಿಗಾಗಿ ಬಾಣಂತಿ ಸುಟ್ಟು ಕೊಲೆ?

    ನಿಧಿಗಾಗಿ ಬಾಣಂತಿ ಸುಟ್ಟು ಕೊಲೆ?

    ಕೊಪ್ಪಳ: ಸುಟ್ಟು ಕೊಲೆ ಮಾಡಿದ ಸ್ಥಿತಿಯಲ್ಲಿ ಬಾಣಂತಿಯ ಮೃತದೇಹ ಸಿಕ್ಕಿದ್ದು, ನಿಧಿ (Treasure) ಆಸೆಗಾಗಿ ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

    ಕೊಪ್ಪಳ (Koppala) ಜಿಲ್ಲೆಯ ಗಬ್ಬೂರು (Gabburu) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೇತ್ರಾವತಿ ಕುರಿ (26) ಅವರ ಶವ ಸುಟ್ಟ (Burnt) ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಐಫೋನ್ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್ 

    CRIME 2

    ನೇತ್ರಾವತಿ ಒಂದೂವರೆ ತಿಂಗಳ ಬಾಣಂತಿಯಾಗಿದ್ದು, ಅಮವಾಸ್ಯೆ ಹಿನ್ನಲೆಯಲ್ಲಿ ನಿಧಿಗಾಗಿ ಆಕೆಯನ್ನು ತಡರಾತ್ರಿ ಸುಟ್ಟು ಕೊಲೆ (Murder) ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಿಂದ ಅಣತಿ ದೂರದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಈಕೆಯ ಶವ ಪತ್ತೆಯಾಗಿದೆ.

    ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಯಸ್ಸಾದ ವೃದ್ಧರಿಗೆ ಸೇರಬೇಕಾದ ಪಿಂಚಣಿ ವಯಸ್ಕರ ಜೇಬಿಗೆ – ಓರ್ವ ಅರೆಸ್ಟ್

  • Delhi Hit-And-Run ಕುಡಿದು ಸ್ಕೂಟಿ ಚಲಾಯಿಸಿದ್ದಳು: ಅಂಜಲಿ ಸ್ನೇಹಿತೆ ಸ್ಫೋಟಕ ಹೇಳಿಕೆ

    Delhi Hit-And-Run ಕುಡಿದು ಸ್ಕೂಟಿ ಚಲಾಯಿಸಿದ್ದಳು: ಅಂಜಲಿ ಸ್ನೇಹಿತೆ ಸ್ಫೋಟಕ ಹೇಳಿಕೆ

    ನವದೆಹಲಿ: ಭಯಾನಕ ಹಿಟ್‌ ಆಂಡ್‌ ರನ್‌ ಪ್ರಕರಣಕ್ಕೆ(Hit and Run Case) ಸ್ಫೋಟಕ ಟ್ವಿಸ್ಟ್‌ ಸಿಕ್ಕಿದ್ದು ಮೃತಪಟ್ಟ ಅಂಜಲಿ(Anjali) ಮದ್ಯಪಾನ ಮಾಡಿ ಸ್ಕೂಟಿ ಚಲಾಯಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೋಟೆಲ್‌ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಅಂಜಲಿ ಜೊತೆ ಇದ್ದ ಸ್ನೇಹಿತೆ ನಿಧಿಯನ್ನು(Nidhi) ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಘಟನೆ ಹೇಗಾಯ್ತು ಎಂಬುದನ್ನು ವಿವರಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಿಧಿ, ಅಂಜಲಿ ಕುಡಿದು ಸ್ಕೂಟಿ ಓಡಿಸಲು ಹಠ ಮಾಡಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಮತ್ತು ನನಗೆ ಜಗಳ ನಡೆದಿತ್ತು. ನನಗೆ ಪ್ರಜ್ಞೆ ಇದೆ ನಾನು ಚಲಾಯಿಸುತ್ತೇನೆ ಎಂದು ಹೇಳಿದರೂ ಆಕೆ ಹಠ ಹಿಡಿದು  ಸ್ಕೂಟಿ  ಓಡಿಸಿದ್ದಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಯುವತಿ ಹತ್ಯೆ ಕೇಸ್ – ಬಂಧಿತ ಐವರಲ್ಲಿ ಓರ್ವ ಬಿಜೆಪಿ ಸದಸ್ಯ: ಎಎಪಿ ಆರೋಪ

    ಕಾರು ನಮಗೆ ಡಿಕ್ಕಿ ಹೊಡೆದ ನಂತರ ನಾನು ಒಂದು ಬದಿಗೆ ಬಿದ್ದೆ. ಸ್ನೇಹಿತೆ ಕಾರಿನ ಕೆಳಗಡೆ ಸಿಕ್ಕಿಕೊಂಡಿದ್ದಳು. ಕಾರಿನಲ್ಲಿದ್ದ ಪುರುಷರಿಗೆ ಮಹಿಳೆ ಕಾರಿನ ಕೆಳಗೆ ಸಿಲುಕಿಕೊಂಡಿದ್ದ ವಿಚಾರ ತಿಳಿದಿತ್ತು. ಅಪಘಾತದ ನಂತರ ನಾನು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಭಯಗೊಂಡು ಮನೆಗೆ ಹೋಗಿದ್ದೆ ಎಂದು ವಿವರಿಸಿದ್ದಾರೆ.

    ಹೋಟೆಲ್‌ ಮ್ಯಾನೇಜರ್‌ ಪ್ರತಿಕ್ರಿಯಿಸಿ ಜ.1 ನಸುಕಿನ ಜಾವ 1:30ಕ್ಕೆ ಇಬ್ಬರು ಜಗಳವಾಡುತ್ತಿದ್ದರು. ನಾನು ಇಲ್ಲಿ ಜಗಳವಾಡಬೇಡಿ ಎಂದು ಹೇಳಿದರೂ ಅವರು ಮತ್ತೆ ಜಗಳ ಮುಂದುವರಿಸಿ ಸ್ಕೂಟಿ ಹತ್ತಿ ತೆರಳಿದ್ದರು ಎಂದು ತಿಳಿಸಿದ್ದಾರೆ.

    ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ರೂಮ್‌ ಬುಕ್‌ ಮಾಡಿದ್ದ ಹುಡುಗರ ಜೊತೆ ಇಬ್ಬರು ಮಾತನಾಡುತ್ತಿದ್ದರು ಎಂದು ಹೋಟೆಲ್‌ ಮ್ಯಾನೇಜರ್‌ ತಿಳಿಸಿದ ಹಿನ್ನೆಲೆಯಲ್ಲಿ ಈಗ ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಅಂಜಲಿ ಮತ್ತು ನಿಧಿ ಜನವರಿ 1 ರಂದು ಹೋಟೆಲ್‌ನಿಂದ ಹೊರಟಿದ್ದಾರೆ. ದಾರಿಯಲ್ಲಿ ಬರುತ್ತಿದ್ದಾಗ ಅವರ ಸ್ಕೂಟಿಗೆ ಕಾರಿಗೆ ಡಿಕ್ಕಿ ಹೊಡೆದಿದೆ. ನಿಧಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅಂಜಲಿಯ ಕಾಲು ಮುಂಭಾಗದ ಆಕ್ಸಲ್‌ಗೆ ಸಿಲುಕಿಕೊಂಡಿದ್ದರಿಂದ ಕಾರು ದೇಹವನ್ನು ಸುಮಾರು 13 ಕಿ.ಮೀ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ವಿರುದ್ಧ ನರಹತ್ಯೆ ಅಡಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೇವಿ ಕನಸಲ್ಲಿ ಬಂದು ನಿಧಿ ತೋರಿಸಿದ್ಲು ಅಂತಾ ಅರಣ್ಯದಲ್ಲಿ ಬಾವಿ ತೋಡಿ ನಿಧಿ ಹುಡುಕ್ತಿದ್ದ ನಾಲ್ವರು ಅರೆಸ್ಟ್‌

    ದೇವಿ ಕನಸಲ್ಲಿ ಬಂದು ನಿಧಿ ತೋರಿಸಿದ್ಲು ಅಂತಾ ಅರಣ್ಯದಲ್ಲಿ ಬಾವಿ ತೋಡಿ ನಿಧಿ ಹುಡುಕ್ತಿದ್ದ ನಾಲ್ವರು ಅರೆಸ್ಟ್‌

    ಕಾರವಾರ: ದೇವಿ ಕನಸಿನಲ್ಲಿ ಬಂದು ನಿಧಿ ತೋರಿಸಿದಳು ಎಂದು ಕಾರವಾರ (Karwar) ತಾಲ್ಲೂಕಿನ ಶಿರವಾಡದಲ್ಲಿ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನಿಧಿ (Treasure) ಶೋಧನೆಗಾಗಿ 15 ಅಡಿಗೂ ಹೆಚ್ಚು ಆಳವಾದ ಬಾವಿ (Well) ತೋಡಿದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್, ಮೊಬೈಲ್ ಫೋನ್‌ಗಳು, ಪಿಕಾಸಿ ಸೇರಿದಂತೆ ವಿವಿಧ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ.

    ಶಿರವಾಡದಲ್ಲಿ ನೆಲೆಸಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಹಿದಾಯತ್ ಅಬ್ದುಲ್ ಗನಿ (43), ಶಿರವಾಡದ ರುಸ್ತುಂ ರಜಾಕ್ ಸಾಬ್ ಪಠಾಣ್ (55), ಉತ್ತರ ಪ್ರದೇಶದ ಗೋರಖ್‌ ಪುರದ ಹರ್ಷದ್ ಅಲಿ ಹೈದರ್ ಅಲಿ ಅನ್ಸಾರ್ (21) ಹಾಗೂ ಶಿರವಾಡದ ಸರಫ್‌ರಾಜ್ ಅಬೀಬ್ ಉಲ್ಲಾ ಸಲ್ಮಾನಿ (25) ಬಂಧಿತರು. ಇದನ್ನೂ ಓದಿ: ನಮಗೆ ಜೀವ ನೀಡುವುದೂ ಗೊತ್ತು.. ಜೀವ ತೆಗೆಯುವುದೂ ಗೊತ್ತು – ಪ್ರಜ್ಞಾ ಸಿಂಗ್‌ ಪ್ರಚೋದನಕಾರಿ ಭಾಷಣ

    ಕಾಡಿನ ನಡುವೆ ಇರುವ ದೊಡ್ಡ ಬಂಡೆಗೆ ಪೂಜೆ ಸಲ್ಲಿಸಿದ್ದ ಆರೋಪಿಗಳು, ಅದರ ಸಮೀಪದಲ್ಲೇ 15 ಕ್ಕೂ ಹೆಚ್ಚು ಅಡಿಗಳ ಬಾವಿಯನ್ನು ತೋಡಿದ್ದಾರೆ. ಕೃತ್ಯದಲ್ಲಿ ತೊಡಗಿದ್ದಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ದಾಳಿ ಮಾಡಿದ್ದರಿಂದ ಆರೋಪಿಗಳು ಅಲ್ಲೇ ಸಿಕ್ಕಿಬಿದ್ದರು. ಅಲ್ಲಿದ್ದ ಕಲ್ಲುಗಳಿಗೆ ಅರಿಶಿನ-ಕುಂಕುಮ ಹಚ್ಚಿ, ನಿಂಬೆಹಣ್ಣಿನ ಹಾರ ಹಾಕಿ ಆರತಿ ಮಾಡಿದ್ದೂ ಕಂಡುಬಂದಿದೆ.

    ಕೃತ್ಯದ ಪ್ರಮುಖ ಆರೋಪಿ ಹಿದಾಯತ್ ಅಬ್ದುಲ್ ಗನಿಯನ್ನು ಅರಣ್ಯಾಧಿಕಾರಿಗಳು ಕಾದಿಟ್ಟ ಅರಣ್ಯದಲ್ಲಿ ಬಾವಿ ತೋಡಿರುವ ಕುರಿತು ವಿಚಾರಣೆಗೆ ಒಳಪಡಿಸಿದಾಗ, ಕಳೆದ ಅಮಾವಾಸ್ಯೆಯ ದಿನ ರಾತ್ರಿ ನಮಗೆ ಶಿರಸಿಯ ಮಾರಿಕಾಂಬೆ ಕನಸಿನಲ್ಲಿ ಬಂದು ಇಲ್ಲಿ ಪೂಜೆ ಸಲ್ಲಿಸಲು ತಿಳಿಸಿದ್ದಾಳೆ. ಹಾಗಾಗಿ ನಾವು ಬಾವಿ ತೋಡುತ್ತಿದ್ದೇವೆ. ನಾವು ಯಾವುದೇ ಮರವನ್ನೂ ಕತ್ತರಿಸಿಲ್ಲ ಎಂದು ಸಮಜಾಯಿಸಿ ನೀಡಿದ್ದ. ನಂತರ ತನಿಖೆ ವೇಳೆ ತಾವು ನಿಧಿಗಾಗಿ ಶೋಧ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನಸೌಧ ಮುಂಭಾಗದಲ್ಲೇ ಬಿಯರ್ ಪಾರ್ಟಿ – ನಾಲ್ವರು ಯುವಕರೊಂದಿಗೆ ಇಬ್ಬರು ಯುವತಿಯರ ಮೋಜು ಮಸ್ತಿ

    ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕುಮಾರ ಕೆ.ಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ರೂಪಾ ಥಾಮ್ಸೆ, ನವೀನ ಶೆಟ್ಟಿ, ಅರಣ್ಯ ರಕ್ಷಕರಾದ ವೀಣಾ ದೇವಾಡಿಗ, ಸಂಜೀವ ಅಸ್ನೋಟಿಕರ್, ಅರಣ್ಯ ವೀಕ್ಷಕರಾದ ಮಧುಕರ ಗುನಗಿ, ದೇವಿದಾಸ ಗುನಗಿ, ಶಶಿಕಾಂತ ಗುನಗಿ ಹಾಗೂ ಸಿಬ್ಬಂದಿ ಶಶಿಕಾಂತ ಗೋವೇಕರ್ ಭಾಗವಹಿಸಿದ್ದು, ಆರೋಪಿಗಳ ವಿರುದ್ಧ 1963ರ ಅರಣ್ಯ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಿಧಿಯಾಸೆಗೆ ಶಿವಲಿಂಗ ಕೆತ್ತನೆ ಇರುವ ಸ್ಮಾರಕ ಧ್ವಂಸ

    ನಿಧಿಯಾಸೆಗೆ ಶಿವಲಿಂಗ ಕೆತ್ತನೆ ಇರುವ ಸ್ಮಾರಕ ಧ್ವಂಸ

    ಶಿವಮೊಗ್ಗ: ನಿಧಿಯಾಸೆಗಾಗಿ ಶಿವಲಿಂಗದ (Shivalinga Monument) ಕೆತ್ತನೆ ಇರುವ ಸ್ಮಾರಕ ಸ್ಥಳವನ್ನು ಧ್ವಂಸಗೊಳಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ತಾಲೂಕಿನ ಬಿದನೂರು ನಗರ ಸಮೀಪದ ನೇತ್ರಬೈಲು ಗುಡ್ಡದಲ್ಲಿ ನಡೆದಿದೆ. ನಿಧಿಚೋರರು ನಿಧಿಯಾಸೆಗೆ ಶೋಧ ನಡೆಸಿದ ನಂತರ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

    ನಿಧಿಯಾಸೆಗಾಗಿ ನಿಧಿಚೋರರು ಐತಿಹಾಸಿಕ ಸ್ಥಳಗಳ ಬಳಿ ಶೋಧ ಕಾರ್ಯ ನಡೆಸುತ್ತಿದ್ದು, ಎಲ್ಲೆಂದರಲ್ಲಿ ಐತಿಹಾಸಿಕ ಸ್ಮಾರಕಗಳನ್ನು ಅಗೆದು ಹಾಕುತ್ತಿದ್ದಾರೆ. ಇದೀಗ ಅಂತಹದ್ದೆ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನೇತ್ರಬೈಲುಗುಡ್ಡದಲ್ಲಿ ನಡೆದಿದೆ. ಶ್ರೀಧರಪುರದ ಶಿವಪ್ಪನಾಯಕ ಮತ್ತು ಅರಸರ ಸಮಾಧಿ ಸ್ಥಳದಿಂದ ಒಂದು ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಶಿವಲಿಂಗದ ಕಲ್ಲಿನ ಕೆಳಭಾಗದಲ್ಲಿ ಆರೇಳು ಅಡಿ ಅಗೆಯಲಾಗಿದೆ. ಇದನ್ನೂ ಓದಿ: ಗೋಮಾಂಸ ಮಾರಾಟ ಮಾಡ್ತಿದ್ದ ಇಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ – ವೀಡಿಯೋ ವೈರಲ್

    ಅಷ್ಟೇ ಅಲ್ಲದೇ ನಿಧಿಗಾಗಿ ಶೋಧ ಕಾರ್ಯ ನಡೆದಿದ್ದ ಸ್ಥಳದ ಸುತ್ತಲೂ ದಾರ ಕಟ್ಟಿ, ಅರಿಶಿನ, ಕುಂಕುಮ ಹಾಕಿ ನಿಂಬೆಹಣ್ಣು, ಕುಂಬಳಕಾಯಿ, ತೆಂಗಿನಕಾಯಿ, ಒಡೆಯಲಾಗಿದೆ. ಶಿವಲಿಂಗದ ಮೂರ್ತಿಗೆ ಭಸ್ಮ ಬಳಿದಿರುವುದು ಮಾತ್ರವಲ್ಲದೇ ಸುತ್ತಲೂ ಹಾಕಲಾಗಿದೆ. ಹೊರಭಾಗ ಮತ್ತು ಲಿಂಗದ ಸಮೀಪ‌ ಹಣತೆ ಇಟ್ಟು ದೀಪ ಬೆಳಗಿಸಲಾಗಿದೆ. ನಿಧಿ ಶೋಧಕ್ಕೂ ಮೊದಲು ನಿಧಿಚೋರರು ವಾಮಾಚಾರ ನಡೆಸಿರುವ ಬಗ್ಗೆ ಶಂಕಿಸಲಾಗಿದೆ.

    ನೇತ್ರಬೈಲು ಗುಡ್ಡ ಜನವಸತಿ ಪ್ರದೇಶದಿಂದ ದೂರದಲ್ಲಿದೆ. ಹೀಗಾಗಿ ಈ ಸ್ಥಳಕ್ಕೆ ಸ್ಥಳೀಯರು ಆಗಾಗ ಹೋಗುವುದು ಕಡಿಮೆ. ಆದರೆ ಸ್ಥಳೀಯರು ತಮ್ಮ ಕೆಲಸಗಳಿಗೆ ಗುಡ್ಡಕ್ಕೆ ಹೋದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ವಾರದ ಹಿಂದೆ ಗ್ರಹಣದ ವೇಳೆ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನ ಸ್ಥಳೀಯರದ್ದಾಗಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ಆತ್ಮಹತ್ಯೆ ಕೇಸ್- ಬಂಧಿತರ ಮೊಬೈಲ್ FSLಗೆ ರವಾನೆ

    ಕಳೆದ ಐದಾರು ವರ್ಷದಿಂದ ನಿರಂತರವಾಗಿ ನಿಧಿಯಾಸೆಗೆ ಸ್ಮಾರಕ ಧ್ವಂಸಗೊಳಿಸುತ್ತಿರುವ ಘಟನೆ ನಡೆಯುತ್ತಿದೆ. ಶಿವಪ್ಪನಾಯಕ ಅರಸರ ಸಮಾಧಿ, ಶೂಲದ ಗುಡ್ಡ, ಬರೇಕಲ್ ಬತೇರಿ, ಗಳಿಗೆಬಟ್ಟಲು ಸೇರಿದಂತೆ ವಿವಿಧ ಕಡೆ ಸ್ಮಾರಕ ಹಾಳುಗೆಡವಿದ ಘಟನೆ ಈ ಹಿಂದೆಯೂ ನಡೆದಿತ್ತು. ನಿಧಿಯಾಸೆಗೆ ಬಿದನೂರಿನ ಸ್ಮಾರಕಗಳು ಅವಸಾನಗೊಳ್ಳುತ್ತಿವೆ.

    ಘಟನೆ ನಂತರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನಾದರೂ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನಿಧಿಚೋರರನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಧಿ ಆಸೆ ತೋರಿಸಿ 5 ಲಕ್ಷ ರೂ. ಪಂಗನಾಮ ಹಾಕಿದ ಕಳ್ಳ ಸ್ವಾಮೀಜಿ

    ನಿಧಿ ಆಸೆ ತೋರಿಸಿ 5 ಲಕ್ಷ ರೂ. ಪಂಗನಾಮ ಹಾಕಿದ ಕಳ್ಳ ಸ್ವಾಮೀಜಿ

    ಹಾಸನ: ನಿಧಿ ಆಸೆ ತೋರಿಸಿ ದಂಪತಿಗೆ ಐದು ಲಕ್ಷ ರೂಪಾಯಿ ಪಂಗನಾಮ ಹಾಕಿ ಕಳ್ಳಸ್ವಾಮೀಜಿ ಎಸ್ಕೇಪ್ ಆಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದಿದೆ.

    ಮಂಜೇಗೌಡ-ಲೀಲಾವತಿ ಹಣ ಕಳೆದುಕೊಂಡ ದಂಪತಿ. ಅರಕಲಗೂಡು ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಮಂಜೇಗೌಡ (ಕಳ್ಳಸ್ವಾಮೀಜಿ) ನಿಮ್ಮ ಜಮೀನಿನಲ್ಲಿ ನಿಧಿ ಇದ್ದು, ನನ್ನಲ್ಲಿರುವ ದೈವ ಶಕ್ತಿಯಿಂದ ಅದನ್ನು ಹೊರ ತೆಗೆಯುತ್ತೇನೆ ಎಂದು ದಂಪತಿಯನ್ನು ನಂಬಿಸಿದ್ದಾನೆ. ಇದಕ್ಕೂ ಮುನ್ನ ಮಂಜೇಗೌಡರ ಹೊಲದಲ್ಲಿ ಚಿನ್ನ ಲೇಪಿತ ಮೂರು ಕೆಜಿ ಬೆಳ್ಳಿ ವಿಗ್ರಹ ಹೂತಿಟ್ಟಿದ್ದಾನೆ. ನಂತರ ರಾತ್ರಿ ವೇಳೆ ಜಮೀನಿಗೆ ಮಂಜೇಗೌಡ-ಲೀಲಾವತಿ ಕರೆದೊಯ್ದು ಮೊದಲು ಪೂಜೆ ಮಾಡಿ, ಜಮೀನಿನಲ್ಲಿ ಹೂತಿಟ್ಟಿದ್ದ ಚಿನ್ನ ಲೇಪಿತ ವಿಗ್ರಹ ಹೊರತೆಗೆದು ತೊಳೆದು ದಂಪತಿಗೆ ನೀಡಿದ್ದಾನೆ. ಇದನ್ನೂ ಓದಿ: ಕೆರೆಗೆ ಹಾರಿ ಯುವಕ, ಮಹಿಳೆ ಆತ್ಮಹತ್ಯೆ- ಸೂಸೈಡ್‍ಗೂ ಮುನ್ನ ಗೆಳೆಯನಿಗೆ ಕರೆ ಮಾಡಿದ್ದ ಚರಣ್

    ಇಷ್ಟಕ್ಕೆ ಸುಮ್ಮನಾಗದ ಮಂಜೇಗೌಡ ಚಿನ್ನದ ವಿಗ್ರಹಕ್ಕೆ ರಕ್ತ ಅಭಿಷೇಕ ಮಾಡಬೇಕು ಎಂದು ಲೀಲಾವತಿಯ ಬೆರಳನ್ನೇ ಕೊಯ್ದಿದ್ದಾನೆ. ಬೆರಳು ಕೊಯ್ದ ರಭಸಕ್ಕೆ ಮಹಿಳೆ ಕೈ ಬೆರಳಿನ ನರವೇ ಕತ್ತರಿಸಿ ಹೋಗಿದೆ. ಒಂದು ವಾರದ ನಂತರ ಮಂಜೇಗೌಡ-ಲೀಲಾವತಿ ಜ್ಯೂವೆಲರಿ ಶಾಪ್‍ಗೆ ತೆರಳಿ ವಿಗ್ರಹ ಪರಿಶೀಲಿಸಿದಾಗ ಬೆಳ್ಳಿ ವಿಗ್ರಹ ಎಂಬುದು ಪತ್ತೆಯಾಗಿದೆ. ಇತ್ತ ಕಳ್ಳ ಸ್ವಾಮೀಜಿ ದಂಪತಿಗೆ ವಂಚಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಣದ ಸಮೇತ ಎಸ್ಕೇಪ್ ಆಗಿದ್ದಾನೆ. ಇತ್ತ ಗಾಯಗೊಂಡಿದ್ದ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ. ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದುವರೆಗೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ನಿಧಿ ಆಸೆಗಾಗಿ ನಾಗರಹಾವು- ಕರಿ ಮೇಕೆ ಬಲಿ ಕೊಟ್ರಾ?

    ನಿಧಿ ಆಸೆಗಾಗಿ ನಾಗರಹಾವು- ಕರಿ ಮೇಕೆ ಬಲಿ ಕೊಟ್ರಾ?

    – ನಿಧಿಗಳ್ಳರ ಹಾವಳಿಗೆ ಭಯಭೀತರಾದ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ನಿಧಿ ಆಸೆಗಾಗಿ ನಾಗರಹಾವು ಹಾಗೂ ಕರಿ ಮೇಕೆ ಬಲಿ ಕೊಟ್ಟಿರುವ ವಿಚಿತ್ರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕೂಗಳತೆ ದೂರದ ಮುನೇಗೌಡ ಅವರ ರಾಗಿ ಹೊಲದಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿದ್ದ ಹುತ್ತವನ್ನ ಅಗೆದು ನಿಧಿಗಳ್ಳರು ಆಳವಾದ ಗುಂಡಿ ತೆಗೆದು, ವಿಚಿತ್ರ ಪೂಜೆ ಪುನಸ್ಕಾರ ನೇರವೇರಿಸಿದ್ದಾರೆ. ಈ ಜಮೀನಿನಲ್ಲಿ ವೀರಗಲ್ಲುಗಳು ಇದ್ದವು ಎನ್ನಲಾಗಿದ್ದು, ನಿಧಿ ಇರಬಹದು ಎಂದು ಆಸೆಗಾಗಿ ಈ ಕೃತ್ಯ ಮಾಡಿರುವ ಶಂಕೆ ಗ್ರಾಮಸ್ಥರದ್ದಾಗಿದೆ. ಇದನ್ನೂ ಓದಿ: ಈಗಲ್ಟನ್ ವಿಲೇಜ್ ಮೇಲೆ ಸಿಸಿಬಿ ದಾಳಿ- ಇಬ್ಬರು ಇರಾನಿಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳು ಅರೆಸ್ಟ್

    ಈ ಘಟನೆಯಿಂದ ಭಯಭೀತರಾಗಿರುವ ಸತ್ತಲಿನ ಗ್ರಾಮಸ್ಥರು, ನಿಧಿ ಆಸೆಗಾಗಿ ಇಂದು ಪ್ರಾಣಿ ಬಲಿ ಕೊಟ್ಟಿದ್ದಾರೆ ಮುಂದೆ ನರಬಲಿಯೂ ಕೊಡಬಹುದು ಎಂದು ಆತಂಕಕ್ಕೀಡಾಗಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ನಿಧಿಗಳ್ಳರನ್ನು ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

    ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಹಾರ್ನೋಡ ಗ್ರಾಮದಲ್ಲಿ ನಿಧಿಯ ಆಸೆಗಾಗಿ ಪ್ರಾಚೀನ ಕಾಲದ ಶಿವನ ದೇವಾಲಯದ ಮೂರ್ತಿಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ.

    ದೇವಸ್ಥಾನವು ಪ್ರಾಚೀನ ಕಾಲದ್ದಾಗಿದ್ದು, ಸುಂದರ ಕಲ್ಲಿನ ಕೆತ್ತನೆ, ಶಿವನ ಲಿಂಗ ವಿಶೇಷವಾಗಿದೆ. ಇಡೀ ದೇವಸ್ಥಾನ ಕಲ್ಲಿನಿಂದ ನಿರ್ಮಾಣವಾಗಿದೆ. ದೇವಸ್ಥಾನ ದಟ್ಟ ಅರಣ್ಯದಲ್ಲಿ ಇರುವುದರಿಂದ ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿಲ್ಲ. ಇದರ ಲಾಭ ಪಡೆದ ನಿಧಿ ಕಳ್ಳರು, ಈಶ್ವರ ಲಿಂಗ ಪೀಡವನ್ನು ಕಿತ್ತು ಹಾಳು ಮಾಡಿ ತಳಭಾಗದಲ್ಲಿ ಅಗೆದಿದ್ದಾರೆ. ಈಶ್ವರ ಲಿಂಗಕ್ಕೂ ಘಾಸಿ ಮಾಡಿದ್ದು, ಲಿಂಗವೂ ಎರಡು ತುಂಡಾಗಿದೆ. ಇಲ್ಲಿನ ಕೆಲವು ಮೂರ್ತಿಗಳಿಗೂ ಹಾನಿಮಾಡಿದ್ದಾರೆ. ಇದನ್ನೂ ಓದಿ: ಕಬಿನಿ ಫಾರೆಸ್ಟ್‌ನಲ್ಲಿ  ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್

    ಘಟನೆ ನಡೆದಿರುವುದು ಇದೀಗ ಸ್ಥಳೀಯ ಜನರಿಗೆ ತಿಳಿದಿದ್ದು, ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಸುಧಾಕರ್ ರೆಡ್ಡಿ ಆಗಮಿಸಿ ವೀಕ್ಷಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಇಲ್ಲಿನ ದೇವಸ್ಥಾನಗಳ ಬಗ್ಗೆ ಅಧ್ಯಯನ ನೆಡೆಯಬೇಕು, ಈ ರೀತಿಯ ಪುರಾತನ ದೇವಸ್ಥಾನವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಿ, ಜನರಿಗೆ ಇತಿಹಾಸದ ಮಹತ್ವ ಅರಿಯಲು ಇಂತಹ ಪ್ರದೇಶವನ್ನು ಪ್ರವಾಸಿ ಸ್ಥಳವಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಸರ್ಕಾರದಲ್ಲಿ ಹಣವಿಲ್ಲವೆಂದು ಕಾರ್ಮಿಕ ಇಲಾಖೆ ನಿಧಿ ದುರುಪಯೋಗ ಸರಿಯಲ್ಲ: ದೇಶಪಾಂಡೆ

    ಸರ್ಕಾರದಲ್ಲಿ ಹಣವಿಲ್ಲವೆಂದು ಕಾರ್ಮಿಕ ಇಲಾಖೆ ನಿಧಿ ದುರುಪಯೋಗ ಸರಿಯಲ್ಲ: ದೇಶಪಾಂಡೆ

    ಕಾರವಾರ: ಸರ್ಕಾರದಲ್ಲಿ ಹಣವಿಲ್ಲ ಎಂದು ಕಾರ್ಮಿಕ ಇಲಾಖೆ ನಿಧಿಯನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಮಿಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಕಾರ್ಮಿಕ ಇಲಾಖೆಯಿಂದ ವಿವಿಧ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನದ ಮಂಜುರಾತಿ ಪತ್ರ ವಿತರಿಸಿ ಅವರು ಮಾತನಾಡಿದರು. ಕಾರ್ಮಿಕರಿಂದ ಸಂಗ್ರಹಿಸಲ್ಪಟ್ಟ ನಿಧಿಯು ಕಾರ್ಮಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ವರ್ಧನೆಗೆ ಉಪಯೋಗವಾಗಬೇಕು ಎಂದರು. ಇದನ್ನೂ ಓದಿ: ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!

    ಸರ್ಕಾರದಲ್ಲಿ ಹಣವಿಲ್ಲವೆಂದು ಕಾರ್ಮಿಕ ಇಲಾಖೆಯ ನಿಧಿಯನ್ನು ದುರುಪಯೋಗಪಡಿಸಿಕೊಳ್ಳಬಾರದು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಸಲಹೆ ನಿಡಿದರು.

  • ಬಿಗ್ ಬಾಸ್ ಮನೆಯಿಂದ ನಿಧಿ ಔಟ್

    ಬಿಗ್ ಬಾಸ್ ಮನೆಯಿಂದ ನಿಧಿ ಔಟ್

    ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ನ ಎರಡನೇ ವಾರ ಪಂಚರಂಗಿ, ಅಣ್ಣಾಬಾಂಡ್ ಚಿತ್ರದ ನಟಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿದ್ದಾರೆ.

    ಮೊದಲ ವಾರ ಯಾರನ್ನು ಎಲಿಮಿನೇಟ್ ಮಾಡುವುದಿಲ್ಲ ಎಂದು ಹೇಳಿದ್ದ ಸುದೀಪ್ ಎರಡನೇ ವಾರ ಒಬ್ಬರನ್ನು ಎಲಿಮಿನೇಟ್ ಮಾಡಲಾಗುವುದು ಎಂದು ಮೊದಲೇ ಹೇಳಿದ್ದರು. ಆದರಂತೆ ಈ ಬಾರಿ ನಿಧಿ ಸುಬ್ಬಯ್ಯ ಮನೆಯಿಂದ ಔಟ್ ಆಗಿದ್ದಾರೆ.

    ಎರಡನೇ ವಾರ ನಿಧಿ ಸುಬ್ಬಯ್ಯ ಬಹಳ ಸ್ಫೋರ್ಟಿವ್ ಆಗಿ ಟಾಸ್ಕ್ ಗಳನ್ನು ತೆಗೆದುಕೊಂಡಿದ್ದರು. ಟಾಸ್ಕ್ ನಲ್ಲಿ ನಲ್ಲಿ ಅರವಿಂದ್ ಕೆಪಿ ಜೊತೆ ಮನಸ್ತಾಪ ಮಾಡಿದ್ದರೆ ಬಳಿಕ ಶುಭ ಜೊತೆಗೂ ಮಾತಿನ ಜಗಳ ನಡೆದಿತ್ತು. ಅಂತಿಮವಾಗಿ ಶನಿವಾರದ ಎಪಿಸೋಡ್‍ನಲ್ಲಿ ಸುದೀಪ್ ಅರವಿಂದ್ ನಿಧಿ ಮತ್ತು ಶುಭಾ, ನಿಧಿಯವರನ್ನು ರಾಜಿ ಮಾಡಿಸಿದ್ದರು.

    ಥರ ಥರ ಈ ಎತ್ತರ ಟಾಸ್ಕ್ ವೇಳೆ ಮಂಜು ಜೊತೆ ಮಾತನಾಡುತ್ತಿದ್ದಾಗ ನಿಧಿ ಮಧ್ಯಪ್ರವೇಶ ಮಾಡಿದ್ದಕ್ಕೆ ಅರವಿಂದ್,”ನಾನು ಕ್ಯಾಪ್ಟನ್ ಜೊತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳ್ಳಿ” ಎಂದು ಹೇಳಿದ್ದರು. ಈ ಹೇಳಿಕೆಗೆ ಗರಂ ಆಗಿದ್ದ ನಿಧಿ ಟಾಸ್ಕ್ ಮುಗಿದ ಬಳಿಕ, “ಕ್ರೀಡಾ ಸ್ಫೂರ್ತಿ ಇಲ್ಲ. ಪಾರ್ಟಿಸಿಪೇಷನ್ ಮೆಡಲ್‍ನಲ್ಲಿ ಇಲ್ಲಿಗೆ ಬಂದಿರೋದು, ಗೆದ್ದು ತೋರಿಸು ಡಾಕರ್ ರ್ಯಾಲಿನಾ. ಲೂಸರ್ ಗೆಟ್ ಲಾಸ್ಟ್” ಎಂದು ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಅರವಿಂದ್ ನಗುತ್ತಾ ಮುಂದಕ್ಕೆ ಸಾಗಿದ್ದರು. ಇದನ್ನೂ ಓದಿ: ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. “ಅರವಿಂದ್ ಅವರು ಉದ್ದೇಶ ಪೂರ್ವಕವಾಗಿ ಹೇಳಿಲ್ಲ. ಆಟದ ಸಂದರ್ಭದಲ್ಲಿ ಹೇಳಿದ್ದಾರೆ. ಬಳಿಕ ತಾನು ಹೇಳಿದ್ದು ತಪ್ಪು ಎಂದು ಭಾವಿಸಿ ನಿಧಿ ಬಳಿ ಕ್ಷಮೆ ಕೇಳಲು ಹೋಗಿದ್ದರು. ಆದರೆ ನಿಧಿ ಅರವಿಂದ್ ವಿರುದ್ಧವೇ ತಿರುಗಿ ಬಿದಿದ್ದರು. ಡಕಾರ್ ರೇಸ್‍ನಲ್ಲಿ ಪಾಲ್ಗೊಳ್ಳುವುದೇ ದೊಡ್ಡ ಸಾಧನೆ. ಹೀಗಿರುವ ಅರವಿಂದ್ ಅವರಿಗೆ ಅವಮಾನ ಮಾಡಿದ್ದು ಭಾರತ ದೇಶಕ್ಕೆ ಅವಮಾನ ಮಾಡಿದಂತೆ” ಎಂದು ಅರವಿಂದ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದರು.

    ಇತ್ತ ನಿಧಿ ಅಭಿಮಾನಿಗಳು, ಹೆಣ್ಣು ಮಗಳಿಗೆ ಅವಮಾನ ಮಾಡುವುದು ಸರಿಯಲ್ಲ. ನಿಧಿ ವರ್ತನೆ ಸರಿಯಾಗಿತ್ತು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ನಿಧಿ, ಅರವಿಂದ್ ಮಧ್ಯೆ ಯಾರು ಸರಿ? ಯಾರು ತಪ್ಪು ಎನ್ನುವುದು ದೊಡ್ಡ ಚರ್ಚೆ ಆಗಿತ್ತು. ಅಭಿಮಾನಿಗಳು ಸುದೀಪ್ ಅವರು ಈ ಬಗ್ಗೆ ಮಾತನಾಡಬೇಕು ಎಂದು ಬೇಡಿಕೆ ಇಟ್ಟಿದ್ದರು.