Tag: ನಿತ್ಯಾ ಮೆನನ್

  • ತಲೈವಾನ್ ತಲೈವಿ ಟ್ರೈಲರ್‌ ರಿಲೀಸ್ – ವಿಜಯ್ ಸೇತುಪತಿ-ನಿತ್ಯಾ ಮಸ್ತ್ ಮಸ್ತ್..!

    ತಲೈವಾನ್ ತಲೈವಿ ಟ್ರೈಲರ್‌ ರಿಲೀಸ್ – ವಿಜಯ್ ಸೇತುಪತಿ-ನಿತ್ಯಾ ಮಸ್ತ್ ಮಸ್ತ್..!

    ವಿಜಯ್ ಸೇತುಪತಿ (Vijay Sethupathi) ಹಾಗೂ ನಿತ್ಯಾ ಮೆನನ್ ಅಭಿನಯದ ತಲೈವಾನ್ ತಲೈವಿ (Thalaivan Thalaivi) ಚಿತ್ರದ ಟ್ರೈಲರ್‌ ರಿಲೀಸ್ ಆಗಿದೆ. ಟ್ರೈಲರ್‌ ಪ್ರತಿಯೊಬ್ಬರಿಗೂ ಅತೀಬೇಗ ಕನೆಕ್ಟ್ ಆಗುವ ರೀತಿಯಲ್ಲಿ ಮೂಡಿಬಂದಿದೆ.

    ಒಬ್ಬ ಮಿಡಲ್‌ಕ್ಲಾಸ್ ಹುಡುಗ ಪುಟ್ಟ ವ್ಯಾಪಾರದಿಂದ ಸಂಸಾರ ಸಾಗಿಸುವ ಹಾದಿಯಲ್ಲಿ ಯಾವೆಲ್ಲ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ. ಆ ಸಮಸ್ಯೆಗಳ ಸರಮಾಲೆಯನ್ನ ಎದುರಿಸಲಾಗದೇ ಮನೆಯನ್ನೂ ತೊರೆಯುವಂತ ಸಂದರ್ಭಗಳು ಕೂಡಾ ಎದುರಾಗುವ ಹಾಗೆ ಕಾಣುತ್ತೆ. ಒಂದು ಕಡೆ ಸಮಸ್ಯೆಗಳಿದ್ದರೂ ಟ್ರೈಲರ್‌ ಮಾತ್ರ ನೋಡುಗರ ಮನ ಮುಟ್ಟುತ್ತಿದೆ. ಇದನ್ನೂ ಓದಿ: ಬಲರಾಮನ ದಿನಗಳು – ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ವಿನೋದ್‌ ಪ್ರಭಾಕರ್

    ಸಿನಿಮಾದಿಂದ ಸಿನಿಮಾಗೆ ಭಿನ್ನ ವಿಭಿನ್ನ ಪಾತ್ರಗಳನ್ನ ಮಾಡುವ ವಿಜಯ್ ಸೇತುಪತಿ ಇಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್ ಸೇತುಪತಿಗೆ ನಾಯಕಿಯಾಗಿ ನಿತ್ಯಾ ಮೆನನ್ (Nithya Menen) ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ನಿತ್ಯಾ ಮೆನನ್ ಬಿಟ್ರೆ ಬೇರೆ ಯಾರೂ ಸೂಟ್ ಆಗ್ತಿರಲಿಲ್ಲವೇನು ಎನ್ನುವ ಹಾಗೆ ಅಭಿನಯಿಸಿದ್ದಾರೆ. ಇದನ್ನೂ ಓದಿ: ಹಾಲಿವುಡ್‍ನಲ್ಲಿ ಫ್ಯಾಮಿಲಿ ಜೊತೆ ಐಕಾನ್‍ಸ್ಟಾರ್ ಜಾಲಿ ಜಾಲಿ..!

    ಈ ಸಿನಿಮಾದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಪಂಡಿರಾಜು. ಅಂದಹಾಗೆ ಸಿನಿಮಾಗೆ ಸತ್ಯಜ್ಯೋತಿ ಫಿಲಂಸ್ ಹಾಗೂ ತ್ಯಾಗರಾಜನ್ ಪ್ರೆಸೆಂಟ್ಸ್ ಬ್ಯಾನರ್ ಬಂಡವಾಳ ಹೂಡಿ ನಿರ್ಮಾಣ ಮಾಡಿದೆ. ಟ್ರೈಲರ್‌ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

  • ವಿಜಯ್ ಸೇತುಪತಿ ಜೊತೆ ನಿತ್ಯಾ ಮೆನನ್ ಹೊಸ ಸಿನಿಮಾ- ಟೀಸರ್ ಔಟ್

    ವಿಜಯ್ ಸೇತುಪತಿ ಜೊತೆ ನಿತ್ಯಾ ಮೆನನ್ ಹೊಸ ಸಿನಿಮಾ- ಟೀಸರ್ ಔಟ್

    ನ್ನಡತಿ ನಿತ್ಯಾ ಮೆನನ್ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಜಯ್ ಸೇತುಪತಿ (Vijay Sethupathi) ಜೊತೆ ಮತ್ತೊಮ್ಮೆ ತೆರೆಹಂಚಿಕೊಂಡಿದ್ದಾರೆ. ಹೊಸ ಸಿನಿಮಾಗೆ ಅವರು ಸಾಥ್ ನೀಡಿದ್ದಾರೆ. ಹೊಸ ಚಿತ್ರದ ಟೈಟಲ್ ಟೀಸರ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ಶೌರ್ಯ ಶಶಾಂಕ್

    ಈ ಹೊಸ ಚಿತ್ರಕ್ಕೆ ‘ತಲೈವನ್ ತಲೈವಿ’ (Thalaivan Thalaivii) ಎಂದು ಹೆಸರಿಡಲಾಗಿದೆ. ರಿಲೀಸ್ ಆಗಿರುವ ಟೈಟಲ್ ಟೀಸರ್‌ನಲ್ಲಿ ದಂಪತಿಗಳಾಗಿರೋ ವಿಜಯ್ ಮತ್ತು ನಿತ್ಯಾ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಾ ಇರುತ್ತಾರೆ. ಆಗ ಇಬ್ಬರ ಸಂಭಾಷಣೆಯನ್ನು ಹಾಸ್ಯಮಯವಾಗಿ ತೋರಿಸಲಾಗಿದೆ. ಟೀಸರ್ ಕೊನೆಯಲ್ಲಿ ಹಾಸ್ಯ ನಟ ಯೋಗಿ ಬಾಬು ಅವರು ‘ಸಾಮಾನ್ಯ ಜನರಲ್ಲ, ನಾನು ಹೇಳುವುದನ್ನು ಅರ್ಥ ಮಾಡಿಕೊಳ್ಳಿ’ ಎಂದು‌ ವಿಜಯ್‌, ನಿತ್ಯಾ ಜೋಡಿಯ ಬಗ್ಗೆ ಡೈಲಾಗ್ ಹೊಡೆದಿದ್ದಾರೆ. ಈ ಟೀಸರ್ ನೋಡಿಯೇ ಸಿನಿಮಾ ಬಗ್ಗೆ ಪ್ರೇಕ್ಷಕರು ಕ್ಯೂರಿಯಸ್ ಆಗಿದ್ದಾರೆ. ಇದನ್ನೂ ಓದಿ:ವರುಣ್ ಧವನ್ ಸಿನಿಮಾಗೆ KGF ನಟಿ ಮೌನಿ ರಾಯ್ ಎಂಟ್ರಿ

     

    View this post on Instagram

     

    A post shared by Nithya Menen (@nithyamenen)

    ಅಂದಹಾಗೆ, ಈ ಹಿಂದೆ ಈ ಜೋಡಿ ’19 ಒನ್ ಎ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ಮತ್ತೊಮ್ಮೆ ತಮಿಳಿನ ‘ತಲೈವನ್ ತಲೈವಿ’ ಮೂಲಕ ಜೊತೆಯಾಗುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

  • ಫಸ್ಟ್‌ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್‌

    ಫಸ್ಟ್‌ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್‌

    ಜೋಶ್, ಮೈನಾ (Mynaa) ಸಿನಿಮಾಗಳ ಮನೆಗೆದ್ದಿರೋ ನಿತ್ಯಾ ಮೆನನ್‌ಗೆ (Nithya Menen) ಪರಭಾಷೆಯಲ್ಲಿ ಭಾರೀ ಬೇಡಿಕೆ ಇದೆ. ಇದೀಗ ಸಂದರ್ಶನವೊಂದರಲ್ಲಿ ತಮ್ಮ ದೇಹದ ಅಂಗಾಂಗಗಳ (Body Shaming) ಬಗ್ಗೆ ತಾವು ಎದುರಿಸಿದ ಟೀಕೆಯ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿತ್ಯಾ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿ ವೆಕೇಷನ್

    ತೆಲುಗು ಸಿನಿಮಾವೊಂದರಲ್ಲಿ ನಿತ್ಯಾ ನಟಿಸುವಾಗ ಅವರ ಗುಂಗುರು ಕೂದಲನ್ನು ಯಾರು ಇಷ್ಟಪಡಲಿಲ್ಲವಂತೆ. ನಾನು ಫಸ್ಟ್ ಟೈಮ್ ಸೆಟ್‌ಗೆ ಬಂದಾಗ ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ನಾಯಕಿ ಅಂದ್ಮೇಲೆ ದೇಹದ ತೂಕದ ಬಗ್ಗೆ ಮಾತನಾಡಿದರು. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ.

    ನಾನು ದಪ್ಪ ಮತ್ತು ಕುಳ್ಳಗೆ ಇದ್ದೇನೆ ಎಂದು ಎಲ್ಲರೂ ಅಪಹಾಸ್ಯ ಮಾಡಿದರು. ನನಗೆ ಗುಂಗುರು ಕೂದಲು ಮತ್ತು ದೊಡ್ಡ ಹುಬ್ಬು ಇದೆ ಎಂದು ಅನೇಕರು ಟೀಕೆ ಮಾಡಿದರು. ಯಾರನ್ನಾದರೂ ಅವರ ರೂಪದ ಆಧಾರದ ಮೇಲೆ ನೀವು ಹೇಗೆ ಟೀಕಿಸುತ್ತೀರಿ? ಎಂದಿದ್ದಾರೆ. ಅದು ಅವರ ಕೀಳು ಮಟ್ಟದ ಮನಸ್ಥಿತಿ ಎಂದು ಖಡಕ್ ಆಗಿ ನಿತ್ಯಾ ಮಾತನಾಡಿದ್ದಾರೆ. ಸವಾಲುಗಳನ್ನು ಎದುರಿಸಿ ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸಬೇಕು ಎಂದು ನಟಿ ಹೇಳಿದ್ದಾರೆ.

  • ರತನ್ ಟಾಟಾ ನಿಧನಕ್ಕೆ ನಿತ್ಯಾ ಮೆನನ್ ಭಾವುಕ ಪೋಸ್ಟ್‌

    ರತನ್ ಟಾಟಾ ನಿಧನಕ್ಕೆ ನಿತ್ಯಾ ಮೆನನ್ ಭಾವುಕ ಪೋಸ್ಟ್‌

    ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ನಿನ್ನೆ (ಅ.10) ತಡರಾತ್ರಿ ನಿಧನರಾಗಿದ್ದಾರೆ. ಅತ್ಯಂತ ಸರಳವಾಗಿ ಬದುಕಿ ಬಾಳಿದ ರತನ್ ಟಾಟಾ ನಿಧನಕ್ಕೆ ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಸಂತಾಪ ಸೂಚಿಸಿದ್ದಾರೆ. ಅವರ ಕುರಿತು ಸುದೀರ್ಘವಾಗಿ ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

    ನಿಮಗೆ ವಿದಾಯ ಹೇಳಬೇಕಾಗಿ ಬರುವ ದಿನದ ಬಗ್ಗೆ ನಾನು ಯೋಚಿಸಿದ್ದೆ. ನಿಮ್ಮಂತಹ ವ್ಯಕ್ತಿ ನೀವೇ ಕೊನೆ ಎಂದಾಗ ದುಃಖವಾಗುತ್ತದೆ. ನಿಮ್ಮಂತಹ ಪುರುಷರು ಮತ್ತೆ ಬರಲಿದ್ದಾರಾ ಎನ್ನುವುದು ನನಗೆ ಗೊತ್ತಿಲ್ಲ. ಮೊದಲ ಬಾರಿಗೆ ನನಗೆ ನಿಜವಾಗಿಯೂ ನಷ್ಟದ ಅನುಭವಾಗುತ್ತಿದೆ ಎಂದಿದ್ದಾರೆ ನಿತ್ಯಾ. ನಿಮ್ಮ ಅಗಲಿಕೆ ಎಷ್ಟೋ ವಿಚಾರಗಳ ಅಗಲಿಕೆ ಎಂದು ಅನಿಸುತ್ತಿದೆ. ಇಂದಿನ ದಿನದಲ್ಲಿ ಕಾಣಲು ಸಿಗದಂತಹ ಹಲವಾರು ಸಂಗತಿಗಳಿವೆ ನಿಮ್ಮಲ್ಲಿವೆ. ಉದಾತ್ತ, ದಯೆ, ರಾಜ, ಸಹಾನುಭೂತಿ, ಮಾನವೀಯತೆ ಇದೆಲ್ಲವೂ ನಿಮ್ಮ ಅಗಲಿಕೆಯಿಂದ ಅಗಲಿದಂತಾಗುತ್ತಿದೆ. ಅದೆಷ್ಟೋ ಜನರಿಗೆ ಒಳ್ಳೆಯ ಉದಾಹರಣೆಯಾಗುವಂತೆ ನೀವು ಬದುಕಿದ್ದೀರಿ. ಒಳ್ಳೆಯತನ ಮತ್ತು ಯಶಸ್ಸಿನ ಕುರಿತು ಹಲವು ವಿಚಾರಗಳು ನನಗೆ ನೆನಪಿಸುತ್ತದೆ ಎಂದಿದ್ದಾರೆ ನಟಿ.

     

    View this post on Instagram

     

    A post shared by Nithya Menen (@nithyamenen)

    ನಿಮ್ಮ ಬಗ್ಗೆ ಏನೇ ಹೇಳಿದರೂ ಅದು ಕಡಿಮೆಯೇ. ನಾನು ಬದುಕಿರುವಾಗಲೇ ನೀವು ಇಲ್ಲಿ ಬದುಕಿದ್ದಕ್ಕೆ ಧನ್ಯವಾದಗಳು. ನನಗೆ ಭರವಸೆ ಹಾಗೂ ನನಗಾಗಿ ಮತ್ತು ಇತರರಿಗಾಗಿ ನಾನು ಏನು ಬಯಸಬೇಕು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾಗಳು ಎಂದಿದ್ದಾರೆ ನಟಿ. ‘ಗುಡ್ ಬೈ ಡಿಯರ್ ರತನ್ ಟಾಟಾ’ ಎಂದು ನಟಿ ಭಾವುಕವಾಗಿ ಬರೆದುಕೊಂಡಿದ್ದಾರೆ.

  • ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ- ನಿತ್ಯಾ ಮೆನನ್ ಫಸ್ಟ್ ರಿಯಾಕ್ಷನ್

    ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ- ನಿತ್ಯಾ ಮೆನನ್ ಫಸ್ಟ್ ರಿಯಾಕ್ಷನ್

    ನ್ನಡದ ನಟಿ ನಿತ್ಯಾ ಮೆನನ್ (Nithya Menen) ಅವರು ತಮಿಳಿನ ‘ತಿರುಚಿತ್ರಂಬಲಂ’ (Thiruchitrambalam) ಎಂಬ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ (70th National Award) ಗೆದ್ದಿರುವುದಕ್ಕೆ ಇದೀಗ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಸಿಕ್ಕಿದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ. ಇದನ್ನೂ ಓದಿ:‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

    ರಾಷ್ಟ್ರ ಪ್ರಶಸ್ತಿ ಘೋಷಣೆ ಮಾಡಿರುವ ವಿಚಾರವೇ ನನಗೆ ಗೊತ್ತಿರಲಿಲ್ಲ. ನಾನು ಎಲ್ಲರಿಂದ ದೂರ ಇರಲು ಪ್ರಯತ್ನಿಸುತ್ತೇನೆ. ನನಗೆ ಅವಾರ್ಡ್ ಬರುತ್ತದೆ ಎಂದು ಊಹಿಸಿರಲಿಲ್ಲ. ನನಗೆ ಈ ವಿಚಾರ ಖುಷಿ ಕೊಟ್ಟಿದೆ ಎಂದು ನಿತ್ಯಾ ಮೆನನ್ ಸಂತಸ ಹಂಚಿಕೊಂಡಿದ್ದಾರೆ.

    ಅನೇಕರು ನನಗೆ ಕರೆ ಮಾಡಿ ಶುಭಕೋರಿದ್ದಾರೆ. ಅವರಿಗೆ ಅವಾರ್ಡ್ ಸಿಕ್ಕಿದೆ ಎಂಬ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ‘ತಿರುಚಿತ್ರಂಬಲಂ’ ಚಿತ್ರದಿಂದ ನನಗೆ ಅತ್ಯುತ್ತಮ ನಾಯಕಿ ಎಂದು ಅವಾರ್ಡ್ ಸಿಕ್ಕಿದ್ದು, ಹೆಮ್ಮೆ ತಂದಿದೆ. ನಾನು ಈ ಪ್ರಶಸ್ತಿಗೆ ಅರ್ಹ ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, 2022ರಲ್ಲಿ ತೆರೆಕಂಡ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಧನುಷ್‌ಗೆ (Dhanush) ನಾಯಕಿಯಾಗಿ ನಿತ್ಯಾ ಮೆನನ್ ನಟಿಸಿದ್ದರು. ಮಿತ್ರನ್ ಆರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.

  • ನಿತ್ಯಾ ಮೆನನ್ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

    ನಿತ್ಯಾ ಮೆನನ್ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

    ನ್ನಡತಿ, ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿನ ಬೆಡಗಿ ನಿತ್ಯಾ ಮೆನನ್ ಇಂದು (ಏ.8) 36ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ. ಈ ಮೂಲಕ ನಟಿಯ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

    ನಿತ್ಯಾ ಮೆನನ್ ಬಹುಭಾಷಾ ನಾಯಕಿಯಾಗಿ ಅಪಾರ ಅಭಿಮಾನಿಗಳಿಗೆ ಮನಗೆದ್ದಿದ್ದಾರೆ. ಸದಾ ವಿಭಿನ್ನ ಕಥೆಯ ಆಯ್ಕೆಯ ಜೊತೆ ಸಹಜ ನಟನೆ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ದಿನ ನಯಾ ಗೆಟಪ್‌ನಲ್ಲಿರುವ ಚಿತ್ರದ ಪೋಸ್ಟರ್ ಮೂಲಕ ನಿತ್ಯಾ ಸದ್ದು ಮಾಡುತ್ತಿದ್ದಾರೆ. ಇದನ್ನೂ ಓದಿ:ಜೈಲಿಂದ ರಿಲೀಸ್‌ ಆದ ಬಳಿಕ ಜ್ಯೂಸ್‌ ಕುಡಿದು ಸೋನು ಕೂಲ್‌.. ಕೂಲ್‌..

     

    View this post on Instagram

     

    A post shared by Nithya Menen (@nithyamenen)

    ‘ಡಿಯರ್ ಎಕ್ಸೆಸ್’ (Dear Exes) ಎಂಬ ಸಿನಿಮಾದಲ್ಲಿ ನಿತ್ಯಾ ಮೆನನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೀರೆಯುಟ್ಟು ಕೈಗೆ ಮೆಹೆಂದಿ ಹಾಕಿ ಮದುವೆ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ಜ್ಯೂಸ್, ಮತ್ತೊಂದು ಕೈಯಲ್ಲಿ ಮೊಬೈಲ್ ಅದರಲ್ಲಿ ಎಕ್ಸ್ ಎಂದು ಚಿತ್ರವಿದೆ. ಸ್ಟೈಲೀಶ್ ಕನ್ನಡಕ ಧರಿಸಿ ನಟಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.

    ಮದುವೆಗೆ (Wedding) ಸಜ್ಜಾಗಿರುವ ಹುಡುಗಿ ಮುಂದೆ ಎಕ್ಸ್ ಬಾಯ್‌ಫ್ರೆಂಡ್ ಬಂದರೆ ಹೇಗಿರುತ್ತೆ? ಆಕೆಯ ಬದುಕಿನಲ್ಲಿ ಮುಂದಿನ ತಿರುವು ಮತ್ತು ಆಕೆಯ ನಡೆಯೇನು? ಎಂಬುದರ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಚಿತ್ರಕ್ಕೆ ಕಥೆ ಮತ್ತು ನಿರ್ದೇಶನದ ಹೊಣೆಯನ್ನು ಕಾಮಿನಿ ಹೊತ್ತಿದ್ದಾರೆ.

    ನಿತ್ಯಾ ಮೆನನ್ ಜೊತೆ ನವದೀಪ್, ದೀಪಕ್ ಪರಂಬೋಲ್, ವಿನಯ್ ರಾಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

  • ಮದುವೆ ಪ್ಲ್ಯಾನ್ ಬಗ್ಗೆ ಮೌನ ಮುರಿದ ‘ಮೈನಾ’ ನಟಿ ನಿತ್ಯಾ

    ಮದುವೆ ಪ್ಲ್ಯಾನ್ ಬಗ್ಗೆ ಮೌನ ಮುರಿದ ‘ಮೈನಾ’ ನಟಿ ನಿತ್ಯಾ

    ಬೆಂಗಳೂರಿನ ಬೆಡಗಿ ನಿತ್ಯಾ ಮೆನನ್ (Nithya Menen) ಅವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಆಗಾಗ ವೈಯಕ್ತಿಕ ವಿಚಾರವಾಗಿ ‘ಮೈನಾ’ ನಟಿ ಸುದ್ದಿಯಾಗುತ್ತಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ, ನಟಿ ತಮ್ಮ ಮದುವೆ (Wedding)  ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಮದುವೆ ಬಗ್ಗೆ ತಮ್ಮ ಆಲೋಚನೆ ಏನು ಎಂಬುದನ್ನ ನಟಿ ಮಾತನಾಡಿದ್ದು, ನಾನು ಎಲ್ಲವನ್ನೂ ಮೀರಿ ಬೆಳೆದಿದ್ದೆ ನಾನು ಏನು ಮಾಡಬೇಕು ಎಂಬುದನ್ನು ಮತ್ತೊಬ್ಬರು ಹೇಳಬೇಕು ಬಯಸೋದಿಲ್ಲ. ಪಾಲಕರು ಈ ವಿಚಾರದಲ್ಲಿ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ನನಗೆ ಅವರು ಸ್ವಾತಂತ್ರ‍್ಯ ನೀಡಿದ್ದಾರೆ. ಸ್ವಾತಂತ್ರ‍್ಯ ಇಲ್ಲದೆ ನನಗೆ ಬದುಕೋಕೆ ಆಗಲ್ಲ. ಅದು ಅವರಿಗೆ ಗೊತ್ತು ಎಂದಿದ್ದಾರೆ ನಿತ್ಯಾ. ಇದನ್ನೂ ಓದಿ:ನಿಮ್ಮ ಚಿನ್ನದ ಮೊಬೈಲ್ ನನಗೆ ಸಿಕ್ಕಿದೆ, ನನ್ನ ಬೇಡಿಕೆ ಈಡೇರಿಸ್ತೀರಾ? ನಟಿಗೆ ಬಂತು ಇ-ಮೇಲ್

    ನನ್ನ ಅಜ್ಜಿ ಬದುಕಿದ್ದಾಗ ಅವರ ಕಡೆಯಿಂದ ಮದುವೆಯಾಗಬೇಕೆಂಬ ಒತ್ತಡವಿತ್ತು. ನಾನು ನಟಿ ಎಂಬ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ನೀನು ಜೀವನದಲ್ಲಿ ಏನನ್ನೂ ಮಾಡುತ್ತಿಲ್ಲ. ನೀನು ಯಾಕೆ ಮದುವೆಯಾಗಬಾರದು ಎಂದು ಅಜ್ಜಿ ನನಗೆ ಕೇಳುತ್ತಲೇ ಇದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಬಿಟ್ಟು ಈ ವಿಚಾರದಲ್ಲಿ ಇನ್ಯಾರೂ ನಮ್ಮ ಮನೆಯಲ್ಲಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ.

    30 ವರ್ಷ ದಾಟಿದಾಗ ಮದುವೆ ಬಗ್ಗೆ ಒತ್ತಡ ಬರುತ್ತದೆ. ಈ ಸಂದರ್ಭದಲ್ಲಿ ಹಲವು ಬಾಕ್ಸ್‌ಗಳನ್ನ ಟಿಕ್ ಮಾಡಬೇಕು. ಸಮಾಜ ಅಂದುಕೊಂಡ ವಿಚಾರವನ್ನು ಪಾಲಿಸಿದರೆ ಒಳ್ಳೆಯವರು ಎನಿಸಿಕೊಳ್ಳುತ್ತೀರಿ. ಇಲ್ಲವಾದರೆ ನಿಮಗೆ ಕೆಟ್ಟವರು ಎನ್ನುವ ಪಟ್ಟ ಸಿಗುತ್ತದೆ ಎಂದು ನಿತ್ಯಾ ಮುಕ್ತವಾಗಿ ಮಾತನಾಡಿದ್ದಾರೆ.

    ನಿತ್ಯಾ ಮೆನನ್ ಅವರು ನಟ ಚೇತನ್ ಜೊತೆ ಮೈನಾ(Mynaa), ಸುದೀಪ್ (Sudeep) ಜೊತೆ ಕೋಟಿಗೊಬ್ಬ 2, ‘ಐದು ಒಂದ್ಲಾ ಐದು’ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿತ್ಯಾ ಮೆನನ್ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ರಾ? ಮೈನಾ ನಟಿ ಸ್ಪಷ್ಟನೆ

    ನಿತ್ಯಾ ಮೆನನ್ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ರಾ? ಮೈನಾ ನಟಿ ಸ್ಪಷ್ಟನೆ

    ನ್ನಡದ ನಟಿ ನಿತ್ಯಾ ಮೆನನ್ (Nithya Menen) ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ಸುದ್ದಿ ಮತ್ತೆ ವೈರಲ್ ಆಗ್ತಿದ್ದು, ಈ ಬಗ್ಗೆ ‘ಮೈನಾ’ (Mynaa) ನಾಯಕಿ ನಿತ್ಯಾ ಮೆನನ್ ಸ್ಪಷ್ಟನೆ ನೀಡಿದ್ದಾರೆ.

    ಕಾಲಿವುಡ್‌ನ ನಾಯಕನೊಬ್ಬ (Kollywood Hero) ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಶೂಟಿಂಗ್ ಸಮಯದಲ್ಲಿ ಅವರು ತನ್ನನ್ನು ಸ್ಪರ್ಶಿಸುವ ಮೂಲಕ ತುಂಬಾ ಹಿಂಸೆ ನೀಡಿದ್ದರು. ನಾಯಕನ ಹುಚ್ಚು ವರ್ತನೆಯಿಂದ ಸರಿಯಾಗಿ ಶೂಟಿಂಗ್‌ನಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ ಎಂಬ ಎನ್ನಲಾದ ಸುದ್ದಿಗೆ ನಿತ್ಯಾ ಮೆನನ್ ಪ್ರತಿಕ್ರಿಯಿಸಿ, ಈ ಸುದ್ದಿ ಸುಳ್ಳು ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ತಮಿಳು ನಟ, ತಮಿಳು ಚಿತ್ರರಂಗದ ವಿರುದ್ಧ ತಾವು ಯಾವುದೇ ಹೇಳಿಕೆ ನೀಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ವತಃ ನಟಿ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿ ವೈರಲ್ ಆಗಿರೋದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

    ಕುಮಾರಿ ಶ್ರೀಮತಿ ಎಂಬ ವೆಬ್ ಸಿರೀಸ್‌ನಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ. ಸೆ.28ಕ್ಕೆ ಬಹುಭಾಷೆಗಳಲ್ಲಿ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆ.28ಕ್ಕೆ ಕುಮಾರಿ ಶ್ರೀಮತಿ, ಕನ್ನಡದಲ್ಲಿ ರಿಲೀಸ್‌ ಯಾಕಿಲ್ಲ ಎಂದು ನೆಟ್ಟಿಗರಿಂದ ಕ್ಲಾಸ್

    ಸೆ.28ಕ್ಕೆ ಕುಮಾರಿ ಶ್ರೀಮತಿ, ಕನ್ನಡದಲ್ಲಿ ರಿಲೀಸ್‌ ಯಾಕಿಲ್ಲ ಎಂದು ನೆಟ್ಟಿಗರಿಂದ ಕ್ಲಾಸ್

    ನ್ನಡದ ಮೈನಾ (Mynaa) ನಟಿ ನಿತ್ಯಾ ಮೆನನ್ (Nithya Menen) ಇದೀಗ ‘ಕುಮಾರಿ ಶ್ರೀಮತಿ’ (Kumari Srimathi) ಆಗಿ ಬರುತ್ತಿದ್ದಾರೆ. ಹೊಸ ಸಿರೀಸ್ ಮೂಲಕ ಬಹುಭಾಷೆಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಸೆ.28ಕ್ಕೆ ಕುಮಾರಿ ಶ್ರೀಮತಿ ಒಟಿಟಿಯಲ್ಲಿ ಬರಲಿದೆ. ಆದರೆ ಕನ್ನಡದ ನಟಿ ನಿತ್ಯಾ ನಟಿಸುತ್ತಿರೋ ಈ ಪ್ರಾಜೆಕ್ಟ್ ಕನ್ನಡದಲ್ಲಿ ಲಭ್ಯವಿಲ್ಲ. ಕನ್ನಡದಲ್ಲಿ ಯಾಕೆ ಇಲ್ಲ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

    ಬಹುಭಾಷಾ ನಟಿ ನಿತ್ಯಾ ಮೆನನ್ ಅವರು ಕುಮಾರಿ ಶ್ರೀಮತಿ ವೆಬ್ ಸಿರೀಸ್‌ನಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಗೋಮಟೇಶ್ ಉಪಾಧ್ಯೆ ನಿರ್ದೇಶಿಸಿದ್ದಾರೆ. ವೆಬ್ ಸರಣಿ ಟೀಸರ್‌ನ ಖ್ಯಾತ ನಟಿ ಕೀರ್ತಿ ಸುರೇಶ್ ಆನ್‌ಲೈನ್‌ನಲ್ಲಿ ರಿಲೀಸ್ ಮಾಡುವ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ನಾಯಕಿನಾ? ಸ್ಯಾಮ್ ಕಡೆಯಿಂದ ಸಿಕ್ತು ಉತ್ತರ

    7 ಸಂಚಿಕೆಗಳಲ್ಲಿ ‘ಕುಮಾರಿ ಶ್ರೀಮತಿ’ ಸೆ.28ಕ್ಕೆ ಪ್ರಸಾರವಾಗಲಿದ್ದು, ತೆಲುಗು, ತಮಿಳು, ಮಲಯಾಳಂ, ಮತ್ತು ಹಿಂದಿಯಲ್ಲಿ ಪ್ರಸಾರವಾಗಲಿದೆ. ಆದರೆ ಕನ್ನಡದಲ್ಲಿ ಬಿಡುಗಡೆ ಆಗದೇ ಇರೋದಕ್ಕೆ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಂಡಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕನ್ನಡದ ಮೈನಾ, ವಿಷ್ಣುವರ್ಧನ್, ಐದು ಒಂದ್ಲಾ ಐದು, ಜೋಶ್ ಸಿನಿಮಾಗಳಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟಿ- ಕಣ್ಣೀರಿಟ್ಟ ನಿತ್ಯಾ ಮೆನನ್

    ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟಿ- ಕಣ್ಣೀರಿಟ್ಟ ನಿತ್ಯಾ ಮೆನನ್

    ಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ನಿತ್ಯಾ ಅವರ ಅಜ್ಜಿ ಇತ್ತೀಚಿಗೆ ಇಹಲೋಕ ತ್ಯಜಿಸಿದ್ದಾರೆ. ಎಂದೂ ಬಾರದ ಲೋಕಕ್ಕೆ ಹೋಗಿರುವ ಅಜ್ಜಿ ಬಗ್ಗೆ ನಟಿ ಕಣ್ಣೀರಿಟ್ಟಿದ್ದಾರೆ. ಅಜ್ಜಿ (Grand Mother) ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ನಿತ್ಯಾ ಭಾವುಕರಾಗಿದ್ದಾರೆ.

    ಕನ್ನಡದ ಮೈನಾ(Mynaa), ಕೋಟಿಗೊಬ್ಬ2 (Kotigobba 2), ಸಿನಿಮಾಗಳಲ್ಲಿ ನಟಿಸಿರುವ ನಿತ್ಯಾ ಮೆನನ್ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಬೆಂಗಳೂರಿನ ಬೆಡಗಿ ನಿತ್ಯಾ ಬ್ಯುಸಿಯಾಗಿದ್ದಾರೆ. ಸೌಂದರ್ಯದ ಜೊತೆ ಪ್ರತಿಭೆಯಿರುವ ಟ್ಯಾಲೆಂಟೆಡ್ ನಟಿ ನಿತ್ಯಾ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

    ತುಂಬಾ ಪ್ರೀತಿಸುತ್ತಿದ್ದ ನಿತ್ಯಾ ಅಜ್ಜಿ ತೀರಿಕೊಂಡರು. ನಿತ್ಯಾ ಈ ಮೊದಲೇ ಅಜ್ಜನನ್ನು (Grand Father) ಕಳೆದುಕೊಂಡಳು. ಈಗ ಇವರಿಬ್ಬರು ಜೊತೆಗಿಲ್ಲ ಎನ್ನುವುದನ್ನು ನಿತ್ಯಾ ಮೆನನ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನೋವಿನಿಂದಾಗಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಜ್ಜಿ ಮತ್ತು ಅಜ್ಜನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಜೈಲೂಟ ಫಿಕ್ಸ್ ಆದ್ರೂ ತಾನು ತಪ್ಪೇ ಮಾಡಿಲ್ಲ ಅಂತಿರೋ ವಂಚಕಿ ನಿಶಾ ನರಸಪ್ಪ!

     

    View this post on Instagram

     

    A post shared by Nithya Menen (@nithyamenen)

    ಯುಗವೊಂದು ಕೊನೆಗೊಂಡಿದೆ. ಗುಡ್ ಬೈ ಅಜ್ಜಿ ಮತ್ತು ನನ್ನ ಚೆರ್ರಿಮನ್. ನಾನು ನಿಮ್ಮನ್ನು ಬೇರೊಂದು ಜಗತ್ತಿನಲ್ಲಿ ಭೇಟಿಯಾಗುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ತಮ್ಮ ಅಜ್ಜ, ಅಜ್ಜಿಯ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ದುಖಃದಲ್ಲಿರುವ ನಟಿಗೆ ಧೈರ್ಯ ಹೇಳಿದ್ದಾರೆ. ಸದ್ಯ ಈ ಪೋಸ್ಟ್‌ ಸಖತ್‌ ವೈರಲ್‌ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]