Tag: ನಿತ್ಯಾನಂದ ಸ್ವಾಮಿ

  • ನಿತ್ಯಾನಂದ  ಸ್ವಾಮಿಯನ್ನು ಮದುವೆಯಾಗಲು ಬಯಸಿದ ‘ಜೇಮ್ಸ್’ ಚೆಲುವೆ ಪ್ರಿಯಾ ಆನಂದ್

    ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ ‘ಜೇಮ್ಸ್’ ಚೆಲುವೆ ಪ್ರಿಯಾ ಆನಂದ್

    ಲಯಾಳಂನ ಖ್ಯಾತ ನಟಿ ಪ್ರಿಯಾ ಆನಂದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.  ಅಮೆರಿಕಾದಲ್ಲಿ ಬೆಳೆದ ಈ ಚೆಲುವೆ ಬಹುಭಾಷಾ ನಟಿ ಎಂದೇ ಖ್ಯಾತಿಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಜೇಮ್ಸ್ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ಆನಂದ್ ತಮ್ಮ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾತುಗಳನ್ನು ಆಡಿದ್ದಾರೆ.

    ತಮ್ಮ ಮದುವೆ ಕುರಿತಂತೆ ಮಾತನಾಡಿರುವ ಪ್ರಿಯಾ, ದೇಶಬಿಟ್ಟು, ತಮ್ಮದೇ ದೇಶವೊಂದನ್ನು ನಿರ್ಮಿಸಿರುವ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದಾರೆ. ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಸತ್ತಿದ್ದಾರೆ ಎಂಬ ವದಂತಿಯಿರುವ ಸಮಯದಲ್ಲಿ ಈ ಹೇಳಿಕೆ ನೀಡಿರುವುದು ಆಸಕ್ತಿದಾಯಕವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿತ್ಯಾನಂದ ಸ್ವಾಮಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವರನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದಿದ್ದಾರೆ.

    ನಿತ್ಯಾನಂದ ಮೇಲೆ ಈಗಾಗಲೇ ಭಾರತದಲ್ಲಿ ಹಲವು ಕೇಸುಗಳಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ದೇಶ ತೊರೆದು ಈಕ್ವೆಡಾರ್ ಬಳಿಯ ಒಂದು ದ್ವೀಪದಲ್ಲಿ ತಮ್ಮದೇ ದೇಶ ಕಟ್ಟಿಕೊಂಡಿದ್ದಾರೆ.  ತಮ್ಮದೆ ಆದ ವಿಶೇಷ ಕರೆನ್ಸಿಯನ್ನು ಸಹ ಮುದ್ರಿಸಿದ್ದಾರೆ. ತಮ್ಮ ದೇಶಕ್ಕೆ ಬರುವ ಭಕ್ತರು ನೇರವಾಗಿ ಶಿವನ ದರ್ಶನ ಮಾಡಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಆದರೆ, ಸದ್ಯ ನಿತ್ಯನಂದನ ಬಗ್ಗೆ ಸುದ್ದಿಯೇ ಇಲ್ಲ. ಕೆಲವು ತಿಂಗಳ ಹಿಂದೆ, ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಬಂದಿದ್ದವು. ಇದರ ನಡುವೆ ಖ್ಯಾತ ನಟಿ ಪ್ರಿಯಾ ಅವರ ಈ ಹೇಳಿಕೆಗಳು ಅಭಿಮಾನಗಳಲ್ಲಿ ಅಚ್ಚರಿ ಮೂಡಿಸಿದೆ. ನಿತ್ಯಾನಂದ ಅವರಿಗೆ ಈ ವಿಷಯವನ್ನು ತಲುಪಿಸುವುದು ಹೇಗೆ ಎಂಬ ಚರ್ಚೆ ಕೂಡ ನಡೆದಿದೆ. ಇದೊಂದು ತಮಾಷೆಯ ಮಾತಾಗಿದ್ದರೂ, ಪ್ರಿಯಾ ಆನಂದ್ ಗೆ ನಿತ್ಯಾನಂದನ ಮೇಲೆ ಅದು ಹೇಗೆ ಪ್ರೀತಿ ಮೂಡಿತು ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ.

    Live Tv
    [brid partner=56869869 player=32851 video=960834 autoplay=true]

  • ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ಭಾರತ ದೇಶ ತೊರೆದು, ತನ್ನದೇ ಆದ ದೇಶ ಕಟ್ಟಿಕೊಂಡು ವಾಸಿಸುತ್ತಿರುವ ಬಿಡದಿಯ ನಿತ್ಯಾನಂದ ಕುರಿತಾಗಿ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಾಣ ಮಾಡಿದೆ ಡಿಸ್ಕವರಿ ಪ್ಲಸ್ ಓಟಿಟಿ. ನಿನ್ನೆಯಷ್ಟೇ  ಈ ಡಾಕ್ಯುಮೆಂಟರಿಯನ್ನು ಅದು ಬಿಡುಗಡೆ ಮಾಡಿದೆ. ಈ ಸಾಕ್ಷ್ಯ ಚಿತ್ರದಲ್ಲಿ ನಿತ್ಯಾನಂದ ನಿಜವಾಗಿಯೂ ದೇವಮಾನವನೋ ಅಥವಾ ವಂಚಕನೋ ಎನ್ನುವುದನ್ನು ಸಾದರಪಡಿಸಲಿದೆಯಂತೆ.

    ನಿತ್ಯಾನಂದ ಕುರಿತಾಗಿ ಹಲವಾರು ಕಥೆಗಳಿವೆ. ಅವನ ಮೇಲೆ ಅತ್ಯಾಚಾರ ಆರೋಪ ಕೂಡ ಹೊರಿಸಲಾಗಿತ್ತು. ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎನ್ನುವ ಆರೋಪ ಕೂಡ ಇತ್ತು. ಅಲ್ಲದೇ, ನಟಿಯೊಬ್ಬರ ಅಶ್ಲೀಲ ವಿಡಿಯೋ ಕೂಡ ರಿಲೀಸ್ ಆಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಇದೆಲ್ಲವನ್ನೂ ಸಾಕ್ಷ್ಯ ಚಿತ್ರದಲ್ಲಿ ಸೆರೆ ಹಿಡಿಲಾಗಿದೆಯಂತೆ. ಇದನ್ನೂ ಓದಿ :  ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್

    ನಿನ್ನಯಿಂದ ಡಿಸ್ಕವರಿ ಪ್ಲಸ್ ಓಟಿಟಿಯಲ್ಲಿ ರಿಲೀಸ್ ಆಗಿರುವ ಸಾಕ್ಷ್ಯ ಚಿತ್ರಕ್ಕೆ ‘ಮೈ ಡಾಟರ್ ಜಾಯಿನ್ಡ್ ಎ ಕಲ್ಟ್’ ಎಂದು ಹೆಸರಿಡಲಾಗಿದೆ. ಮಗಳನ್ನು ಹುಡುಕಿಕೊಂಡು ಬರುವ ತಂದೆಯೊಬ್ಬ, ಮಗಳಿಗೆ ಹೇಗೆಲ್ಲ ಅನ್ಯಾಯವಾಗಿದೆ ಎನ್ನುವುದನ್ನು ಹೇಳುತ್ತಾ ಹೋಗುವ ಸಾಕ್ಷ್ಯ ಚಿತ್ರ ಇದಾಗಿದೆ ಅಂತೆ. ಒಟ್ಟು ಮೂರು ಕಂತುಗಳಲ್ಲಿ ಈ ಸಾಕ್ಷ್ಯ ಚಿತ್ರ ಪ್ರಸಾರವಾಗಲಿದೆ ಎಂದು ವಾಹಿನಿ ಹೇಳಿಕೊಂಡಿದೆ.

    ವೈಸ್ ಮೀಡಿಯಾ ಗ್ರೂಪ್ ನ ಜಾಗತಿಕ ಉತ್ಪಾದನಾ ವಿಭಾಗವಾದ ವೈಸ್ ಸ್ಟುಡಿಯೋಸ್ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದ್ದು, ಇದಕ್ಕೆ ವಕೀಲರು, ಭಕ್ತರು, ಪತ್ರಕರ್ತರು ಹೀಗೆ ಸಾಕಷ್ಟು ಜನರು ಸಹಾಯ ಮಾಡಿದ್ದಾರಂತೆ. ಅವರೆಲ್ಲ ನೀಡಿದ ಮಾಹಿತಿಯನ್ನು ಬಳಸಿಕೊಂಡು ಈ ಸಾಕ್ಷ್ಯ ಚಿತ್ರವನ್ನು ತಯಾರು ಮಾಡಲಾಗಿದೆ ಎಂದಿದ್ದಾರೆ ಕಂಟೆಂಟ್ ವಿಭಾಗದ ಮುಖ್ಯಸ್ಥ ಸಾಯಿ ಅಭಿಷೇಕ್. ಇದನ್ನೂ ಓದಿ : ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

    ಈ ಕುರಿತು ಮಾತನಾಡಿರುವ ವೈಸ್ ಸ್ಟುಡಿಯೋಸ್ ನ ಸಮೀರಾ ಕನ್ವರ್, ‘ನಿತ್ಯಾನಂದ ಸ್ವಾಮಿಯ ಬಗ್ಗೆ ಯಾವುದೇ ರೀತಿಯಲ್ಲಿ ಕಾಂಪ್ರಮೈಸ್ ಆಗದೇ, ಅಲ್ಲಿ ನಡೆದ ಘಟನೆಯನ್ನು ಹಾಗೆಯೇ ಹಸಿಹಸಿಯಾಗಿ ಕಟ್ಟಿಕೊಟ್ಟಿದ್ದೇವೆ. ದಾಖಲೆಗಳ ಸಮೇತ ವಿವರಿಸಿದ್ದೇವೆ’ ಎಂದು ಹೇಳಿದ್ದಾರೆ.

  • ಬೆಂಗಳೂರಿನ ಸೂಪರ್ ಸ್ಟಾರ್ ಹೋಟೆಲ್‍ನಲ್ಲಿ ಇವ್ರೇ ದೇವರು!

    ಬೆಂಗಳೂರಿನ ಸೂಪರ್ ಸ್ಟಾರ್ ಹೋಟೆಲ್‍ನಲ್ಲಿ ಇವ್ರೇ ದೇವರು!

    ಬೆಂಗಳೂರು: ಹೋಟೆಲ್, ಆಸ್ಪತ್ರೆ ಸೇರಿದಂತೆ ಪ್ರವೇಶ ದ್ವಾರದ ಬಳಿ ದೇವವ ವಿಗ್ರಹವನ್ನು ಅಥವಾ ಸುಂದರವಾದ ಮೂರ್ತಿ ಅಥವಾ ಹೂ ಕುಂಡವನ್ನು ಇರಿಸಲಾಗುತ್ತದೆ. ಸಾಮಾನ್ಯವಾಗಿ ಪ್ರವೇಶ ದ್ವಾರದಲ್ಲಿ ವಿಘ್ನ ನಿವಾರಕ ಗಣೇಶ್ ಮೂರ್ತಿಗಳನ್ನು ನೋಡಿರುತ್ತೇವೆ. ಸಿಲಿಕಾನ್ ಸಿಟಿಯ ಪ್ರತಿಷ್ಟಿತ ಹೋಟೆಲ್ ಪ್ರವೇಶ ದ್ವಾರದಲ್ಲಿ ಸ್ವಾಮಿ ನಿತ್ಯಾನಂದ ಫೋಟೋ ಕಟೌಟ್ ಇರಿಸಲಾಗಿದ್ದು, ಇದಕ್ಕೆ ಇಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ.

    ಬಿಡದಿಯ ನಿತ್ಯಾನಂದ ಸ್ವಾಮಿ ಅಧ್ಯಾತ್ಮಿಕ ವಿಚಾರಗಳಿಗಿಂತ ಬೇರೆ ಸುದ್ದಿಗಳಿಗೆ ಹೆಚ್ಚು ಸುದ್ದಿಯಾದಂತಹ ವ್ಯಕ್ತಿ. ಈಗಲೂ ಹಲವು ಪ್ರಕರಣಗಳು ಸ್ವಾಮಿಯ ಮೇಲಿವೆ. ಬೆಂಗಳೂರಿನ ಹೆಚ್‍ಎಎಲ್ ಬಳಿ ಇರುವ ಸ್ಟೆರ್ಲಿಂಗ್ ಮ್ಯಾಕ್ ಹೋಟೆಲ್‍ನಲ್ಲಿ ನಿತ್ಯಾನಂದ ಸ್ವಾಮಿ ಕಟೌಟ್ ಎರಡು ತ್ರಿಶೂಲದ ಮಧ್ಯೆ ದೊಡ್ಡ ಆಸನದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ.

    ಹೋಟೆಲ್ ಗೆ ಆಗಮಿಸುವ ಜನರು ನಿತ್ಯಾನಂದ ಸ್ವಾಮೀಜಿ ಕಟೌಟ್ ನೋಡಿ ಒಂದು ಕ್ಷಣ ಗಲಿಬಿಲಿಯಾಗುವುದುಂಟು. ಹೋಟೆಲ್ ಮಾಲೀಕರು ನಿತ್ಯಾನಂದ ಸ್ವಾಮಿಯ ಭಕ್ತರು ಎಂದು ಹೇಳಲಾಗುತ್ತಿದೆ. ಹೋಟೆಲ್ ಗೆ ತೆರಳಿದ ಗ್ರಾಹಕರೊಬ್ಬರು ನಿತ್ಯಾನಂದ ಸ್ವಾಮೀಜಿ ಕಟೌಟ್ ನೋಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv