Tag: ನಿತೇಶ್ ರಾಣೆ

  • ಸೈಫ್‌ ಅಲಿ ಖಾನ್‌ಗೆ ಇರಿದದ್ದು ನಿಜವೇ ಅಥವಾ ನಟಿಸ್ತಿದ್ದಾರೆಯೇ? – ಬಿಜೆಪಿ ಸಚಿವ ರಾಣೆ ಲೇವಡಿ

    ಸೈಫ್‌ ಅಲಿ ಖಾನ್‌ಗೆ ಇರಿದದ್ದು ನಿಜವೇ ಅಥವಾ ನಟಿಸ್ತಿದ್ದಾರೆಯೇ? – ಬಿಜೆಪಿ ಸಚಿವ ರಾಣೆ ಲೇವಡಿ

    ಮುಂಬೈ: ಸೈಫ್‌ ಅಲಿ ಖಾನ್‌ (Saif Ali Khan) ಮೇಲೆ ಚಾಕು ಇರಿತ ದಾಳಿ ನಡೆದಿದ್ದು ನಿಜವೇ ಅಥವಾ 54 ವರ್ಷದ ನಟನ ನಟನೆಯೇ ಅಂತ ಬಿಜೆಪಿ ಮಹಾರಾಷ್ಟ್ರದ ಮೀನುಗಾರಿಕೆ ಸಚಿವರೂ ಆಗಿರುವ ಬಿಜೆಪಿ ನಾಯಕ ನಿತೇಶ್ ರಾಣೆ (Nitesh Rane) ಪ್ರಶ್ನೆ ಮಾಡಿದ್ದಾರೆ.

    ಚಾಕು ಇರಿತದಿಂದ (stabbed) ಚೇತರಿಸಿಕೊಂಡು 5 ದಿನಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ರಾಣೆ ವಾಗ್ದಾಳಿ ನಡೆಸಿದ್ದಾರೆ. ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತೇಶ್ ರಾಣೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯನ್ನು ಪ್ರಶ್ನಿಸಿದ್ದಾರೆ. ಸೈಫ್‌ ಅಲಿ ಖಾನ್‌ ಮೇಲಿನ ದಾಳಿ ನಿಜವೇ ಅಥವಾ 54 ವರ್ಷದ ನಟನ ʻಕೇವಲ ನಟನೆಯೇʼ ಎಂದು ಪ್ರಶ್ನೆ ಮಾಡಿದ್ದಾರೆ.

    ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆದ ನಂತರ ಅವರನ್ನು ನೋಡಿದಾಗ, ಅವರು ನಿಜವಾಗಿಯೂ ಇರಿದಿದ್ದಾರೆಯೇ ಅಥವಾ ನಟಿಸಿದ್ದಾರೆಯೇ ಎಂದು ನನಗೆ ಅನುಮಾನವಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: Hyderabad | ಪತ್ನಿಯ ಹತ್ಯೆಗೈದು, ಕುಕ್ಕರ್‌ನಲ್ಲಿ ಬೇಯಿಸಿ ಕೆರೆಗೆ ಎಸೆದ ಮಾಜಿ ಸೈನಿಕ

    ಮುಂದುವರಿದು, ಶಾರುಖ್ ಖಾನ್, ಸೈಫ್ ಅಲಿ ಖಾನ್ ಅವರಂತಹ ‘ಖಾನ್‌’ಗಳು ಗಾಯಗೊಂಡಾಗ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತಹ ಹಿಂದೂ ನಟ ಚಿತ್ರಹಿಂಸೆಗೊಳಗಾದಾಗ ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.

    ಹಿಂದೂ ಕಲಾವಿದರ ಬಗ್ಗೆ ಆ ಮುಂಬ್ರಾದ ಜೀತುದ್ದೀನ್ (ಜಿತೇಂದ್ರ ಅವ್ವಾದ್), ಬಾರಾಮತಿಯ ತಾಯಿ (ಸುಪ್ರಿಯಾ ಸುಳೆ) ಎಂದಾದರೂ ಚಿಂತಿಸುವುದನ್ನು ನೋಡಿದ್ದೀರಾ? ಅವರಿಗೆ ಸೈಫ್ ಅಲಿ ಖಾನ್‌, ಶಾರುಖ್ ಖಾನ್ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತೆಯಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಹಿಂದೂಗಳು ಗಮನಹರಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸು ಕೊಂದು ಅಡುಗೆ ಮಾಡಿದ ವೀಡಿಯೋ ಹರಿಬಿಟ್ರು – ಅಸ್ಸಾಂನಲ್ಲಿ 6 ಮಂದಿ ಬಂಧನ

    ಸೈಫ್‌ ಅಲಿಖಾನ್‌ ಮನೆಗೆ ನುಗ್ಗಿದ ವ್ಯಕ್ತಿಯನ್ನು ಬಾಂಗ್ಲಾದೇಶಿ ಮೂಲದವನು ಎಂದು ಗುರುತಿಸಲಾಗಿದೆ. ಈ ಮೊದಲು ಬಾಂಗ್ಲಾದೇಶಿಗಳು ಮುಂಬೈ ಬಂದರಿನಲ್ಲಿ ತಂಗುತ್ತಿದ್ದರು. ಈಗ ಪರಿಸ್ಥಿತಿ ನೋಡಿ… ಮನೆಗಳಿಗೇ ನುಗ್ಗಲು ಪ್ರಾರಂಭಿಸಿದ್ದಾರೆ. ಬಹುಶಃ ಆ ಸಮಯದಲ್ಲಿ ನಟನನ್ನು ಕರೆದುಕೊಂಡು ಹೋಗಲು ಬಂದಿರಬಹುದು ಎಂದೂ ಹೇಳಿದ್ದಾರೆ.

    ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಸೈಫ್ ಅಲಿ ಖಾನ್ ಮಂಗಳವಾರ ಡಿಸ್ಚಾರ್ಜ್ ಆಗಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಬಡಿಸಿದ ಸುಧಾ ಮೂರ್ತಿ

  • ಜೋಡೊ ಯಾತ್ರೆಗೆ ಬರೋ ಕಲಾವಿದರಿಗೆ ಕಾಂಗ್ರೆಸ್ ಹಣ ಕೊಟ್ಟಿದೆ – BJP ಟೀಕೆಗೆ ಖಡಕ್ ಉತ್ತರ ಕೊಟ್ಟ ನಟಿ

    ಜೋಡೊ ಯಾತ್ರೆಗೆ ಬರೋ ಕಲಾವಿದರಿಗೆ ಕಾಂಗ್ರೆಸ್ ಹಣ ಕೊಟ್ಟಿದೆ – BJP ಟೀಕೆಗೆ ಖಡಕ್ ಉತ್ತರ ಕೊಟ್ಟ ನಟಿ

    ಹೈದರಾಬಾದ್: ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಹೆಜ್ಜೆಹಾಕಿದ ಬಾಲಿವುಡ್ ತಾರೆ (Bollywood Actor) ಪೂಜಾ ಭಟ್ (Pooja Bhat) ಕಲಾವಿದರ ವಿರುದ್ಧ ಬಿಜೆಪಿ (BJP) ನಾಯಕರ ಟೀಕೆಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

    ಹೈದರಾಬಾದ್‌ನಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ 15 ಕಿಮೀ ವರೆಗೆ ಹೆಜ್ಜೆ ಹಾಕಿದ ನಟಿ ಪೂಜಾ ಭಟ್, `ಕಲಾವಿದರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ನಿಂದ ಹಣ ನೀಡಲಾಗುತ್ತಿದೆ’ ಎಂಬ ನಿತೇಶ್ ರಾಣೆ ಅವರ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ರೀತಿಯಲ್ಲಿಯೇ ಕೈ ಸನ್ನೆ ಮಾಡಿ ರಿಷಬ್ ತಿರುಗೇಟು

    ರಾಹುಲ್ ಗಾಂಧಿ (Rahul Gandhi) ಎಲ್ಲ ವಿಷಯಗಳನ್ನೂ ಯೋಚಿಸಲು ಅರ್ಹರಾಗಿದ್ದಾರೆ, ತಮ್ಮ ಅಭಿಪ್ರಾಯಗಳಿಗೆ ಪೂರ್ಣ ಗೌರವ ಹೊಂದಲೂ ಅರ್ಹರಿದ್ದಾರೆ. ಹಾಗಾಗಿ ನಾವು ಸಹ ಇತರರೊಂದಿಗೆ ಬದುಕುವ ಮುನ್ನ ತನ್ನೊಂದಿಗೆ ಬದುಕುವುದನ್ನು ಕಲಿಯಬೇಕು. ಯಾರೊಂದಿಗೂ ರಾಜಿಮಾಡಿಕೊಳ್ಳದ ವಿಷವೆಂದರೆ ಅದು ಆತ್ಮಸಾಕ್ಷಿ, ಮೊದಲು ನಾವು ನಮ್ಮ ಆತ್ಮಸಾಕ್ಷಿಗೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ನಿರ್ದೇಶಕ ಸತ್ಯ ಪ್ರಕಾಶ್ ಇದೀಗ ಹೀರೋ

    ಹೈದರಾಬಾದ್‌ನಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡ ಪೂಜಾ ಭಟ್, ಸುಶಾಂತ್ ಸಿಂಗ್ ಮಾತ್ರವಲ್ಲದೇ ಅಮೋಲ್ ಪಾಲೇಕರ್, ಸಂಧ್ಯಾ ಗೋಖಲೆ, ರಿಯಾ ಸೇನ್, ರಶ್ಮಿ ದೇಸಾಯಿ, ಆಕಾಂಕ್ಷಾ ಪುರಿ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಹೆಜ್ಜೆ ಹಾಕಿದ್ದಾರೆ.

    ಬಿಜೆಪಿ ನಾಯಕ ನಿತೇಶ್ ರಾಣೆ ( Nitesh Rane) ಅವರು ವಾಟ್ಸಾಪ್ ನಿಂದ ಬಂದ ಸಂದೇಶವನ್ನು ಹಂಚಿಕೊಡಿದ್ದು, ಕಾಂಗ್ರೆಸ್‌ನಿAದ ಹಣ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ

    ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ

    – ದಿಶಾ, ಸುಶಾಂತ್ ಸಾವಿಗೂ ಲಿಂಕ್ ಇದೆ
    – ದೊಡ್ಡ ವ್ಯಕ್ತಿಗಳಿಂದ ಆತನ ಜೀವಕ್ಕೆ ಅಪಾಯವಿದೆ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಪ್ರಿಯಕರನಿಗೆ ಭದ್ರತೆ ನೀಡಬೇಕೆಂದು ಮುಂಬೈ ಬಿಜೆಪಿ ಶಾಸಕ ನಿತೇಶ್ ರಾಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ದಿಶಾ ಸಾಲಿಯನ್ ಕಳೆದ ಜೂನ್ 8 ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮುಂಬೈನ ಮಲಾಡ್ ಪ್ರದೇಶಲ್ಲಿರುವ ಮನೆಯ 14ನೇ ಮಹಡಿಯಿಂದ ಕಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಐದು ದಿನಗಳ ನಂತರ ಜೂನ್ 14ರಂದು ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎರಡು ಸಾವಿಗೂ ಸಂಬಂಧವಿದೆ ಎನ್ನಲಾಗಿದೆ.

    ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಎಂಎಲ್‍ಎ ನಿತೇಶ್ ರಾಣೆ, ದಿಶಾ ಸಾವನ್ನಪ್ಪಿದ ದಿನ ಅವಳ ಗೆಳೆಯ ರೋಹನ್ ರೈ ಆಕೆಯ ಜೊತೆಯಲ್ಲಿ ಇದ್ದು, ಆತನಿಗೆ ಕೆಲ ಸೂಕ್ಷ್ಮ ವಿಚಾರಗಳು ಗೊತ್ತಿದೆ. ಆದರೆ ಆತ ಯಾವುದೋ ಪ್ರಭಾವಿ ವ್ಯಕ್ತಿಗಳಿಗೆ ಭಯಪಟ್ಟು ಯಾವ ವಿಚಾರವನ್ನು ಹೊರಗೆ ಹೇಳುತ್ತಿಲ್ಲ. ಆತನಿಗೆ ಭರವಸೆ ಮತ್ತು ಭದ್ರತೆ ಬೇಕಿದೆ. ಹೀಗಾಗಿ ಅವನಿಗೆ ಭದ್ರತೆ ನೀಡಿ ಎಂದು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

    ದಿಶಾ ಸಾಲಿಯನ್ ಸಾವಿಗೂ ಮತ್ತು ಸುಶಾಂತ್ ಸಿಂಗ್ ಸಾವಿಗೂ ಲಿಂಕ್ ಇದೆ. ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಹೀಗಾಗಿಯೇ ರೋಹನ್ ಮುಂಬೈ ಬಿಟ್ಟು ಹೋಗಿದ್ದಾನೆ. ಆತನನ್ನು ಯಾರೋ ಬಲವಂತವಾಗಿ ಮುಂಬೈ ಬಿಟ್ಟು ಹೋಗುವಂತೆ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಆತ ಮುಂಬೈಗೆ ಬರಲು ಹೆದರುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಇದರಲ್ಲಿ ಪ್ರಭಾವಶಾಲಿ ಜನರ ಒತ್ತಡವು ಇದೆ ಎಂದು ರಾಣೆ ಆರೋಪ ಮಾಡಿದ್ದಾರೆ.

    ದಿಶಾ ಸಾಲಿಯನ್ ಪ್ರಕರಣದಲ್ಲಿ ಮುಂಬೈ ಪೊಲೀಸರು ನಾಟಕವಾಡುತ್ತಿದ್ದಾರೆ. ಆಕೆ ಪ್ರಕರಣದಲ್ಲಿ ಅತೀ ಮುಖ್ಯ ಸಾಕ್ಷಿಯಾದ ರೋಹನ್ ಅವರನ್ನು ಪೊಲೀಸರು ತನಿಖೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಸುಶಾಂತ್ ಕೇಸ್ ತನಿಖೆ ಮಾಡುತ್ತಿರುವ ಸಿಬಿಐ ಕೂಡ ರೋಹನ್ ಹೇಳಿಕೆಯನ್ನು ಪಡೆಯಬಹುದು. ಈ ಎರಡು ಪ್ರಕರಣಗಳಿಗೆ ಲಿಂಕ್ ಇದೆ. ಹೀಗಾಗಿ ಆತನಿಗೆ ಭದ್ರತೆ ಕೊಟ್ಟು ವಿಚಾರಣೆ ಮಾಡಬೇಕು. ಈ ವಿಚಾರದಲ್ಲಿ ನಾನು ಕೂಡ ಸಿಬಿಐಗೆ ಹೇಳಿಕೆ ನೀಡಲು ಸಿದ್ಧವಿದ್ದೇನೆ ಎಂದು ರಾಣೆ ಪತ್ರ ಬರೆದಿದ್ದಾರೆ. ಇದನ್ನು ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್

    ಮೊದಲಿಗೆ ಸುಶಾಂತ್ ಜೊತೆ ಕೆಲಸ ಮಾಡುತ್ತಿದ್ದ ದಿಶಾ ಸಾಲಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಂತರ ಸುಶಾಂತ್ ಕೂಡ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದರು. ಹೀಗಾಗಿ ಈ ಪ್ರಕರಣಗಳು ಹಲವಾರು ತಿರುವುಗಳನ್ನು ಪಡೆದುಕೊಂಡಿವೆ. ಸುಶಾಂತ್ ಅನ್ನು ಕೊಲೆ ಮಾಡಲಾಗಿದೆ ಎಂದು ಕೆಲವರ ಆರೋಪಿಸಿದ್ದಾರೆ. ಇದರ ಮಧ್ಯೆ ಡ್ರಗ್ ಕೇಸ್ ಕೂಡ ಈ ಪ್ರಕರಣಕ್ಕೆ ತಳುಕು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್ ಕೂಡ ಆಗಿದ್ದಾರೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

    ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್, ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮಧ್ಯೆ ಜಟಾಪಟಿ ಮುಂದುವರೆದಿದೆ. ಜೊತೆಗೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಹಾರದಲ್ಲಿ ಬಿಜೆಪಿ ಪಕ್ಷ ಸುಶಾಂತ್ ಅವರ ಹೆಸರನ್ನು ತೆಗೆದುಕೊಂಡು ರಾಜಕೀಯ ಮಾಡಿದರೆ, ಇತ್ತ ಪಶ್ಚಿಮ ಬಂಗಾಳದಲ್ಲಿ ರಿಯಾ ಚಕ್ರವರ್ತಿಯನ್ನು ಬೆಂಬಲಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ.