Tag: ನಿತಿನ್ ಸಲೂಜಾ

  • ವಿದೇಶ ಕೆಲಸ ಬಿಟ್ಟು ಭಾರತದಲ್ಲಿ ಟೀ ಅಂಗಡಿ ಹಾಕಿ ಕೋಟ್ಯಧಿಪತಿಯಾದ್ರು!

    ವಿದೇಶ ಕೆಲಸ ಬಿಟ್ಟು ಭಾರತದಲ್ಲಿ ಟೀ ಅಂಗಡಿ ಹಾಕಿ ಕೋಟ್ಯಧಿಪತಿಯಾದ್ರು!

    – ಚಾಯೋಸ್ ಸಂಸ್ಥೆ ಆರಂಭಿಸಿದ್ದು ಯಾಕೆ..?

    ಚೆನ್ನಾಗಿ ಓದಿ ಕೆಲಸಕ್ಕೆ ವಿದೇಶಕ್ಕೆ ಹೋಗಬೇಕು ಎಂದು ಎಲ್ಲರೂ ಕನಸು ಕಾಣುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿದೇಶದಲ್ಲಿದ್ದ ಉತ್ತಮ ಸಂಪಾದನೆಯ ಉದ್ಯೋಗವನ್ನೇ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಅಲ್ಲದೆ ಭಾರತದಲ್ಲಿ ಟೀ ವ್ಯಾಪಾರ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

    ಹೌದು. ವ್ಯಾಪಾರ ಕುಟುಂಬದಿಂದ ಬಂದಿರುವ ನಿತಿನ್ ಸಲೂಜಾ (Nitin Saluja) ಅವರ ಕಥೆಯನ್ನು ಕೇಳಿದರೆ ನೀವೂ ಒಂದು ಬಾರಿ ಅಚ್ಚರಿಗೊಳಗಾಗುತ್ತೀರಿ. ಐಐಟಿ ಬಾಂಬೆ (IIT Bombay) ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿರುವ ಹರಿಯಾಣ ಮೂಲದ ನಿತಿನ್ ಪದವಿ ಮುಗಿದ ನಂತರ ಅಮೆರಿಕದ ಕಂಪನಿಯೊಂದರಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದರು.

    ಸುಮಾರು 5 ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ ಅವರು, ತಮ್ಮದೇ ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಬೇಕು ಎಂದು ನಿರ್ಧಾರ ಮಾಡಿದರು. ಇದೇ ಗುರಿಯನ್ನು ಇಟ್ಟುಕೊಂಡ ನಿತಿನ್ ಅಮೆರಿಕಾ ನೆಲಕ್ಕೆ ಗುಡ್ ಬೈ ಹೇಳಿ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಇಲ್ಲಿ ಬಂದು ತಾನು ಸ್ಟಾರ್ಟಪ್ ಪ್ರಾರಂಭಿಸುವ ಕನಸನ್ನು ತಂದೆಯ ಮುಂದೆ ಬಿಚ್ಚಿಟ್ಟರು. ಆದರೆ ಇದಕ್ಕೆ ತಂದೆ ಬೆಂಬಲ ನೀಡಿಲ್ಲ. ಇದರಿಂದ ಬೇಸರಗೊಂಡರೂ ನಿತಿನ್ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡರು. ಇದನ್ನೂ ಓದಿ: ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ

    ಒಂದು ಕಪ್ ಟೀಗೂ ಕಷ್ಟ: ಅಮೆರಿಕದಲ್ಲಿ ಒಂದು ಕಪ್ ಟೀ ಕುಡಿಯಬೇಕಾದರೆ ಪರದಾಡುವಂತಹ ಸ್ಥಿತಿಯನ್ನು ನಿತಿನ್ ತಮ್ಮ ಕಣ್ಣಾರೆ ಕಂಡಿದ್ದರು. ಹೀಗಾಗಿ ಭಾರತದಲ್ಲಿ ಟೀ ಮಾರಾಟ ಮಾಡುವ ಮೂಲಕ ಸಂಪಾದನೆ ಮಾಡಬಹುದೆಂಬುದನ್ನು ಮನದಟ್ಟು ಮಾಡಿಕೊಂಡಿದ್ದರು. ಇಲ್ಲಿ ಈಗಾಗಲೇ ಸಾಕಷ್ಟು ಕೆಫೆಗಳು ತಲೆಯೆತ್ತಿವೆ. ಆದರೆ ಕೆಲವೆಡೆ ಕಾಫಿ ಮಾತ್ರ ಸಿಗುತ್ತವೆ ಎಂಬುದನ್ನು ಕೂಡ ಅರಿತುಕೊಂಡು ತಮ್ಮ ಕನಸನ್ನು ನನಸು ಮಾಡುವತ್ತ ದಾಪುಗಾಲಿಟ್ಟರು. ಇದು ಅವರ ಜೀವನವನ್ನೇ ಬದಲಿಸಿದ್ದು, ಸದ್ಯ ಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ.

    ಅಂತೆಯೇ ಸಹೋದ್ಯೋಗಿ ಹಾಗೂ ಸ್ನೇಹಿತ ರಾಘವ್ ವರ್ಮಾ ಜೊತೆಗೆ ಅವರು ಗುರ್ಗಾಂವ್ನ ಸೈಬರ್ ಸಿಟಿಯಲ್ಲಿ ಮೊದಲ ಚಾಯೋಸ್ ಅಂಗಡಿಯನ್ನು ತೆರೆದರು. ಅಲ್ಲದೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯೂ ಆದರು. ಸದ್ಯ ಇದು ಅವರಿಗೆ ಟೀ ಕೆಫೆಗಳ ಶಾಖೆಗಳನ್ನು ತೆರೆಯಲು ದಾರಿ ಮಾಡಿ ಕೊಟ್ಟಿತು. ಬೆಂಗಳೂರಿನಲ್ಲಿಯೂ ಒಂದು ಶಾಖೆ ಇದೆ. ಒಟ್ಟಿನಲ್ಲಿ ಇಂದು ಚಾಯೋಸ್ (Chaayos) ದೇಶಾದ್ಯಂತ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಸುಮಾರು 2051 ಕೋಟಿ ರೂ. ಆದಾಯ ಗಳಿಸುತ್ತಿದೆ.

    ಓದುತ್ತಿದ್ದ ಸಂದರ್ಭದಲ್ಲಿ ಕಾಫಿ ಕುಡಿಯಲು 20 ರೂ. ಕೂಡ ಇರಲಿಲ್ಲ. ಆಗ ಗೆಳೆಯರ ಬಳಿಯಿಂದ ತಲಾ ಒಂದೊಂದು ರೂ. ಕಲೆಕ್ಟ್ ಮಾಡಿ ಕಾಫಿ ಕುಡಿದಿರುವ ಬಗ್ಗೆ ನಿತಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]