Tag: ನಿತಿನ್ ರಾವತ್

  • ಭಾರತ್ ಜೋಡೋ ಯಾತ್ರೆ ವೇಳೆ ಪೊಲೀಸರಿಂದ ದೂಡಲ್ಪಟ್ಟ ಕಾಂಗ್ರೆಸ್ ನಾಯಕ – ಕಣ್ಣಿಗೆ ಗಂಭೀರ ಪೆಟ್ಟು

    ಭಾರತ್ ಜೋಡೋ ಯಾತ್ರೆ ವೇಳೆ ಪೊಲೀಸರಿಂದ ದೂಡಲ್ಪಟ್ಟ ಕಾಂಗ್ರೆಸ್ ನಾಯಕ – ಕಣ್ಣಿಗೆ ಗಂಭೀರ ಪೆಟ್ಟು

    ಹೈದರಾಬಾದ್: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ತಳ್ಳಾಟ ನಡೆದಿದ್ದರಿಂದ ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಇಂಧನ ಸಚಿವ ನಿತಿನ್ ರಾವತ್ (Nitin Raut) ಅವರ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ. ಕಾಂಗ್ರೆಸ್ (Congress) ನಾಯಕನನ್ನು ಚಿಕಿತ್ಸೆಗಾಗಿ ಹೈದರಾಬಾದ್‌ನ (Hyderabad) ವಾಸವಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಗರದಲ್ಲಿ ರಾಹುಲ್ ಗಾಂಧಿ (Rahul Gandhi) ನೇತೃತ್ವದ ರಾಷ್ಟ್ರವ್ಯಾಪಿ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಪೊಲೀಸರು ತಮ್ಮನ್ನು ತಳ್ಳಿರುವುದಾಗಿ ನಿತಿನ್ ರಾವತ್ ಆರೋಪಿಸಿದ್ದಾರೆ. ಘಟನೆಯಲ್ಲಿ ಅವರ ಬಲಗಣ್ಣು ಮಾತ್ರವಲ್ಲದೇ ಕೈ, ಕಾಲುಗಳಿಗೂ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:

    ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹೈದರಾಬಾದ್ ತಲುಪಿ, ಸತತ 2ನೇ ದಿನಯ ಯಾತ್ರೆ ಇಂದು ಮುಂದುವರಿದಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಮುಖ್ಯಸ್ಥ ಎ. ರೇವಂತ್ ರೆಡ್ಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ, ಸಂಸದ ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ:

    Live Tv
    [brid partner=56869869 player=32851 video=960834 autoplay=true]

  • 12 ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ: ಮಹಾರಾಷ್ಟ್ರ ಸಚಿವ

    12 ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ: ಮಹಾರಾಷ್ಟ್ರ ಸಚಿವ

    ಮುಂಬೈ: ಕಲ್ಲಿದ್ದಲು ಕೊರತೆಯಿಂದಾದಾಗಿ 12 ರಾಜ್ಯಗಳು ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವತ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೂಕ್ಷ್ಮ ಮಟ್ಟದ ಯೋಜನೆಯಿಂದಾಗಿ ಕಳೆದ ಐದರಿಂದ ಆರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇರಲಿಲ್ಲ. ವಿದ್ಯುತ್ ಕೊರತೆಯು ಶೆ.15ರಷ್ಟಿದೆ ಎಂದರು.

    ರಾಜ್ಯದ ಸ್ವಾಮ್ಯದ ಮಹಾಜೆಂಕೊ 8000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಕರಾವಳಿ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಆಮದು ಮಾಡಿಕೊಂಡ ಕಲ್ಲಿದ್ದಲಿನ ಮೇಲೆ ಕಾರ್ಯನಿರ್ವಹಿಸುತ್ತವೆ. ಆಮದು ಮೇಲಿನ ನಿಷೇಧವನ್ನು ಕೇಂದ್ರವು ಇತ್ತೀಚೆಗೆ ತೆಗೆದುಹಾಕಿದೆ ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು

    ರಾಜ್ಯ ಸರ್ಕಾರವು ಒಂದು ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಟೆಂಡರ್ ನೀಡಿದೆ. ಕಲ್ಲಿದ್ದಲು ಕೊರತೆಯು ರೇಕ್  ಕೊರತೆಯಿಂದ ಕೂಡಿದೆ. ನಮಗೆ ದಿನಕ್ಕೆ 37 ರೇಕ್‍ಗಳು ಬೇಕಾಗುತ್ತವೆ, ಆದರೆ ಕೇವಲ 26 ಸಿಗುತ್ತದೆ. ಪ್ರತಿ ರೇಕ್‍ನಿಂದ 4,000 ಮೆಟ್ರಿಕ್ ಟನ್ ಕಲ್ಲಿದ್ದಲು ಸಾಗಿಸಬಹುದು ಎಂದರು. ಇದನ್ನೂ ಓದಿ: ಕಾರು ಪಲ್ಟಿ – ಪ್ರಾಣಾಪಾಯದಿಂದ ಟಿಬಿ ಜಯಚಂದ್ರ ಪಾರು