Tag: ನಿಜಾಮಾಬಾದ್

  • ತರಗತಿಯಲ್ಲೇ ವಿದ್ಯಾರ್ಥಿ ಆತ್ಮಹತ್ಯೆ- ತೆಲಂಗಾಣದಲ್ಲಿ ಮುಂದುವರಿದ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ

    ತರಗತಿಯಲ್ಲೇ ವಿದ್ಯಾರ್ಥಿ ಆತ್ಮಹತ್ಯೆ- ತೆಲಂಗಾಣದಲ್ಲಿ ಮುಂದುವರಿದ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ

    ಹೈದರಾಬಾದ್: ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ (Student) ತರಗತಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಗರದ ಕಾಲೇಜೊಂದರಲ್ಲಿ ಮಂಗಳವಾರ ನಡೆದಿದೆ.

    ಸ್ಪರ್ಧಾತ್ಮಕ ಪರೀಕ್ಷಗೆ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿ ರಾತ್ರಿ 10 ಗಂಟೆಯ ನಂತರ ಕಣ್ಮರೆಯಾಗಿದ್ದ. ಶಾಲಾ ಕಟ್ಟಡದ ಎಲ್ಲಾ ಕೊಠಡಿಗಳಲ್ಲಿ ತೀವ್ರ ಶೋಧ ನಡೆಸಿದಾಗ ಆತನ ಮೃತದೇಹ ಪತ್ತೆಯಾಗಿತ್ತು. ವಿದ್ಯಾರ್ಥಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳ: ಸಿಎಂ

    ತೆಲಂಗಾಣದಲ್ಲಿ (Telangana) ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಮುಂದುವರಿದಿದ್ದು ಪೋಷಕರು ಮತ್ತು ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಸ್ನೇಹಿತನೊಬ್ಬ ವೈಯಕ್ತಿಕ ಫೋಟೋಗಳನ್ನು ಸೋರಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ವಾರಂಗಲ್‍ನಲ್ಲಿ (Warangal) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಕಳೆದ ಡಿಸೆಂಬರ್‍ನಲ್ಲಿ ಹಿರಿಯ ವಿದ್ಯಾರ್ಥಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿ ಭಾನುವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಮತ್ತೊಂದು ಘಟನೆಯಲ್ಲಿ ಕಳೆದ ಶನಿವಾರ ನಿಜಾಮಾಬಾದ್‍ನ (Nizamabad) ಹಾಸ್ಟೆಲ್ ಕೋಣೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇತ್ತೀಚಿನ ಅಧಿಕೃತ ಅಂಕಿ ಅಂಶಗಳ ಪ್ರಕಾರ 2021ರಲ್ಲಿ ಭಾರತದ 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಎಎಪಿಗೆ ಗುಡ್‌ಬೈ; ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಬಿಜೆಪಿ ಸೇರ್ಪಡೆ

  • ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಕಲೆಕ್ಟರ್

    ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಕಲೆಕ್ಟರ್

    – ಸಾಮಾಜಿಕ ಜಾಲಾತಣದಲ್ಲಿ  ಭಾರೀ ಮೆಚ್ಚುಗೆ

    ಹೈದರಾಬಾದ್: ಕಲೆಕ್ಟರ್ ಒಬ್ಬರು ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿವೆ.

    ನಿಜಾಮಾಬಾದ್ ಕಲೆಕ್ಟರ್ ನಾರಾಯಣ್ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ 3 ದಿನಗಳ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಸಾಮಾನ್ಯ ಉಡುಪಿನಲ್ಲಿದ್ದ ಅವರು ತಲೆಗೆ ಬಿಳಿ ಟೋಪಿ ಹಾಕಿಕೊಂಡು, ಸೈಕಲ್‍ನಲ್ಲಿ ಬೆಳಗ್ಗೆ 8 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು. ಬಳಿಕ ಹೊರ ರೋಗಿಗಳ ವಿಭಾಗ (ಒಪಿಡಿ) ಸೇರಿದಂತೆ ಹಲವಾರು ವಾರ್ಡ್‍ಗಳ ರೋಗಿಗಳ ಸಮಸ್ಯೆಯನ್ನು ನಾರಾಯಣ್ ರೆಡ್ಡಿ ಆಲಿಸಿದರು.

    ಆರ್‍ಒ ವಾಟರ್ ಪ್ಲಾಂಟ್‍ಗಳು ಹಾಗೂ ಔಷಧಿ ಅಂಗಡಿಗಳಲ್ಲಿ ಇರುವ ಔಷಧಿಗಳ ಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಕಲೆಕ್ಟರ್ ನಾರಾಯಣ್ ರೆಡ್ಡಿ ಅವರು ಆಸ್ಪತ್ರೆಗೆ ತಲುಪಿದ ಬಗ್ಗೆ ಮಾಹಿತಿ ಪಡೆದ ಸ್ವಲ್ಪ ಸಮಯದ ನಂತರ, ಆಸ್ಪತ್ರೆಯ ಅಧೀಕ್ಷಕ ಡಾ.ರಾಮುಲು ಕೂಡ ಸ್ಥಳಕ್ಕೆ ತಲುಪಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವ ನೌಕರರಿಗೆ ನೋಟಿಸ್ ನೀಡುವಂತೆ ಡಾ.ರಾಮುಲು ಅವರಿಗೆ ನಾರಾಯಣ್ ರೆಡ್ಡಿ ಸೂಚನೆ ನೀಡಿದರು.

    ನಾರಾಯಣ್ ರೆಡ್ಡಿ ಅವರು ಡಿಸೆಂಬರ್ 24ರಂದು ಅಧಿಕಾರ ವಹಿಸಿಕೊಂಡರು. ಬಳಿಕ ಆಸ್ಪತ್ರೆಗೆ ತಲುಪುವ ಮೊದಲು ರಸ್ತೆ ಮತ್ತು ಕಟ್ಟಡ ಇಲಾಖೆಯ ಅತಿಥಿ ಗೃಹದ ಸ್ಥಿತಿಯನ್ನು ಗಮನಿಸಿದ್ದರು.

    ಈ ಆಸ್ಪತ್ರೆ ದೇಶದ ಅತ್ಯುತ್ತಮ ಆಸ್ಪತ್ರೆಗಳಲ್ಲಿ 17 ನೇ ಸ್ಥಾನದಲ್ಲಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಆಸ್ಪತ್ರೆ ಇದಾಗಿದೆ. ಇಲ್ಲಿಗೆ ಪಕ್ಕದ ಎರಡು ಜಿಲ್ಲೆಯ ಜನರು ಸಹ ಚಿಕಿತ್ಸೆಗಾಗಿ ಬರುತ್ತಾರೆ. ಇದನ್ನು ಗಮನಿಸಿದ ನಾರಾಯಣ್ ರೆಡ್ಡಿ ಅವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡುವಂತೆ ಆದೇಶಿಸಿದ್ದಾರೆ. ಕಲೆಕ್ಟರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  • ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶು ಪತ್ತೆ

    ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶು ಪತ್ತೆ

    ನಿಜಾಮಾಬಾದ್: ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶುವೊಂದನ್ನ ಬಿಟ್ಟು ಹೋಗಿರೋ ಘಟನೆ ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿ ಮಗು ಪತ್ತೆಯಾಗಿದೆ.

    ಇಂದು ಅಪರಿಚಿತರು ಆಸ್ಪತ್ರೆಯ ಮುಂಭಾಗ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆ ಆಸ್ಪತ್ರೆ ಮುಂದೆ ಮಗು ಇರುವುದನ್ನು ಆಸ್ಪತ್ರೆ ಸಿಬ್ಬಂದಿಯೊಬ್ಬರು ಗಮನಿಸಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಯ ಒಳಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.

    ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವನ್ನು ಬಿಟ್ಟು ಹೋಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.