Tag: ನಿಖಿಲ್ ಸಿದ್ಧಾರ್ಥ್

  • `ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ

    `ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ

    ತೆಲುಗಿನ ʻದಿ ಇಂಡಿಯಾ ಹೌಸ್ʼ (The India House) ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಭಾರೀ ಅವಘಡ ಸಂಭವಿಸಿದೆ. ಚಿತ್ರೀಕರಣದ ವೇಳೆ ನೀರಿನ ಟ್ಯಾಂಕರ್‌ ಸ್ಫೋಟಗೊಂಡು (Water Tank Burst), ಪ್ರವಾಹ ರೀತಿಯಲ್ಲಿ ನೀರು ನುಗ್ಗಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.

    ನೀರಿನ ದೊಡ್ಡ ಟ್ಯಾಂಕರ್‌ ಒಡೆದು ಪ್ರವಾಹ ಸೃಷ್ಟಿಯಾದ ಪರಿಣಾಮ ಸಹಾಯಕ ಕ್ಯಾಮೆರಾಮೆನ್‌ (cameraman) ಮತ್ತು ಇನ್ನೂ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಿದ್ದು ಬರೀ ಲೋಕಲ್‌ ಡ್ರಿಂಕ್ಸ್‌ ಮಾತ್ರ – ಮಂಗ್ಲಿ ಸ್ಪಷ್ಟನೆ

    ಶಂಷಾಬಾದ್ ಬಳಿ ಸಿನಿಮಾ ಶೂಟಿಂಗ್‌ಗಾಗಿ ದೊಡ್ಡ ನೀರಿನ ಟ್ಯಾಂಕರ್‌ ನಿರ್ಮಾಣ ಮಾಡಲಾಗಿತ್ತು. ಭಾರೀ ಒತ್ತಡದಿಂದಾಗಿ ನೀರಿನ ಟ್ಯಾಂಕರ್‌ ಸ್ಫೋಟಗೊಂಡು ಪ್ರವಾಹವೇ ಸೃಷ್ಟಿಯಾಯ್ತು. ಭಾರೀ ಪ್ರಮಾಣದ ನೀರಿನ ವೇಗಕ್ಕೆ ಸಿಕ್ಕಿ ಕ್ಯಾಮೆರಾಮೆನ್‌, ಇತರ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

    ಖ್ಯಾತನಟ ರಾಮ್ ಚರಣ್ ನಿರ್ಮಾಣದ ಈ ʻದಿ ಇಂಡಿಯಾ ಹೌಸ್‌ʼ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದ ಹೊರತಾಗಿಯೂ ಸೆಟ್‌ನಲ್ಲಿ ಅವಘಡ ಸಂಭವಿಸಿದ್ದು, ಚಿತ್ರೀಕರಣಕ್ಕಾಗಿ ಹಾಕಲಾದ ಸೆಟ್ ಸಂಪೂರ್ಣ ನಾಶವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದನ್ನೂ ಓದಿ: ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!

  • ನಿಜ ಜೀವನದಲ್ಲೂ ಹೀರೋ ಆದ ನಿಖಿಲ್- ವರ್ಷಗಳಿಂದ ಮುಚ್ಚಿದ ದೇವಸ್ಥಾನ ತೆರೆಸಿದ ನಟ

    ನಿಜ ಜೀವನದಲ್ಲೂ ಹೀರೋ ಆದ ನಿಖಿಲ್- ವರ್ಷಗಳಿಂದ ಮುಚ್ಚಿದ ದೇವಸ್ಥಾನ ತೆರೆಸಿದ ನಟ

    ಕಾರ್ತಿಕೇಯ, ಕಾರ್ತಿಕೇಯ 2 (Karthikeya 2) ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟ ನಿಖಿಲ್ ಸಿದ್ಧಾರ್ಥ್ (Nikhil Siddarth) ಇದೀಗ ಸಿನಿಮಾದಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿದ್ದಾರೆ. ಕೆಲ ವರ್ಷಗಳಿಂದ ಮುಚ್ಚಿದ ದೇವಸ್ಥಾನ (Temple) ನಿಖಿಲ್ ತೆರೆಸಿದ್ದಾರೆ.‌ ಅವರ ಕಾರ್ಯಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:‘ರಾಜಾ ರಾಣಿ’ ಶೋಗೆ ಎಂಟ್ರಿ ಕೊಟ್ಟ ವಿನಯ್ ಗೌಡ ದಂಪತಿ

    ಆಂಧ್ರ ಪ್ರದೇಶದ ಭಾಪಟ್ಲ ಜಿಲ್ಲೆಯ ಚಿರಾಲದ ಬಳಿಯಿರುವ ಈ ದೇವಸ್ಥಾನ ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನಿಖಿಲ್, ಭಕ್ತರಿಗಾಗಿ ದೇವಸ್ಥಾನದ ಬಾಗಿಲನ್ನ ಈಗ ಮತ್ತೆ ತೆರೆದಿದ್ದಾರೆ.

    ಈ ಬಗ್ಗೆ ಸೋಷಿಯಲ್ ವಿಡಿಯೋ ಹಂಚಿಕೊಂಡಿರುವ ನಿಖಿಲ್, ಊರಿನ ಗ್ರಾಮಸ್ಥರಿಗೆ ಶಿಕ್ಷೆಯಾಗಿ ಊರಿನ ದೇವಾಲಯವನ್ನು ಮುಚ್ಚಲಾಗಿತ್ತು. ನಾವು ಕಳೆದ ತಿಂಗಳು ದೇವಾಲಯ ತೆರೆದು ಜೀರ್ಣೋದ್ಧಾರ ಮಾಡಿದೆವು. ಈಗ ಮತ್ತೆ ಅಲ್ಲಿಗೆ ಭೇಟಿ ನೀಡಿದಾಗ ಗ್ರಾಮಸ್ಥರ ಸಂಭ್ರಮ ನೋಡಿ ಖುಷಿಯಾಯ್ತು ಎಂದಿದ್ದಾರೆ. ನಿಖಿಲ್ ನಡೆಯುತ್ತಿರುವಾಗ ಗ್ರಾಮದ ಮಹಿಳೆಯರು ಹಾದಿಗೆ ಹೂವು ಹಾಸಿ ಸ್ವಾಗತ ಕೋರುತ್ತಿರುವ ದೃಶ್ಯವಿದೆ.

    ಸದ್ಯ ಕನ್ನಡದ ನಟಿ ನಭಾ ನಟೇಶ್ (Nabha Natesh) ಜೊತೆ ‘ಸ್ವಯಂಭು’ ಸಿನಿಮಾದಲ್ಲಿ ನಿಖಿಲ್ ನಾಯಕನಾಗಿ ನಟಿಸುತ್ತಿದ್ದಾರೆ. ಇಂಡಿಯನ್ ಹೌಸ್ ಎಂಬ ಹೊಸ ಸಿನಿಮಾವನ್ನು ನಟ ಒಪ್ಪಿಕೊಂಡಿದ್ದಾರೆ.

  • ಮಗನ ಹೆಸರು ರಿವೀಲ್ ಮಾಡಿದ ‘ಕಾರ್ತಿಕೇಯ’ ನಟ ನಿಖಿಲ್

    ಮಗನ ಹೆಸರು ರಿವೀಲ್ ಮಾಡಿದ ‘ಕಾರ್ತಿಕೇಯ’ ನಟ ನಿಖಿಲ್

    ತೆಲುಗಿನ ನಟ ನಿಖಿಲ್ ಸಿದ್ಧಾರ್ಥ್ (Actor Nikhil Siddarth) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ನಿಖಿಲ್ ಪತ್ನಿ ಪಲ್ಲವಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮಗನ ಹೆಸರು ನಿಖಿಲ್ ರಿವೀಲ್ ಮಾಡಿದ್ದಾರೆ. ‌’ಧೀರ’ (Dheera Film) ಎಂದು ಮಗನಿಗೆ ಹೆಸರು ಇಟ್ಟಿರುವುದಾಗಿ ತಿಳಿಸಿದ್ದಾರೆ.

     

    View this post on Instagram

     

    A post shared by Nikhil Siddhartha (@actor_nikhil)

    ಸಿನಿಮಾಗಳಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ ಮಗನಿಗೆ ಸಮಯ ಮೀಸಲಿಡುವುದಾಗಿ ನಿಖಿಲ್ ಮಾತನಾಡಿದ್ದಾರೆ. ಮಗನಿಗೆ ‘ಧೀರ ಸಿದ್ಧಾರ್ಥ್’ (Dheera Siddarth) ಎಂದು ಹೆಸರಿಟ್ಟಿದ್ದೇವೆ. ನಾನು ಪ್ರತಿದಿನ ಮಗನ ಜೊತೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ. ಮಕ್ಕಳು ಬೇಗನೆ ಬೆಳೆಯುತ್ತಾರೆ. ನಾನು ಕೂಡ ನನ್ನ ಪತ್ನಿಯ ಜವಾಬ್ದಾರಿಯನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ನಿಖಿಲ್ ಮಾತನಾಡಿದ್ದಾರೆ.

    ನಿಖಿಲ್ ಸಿದ್ಧಾರ್ಥ್ ಮತ್ತು ಪಲ್ಲವಿ 2020ರಲ್ಲಿ ಮದುವೆಯಾಗಿದ್ದಾರೆ. ಈ ವರ್ಷ ಫೆ.21ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ:ಇಡಿಯಿಂದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಸೇರಿದ 97 ಕೋಟಿ ರೂ. ಆಸ್ತಿ ಜಪ್ತಿ

    ಸದ್ಯ ನಿಖಿಲ್ ಸಿದ್ಧಾರ್ಥ್ ಅವರು ನಭಾ ನಟೇಶ್ ಜೊತೆಗಿನ ‘ಸ್ವಯಂಭು’ (Swayambu Film) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವು ತೆಲುಗು ಸಿನಿಮಾಗಳು ನಟನ ಕೈಯಲ್ಲಿದೆ.

  • ಸಾಯಿ ಪಲ್ಲವಿ ನಟನೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ತೆಲುಗು ನಟ

    ಸಾಯಿ ಪಲ್ಲವಿ ನಟನೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ತೆಲುಗು ನಟ

    ಸೌತ್ ಸುಂದರಿ ಸಾಯಿ ಪಲ್ಲವಿ (Sai Pallavi) ನಟನೆಗೆ ಮತ್ತು ಡ್ಯಾನ್ಸ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ನ್ಯಾಚುರಲ್ ನಟನೆಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಹೀಗಿರುವಾಗ ಸಹಜ ನಟಿ ಸಾಯಿ ಪಲ್ಲವಿ ನಟನೆ ಬಗ್ಗೆ ತೆಲುಗು ನಟ ನಿಖಿಲ್ ಸಿದ್ಧಾರ್ಥ್ (Nikhil Siddarth) ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

    ಇತ್ತೀಚೆಗೆ ಸಿನಿಮಾವೊಂದರ ಸಂದರ್ಶನದಲ್ಲಿ ನಿಖಿಲ್‌ಗೆ ಪ್ರಶ್ನೆಯೊಂದು ಎದುರಾಗಿದೆ. ಯಾವ ನಟಿಯ ನಟನೆ ನೋಡಿ ನೀವು ಕಣ್ಣೀರು ಹಾಕಿದ್ರಿ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಥಟ್ ಅಂತ ಸಾಯಿ ಪಲ್ಲವಿ ಹೆಸರನ್ನು ನಟ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಸೀರೆಯಲ್ಲಿ ಸಖತ್ತಾಗಿ ಕಂಡ ನಟಿ ಪ್ರಿಯಾಮಣಿ

    ‘ವಿರಾಟ ಪರ್ವಂ’ (Viraat Parvam) ಸಿನಿಮಾದಲ್ಲಿ ಸಾಯಿ ಪಲ್ಲವಿ ನಟನೆ ನೋಡಿ ನಾನು ಕಣ್ಣೀರು ಹಾಕಿದ್ದೆ ಎಂದು ರಿವೀಲ್ ಮಾಡಿದ್ದಾರೆ. ಬಳಿಕ ಆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟಿಯ ಸಾವಿನ ದೃಶ್ಯ ಕಣ್ಣೀರು ತರಿಸಿತ್ತು. ಇದರ ಬಗ್ಗೆ ಸಾಯಿ ಪಲ್ಲವಿ ಜೊತೆ ಕೂಡ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಅಂದಹಾಗೆ, ಸದ್ಯ ಸಾಯಿ ಪಲ್ಲವಿ ಅವರು ಬಾಲಿವುಡ್‌ಗೆ ಹಾರಿದ್ದಾರೆ. ಆಮೀರ್ ಖಾನ್ ಪುತ್ರನಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆ ನಾಗಚೈತನ್ಯ ಹೊಸ ಚಿತ್ರಕ್ಕೆ ನಟಿ ಹೀರೋಯಿನ್ ಆಗಿದ್ದಾರೆ.

  • ಗೋವಾದಲ್ಲಿ ಫಿಲ್ಮಿ ಸ್ಟೈಲ್ ಪ್ರಪೋಸ್ – ಏಪ್ರಿಲ್ 16ಕ್ಕೆ ಪ್ರೇಯಸಿಯೊಂದಿಗೆ ನಿಖಿಲ್ ಮದ್ವೆ

    ಗೋವಾದಲ್ಲಿ ಫಿಲ್ಮಿ ಸ್ಟೈಲ್ ಪ್ರಪೋಸ್ – ಏಪ್ರಿಲ್ 16ಕ್ಕೆ ಪ್ರೇಯಸಿಯೊಂದಿಗೆ ನಿಖಿಲ್ ಮದ್ವೆ

    ಹೈದರಾಬಾದ್: ಇತ್ತೀಚೆಗಷ್ಟೇ ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ನಿಶ್ಚಯವಾಗಿರುವ ಸುದ್ದಿ ಸಖತ್ ಸದ್ದು ಮಾಡಿತ್ತು. ಆದ್ರೆ ಈಗ ನಾವು ತಿಳಿಸುತ್ತಿರೋದು ಸ್ಯಾಂಡಲ್‍ವುಡ್ ನಟ ನಿಖಿಲ್ ಮದ್ವೆ ಬಗ್ಗೆ ಅಲ್ಲ, ಟಾಲಿವುಡ್ ನಟ ನಿಖಿಲ್ ಸಿದ್ಧಾರ್ಥ್ ಮದುವೆ ಬಗ್ಗೆ.

    ಹೌದು. ‘ಹ್ಯಾಪಿಡೇಸ್’ ಸಿನಿಮಾ ಖ್ಯಾತಿಯ ನಿಖಿಲ್ ಸಿದ್ದಾರ್ಥ್ ಸದ್ಯ ತಮ್ಮ ಪ್ರೇಯಸಿ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ಫಿಲ್ಮಿ ಸ್ಟೈಲ್‍ನಲ್ಲಿ ನಿಖಿಲ್ ಪ್ರೇಯಸಿ ಡಾ. ಪಲ್ಲವಿ ವರ್ಮಾ ಅವರಿಗೆ ಪ್ರಪೋಸ್ ಮಾಡಿದ್ದರು. ಪಲ್ಲವಿ ವೃತ್ತಿಯಲ್ಲಿ ವೈದ್ಯೆ ಆಗಿದ್ದು, ಇಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ತಮ್ಮ ಪ್ರೀತಿಯ ಬಗ್ಗೆ ತಿಳಿಸಿ, ಎಲ್ಲರ ಒಪ್ಪಿಗೆ ಪಡೆದು ಈ ಜೋಡಿ ಸದ್ದಿಲ್ಲದೆ ಹೈದರಾಬಾದ್‍ನಲ್ಲಿ ಫೆ. 1ರಂದು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ.

    ಹೈದರಾಬಾದ್‍ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಖಿಲ್-ಪಲ್ಲವಿ ನಿಶ್ಚಿತಾರ್ಥವನ್ನು ಶಾಸ್ತ್ರೋಕ್ತವಾಗಿ ಮಾಡಿಕೊಂಡಿದ್ದಾರೆ. ಅಲ್ಲದೇ ಏಪ್ರಿಲ್ 16ರಂದು ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ತೆಲುಗಿನಲ್ಲಿ ತೆರೆಕಂಡ ‘ಹ್ಯಾಪಿಡೇಸ್’, ‘ಸ್ವಾಮಿ ರಾ ರಾ’, ‘ಕಾರ್ತಿಕೇಯ’, ‘ಸೂರ್ಯ ವರ್ಸಸ್ ಸೂರ್ಯ’, ‘ಶಂಕರಾಭರಣಂ’ ಸೇರಿದಂತೆ ಅವರು ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಿಖಿಲ್ ಅಭಿನಯಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಅರ್ಜುನ್ ಸುರವರಂ’ ಸಿನಿಮಾ ಕೂಡ ನಿಖಲ್‍ಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು.

    ಕನ್ನಡದಲ್ಲಿ ತೆರಕಂಡು ಸೂಪರ್ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ ಚಿತ್ರವನ್ನು ತೆಲುಗಿನಲ್ಲಿ ‘ಕಿರಾಕ್ ಪಾರ್ಟಿ’ ಎಂದು ರಿಮೇಕ್ ಮಾಡಲಾಗಿತ್ತು. ಕನ್ನಡದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಿಭಾಯಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ನಿಖಿಲ್ ನಿಭಾಯಿಸಿದ್ದರು. ಈ ಚಿತ್ರ ಕೂಡ ಹಿಟ್ ಆಗಿತ್ತು.