Tag: ನಿಖಿಲ್ ಕುಮಾರ್

  • ಯುವರಾಜ ನಿಖಿಲ್ ಸಿನಿಮಾ ಹೇಗಿರಬಹುದು?

    ಯುವರಾಜ ನಿಖಿಲ್ ಸಿನಿಮಾ ಹೇಗಿರಬಹುದು?

    ಬೆಂಗಳೂರು: ಜಾಗ್ವಾರ್ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ನಿಖಿಲ್ ಕುಮಾರ್ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಕಡೆಗೂ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಇದೇ ಜನವರಿ 25ರಂದು ಸೀತಾರಾಮ ಕಲ್ಯಾಣ ಬಿಡುಗಡೆಯಾಗಲಿದೆ. ಸೀತಾರಾಮ ಕಲ್ಯಾಣ ಈಗಾಗಲೇ ಹಾಡು, ಟೀಸರ್ ಸೇರಿದಂತೆ ಹಲವಾರು ರೀತಿಯಲ್ಲಿ ಸುದ್ದಿ ಮಾಡಿದೆ. ಎ ಹರ್ಷ ಮತ್ತು ನಿಖಿಲ್ ಕಾಂಬಿನೇಷನ್ನಿನ ಈ ಚಿತ್ರ ಎಲ್ಲರನ್ನೂ ಚಕಿತಗೊಳಿಸೋದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಿದೆ ಗಾಂಧಿನಗರ.

    ಮೊದಲ ಚಿತ್ರ ಜಾಗ್ವಾರ್ ಮೂಲಕವೇ ನಿಖಿಲ್ ಕುಮಾರ್ ನಟನೆಯ ಬಗ್ಗೆ ತಮ್ಮ ಬದ್ಧತೆ ಎಂಥಾದ್ದೆಂಬುದನ್ನು ಸಾಬೀತು ಪಡಿಸಿದ್ದರು. ಡ್ಯಾನ್ಸ್, ಸಾಹಸ, ಅಭಿನಯ ಎಲ್ಲದರಲ್ಲಿಯೂ ತರಬೇತಿ ಪಡೆದೇ ಅವರು ಕ್ಯಾಮೆರಾ ಮುಂದೆ ಬಂದು ನಿಂತಿದ್ದರು. ಜಾಗ್ವಾರ್ ಬಿಡುಗಡೆಯಾದ ದಿನವೇ ಮಾಧ್ಯಮದ ಮಂದಿ `ಸ್ಟಾರ್ ಈಸ್ ಬಾರ್ನ್’ ಅಂತಾ ಷರಾ ಬರೆದಿದ್ದವು. ಅದು ಸುಮ್ಮನೇ ದಕ್ಕುವಂಥದ್ದಲ್ಲ. ಒಬ್ಬ ನಟ ತೆರೆ ಮೇಲೆ ಎಲ್ಲ ರೀತಿಯಲ್ಲೂ ಆಕರ್ಷಿಸಿದರೆ ಮಾತ್ರ `ಸ್ಟಾರ್’ ಎನ್ನಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಟಿಸಿದ ಮೊಟ್ಟಮೊದಲ ಸಿನಿಮಾದಲ್ಲೇ ಸ್ಕೋರು ಮಾಡಿದ್ದ ನಿಖಿಲ್ ಎರಡನೇ ಸಿನಿಮಾದ ಕುರಿತು ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.

    ನೃತ್ಯ ನಿರ್ದೇಶಕರಾಗಿ ಎಂಟ್ರಿ ಕೊಟ್ಟು ನಂತರ ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಹರ್ಷ ಈ ವರೆಗೆ ಕೈಗೆತ್ತಿಕೊಂಡ ಸಿನಿಮಾಗಳನ್ನೆಲ್ಲಾ ಗೆಲ್ಲಿಸಿ ಇವತ್ತು ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ಹರ್ಷ ನಿಖಿಲ್ ಕುಮಾರ್ ರನ್ನು ಮತ್ತಷ್ಟು ಹೊಸ ರೀತಿಯಲ್ಲಿ ಕಂಗೊಳಿಸುವಂತೆ ಮಾಡಿದ್ದಾರಂತೆ. ಯುವರಾಜ ನಿಖಿಲ್ ಸಿನಿಮಾಗಾಗಿ ಜನ ಕಾತರದಿಂದ ಕಾದಿದ್ದಾರೆ. ಅದರ ಅಸಲಿ ಮಜಾ ಏನೆಂಬುದು ಜನವರಿ 25ರಂದು ತಿಳಿಯಲಿದೆ.

    https://www.youtube.com/watch?v=3pYwtl-VD-Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ

    ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ

    – ನನಗೆ ಕೊಡೋ ಶಕ್ತಿಯನ್ನು ಧಾರೆಯೆರೆಯುತ್ತೇನೆ

    ಬಾಗಲಕೋಟೆ: ರೈತರ ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಮಗನ ಮೇಲೆ ಆಣೆ ಮಾಡಿದ್ದಾರೆ.

    ನಗರದಲ್ಲಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಣೆ ವೇಳೆ ಮಾತನಾಡಿದ ಸಿಎಂ, ನನಗೆ ಇರುವುದು ಒಬ್ಬ ಮಗ. ಅವನ ಮೇಲೆ ಆಣೆ ಮಾಡ್ತೇನೆ. ನಾನು ರೈತರ ಸಾಲಮನ್ನಾ ಮಾಡ್ತೇನೆ. ನಾನು ಎಲ್ಲೂ ಹೋಗಲ್ಲ, ಸರ್ಕಾರ ಬೀಳಲ್ಲ, ನಿಮ್ಮ ಸಾಲಮನ್ನಾ ಮಾಡಿಯೇ ತೀರುತ್ತೇನೆ. ಸಾಲಮನ್ನಾ ವಿಚಾರದಲ್ಲಿ ನಿಮಗೆ ಮೋಸ ಮಾಡೋದಿಲ್ಲ ಅಂತ ಅಭಯ ಕೊಟ್ಟರು. ಅಲ್ಲದೇ ಸರ್ಕಾರ ನಡೆಸುವ ಶಕ್ತಿ ನೀವು ಕೊಟ್ಟಿದ್ದೀರಿ. ಫೆಬ್ರವರಿಯಲ್ಲಿ ಬಜೆಟ್ ಮಂಡಣೆ ಮಾಡಲಾಗುವುದು ಎಂದು ತಿಳಿಸಿದರು.

    ಮುಂದಿನ ವರ್ಷದಿಂದ ನಿಮ್ಮ ಬೆಳೆಗೆ ನಿಖರವಾದ ಬೆಲೆ ಸಿಗಬೇಕು. ಮಹಾರಾಷ್ಟ್ರ ಮಾದರಿ ಮಾಡಿ ಅಂತ ಕಬ್ಬು ಬೆಳೆಗಾರರು ಹೇಳ್ತಾರೆ. ನೀವೇ ಹೋಗಿ ನೋಡಿ ಮಹಾರಾಷ್ಟ್ರಕ್ಕೆ ಏನಾಗಿದೆ ಅಂತಾ ಗೊತ್ತಾಗುತ್ತೆ. ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದೆ. ಅವರು ಇನ್ನು ಮೇಲೆ ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಡಬೇಡಿ ಅಂತಾ ತಿಳಿಸಿದ್ರು. ನೀವು ನಮಗೆ ಶಕ್ತಿ ಕೊಡಿ. ಅದೇ ಶಕ್ತಿಯನ್ನು ವಾಪಸ್ ಧಾರೆ ಎರೆಯುತ್ತೇನೆ ಅಂತಾ ಸಿಎಂ ಭರವಸೆ ಕೊಟ್ಟರು.

    ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಾಗಲಕೋಟೆ-96, ಬದಾಮಿ-422, ಹುನಗುಂದ-274, ಜಮಖಂಡಿ-1198, ಮುಧೋಳ-450, ಬೀಳಗಿ-356 ಒಟ್ಟು 2796 ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಖಿಲ್ ಭವಿಷ್ಯಕ್ಕಾಗಿ ಅನಿತಾ ಕುಮಾರಸ್ವಾಮಿ ಹೊಸ ಯಾಗ

    ನಿಖಿಲ್ ಭವಿಷ್ಯಕ್ಕಾಗಿ ಅನಿತಾ ಕುಮಾರಸ್ವಾಮಿ ಹೊಸ ಯಾಗ

    ಬೆಂಗಳೂರು: ಮಕ್ಕಳ ಉಜ್ವಲ ಭವಿಷ್ಯಕ್ಕೋಸ್ಕರ ತಂದೆ- ತಾಯಿ ಮಾಡುವಂತಹ ಯಾಗ ಮತ್ತು ತ್ಯಾಗದ ಬಗ್ಗೆ ಒಂದು ಲೈನ್‍ನಲ್ಲಿ ಹೇಳಿ ಮುಗಿಸೋದಕ್ಕೆ ಆಗೋದಿಲ್ಲ. ಅಂತೆಯೇ ನಿಖಿಲ್ ಕುಮಾರಸ್ವಾಮಿಗೋಸ್ಕರ ಅವರ ತಂದೆ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ಕಠಿಣ ಯಾಗವನ್ನೇ ಕೈಗೊಂಡಿದ್ದಾರೆ.

    ಹೌದು. ಪುತ್ರನ ಉಜ್ವಲ ಭವಿಷ್ಯಕ್ಕಾಗಿ ಕುಮಾರ ದಂಪತಿ ಮನೆದೇವರಿಗೆ ಹರಕೆ ಕಟ್ಟಿಕೊಳ್ಳುವುದಲ್ಲದೇ, ಅದೇನೆ ಆಗಲಿ ಸುಪುತ್ರನಿಗಾಗಿ ನಾವು ಕೆಲಸ ಮಾಡಲೇಬೇಕು ಅಂತ ಪಣ ತೊಟ್ಟಿದ್ದಾರೆ. ಸದ್ಯಕ್ಕೆ ಸೀತಾರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದನ್ನ ಹೊರತುಪಡಿಸಿದರೆ ನಿಖಿಲ್ ಬೇರೆ ಯಾವ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ. ಜಾಗ್ವಾರ್ ಬಾಯ್‍ನ ಅರಸಿಕೊಂಡು ಕೆಲವೊಂದು ಸಿನಿಮಾಗಳ ಆಫರ್ ಬಂದಿತ್ತಾದ್ರೂ ನಿಖಿಲ್ ಯಾವ ಸಿನಿಮಾವನ್ನ ಒಪ್ಪಿಕೊಂಡಿಲ್ಲ. ಹೀಗಾಗಿ ತಮ್ಮ ಬ್ಯಾನರ್‍ನಲ್ಲಿ ಸರಣಿ ಸಿನಿಮಾಗಳನ್ನ ಶುರುಮಾಡಬೇಕು ಅನ್ನೋದು ಕುಮಾರಣ್ಣನ ಮಹದಾಸೆ. ಅದಕ್ಕಾಗಿ ಅನಿತಾ ಕುಮಾರಸ್ವಾಮಿ ಅವರಿಗೆ 5 ಸಿನಿಮಾಗಳ ನಿರ್ಮಾಣದ ಜವಾಬ್ದಾರಿಯನ್ನ ಹೊರಿಸಿದ್ದಾರೆ. 5 ಸಿನಿಮಾಗಳನ್ನ ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆಗೆ ತರೋದಕ್ಕೆ ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಚಂದನವನದಲ್ಲಿ ಹರಿದಾಡುತ್ತಿದೆ.

    ನಿಖಿಲ್ ಲೈಫ್ ಸೆಟ್ಲ್ ಮಾಡಬೇಕು ಅನ್ನೋದು ಕುಮಾರ ದಂಪತಿಯ ಮುಂದಿರುವ ಮಹಾಕನಸು. ಒಳ್ಳೆಯ ಹುಡುಗಿ ಹುಡುಕಿ ಮದುವೆ ಮಾಡಬೇಕು ಅನ್ನೋದು ಒಂದು ಕನಸು ಆದ್ರೆ, ಗಂಧದ ಗುಡಿಯಲ್ಲಿ ನಮ್ಮ ಹುಡುಗ ಗಟ್ಟಿಯಾಗಿ ನಿಲ್ಲಬೇಕು ಅನ್ನೋದು ಮತ್ತೊಂದು ಮಹಾಬಯಕೆ. ಬಣ್ಣದ ಲೋಕದಲ್ಲಿ ಮಗನನ್ನ ಗಟ್ಟಿಯಾಗಿ ನಿಲ್ಲಿಸಲು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಇಬ್ಬರು ಈ ಮಹಾನ್ ತೀರ್ಮಾನಕ್ಕೆ ಬಂದಿದ್ದಾರೆ.

    ಪರಭಾಷೆಯಲ್ಲಿ ಇತ್ತೀಚೆಗೆ ಬಂದಿರುವ ಎಲ್ಲಾ ಹಿಟ್ ಸಿನಿಮಾಗಳನ್ನ ನೋಡು. ಅದರಲ್ಲಿ ಯಾವ ಸಿನಿಮಾ ನಿನಗೆ ಇಷ್ಟವಾಗುತ್ತೋ, ಆ ಸಿನಿಮಾದ ನಿರ್ದೇಶಕರಿಂದ ನಿಖಿಲ್‍ಗೆ ಆಕ್ಷನ್ ಕಟ್ ಹೇಳಿಸೋಣ ಎಂದಿದಾರಂತೆ ಕುಮಾರಣ್ಣ. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿರುವ ಕುಮಾರಸ್ವಾಮಿಯವರು. ಅಷ್ಟೇ ವೇಗದಲ್ಲಿ ತಮ್ಮ ಮಗನ ಬಣ್ಣದ ಜಗತ್ತಿನ ಲೈಫ್‍ನ ಸೆಟಲ್ ಮಾಡೋದಕ್ಕೆ ಪಣ ತೊಟ್ಟಿರುವುದು ವಿಶೇಷ.

    ಈಗಾಗಲೇ ಹುಡುಗಿ ಹುಡುಕಾಟದಲ್ಲಿ ದೊಡ್ಡಗೌಡ್ರ ಕುಟುಂಬ ನಿರತವಾಗಿದೆ. ತಮ್ಮ ಮನೆತನಕ್ಕೆ ಒಪ್ಪುವ ದೊಡ್ಡ ಮನೆತನದ ಹುಡುಗಿಯನ್ನ ಸೊಸೆಯಾಗಿ ಬರಮಾಡಿಕೊಳ್ಳೋದಕ್ಕೆ ತಯಾರಿ ನಡೆಸುತ್ತಿದೆ. ಇತ್ತ ಸೀತಾರಾಮ ಕಲ್ಯಾಣ ಸ್ಯಾಂಡಲ್‍ವುಡ್ ನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದು, ಸದ್ಯದಲ್ಲೇ ಚಿತ್ರ ತೆರೆಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

    ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

    ಬೆಂಗಳೂರು: ಚಂದನವನದಲ್ಲಿ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಆದ್ರೆ ಟೀಸರ್‍ನಲ್ಲಿ ಗುಳಿಕೆನ್ನೆಯ ಮುದ್ದಾದ ಬೆಡಗಿ ರಚಿತಾ ರಾಮ್ ಕಾಣಿಸಿಕೊಂಡಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ರಚಿತಾ ರಾಮ್ ತಾವು ಏಕೆ ಕಾಣಿಸಿಕೊಂಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಟೀಸರ್‍ನಲ್ಲಿ ಯಾರು ಕಾಣಿಸಿಕೊಂಡಿದ್ದಾರೆ ಎಂಬುದು ಮುಖ್ಯವಲ್ಲ. ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂಬುದು ಮುಖ್ಯ. ಚಿತ್ರದ ಟೀಸರ್ ಚೆನ್ನಾಗಿ ಮೂಡಿ ಬರಲಿ ಎಂದು ನಿಖಿಲ್ ಕುಮಾರ್ ಪಾತ್ರದ ಪರಿಚಯವನ್ನು ಅಲ್ಲಿ ತಿಳಿಸಲಾಗಿದೆ. ಟೀಸರ್ ಬಿಡುಗಡೆಯಾದಾಗ ಬಹಳ ಜನರು ನನ್ನನ್ನು ಈ ಪ್ರಶ್ನೆ ಕೇಳಿದ್ದರು ಅಂತ ಹೇಳಿದ್ರು.

    ಸೀತಾರಾಮ ಕಲ್ಯಾಣದಲ್ಲಿ ಎಲ್ಲ ಭಾಷೆಯ ಕಲಾವಿದರು ಇದ್ದಾರೆ. ಎಲ್ಲರೂ ತಮ್ಮ ಭಾಷೆಯಲ್ಲಿ ದೊಡ್ಡ ಸಾಧನೆ ಮಾಡಿದವರು. ಪ್ರತಿಯೊಂದು ಸೀನ್‍ಗಳನ್ನು ಮಾಡುವಾಗ ತುಂಬಾ ಚಾಲೆಂಜಿಂಗ್ ಆಗಿರುತ್ತದೆ. ಆದ್ರೆ ಪ್ರತಿಯೊಂದು ಶೂಟ್‍ನಲ್ಲಿ ಎಲ್ಲರಿಂದಲೂ ಕಲಿಯುವ ಅವಕಾಶ ಲಭಿಸಿದೆ. ಇನ್ನೇನು ಕೆಲವು ದಿನಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆ ಬಳಿಕ ಚಂದನವನದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಯೂಟ್ಯೂಬ್‍ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ನಮ್ಮ ಟೀಸರ್ ಇತ್ತು. ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಚಿತ್ರತಂಡ ಹಾಗು ನನ್ನ ಪರವಾಗಿ ಎಲ್ಲ ಅಭಿಮಾನಿಗಳಿಗೆ ರಚಿತಾ ರಾಮ್ ಧನ್ಯವಾದ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.youtube.com/watch?v=vmW64rkvPiU&feature=youtu.be

    https://www.youtube.com/watch?v=3pYwtl-VD-Y&feature=youtu.be

  • ತಂದೆ ಹೇಳಿದಂತೆ ರೈತರ ಸಂಪೂರ್ಣ ಸಾಲಾಮನ್ನಾ ಆಗುತ್ತೆ – ನಿಖಿಲ್ ಕುಮಾರಸ್ವಾಮಿ

    ತಂದೆ ಹೇಳಿದಂತೆ ರೈತರ ಸಂಪೂರ್ಣ ಸಾಲಾಮನ್ನಾ ಆಗುತ್ತೆ – ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ನಮ್ಮ ತಂದೆಯವರು ಹಿಂದೆ ಹೇಳಿದಂತೆ ಇನ್ನು ಎಂಟು, ಹತ್ತು ದಿನಗಳ ಒಳಗೆ ರೈತರ ಸಂಪೂರ್ಣ ಸಾಲಾಮನ್ನ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಮಾತನಾಡಿದ ಅವರು, ನಮ್ಮ ತಂದೆಯವರು ಸಿಎಂ ಆಗಿದ್ದಾರೆ, ಆದರೆ ನಮ್ಮನ್ನು ರಾಜ್ಯದ ಜನತೆ ಸಂರ್ಪೂವಾಗಿ ಕೈ ಹಿಡಿಯದ ಕುರಿತು ನಮ್ಮ ಮನಸ್ಸಿನಲ್ಲಿ ನೋವಿದೆ. ಈಗಗಾಲೇ ಸರ್ಕಾರದ ಕುರಿತು ಹಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಚುನಾವಣೆಯ ಪೂರ್ವ ನಮ್ಮ ತಂದೆಯವರು ರಾಜ್ಯದ ಜನತೆಗೆ ನೀಡಿದ್ದ ಸಾಲಮನ್ನಾ ಭರವಸೆಯನ್ನು ಈಡೇರಿಸುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಕನಸಿನ ಕರ್ನಾಟಕ ನಿರ್ಮಾಣ ಮಾಡಲು ಕಾರ್ಯನಿರ್ವಹಿಸುತ್ತಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರವನ್ನು ನೀಡುತ್ತಾರೆ ಎಂದರು.

    ಈ ಹಿಂದೆ ನಮ್ಮ ತಂದೆಯವರು ಸಿಎಂ ಆಗಿದ್ದ ವೇಳೆ ನಾನು ಕಾಲೇಜು ಹುಡುಗ ಆಗಿದ್ದೆ, ಆದರೆ ಈಗ ಸಂಪೂರ್ಣ ಸನ್ನಿವೇಶ ಬದಲಾಗಿದೆ. ಆದರೆ ಸದ್ಯ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಹೆಚ್ಚಾಗಿದ್ದು, ಅದರೊಂದಿಗೆ ಒತ್ತಡವೂ ಹೆಚ್ಚಿದೆ. ಈ ಸ್ಥಾನದಲ್ಲಿ ಕುಳಿತಿರುವುದು ಖುಷಿ ಪಡುವಂಥದ್ದು ಏನೂ ಇಲ್ಲ. ಯಾಕೆಂದರೆ ಮನಸ್ಸಿನಲ್ಲಿ ನೋವಿದೆ ಪೂರ್ಣ ಪ್ರಮಾಣದಲ್ಲಿ ಜನರು ಕೈ ಹಿಡಿಯಲಿಲ್ಲ. ಬಹುಶಃ ಒಂದು ದೈವಶಕ್ತಿಯಿಂದ ನಮ್ಮ ತಂದೆಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

    ರಾಜಕೀಯದಲ್ಲಿದ್ದೇನೆ: ಹಲವು ಬಾರಿ ಮಾಧ್ಯಮಗಳಿಂದ ನನಗೆ ರಾಜಕೀಯ ಪ್ರವೇಶದ ಕುರಿತು ಪ್ರಶ್ನೆ ಎದುರಾಗುತ್ತಿದೆ. ನಾನು ಹುಟ್ಟುತ್ತ ರಾಜಕೀಯ ಕುಟುಂಬದಿಂದ ಬಂದವನು. ಅದ್ದರಿಂದ ರಾಜಕೀಯ ಪ್ರವೇಶ ಪ್ರತ್ಯೇಕವಾಗಿಲ್ಲ, ಈಗಾಗಲೇ ರಾಜಕೀಯದಲ್ಲಿದ್ದೇನೆ. ಸಿನಿಮಾ ಮಧ್ಯೆಯೇ ಹಲವು ಜಿಲ್ಲೆಗಳ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಕೆಲ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದು, ಈ ಕುರಿತು ಸಹ ನಾನು ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಪಕ್ಷದ ಸಂಘಟನೆಯೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದರು.

  • ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರ್ತಾರಾ?- ದೇವೇಗೌಡ್ರು ಹೇಳಿದ್ದೇನು?

    ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರ್ತಾರಾ?- ದೇವೇಗೌಡ್ರು ಹೇಳಿದ್ದೇನು?

    ಕಾರವಾರ: ಹೆಚ್‍ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರ್ ರಾಜಕಾರಣಕ್ಕೆ ಬರ್ತಾರೆ ಎಂಬ ವದಂತಿಯ ಬಗ್ಗೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೆಗೌಡರು ಪ್ರತಿಕ್ರಿಯೆ ನೀಡಿದ್ದಾರೆ . ನಿಖಿಲ್ ಒಬ್ಬ ನಟನಾಗಿದ್ದು, ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕುಮಾರಸ್ವಾಮಿಯವರ ಆರೋಗ್ಯ ಸರಿಯಿಲ್ಲದ ಕಾರಣ ಪಕ್ಷದ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿ ವಂಶ ಪಾರಂಪರ್ಯ ರಾಜಕೀಯ ನಡೆಸುವ ಉದ್ದೇಶವಿಲ್ಲ. ಕುಟುಂಬ ರಾಜಕಾರಣ ಆರೋಪ ಸರಿಯಲ್ಲವೆಂದು ತನ್ನ ಮೊಮ್ಮಗನ ನಿಲುವನ್ನು ದೇವೇಗೌಡರು ಸಮರ್ಥಿಸಿಕೊಂಡರು.

    ಸಿದ್ದರಾಮಯ್ಯನವರು ತಮ್ಮ ಬೆಂಬಲಿಗರೊಂದಿಗೆ ತೆರಳಿ ಮುಳಬಾಗಿಲ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ತಾನೊಬ್ಬ ನಾಸ್ತಿಕನೆಂದು ಹೇಳುತ್ತಿದ್ದವರು ಆಸ್ತಿಕರಾಗಿದ್ದಾರೆ ಎಂದು ವ್ಯಂಗವಾಡಿದರು.

    ಪಕ್ಷದಲ್ಲಿ ಕುಮಾರಸ್ವಾಮಿ ಹಾಗೂ ರೇವಣ್ಣರ ನಡುವೆ ಯಾವುದೇ ನಾಯಕತ್ವದ ಪೈಪೊಟಿ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಡಿಸೆಂಬರ್‍ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಕುರಿತು ಟಿಕೆಟ್ ಆಕಾಂಕ್ಷಿಗಳಿಗೆ ಒಂದು ತಿಂಗಳ ಗಡುವು ನೀಡಲಾಗಿದೆ ಎಂದು ತಿಳಿಸಿದರು.