Tag: ನಿಖಿಲ್ ಕುಮಾರ್

  • ರಾಜಕೀಯದಿಂದ ದೂರ ಉಳಿಯುತ್ತೇನೆ : ನಟ ನಿಖಿಲ್ ಕುಮಾರಸ್ವಾಮಿ

    ರಾಜಕೀಯದಿಂದ ದೂರ ಉಳಿಯುತ್ತೇನೆ : ನಟ ನಿಖಿಲ್ ಕುಮಾರಸ್ವಾಮಿ

    ಜೆಡಿಎಸ್ ಪಕ್ಷದ ಯುವ ಮುಖಂಡ, ನಟ ನಿಖಿಲ್ ಕುಮಾರಸ್ವಾಮಿ (Nikhil Kumar) ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಬೀದರ್ ನಲ್ಲಿ ಮಾತನಾಡಿರುವ ನಿಖಿಲ್, ‘ರಾಜಕೀಯದಿಂದ (Politics) ದೂರವಿರುತ್ತೇನೆ. ಆದರೆ, ಸಾಮಾನ್ಯ ಕಾರ್ಯಕರ್ತನಾಗಿ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲಾರೆ’ ಎಂದಿದ್ದಾರೆ.

    ಈ ಹಿಂದೆ ಕುಮಾರಸ್ವಾಮಿ ಅವರು ಇದೇ ಮಾತುಗಳನ್ನು ಆಡಿದ್ದರು. ಸಿನಿಮಾದಲ್ಲಿ (Cinema) ಸಾಕಷ್ಟು ಅವಕಾಶಗಳು ಇರುವುದರಿಂದ ಅಲ್ಲಿಯೇ ನೆಲೆಯೂರುವಂತೆ ಹೇಳಿದ್ದೇನೆ. ರಾಜಕಾರಣಕ್ಕೆ ನಿಖಿಲ್ ಬರುವುದು ಬೇಡ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ತಂದೆಯ ಮಾತನ್ನು ಪುತ್ರ ನಿಖಿಲ್ ಮತ್ತೆ ನೆನಪಿಸಿದ್ದಾರೆ.

    ಸದ್ಯ ನಿಖಿಲ್ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ (Lyca Production) ಈಗ ಇವರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಈ ಚಿತ್ರದ ನಾಯಕನಾಗಿ ನಿಖಿಲ್ ಕುಮಾರ್ ನಟಿಸುತ್ತಿದ್ದರೆ, ಲಕ್ಷ್ಮಣ್ ಅವರು ನಿರ್ದೇಶಕರು.

    ಈ ಹಿಂದೆ ‘ಸೀತಾರಾಮ ಕಲ್ಯಾಣ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಲೈಕಾ ಸಂಸ್ಥೆಯ ಸುಭಾಸ್ಕರನ್ (Subhaskaran) ಮತ್ತು ನಿಖಿಲ್ ಭೇಟಿ ಮಾಡಿದ್ದರು. ಆ ಸಮಯದಲ್ಲಿ ‘ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ನೀವು ನಾಯಕರಾಗಿ ನಟಿಸಬೇಕು’ ಎಂದು ಸುಭಾಸ್ಕರನ್ ಹೇಳಿದ್ದರು. ಅದಕ್ಕೆ ನಿಖಿಲ್ ಒಪ್ಪಿಗೆ ಸೂಚಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಖಿಲ್ ಕುಮಾರ್ ಹೊಸ ಸಿನಿಮಾ ಸೆಟ್ ನಲ್ಲಿ ಶಿವರಾಜ್ ಕುಮಾರ್

    ನಿಖಿಲ್ ಕುಮಾರ್ ಹೊಸ ಸಿನಿಮಾ ಸೆಟ್ ನಲ್ಲಿ ಶಿವರಾಜ್ ಕುಮಾರ್

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಯು.ಎಸ್ ಪ್ರವಾಸ ಮುಗಿಸಿ ಇತ್ತೀಚೆಗಷ್ಟೇ ಬಂದಿದ್ದು ವಿದೇಶದಿಂದ ಬಂದ ನಂತರ ನಟ ನಿಖಿಲ್ ಕುಮಾರ್ (Nikhil Kumar) ಅವ್ರನ್ನ ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ  ನಟ ನಿಖಿಲ್ ಕುಮಾರ್ ಅವರ ಹೊಸ ಸಿನಿಮಾದ ಚಿತ್ರೀಕರಣ (Shooting) ನೆಡೆಯುತ್ತಿದ್ದು, ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದಾರೆ.

    ಬಹಳ ದಿನಗಳ ನಂತರ ನಿಖಿಲ್ ಹಾಗೂ ಶಿವಣ್ಣ ಭೇಟಿ ಮಾಡಿದ್ದು ಒಂದಿಷ್ಟು ಸಮಯ ಒಟ್ಟಿಗೆ ಕಾಲ ಕಳೆದಿದ್ದಾರೆ. ಸಿನಿಮಾ ವಿಚಾರ ಹೊರೆತು ಪಡಿಸಿ ಒಂದಿಷ್ಟು ವಯಕ್ತಿಕ ವಿಚಾರವಾಗಿಯೂ ಶಿವಣ್ಣ ಹಾಗೂ ನಿಖಿಲ್ ಚರ್ಚೆ ಮಾಡಿದ್ದಾರೆ. ಇದೇ ಸಮಯದಲ್ಲಿ ಲೈಕಾ ಸಂಸ್ಥೆ ನಿರ್ಮಾಣ ಮಾಡ್ತಿರೋ ಸಿನಿಮಾ ಬಗ್ಗೆಯೂ ಶಿವಣ್ಣ ಮಾಹಿತಿ ಪಡ್ಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ

    ನಿಖಿಲ್ ಅವ್ರ ಸಿನಿಮಾದ ಚಿತ್ರೀಕರಣ ಹಳೆ ಕಟ್ಟಡ ಒಂದರ ಮೂರನೇ ಮಹಡಿಯಲ್ಲಿ ನಡೆಯುತ್ತಿತ್ತು. ಲಿಫ್ಟ್ ಇಲ್ಲದ ಕಾರಣ ನಿಖಿಲ್ ಭೇಟಿ ಮಾಡಲು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮೆಟ್ಟಿಲು ಹತ್ತಿಕೊಂಡೇ ಹೋಗಿ ನಿಖಿಲ್ ಅವ್ರನ್ನ ಭೇಟಿ ಮಾಡಿ ಹೊಸ ಸಿನಿಮಾಗೆ ಶುಭಕೋರಿದ್ರು. ಪ್ರೀತಿಯಿಂದ ತಮ್ಮನ್ನ ನೋಡಲು ಬಂದ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಅವ್ರನ್ನ ನಿಖಿಲ್  ಕೊನೆಯಲ್ಲಿ ಕಾರ್ ವರೆಗೂ ಹೋಗಿ ಬಿಟ್ಟುಬಂದ್ರು.

    ಅಣ್ಣಾವ್ರ ಕುಟುಂಬ ಹಾಗೂ ದೊಡ್ಡ ಗೌಡರ ಕುಟುಂಬ ಈಗಿನಿಂದ ಮಾತ್ರವಲ್ಲ ಹಿಂದಿನಿಂದಲೂ ಚೆನ್ನಾಗಿದ್ದಾರೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವ್ರಿಗೆ ನಿಖಿಲ್ ಡೆಡಿಕೇಷನ್ ಬಗ್ಗೆ ತುಂಬಾ ಪ್ರೀತಿ ಇತ್ತು. ಈಗ ಶಿವಣ್ಣ ಹಾಗೂ ನಿಖಿಲ್ ಭೇಟಿ ಎರಡೂ ಕುಟುಂಬದ ಬಾಂಧವ್ಯವನ್ನ ನೆನಪಿಸುತ್ತಿದೆ.

     

    ಇನ್ನು ನಿಖಿಲ್ ಅಭಿನಯ ಮಾಡುತ್ತಿರೋ ಲೈಕಾ ಸಂಸ್ಥೆ (Lyca  Production)ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಬೇಕಿದೆ. ಚಿತ್ರವನ್ನ ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣದ ಮೊದಲ ಶೆಡ್ಯೂಲ್ ಇತ್ತೀಚಿಗಷ್ಟೇ ಶುರುವಾಗಿದೆ. ಚಿತ್ರಕ್ಕೆ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಕೀಯ ಸಹವಾಸ ಬೇಡ: ಮಗನಿಗೆ ಸಲಹೆ ನೀಡಿದ ಕುಮಾರಸ್ವಾಮಿ

    ರಾಜಕೀಯ ಸಹವಾಸ ಬೇಡ: ಮಗನಿಗೆ ಸಲಹೆ ನೀಡಿದ ಕುಮಾರಸ್ವಾಮಿ

    ಗಾಗಲೇ ಎರಡು ಬಾರಿ ಚುನಾವಣೆಯಲ್ಲಿ (Election)  ಸೋತಿರುವ ನಿಖಿಲ್ ಕುಮಾರ್ (Nikhil Kumar) ಗೆ ಅತ್ಯುತ್ತಮ ಸಲಹೆಯೊಂದನ್ನು ನೀಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy). ನಿಖಿಲ್ ಗೆ ರಾಜಕೀಯ ಸಹವಾಸ ಬೇಡ. ಅವರು ಸಿನಿಮಾ (Cinema) ರಂಗದಲ್ಲೇ ಮುಂದುವರೆಯಲಿ ಎಂದು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ನಿಖಿಲ್‌ಗೆ ರಾಜಕೀಯದ ಸಹವಾಸ ಹೋಗಬೇಡ ಅಂತ ಹೇಳಿದ್ದೇನೆ. ಭಗವಂತ ಕೊಟ್ಟಿರೋ ಕಲೆಯಲ್ಲೇ ಮುಂದುವರೆಯುವಂತೆ ಹೇಳಿದ್ದೇನೆ. ಹಾಗಾಗಿ ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ’ ಎಂದು ಹೇಳಿದರು. ಇದನ್ನೂ ಓದಿ:ಬಹುಕಾಲದ ಗೆಳತಿ ಜೊತೆ ಎಂಗೇಜ್‌ ಆದ ಸಿಂಗರ್ ಅರ್ಮಾನ್ ಮಲಿಕ್

    ‘ದಯವಿಟ್ಟು ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ. ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಸಿನಿಮಾ ಮಾಡಲು ನಿಖಿಲ್ ಮುಖ ಮಾಡಿದ್ದಾರೆ. ಮಂಡ್ಯ ಎಂಪಿಗೆ ನಿಲ್ಲುವಾಗಲೂ ಬೇಡ ಅಂದಿದ್ದೆ. ನಿಖಿಲ್ ಮಂಡ್ಯದಲ್ಲಿ ನಿಲ್ಲಲು ತಯಾರು ಇರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ತಲೆ ಕೊಟ್ಟ’  ಎನ್ನುವುದು ಕುಮಾರಸ್ವಾಮಿ ಮಾತು.

    ಮುಂದುವರೆದು ಮಾತನಾಡಿದ ಅವರು, ‘ಸೋಲು ಗೆಲುವು ಇರುತ್ತೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ಜನಾಭಿಪ್ರಾಯ ಏನು ಇದೆ ಅದಕ್ಕೆ ತಲೆಬಾಗಬೇಕು. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ. ಮುಂದೆ ನೋಡೋಣ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ‌ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದು ನಿಖಿಲ್‌ಗೆ ಹೇಳಿದ್ದೇನೆ. ಭಗವಂತ ನಿಖಿಲ್‌ಗೆ ಒಂದು ಕಲೆ ಕೊಟ್ಟಿದ್ದಾನೆ. ಆ ಕಲೆಯಲ್ಲಿ‌ ಮುಂದುವರೆಯಪ್ಪಾ ಅಂತಾ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ಚುನಾವಣೆಗೆ ಬರಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗಿದೆ. ಇದೇ ರಾಮನಗರದ ಜನರು ಎಲ್ಲಾ ನೋಡ್ತಾ ಇದ್ದಾರೆ. ರಾಮನಗರವನ್ನು ಹೇಗೆ ಉದ್ಧಾರ ಮಾಡ್ತಾ ಇದಾರೆ ಅಂತಾ ನೋಡ್ತಾ ಇದೀನಿ’ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುತ್ರನನ್ನ ಗೆಲ್ಲಿಸಿಕೊಡುವಂತೆ ಕಾಂಗ್ರೆಸ್ ಮುಖಂಡನ ಮೊರೆ ಹೋದ್ರಾ ಸಿಎಂ?

    ಪುತ್ರನನ್ನ ಗೆಲ್ಲಿಸಿಕೊಡುವಂತೆ ಕಾಂಗ್ರೆಸ್ ಮುಖಂಡನ ಮೊರೆ ಹೋದ್ರಾ ಸಿಎಂ?

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿಗೆ ಏರ್ಪಟಿದ್ದು, ಸುಮಲತಾ ಅಂಬರೀಶ್ ವರ್ಸಸ್ ನಿಖಿಲ್ ಕುಮಾರಸ್ವಾಮಿ ಎಂಬತಾಗಿದೆ. ಇದೀಗ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಡುವಂತೆ ಕಾಂಗ್ರೆಸ್ ಮುಖಂಡ, ಟ್ರಬಲ್ ಶೂಟರ್, ಸಚಿವ ಡಿ.ಕೆ.ಶಿವಕುಮಾರ್ ಬಳಿ ತೆರಳಿದ್ದಾರೆ ಎನ್ನಲಾಗುತ್ತಿದೆ.

    ಜೆಡಿಎಸ್ ಈಗಾಗಲೇ ಮಂಡ್ಯದಿಂದ ನಿಖಿಲ್ ಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎಂಬುದನ್ನು ಘೋಷಣೆ ಮಾಡಿದೆ. ಇತ್ತ ಸುಮಲತಾ ಅಂಬರೀಶ್ ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ . ಕಾಂಗ್ರೆಸ್ ಟಿಕೆಟ್ ನೀಡದಿದ್ದರೂ ಪರವಾಗಿಲ್ಲ, ಪಕ್ಷೇತರಳಾಗಿಯೇ ಸ್ಪರ್ಧೆ ಮಾಡಲಿದ್ದೇನೆ ಎಂಬ ಸಂದೇಶವನ್ನು ಕೈ ನಾಯಕರಿಗೆ ಸಂದೇಶವನ್ನು ಸುಮಲತಾ ರವಾನಿಸಿದ್ದಾರೆ. ಹೀಗಾಗಿ ಸುಮಲತಾರು ಅನುಕಂಪದ ಆಧಾರದ ಮೇಲೆ ಗೆಲುವು ಸಾಧಿಸಿದ್ರೆ, ಪುತ್ರನ ಸೋಲಾಗುತ್ತದೆ. ಹೀಗಾಗಿ ಪುತ್ರನನ್ನ ಗೆಲ್ಲಿಸಿಕೊಡಿ ಎಂದು ಸಿಎಂ ಕೇಳಿದ್ದಾರಂತೆ.

    ಈ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದು, ಸಂಜೆ 5.30ಕ್ಕೆ ಎಲ್ಲ ಸ್ಥಳೀಯ ನಾಯಕರಿಗೆ ತಮ್ಮ ನಿವಾಸಕ್ಕೆ ಆಗಮಿಸುವಂತೆ ಕರೆ ನೀಡಿದ್ದಾರೆ. ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಡಿ.ಕೆ.ಶಿವಕುಮಾರ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೇವೇಗೌಡರು ನೀಡಿರುವ ಜವಾಬ್ದಾರಿಯನ್ನು ಉಸಿರು ಇರೋವರೆಗೂ ನಿರ್ವಹಿಸ್ತೀನಿ: ನಿಖಿಲ್ ಕುಮಾರ್

    ದೇವೇಗೌಡರು ನೀಡಿರುವ ಜವಾಬ್ದಾರಿಯನ್ನು ಉಸಿರು ಇರೋವರೆಗೂ ನಿರ್ವಹಿಸ್ತೀನಿ: ನಿಖಿಲ್ ಕುಮಾರ್

    ಮಂಗಳೂರು: ನಮ್ಮ ಪಕ್ಷದ ವರಿಷ್ಠರಾಗಿರುವ ಹೆಚ್.ಡಿ.ದೇವೇಗೌಡರು ನೀಡಿರುವ ಜವಾಬ್ದಾರಿಯನ್ನು ನನ್ನ ಉಸಿರು ಇರೋವರೆಗೂ ನಿರ್ವಹಿಸುತ್ತೇನೆ ಎಂದು ಸಿಎಂ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಶಿವರಾತ್ರಿ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿ ಸ್ವಾಮಿ ಮಂಜುನಾಥನ ದರ್ಶನ ಪಡೆದ ನಿಖಿಲ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದರು. ದೇವೇಗೌಡರು ನಮ್ಮಂತಹ ಯುವಕರಿಗೆ ಸ್ಫೂರ್ತಿಯಾಗಿದ್ದು, ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಅವರು ಕೊಟ್ಟಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸುತ್ತೇನೆ ಎಂಬ ವಿಶ್ವಾಸ ನನ್ನಲಿದೆ. ಇಂದು ಅಧಿಕೃತವಾಗಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಸಂತೋಷ ತಂದಿದೆ ಎಂದು ಹೇಳಿದರು.

    ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿದೆ. ವರಿಷ್ಠರು ತೀರ್ಮಾನಿಸಿದಂತೆ ಚುನಾವಣೆಗೆ ನಿಲ್ಲಬೇಕು. ಮಂಡ್ಯ ಜನರ ಋಣ ತೀರಿಸುವ ಅವಕಾಶವನ್ನು ದೇವೇಗೌಡರು ನೀಡಿದ್ದಾರೆ. ಸುಮಲತಾ ಅಂಬರೀಷ್ ಅವರ ಸ್ಪರ್ಧೆಯ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಎಲ್ಲರಿಗೂ ಚುನಾವಣೆಗೆ ನಿಲ್ಲಲು, ಪಕ್ಷೇತರರಾಗಿ ಸ್ಪರ್ಧಿಸುವ ಹಕ್ಕು ಇದೆ. ಇದಕ್ಕಿಂತ ಹೆಚ್ಚಿಗೆ ನಾನು ಏನು ಹೇಳಲಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಜ್ವಲ್, ಸೂರಜ್ ರೇವಣ್ಣ, ನಿಖಿಲ್ ಕುಮಾರ್-ಯಾರಿಗೆ ಸಿಗುತ್ತೆ ಲೋಕಸಭೆಯ ಟಿಕೆಟ್?

    ಪ್ರಜ್ವಲ್, ಸೂರಜ್ ರೇವಣ್ಣ, ನಿಖಿಲ್ ಕುಮಾರ್-ಯಾರಿಗೆ ಸಿಗುತ್ತೆ ಲೋಕಸಭೆಯ ಟಿಕೆಟ್?

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಯಾರು ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆಂಬ ಚರ್ಚೆಗಳು ದಳ ಅಂಗಳದಲ್ಲಿ ಆರಂಭವಾಗಿವೆ. ಈಗಾಗಲೇ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸಹ ಮಂಡ್ಯ ರಾಜಕಾರಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ವಿಧಾನಸಭಾ ಚುನಾವಣೆಯ ಬಳಿಕ ಪ್ರಜ್ವಲ್ ರೇವಣ್ಣ ಹಾಸನದಿಂದ ಮತ್ತು ನಿಖಿಲ್ ಕುಮಾರ್ ಮಂಡ್ಯದಿಂದಲೇ ಸ್ಪರ್ಧೆ ಮಾಡ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳಿಗೆ ಪೂರಕ ಎಂಬಂತೆ ದೇವೇಗೌಡರು ಸಹ ಹಾಸನದಿಂದ ಪ್ರಜ್ವಲ್ ಸ್ಪರ್ಧೆ ಎಂದು ಘೋಷಣೆ ಮಾಡಿದ್ದರು. ಆದ್ರೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಮೈತ್ರಿ ಕಾಂಗ್ರೆಸ್ ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ತಾವೇ ಸ್ಪರ್ಧೆ ಮಾಡಬೇಕೆಂದು ತೀರ್ಮಾನಿಸಿದ್ದಾರಂತೆ. ಇತ್ತ ರೇವಣ್ಣ ಅವರ ಮತ್ತೋರ್ವ ಪುತ್ರ ಸೂರಜ್ ರೇವಣ್ಣರ ಹೆಸರು ಸಹ ಹರಿದಾಡುತ್ತಿದೆ.

    ಮಂಡ್ಯ ಟಿಕೆಟ್ ಸಿಗುವ ಭರವಸೆ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಮಂಡ್ಯದ ಅಂಬರೀಶ್ ಅಭಿಮಾನಿಗಳು ಸುಮಲತಾ ಅವರೇ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ಹೊರಹಾಕಿದ್ದಾರೆ. ಚುನಾವಣೆಯ ಸ್ಪರ್ಧೆಯ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸುಮಲತಾ ಚರ್ಚಿಸಿದ್ದಾರೆ.

    ಸುಮಲತಾರ ಸ್ಪರ್ಧೆ ಖಚಿತವಾಗುತ್ತಿದ್ದಂತೆಯೇ ದೊಡ್ಡಗೌಡರು ಮೊಮ್ಮಗನಿಗೆ ಈ ಬಾರಿ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣರ ಸ್ಪರ್ಧೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ರೆ, ತಾವೇ ಸ್ಪರ್ಧೆ ಮಾಡುವ ಕುರಿತು ದೊಡ್ಡಗೌಡರು ಲೆಕ್ಕ ಹಾಕಿದ್ದಾರಂತೆ. ಹಾಸನದಿಂದ ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಪ್ರಜ್ವಲ್ ರೇವಣ್ಣ ಮೈಸೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಮಂಡ್ಯದಿಂದ ಟಿಕೆಟ್ ಸಿಗದೇ ಇದ್ರೆ ನಿಖಿಲ್ ಕುಮಾರಸ್ವಾಮಿ ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡೋದು ಒಳಿತಲ್ಲ ಎಂದು ದೇವೇಗೌಡರು ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯ ರಾಜಕಾರಣದ ರಿಯಲ್ ಮಹಾಭಾರತ !

    ರಾಜ್ಯ ರಾಜಕಾರಣದ ರಿಯಲ್ ಮಹಾಭಾರತ !

    -ಚಕ್ರವ್ಯೂಹ ಭೇದಿಸಲು ಹೊರಟ ಅಭಿಮನ್ಯುವಿನ ಉತ್ಸಾಹಕ್ಕೆ ಬ್ರೇಕ್

    ಬೆಂಗಳೂರು: ಇದು ರಾಜ್ಯ ರಾಜಕಾರಣದ ದೊಡ್ಡ ಮನೆಯ ಮಹಾಭಾರತದ ಕಥೆ. ಲೋಕಸಭೆ ಚಕ್ರವ್ಯೂಹ ಭೇದಿಲು ಮುಂದಾಗಿದ್ದ ಆಧುನಿಕ ಅಭಿಮನ್ಯು ನಿಖಿಲ್ ಕುಮಾರಸ್ವಾಮಿ ಉತ್ಸಾಹಕ್ಕೆ ದೊಡ್ಡ ಗೌಡರು ಅಂದ್ರೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ನಿಲ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಸಂಬಂಧ ನಿಖಿಲ್ ಸಹ ಪದೇ ಪದೇ ಮಂಡ್ಯಕ್ಕೆ ಭೇಟಿ ನೀಡಿದ್ದರು. ಮಂಡ್ಯ ಕ್ಷೇತ್ರದ ಪರಿಸರ ತುಂಬಾ ವಿಭಿನ್ನವಾಗಿದ್ದು, ದೋಸ್ತಿ ಪಕ್ಷಗಳೆರೆಡು ಪ್ರಬಲವಾಗಿವೆ. ಈ ಹಿನ್ನೆಲೆಯಲ್ಲಿ ನಿಖಿಲ್ ಮಂಡ್ಯಕ್ಕೆ ಕ್ಷೇತ್ರಕ್ಕೆ ಭೇಟಿ ನೀಡೋದನ್ನು ಕಡಿಮೆ ಮಾಡಬೇಕು ಎಂಬ ಸಂದೇಶವನ್ನು ದೇವೇಗೌಡರು ಮೊಮ್ಮಗನಿಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಮಂಡ್ಯ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕೆಂಬ ಸೂಕ್ಷ್ಮ ಗೊಂದಲಗಳು ಮೈತ್ರಿಯಲ್ಲಿದೆ. ಜೆಡಿಎಸ್ ನಲ್ಲಿಯೇ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸದ್ಯದ ಸಂಸದ ಶಿವರಾಮೇಗೌಡರು ಮತ್ತು ಲಕ್ಷ್ಮಿ ಅಶ್ವಿನ್ ಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇತ್ತ ಕಾಂಗ್ರೆಸ್‍ನಲ್ಲಿ ದಿ.ಅಂಬರೀಶ್ ಅವರ ಪತ್ನಿ ಅಥವಾ ಪುತ್ರನನ್ನು ಚುನಾವಣೆ ಕಣಕ್ಕೆ ಇಳಿಸಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಮಾಜಿ ಸಂಸದೆ ರಮ್ಯಾ ಸಹ ಮಂಡ್ಯ ಕ್ಷೇತ್ರದ ಮೇಲೆ ಒಂದು ಕಣ್ಣೀಟ್ಟಿದ್ದಾರೆ ಎನ್ನಲಾಗುತ್ತಿದೆ.

    ದಾಯಾದಿ ಕಲಹಕ್ಕೆ ವೇದಿಕೆಯಾಗುತ್ತಾ ಮಂಡ್ಯ?
    ಈ ಹಿಂದೆ ಜೆಡಿಎಸ್ ನಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ವಿಧಾನಸಭಾ ಕ್ಷೇತ್ರಕ್ಕೆ ನೀಡುವ ವಿಚಾರ ಪ್ರಸ್ತಾಪವಾದಾಗ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅಸಮಾಧಾನ ಹೊರಹಾಕಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಚುನಾವಣಾ ಕಣಕ್ಕೀಳಿಯುವುದು ಬಹುತೇಕ ಖಚಿತವಾಗಿದೆ. ಒರ್ವ ಮೊಮ್ಮಗನಿಗೆ ಟಿಕೆಟ್ ಕೊಟ್ಟು ಮತ್ತೋರ್ವನಿಗೆ ಕೊಡದೇ ಇದ್ರೆ ಕುಟುಂಬದಲ್ಲಿಯೇ ಭಿನ್ನಮತ ಸ್ಫೋಟವಾಗುತ್ತಾ? ಅಥವಾ ದೊಡ್ಡ ಗೌಡರ ಆದೇಶವನ್ನು ಒಪ್ಪಿಕೊಳ್ತಾರಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ದೇವೇಗೌಡರ ಈ ಸೂಚನೆಯಿಂದಾಗಿ ರಣೋತ್ಸಾಹದಲ್ಲಿದ್ದ ನಿಖಿಲ್ ಕುಮಾರ್ ಅವರಿಗೆ ಬೇಸರ ತಂದಿರೋದು ಸತ್ಯ. ಮಂಡ್ಯದಲ್ಲಿ ಬೇರೆ ಬೇರೆ ರೀತಿಯ ರಾಜಕೀಯ ಧೃವೀಕರಣದ ಬೆಳವಣಿಗೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಗೌಡರು ಕಾದು ನೋಡುವ ತಂತ್ರಕ್ಕೆ ಮುಂದಾದಂತೆ ಕಾಣುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

    ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

    ಬೆಂಗಳೂರು: ನಿಖಿಲ್ ನಾಯಕನಾಗಿ ನಟಿಸಿರೋ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆಯಾಗಿದೆ. ಆರಂಭದಿಂದಲೂ ಭರ್ಜರಿ ಫ್ಯಾಮಿಲಿ ಎಂಟರ್ ಟೇನರ್ ಎಂಬ ಸುಳಿವಿನೊಂದಿಗೆ ಎಲ್ಲರನ್ನು ಈ ಸಿನಿಮಾ ಸೆಳೆದುಕೊಂಡಿತ್ತು. ಅಂಥಾ ಅಗಾಧ ನಿರೀಕ್ಷೆಯಿಟ್ಟುಕೊಂಡು ಥೇಟರು ಹೊಕ್ಕ ಪ್ರತೀ ಪ್ರೇಕ್ಷಕರನ್ನೂ ಸೀತಾರಾಮ ಖುಷಿಗೊಳಿಸಿದ್ದಾನೆ.

    ಇಡೀ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯುವಂತಿರೋದು ನಿರ್ದೇಶಕ ಎ ಹರ್ಷ ಅವರ ಜಾಣ್ಮೆ ಬೆರೆತ ಕಸುಬುದಾರಿಕೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಮುದ ನೀಡುವಂತೆ, ಸಿಎಂ ಮಗನೇ ನಾಯಕನಾದ್ದರಿಂದ ಆ ದೃಷ್ಟಿಯಲ್ಲಿಯೂ ಕುಂದುಂಟಾಗದಂತೆ ಮತ್ತು ಯಾವುದನ್ನೂ ಉದ್ದೇಶಪೂರ್ವಕವಾಗಿ ತುರುಕಲಾಗಿದೆ ಎಂಬಂಥಾ ಭಾವವೇ ಕಾಡದಂತೆ ಹರ್ಷ ಇಡೀ ಚಿತ್ರವನ್ನ ರೂಪಿಸಿದ್ದಾರೆ.

    ಸೀತಾರಾಮ ಕಲ್ಯಾಣ ದೊಡ್ಡ ಕ್ಯಾನ್ವಾಸಿನ ಸಿನಿಮಾ. ನಿಖಿಲ್ ಇಲ್ಲಿ ಆರ್ಯ ಎಂಬ ಲವಲವಿಕೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಆರ್ಯ ಗೆಳೆಯನ ಮದುವೆಯ ನಿಮಿತ್ತವಾಗಿ ಆತನ ದೊಡ್ಡ ಕುಟುಂಬವೊಂದರ ಪರಿಸರಕ್ಕೆ ಎಂಟ್ರಿ ಕೊಡುತ್ತಾನೆ. ಮದುವೆ ಮುಗಿಯೋ ಹೊತ್ತಿಗೆಲ್ಲ ಆರ್ಯನಿಗೆ ಆ ದೊಡ್ಡ ಮನೆ ಯಜಮಾನನ ಮಗಳ ಮೇಲೆಯೇ ಪ್ರೀತಿ ಮೂಡಿ ಬಿಟ್ಟಿರುತ್ತೆ. ನಂತರವೂ ಪವಾಡವೆಂಬಂತೆ ಆ ಹುಡುಗಿಯೊಂದಿಗೇ ಆರ್ಯನ ಪ್ರೇಮ ಮುಂದುವರೆಯುತ್ತೆ. ಆದರೆ ಈ ಪ್ರೀತಿಯ ಹಿನ್ನೆಲೆಯಲ್ಲಿಯೇ ಆ ಎರಡು ಕುಟುಂಬಗಳ ನಂಟು, ದ್ವೇಷದ ಪ್ಲ್ಯಾಶ್ ಬ್ಯಾಕೂ ತೆರೆದುಕೊಳ್ಳುತ್ತೆ. ಅದೆಂಥಾದ್ದೆಂಬುದನ್ನ ಸೀತಾರಾಮ ಕಲ್ಯಾಣವನ್ನ ನೋಡಿಯೇ ತಿಳಿದುಕೊಳ್ಳೋದು ಉತ್ತಮ.

    ಇನ್ನುಳಿದಂತೆ ಫ್ಯಾಮಿಲಿಯಾಚೆಗೆ ಜನನಾಯಕನಾಗಿಯೂ ನಿಖಿಲ್ ಮಿಂಚಿದ್ದಾರೆ. ರೈತಪರವಾದ ಸೀನುಗಳೂ ಸ್ಫೂರ್ತಿದಾಯಕವಾಗಿವೆ. ರಘು ನಿಡುವಳ್ಳಿಯವರ ಸಂಭಾಷಣೆಯೂ ಕಥೆಯ ಓಘಕ್ಕೆ ಪೂರಕವಾಗಿದೆ. ಸಾಹಸ, ಸೆಂಟಿಮೆಂಟು ಸೇರಿದಂತೆ ಎಲ್ಲವೂ ಬೆರಗಾಗುವಂತಿವೆ. ಶರತ್ ಕುಮಾರ್, ರವಿಶಂಕರ್, ಮಧುಬಾಲಾ ಮುಂತಾದವರೂ ಕೂಡಾ ಬೇರೆಯದ್ದೇ ಥರದ ಪಾತ್ರಗಳಲ್ಲಿ ಆವರಿಸಿಕೊಳ್ಳುತ್ತಾರೆ. ರಚಿತಾ ಕೂಡಾ ಮುದ್ದಾಗಿ ನಟಿಸಿದ್ದಾರೆ. ನಿಖಿಲ್ ಎಲ್ಲ ರೀತಿಯಲ್ಲಿಯೂ ಫುಲ್ ಮಾಕ್ರ್ಸ್ ಪಡೆದುಕೊಳ್ಳುತ್ತಾರೆ. ಸಂಗೀತ, ಸಾಹಸ, ಛಾಯಾಗ್ರಹಣ… ಹೀಗೆ ಎಲ್ಲ ವಿಭಾಗಗಳಲ್ಲಿಯೂ ಹೊಸತನವಿದೆ. ಅದುವೇ ಸೀತಾರಾಮ ಕಲ್ಯಾಣವನ್ನು ಮತ್ತಷ್ಟು ಆಕರ್ಷಕವಾಗಿದೆ.

    https://www.youtube.com/watch?v=GaXuYAfqGQg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಷೇಕ್ ನಿಂತ್ರೂ ಅವರ ವಿರುದ್ಧ ಪ್ರಚಾರ ಮಾಡ್ತೀನಿ: ನಿಖಿಲ್ ಕುಮಾರ್

    ಅಭಿಷೇಕ್ ನಿಂತ್ರೂ ಅವರ ವಿರುದ್ಧ ಪ್ರಚಾರ ಮಾಡ್ತೀನಿ: ನಿಖಿಲ್ ಕುಮಾರ್

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹಿರಿಯ ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ರೆ ನಾನು ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ನಟ, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಸೀತಾರಾಮ ಕಲ್ಯಾಣ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರ್, ಈಗಾಗಲೇ ನಾನು ರಾಜಕೀಯದಲ್ಲಿದ್ದೇನೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದೆ. ಎಲ್ಲಿಯೇ ನಮ್ಮ ಅಭ್ಯರ್ಥಿಗಳು ನಿಂತರೂ ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರೆ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್‍ನಿಂದ ಅಭಿಷೇಕ್ ಸ್ಪರ್ಧೆ ಮಾಡಿದ್ರೂ ನಾನು ಜೆಡಿಎಸ್ ಪರವಾಗಿಯೇ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಭಿಷೇಕ್ ಮತ್ತು ನಿಖಿಲ್ ಸ್ಪರ್ಧೆ ಮಾಡ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ವಿಷಯವಾಗಿ ಅಭಿ ಮತ್ತು ನಾನು ಫೋನ್ ನಲ್ಲಿ ಮಾತಾಡಿದ್ದುಂಟು. ಚುನಾವಣೆಗೆ ಸ್ಪರ್ಧೆ ಮಾಡ್ತೀರಾ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರ್, ಪಕ್ಷದ ಮುಖಂಡರು ಮತ್ತು ಹಿರಿಯರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ:  ಅಂಬರೀಶ್ ಕುಟುಂಬಕ್ಕೆ ಪರೋಕ್ಷವಾಗಿ ಮಂಡ್ಯ ಟಿಕೆಟ್ ನಿರಾಕರಿಸಿದ ಸಿಎಂ ಎಚ್‍ಡಿಕೆ

    ಈಗಾಗಲೇ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ. ಇತ್ತ ನಿಖಿಲ್ ಕುಮಾರಸ್ವಾಮಿ ಸಹ ಚುನಾವಣಾ ಅಖಾಡಕ್ಕೆ ಇಳಿಯಲು ದೊಡ್ಡಗೌಡರು ಗ್ರೀನ್ ಸಿಗ್ನಲ್ ನೀಡ್ತಾರಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅಭಿಷೇಕ್ ಅವರನ್ನು ಕಾಂಗ್ರೆಸ್‍ನಿಂದ ಟಿಕೆಟ್ ನೀಡಬೇಕು ಎಂಬ ಮಾತುಗಳ ಕೈ ಪಾಳಯದಲ್ಲಿ ಕೇಳಿ ಬರುತ್ತಿವೆ.

    ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿ ರಚಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮಂಡ್ಯದಿಂದ ಯಾರಿಗೆ ಟಿಕೆಟ್ ನೀಡುತ್ತೆ ಎಂಬ ವಿಚಾರ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ. 2018ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿತ್ತು. ಚುನಾವಣೆಯಲ್ಲಿ ಶಿವರಾಮೇಗೌಡರು ಗೆಲುವು ಸಾಧಿಸಿ ಸಂಸದರಾಗಿದ್ದಾರೆ. ಇದೇ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಮಾಜಿ ಸಂಸದೆ ರಮ್ಯಾ ಮತ್ತು ಜೆಡಿಎಸ್ ನಾಯಕಿ ಲಕ್ಷ್ಮಿ ಅಶ್ವಿನ್‍ಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹಾಲಿ ಸಂಸದರಾಗಿರುವ ಶಿವರಾಮೇಗೌಡರು ಜೆಡಿಎಸ್ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಬೆಂಗಳೂರು: ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಎ ಹರ್ಷ. ನೃತ್ಯ ನಿರ್ದೇಶಕರಾಗಿ ಬಹು ಬೇಡಿಕೆಯಲ್ಲಿರುವಾಗಲೇ ನಿರ್ದೇಶನಕ್ಕಿಳಿದಿದ್ದ ಹರ್ಷ ಅವರದ್ದು ನಿಜಕ್ಕೂ ಕಲರ್ ಫುಲ್ ಜರ್ನಿ. ಯುವ ಆವೇಗದ ಕಥಾ ಹಂದರದಿಂದಲೇ ಗೆಲ್ಲುತ್ತಾ ಬಂದಿರೋ ಹರ್ಷ ಪಾಲಿಗೆ ನಿರ್ದೇಶಕರಾಗಿ ಸೀತಾರಾಮ ಕಲ್ಯಾಣ ಎಂಟನೇ ಸಿನಿಮಾ.

    ಇದುವರೆಗೂ ಮಾಸ್ ಶೈಲಿಯ ಸಿನಿಮಾಗಳನ್ನೇ ನಿರ್ದೇಶನ ಮಾಡಿರುವವರು ಹರ್ಷ. ಅವರು ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ಮೊದಲ ಬಾರಿಗೆ ಫ್ಯಾಮಿಲಿ ಕಥಾನಕವೊಂದನ್ನ ಹೇಳ ಹೊರಟಿದ್ದಾರೆ. ಈ ಮೂಲಕವೇ ಅವರ ಪಾಲಿಗೆ ತಮ್ಮ ಎಂಟನೇ ಚಿತ್ರ ಬಲು ಮಹತ್ವದ್ದು.

    ಸೀತಾರಾಮ ಕಲ್ಯಾಣ ಮಾಸ್ ಮತ್ತು ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ. ಇದೇ ಮೊದಲ ಸಲ ಹರ್ಷ ಎಮೋಷನಲ್ ಸನ್ನಿವೇಶಗಳ ಮೂಲಕ ಹೊಸಾ ಬಗೆಯ ಪಾತ್ರಗಳನ್ನು ಕಟ್ಟಿದ್ದಾರಂತೆ. ಹೆಸರೇ ಸೀತಾರಾಮ ಕಲ್ಯಾಣ ಅಂತಿರೋದರಿಂದ ಇದು ಲವ್, ಮದುವೆ ಸುತ್ತಮುತ್ತ ನಡೆಯೋ ಕಥೆ ಅಂತ ಬಹುತೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಸೀತಾರಾಮನ ಕಥೆ ಕಲ್ಯಾಣದಾಚೆಗೂ ಹಬ್ಬಿಕೊಂಡಿದೆ.

    ಮೊದಲ ಸಿನಿಮಾ ಜಾಗ್ವಾರ್ ನಲ್ಲಿ ನಿಖಿಲ್ ಸಕಲ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದರು. ಸೀತಾರಾಮ ಕಲ್ಯಾಣದ ಪಾತ್ರದ ಮೂಲಕ ಅವರು ತಾನೋರ್ವ ಅದ್ಭುತ ಪರ್ಫಾರ್ಮರ್ ಅನ್ನೋದನ್ನೂ ಸಾಬೀತು ಪಡಿಸಿದ್ದಾರಂತೆ. ಫ್ಯಾಮಿಲಿ, ಮಾಸ್ ಮತ್ತು ಎಮೋಷನಲ್ ಸನ್ನಿವೇಶಗಳಿಗೆಲ್ಲ ನಿಖಿಲ್ ಬೆರಗಾಗುವಂತೆ ಜೀವ ತುಂಬಿದ್ದಾರಂತೆ. ಇನ್ನು ಈವರೆಗೆ ಒಂದು ವೆರೈಟಿ ಪಾತ್ರಗಳಿಗೆ ಹೆಸರಾಗಿದ್ದ ನಟ ನಟಿಯರನೇಕರು ಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ.

    ಇಂಥಾ ನಾನಾ ವಿಶೇಷತೆಗಳೊಂದಿಗೆ ಮೂಡಿ ಬಂದಿರೋ ಸೀತಾರಾಮ ಪ್ರೇಕ್ಷಕರಿಗೆ ಕ್ಷಣ ಕ್ಷಣವೂ ಸರ್‍ಪ್ರೈಸ್ ಕೊಡೋವಂತೆ ಮೂಡಿ ಬಂದಿದೆ ಅನ್ನೋದು ಹರ್ಷ ಭರವಸೆ.

    https://www.youtube.com/watch?v=IgY3WB1V1wM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv