Tag: ನಿಖಿಲ್ ಕುಮಾರ್‍ಸ್ವಾಮಿ

  • ಸಕ್ಕರೆನಗರಿ ಮಂಡ್ಯದಲ್ಲಿ ಡಿಕೆಶಿ-ನಿಖಿಲ್ ಮುಖಾಮುಖಿ

    ಸಕ್ಕರೆನಗರಿ ಮಂಡ್ಯದಲ್ಲಿ ಡಿಕೆಶಿ-ನಿಖಿಲ್ ಮುಖಾಮುಖಿ

    ಮಂಡ್ಯ: ಎಂ.ಪಿ ಚುನಾವಣೆ ಬಳಿಕ ಜೆಡಿಎಸ್ (JDS) ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಮಂಡ್ಯದಲ್ಲಿ (Mandya) ಪರಸ್ಪರ ಭೇಟಿಯಾಗಿ, ಪರಸ್ಪರ ಕೈ ಕುಲುಕಿ, ಉಭಯ ಕುಶಲೋಪರಿ ವಿಚಾರಿಸಿದರು.

    ನಿಖಿಲ್ ಮತ್ತು ಡಿಕೆಶಿ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ಮುಖಾಮುಖಿ ಆಗಿದ್ದಾರೆ. ಮಾಜಿ ಸಚಿವ ಕೆ.ವಿ.ಶಂಕರಗೌಡರ ಪತ್ನಿ ನಿಧನ ಹಿನ್ನೆಲೆ ಸಾಂತ್ವನ ಹೇಳಲು ಬಂದಿದ್ದ ವೇಳೆ ಇಬ್ಬರು ಪರಸ್ಪರ ಭೇಟಿಯಾಗಿದ್ದಾರೆ. ಚೆಲುವರಾಯಸ್ವಾಮಿಯನ್ನು ಚೆಲುವಣ್ಣ ಎಂದು ಆತ್ಮೀಯವಾಗಿ ಮಾತನಾಡಿಸಿದ ನಿಖಿಲ್, ಕೆಲ ಕಾಂಗ್ರೆಸ್ಸಿಗರ ಕೈ ಕುಲುಕಿ ಮಾತಾಡಿಸಿದರು. ಇದನ್ನೂ ಓದಿ: ನಾಳೆಯಿಂದ ಮತ್ತೆ ಘರ್ಜಿಸಲಿದೆ ಬುಲ್ಡೋಜರ್; ಮಾರ್ಕಿಂಗ್‌ಗೆ ಪೇಂಟಿಂಗ್ ಮಾಡಿರೋ ಕಿಡಿಗೇಡಿಗಳು

    ಕೆ.ವಿ.ಶಂಕರಗೌಡರ ಪತ್ನಿ ನಿಧನ ಹಿನ್ನೆಲೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಜೆಡಿಎಸ್-ಕಾಂಗ್ರೆಸ್ ನಾಯಕರು ತೆರಳಿದ್ದರು. ಈ ವೇಳೆ ಸಾಂತ್ವನ ಹೇಳಿ ನಿಖಿಲ್ ಕುಮಾರಸ್ವಾಮಿ ವಾಪಸ್ ಆಗ್ತಿದ್ದರು, ಈ ವೇಳೆ ಸಾಂತ್ವನ ಹೇಳಲು ಆಗ್ತಾನೇ ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದರು ಈ ವೇಳೆ ಉಭಯ ನಾಯಕರಾದ ಡಿಕೆಶಿ ಮತ್ತು ನಿಖಿಲ್ ಪರಸ್ಪರ ಕೈ ಕುಲುಕಿ ಕೆಲಕಾಲ ಉಭಯ ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ನಿಖಿಲ್ ಎದೆ ಮತ್ತು ಭುಜಕ್ಕೆ ಗುದ್ದಿದ ಡಿಕೆಶಿ ಬಳಿಕ ಮಾತು ಮುಂದುವರಿಸಿದರು. ಇದನ್ನೂ ಓದಿ: ಎಲಿಜಬೆತ್-II ಅಂತ್ಯಕ್ರಿಯೆ ಹಿನ್ನೆಲೆ ಬ್ರಿಟನ್‍ಗೆ ತೆರಳಿದ ದ್ರೌಪದಿ ಮುರ್ಮು

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸಾಹೇಬರು ಒಬ್ಬ ಅನುಭವಿ ರಾಜಕಾರಣಿ. ಆಕಸ್ಮಿಕವಾಗಿ ಇಬ್ಬರೂ ಭೇಟಿಯಾಗಿದ್ದು ಅಷ್ಟೇ. ಬೇರೆ ಏನು ಇಲ್ಲ. ಚಲುವರಾಯಸ್ವಾಮಿ ಅವರನ್ನು ಕೈ ಕುಲುಕಿ ಉಭಯ ಕುಶಲೋಪರಿ ವಿಚಾರಿಸಿದ್ದೇನೆ. ರಾಜಕೀಯವಾಗಿ ನಮ್ಮ ಭಿನ್ನಾಭಿಪ್ರಾಯ ಏನೇ ಇರಬಹುದು. ರಾಜಕೀಯವಾಗಿ ಉತ್ತರ ಕೊಡ್ತೇವೆ. ಅದನ್ನು ಹೊರತು ಪಡಿಸಿದ್ರೆ, ಯಾರ ಮೇಲೂ ನಮಗೆ ಅಸಮಾಧಾನ ಇಲ್ಲ. ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣೋದು ನಮ್ಮ ಸಂಸ್ಕೃತಿ. ಅದಕ್ಕೆಲ್ಲಾ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

    Live Tv
    [brid partner=56869869 player=32851 video=960834 autoplay=true]