Tag: ನಿಖಿಲ್ ಕುಮಾರ್

  • ರಾಮಮಂದಿರ ಉದ್ಘಾಟನೆ ದಿನದಂದೇ ನಿಖಿಲ್ ಹುಟ್ಟುಹಬ್ಬ: ಖುಷಿ ಹಂಚಿಕೊಂಡ ನಟ

    ರಾಮಮಂದಿರ ಉದ್ಘಾಟನೆ ದಿನದಂದೇ ನಿಖಿಲ್ ಹುಟ್ಟುಹಬ್ಬ: ಖುಷಿ ಹಂಚಿಕೊಂಡ ನಟ

    ನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ (Ram Mandir) ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗಣ್ಯರು, ರಾಜಕಾರಣಿಗಳು ಸೇರಿದಂತೆ ಚಿತ್ರರಂಗದವರು ಭಾಗಿಯಾಗಲಿದ್ದಾರೆ. ದಕ್ಷಿಣದ ಕೆಲವೇ ಕೆಲವು ನಟರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಸಿಕ್ಕಿದೆ. ಈಗಾಗಲೇ ಸಾಕಷ್ಟು ನಟರಿಗೆ ಆಹ್ವಾನ ಸಿಕ್ಕಿದೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಆದರೆ ಇಂದು ನಟ ನಿಖಿಲ್ ಕುಮಾರ್ ಅವರಿಗೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಸಿಕ್ಕಿದೆ.

    ನಟ ನಿಖಿಲ್ ಕುಮಾರಸ್ವಾಮಿ  (Nikhil Kumar)ಹಾಗೂ ಇಡೀ ಕುಟುಂಬಕ್ಕೆ ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಹ್ವಾನ ಪತ್ರಿಕೆ ನೀಡಿದ್ದು, ಜನವರಿ 22ರಂದು ನಡೆಯಲಿರುವ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

    ಇನ್ನು ವಿಶೇಷ ಅಂದ್ರೆ ಜನವರಿ 22 ರಂದು ನಟ ನಿಖಿಲ್ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬವನ್ನ (Birthday)  ಆಚರಣೆ ಮಾಡಿಕೊಳ್ಳಲಿದ್ದಾರೆ. ಹಾಗಾಗಿ ಈ ಭಾರಿಯ ಹುಟ್ಟುಹಬ್ಬ ಮತ್ತಷ್ಟು ವಿಶೇಷವಾಗಲಿದ್ದು ಅಯೋದ್ಯೆಯ ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಳ್ಳಲಿದ್ದಾರೆ.

     

    ಶ್ರೀ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿರೋ ವಿಚಾರವಾಗಿ ನಟ ನಿಖಿಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ರಾಮ ಜನ್ಮಭೂಮಿ ಟ್ರಸ್ಟ್ ಗೆ ಈ ಮೂಲಕ ಧನ್ಯವಾದ ತಿಳಿಸಿದ್ದಾರೆ. ರಾಮಮಂದಿರದ ಸೇವಾ ಕೈಂಕರ್ಯದಲ್ಲಿ ಭಾಗಿಯಾಗುವುದು ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.

  • ರಾಮಮಂದಿರ ಉದ್ಘಾಟನೆಗೆ ನಿಖಿಲ್ ಗೆ ಬಂತು ಆಹ್ವಾನ

    ರಾಮಮಂದಿರ ಉದ್ಘಾಟನೆಗೆ ನಿಖಿಲ್ ಗೆ ಬಂತು ಆಹ್ವಾನ

    ಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ (Nikhil Kumar) ಅವರಿಗೆ ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಜನವರಿ 22 ರಂದು ನಡೆಯಲಿರುವ ಉದ್ಘಾಟನೆಗೆ ಕುಟುಂಬ ಸಮೇತ ಬರುವಂತೆ, ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಹ್ವಾನ ನೀಡಲಾಗಿದೆ.

    ಈ ಹಿಂದೆ  ರಿಷಬ್ ಶೆಟ್ಟಿ ಅವರಿಗೂ ಆಹ್ವಾನ ನೀಡಲಾಗಿದೆ. ಅಲ್ಲದೇ, ಯಶ್ ಅವರಿಗೂ ಬರುವಂತೆ ಆಹ್ವಾನ ನೀಡಲಾಗಿದೆಯಂತೆ. ಕನ್ನಡ ಸಿನಿಮಾ ರಂಗದ ಬೆರಳೆಣಿಕೆಯ ಕಲಾವಿದರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ.

    ಒಂದು ಕಡೆ ಉದ್ಘಾಟನೆಗೆ ಆಹ್ವಾನ ಸಿಗುತ್ತಿದ್ದರೆ ಮತ್ತೊಂದು ಕಡೆ ಸಿನಿಮಾ ಸೆಲೆಬ್ರಿಟಿಗಳು ಕೂಡ ದೇಣಿಗೆ ನೀಡುತ್ತಿದ್ದಾರೆ. ಹುಭಾಷಾ ನಟಿ ಪ್ರಣೀತಾ ಸುಭಾಷ್(Pranitha Subhash), ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. 1 ಲಕ್ಷ ದೇಣಿಗೆ ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ನಟಿ  ಪಾತ್ರರಾಗಿದ್ದಾರೆ.

    ಅಯೋಧ್ಯೆಯ ಶ್ರೀ ರಾಮಮಂದಿರ (Ram Mandir) ನಿಧಿ ಸಮರ್ಪಣ ಅಭಿಯಾನಕ್ಕೆ ಬೆಂಬಲಿಸಿ 1 ಲಕ್ಷ ರೂ. ನಟಿ ನೀಡಿದ್ದಾರೆ. ಈ ಕುರಿತು ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    ಇದೊಂದು ಐತಿಹಾಸಿಕ ಚಳುವಳಿ ಎಂದು ಬರೆದು ನಟಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವೆಲ್ಲರೂ ಕೈಜೋಡಿಸಿ ಇದರ ಭಾಗವಾಗಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಣೀತಾ ಮನವಿ ಮಾಡಿದ್ದಾರೆ.

  • ‘ಯುವರಾಜ’ ನಿಖಿಲ್ ಹುಡುಕಿಕೊಂಡು ಸೆಟ್‌ಗೆ ಬಂದ ‘ಭೀಮ’

    ‘ಯುವರಾಜ’ ನಿಖಿಲ್ ಹುಡುಕಿಕೊಂಡು ಸೆಟ್‌ಗೆ ಬಂದ ‘ಭೀಮ’

    ನಿಖಿಲ್ ಕುಮಾರ್ ಸ್ವಾಮಿ  (Nikhil Kumar) ನಟನೆಯ ಹೊಸ ಸಿನಿಮಾದ ಶೂಟಿಂಗ್ ದಾಸನಪುರ ಎಪಿಎಂಸಿ ಜಾಗದಲ್ಲಿ ನಡೆಯುತ್ತಿದೆ. ಚಿತ್ರೀಕರಣ ನಡೆಯುವ ಜಾಗದಲ್ಲಿ ನಟ ದುನಿಯಾ ವಿಜಯ್ (Duniya Vijay) ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ನೋಡುವುದಕ್ಕಾಗಿಯೇ ಅವರು ದಾಸನಪುರದ ಎಪಿಎಂಸಿ ಜಾಗಕ್ಕೆ ಆಗಮಿಸಿದ್ದರು. ತುಂಬಾ ಹೊತ್ತು ಶೂಟಿಂಗ್ (Shooting) ಸೆಟ್ ನಲ್ಲಿ ಕುಳಿತಿದ್ದ ದುನಿಯಾ ವಿಜಯ್, ನಂತರ ಚಿತ್ರೀಕರಣ ಕುರಿತಂತೆ ಮಾತನಾಡಿದರು.

    ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸುಭಾಸ್ಕರನ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಲಕ್ಷ್ಮಣ್ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.

    ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ.  ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ಅವರ ಪಾತ್ರ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಸಿನಿರಸಿಕರಿಗೆ ಸಾಕಷ್ಟು ನಿರೀಕ್ಷೆಯಿದೆ.

    ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ವಂಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಅನೇಕರು ಶೂಟಿಂಗ್ ಸೆಟ್‌ಗೆ ಭೇಟಿ ಕೊಟ್ಟು ಕುತೂಹಲವನ್ನಂತೂ ಮೂಡಿಸಿದ್ದಾರೆ.

     

    ಈ ಸಿನಿಮಾದ ಮೂಲಕ ಬಾಲಿವುಡ್ ನಟಿ ಯುಕ್ತಿ ತಾರೇಜ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಇದು ಇವರ ದಕ್ಷಿಣದ ಎರಡನೇ ಚಿತ್ರವಾದರೆ, ಕನ್ನಡದಲ್ಲಿ ಮೊದಲು. ನಟ ನಾಗಶೌರ್ಯ ಜೊತೆ ರಂಗಾಬಲಿ ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟವರು ಯುಕ್ತಿ ತಾರೇಜ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಹುಡುಗಿಯನ್ನು ಟಾಲಿವುಡ್‌ಗೆ ಕರೆತರಲಾಗಿತ್ತು.

  • ನಿಖಿಲ್ ಕುಮಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ದುನಿಯಾ ವಿಜಯ್

    ನಿಖಿಲ್ ಕುಮಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ದುನಿಯಾ ವಿಜಯ್

    ಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸುಭಾಸ್ಕರನ್ ಅವರು ನಿರ್ಮಿಸುತ್ತಿರುವ, ಲಕ್ಷ್ಮಣ್ ನಿರ್ದೇಶನದಲ್ಲಿ ಯುವರಾಜ ನಿಖಿಲ್ ಕುಮಾರ್ (Nikhil Kumar) ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.

    ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ (Duniya Vijay) ಅವರು ನಟಿಸುತ್ತಿದ್ದಾರೆ.  ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ಅವರ ಪಾತ್ರ ಏನ್ನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಸಿನಿರಸಿಕರಿಗೆ ಸಾಕಷ್ಟು ನಿರೀಕ್ಷೆಯಿದೆ.

    ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ವಂಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಅನೇಕರು ಶೂಟಿಂಗ್ ಸೆಟ್ ಗೆ ಭೇಟಿ ಕೊಟ್ಟು ಕುತೂಹಲವನ್ನಂತೂ ಮೂಡಿಸಿದ್ದಾರೆ.

     

    ಈ ಸಿನಿಮಾದ ಮೂಲಕ ಬಾಲಿವುಡ್ ನಟಿ ಯುಕ್ತಿ ತಾರೇಜ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ. ಇದು ಇವರ ದಕ್ಷಿಣದ ಎರಡನೇ ಚಿತ್ರವಾದರೆ, ಕನ್ನಡದಲ್ಲಿ ಮೊದಲು. ನಟ ನಾಗಶೌರ್ಯ ಜೊತೆ ರಂಗಾಬಲಿ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟವರು ಯುಕ್ತಿ ತಾರೇಜ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಹುಡುಗಿಯನ್ನು ಟಾಲಿವುಡ್ ಗೆ ಕರೆತರಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಖಿಲ್ ಕುಮಾರ್ ಸಿನಿಮಾದಲ್ಲಿ ದುನಿಯಾ ವಿಜಯ್

    ನಿಖಿಲ್ ಕುಮಾರ್ ಸಿನಿಮಾದಲ್ಲಿ ದುನಿಯಾ ವಿಜಯ್

    ದುನಿಯಾ ವಿಜಯ್ (Duniya Vijay) ಇದೀಗ ಭೀಮ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯ  ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಿಖಿಲ್ ಕುಮಾರ್ ಅಭಿನಯದ ಹೊಸ ಸಿನಿಮಾದಲ್ಲಿ ವಿಜಯ್ ಪಾತ್ರವೊಂದನ್ನು ನಿರ್ವಹಿಸಲಿದ್ದಾರಂತೆ. ಅಧಿಕೃತವಾಗಿ ಸಿನಿಮಾ ತಂಡ ಈ ವಿಷಯ ತಿಳಿಸದೇ ಇದ್ದರೂ, ವಿಜಯ್ ಪಾತ್ರ ಮಾಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಚಿತ್ರತಂಡವನ್ನೂ ಅವರು ಸೇರಿಕೊಳ್ಳಲಿದ್ದಾರೆ.

    ನಿಖಿಲ್ ಕುಮಾರ್ ಸ್ವಾಮಿ (Nikhil Kumaraswamy) ನಟನೆಯ ಹೊಸ ಸಿನಿಮಾದ ಮೂಲಕ ಬಾಲಿವುಡ್ ನಟಿ ಯುಕ್ತಿ ತಾರೇಜ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ. ಇದು ಇವರ ದಕ್ಷಿಣದ ಎರಡನೇ ಚಿತ್ರವಾದರೆ, ಕನ್ನಡದಲ್ಲಿ ಮೊದಲು. ನಟ ನಾಗಶೌರ್ಯ ಜೊತೆ ರಂಗಾಬಲಿ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟವರು ಯುಕ್ತಿ ತಾರೇಜ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಹುಡುಗಿಯನ್ನು ಟಾಲಿವುಡ್ ಗೆ ಕರೆತರಲಾಗಿತ್ತು.

    ಯುಕ್ತಿ ತಾರೇಜ (Yukti Thareja) ಮೂಲತಃ ಹರಿಯಾಣ ಮೂಲದವರು. ದೆಹಲಿಯಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿಕೊಂಡಿದ್ದಾರೆ. ಕೋವಿಡ್ ವೇಳೆಯಲ್ಲಿ ಮತ್ತೆ ಹರಿಯಾಣಕ್ಕೆ ಪ್ರಯಾಣ ಬೆಳೆಸಿದ್ದರು. ಕಾಲೇಜು ದಿನಗಳಲ್ಲೇ ಫ್ಯಾಷನ್ ಜಗತ್ತಿನತ್ತ ಮುಖ ಮಾಡಿ, ಓದುತ್ತಿರುವಾಗಲೇ ‘ದೆಹಲಿ ಫ್ರೆಶ್ ಫೇಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೇ ಮಾಡೆಲಿಂಗ್ ಜಗತ್ತಿಗೆ ಬರಲು ಪ್ರೇರಣೆ ಅಂತಾರೆ.

    ದೆಹಲಿಯಲ್ಲೇ ಮಾಡೆಲಿಂಗ್ ಜಗತ್ತಿನಲ್ಲಿ ಹೆಸರು ಮಾಡುತ್ತಿರುವಾಗಲೇ ಸಿನಿಮಾ ರಂಗದತ್ತ ಒಲವು. ಮಾಡೆಲಿಂಗ್ ಮಾಡುವಾಗಲೇ ಚಿತ್ರದಲ್ಲಿ ನಟಿಸುವಂತೆ ಆಫರ್. ಹಾಗಾಗಿ ದೆಹಲಿಯಿಂದ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಬಾಲಿವುಡ್ ನಲ್ಲಿ ‘ಲುಟ್ ಗಯೆ’ ಹಾಡಿನ ಮೂಲಕ ಸಖತ್ ಫೇಮಸ್. ಆ ಹಾಡಿನ ಮೂಲಕ ಬಾಲಿವುಡ್ ಗೆ ಪರಿಚಯವಾದ ನಟಿ. ಈ ಹಾಡು ಪಡ್ಡೆಗಳ ಹಾರ್ಟ್ ಬೀಟ್ ಹೆಚ್ಚು ಕಡಿಮೆ ಮಾಡಿತ್ತು.

    ಲುಟ್ ಗಯೆ ಹಾಡಿನ ನಂತರ ಬಾಲಿವುಡ್ ನಲ್ಲಿ ಸಾಕಷ್ಟು ಆಫರ್ ಬಂದರೂ, ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕಿದರು. ಹಾಗಾಗಿ ರಂಗಬಲಿ ಇವರ ಚೊಚ್ಚಲು ಸಿನಿಮಾವಾಯಿತು. ರಂಗಬಲಿ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದರು ಯುಕ್ತಿ ತಾರೇಜ. ಮೊದಲ ಸಿನಿಮಾದಲ್ಲೇ ಅಷ್ಟೊಂದು ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಚರ್ಚೆಗೂ ಕಾರಣವಾಗಿತ್ತು.

     

    ಇದೀಗ ಕನ್ನಡ ಸಿನಿಮಾ ರಂಗಕ್ಕೂ ಯುಕ್ತಿ ತಾರೇಜ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಯಾವ ರೀತಿಯ ಪಾತ್ರ ಮಾಡುತ್ತಾರೆ ಎನ್ನುವುದು ಬಹಿರಂಗವಾಗಿಲ್ಲ. ಮುಂದಿನ ದಿನಗಳಲ್ಲಿ ತಿಳಿಯಬಹುದು. ಈ ಸಿನಿಮಾದ ಮೂಲಕ ಲೈಕಾ ಸಂಸ್ಥೆ (Lyca Production) ಕೂಡ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಯುಕ್ತಿ ತಾರೇಜ ಆಯ್ಕೆ ಕೂಡ ಕುತೂಹಲ ಮೂಡಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಖಿಲ್ ಕುಮಾರ್ ಸೆಟ್ ನಲ್ಲಿ ಕಾಣಿಸಿಕೊಂಡ ಯುವರಾಜ್

    ನಿಖಿಲ್ ಕುಮಾರ್ ಸೆಟ್ ನಲ್ಲಿ ಕಾಣಿಸಿಕೊಂಡ ಯುವರಾಜ್

    ಬೆಂಗಳೂರಿನ ಸಪೋಟ ಗಾರ್ಡನ್ ನಲ್ಲಿ ನಿಖಿಲ್ ಕುಮಾರ್ (Nikhil Kumar) ನಟನೆಯ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣ ಸ್ಥಳಕ್ಕೆ ಯುವರಾಜ ಕುಮಾರ್ (Yuva Rajkumar) ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಭೇಟಿ ಮಾಡಿದ್ದಾರೆ. ಪ್ರತಿಷ್ಠಿತ ಲೈಕಾ ಸಂಸ್ಥೆ ನಿರ್ಮಾಣದ ಇನ್ನೂ ಹೆಸರಿಡದ ಸಿನಿಮಾ ಶೂಟಿಂಗ್ ನಲ್ಲಿ ನಿಖಿಲ್ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಕನ್ನಡದ ಅನೇಕ ನಟರು ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ವಿಶ್ ಮಾಡುತ್ತಿದ್ದಾರೆ.

    ಇತ್ತೀಚೆಗಷ್ಟೇ ಶಿವಣ್ಣ ಹಾಗೂ ಧ್ರುವ ಸರ್ಜಾ, ನಿಖಿಲ್ ಸಿನಿಮಾ ಸೆಟ್ ಗೆ ಭೇಟಿ ನೀಡಿದ್ದರು ಇದೀಗ ದೊಡ್ಮನೆ ನಟ ಯುವ ಭೇಟಿ ಕೊಟ್ಟಿದ್ದಾರೆ. ಸೆಟ್ ನಲ್ಲಿ ಕೆಲ ಸಮಯ ಮಾತುಕಥೆ ನಡೆಸಿದ ನಿಖಿಲ್, ಯುವ ಮತ್ತು ಸಂತೋಷ್ ಆನಂದ್ ರಾಮ್ ಸಿನಿಮಾಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಿನಿಮಾ ರಂಗದ ಹಲವಾರು ವಿಚಾರಗಳನ್ನು ನಿಖಿಲ್ ಮತ್ತು ಯುವರಾಜ್ ಕುಮಾರ್ ಹಂಚಿಕೊಂಡಿದ್ದಾರೆ.

     

    ಸಂತೋಷ್ ಆನಂದ್ ರಾಮ್  (Santhosh Anand Ram) ನಿರ್ದೇಶನದ, ಹೊಂಬಾಳೆ ಸಂಸ್ಥೆ ನಿರ್ಮಾಣದ ಯುವ ಸಿನಿಮಾದಲ್ಲಿ ಯುವರಾಜ್ ಕುಮಾರ್ ನಟಿಸುತ್ತಿದ್ದಾರೆ. ಮೈಸೂರಿನಲ್ಲಿ ಹಲವು ದಿನಗಳಿಂದ ಶೂಟಿಂಗ್ ನಡೆಯುತ್ತಿತ್ತು. ಆ ಭಾಗದ ಶೂಟಿಂಗ್ ಮುಗಿಸಿಕೊಂಡು ಇದೀಗ ಚಿತ್ರತಂಡ ಬೆಂಗಳೂರಿಗೆ ಬಂದಿಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಖಿಲ್ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಧ್ರುವ ಸರ್ಜಾ

    ನಿಖಿಲ್ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಧ್ರುವ ಸರ್ಜಾ

    ಟ ನಿಖಿಲ್ ಕುಮಾರ್ (Nikhil Kumar) ಸದ್ಯ ಶೂಟಿಂಗ್ (Shooting) ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅತ್ತ ರಾಜಕೀಯ ವಿಚಾರದಲ್ಲಿ ಓಡಾಟ, ಗಣ್ಯರ ಭೇಟಿ, ದೆಹಲಿ ಪ್ರವಾಸ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಈಗಾಗಲೇ ಅನೌನ್ಸ್ ಮಾಡಿ ಶೂಟಿಂಗ್ ಶುರು ಮಾಡಿರೋ ಸಿನಿಮಾ ಕಂಪ್ಲೀಟ್ ಮಾಡಬೇಕಿದೆ. ನಿಖಿಲ್ ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿಕೊಡದೇ ಇದ್ದರೂ ಎಂಪಿ ಚುನಾವಣೆಗೆ ಬೇಕಿರೋ ಸದೃಢವಾದ ವೇದಿಕೆಯನ್ನ ಪಕ್ಷದ ಪರವಾಗಿ ತಾವೇ ಸಜ್ಜು ಮಾಡಬೇಕಿದೆ. ಹಾಗಾಗಿ ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಲ್ಲಿ ಅವರು ನಿರತರಾಗಿದ್ದಾರೆ.

    ಸದ್ಯ ಲೈಕಾ ಸಂಸ್ಥೆ ನಿರ್ಮಾಣದ, ಲಕ್ಷ್ಮಣ್ ನಿರ್ದೇಶನದ ಚಿತ್ರದಲ್ಲಿ ನಿಖಿಲ್ ನಟಿಸುತ್ತಿದ್ದು ಚಿತ್ರದ ಸೆಕೆಂಡ್ ಶೆಡ್ಯೂಲ್ ಸ್ಟಾರ್ಟ್ ಆಗಿದೆ. ಐದು ತಿಂಗಳಲ್ಲಿ ಸಿನಿಮಾ ಕಂಪ್ಲೀಟ್ ಮಾಡಬೇಕು ಎನ್ನುವ ಟಾರ್ಗೆಟ್ ಇಟ್ಟುಕೊಂಡಿರುವ ಟೀಂ  ಬಿರುಸಿನಲ್ಲಿ ಶೂಟಿಂಗ್ ಮಾಡುತ್ತಿದೆ. ಈ ನಡುವೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ನಟ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ದೊಡ್ಮನೆ ಆಟಕ್ಕೆ ಜೊತೆಯಾಗ್ತಾರಾ ಮೇಘಾ ಶೆಟ್ಟಿ? ಕೊನೆಗೂ ಸಿಕ್ತು ಉತ್ತರ

    ನಿಖಿಲ್ ಹಾಗೂ ಧ್ರುವಾ ಸರ್ಜಾ (Dhruva Sarja) ಒಟ್ಟಿಗೆ ಕಾಣಿಸಿಕೊಂಡಿದ್ದು ತೀರ ಕಡಿಮೆ. ಆದರೆ ಇದೇ ಮೊದಲ ಬಾರಿಗೆ ಇಬ್ಬರು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಇದೇ ಸಮಯದಲ್ಲಿ ನಿಖಿಲ್ ಅವರ ಹೊಸ ಸಿನಿಮಾ ಬಗ್ಗೆ ಹಾಗೂ ಧ್ರುವ ಅವರ ಮಾರ್ಟಿನ್ ಚಿತ್ರದ ಬಗ್ಗೆ  ಚರ್ಚಿಸಿದ್ದಾರೆ. ಇದಷ್ಟೇ ಅಲ್ಲದೇ ಇಬ್ಬರೂ ಒಂದಿಷ್ಟು ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡುತ್ತಾ ಕೆಲ ಸಮಯ ಕಳೆದಿದ್ದಾರೆ.

     

    ಅಪರೂಪಕ್ಕೆ ಸೆಟ್ ಗೆ ಬಂದ ಧ್ರುವ ಅವರನ್ನು ಕಂಡು ನಿಖಿಲ್ ಕೂಡ ಸರ್ಪ್ರೈಸ್ ಆಗಿದ್ದು ಅಪರೂಪದ ಗೆಳೆಯನನ್ನ ಪ್ರೀತಿಯಿಂದ ಬರಮಾಡಿಕೊಂಡು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ಒಟ್ಟಾರೆ ಈ ಇಬ್ಬರು ಸ್ಟಾರ್ ನಟರ ಭೇಟಿ ಅಭಿಮಾನಿಗಳಿಗೆ ಖುಷಿ ಕೊಡುವುದರ ಜೊತೆಗೆ ಕುತೂಹಲವನ್ನೂ ಹುಟ್ಟುಹಾಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕ ಬಂದ್ ಕುರಿತು ನಿಖಿಲ್ ಕುಮಾರ್ ಜೊತೆ ಫಿಲ್ಮ್ ಚೇಂಬರ್ ಚರ್ಚೆ

    ಕರ್ನಾಟಕ ಬಂದ್ ಕುರಿತು ನಿಖಿಲ್ ಕುಮಾರ್ ಜೊತೆ ಫಿಲ್ಮ್ ಚೇಂಬರ್ ಚರ್ಚೆ

    ನಾಳೆ ರಾಜ್ಯಾದ್ಯಂತ ನಡೆಯಲಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬೆಂಬಲ ಸೂಚಿಸಿದ್ದು, ಕಲಾವಿದರೊಂದಿಗೆ ನಾಳೆ ಬೀದಿಗೆ ಇಳಿದು ಹೋರಾಟ ಮಾಡಲಿದೆ. ಬೆಳಗ್ಗೆಯಷ್ಟೇ ನಾಳಿನ ಬಂದ್ ನಲ್ಲಿ ಭಾಗಿಯಾಗುವಂತೆ ಮತ್ತು ಮುಂದಾಳತ್ವ ವಹಿಸಿಕೊಳ್ಳುವಂತೆ ಶಿವರಾಜ್ ಕುಮಾರ್ ಅವರಿಗೆ ಫಿಲ್ಮ್ ಚೇಂಬರ್ ಮನವಿ ಮಾಡಿತ್ತು. ನಂತರ ನಿಖಿಲ್ ಕುಮಾರಸ್ವಾಮಿ (Nikhil Kumar) ಅವರನ್ನು ಭೇಟಿ ಮಾಡಿ, ಬಂದ್ ನಲ್ಲಿ ಭಾಗಿಯಾಗುವಂತೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚರ್ಚಿಸಿದ್ದಾರೆ.

    ನಾಳೆ ನಡೆಯಲಿರುವ ಕರ್ನಾಟಕ ಬಂದ್ (Karnataka Band) ಹೋರಾಟಕ್ಕೆ ಚಿತ್ರಮಂದಿರಗಳ ಮಾಲೀಕರು ಕೂಡ ಬೆಂಬಲ ಸೂಚಿಸಿದ್ದು, ನಾಳೆ ಬೆಳಿಗ್ಗೆಯಿಂದಲೇ ಕರ್ನಾಟಕದ ಎಲ್ಲ ಚಿತ್ರಮಂದಿರಗಳು ಬಾಗಿಲು ಹಾಕಲಿವೆ. ಸಂಜೆ ಹೋರಾಟ ಮುಗಿದ ಬಳಿಕ ಮತ್ತೆ ಚಿತ್ರ ಪ್ರದರ್ಶನಗಳನ್ನು ಆರಂಭಿಸಲಿವೆ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ತಿಳಿಸಿದ್ದಾರೆ.

    ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್ ಗೆ ರಾಜ್ಯದ ಎಲ್ಲ ಚಿತ್ರಮಂದಿರಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಾ, ಸಂಜೆವರೆಗೆ ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಸಂಜೆ ನಂತರ ಪ್ರದರ್ಶನಗಳು ಮಾಮೂಲಿನಂತೆ ಪ್ರದರ್ಶನಗೊಳ್ಳುತ್ತವೆ. ಕಾವೇರಿ ನಮ್ಮದು. ರಾಜ್ಯ ಭಾಷೆ, ನೀರು ಮತ್ತು ನೆಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೇ ಸರ್ಕಾರ, ರೈತರ ಮತ್ತು ಹೋರಾಟಗಾರರ ಬೆಂಬಲಕ್ಕೆ ಸದಾ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ ಅಧ್ಯಕ್ಷರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ಹೋರಾಟಕ್ಕೆ ಯಾವಾಗಲೂ ನಾನು ಸಿದ್ಧ : ನಟ ನಿಖಿಲ್ ಕುಮಾರ್

    ಕಾವೇರಿ ಹೋರಾಟಕ್ಕೆ ಯಾವಾಗಲೂ ನಾನು ಸಿದ್ಧ : ನಟ ನಿಖಿಲ್ ಕುಮಾರ್

    ಟ, ಯುವರಾಜಕಾರಣಿ ನಟ ನಿಖಿಲ್ ಕುಮಾರ್ (Nikhil Kumar), ಕಾವೇರಿ (Cauvery) ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿರೋ ನಿಖಿಲ್, ‘ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

    ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟೀಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ ಎಂದು ಬರೆದುಕೊಂಡಿದ್ದಾರೆ.

    ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ನಿಖಿಲ್, ‘ಕಾಂಗ್ರೆಸ್ ಪಕ್ಷಕ್ಕೆ ಕಾವೇರಿ ಎನ್ನುವುದು ರಾಜಕೀಯ ಲಾಭದ ವಸ್ತುವಂತೆ ಆಗಿರುವುದು ನೋವಿನ ಸಂಗತಿ. ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು. ಆರೂವರೆ ಕೋಟಿ ಕನ್ನಡಿಗರ ಧ್ವನಿಯೇ ನನ್ನ ಧ್ವನಿ. ತಾಯಿ ಕಾವೇರಿಗಾಗಿ ಯಾವುದೇ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ ಎಂದು ನಿಖಿಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗನ್ ಮ್ಯಾನ್ ಮದುವೆಯಲ್ಲಿ ಪಾಲ್ಗೊಂಡ ನಟ ನಿಖಿಲ್

    ಗನ್ ಮ್ಯಾನ್ ಮದುವೆಯಲ್ಲಿ ಪಾಲ್ಗೊಂಡ ನಟ ನಿಖಿಲ್

    ಟ, ಯುವರಾಜಕಾರಣಿ ನಿಖಿಲ್ ಕುಮಾರ್ (Nikhil Kumar) ತಮ್ಮ ಗನ್ ಮ್ಯಾನ್ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಬೀದರ್ (Bidar) ನಲ್ಲಿ ನಡೆದ ಮದುವೆ (Marriage) ಸಮಾರಂಭದಲ್ಲಿ ಪಾಲ್ಗೊಂಡು ನೂತನ ವಧುವರರಿಗೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಬೀದರ್ ಸುತ್ತಲಿನ ಪ್ರವಾಸಿ ತಾಣಗಳಿಗೂ ಅವರು ಭೇಟಿ ನೀಡಿದ್ದಾರೆ.

    ಗನ್ ಮ್ಯಾನ್ (Gun Man) ಮದುವೆಗೆ ಅಂಟೆಂಡ್ ಮಾಡಲು ಶೂಟಿಂಗ್ ಗೆ ಬ್ರೇಕ್ ಹಾಕಿದ್ದ ನಿಖಿಲ್ ಕುಮಾರ್, ಅದೇ ಸಮಯದಲ್ಲಿ ತಮ್ಮ ಪಕ್ಷದ ಬಂಡೆಪ್ಪ ಕಾಶಂಪುರ್ ಮನೆಗೂ ಭೇಟಿ ಕೊಟ್ಟಿದ್ದಾರೆ. ಬೀದರ್ ಕೋಟೆಯಲ್ಲಿ ನಿಖಿಲ್ ಕಂಡು ಸೆಲ್ಫಿಗಾಗಿ ಪ್ರವಾಸಿಗರು ಮುಗಿಬಿದ್ದಿದ್ದು, ಕೋಟೆಯ ಸೌಂದರ್ಯಕ್ಕೆ ಮನಸೋತು ಸ್ವತಃ ನಿಖಿಲ್ ಅವರೇ ಫೋಟೋ ಕ್ಲಿಕ್ಕಿಸಿಕೊಂಡ ಸಂಭ್ರಮಿಸಿದ್ದಾರೆ.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ತಾವು ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಬೀದರ್ ನಲ್ಲಿ ಮಾತನಾಡಿರುವ ನಿಖಿಲ್, ‘ರಾಜಕೀಯದಿಂದ ದೂರುವಿರುತ್ತೇನೆ. ಆದರೆ, ಸಾಮಾನ್ಯ ಕಾರ್ಯಕರ್ತನಾಗಿ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲಾರೆ’ ಎಂದಿದ್ದಾರೆ.

     

    ಈ ಹಿಂದೆ ಕುಮಾರಸ್ವಾಮಿ ಅವರು ಇದೇ ಮಾತುಗಳನ್ನು ಆಡಿದ್ದರು. ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳು ಇರುವುದರಿಂದ ಅಲ್ಲಿಯೇ ನೆಲೆಯೂರುವಂತೆ ಹೇಳಿದ್ದೇನೆ. ರಾಜಕಾರಣಕ್ಕೆ ನಿಖಿಲ್ ಬರುವುದು ಬೇಡ ಎಂದು ಕುಮಾರಸ್ವಾಮಿಗಳು ಹೇಳಿಕೆ ನೀಡಿದ್ದರು. ತಂದೆಯ ಮಾತನ್ನು ಪುತ್ರ ನಿಖಿಲ್ ಮತ್ತೆ ನೆನಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]