Tag: ನಿಖಿಲ್‌ ಕಾಮತ್‌

  • ನಾನು ಕೂಡ ಸಾಮಾನ್ಯ ಮನುಷ್ಯ, ದೇವರಲ್ಲ: ಪಾಡ್‌ಕಾಸ್ಟ್‌ನಲ್ಲಿ ಮೋದಿ ಮಾತು

    ನಾನು ಕೂಡ ಸಾಮಾನ್ಯ ಮನುಷ್ಯ, ದೇವರಲ್ಲ: ಪಾಡ್‌ಕಾಸ್ಟ್‌ನಲ್ಲಿ ಮೋದಿ ಮಾತು

    ನವದೆಹಲಿ: ತಪ್ಪುಗಳು ಆಗುತ್ತವೆ. ನಾನು ಕೂಡ ಕೆಲವು ತಪ್ಪುಗಳನ್ನು ಮಾಡಬಹುದು. ನಾನು ಕೂಡ ಮನುಷ್ಯನೇ, ದೇವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಅವರ ಪೀಪಲ್ ಬೈ ಡಬ್ಲ್ಯೂಟಿಎಫ್ ಸರಣಿಯಲ್ಲಿ ಪಾಡ್‌ಕ್ಯಾಸ್ಟ್‌ಗೆ ಪದಾರ್ಪಣೆ ಮಾಡಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ – ವಿದ್ಯಾರ್ಥಿ ಅರೆಸ್ಟ್

    ಸರ್, ನನ್ನ ಹಿಂದಿ ಚೆನ್ನಾಗಿಲ್ಲದಿದ್ದರೆ ದಯವಿಟ್ಟು ಕ್ಷಮಿಸಿ. ನಾನು ದಕ್ಷಿಣ ಭಾರತೀಯ. ನಾನು ಹೆಚ್ಚಾಗಿ ಬೆಂಗಳೂರಿನಲ್ಲಿ ಬೆಳೆದೆ. ನನ್ನ ತಾಯಿಯ ನಗರ ಮೈಸೂರು. ಅಲ್ಲಿ ಜನರು ಹೆಚ್ಚಾಗಿ ಕನ್ನಡ ಮಾತನಾಡುತ್ತಾರೆ. ನನ್ನ ತಂದೆ ಮಂಗಳೂರು ಬಳಿ ಇದ್ದರು. ನಾನು ಶಾಲೆಯಲ್ಲಿ ಹಿಂದಿ ಕಲಿತಿದ್ದೇನೆ. ಆದರೆ, ನನಗೆ ಭಾಷೆಯಲ್ಲಿ ನಿರರ್ಗಳತೆ ಇಲ್ಲ ಎಂದು ಕಾಮತ್, ಪ್ರಧಾನಿ ಮೋದಿಗೆ ಆರಂಭದಲ್ಲಿ ಮನವಿ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ತೊಂದರೆಯಿಲ್ಲ ಮ್ಯಾನೇಜ್‌ ಮಾಡಬಹುದು ಎಂದು ತಿಳಿಸಿದರು.

    ಎರಡು ಗಂಟೆಗಳ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿಯವರು ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ಪ್ರವೇಶ, ಹಿನ್ನಡೆಗಳು, ಒತ್ತಡವನ್ನು ನಿಭಾಯಿಸುವುದು ಮತ್ತು ನೀತಿ ನಿರ್ವಹಣೆ ಸೇರಿದಂತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ದಟ್ಟ ಮಂಜು – 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

    ನಾನು ನನ್ನ ಕುಟುಂಬದ ಎಲ್ಲ ಸದಸ್ಯರ ಬಟ್ಟೆಗಳನ್ನು ಒಗೆಯುತ್ತಿದ್ದೆ. ಅದಕ್ಕಾಗಿಯೇ ನನಗೆ ಕೊಳಕ್ಕೆ ಹೋಗಲು ಅವಕಾಶ ಸಿಗುತ್ತಿತ್ತು ಎಂದು ತಮ್ಮ ಬಾಲ್ಯದ ಕುರಿತು ಮೋದಿ ಮಾತನಾಡಿದ್ದಾರೆ.

  • ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ಮದುವೆ ಲೈಫ್‌ ಬಗ್ಗೆ ಮಾತನಾಡಿದ ರಿಯಾ ಚಕ್ರವರ್ತಿ

    ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ಮದುವೆ ಲೈಫ್‌ ಬಗ್ಗೆ ಮಾತನಾಡಿದ ರಿಯಾ ಚಕ್ರವರ್ತಿ

    ಬಾಲಿವುಡ್ ನಟಿ ರಿಯಾ ಚಕ್ರವರ್ತಿ (Rhea Chakraborty) ಮೊದಲ ಬಾರಿಗೆ ಮದುವೆ ಲೈಫ್ (Wedding Life) ಬಗ್ಗೆ ಮಾತನಾಡಿದ್ದಾರೆ. ಪ್ರೀತಿ ಮಾಡಲು ಕೋರ್ಟ್ ಅನುಮತಿ ಬೇಕಿಲ್ಲ ಎಂದು ರಿಯಾ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಓಪನ್ ಆಗಿ ಮದುವೆ ಲೈಫ್ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನತ್ತ ನಟ- ‘ಜಬ್ ವಿ ಮೆಟ್’ ನಿರ್ದೇಶಕನ ಸಿನಿಮಾದಲ್ಲಿ ಫಹಾದ್ ಫಾಸಿಲ್

    Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ರಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ ರಿಯಾ ಲವ್, ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಇಷ್ಟು ವಯಸ್ಸಿಗೆ ಮದುವೆ ಆಗಬೇಕು ಅಂತ ಹೇಳಲು ಆಗಲ್ಲ. ಮದುವೆಗೆ ಒಬ್ಬೊಬ್ಬರಿಗೆ ಒಂದೊಂದು ವಯಸ್ಸು ಸೂಕ್ತ ಎನಿಸಿಸುತ್ತದೆ. ಮದುವೆ ವಿಷಯದಲ್ಲಿ ಹೆಣ್ಣು ಏನು ಎದುರಿಸುತ್ತಾಳೋ ಅದನ್ನು ಪುರುಷ ಎದುರಿಸಲಾರ. ಮದುವೆ ಎಂದಾಗ ಒಂದಷ್ಟು ಒತ್ತಡ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ:ಬ್ಯಾಚುಲರ್ ಪಾರ್ಟಿ ಸಂಭ್ರಮದಲ್ಲಿ ‘ಪೆಟ್ಟಾ’ ನಟಿ ಮೇಘಾ ಆಕಾಶ್

    ಎಲ್ಲ ವಯಸ್ಸಿನಲ್ಲಿಯೂ ಮಗು ಮಾಡಿಕೊಳ್ಳಲಾಗೋದಿಲ್ಲ. ಮಗು ಮಾಡಿಕೊಳ್ಳಲು ಅಂಡಾಣು ಸಂಗ್ರಹ ಕೂಡ ಆಯ್ಕೆ ಮಾಡಿಕೊಳ್ಳಬಹುದು. ನನ್ನ ಅನೇಕ ಸ್ನೇಹಿತರು 20 ಮತ್ತು 30ನೇ ವಯಸ್ಸಿಗೆ ಮದುವೆಯಾಗಿದ್ದಾರೆ. ಅವರು 40ನೇ ವಯಸ್ಸಿಗೆ ಮಗು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು 20ನೇ ವಯಸ್ಸಿಗೆ ಮಕ್ಕಳನ್ನು ಮಾಡಿಕೊಂಡಿದ್ದಾರೆ. ಆದರೆ ತಡವಾಗಿ ಮದುವೆ ಆಗುತ್ತಿರೋದು ಹೆಚ್ಚಾಗ್ತಿದೆ ಎಂದು ರಿಯಾ ಹೇಳಿದ್ದಾರೆ.

    32ನೇ ವಯಸ್ಸಿನಲ್ಲಿರುವ ನಾನು 40ನೇ ವಯಸ್ಸಿಗೆ ಮದುವೆ ಆಗೋದಕ್ಕೆ ಬಯಸುವೆ. ನಾನು ಇನ್ನೂ ಮದುವೆ ಆಗೋಕೆ ರೆಡಿ ಇಲ್ಲ. ನನಗೆ ವೃತ್ತಿ ಜೀವನದ ಕಡೆಗೆ ಗಮನ ಕೊಡಬೇಕಿದೆ. ಮದುವೆ ವಿಚಾರದಲ್ಲಿ ಕಾನೂನು ಮಧ್ಯೆ ಬರೋದು ನನಗೆ ಇಷ್ಟ ಇಲ್ಲ. ನಾನು ಪಾಸ್‌ಪೋರ್ಟ್ ಪಡೆದುಕೊಳ್ಳಲು ಕೋರ್ಟ್‌ಗೆ ಹೋಗುತ್ತೇನೆ. ಆದರೆ ಒಬ್ಬರನ್ನು ಪ್ರೀತಿ ಮಾಡಲು ಅನುಮತಿ ಕೊಡಿ ಅಂತ ಕೋರ್ಟ್ ಬಳಿ ಕೇಳೋದಿಲ್ಲ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ.

  • ಸುಶಾಂತ್ ಸಿಂಗ್ ಮಾಜಿ ಗೆಳತಿ ಜೊತೆ ಉದ್ಯಮಿ ನಿಖಿಲ್ ಕಾಮತ್ ಡೇಟಿಂಗ್

    ಸುಶಾಂತ್ ಸಿಂಗ್ ಮಾಜಿ ಗೆಳತಿ ಜೊತೆ ಉದ್ಯಮಿ ನಿಖಿಲ್ ಕಾಮತ್ ಡೇಟಿಂಗ್

    ಬೆಂಗಳೂರು ಮೂಲದ ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಹೆಸರಿನ ಜೊತೆ ಬಾಲಿವುಡ್ ನಟಿಯೊಬ್ಬರ ಹೆಸರು ಕೇಳಿ ಬರುತ್ತಿದೆ. ಖ್ಯಾತ ನಟ ದಿ.ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ (Rhea Chakraborty) ಜೊತೆ ನಿಖಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಧಿಕೃತವಾಗಿ ಈ ಕುರಿತು ಇಬ್ಬರೂ ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿದ್ದರೂ, ಅದು ನಿಜ ಎಂದು ಹೇಳಲಾಗುತ್ತಿದೆ.

    ಮಾನುಷಿ ಚಿಲ್ಲರ್ ಜೊತೆ ಬ್ರೇಕ್ ಅಪ್?

    ನಟಿ ಮಾನುಷಿ ಚಿಲ್ಲರ್(Manushi Chillar) ಸಿನಿಮಾಗಿಂತ ತಮ್ಮ ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಲ್ಲಿರುತ್ತಾರೆ. ಬಿಟೌನ್‌ನಲ್ಲಿ ಈ ಹಿಂದೆ ಮಾನುಷಿ ಡೇಟಿಂಗ್ ಸುದ್ದಿಯೇ ಸಖತ್ ಸದ್ದು ಮಾಡಿತ್ತು. ಇದೇ  Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ಮಾನುಷಿ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿತ್ತು.

    ಅಕ್ಷಯ್ ಕುಮಾರ್(Akshay Kumar) ನಟನೆಯ `ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಇದೀಗ ಸಾಕಷ್ಟು ಚಿತ್ರಗಳ ಆಫರ್ಸ್ ಅರಸಿ ಬಂದವು. ಇದರ ಮಧ್ಯೆ ಮಾನುಷಿ ಉದ್ಯಮಿ(Bengaluru Based Businessman) ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಸುದ್ದಿಯಾಗಿತ್ತು. ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು.

    ಅದಕ್ಕೆ ಪೂರಕ ಎನ್ನುವಂತೆ ಈ ಜೋಡಿ, ರಿಷಿಕೇಶಕ್ಕೆ ಒಟ್ಟಿಗೆ ಹೋಗಿದ್ದರು. ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ ಎಂದು ಹೇಳಲಾಗಿತ್ತು. ಎಂಗೇಜ್ ಆಗಿರುವ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಈಗ ನೋಡಿದರೆ ಮತ್ತೋರ್ವ ಹುಡುಗಿಯ ಹೆಸರು ಕಾಮತ್ ಹೆಸರಿನ ಜೊತೆ ತಳುಕು ಹಾಕಿಕೊಂಡಿದೆ.

     

    ಬೆಂಗಳೂರಿನ ಮೂಲದ ಬ್ಯುಸಿನೆಸ್ ಮ್ಯಾನ್ ಆಗಿರುವ ನಿಖಿಲ್ ಕಾಮತ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜೊತೆ ವಿವಾಹವಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

    ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

    ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡು ರಾಷ್ಟ್ರ ಮಟ್ಟದ ಗಮನ ಸೆಳೆದ ಮಾನುಷಿ ಚಿಲ್ಲರ್, ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಾನುಷಿ, ಇದೀಗ ವಿಚ್ಛೇದಿತ ಉದ್ಯಮಿ ನಿಖಿತ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಜಿರೊಧಾ ಕಂಪನಿಯ ಸಹ ಸಂಸ್ಥಾಪಕ ಆಗಿರುವ ನಿಖಿತ್ ಮತ್ತು ಮಾನಷಿ ಇತ್ತೀಚೆಗಷ್ಟೇ ರಿಷಿಕೇಶಕ್ಕೆ ಒಟ್ಟಾಗಿ ಭೇಟಿ ಕೊಟ್ಟಿದ್ದಾರೆ ಎಂದೂ ವರದಿಯಾಗಿದೆ.

    ನಿಖಿಲ್ ಕಾಮತ್ ಈ ಮುಂಚೆಯೇ ಅಮಂಡಾ ಪುರವಂಕರಾ ಎಂಬುವವ ಜೊತೆ 2019 ಏಪ್ರಿಲ್ 18 ರಂದು ಮದುವೆಯಾಗಿದ್ದರು. ಇವರ ದಾಂಪತ್ಯ ಜೀವನ ತುಂಬಾ ದಿನಗಳ ಕಾಲ ಉಳಿಯಲಿಲ್ಲ. 2021ರಲ್ಲಿ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡರು. ಡಿವೋರ್ಸ್ ಸಿಗುತ್ತಿದ್ದಂತೆಯೇ ಮಾನಷಿ ಜೊತೆ ನಿಖಿಲ್ ಡೇಟಿಂಗ್ ನಲ್ಲಿ ತೊಡಗಿದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ

    ನಿಖಿಲ್ ಗಿಂತ ಮುಂಚೆಯೇ ಮಾನಷಿ ಬೇರೆ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿಯೂ ಗುಟ್ಟಾಗಿ ಇರಲಿಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ರೋಹಿತ್ ಖಾಂದೇಲವಾಲ್ ಎಂಬುವವರ ಜೊತೆ ಮಾನಷಿ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆಗಾಗ್ಗೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು ಎನ್ನುವ ಗಾಸಿಪ್ ಕೂಡ ಇತ್ತು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನ ಉದ್ಯಮಿ, Zerodha ಸಹ ಸಂಸ್ಥಾಪಕ ನಿಖಿಲ್ ಜೊತೆ ಮಾನುಷಿ ಚಿಲ್ಲರ್ ಡೇಟಿಂಗ್

    ಬೆಂಗಳೂರಿನ ಉದ್ಯಮಿ, Zerodha ಸಹ ಸಂಸ್ಥಾಪಕ ನಿಖಿಲ್ ಜೊತೆ ಮಾನುಷಿ ಚಿಲ್ಲರ್ ಡೇಟಿಂಗ್

    ಟಿ ಮಾನುಷಿ ಚಿಲ್ಲರ್(Manushi Chillar) ಸಿನಿಮಾಗಿಂತ ತಮ್ಮ ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಬಿಟೌನ್‌ನಲ್ಲಿ ಸದ್ಯ ಮಾನುಷಿ ಡೇಟಿಂಗ್ ಸುದ್ದಿಯೇ ಸಖತ್ ಸದ್ದು ಮಾಡುತ್ತಿದೆ. ಉದ್ಯಮಿ, Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ಮಾನುಷಿ ಎಂಗೇಜ್ ಆಗಿದ್ದಾರೆ.

    ಅಕ್ಷಯ್ ಕುಮಾರ್(Akshay Kumar) ನಟನೆಯ `ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಇದೀಗ ಸಾಕಷ್ಟು ಚಿತ್ರಗಳ ಆಫರ್ಸ್ ಅರಸಿ ಬರುತ್ತಿದೆ. ಇದರ ಮಧ್ಯೆ ಮಾನುಷಿ ಇದೀಗ ಬೆಂಗಳೂರಿನ ಉದ್ಯಮಿ(Bengaluru Based Businessman) ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ಈ ಜೋಡಿ, ರಿಷಿಕೇಶಕ್ಕೆ ಒಟ್ಟಿಗೆ ಹೋಗಿದ್ದರು. ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಎಂಗೇಜ್ ಆಗಿರುವ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ:ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

     

    View this post on Instagram

     

    A post shared by Nikhil Kamath (@nikhilkamathcio)

    ಬೆಂಗಳೂರಿನ ಮೂಲದ ಬ್ಯುಸಿನೆಸ್ ಮ್ಯಾನ್ ಆಗಿರುವ ನಿಖಿಲ್ ಕಾಮತ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜೊತೆ ವಿವಾಹವಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು. ಇದೀಗ ನಟಿ ಮಾನುಷಿ ಜೊತೆ ನಿಖಿಲ್ ಕಾಮತ್ ಎಂಗೇಜ್ ಆಗಿದ್ದಾರೆ.

    40 ವರ್ಷ ಮತ್ತು ಅದಕ್ಕಿಂತ ಚಿಕ್ಕ ವಯಸ್ಸಿನ ಹುರುನ್‌ ಸೆಲ್ಫ್‌ಮೇಡ್‌ ಶ್ರೀಮಂತರ ಪಟ್ಟಿ-2022 ಬಿಡುಗಡೆಯಾಗಿದ್ದು ಇದರಲ್ಲಿ 36 ವರ್ಷದ ನಿಖಿಲ್‌ ಅವರು 17,500 ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]