Tag: ನಿಖಿಲ್ ಆನಂದ್

  • ಬಿಹಾರವನ್ನು ಪಾಕಿಸ್ತಾನ ಮಾಡಬೇಡಿ – ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಗರಂ

    ಬಿಹಾರವನ್ನು ಪಾಕಿಸ್ತಾನ ಮಾಡಬೇಡಿ – ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಗರಂ

    ಪಾಟ್ನಾ: ಎರಡು ತಿಂಗಳ ಹಿಂದೆಯಷ್ಟೇ ಬಿಜೆಪಿಯೊಂದಿಗಿನ ಸಂಬಂಧ ಮುರಿದುಕೊಂಡು ಹೊರಬಂದ ಬಿಹಾರ (Bhihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು, ಬಡರಾಜ್ಯಗಳಿಗೆ ಕಡಿಮೆ ಕೊಡುಗೆ ನೀಡಿರುವುದಲ್ಲದೇ ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದ್ದರು.

    ಗುರುವಾರ ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬಡ ರಾಜ್ಯಗಳಲ್ಲಿ ಏನಾದರೂ ಪ್ರಯೋಜನಕಾರಿ ಕೆಲಸವಾಗಿದೆಯೇ? ಪ್ರಚಾರ ಮಾತ್ರ ನಡೆಯುತ್ತಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದರ ಜೊತೆಗೆ, ಬಹುಕಾಲದ ಬೇಡಿಕೆಯನ್ನು “ಎಲ್ಲಾ ಬಡ ರಾಜ್ಯಗಳು ಪಡೆಯಬೇಕು ಎಂದು ಹೆಸರೇ ಹೇಳದೇ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ: ರೇಪ್ & ಮರ್ಡರ್ ಆದ ಬಾಲಕಿ ಹೆಸ್ರಲ್ಲಿ ಶಾಲೆಗಳಲ್ಲಿ ಲಿಂಗ ಸಮಾನತೆ ಕ್ಲಾಸ್ ನೀಡ್ಬೇಕು: ನಟ ಚೇತನ್

    ಸಮಾಜದ ದುರ್ಬಲ ವರ್ಗಗಳನ್ನು, ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಮೇಲೆತ್ತಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಎಲ್ಲಾ ರಾಜ್ಯಗಳಿಗೆ ನೀಡಬೇಕಾದ ವಿಶೇಷ ಸ್ಥಾನಮಾನದ ನಮ್ಮ ಬೇಡಿಕೆಯನ್ನು ಈಡೇರಿಸದ ಕಾರಣ ನಾವು ಕಂಗಾಲಾಗಿದ್ದೇವೆ. ರಾಜ್ಯದಲ್ಲಿ ಅಧಿಕಾರ ಕೈತಪ್ಪಿದಾಗಿನಿಂದ ನೊಂದುಕೊಂಡಿರುವ ಬಿಜೆಪಿ ರಾಜ್ಯ ಘಟಕವು, ಮಹಾಘಟಬಂಧನ್ (Mahagathbandhan) ಸರ್ಕಾರ ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡುವ ಭರವಸೆ ಭಾಗವಾಗಿ ಉರ್ದು ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಶ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಉಪ ಮುಖ್ತೇಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಮತ್ತು ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ (Vijay Kumar Chaudhary) ಅವರ ಉಪಸ್ಥಿತರಾಗಿದ್ದರು.

    ಈ ನಿತೀಶ್ ಕುಮಾರ್ ಅವರ ಹೇಳಿಕೆಗೆ, ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್ (BJP spokesman Nikhil Anand) ಅವರು, ಪ್ರತಿಯೊಂದು ಶಾಲೆಯಲ್ಲೂ ಉರ್ದು ಶಿಕ್ಷಕರನ್ನು ನೇಮಿಸುವುದು ಸಿಎಂ ನಿತೀಶ್ ಕುಮಾರ್ ಅವರ ಉದ್ದೇಶವಾಗಿದೆ. ಬಿಹಾರದ ಅಸೆಂಬ್ಲಿಯಲ್ಲಿ ಉರ್ದು ಬಲ್ಲವರನ್ನು ನೇಮಿಸಿಕೊಳ್ಳುವ ಅಗತ್ಯವೇನಿದೆ? ಈಗ ಪ್ರತಿ ಪೊಲೀಸ್ ಠಾಣೆಗಳಲ್ಲಿ ಉರ್ದು ಭಾಷಾಂತರಕಾರರನ್ನು ನೇಮಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯ- ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಮಸ್ಯೆ

    ಮುಸ್ಲಿಂ ಪ್ರಾಬಲ್ಯವಿರುವ ಬಿಹಾರದ ಜಿಲ್ಲೆಗಳಲ್ಲಿ ದಲಿತರು, ಒಬಿಸಿಗಳು ಮತ್ತು ಇಬಿಸಿಗಳ (Economically Backward Class) ಜೀವನ ಹಾಳಾಗುತ್ತದೆ. ಸಹೋದರ, ಬಿಹಾರದಲ್ಲಿ ಪಾಕಿಸ್ತಾನವನ್ನು ಸೃಷ್ಟಿಸಬೇಡಿ, ನೀವೇ ಪಾಕಿಸ್ತಾನಕ್ಕೆ ಹೋಗಿ ಎಂದು ನಿತೀಶ್ ಕುಮಾರ್‌ಗೆ ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]