Tag: ನಿಕ್

  • ಮಗಳಿಗೆ ಗಣಪತಿ, ಆಂಜನೇಯನ ದರ್ಶನ ಮಾಡಿಸಿದ ನಟಿ ಪ್ರಿಯಾಂಕಾ ಚೋಪ್ರಾ

    ಮಗಳಿಗೆ ಗಣಪತಿ, ಆಂಜನೇಯನ ದರ್ಶನ ಮಾಡಿಸಿದ ನಟಿ ಪ್ರಿಯಾಂಕಾ ಚೋಪ್ರಾ

    ಲವು ಕಾರ್ಯಕ್ರಮಗಳ ನಿಮಿತ್ತ ಮುಂಬೈಗೆ (Mumbai) ಬಂದಿಳಿದಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಬೆಳಗ್ಗೆ ಮುಂಬೈನ ಪ್ರಸಿದ್ಧ ಗಣಪತಿ, ಆಂಜನೇಯನ ದೇವಸ್ಥಾನಕ್ಕೆ (Ganesh Temple) ಮಗಳೊಂದಿಗೆ ಭೇಟಿ ನೀಡಿದ್ದಾರೆ. ಗಣಪತಿ ಬಗ್ಗೆ ಅಪಾರ ಭಕ್ತಿ ಹೊಂದಿರುವ ಅವರು ಮಗಳಿಗೆ ಗಣಪತಿಯ ದರ್ಶನ ಮಾಡಿಸಿದ್ದಾರೆ. ಮಗಳ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

    ಅಂಬಾನಿ ಸಾಂಸ್ಕೃತಿಕ ಭವನೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿರುವ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಮಗಳನ್ನೂ ಕರೆತಂದಿದ್ದಾರೆ. ಅಮೆರಿಕಾದಲ್ಲಿ ಬೀಡುಬಿಟ್ಟಿರುವ ಪ್ರಿಯಾಂಕಾ, ಮಗಳು ಹುಟ್ಟಿದ ನಂತರ ಇದೇ ಮೊದಲ ಬಾರಿಗೆ ಅವರು ಭಾರತಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಹಿಂದಿನ ಎಲ್ಲ ನೆನಪುಗಳನ್ನೂ ಅವರು ಮರುಸೃಷ್ಟಿ ಮಾಡುತ್ತಿದ್ದಾರೆ.  ಇದನ್ನೂ ಓದಿ: ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ

    ಮೊನ್ನೆಯಷ್ಟೇ ಪತಿ ನಿಕ್ ಜೊತೆ ಆಟೋದಲ್ಲಿ ಮುಂಬೈ ಸುತ್ತಿದ್ದ ಪ್ರಿಯಾಂಕಾ, ಆಟೋದಲ್ಲಿಯೇ ಪತಿಗೆ ಮುಂಬೈ ಪರಿಚಯಿಸಿದ್ದರು. ಆಟೋ ಪ್ರಯಾಣದ ಅನುಭವನ್ನು ಅಭಿಮಾನಿಗಳ ಜೊತೆ ಅವರು ಹಂಚಿಕೊಂಡಿದ್ದರು. ಅಲ್ಲದೇ, ತಾವು ಓಡಾಡಿದ ಜಾಗವನ್ನೆಲ್ಲ ಪತಿಗೆ ಪ್ರಿಯಾಂಕಾ ಪರಿಚಯಿಸುತ್ತಿದ್ದಾರೆ.

    ಬಾಲಿವುಡ್ ತೊರೆದ ನಂತರ ಪ್ರಿಯಾಂಕಾ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಲವಾರು ವೆಬ್ ಸೀರಿಸ್ ನಲ್ಲಿ ಮತ್ತು ಬ್ಯುಸಿನೆಸ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇಂಗ್ಲಿಷ್ ನ ಹಲವಾರು ಶೋಗಳಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದಾರೆ.

  • ಕ್ರಿಸ್‌ಮಸ್ ಆಚರಣೆಗಾಗಿ ಮಗಳ ಜೊತೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚೋಪ್ರಾ

    ಕ್ರಿಸ್‌ಮಸ್ ಆಚರಣೆಗಾಗಿ ಮಗಳ ಜೊತೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ಬ್ಯೂಟಿ (Bollywood) ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್ ಲೆವೆಲ್‌ನಲ್ಲಿ ಮಿಂಚ್ತಿರುವ ಮಹಾನ್ ನಟಿ, ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಯ ಸಿನಿಮಾದಲ್ಲೂ ನಟಿ ಸಕ್ರಿಯರಾಗಿದ್ದಾರೆ. ಸದ್ಯ ಕ್ರಿಸ್‌ಮಸ್ ಹಬ್ಬ ಆಚರಿಸಲು ಮಗಳ ಜೊತೆ ವಿದೇಶಕ್ಕೆ ಪ್ರಿಯಾಂಕಾ ಹಾರಿದ್ದಾರೆ.

    ಹಾಲಿವುಡ್ (Hollywood) ಸ್ಟಾರ್ ಗಾಯಕ ನಿಕ್ ಜೊತೆ ವೈವಾಹಿಕ ಜೀವನಕದಲ್ಲಿ ನಟಿ ಪ್ರಿಯಾಂಕಾ ಖುಷಿಯಾಗಿದ್ದಾರೆ. ಸಂಸಾರ, ಮಗಳ ಆರೈಕೆಯ ನಡುವೆ ಸಿನಿಮಾಗಳಲ್ಲಿ ಪ್ರಿಯಾಂಕಾ ಮಿಂಚ್ತಿದ್ದಾರೆ. ಇನ್ನೂ ಡಿ.25ಕ್ಕೆ ಕ್ರಿಸ್‌ಮಸ್ ಹಬ್ಬ ಹತ್ತಿರ ಬರುತ್ತಿದ್ದಂತೆ, ಹಬ್ಬದ ಆಚರಣೆಯ ತಯಾರಿ ಕೂಡ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಕ್ರಿಸ್‌ಮಸ್ (Chirstmas) ಸೆಲೆಬ್ರೇಟ್ ಮಾಡಲು ವಿಮಾನದಲ್ಲಿ ಮುದ್ದು ಮಗಳ ಜೊತೆ ಪ್ರಿಯಾಂಕಾ ಪ್ರಯಾಣ ಬೆಳೆಸಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಮಗ ರೂಪಿಗಾಗಿ, ಮಗುವಿನಂತೆ ಗಳಗಳನೇ ಅತ್ತ ಆರ್ಯವರ್ಧನ್‌ ಗುರೂಜಿ

    View this post on Instagram

     

    A post shared by Priyanka (@priyankachopra)

    ವಿಮಾನದಲ್ಲಿ ಕುಳಿತಿರುವ ತಮ್ಮ ಫೋಟೋಗೆ `ನಾವು ಹೋಗುತ್ತಿದ್ದೇವೆ’ ಎಂದು ಅಡಿಬರಹ ನೀಡಿ ಪ್ರಿಯಾಂಕಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ತಾವು ಎಲ್ಲಿಗೆ ಟ್ರಾವೆಲ್ ಮಾಡ್ತಿದ್ದೇವೆ ಎಂದು ಮಾತ್ರ ಹೇಳಿಲ್ಲ. ಒಟ್ನಲ್ಲಿ ಈ ಜೋಡಿಗೆ, ಕ್ರಿಸ್‌ಮಸ್‌ಗೆ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಟ್ಟುಹಬ್ಬಕ್ಕೆ ಪ್ರಿಯಾಂಕಾ ಕತ್ತರಿಸಿದ ಕೇಕ್ ಬೆಲೆ ಬರೋಬ್ಬರಿ 3.5 ಲಕ್ಷ

    ಹುಟ್ಟುಹಬ್ಬಕ್ಕೆ ಪ್ರಿಯಾಂಕಾ ಕತ್ತರಿಸಿದ ಕೇಕ್ ಬೆಲೆ ಬರೋಬ್ಬರಿ 3.5 ಲಕ್ಷ

    ಮುಂಬೈ: ಇತ್ತೀಚಿಗಷ್ಟೇ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಕೊಂಡಿದ್ದಾರೆ. ಈ ಬಾರಿ ಹುಟ್ಟುಹಬ್ಬಕ್ಕೆ ಅವರು ಕತ್ತರಿಸಿದ ಕೇಕ್ ಬೆಲೆ ಬರೋಬ್ಬರಿ 3.5 ಲಕ್ಷ ರೂ. ಎಂಬುದು ತಿಳಿದುಬಂದಿದೆ.

    ಒಂದು ಕೇಕ್ ಬೆಲೆ ಇಷ್ಟೊಂದು ದುಬಾರಿನಾ ಎಂದು ಅಚ್ಚರಿ ಆಗೋದು ಸಹಜ. ಜುಲೈ 18ರಂದು ಮಿಯಾಮಿಯಲ್ಲಿ ಯಾಚ್ ನಲ್ಲಿ ಪ್ರಿಯಾಂಕಾ ಅವರು ಪತಿ ನಿಕ್ ಹಾಗೂ ಕುಟುಂಬಸ್ಥರೊಮದಿಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ನಿಕ್ ಜೋನಸ್‍ರನ್ನು ಮದುವೆಯಾದ ಬಳಿಕ ಇದು ಪ್ರಿಯಾಂಕಾ ಆಚರಿಸಿಕೊಂಡ ಮೊದಲ ಹುಟ್ಟುಹಬ್ಬವಾಗಿದೆ.

    ಸದಾ ವೇಷ ಭೂಷಣ, ಫೋಟೋಶೂಟ್, ಪ್ರವಾಸ ಹೀಗೆ ತಮ್ಮ ಜೀವನಶೈಲಿಯಿಂದ ಪಿಗ್ಗಿ ಸುದ್ದಿಯಾಗುತ್ತಿದ್ದರು. ಆದರೆ ಈ ಬಾರಿ ಪ್ರಿಯಾಂಕಾ ಹುಟ್ಟುಹಬ್ಬದ ಕೇಕ್ ಬಾರಿ ಸದ್ದು ಮಾಡುತ್ತಿದೆ. ಹುಟ್ಟುಹಬ್ಬ ಸಂಭ್ರಮದಲ್ಲಿ ಕಡುಕೆಂಪು ಬಣ್ಣದ ಡ್ರೆಸ್‍ನಲ್ಲಿ ಪ್ರಿಯಾಂಕಾ ಮಿಂಚುತ್ತಿದ್ದರು. ಅವರಿಗೆ ಮ್ಯಾಚಿಂಗ್ ಎಂಬಂತೆ ಹುಟ್ಟುಹಬ್ಬದ ಕೇಕ್ ಕೂಡ ಗೋಲ್ಡ್ ಹಾಗೂ ಕೆಂಪು ಬಣ್ಣದ ಕಾಂಬಿನೇಷನ್‍ನಲ್ಲೇ ತಯಾರಿಸಲಾಗಿತ್ತು.

    ಒಟ್ಟು ಐದು ಅಂತಸ್ತಿನ ಕೇಕನ್ನು ಪ್ರಿಯಾಂಕಾ ಕತ್ತರಿಸಿ ಖುಷಿಪಟ್ಟಿದ್ದು, ಇದರ ಬೆಲೆ ಬರೋಬ್ಬರಿ 3.45 ಲಕ್ಷ ರೂಪಾಯಿಯಾಗಿದೆ. ಈ ಬಗ್ಗೆ ಪಿಂಕ್ ವಿಲ್ಲಾ ವರದಿ ಮಾಡಿದ್ದು, ಮಿಯಾಮಿಯ ಡಿವೈನ್ ಡೆಲಿಕೆಸೀಸ್ ಈ ಕೇಕ್ ತಯಾರಿಸಿದ್ದಾರೆ. ಅಲ್ಲದೆ ಇದರೆ ಬೆಲೆ 5 ಸಾವಿರ ಯುಎಸ್ ಡಾಲರ್(ಅಂದಾಜು 3.45 ಲಕ್ಷ ರೂ.) ಎಂದು ತಿಳಿಸಿದೆ.

    ಪ್ರೀತಿಯ ಪತ್ನಿಗಾಗಿ ಪತಿ ನಿಕ್ ಈ ಕೇಕ್ ಆರ್ಡರ್ ಮಾಡಿದ್ದು, ಅದನ್ನು ತಯಾರಿಸಲು ಸುಮಾರು 24 ಗಂಟೆಗಳು ತೆಗೆದುಕೊಳ್ಳಲಾಗಿದೆ ಎಂದು ಡಿವೈನ್ ಡೆಲಿಕೆಸಿಯ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಕೇಕ್ ಕೆಂಪು ಮತ್ತು ಗೋಲ್ಡನ್ ಕಾಂಬಿನೇಷನ್‍ನ್ನಲ್ಲೇ ತಯಾರಿಸುವಂತೆ ತಿಳಿಸಿದ್ದರು. ಏಕೆಂದರೆ ಹುಟ್ಟುಹಬ್ಬಕ್ಕೆ ಪ್ರಿಯಾಂಕಾ ಕೂಡ ಕೆಂಪು ಬಣ್ಣದ ಡ್ರೆಸ್ ಹಾಕುತ್ತಾರೆ. ಅವರಿಗೆ ಗೋಲ್ಡನ್ ಕಲರ್ ಡಿಟೇಲಿಂಗ್ ಅಂದರೆ ಇಷ್ಟವಾಗುತ್ತೆ ಎಂದು ಸಿಬ್ಬಂದಿಗೆ ನಿಕ್ ತಿಳಿಸಿದ್ದರು ಎಂದು ವರದಿಯಾಗಿದೆ.

    ಈ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಜತೆ ಪತಿ ನಿಕ್, ಅಮ್ಮ ಮಧು ಚೋಪ್ರಾ ಹಾಗೂ ಸಹೋದರಿ ಪರಿಣಿತಿ ಚೋಪ್ರಾ ಸಹ ಕಾಣಿಸಿಕೊಂಡಿದ್ದರು.

  • ವಿಡಿಯೋ: ಕಾಲಿನ ಮೇಲೆ ಹರಿದು ಬಂದ ವಿಷಕಾರಿ ಹಾವಿನಿಂದ ಈತ ಪಾರಾಗೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರ!

    ವಿಡಿಯೋ: ಕಾಲಿನ ಮೇಲೆ ಹರಿದು ಬಂದ ವಿಷಕಾರಿ ಹಾವಿನಿಂದ ಈತ ಪಾರಾಗೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರ!

    ವಾಷಿಂಗ್ಟನ್: ಮನೆಯಲ್ಲೋ, ಹಿತ್ತಲಲ್ಲೋ ಹಾವು ಕಾಣಿಸಿಕೊಂಡ್ರೆ ಅದರ ಹತ್ರ ಹೋಗೋಕೂ ಭಯ ಪಡ್ತೀವಿ. ಅಂಥದ್ರಲ್ಲಿ ಮೈ ಮೇಲೆಯೇ ಹಾವು ಹರಿದು ಬಂದ್ರೆ ಏನಾಗ್ಬೇಡ. ಯೂಟ್ಯೂಬರ್ ನಿಕ್ ಬಿಶಾಪ್ ಎಂಬವರು ಕಾಡು ಪ್ರಾಣಿಗಳ ಮತ್ತು ಹಾವುಗಳ ಬಗ್ಗೆ ಡಾಕ್ಯುಮೆಂಟರಿ ಮಾಡಲು ಅಮೆರಿಕದಾದ್ಯಂತ ಸಂಚಾರ ಮಾಡ್ತಿರ್ತಾರೆ. ಹೀಗೆ ಒಮ್ಮೆ ಚಿತ್ರೀಕರಣ ಮಾಡಲೆಂದು ಹೋದಾಗ ಸುಸ್ತಾಯ್ತು ಅಂತ ಕುಳಿತಿದ್ದ ನಿಕ್ ಬಳಿ ವಿಷಕಾರಿ rattlesnake ಜಾತಿಯ ಹಾವು ಬಂದಿದೆ.

    ಹಾವು ಸಮೀಪ ಬರುತ್ತಿದ್ದಂತೆ ನಿಕ್ ನನಗೆ ಚಲಿಸಲು ಭಯವಾಗ್ತಿದೆ, ನಾನು ಮರಗಟ್ಟಿಹೋಗಿದ್ದೇನೆ ಅಂತ ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದು. ಹಾವನ್ನ ಓಡಿಸಲು ನಿಕ್ ಅದರ ಬಾಲ ಮುಟ್ಟಿದಾಗ ಅದು ಒಮ್ಮೆಲೆ ಆತನ ಕಾಲಿನ ಮೇಲೇರಿ ಬರುತ್ತದೆ. ಆದ್ರೂ ನಿಕ್ ಮತ್ತೊಮ್ಮೆ ಒಂದು ಕಡ್ಡಿಯಿಂದ ಅದರ ಬಾಲವನ್ನ ಮುಟ್ಟಿದ್ದು, ಅದು ಮೆಲ್ಲನೆ ನಿಕ್ ಪಕ್ಕದಲ್ಲೇ ಹರಿದು ಹಿಂದಕ್ಕೆ ಹೋಗುತ್ತದೆ.

    ವಿಡಿಯೋದ ವಿವರಣೆಯ ಪ್ರಕಾರ ಇದು ಈಸ್ಟರ್ನ್ ಡೈಮಂಡ್‍ಬ್ಯಾಕ್ rattlesnake ಆಗಿದ್ದು, ಇದು ಅತ್ಯಂತ ವಿಷಕಾರಿ ಹಾವಾಗಿದೆ. ಈ ಹಾವನ್ನ ಕೆಣಕಿದರಷ್ಟೆ ದಾಳಿ ಮಾಡುತ್ತದೆ. ಅಲ್ಲದೆ ಈ ಹಾವು ಕಚ್ಚಿದ್ರೆ ಮನುಷ್ಯರು ಸಾವನ್ನಪ್ಪುತ್ತಾರೆ ಎಂದು ವರದಿಯಾಗಿದೆ.

    ನಿಕ್ ತನ್ನ ಯೂಟ್ಯೂಬ್ ಖಾತೆ ನಿಕ್ ದಿ ವ್ರಾಂಗ್ಲರ್‍ನಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದು, ಇದು ಅತ್ಯಂತ ಅಪಾಯಕರವಾದ ವಿಷಕಾರಿ ಹಾವನ್ನ ಎದುರುಗೊಂಡಿದ್ದು. ಇದನ್ನ ಪ್ರಯತ್ನಿಸಬೇಡಿ ಅಂತ ವಿವರಣೆಯಲ್ಲಿ ಹೇಳಿದ್ದಾರೆ.

    ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಾಗಿನಿಂದ ಈವರೆಗೆ 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 90 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    ವಿಡಿಯೋ ನೋಡಿದವರಲ್ಲಿ ಕೆಲವರು ಇದು ನಿಜಕ್ಕೂ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು, ನಿನಗೆ ಬುದ್ಧಿ ಇಲ್ವಾ ಎಂದಿದ್ದಾರೆ. ಆದ್ರೆ ಹಾವು ಬಂದ್ರೂ ಕ್ಯಾಮೆರಾಮೆನ್ ಸಹಾಯಕ್ಕೆ ಧಾವಿಸದೇ ಇದ್ದಿದ್ದರಿಂದ ಕೆಲವರು ಈ ವಿಡಿಯೋ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

    https://www.facebook.com/Nickthewranglerfanpage/videos/1774746626188252/