Tag: ನಿಂಬೆಹಣ್ಣಿನ ರಸಂ

  • ಅನ್ನಕ್ಕೆ ಸಖತ್ ಟೇಸ್ಟ್ ನೀಡುತ್ತೆ ನಿಂಬೆಹಣ್ಣಿನ ರಸಂ

    ಅನ್ನಕ್ಕೆ ಸಖತ್ ಟೇಸ್ಟ್ ನೀಡುತ್ತೆ ನಿಂಬೆಹಣ್ಣಿನ ರಸಂ

    ನಾವಿಂದು ನಿಮಗೆ ತುಂಬ ಸುಲಭವಾಗಿ ನಿಂಬೆಹಣ್ಣಿನ ರಸಂ (Lemon Rasam) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಹೆಚ್ಚಿನ ತರಕಾರಿ ಇಲ್ಲದಿರುವಾಗ ಇದನ್ನು ನೀವು ಖಂಡಿತವಾಗಿಯೂ ಟ್ರೈ ಮಾಡಿ. ಅನಾರೋಗ್ಯ ಎನಿಸಿದ ಸಂದರ್ಭ, ನಾಲಿಗೆಗೆ ರುಚಿ ಹತ್ತುತ್ತಿಲ್ಲ ಎನಿಸಿದಾಗ ಇದರ ರುಚಿ ಒಮ್ಮೆ ನೀವು ನೋಡಲೇಬೇಕು. ಇದನ್ನು ಸೇವಿಸಿದ ಬಳಿಕ ಒಂದು ರೀತಿಯ ಉಲ್ಲಾಸದಾಯಕ ಅನುಭವವನ್ನು ನೀವು ಖಡಿತಾ ಪಡೆಯುತ್ತೀರಿ.

    ಬೇಕಾಗುವ ಪದಾರ್ಥಗಳು:
    ಹೆಸರು ಬೇಳೆ – 1 ಕಪ್
    ಹೆಚ್ಚಿದ ಟೊಮೆಟೊ – 1
    ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
    ಸೀಳಿದ ಹಸಿರು ಮೆಣಸಿನಕಾಯಿ – 3-4
    ಕರಿಬೇವಿನ ಎಲೆ – ಕೆಲವು
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಅರಿಶಿನ – ಅರ್ಧ ಟೀಸ್ಪೂನ್
    ನಿಂಬೆಹಣ್ಣು – 1
    ಒಗ್ಗರಣೆಗೆ:
    ತುಪ್ಪ – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಮುರಿದ ಒಣ ಕೆಂಪು ಮೆಣಸಿನಕಾಯಿ – 1
    ಹಿಂಗ್ – ಚಿಟಿಕೆ ಇದನ್ನೂ ಓದಿ: ಸೂಪರ್ ಟೇಸ್ಟಿ ಮೇಥಿ ಮಟರ್ ಮಲೈ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್‌ಗೆ ಹೆಸರು ಬೇಳೆಯನ್ನು ಹಾಕಿ, ಚಿಟಿಕೆ ಅರಿಶಿನ ಸೇರಿಸಿ, 2 ಕಪ್ ನೀರಿನೊಂದಿಗೆ 3-4 ಸೀಟಿಗಳಿಗೆ ಚೆನ್ನಾಗಿ ಬೇಯಿಸಿಕೊಳ್ಳಿ.
    * ಒಂದು ಬಾಣಲೆಯನ್ನು ಬಿಸಿ ಮಾಡಿ, ಅದರಲ್ಲಿ ಟೊಮೆಟೊ, ಶುಂಠಿ, ಮೆಣಸಿನಕಾಯಿ ಹಾಗೂ ಅರಿಶಿನ ಹಾಕಿ ಫ್ರೈ ಮಾಡಿಕೊಳ್ಳಿ.
    * ಈಗ 3 ಕಪ್ ನೀರು ಸೇರಿಸಿ, 10 ನಿಮಿಷ ಚೆನ್ನಾಗಿ ಕುದಿಸಿ.
    * ಬಳಿಕ ಬೇಯಿಸಿಟ್ಟುಕೊಂಡಿದ್ದ ಹೆಸರು ಬೇಳೆಯನ್ನು ಕುದಿಯುತ್ತಿರುವ ರಸಂಗೆ ಹಾಕಿ.
    * ಉಪ್ಪು, ಕರಿಬೇವಿನ ಸೊಪ್ಪು ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
    * ಅಗತ್ಯವಿದ್ದರೆ ಇನ್ನಷ್ಟು ನೀರನ್ನು ಸೇರಿಸಿ ಸ್ಥಿರತೆಯನ್ನು ಹೊಂದಿಸಿ.

    * 3-4 ನಿಮಿಷಗಳ ವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ, ಬಳಿಕ ಉರಿಯನ್ನು ಆಫ್ ಮಾಡಿ.
    * ಉರಿಯನ್ನು ಆಫ್ ಮಾಡಿದ ಬಳಿಕ ರಸಂಗೆ ನಿಂಬೆ ರಸವನ್ನು ಹಿಂಡಿ. (ಉರಿ ಆಫ್ ಮಾಡದೇ ನಿಂಬೆ ರಸ ಸೇರಿಸಿದರೆ ಕಹಿಯಾಗುವ ಸಾಧ್ಯತೆಯಿರುತ್ತದೆ.)
    * ಈ ನಡುವೆ ಒಗ್ಗರಣೆಯನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಚಿಕ್ಕ ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ.
    * ಸಾಸಿವೆ ಸಿಡಿದ ಬಳಿಕ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಹಿಂಗ್ ಸೇರಿಸಿ.
    * ತಕ್ಷಣ ಒಗ್ಗರಣೆಯನ್ನು ರಸಂಗೆ ಹಾಕಿ ಮಿಶ್ರಣ ಮಾಡಿ.
    * ಇದೀಗ ನಿಂಬೆಹಣ್ಣಿನ ರಸಂ ತಯಾರಾಗಿದ್ದು, ಬಿಸಿಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ಸ್ವಲ್ಪ ತುಪ್ಪ ಹಾಗೂ ಹಪ್ಪಳ ಜೊತೆಯಲ್ಲಿದ್ದರೆ ಸಿಂಪಲ್ ಆದರೂ ಸಖತ್ ಟೇಸ್ಟ್ ಎನಿಸುತ್ತದೆ. ಇದನ್ನೂ ಓದಿ: ಒಮ್ಮೆ ಮಾಡಿ ನೋಡಲೇಬೇಕು ಬೆಂಡೆಕಾಯಿ ಸಾಸಿವೆ

    Live Tv
    [brid partner=56869869 player=32851 video=960834 autoplay=true]

  • ನಿಂಬೆ ಹಣ್ಣಿನಿಂದ ಮಾಡಿ ರುಚಿಯಾದ  ರಸಂ

    ನಿಂಬೆ ಹಣ್ಣಿನಿಂದ ಮಾಡಿ ರುಚಿಯಾದ ರಸಂ

    ನಿಮ್ಮ ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳೊಂದಿಗೆ ತಯಾರಿಸಿದ ರಸಂ ಬಹಳ ಸಹಕಾರಿ. ರೋಗನಿರೋಧಕ ಶಕ್ತಿಯನ್ನು ನೀವು ಹೆಚ್ಚಿಸಿಕೊಳ್ಳಬೇಕಾ? ಹಾಗಿದ್ದರೆ ಈ ರಸಂ ಮಾಡಿ ಸವಿಯ ಬಹುದಾಗಿದೆ. ಬೇಯಿಸಿದ ಅನ್ನದೊಂದಿಗೆ ನಿಂಬೆಹಣ್ಣಿನ ರಸಂ ಸವಿಯಲ್ ಸಖತ್ ಟೇಸ್ಟ್ ಆಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಟೊಮೆಟೋ-1
    * ಶುಂಠಿ- ಸ್ವಲ್ಪ
    * ಕರಿಬೇವಿನ ಎಲೆ
    * ಹಸಿ ಮೆಣಸಿನಕಾಯಿ- 3
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅರಿಶಿಣ- 1 ಚಮಚ
    * ತೊಗರಿ ಬೇಳೆ-  ಅರ್ಧ ಕಪ್‌
    * ರುಚಿಗೆ ತಕ್ಕಷ್ಟು ಉಪ್ಪು
    * ನಿಂಬೆ- 1
    * ತುಪ್ಪ- 2 ಚಮಚ
    * ಸಾಸಿವೆ- 1 ಚಮಚ
    * ಜೀರಿಗೆ- 1 ಚಮಚ
    * ಒಣ ಮೆಣಸಿನಕಾಯಿ- 1
    * ಕಾಳು ಮೆಣಸಿನ ಪುಡಿ- ಅರ್ಧ ಚಮಚ

    ಮಾಡುವ ವಿಧಾನ:
    * ಪಾತ್ರೆಯಲ್ಲಿ ಟೊಮೆಟೋ, ಶುಂಠಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆ, ಅರಿಶಿಣ 10 ನಿಮಿಷ ಕುದಿಸಬೇಕು.
    * ಪ್ರೆಶರ್ ಕುಕ್ಕರ್ನಲ್ಲಿ ತೊಗರಿ ಬೇಳೆಯನ್ನು ಬೇಯಿಸಿಕೊಳ್ಳಬೇಕು.

    * ಬೇಯಿಸಿದ ತೊಗರಿ ಬೇಳೆ ಹಾಗೂ ಟೊಮೆಟೋವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಸೇರಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
    * ಈಗ ರಸಂನ್ನು ಕುದಿಯುಲು ಬಿಡಬೇಕು
    * ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, ಕರಿಬೇವು, ಕಾಳು ಮೆಣಸು ಸೇರಿಸಿ ರಸಂಗೆ ಒಗ್ಗರಣೆ ಹಾಕಿ. ಇದನ್ನೂ ಓದಿ:  ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

    * ನಂತರ ಕೊನೆಯಲ್ಲಿ ರಸಂಗೆ ನಿಂಬೆ ರಸವನ್ನು ಹಿಂಡಿದರೆ ರುಚಿಯಾದ ರಸಂ ಸವಿಯಲು ಸಿದ್ಧವಾಗುತ್ತದೆ.