Tag: ನಾಸೀರ್ ಹುಸೇನ್

  • ಕಲಬುರಗಿ ಪಾಲಿಕೆ ಚುನಾವಣೆ ಜೆಡಿಎಸ್‍ಗೆ ಮೇಯರ್ ಸ್ಥಾನ ಕೊಡುವವರಿಗೆ ನಮ್ಮ ಬೆಂಬಲ: ನಾಸಿರ್ ಹುಸೇನ್

    ಕಲಬುರಗಿ ಪಾಲಿಕೆ ಚುನಾವಣೆ ಜೆಡಿಎಸ್‍ಗೆ ಮೇಯರ್ ಸ್ಥಾನ ಕೊಡುವವರಿಗೆ ನಮ್ಮ ಬೆಂಬಲ: ನಾಸಿರ್ ಹುಸೇನ್

    ಕಲಬುರಗಿ: ಅಚ್ಚರಿಯ ಫಲಿತಾಂಶದೊಂದಿಗೆ ಅತಂತ್ರ ಸ್ಥಿತಿಯಲ್ಲಿರುವ ಕಲಬುರಗಿ ಮಹಾನಗರಪಾಲಿಕೆಯ ಮೇಯರ್ ಚುನಾವಣೆ ಕಗ್ಗಂಟು ಹಾಗೇಯೇ ಮುಂದುವರೆದಿದೆ. ತಮ್ಮ ಪಕ್ಷಕ್ಕೆ ಯಾರು ಮೇಯರ್ ಸ್ಥಾನ ಕೊಡುತ್ತಾರೋ ಆ ಪಕ್ಷಕ್ಕೆ ನಮ್ಮ ಬೆಂಬಲ ನೀಡುವುದಾಗಿ ಜನತಾ ದಳದ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷರಾದ ಉಸ್ತಾದ್ ನಾಸೀರ್ ಹುಸೇನ್ ಅವರು ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಈ ಯಾವುದೇ ಪಕ್ಷಗಳು ಆಹ್ವಾನಕ್ಕೆ ಬಂದರು ಸ್ವಾಗತ, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಬಿಟ್ರೆ ಕಾಂಗ್ರೆಸ್‍ನ ಯಾವ ನಾಯಕರು ಜೆಡಿಎಸ್‍ಗೆ ಸಂಪರ್ಕ ಮಾಡಿಲ್ಲ, ಆದರೆ ಬಿಜೆಪಿಯಿಂದ ಸಾಕಷ್ಟು ನಾಯಕರು ನಮ್ಮ ಸಂಪರ್ಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಸಹ ಮೇಯರ್ ಪಟ್ಟ ನಮ್ಮ ಪಕ್ಷಕ್ಕೆ ಯಾವ ಪಕ್ಷ ನೀಡುತ್ತದೆಯೋ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳೋಣ ಎಂದಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಜೆಡಿಎಸ್ ಮುಂದೆ ಮಂಡಿಯೂರಲು ಕಾಂಗ್ರೆಸ್ ಸಜ್ಜಾಗಿದ್ಯಾ?

    ಚುನಾವಣೆಯ ಫಲಿತಾಂಶದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಜೆಡಿಎಸ್ ಪಕ್ಷದ ನಾಲ್ವರು ಸದಸ್ಯರು ಕಲಬುರಗಿ ನಗರಕ್ಕೆ ಬಂದಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ನಮ್ಮ ಪಕ್ಷದ ಅಭ್ಯರ್ಥಿಯೇ ಮೇಯರ್ ಆಗುವುದು ನಿಶ್ಚಿತ ಹಾಗೂ ಜೆಡಿಎಸ್ ಪಕ್ಷ ನಮಗೆ ಬೆಂಬಲಿಸುವ ಆತ್ಮವಿಶ್ವಾಸನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್‍ನ ಡಾ. ಶರಣಪ್ರಕಾಶ್ ಪಾಟೀಲ್ ಅವರು ಕೂಡ ನಮ್ಮ ಪಕ್ಷವೇ ಪಾಲಿಕೆಯಲ್ಲಿ ಅಧಿಕಾರ ನಡೆಸಲಿದೆ ಎಂದು ಹೇಳಿದ್ದು, ಎರಡು ಪಕ್ಷಗಳು ತಮ್ಮ ತಮ್ಮ ಪಕ್ಷದವರೇ ಮೇಯರ್ ಆಗುವುದಾಗಿ ಹೇಳಿಕೆ ನೀಡುತ್ತಿದ್ದಾರೆ.

    ನಾಸೀರ್ ಹುಸೇನ್ ಅವರು ನೀಡಿದ ಹೇಳಿಕೆ ನೋಡಿದರೆ ಪಾಲಿಕೆಯಲ್ಲಿ ಮೂರು ಪಕ್ಷಗಳ ಪೈಕಿ ಯಾರು ಮೇಯರ್ ಆಗುವರು ಎಂಬುದು ಕಲಬುರಗಿ ನಗರದ ಜನತೆಯಲ್ಲಿ ಮೂಡಿದ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಮುಂದಿನ ವಾರವೇ ಮೇಯರ್ ಯಾರು ಎಂಬುದು ಸ್ಪಷ್ಟವಾಗಲಿದೆ. ಇದನ್ನೂ ಓದಿ: ಅತಂತ್ರವಾದರೂ ಬಿಜೆಪಿಗೆ ಅಧಿಕಾರ – ಕಲಬುರಗಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು?

  • ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿ ವಿಧಾನ ನೆರವೇರಿಸಿದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್

    ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿ ವಿಧಾನ ನೆರವೇರಿಸಿದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್

    ಬೆಂಗಳೂರು: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರು ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿವಿಧಾನ ನೆರವೇರಿಸಿ ಮಾನವೀಯತೆ ಮೆರೆದಿದ್ದು, ಈ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಅಂತಿಮ ವಿಧಿ ವಿಧಾನ ನಡೆಸಲು ಕುಟುಂಬಸ್ಥರು ಯಾರೂ ಇಲ್ಲದ ಕಾರಣ ಖುದ್ದು ನಾಸೀರ್ ಹುಸೇನ್ ಅವರೇ ನೆರವೇರಿಸಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಅಸ್ಥಿ ವಿಸರ್ಜನೆ ಪ್ರಕ್ರಿಯೆ ಪೂರ್ಣ ಮಾಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಜಪಾನಿ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕಿಯಾಗಿದ್ದ ಪ್ರೋ.ಸಾವಿತ್ರಿ ವಿಶ್ವನಾಥನ್ ಅವರ ಅಂತಿಮ ವಿಧಿ ವಿಧಾನವನ್ನು ನೆರವೇರಿಸುವ ಮೂಲಕ ನಾಸೀರ್ ಹುಸೇನ್ ಮಾನವೀಯತೆ ಮೆರೆದಿದ್ದಾರೆ.

    ಮೂಲತಃ ತಮಿಳುನಾಡಿನ ಬ್ರಾಹ್ಮಣ ಸಮುದಾಯದರಾಗಿದ್ದ ಸಾವಿತ್ರಿ ವಿಶ್ವನಾಥನ್, ನಿವೃತ್ತಿಯ ಬಳಿಕ ತಂಗಿ ಮಹಾಲಕ್ಷ್ಮೀ ಅತ್ರಿಯಾ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೊರೊನಾ ಸೋಂಕು ತಗುಲಿದ್ದರಿಂದ ಅಕ್ಕ, ತಂಗಿ ಇಬ್ಬರೂ ಇತ್ತೀಚೆಗೆ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವಿತ್ರಿ ವಿಶ್ವನಾಥನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇವರ ತಂಗಿ ಮಹಾಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣಕ್ಕೆ ಅಂತಿಮ ಕಾರ್ಯ ನೇರವೇರಿಸಲು ಸಾಧ್ಯವಾಗಿಲ್ಲ.

    ದೂರದ ಊರುಗಳಲ್ಲಿರುವ ಸಂಬಂಧಿಕರು ಸಹ ಬೆಂಗಳೂರಿಗೆ ಬರಲು ಆಗದಿರುವ ಹಿನ್ನೆಲೆ ಖುದ್ಧು ರಾಜ್ಯಸಭಾ ಸದಸ್ಯ ಡಾ.ನಾಸೀರ್ ಹುಸೇನ್ ದಂಪತಿ ಅಂತಿಮ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೆ ಮೇ 18ರಂದು ಮೈಸೂರಿನಲ್ಲಿ ಕಾವೇರಿ ನದಿಯಲ್ಲಿ ನಾಸೀರ್ ಹುಸೇನ್ ಅವರು ಅಸ್ಥಿಯನ್ನು ವಿಸರ್ಜನೆ ಮಾಡಿದ್ದಾರೆ.

  • ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು

    ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು

    ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಚರ್ಚೆ ವೇಳೆ ಗದ್ದಲ ಮಾಡಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆ ವಿಪಕ್ಷದ ಎಂಟು ಮಂದಿ ಸಂಸದರನ್ನು ಒಂದು ವಾರಗಳ ಕಲಾಪದಿಂದ ಅಮಾನತು ಮಾಡಲಾಗಿದೆ.

    ಇಂದು ಕಲಾಪ ಆರಂಭವಾಗುತ್ತಿದ್ದಂತೆ ನಿನ್ನೆ ಘಟನೆಯ ಬಗ್ಗೆ ಸಭಾಧ್ಯಕ್ಷ ವೆಂಕಯ್ಯನಾಯ್ಡು ಆಕ್ರೋಶ ವ್ಯಕ್ತಪಡಿಸಿದರು. ಉಪಾಧ್ಯಕ್ಷರ ಕರ್ತವ್ಯ ನಿಭಾಯಿಸಲು ಅಡ್ಡಿ ಪಡಿಸಿದ ಆರೋಪದ ಮೇಲೆ ಡೆರೆಕ್ ಒ’ಬ್ರಿಯೆನ್ ಸೇರಿ ಎಂಟು ಮಂದಿ ಸಂಸದರು ಅಮಾನತು ಮಾಡಲಾಯಿತು.

    ನಿನ್ನೆ ಚರ್ಚೆ ವೇಳೆ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಸದನದ ಬಾವಿಗಿಳಿದು ಬಿಲ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಡೆರೆಕ್ ಒ’ಬ್ರಿಯೆನ್ ಜೊತೆಗೆ ಕರ್ನಾಟಕದ ಕಾಂಗ್ರೆಸ್ ಸಂಸದರ ಸೈಯದ್ ನಾಸೀರ್ ಹುಸೇನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್ ಮತ್ತು ಎಲಮರನ್ ಕರೀಮ್ ಮಸೂದೆ ವಿರೋಧಿಸಿ ಸದನದ ಬಾವಿಗಿಳಿದಿದ್ದರು. ಇದನ್ನೂ ಓದಿ: ವಿರೋಧದ ನಡುವೆ 2 ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಪಾಸ್‌

    ಸಂಸದರ ಅಮಾನತು ನಿರ್ಧಾರ ಪ್ರಕಟಿಸುವ ಮುನ್ನ ಮಾತನಾಡಿದ ಸಭಾಧ್ಯಕ್ಷ ವೆಂಕಯ್ಯನಾಯ್ಡು ನಿನ್ನೆ ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಸಭೆಗೆ ನಿನ್ನೆ ಕೆಟ್ಟ ದಿನ, ಉಪ ಸಭಾಧ್ಯಕ್ಷರಿಗೆ ಸದಸ್ಯರು ದೈಹಿಕ ಬೆದರಿಕೆ ಹಾಕಿದ್ದಾರೆ. ಕರ್ತವ್ಯ ನಿಭಾಯಿಸಲು ಅಡ್ಡಿಪಡಿಸಿದ್ದಾರೆ ಇದೊಂದು ದುರಾದೃಷ್ಟವಕರ ಬೆಳವಣಿಗೆ ಸಂಸದರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರದ ಕೃಷಿ ಮಸೂದೆಯಲ್ಲಿ ರೈತರ ಶೋಷಣೆಯೇ ಹೆಚ್ಚು – ರಾಜ್ಯಸಭೆಯಲ್ಲಿ ಹೆಚ್‍ಡಿಡಿ ವಿರೋಧ