Tag: ನಾಸಿರ್ ಹುಸೇನ್

  • ವಿಧಾನಸೌಧದಲ್ಲೇ ಪಾಕ್‌ ಜಿಂದಾಬಾದ್‌ ಘೋಷಣೆ – 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ

    ವಿಧಾನಸೌಧದಲ್ಲೇ ಪಾಕ್‌ ಜಿಂದಾಬಾದ್‌ ಘೋಷಣೆ – 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ

    ಬೆಂಗಳೂರು: ರಾಜ್ಯಸಭೆ ಚುನಾವಣಾ (Rajya Sabha Election) ವೇಳೆ ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣ ನಡೆದು 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ ಯಾಕೆ ಎಂಬ ಪ್ರಶ್ನೆ ಎದ್ದಿದೆ.

    ಕಾಂಗ್ರೆಸ್‌ ಸದಸ್ಯ ನಾಸಿರ್ ಹುಸೇನ್ (Nasir Hussain) ಅವರು ಗೆದ್ದ ಖುಷಿಯಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಎಂದು ಘೋಷಣೆ ಕೂಗಿದ್ದರು.ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ನಂತರದ ದಿನಗಳಲ್ಲಿ ಮೂವರು ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದಿದ್ದರು.  ಇದನ್ನೂ ಓದಿ: ಮಣಿಪುರದ ನೂತನ ರಾಜ್ಯಪಾಲರಾಗಿ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇಮಕ

    ಪೊಲೀಸರು ದೋಷಾರೋಪ ಪಟ್ಟಿಯನ್ನು (Chargesheet) ಸಲ್ಲಿಸಿಲ್ಲ ಅಷ್ಟೇ ಅಲ್ಲದೇ ಇಲ್ಲಿಯವರೆಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ.

    ನವ ಮಾಸಗಳೇ ಕಳೆದರೂ ಅವರು ಪೊಲೀಸರ ಮುಂದೆ ಹಾಜರಾಗುವ ಸಾಹಸ ಮಾಡಿಲ್ಲ. ಸದ್ಯ ಪೊಲೀಸರು (Police) ಏನು ಮಾಡಲು ಆಗದೇ ಒದ್ದಾಡುತ್ತಿದ್ದಾರೆ. ಪೊಲೀಸರ ಈ ನಡೆ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

     

  • ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳು ಮೂರು ದಿನ ಪೊಲೀಸ್ ಕಸ್ಟಡಿಗೆ

    ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳು ಮೂರು ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಮೂರು ದಿನ  ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.

    ಇಂದು ಸಂಜೆ ಅಶೋಕನಗರ ಪೊಲೀಸರು ದೆಹಲಿ ಮೂಲದ ಇಲ್ತಾಜ್, ಆರ್‌ ಟಿ ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಪೊಲೀಸರು ಕೋರಮಂಗಲದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.

    ಘಟನೆ ಏನು..?: 2024ರ ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ (Nasser Hussain) ಅವರು ಬೆಂಬಲಿಗರೊಂದಿಗೆ ವಿಧಾನಸೌಧದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ನಾಸೀರ್ ಹುಸೇನ್ ಅವರ ಕಿರು ಸಂದರ್ಶನ ಮಾಡಲು ಮುಂದಾದಾಗ ಅವರ ಬೆಂಬಲಿಗರಿದ್ದ ಗುಂಪಿನಿಂದ ʼಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ʼ ಎಂಬ ಘೋಷಣೆ ಕೇಳಿಬಂದಿತ್ತು. ಈ ಸುದ್ದಿಯನ್ನು ಪಬ್ಲಿಕ್‌ ಟಿವಿ ಬ್ರೇಕ್‌ ಮಾಡಿತ್ತು. ಆದರೆ ಕಾಂಗ್ರೆಸ್‌ ನಾಯಕರು ಮಾಧ್ಯಮ ವರದಿ ಸುಳ್ಳೆಂದು ಹೇಳುತ್ತಲೇ ಬಂದರು.

    ಈ ನಡುವೆ ಪೊಲೀಸರು ಘೋಷಣೆ ಕೂಗಿರುವುದಕ್ಕೆ ಸಂಬಂಧಪಟ್ಟ ವೀಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದರು. ಇದೀಗ FSL ವರದಿಯಲ್ಲಿ ಪಾಕ್‌ ಪರ ಘೋಷಣೆ ಕೂಗಿರುವುದು ದೃಢಪಟ್ಟ ನಂತರ ಮೂವರ ಬಂಧನ ಮಾಡಲಾಗಿದೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೊಷಣೆ ಆರೋಪ- ಮೂವರ ಬಂಧನ

    ಈ ಸಂಬಂಧ ಸೆಂಟ್ರಲ್‌ ಡಿಸಿಪಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶದ ಸಂದರ್ಭದಲ್ಲಿʼಪಾಕಿಸ್ತಾನ ಜಿಂದಾಬಾದ್‌ʼ ಎಂಬ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ FSL ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂವರನ್ನು ಬಂಧಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ- ಮೂವರ ಬಂಧನ

    ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ- ಮೂವರ ಬಂಧನ

    ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ದೆಹಲಿ ಮೂಲದ ಇಲ್ತಾಜ್, ಆರ್‌ ಟಿ ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಎಂದು ಗುರುತಿಸಲಾಗಿದೆ. ಪಾಕಿಸ್ತಾನ್ (Pakistan) ಜಿಂದಾಬಾದ್‌ ಎಂದು ವಿಧಾನಸೌಧದಲ್ಲಿ‌ (Vidhanasoudha) ಕೂಗಿರುವ ವಿಚಾರ ಸಂಬಂಧ FSL ವರದಿಯಲ್ಲಿ ದೃಢಪಟ್ಟ ನಂತರ ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಸದ್ಯ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಬಳಿಕ ಪೊಲೀಸರು ಅವರನ್ನು ಕೋರಮಂಗಲದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: ಯಾರ ಅನುಮತಿ ಪಡೆದು ಪರೀಕ್ಷೆ ಮಾಡಿದ್ದಾರೆ- ಖಾಸಗಿ ಎಫ್‌ಎಸ್‌ಎಲ್‌ ವರದಿಗೆ ಪರಮೇಶ್ವರ್‌ ಗರಂ

    ಈ ಸಂಬಂಧ ಸೆಂಟ್ರಲ್‌ ಡಿಸಿಪಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶದ ಸಂದರ್ಭದಲ್ಲಿʼಪಾಕಿಸ್ತಾನ ಜಿಂದಾಬಾದ್‌ʼ ಎಂಬ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ FSL ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂವರನ್ನು ಬಂಧಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಘಟನೆ ಏನು..?: 2024ರ ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ (Nasser Hussain) ಅವರು ಬೆಂಬಲಿಗರೊಂದಿಗೆ ವಿಧಾನಸೌಧದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ನಾಸೀರ್ ಹುಸೇನ್ ಅವರ ಕಿರು ಸಂದರ್ಶನ ಮಾಡಲು ಮುಂದಾದಾಗ ಅವರ ಬೆಂಬಲಿಗರಿದ್ದ ಗುಂಪಿನಿಂದ ʼಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ʼ ಎಂಬ ಘೋಷಣೆ ಕೇಳಿಬಂದಿತ್ತು. ಈ ಸುದ್ದಿಯನ್ನು ಪಬ್ಲಿಕ್‌ ಟಿವಿ ಬ್ರೇಕ್‌ ಮಾಡಿತ್ತು. ಆದರೆ ಕಾಂಗ್ರೆಸ್‌ ನಾಯಕರು ಮಾಧ್ಯಮ ವರದಿ ಸುಳ್ಳೆಂದು ಹೇಳಿದ್ದರು. ಬಳಿಕ  ಪೊಲೀಸರು ಆ ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದರು.

  • ಅಜಾನ್ ತೀರ್ಪು ಎಲ್ಲ ಧರ್ಮದ ದೇವಸ್ಥಾನಗಳಿಗೆ ಅನ್ವಯ: ನಾಸಿರ್ ಹುಸೇನ್

    ಅಜಾನ್ ತೀರ್ಪು ಎಲ್ಲ ಧರ್ಮದ ದೇವಸ್ಥಾನಗಳಿಗೆ ಅನ್ವಯ: ನಾಸಿರ್ ಹುಸೇನ್

    ಕಲಬುರಗಿ: ಹಿಂದೂ ಸಂಘಟನೆಗಳು ಮತ್ತು ರಾಜ್ಯ ಸರ್ಕಾರ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕೆಡಿಸುವಲ್ಲಿ ಮುಂದಾಗಿವೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಹುಸೇನ್ ಹೇಳಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದೂ ಸಂಘಟನೆಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಶಾಲೆಯಲ್ಲಿ ನಡೆದ ವಿಷಯವನ್ನು ಬಿಜೆಪಿ ದುಬ9ಳಕೆ ಮಾಡಿದ್ದಾರೆ. ಹಿಜಬ್, ಹಲಾಲ್ ಕಟ್, ಜಟ್ಕಾ ಕಟ್, ಅಜಾನ್ ಇಂತಹ ವಿಷಯಗಳನ್ನು ಮುನ್ನೆಲೆಗೆ ತಂದು ಶಾಂತಿ ಸೌಹಾರ್ದತೆ ಕೆಡಿಸುತ್ತಿವೆ ಎಂದರು. ಇದನ್ನೂ ಓದಿ: ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

    ಹಿಂದೂ ಸಂಘಟನೆಗಳು ದೇವಸ್ಥಾನಗಳ ಬಳಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ ಮಾಡಿದರು. ಮಾವಿನ ಹಣ್ಣು ಕೊಡದಂತೆ ಕರಪತ್ರಗಳನ್ನು ಹಂಚಿದರು. ಹೀಗಾಗಿ ಅಜಾನ್ ಎಲ್ಲ ಧಮ9ದ ದೇವಸ್ಥಾನಗಳಿಗೆ ಅನ್ವಯವಾಗುತ್ತದೆ. ಆದರೆ ರಾಜ್ಯ ಸರ್ಕಾರ ಜನರ ಮುಂದೆ ಕೇವಲ ಅಜಾನ್ ಬಗ್ಗೆ ಮಾತ್ರ ಬಿಂಬಿಸಿತು ಎಂದರು.

    ಈ ಘಟನೆಗಳು ಎಲ್ಲವನ್ನೂ ನಮ್ಮ ನಾಯಕರಾದ ಕುಮಾರಸ್ವಾಮಿ ಅವರು ತಡೆಯುತ್ತಿದ್ದಾರೆ. ಈ ವಿಷಯಗಳಲ್ಲಿ ಕಾಂಗ್ರೆಸ್ ಮೌನ ವಹಿಸಿದ್ದು, ಹಿಂದೂ-ಮುಸ್ಲಿಂ ವಿಷಯದಲ್ಲಿ ನಮಗೆ ನಷ್ಟ ಆಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಮೌನ ತಾಳಿತು ಎಂದರು. ಇದನ್ನೂ ಓದಿ: ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ

    KUMARASWAMY

    ರಾಜ್ಯ ಸರ್ಕಾರ ಸಣ್ಣ ಪುಟ್ಟ ಸಂಘಟನೆಗಳನ್ನು ಕಡಿವಾಣ ಹಾಕಲು ವಿಫಲವಾಗಿವೆ. ಇದರಿಂದ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕೆಡಿಸಿವೆ. ಇಂತಹ ಘಟನೆಗಳನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದರು.

    ರಾಜ್ಯ ಸಕಾ9ರದ ಅಜೆಂಡಾಗಳನ್ನು ನಾವು ಯಶಸ್ವಿಯಾಗಲು ಬಿಡುವುದಿಲ್ಲ. ಆದರೆ ಇವೆಲ್ಲವೂ ಅಜೆಂಡಾಗಳು ಬಿಜೆಪಿ ಅವರಿಗೆ ಬಹುಮುಖ್ಯ ಆಗಿವೆ. ಮುಂದಿನ ಬಾರಿ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂದರು.

    ಧ್ರುವೀಕರಣವು ಉತ್ತರ ಪ್ರದೇಶದ ಮತ್ತು ಇತರೆ ಕಡೆಗಳಲ್ಲಿ ನಡೆಯಬಹುದು. ಆದರೆ ಕನಾ9ಟಕದಲ್ಲಿ ನಡೆಯುವುದಿಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದರೆ, ಗೆಲ್ಲುವುದು ಸಾಧ್ಯವಿಲ್ಲ ಎಂದರು.

  • ‘ಧೋನಿಯಂತಹ ಆಟಗಾರರು ಅನೇಕ ತಲೆಮಾರುಗಳ ಬಳಿಕ ಬರುತ್ತಾರೆ’

    ‘ಧೋನಿಯಂತಹ ಆಟಗಾರರು ಅನೇಕ ತಲೆಮಾರುಗಳ ಬಳಿಕ ಬರುತ್ತಾರೆ’

    – ನಿವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ

    ಲಂಡನ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ ಎಂದು ಇಂಗ್ಲೆಂಡ್‍ನ ಮಾಜಿ ನಾಯಕ, ನಿರೂಪಕ ನಾಸಿರ್ ಹುಸೇನ್ ಮನವಿ ಮಾಡಿಕೊಂಡಿದ್ದಾರೆ.

    ಮಾಧ್ಯಮ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಎಂ.ಎಸ್.ಧೋನಿ ಒಮ್ಮೆ ನಿವೃತ್ತಿ ಘೋಷಿಸಿ ಬಿಟ್ಟರೆ ಅವರು ಹಿಂತಿರುಗುವುದಿಲ್ಲ. ಅವರಂತಹ ಆಟಗಾರರು ಅನೇಕ ತಲೆಮಾರುಗಳ ನಂತರ ಬರುತ್ತಾರೆ. ಧೋನಿ ಅವರನ್ನು ನಾನು ಗಮನಿಸಿದ ಪ್ರಕಾರ ಅವರು ಇನ್ನೂ ಭಾರತೀಯ ಕ್ರಿಕೆಟ್‍ಗೆ ಸಾಕಷ್ಟು ಕೊಡುಗೆ ನೀಡಬಲ್ಲರು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

    ಧೋನಿ ಒಂದು ಅಥವಾ ಎರಡು ಬಾರಿ ಗುರಿಯನ್ನು ಬೆನ್ನಟ್ಟಲಿಲ್ಲ ಎಂಬುದು ನಿಜ. ವಿಶೇಷವಾಗಿ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಹಾಗೆ ಆಗಿದೆ. ಆದರೆ ಅವರಿಗೆ ಇನ್ನೂ ಪ್ರತಿಭೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ ಎಂದು ಕೇಳಿಕೊಂಡರು.

    ಇಷ್ಟು ಸುದೀರ್ಘ ವಿರಾಮದ ನಂತರ ಎಂ.ಎಸ್.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳುವುದು ಸುಲಭವಲ್ಲ ಎಂದು ಸುನಿಲ್ ಗವಾಸ್ಕರ್, ಕಪಿಲ್ ದೇವ್, ವಿರೇಂದ್ರ ಸೆಹ್ವಾಗ್ ಅವರಂತಹ ಅನೇಕ ಟೀಂ ಇಂಡಿಯಾದ ಪ್ರಮುಖ ಮಾಜಿ ಆಟಗಾರರು ಹೇಳಿದ್ದಾರೆ. ಆದರೆ 1999ರಿಂದ 2003ರವರೆಗೆ ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಹುಸೇನ್ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಎಂ.ಎಸ್.ಧೋನಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ. ಇದು ಪ್ರತಿಯೊಬ್ಬ ಆಟಗಾರನಿಗೂ ಅನ್ವಯಿಸುತ್ತದೆ. ಧೋನಿಗೆ ಅವರ ಮಾನಸಿಕ ಸ್ಥಿತಿಯ ಅರಿವಿದೆ ಮತ್ತು ಅಂತಿಮವಾಗಿ ಆಯ್ಕೆದಾರರು ಅವರನ್ನು ಕೈಬಿಡಬಾರದು ಎಂದು ಹುಸೇನ್ ಹೇಳಿದ್ದಾರೆ.

    ಧೋನಿ ಕಮ್‍ಬ್ಯಾಕ್‍ಗೆ ಐಪಿಎಲ್ ಹೊಡೆತ:
    ಧೋನಿ ಕಳೆದ ವರ್ಷ ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿತ್ತು. ಅಂದಿನಿಂದ ಧೋನಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಸಿಸಿಐ ಅವರನ್ನು ಒಪ್ಪಂದದ ಪಟ್ಟಿಯಿಂದ ಕೈಬಿಟ್ಟಿತ್ತು. ಅಂದಿನಿಂದ ಅವರ ನಿವೃತ್ತಿಯ ಬಗ್ಗೆ ಉಹಾಪೋಹಗಳು ಕೇಳಿ ಬಂದಿದ್ದವು. ಅದೇ ಸಮಯದಲ್ಲಿ ಎಂಎಸ್‍ಡಿ ಮರಳುವ ಏಕೈಕ ದಾರಿಯೆಂದರೆ ಐಪಿಎಲ್ ಆಗಿತ್ತು. ಆದರೆ ಅದು ಕೂಡ ಕೊರೊನಾ ವೈರಸ್‍ನಿಂದಾಗಿ ಇಕ್ಕಟ್ಟಿಗೆ ಸಿಲುಕಿದೆ. ಬಿಸಿಸಿಐ ಈಗಾಗಲೇ ಏಪ್ರಿಲ್ 15 ರವರೆಗೆ ಮುಂದೂಡಿದೆ. ಈಗ ಏ.30ರವರೆಗೆ ಲಾಕ್‍ಡೌನ್ ಘೋಷಣೆಯಾಗಿರುವ ಕಾರಣ ಐಪಿಎಲ್ ನಡೆಯುವುದು ಅನುಮಾನ.

    ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಧೋನಿ ತಂಡಕ್ಕೆ ಮರಳುವುದು ಐಪಿಎಲ್‍ನಲ್ಲಿ ಅವರು ತೋರುವ ಪ್ರದರ್ಶನದ ಮೇಲೆ ಮಾತ್ರ ನಿರ್ಧಾರವಾಗುತ್ತದೆ ಎಂದು ಹೇಳಿದ್ದರು.