Tag: ನಾಸಿರುದ್ಧೀನ್ ಶಾ

  • ನಟ ನಾಸಿರುದ್ಧೀನ್ ಶಾ ಭಯೋತ್ಪಾದಕರ ಬೆಂಬಲಿಗ : ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಕಟುನುಡಿ

    ನಟ ನಾಸಿರುದ್ಧೀನ್ ಶಾ ಭಯೋತ್ಪಾದಕರ ಬೆಂಬಲಿಗ : ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಕಟುನುಡಿ

    ಬಾಲಿವುಡ್ ಖ್ಯಾತನಟ ನಾಸಿರುದ್ಧೀನ್ ಶಾ ವಿರುದ್ಧ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಕಟುನುಡಿಗಳನ್ನು ಆಡಿದ್ದಾರೆ. ಹಿರಿಯ ನಟನನ್ನು ಅಗ್ನಿಹೋತ್ರಿ ಭಯೋತ್ಪಾದಕರ ಬೆಂಬಲಿಗರಿಗೆ ಹೋಲಿಸಿದ್ದಾರೆ.  ತಮ್ಮ ಸಿನಿಮಾಗಳ ಬಗ್ಗೆ ನಾಸಿರುದ್ಧೀನ್ ಆಡಿದ ಮಾತುಗಳಿಗೆ ತಿರುಗೇಟು ನೀಡಿದ್ದಾರೆ.

    ಸನ್ನಿ ಡಿಯೋಲ್ ನಟನೆಯ ‘ಗದರ್ 2’ (Gadar 2) ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಜನಮನ್ನಣೆ ಗಳಿಸಿದೆ. ಹೀಗಿರುವಾಗ ಗದರ್ 2 ಮತ್ತು ದಿ ಕಾಶ್ಮೀರ್ ಫೈಲ್ಸ್ (The Kashmir Files) ನಂತಹ ಯಶಸ್ಸಿ ಚಿತ್ರಗಳ ಬಗ್ಗೆ ಬಾಲಿವುಡ್‌ನ ಖ್ಯಾತ ನಟ ನಸೀರುದ್ದೀನ್ ಶಾ (Naseeruddin Shah)  ಟೀಕಿಸಿದ್ದರು. ಈ ರೀತಿಯ ಸಿನಿಮಾಗಳು ಸಮಾಜಕ್ಕೆ ಹಾನಿಕರ ಎಂದು ಮಾತನಾಡಿದ್ದರು. ಇದನ್ನೂ ಓದಿ:‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

    ಇತ್ತೀಚಿನ ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ (Sunny Deol) ನಟನೆಯ ಗದರ್ 2 (Gadar 2) ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅತಿಯಾದ ದೇಶಪ್ರೇಮ ಅಪಾಯಕಾರಿ. ಸಿನಿಮಾದ ಜನಪ್ರಿಯತೆ ಅನ್ನೋದು ಇದರಿಂದಲೇ ಪ್ರೇರಿತಗೊಂಡಿದೆ. ಇಂದು ನಿಮ್ಮ ದೇಶವನ್ನು ಪ್ರೀತಿಸಿದರೆ ಸಾಕಾಗುವುದಿಲ್ಲ, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕು. ದಿ ಕೇರಳ ಸ್ಟೋರಿ, ಗದರ್ 2 ಚಿತ್ರಗಳು ಸಾಕಷ್ಟು ಹಾನಿಕರ. ನಾನು ಆ ಚಿತ್ರಗಳನ್ನು ನೋಡಿಲ್ಲ. ಆದರೆ, ಅವು ಯಾವ ವಿಚಾರದ ಬಗ್ಗೆ ಇದೆ ಅನ್ನೋದು ಗೊತ್ತಿದೆ ಎಂದಿದ್ದಾರೆ.

    ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಕಮಾಯಿ ಮಾಡಿತ್ತು. ಕೇರಳದ ಯುವತಿಯರನ್ನು ಮತಾಂತರ ಮಾಡಿ ಉಗ್ರ ಸಂಘಟನೆಗೆ ಅವರನ್ನು ಸೇರಿಸುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದು ನೈಜ ಘಟನೆ ಆಧಾರಿತ ಎಂದು ತಂಡ ಹೇಳಿಕೊಂಡಿತ್ತು. ಅಂದು ಚಿತ್ರವನ್ನು ನಸೀರುದ್ದೀನ್ ಶಾ (Naseeruddin Shah) ಟೀಕಿಸಿದ್ದರು.

     

    ‘ಗದರ್ 2’ ಚಿತ್ರದ ಕಥೆಯೂ ಭಾರತ – ಪಾಕಿಸ್ತಾನ ಕುರಿತು ಒಳಗೊಂಡ ಕಥೆಯಾಗಿದೆ. ಮಗನ ರಕ್ಷಣೆಗೆ ಪಾಕಿಸ್ತಾನಕ್ಕೆ ತೆರಳುವ ತಂದೆಯಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಾರೆ. ನಾಯಕಿಯಾಗಿ ಅಮೀಷಾ ಪಟೇಲ್ ನಟಿಸಿದ್ದಾರೆ. ಅಂದಹಾಗೆ ಇತ್ತೀಚಿಗೆ ಚಿತ್ರತಂಡ ಸಕ್ಸಸ್ ಪಾರ್ಟಿ ಕೂಡ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

    ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

    ಸಾಕಷ್ಟು ಸದ್ದು ಮಾಡಿ, ಬಾಕ್ಸ್ ಆಫೀಸಿನಲ್ಲಿ ದುಡ್ಡೂ ಮಾಡಿರುವ ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾ (Adah Sharma)  ಕೆಲ ಸ್ಟಾರ್ ನಟರಿಗೆ ತಮ್ಮ ಮಾತಿನಲ್ಲೇ ತಿವಿದಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ ವಿರೋಧಿಸಿ ಮಾತನಾಡಿದ್ದ ಕಮಲ್ ಹಾಸನ್, ನಾಸಿರುದ್ದೀನ್ ಶಾ ಸೇರಿದಂತೆ ಹಲವರಿಗೆ ತಮ್ಮ ಮಾತಿನಲ್ಲೇ ಏಟು ನೀಡಿದ್ದಾರೆ ಅದಾ. ‘ನಮ್ಮ ಸಿನಿಮಾದ ಓಟವನ್ನು ಕಟ್ಟಿ ಹಾಕಲು ಕೆಲವು ನಟರು ಪ್ರಯತ್ನಪಟ್ಟರು. ಆದರೆ, ಅದು ಆಗಲಿಲ್ಲ. ಯಾರ ಸಾಮರ್ಥ್ಯ ಏನು ಅಂತ ಗೊತ್ತಾಗಿದೆ’ ಎಂದು ಮಾತನಾಡಿದ್ದಾರೆ.

    ಈ ಹಿಂದೆ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ (Naseeruddin Shah) ‘ದಿ ಕೇರಳ ಸ್ಟೋರಿಬಗ್ಗೆ ಕಾಮೆಂಟ್ ಮಾಡಿದ್ದರು. ಸಿನಿಮಾವನ್ನು ತಾವು ಯಾವತ್ತೂ ನೋಡುವುದಿಲ್ಲ ಎಂದಿದ್ದ ಅವರು,  ಸಿನಿಮಾ ಗೆದ್ದಿದೆ ಎಂದ ಮಾತ್ರಕ್ಕೆ ಅದು ಒಳ್ಳೆಯ ಗೆಲುವಲ್ಲ. ಅದೊಂದು ಕೆಟ್ಟ ಟ್ರೆಂಡಿನ ಗೆಲುವು ಎಂದು ಪ್ರತಿಕ್ರಿಯಿಸಿದ್ದರು. ದ್ವೇಷವನ್ನು ಹಂಚುತ್ತಿರುವ ಕುರಿತು ಅವರು ಕಳವಳವನ್ನು  ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಇನ್ನೆಷ್ಟು ದಿನ ದ್ವೇಷವನ್ನು ಹಂಚುತ್ತೀರಿ ಎಂದು ಪ್ರಶ್ನೆ ಮಾಡಿದ್ದರು.

    ಬಾಕ್ಸ್ ಆಫೀಸಿನಲ್ಲಿ ಇನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಬಗ್ಗೆ ಹಿಂದೆ ಕಮಲ್ ಹಾಸನ್ (Kamal Haasan) ಕೂಡ ಮಾತನಾಡಿದ್ದರು. ಅದೊಂದು ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದರು. ಸತ್ಯವನ್ನು ಹೇಳದೇ ಅಸತ್ಯವನ್ನೇ ತುಂಬಿರುವಂತಹ ಚಿತ್ರವದು ಎಂದು ಮಾತನಾಡಿದ್ದರು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಅಬುಧಾಬಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಕಮಲ್ ಹಾಸನ್,   ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕುಎಂದು ಪ್ರತಿಕ್ರಿಯಿಸಿದ್ದರು.

    ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಕಥೆಯೇ ಬೋಗಸ್ ಎಂದು ಹಲವರು ಈಗಾಗಲೇ ಹಲವರು ವಾದ ಮಾಡಿದ್ದಾರೆ. ಅವರು ಹೇಳಿದ ಪ್ರಮಾಣದಲ್ಲಿ ಮಹಿಳೆಯರು ಇಸ್ಲಾಂ ಮೂಲಭೂತವಾದಕ್ಕೆ ಸಿಲುಕಿಲ್ಲ ಎಂದು ಚರ್ಚೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ಟೀಮ್ ಮಾಧ್ಯಮಗೋಷ್ಠಿ ನಡೆಸಿ, ಅಲ್ಲಿಗೆ ಸಂತ್ರಸ್ತರನ್ನು ಕರೆತಂದಿದ್ದರು. ಒಬ್ಬೊಬ್ಬರ ಕಥೆಯನ್ನು ಸಿನಿಮಾ ಟೀಮ್ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]