Tag: ನಾಸಿಕ್

  • ಯೋಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ – ಉದ್ದವ್ ವಿರುದ್ಧ ದೂರು

    ಯೋಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ – ಉದ್ದವ್ ವಿರುದ್ಧ ದೂರು

    ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರ  ಪೊಲೀಸರು ಬಂಧಿಸಿದ ಬೆನ್ನಲ್ಲೇ ಈಗ ಬಿಜೆಪಿ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ದೂರು ನೀಡಿದೆ.

    ಉದ್ಧವ್ ಠಾಕ್ರೆ, ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕಿ ರಶ್ಮಿ ಠಾಕ್ರೆ, ಯುವಾ ಸೇನಾ ಅಧ್ಯಕ್ಷ ವರುಣ್ ಸರ್ದೇಸಾಯಿ ಅವರ ವಿರುದ್ಧ ಬಿಜೆಪಿ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿದೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ – ಕೇಂದ್ರ ಸಚಿವ ನಾರಾಯಣ ರಾಣೆ ಅರೆಸ್ಟ್

    ಮೂರು ದೂರುಗಳು ನಾಸಿಕ್‌ನಲ್ಲಿ ದಾಖಲಾಗಿದ್ದು, ಪೊಲೀಸರು ದೂರು ದಾಖಲಾಗಿದ್ದನ್ನು ಖಚಿತಪಡಿಸಿದ್ದಾರೆ.

    2018ರಲ್ಲಿ ಶಿವಾಜಿ ಫೋಟೋಗೆ ಚಪ್ಪಲಿ ಹಾಕಿಕೊಂಡು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಲಾರ್ಪಣೆ ಮಾಡಿದ್ದರು. ಈ ವಿಚಾರವನ್ನು ಉಲ್ಲೇಖಿಸಿ ಉದ್ಧವ್ ಠಾಕ್ರೆ ಶಿವಾಜಿಗೆ ಅವಮಾನಗೈದ ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿದ್ದರು.  2018 ರಲ್ಲಿ ಉದ್ಧವ್ ಠಾಕ್ರೆ ಈ ಹೇಳಿಕೆ ನೀಡಿದ್ದು, ಈ ವೇಳೆ ಠಾಕ್ರೆ ಮುಖ್ಯಮಂತ್ರಿ ಆಗಿರಲಿಲ್ಲ.

    ದೂರಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ, ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾತ್ರ ಅಲ್ಲ ಅವರು ಗೋರಖ್‌ಪುರ ಪೀಠದ ಮುಖ್ಯಸ್ಥರಾಗಿದ್ದಾರೆ. ಈ ಹೇಳಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಅಷ್ಟೇ ಅಲ್ಲದೇ ಅವರು ಮುಖ್ಯಮಂತ್ರಿ ಆಗಿದ್ದು, ಸಾಂವಿಧಾನಿಕ ಹುದ್ದೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ. ಇದನ್ನೂ ಓದಿ:  ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

    ಬುಧವಾರ ನಾರಾಯಣ ರಾಣೆ ಅವರ ವಿರುದ್ಧ ಸಾಮ್ನಾದಲ್ಲಿ ಸಂಪಾದಕೀಯ ಬರೆಯಲಾಗಿತ್ತು. ಈ ಸಂಪಾದಕೀಯದಲ್ಲಿ ರಾಣೆ ಅವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸಾಮ್ನಾ ಸಂಪಾದಕಿ ಆಗಿರುವ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ವಿರುದ್ಧ ದೂರು ದಾಖಲಾಗಿದೆ.

    ಯುವಾ ಸೇನಾ ಅಧ್ಯಕ್ಷ ವರುಣ್ ಸರ್ದೇಸಾಯಿ ರಾಣೆ ನಿವಾಸದ ಮುಂದೆ ಅತಿಕ್ರಮವಾಗಿ ಪ್ರತಿಭಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಠಾಕ್ರೆ ತಮ್ಮ ಅಧಿಕೃತ ನಿವಾಸಲ್ಲಿ ಸರ್ದೇಸಾಯಿ ಅವರನ್ನು ಗೌರವಿಸಿದ್ದಾರೆ. ಮಾಧ್ಯಮಗಳಲ್ಲಿ ಈ ವಿಡಿಯೋ ಪ್ರಸಾರವಾಗಿ ತಪ್ಪು ಸಂದೇಶ ಹೋಗಿದೆ ಎಂದು ಆರೋಪಿಸಿಲಾಗಿದೆ.

  • ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್

    ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್

    – ಹಿಂದೂ ಸಂಘಟನೆಗಳಿಂದ ಲವ್ ಜಿಹಾದ್ ಆರೋಪ
    – ಮದುವೆಗೆ ತೀವ್ರ ವಿರೋಧ, ಪ್ರತಿಭಟನೆ

    ಮುಂಬೈ: ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿವಾಹ ಸಮಾರಂಭವನ್ನು ರದ್ದುಗೊಳಿಸಿದ್ದಾರೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದ್ರೆ ಮದುವೆ ಆಹ್ವಾನ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬಳಿಕ ದೊಡ್ಡ ಸಂಚಲನವೇ ಸೃಷ್ಟಿಯಾಗಿದ್ದರಿಂದ ಕುಟುಂಬಸ್ಥರು ಮದುವೆ ನಿರ್ಧಾರದಿಂದ ಸದ್ಯ ಹಿಂದೆ ಸರಿದಿದ್ದಾರೆ.

    ನಾಸಿಕ್ ನಗರದ ರಸಿಕಾ (28) ಮದುವೆ ಗೆಳೆಯ ಆಸೀಫ್ ಜೊತೆ ನಿಶ್ಚಯವಾಗಿತ್ತು. ರಸಿಕಾ ದಿವ್ಯಾಂಗ ಆಗಿದ್ದರಿಂದ ಲವ್ ಜಿಹಾದ್ ಮಾಡಲಾಗ್ತಿದೆ ಎಂದು ಆರೋಪಿಸಿ ಸ್ಥಳೀಯ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇಷ್ಟೆಲ್ಲ ವಿವಾದ ಗಲಾಟೆ ನಂತ್ರವೂ ಪೋಷಕರು ಮಗಳ ನಿರ್ಧಾರದ ಪರ ನಿಂತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಸಿಕಾ ತಂದೆ ಪ್ರಸಾದ್, ನನ್ನ ಮಗಳು ದಿವ್ಯಾಂಗ ಆಗಿರೋದರಿಂದ ಆಕೆಯ ಮದುವೆ ವಿಳಂಬವಾಗಿರುವ ವಿಷಯ ನಮ್ಮ ಸಮುದಾಯದ ಎಲ್ಲರಿಗೂ ಗೊತ್ತು. ಕೊನೆಗೆ ಮಗಳು ತನ್ನ ಇಚ್ಛೆಯನ್ನು ನಮ್ಮ ಮುಂದೆ ಹೇಳಿಕೊಂಡಿದ್ದಳು. ಇತ್ತ ಆಸೀಫ್ ಕುಟುಂಬಸ್ಥರು ಮಗಳನ್ನು ಸೊಸೆ ಮಾಡಿಕೊಳ್ಳಲು ಒಪ್ಪಿದ್ದರು. ಇಲ್ಲಿ ಯಾವುದೇ ಬಲವಂತ ಧರ್ಮ ಪರಿವರ್ತನೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ನೆರೆಹೊರೆಯವರ ಸಮ್ಮುಖದಲ್ಲಿ ಹಿಂದೂ ಜೋಡಿಯ ಮದ್ವೆ

    ಇಬ್ಬರು ವಯಸ್ಕರು ಪರಸ್ಪರ ಪ್ರೀತಿಸಿದ್ದಾರೆ. ನಾವು ಅವರ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ಮುಂದಾಗಿದ್ದೇವೆ. ಇನ್ನೂ ಆಸೀಫ್ ಕುಟುಂಬಸ್ಥರು ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಲು ಒಪ್ಪಿಗೆ ಸೂಚಿಸಿರೋದು ವಿಶೇಷ ಎಂದು ಪ್ರಸಾದ್ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ:  ಮಾದರಿಯಾಯ್ತು ಹಿಂದೂ ಯುವಕ, ಮುಸ್ಲಿಂ ಯುವತಿಯ ಸರಳ ಮದುವೆ

    ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮದುವೆಯನ್ನು ರದ್ದುಗೊಳಿಸಲಾಗಿದೆ. ಎರಡೂ ಕುಟುಂಬಗಳು ಮುಂದೆ ಮದುವೆ ನಡೆಸುತ್ತಾ ವಿಷಯ ತಿಳಿದು ಬಂದಿಲ್ಲ. ಇದನ್ನೂ ಓದಿ: ಮುಸ್ಲಿಂ ತಂದೆಯಿಂದ ಹಿಂದೂ ಸಂಪ್ರದಾಯದಂತೆ ದತ್ತು ಮಗನ ಮದ್ವೆ

  • ಆಕ್ಸಿಜನ್ ಸೋರಿಕೆ ದುರಂತಕ್ಕೆ ಮೋದಿ ಸಂತಾಪ -ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

    ಆಕ್ಸಿಜನ್ ಸೋರಿಕೆ ದುರಂತಕ್ಕೆ ಮೋದಿ ಸಂತಾಪ -ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

    ಮುಂಬೈ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಮಧ್ಯೆ ಆಕ್ಸಿಜನ್ ಸಮಸ್ಯೆ ಪದೇ ಪದೇ ಕಾಡುತ್ತಿದೆ. ಇದರ ಮಧ್ಯೆ ಬುಧವಾರ ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯಲ್ಲಿ ದುರಂತ ನಡೆದಿದ್ದು, ಆಕ್ಸಿಜನ್ ಟ್ಯಾಂಕ್ ಸೋರಿಕೆ ಹಿನ್ನೆಲೆ 22 ಜನ ರೋಗಿಗಳು ಪ್ರಾಣ ಬಿಟ್ಟಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

    ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಲೀಕ್ ಆಗಿದ್ದರಿಂದ 30 ನಿಮಿಷ ಪೂರೈಕೆ ಸ್ಥಗಿತಗೊಂಡಿತ್ತು. ಪರಿಣಾಮ ಆಕ್ಸಿಜನ್ ವ್ಯವಸ್ಥೆಯಲ್ಲಿದ್ದ 22 ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ದುರಂತಕ್ಕೆ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಮೃತ ಕುಟುಂಬದ ಸದಸ್ಯರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಘೋಷಿಸಿದ್ದಾರೆ.

    ಆಸ್ಪತ್ರೆಯಲ್ಲಿ ಒಟ್ಟು 23 ರೋಗಿಗಳು ಆಕ್ಸಿಜನ್ ವೆಂಟಿಲೇಟರ್ ನಲ್ಲಿದ್ದರು. ಇನ್ನು ಆಸ್ಪತ್ರೆಯಲ್ಲಿದ್ದ 171 ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಆಕ್ಸಿಜನ್ ಸೋರಿಕೆಯ ನಿಯಂತ್ರಿಸಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

    ನಾಸಿಕ್ ನಲ್ಲಿ ಇದುವರೆಗೂ 2,56,586 ಕೊರೊನಾ ಪ್ರಕರಣಗಳು ವರದಿಯಾಗಿವೆ. ಸದ್ಯ 44,279 ಜನ ಕೊರೊನಾಗೆ ಚಿಕಿತ್ಸೆಗೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ನಾಸಿಕ್ ನಲ್ಲಿ ಕೊರೊನಾ 2,672 ಜನರನ್ನ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಮತ್ತು ಬೆಡ್ ಸಮಸ್ಯೆಯುಂಟಾಗಿದೆ.

    ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ವಿಪರೀತ ಹಂತ ತಲುಪಿದ್ದು, ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕದ ಸಿಲಿಂಡರ್‍ಗಳು ಬರಿದಾಗಲಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಆತಂಕ ವ್ಯಕ್ತಪಡಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

  • ಆಕ್ಸಿಜನ್ ಟ್ಯಾಂಕ್ ಲೀಕ್, ಪೂರೈಕೆ ಸ್ಥಗಿತ – 22 ರೋಗಿಗಳ ಸಾವು

    ಆಕ್ಸಿಜನ್ ಟ್ಯಾಂಕ್ ಲೀಕ್, ಪೂರೈಕೆ ಸ್ಥಗಿತ – 22 ರೋಗಿಗಳ ಸಾವು

    – ಆಕ್ಸಿಜನ್ ವೆಂಟಿಲೇಟರ್ ನಲ್ಲಿ 23 ರೋಗಿಗಳು

    ಮುಂಬೈ: ದೇಶದಲ್ಲಿ ಆಕ್ಸಿಜನ್ ಸಮಸ್ಯೆ ಕ್ಷಣ ಕ್ಷಣಕ್ಕೂ ಭಯಂಕರ ರೂಪ ಪಡೆಯುತ್ತಿದೆ. ಬುಧವಾರ ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯಲ್ಲಿ ದುರಂತ ನಡೆದಿದ್ದು, ಆಕ್ಸಿಜನ್ ಟ್ಯಾಂಕ್ ಸೋರಿಕೆ ಹಿನ್ನೆಲೆ 22 ರೋಗಿಗಳು ಪ್ರಾಣ ಬಿಟ್ಟಿದ್ದಾರೆ.

    ನಾಸಿಕ್ ನಗರದ ಡಾ.ಝಾಕೀರ್ ಹುಸೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಲೀಕ್ ಆಗಿದ್ದರಿಂದ 30 ನಿಮಿಷ ಪೂರೈಕೆ ಸ್ಥಗಿತಗೊಂಡಿತ್ತು. ಪರಿಣಾಮ ಆಕ್ಸಿಜನ್ ವ್ಯವಸ್ಥೆಯಲ್ಲಿದ್ದ 22 ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 23 ರೋಗಿಗಳು ಆಕ್ಸಿಜನ್ ವೆಂಟಿಲೇಟರ್ ನಲ್ಲಿದ್ದರು. ಇನ್ನು ಆಸ್ಪತ್ರೆಯಲ್ಲಿದ್ದ 171 ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಆಕ್ಸಿಜನ್ ಸೋರಿಕೆಯ ನಿಯಂತ್ರಿಸಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

    ನಾಸಿಕ್ ನಲ್ಲಿ ಇದುವರೆಗೂ 2,56,586 ಕೊರೊನಾ ಪ್ರಕರಣಗಳು ವರದಿಯಾಗಿವೆ. ಸದ್ಯ 44,279 ಜನ ಕೊರೊನಾಗೆ ಚಿಕಿತ್ಸೆಗೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ನಾಸಿಕ್ ನಲ್ಲಿ ಕೊರೊನಾ 2,672 ಜನರನ್ನ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಮತ್ತು ಬೆಡ್ ಸಮಸ್ಯೆಯುಂಟಾಗಿದೆ.

    ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ವಿಪರೀತ ಹಂತ ತಲುಪಿದ್ದು, ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕದ ಸಿಲಿಂಡರ್‍ಗಳು ಬರಿದಾಗಲಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಆತಂಕ ವ್ಯಕ್ತಪಡಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

  • 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಮಹಿಳೆ ಸೇರಿದಂತೆ 7 ಮಂದಿ ಅರೆಸ್ಟ್

    13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಮಹಿಳೆ ಸೇರಿದಂತೆ 7 ಮಂದಿ ಅರೆಸ್ಟ್

    ಮುಂಬೈ: ನಾಸಿಕ್ ಜಿಲ್ಲೆಯ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ 7 ಮಂದಿ ಆರೋಪಿ ಸೇರಿದಂತೆ ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಜನವರಿ 9ರಂದು ನಾಸಿಕ್ ಪ್ರದೇಶದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ 7 ಜನ ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತ ಬಾಲಕನಾಗಿದ್ದು, ಆತನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕೆಲಸದ ಬಳಿಕ ರಾತ್ರಿ ಮನೆಗೆ ಹಿಂದಿರುಗಿದ ಬಾಲಕಿಯ ಪೋಷಕರು ಆಕೆ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಆಕೆಯನ್ನು ಹುಡುಕಲು ಆರಂಭಿಸಿದ್ದಾರೆ. ಬಾಲಕಿ ಅಳುತ್ತಿರುವ ಶಬ್ದ ಕೇಳಿ ಮನೆಯವರು ಟೇರಸ್ ಮೇಲೆ ಹೋಗಿದ್ದಾರೆ. ಅಲ್ಲಿ ಬಾಲಕಿ ಅಳುತ್ತಿರುವುದನ್ನು ನೋಡಿ ಏಕೆ ಅಳುತ್ತಿದ್ದಿಯಾ ಎಂದು ಪ್ರಶ್ನಿಸಿದಾಗ ಬಾಲಕಿ ನಡೆದ ಘಟನೆಯನ್ನು ತನ್ನ ಪೋಷಕರ ಬಳಿ ವಿವರಿಸಿದ್ದಾಳೆ. ಕೂಡಲೇ ಬಾಲಕಿಯ ಪೋಷಕರು ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣ ಕುರಿತಂತೆ ಪೊಲೀಸರು 19 ರಿಂದ 29 ವರ್ಷದೊಳಗಿನ 5 ಜನ ಪುರುಷರು, ಓರ್ವ ಅಪ್ರಾಪ್ತ ಬಾಲಕನನ್ನು ಮತ್ತು ಕೃತ್ಯ ಎಸಗಲು ಸಹಾಯ ಮಾಡಿದ ಮಹಿಳೆಯನ್ನು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಇದೀಗ ಬಾಲಕಿಯನ್ನು ಜಿಲ್ಲೆಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಅಲ್ಲದೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆ(ಪೋಕ್ಸೋ) ಅಡಿ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

  • ಬಿಜೆಪಿ ಮಾಜಿ ಎಂಎಲ್‍ಸಿಯಿಂದ ಸೇನೆಗೆ 20 ಲಕ್ಷ ರೂ. ಮೌಲ್ಯದ ಆಭರಣ ದೇಣಿಗೆ!

    ಬಿಜೆಪಿ ಮಾಜಿ ಎಂಎಲ್‍ಸಿಯಿಂದ ಸೇನೆಗೆ 20 ಲಕ್ಷ ರೂ. ಮೌಲ್ಯದ ಆಭರಣ ದೇಣಿಗೆ!

    ನಾಸಿಕ್: ಭಾರತೀಯ ಜನತಾ ಪಕ್ಷದ ಮಾಜಿ ಎಂಎಲ್‍ಸಿ ನಿಶಿಗಂಧಾ ಮೊಗಲ್ ಅವರು ಭಾರತೀಯ ಸೇನೆಗೆ ಚಿನ್ನದ ಆಭರಣಗಳನ್ನು ದೇಣಿಗೆ ನೀಡುವ ಮೂಲಕ ದೇಶ ಭಕ್ತಿ ಮೆರೆದಿದ್ದಾರೆ.

    ನಿಶಿಗಂಧಾ ಅವರು ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಈ ಮಹಾನ್ ಕೆಲಸವೊಂದನ್ನು ಮಾಡಿದ್ದಾರೆ. ತಮ್ಮ 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಭಾರತೀಯ ಸೈನ್ಯಕ್ಕೆ ದೇಣಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿನ್ನಾಭರಣಗಳನ್ನು ಯುದ್ಧ ಹಾಗೂ ಇನ್ನಿತರ ಹೋರಾಟಗಳಲ್ಲಿ ಹುತಾತ್ಮರಾದ ಯೋಧರ ಪತ್ನಿಯರು ಹಾಗೂ ನಿವೃತ್ತ ಯೋಧರ ಅನುಕೂಲಕ್ಕಾಗಿ ಬಳಸುವಂತೆ ನಿಶಿಗಂಧಾ ತಿಳಿಸಿದ್ದಾರೆ.

    ಇತ್ತ ನಿಶಿಗಂಧಾ ಅವರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಕೂಡ ಬರೆದಿದ್ದಾರೆ. ನಮ್ಮ ದೇಶದ ಸೇನೆ ಹಾಗೂ ಸೈನಿಕರಿಗೆ ತಾನು ಏನಾದರೂ ಒಳ್ಳೆಯದು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೆ. ಈ ವೇಳೆ ಆಭರಣಗಳನ್ನು ದಾನ ಮಾಡಿದರೆ ಹೇಗೆ ಎಂಬ ಆಲೋಚನೆ ಉಂಟಾಯಿತು. ಅಲ್ಲದೆ ಚಿನ್ನಾಭರಣಗಳನ್ನು ದೇಣಿಗೆ ನೀಡಲು ನಿರ್ಧಾರ ಮಾಡಿದೆ ಎಂದ ಅವರು, ಈ ಸಂಬಂಧ ಪ್ರಧಾನಿ ಪತ್ರ ಬರೆದಿರುವುದು ನಿಜಕ್ಕೂ ನನಗೆ ಅಚ್ಚರಿ ಉಂಟು ಮಾಡಿದೆ ಎಂದು ನಿಶಿಗಂಧಾ ಹೇಳಿದರು.

    ನಿಶಿಗಂಧಾ ಅವರು 1996 ರಿಂದ 2000 ವರೆಗೆ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸಿದ್ದರು. ನನ್ನ ಜೀವನದುದ್ದಕ್ಕೂ ದೇಶ ಕಾಯುವ ಯೋಧರಿಗಾಗಿ ಏನಾದರೂ ಕೊಡುಗೆ ನಿಡಬೇಕು ಎಂಬ ಕನಸು ಕಂಡಿದ್ದು, ಸದ್ಯ ಅದನ್ನು ಘೋಷಣೆ ಕೂಡ ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಕುಟುಂಬ ಕೂಡ ಬೆಂಬಲವಾಗಿ ನಿಂತಿದ್ದು, ತುಂಬಾನೇ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

  • ಪರಸ್ಪರ ಡಿಕ್ಕಿ ಹೊಡೆದು ಬಾವಿಗೆ ಬಿದ್ದ ಸಾರಿಗೆ ಬಸ್, ಆಟೋ – 21 ಮಂದಿ ಸಾವು

    ಪರಸ್ಪರ ಡಿಕ್ಕಿ ಹೊಡೆದು ಬಾವಿಗೆ ಬಿದ್ದ ಸಾರಿಗೆ ಬಸ್, ಆಟೋ – 21 ಮಂದಿ ಸಾವು

    – ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ

    ಮುಂಬೈ: ಸಾರಿಗೆ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ ರಸ್ತೆ ಬದಿಯ ಬಾವಿಗೆ ಬಿದ್ದ ಪರಿಣಾಮ 8 ಮಹಿಳೆಯರು ಸೇರಿ 21 ಮಂದಿ ದುರ್ಮರಣಕ್ಕೀಡಾದ ಘಟನೆ ಮಹಾರಾಷ್ಟ್ರದ ನಾಸಿಕ್‍ನಲ್ಲಿ ನಡೆದಿದೆ.

    ನಾಸಿಕ್ ಸಮೀಪ ಮಂಗಳವಾರ ಸಂಜೆ ಈ ಅಪಘಾತ ನಡೆದಿದೆ. ಡಿಕ್ಕಿಯಾದ ಆಟೋ ಮತ್ತು ಬಸ್ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಉರುಳಿವೆ. ಮೊದಲು ಆಟೋ ಬಿದ್ದಿದ್ದು, ಬಳಿಕ ಬಸ್ ಅದರ ಮೇಲೆ ಉರುಳಿದೆ. ಅಪಘಾತಕ್ಕೀಡಾದ ಬಸ್ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ್ದು, ಬಸ್ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ವಾಹನಗಳು ರಸ್ತೆ ಬದಿಯಲ್ಲಿದ್ದ ಬಾವಿಗೆ ಬಿದ್ದಿವೆ.

    ಘಟನೆಯಲ್ಲಿ 18 ಮಂದಿ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಮೃತಪಟ್ಟವರ ಕುಟುಂಬಸ್ಥರಿಗೆ ಮಹಾರಾಷ್ಟ್ರ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಜೊತೆಗೆ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದು ಭರವಸೆ ನೀಡಿದೆ.

    ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಈಗಾಗಲೇ 21 ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದೇವೆ. ಅಲ್ಲದೆ ಪಂಪ್‍ಗಳನ್ನು ಬಳಸಿ ಬಾವಿಯ ನೀರನ್ನು ಹೊರಹಾಕುತ್ತಿದ್ದೇವೆ. ಯಾರಾದರು ಬಾವಿಯ ಕೆಸರಿನ ಅಡಿಯಲ್ಲಿ ಸಿಲುಕಿದ್ದಾರಾ ಎಂದು ಕಾರ್ಯಾಚರಣೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

  • ವೀರ ಯೋಧ ಅಭಿನಂದನ್‍ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’

    ವೀರ ಯೋಧ ಅಭಿನಂದನ್‍ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’

    ಮುಂಬೈ (ನಾಸಿಕ್): ಪಾಕ್ ಮುಷ್ಟಿಯಿಂದ ಭಾರತಕ್ಕೆ ವಾಪಾಸ್ಸಾಗಿರುವ ಭಾರತದ ಹೆಮ್ಮೆಯ ಪುತ್ರ, ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು ಎಂದು ಭಾನುವಾರ ಅಖಿಲ ಭಾರತೀಯ ದಿಗಂಬರ ಜೈನ ಮಹಾಸಮಿತಿ ತಿಳಿಸಿದೆ.

    ಈ ಪುರಸ್ಕಾರದ ಜೊತೆಗೆ 2.51 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನೂ ಕೂಡ ಅಖಿಲ ಭಾರತೀಯ ದಿಗಂಬರ ಜೈನ ಮಹಾಸಮಿತಿ ಅಭಿನಂದನ್ ಅವರಿಗೆ ನೀಡಿ ಗೌರವಿಸಲಿದೆ. ಈ ಪುರಸ್ಕಾರವನ್ನು ಮಹಾವೀರ ಜಯಂತಿ ದಿನ (ಏಪ್ರಿಲ್ 17) ಪ್ರಧಾನ ಮಾಡಲಾಗುವುದು ಎಂದು ಮಹಾ ಸಮಿತಿಯ ನಿರ್ವಾಹಕ ಪರಾಸ್ ಲೊಹಾಡೆ ತಿಳಿಸಿದ್ದು, ಈ ಮೂಲಕ ಅಭಿನಂದನ್ ಅವರಿಗೆ ಗೌರವ ಸಲ್ಲಿಸಲು ಜೈನ ಮಹಾಸಮಿತಿ ನಿರ್ಧರಿಸಿದೆ.

    ಹಾಗೆಯೇ ಈ ಅತ್ಯುತ್ತಮ ಪುರಸ್ಕಾರ ಸ್ವೀಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ವೀರಯೋಧ ಅಭಿನಂದನ್ ಅವರು ಪಾತ್ರರಾಗಲಿದ್ದಾರೆ. ಪಾಕಿಸ್ತಾನದ ಎಫ್-16 ವಿಮಾನವನ್ನು ಬೆನ್ನಟ್ಟಿ ಹೊಡೆದುರುಳಿಸಿದ ಮಿಗ್-21 ವಿಮಾನದ ಪೈಲಟ್ ಅಭಿನಂದನ್ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ನವದೆಹಲಿಯಲ್ಲಿ ಮಹಾಸಮಿತಿಯ ಅಧ್ಯಕ್ಷ ಮುನೀಂದ್ರ ಜೈನ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಲೂನ್ ನುಂಗಿ 8 ತಿಂಗಳ ಮಗು ದುರ್ಮರಣ!

    ಬಲೂನ್ ನುಂಗಿ 8 ತಿಂಗಳ ಮಗು ದುರ್ಮರಣ!

    ನಾಸಿಕ್: ರಬ್ಬರ್ ಬಲೂನ್ ನುಂಗಿ 8 ತಿಂಗಳ ಮಗು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆ ಸಿಡ್ಕೋ ವ್ಯಾಪ್ತಿಯ ಹನುಮಾನ್ ನಗರದಲ್ಲಿ ಗುರುವಾರ ನಡೆದಿದೆ.

    ನಗರದ ಮನೆಯಲ್ಲಿ ರಬ್ಬರ್ ಬಲೂನ್‍ನೊಂದಿಗೆ ಆಟವಾಡುತ್ತಾ ಮಗು ಬಲೂನನ್ನು ನುಂಗಿದೆ. ಇದರಿಂದ ಮಗು ಉಸಿರುಗಟ್ಟಿ ಒದ್ದಾಡುತ್ತಿತ್ತು. ಇದನ್ನು ನೋಡಿದ ಪೋಷಕರು ಆತಂಕಕ್ಕೊಳಗಾಗಿ ಕೂಡಲೇ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅಲ್ಲಿನ ವೈದ್ಯರು ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯತೆ ಇದೆ ಅಂತ ನಗರದ ಸಿವಿಲ್ ಆಸ್ಪತ್ರೆಗೆ ಮಗುವನ್ನು ಕರೆದುಕೊಮಡು ಹೋಗುವಂತೆ ಸೂಚಿಸಿದ್ದಾರೆ. ಅಂತೆಯೇ ತಂದೆ ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿದರಾದ್ರೂ, ಅದಾಗಲೇ ಮಗು ಮೃತಪಟ್ಟಿದೆ ಅಂತ ವೈದ್ಯರು ಖಚಿತಪಡಿಸಿದ್ದರು ಅಂತ ಅಂಬದ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಗು ಬಲೂನನ್ನು ನುಂಗುತ್ತಿದ್ದಂತೆಯೇ ಆತನ ಉಸಿರಾಟಕ್ಕೆ ತೊಂದರೆಯಾಗಿದೆ. ಹೀಗಾಗಿ ಆತ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಅಂತ ಆಸ್ಪತ್ರೆಯ ಮೆಡಿಕಲ್ ಆಫಿಸರ್ ಡಾ. ಆನಂದ್ ಪವಾರ್ ತಿಳಿಸಿದ್ದಾರೆ.

    ಸದ್ಯ ಆಕಸ್ಮಿಕವಾಗಿ ಮಗು ಸಾವನಪ್ಪಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ತಂದೆ ಮೂಲತಃ ಉತ್ತರಪ್ರದೇಶದವರಾಗಿದ್ದು, ನಾಸಿಕ್ ನಲ್ಲಿ ಕಾರ್ಮಿಕರಾಗಿದ್ದಾರೆ. ಹೀಗಾಗಿ ಅವರು ನಾಸಿಕ್ ನಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ.