ಮುಂಬೈ: 2027ರಲ್ಲಿ ಪೂರ್ಣ ಕುಂಭಮೇಳವು (Kumbh Mela) ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nasik) ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ನಾಸ್ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2027ರಲ್ಲಿ, ನಾವು ನಾಸಿಕ್‌ನಲ್ಲಿ ಕುಂಭಮೇಳವನ್ನು ನಡೆಸುತ್ತೇವೆ. ಪ್ರಯಾಗ್‌ರಾಜ್ ಕುಂಭವನ್ನು 15,000 ಹೆಕ್ಟೇರ್ ಪ್ರದೇಶದಲ್ಲಿ ಆಯೋಜಿಸಲಾಗಿತ್ತು ಮತ್ತು ನಾಸಿಕ್‌ನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ನಡೆಸುತ್ತೇವೆ. 2015ರಲ್ಲಿ ಕುಂಭಮೇಳ ಆಯೋಜಿಸಿದ ಅನುಭವ ನನಗಿದೆ. ಆದರೆ ನಾಸಿಕ್‌ನಲ್ಲಿ ನಡೆಯುವ ಕುಂಭಮೇಳವು ತಾಂತ್ರಿಕವಾಗಿ ಮುಂದುವರಿದ ಕುಂಭವಾಗಲಿದೆ ಎಂದರು. ಇದನ್ನೂ ಓದಿ: `ಪುಟ್ಟಕ್ಕ’ ಉಮಾಶ್ರೀ ಹೋರಾಟಕ್ಕೆ ನಟ ರವಿಚಂದ್ರನ್ ಸಾಥ್
2027ರ ಪೂರ್ಣ ಕುಂಭಮೇಳವು ನಾಸಿಕ್‌ನಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ಗೋದಾವರಿ ನದಿಯ ದಡದಲ್ಲಿರುವ ತ್ರಯಂಬಕೇಶ್ವರದಲ್ಲಿ ನಡೆಯಲಿದೆ. ನಾಸಿಕ್ ಕುಂಭಮೇಳವು 2027ರ ಜು.17 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 17ರಂದು ಕೊನೆಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ
ಮಹಾರಾಷ್ಟ್ರ ಸರ್ಕಾರವು 2027ರಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಈಗಾಗಲೇ ತಯಾರಿಯನ್ನು ನಡೆಸುತ್ತಿದೆ. ರಸ್ತೆ, ಸಂಚಾರ ನಿರ್ವಹಣೆ ಮತ್ತು ಸಂಪರ್ಕವನ್ನು ಯೋಜನೆಗಳನ್ನು ಚರ್ಚಿಸಲು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೀಷಾ ಪತಂಕರ್ ಮಹೈಸ್ಕರ್ ನಾಸಿಕ್‌ಗೆ ಭೇಟಿ ನೀಡಿದ್ದರು. ಪಾರ್ಕಿಂಗ್ ಪ್ರದೇಶದಿಂದ ಕುಂಭಸ್ಥಳಕ್ಕೆ ಯಾತ್ರಿಕರನ್ನು ಕರೆದೊಯ್ಯಲು ವಿಶೇಷ ಬಸ್‌ಗಳನ್ನು ವ್ಯವಸ್ಥೆಗೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮುಂಬೈ: ಟೆಂಪೊವೊಂದು (Tempo) ಮಿನಿವ್ಯಾನ್‌ಗೆ (Minivan) ಡಿಕ್ಕಿ ಹೊಡೆದ ಪರಿಣಾಮ ಮಿನಿವ್ಯಾನ್ ರಸ್ತೆಬದಿ ನಿಲ್ಲಿಸಿದ್ದ ಬಸ್‌ಗೆ ಡಿಕ್ಕಿ ಹೊಡೆದು 9 ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಪುಣೆ-ನಾಸಿಕ್ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಬೆಳಗ್ಗೆ 10 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ.ಮಿನಿವ್ಯಾನ್ ನಾರಾಯಣಗಾಂವ್ (Narayangaon) ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಟೆಂಪೊ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮಿನಿವ್ಯಾನ್ ರಸ್ತೆ ಬದಿಯಲ್ಲಿದ್ದ ಖಾಲಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಿನಿವ್ಯಾನ್‌ನಲ್ಲಿದ್ದ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ. ಇದನ್ನೂ ಓದಿ: 189 ಕ್ಷೇತ್ರಗಳ ಶಾಸಕರಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ
ಇನ್ನು ಘಟನೆಯ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಪುಣೆ-ನಾಸಿಕ್ ಹೆದ್ದಾರಿಯ ನಾರಾಯಣಗಾಂವ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಕಾರ್ಮಿಕರು ಸಾವನ್ನಪ್ಪಿದ್ದು ದುರಾದೃಷ್ಟಕರ. ಅವರಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಅವರ ಕುಟುಂಬಗಳ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ. ಅಲ್ಲದೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: Chhattisgarh| ನಕ್ಸಲರು ಅಡಗಿಸಿಟ್ಟಿದ್ದ ಐಇಡಿ ಸ್ಫೋಟ – ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ
ಮುಂಬೈ: ಆದಾಯ ತೆರಿಗೆ (Income Tax) ಇಲಾಖೆ ನಾಸಿಕ್‌ನಲ್ಲಿರುವ (Nashik) ಪ್ರಸಿದ್ಧ ಜುವೆಲ್ಲರಿ ಅಂಗಡಿ ಮೇಲೆ ದಾಳಿ ನಡೆಸಿ 26 ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿದೆ.
ಅಕ್ರಮ ವಹಿವಾಟು ನಡೆಸಿದ ಆರೋಪದ ಮೇಲೆ ಸುರಾನಾ ಜ್ಯುವೆಲರ್ಸ್ (Surana Jewellers) ಮೇಲೆ ದಾಳಿ ನಡೆಸಿದೆ. ಈ ವೇಳೆ 26 ಕೋಟಿ ರೂ. ನಗದು, 90 ಕೋಟಿ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ – 11 ಭಕ್ತರು ದುರ್ಮರಣ, 10 ಜನರಿಗೆ ಗಾಯ
#WATCH | The Income Tax Department launched a raid on Surana Jewellers in Nashik, in response to alleged undisclosed transactions by the proprietor. About Rs 26 crore in cash and documents of unaccounted wealth worth Rs 90 crore have been seized in raids carried out by the Income… pic.twitter.com/lnv9wAGi3N
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದಿನಿಂದ 11 ದಿನಗಳ ಉಪವಾಸವನ್ನು ಮಹಾರಾಷ್ಟ್ರದ ನಾಸಿಕ್‌ನಿಂದ (Nashik) ಆರಂಭಿಸಿದ್ದಾರೆ. ಮೋದಿ ಅವರು ನಾಸಿಕ್‌ನಲ್ಲಿರುವ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಸ್ಥಾನದಲ್ಲಿ (Kalaram Temple) ದೇವರ ದರ್ಶನ ಮತ್ತು ವಿಶೇಷ ಪೂಜೆ ಮಾಡುವ ವ್ರತ ಆರಂಭಿಸಿದ್ದಾರೆ.
ಪಂಚವಟಿ ವಿಶೇಷ ಏನು?
ನಾಸಿಕ್‌ನಿಂದ ಮೋದಿ ಉಪವಾಸ ಆರಂಭಿಸಲು ಕಾರಣವಿದೆ. 14 ವರ್ಷಗಳ ವನವಾಸ ಆರಂಭಿಸಿದ ರಾಮ, ಲಕ್ಷ್ಮಣ, ಸೀತೆ ಹೆಚ್ಚಿನ ಸಮಯವನ್ನು ದಂಡಾಕರಣ್ಯದಲ್ಲಿ ಕಳೆದಿದ್ದರು. ಅದರಲ್ಲೂ ಪಂಚವಟಿಯಲ್ಲಿ (Panchvati) ಪರ್ಣ ಕುಟೀರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಐದು ಆಲದಮರಗಳು ಇದ್ದ ಕಾರಣ ಈ ಜಾಗಕ್ಕೆ ಪಂಚವಟಿ ಎಂಬ ಹೆಸರು ಬಂದಿತ್ತು. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಈ ಜಾಗದಲ್ಲಿ ಕಳೆದಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?
ವಾಲ್ಮೀಕಿ ರಾಮಾಯಣದ ಎಲ್ಲಾ ಘಟನೆಗಳಗೆ ಇಬ್ಬರು ಮೂಲ ಪ್ರೇರಣೆಯಾಗುತ್ತಾರೆ. ಕೈಕೇಯಿಂದ ರಾಮ 14 ವರ್ಷಗಳ ವನವಾಸಕ್ಕೆ ತೆರಳಿದರೆ ಶೂರ್ಪನಖಿ ಪ್ರಸಂಗದಿಂದಲೇ ರಾಮ ಲಂಕೆಗೆ ಯುದ್ಧಕ್ಕೆ ಹೋಗಬೇಕಾಗುತ್ತದೆ.
ರಾಮಾಯಣ ಕಥೆಯಲ್ಲಿ ಮಹತ್ವದ ತಿರುವ ನೀಡುವ ಶೂರ್ಪನಖಿ (Surpanakha) ದಂಡಾಕರಣ್ಯದಲ್ಲಿ ನೆಲೆಸಿದ್ದಳು. ವಿಶ್ರವಸನಿಂದ ಕೈಕಸಿಯೆಂಬ ರಕ್ಕಸಿಯಲ್ಲಿ ಜನಿಸಿದ ಈಕೆಗೆ ರಾವಣ, ಕುಂಭಕರ್ಣರು ಅಣ್ಣಂದಿರು. ರಾವಣ (Ravana) ಈಕೆಯನ್ನು ವಿದ್ಯುಜ್ಜಿಹ್ವನೆಂಬ ರಾಕ್ಷಸನಿಗೆ ಕೊಟ್ಟು ಮದುವೆ ಮಾಡಿದ್ದ. ರಾವಣ ಒಮ್ಮೆ ದಿಗ್ವಿಜಯಕ್ಕೆ ಹೋಗಿದ್ದಾಗ ವಿದ್ಯುಜ್ಜಿಹ್ವ ಶತ್ರು ಪಕ್ಷವನ್ನು ಸೇರಿದ್ದ. ಇದರಿಂದ ಸಿಟ್ಟಾದ ರಾವಣ ವಿದ್ಯುಜ್ಜಿಹ್ವನನ್ನು ಕೊಂದು ಹಾಕಿದ್ದ. ಈ ವಿಚಾರ ತಿಳಿದು ಶೂರ್ಪನಖಿ ರಾವಣನ ಬಳಿ ಪರಿಪರಿಯಾಗಿ ಬೇಡಿಕೊಂಡ ಬಳಿಕ ಆಕೆಯನ್ನು 14 ಸಾವಿರ ಸೈನಿಕರ ಜೊತೆ ದಂಡಕಾರಣ್ಯಕ್ಕೆ ಕಳುಹಿಸುತ್ತಾನೆ. ಇದನ್ನೂ ಓದಿ: ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ
ಗಂಡನಿಲ್ಲದ ಶೂರ್ಪನಖಿ ದಂಡಕಾರಣ್ಯದಲ್ಲಿ ತಿರುಗಾಡುತ್ತಿದ್ದಾಗ ರಾಮನನ್ನು ನೋಡುತ್ತಾಳೆ. ರಾಮನ ಸುಂದರ ರೂಪಕ್ಕೆ ಮನಸೋತ ಶೂರ್ಪನಖಿ ಸುಂದರ ಹೆಣ್ಣಿನ ರೂಪ ಧರಿಸಿ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಾಳೆ. ಈ ವೇಳೆ ರಾಮ ನನಗೆ ಈಗಾಗಲೇ ಮದುವೆಯಾಗಿದೆ ನಾನು ಏಕ ಪತ್ನಿವ್ರತಸ್ಥ ಎಂದು ಹೇಳಿ ಲಕ್ಷ್ಮಣನ ಬಳಿ ಹೋಗುವಂತೆ ಆಕೆಯನ್ನು ಕಳುಹಿಸುತ್ತಾನೆ.
ಲಕ್ಷ್ಮಣನ ಬಳಿ ಬಂದು ಮದುವೆಯಾಗುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಲಕ್ಷ್ಮಣ ಈಕೆಯ ಬೇಡಿಕೆಯನ್ನು ತಿರಸ್ಕರಿಸುತ್ತಾನೆ. ರಾಮ ನನ್ನ ಮನವಿಯನ್ನು ಒಪ್ಪದೇ ಇರಲು ಕಾರಣ ಸೀತೆ ಎಂದು ತಿಳಿದು ಶೂರ್ಪನಖಿ ಆಕೆಯನ್ನು ನುಂಗಲು ಹೋದಾಗ ಲಕ್ಷ್ಮಣ ಆಕೆಯನ್ನು ತಡೆಯುತ್ತಾನೆ. ಅಷ್ಟೇ ಅಲ್ಲದೇ ಲಕ್ಷ್ಮಣ ಆಕೆಯ ಕಿವಿ ಮೂಗುಗಳನ್ನು ಕತ್ತರಿಸುತ್ತಾನೆ. ಈ ಅವಮಾನ ತಾಳಲಾರದೇ ಶೂರ್ಪನಖಿ ರಾವಣನ ಬಳಿ ತೆರಳಿ ದೂರು ನೀಡುತ್ತಾಳೆ. ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸಲು ಪ್ರಚೋದನೆ ನೀಡುತ್ತಾಳೆ. ಸಹೋದರಿಗೆ ಅವಮಾನ ಮಾಡಿದ್ದಕ್ಕೆ ರಾವಣ ಮಾರು ವೇಷ ಧರಿಸಿ ಪಂಚವಟಿಯಿಂದಲೇ ಸೀತೆಯನ್ನು ಅಪಹರಣ ಮಾಡುತ್ತಾನೆ. ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಅಯೋಧ್ಯೆ ರಾಮ ಮಂದಿರ
ಅಪಹರಣಕ್ಕೂ ಮೊದಲು ಸೀತೆಯ ಬಯಕೆಯಂತೆ ರಾಮ ಚಿನ್ನದ ಜಿಂಕೆಯನ್ನು ಬೆನ್ನಟ್ಟಿದ್ದು, ತನ್ನ ಬಾಣದಿಂದ ಎಳೆದ `ರಕ್ಷಾ ಗಡಿ’ (ಲಕ್ಷ್ಮಣ ರೇಖೆ) ದಾಟಬಾರದೆಂದು ಲಕ್ಷ್ಮಣ ತನ್ನ ಅತ್ತಿಗೆ ಸೀತೆಗೆ ಮನವಿ ಮಾಡಿದ್ದು ಈ ಜಾಗದಲ್ಲೇ. ಈ ಐದು ಆಲದಮರಗಳ ಉದ್ಯಾನವಿರುವ ಪರಿಸರವೇ ಸೀತಾಪಹರಣಕ್ಕೆ ಸಾಕ್ಷಿಯಾದ ಸ್ಥಳ.
ರಾಮಾಯಣ ಮಹಾಕಾವ್ಯದಲ್ಲಿ ಲಂಕೆಯಷ್ಟೇ ಪಂಚವಟಿ ಪ್ರಾಮುಖ್ಯತೆ ಪಡೆದಿದೆ. ವನವಾಸದ 10 ವರ್ಷ ಪೂರ್ಣಗೊಂಡ ಬಳಿಕ ರಾಮ, ಸೀತೆ, ಲಕ್ಷ್ಮಣ ಸುಮಾರು ಎರಡೂವರೆ ವರ್ಷ ನೆಲೆಸಿರುತ್ತಾರೆ. ಪಂಚವಟಿ ಇರುವುದು ಇರುವುದು ನಾಸಿಕ್‌ನ ಉತ್ತರ ಭಾಗದಲ್ಲಿ. ʼನಾಸಿಕʼ ಎಂದರೆ ಸಂಸ್ಕೃತದಲ್ಲಿ ಮೂಗು. ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿ ಎಸೆದ ಸ್ಥಳವೇ ʼನಾಸಿಕ್ʼ ಎಂದು ಕಥೆ ಹೇಳುತ್ತದೆ.
ಪಂಚವಟಿಯಲ್ಲಿ ವರುಣಿ, ತರುಣಿ ಮತ್ತು ಗೋದಾವರಿ ನದಿಗಳ ಸಂಗಮ
ತ್ರಿವೇಣಿ ಸಂಗಮ:
ತ್ರಿವೇಣಿ ಸಂಗಮ (Triveni Sangam) ನಾಸಿಕ್‌ನ ಇನ್ನೊಂದು ವಿಶೇಷ. ವರುಣಿ, ತರುಣಿ ಮತ್ತು ಗೋದಾವರಿ ನದಿಗಳು ಇಲ್ಲಿ ಸಂಗಮವಾಗುತ್ತದೆ. ವರುಣಿ ಮತ್ತು ತರುಣಿ ನದಿಗಳು ಗುಪ್ತಗಾಮಿನಿಯಾಗಿ ಹರಿಯುತ್ತದೆ ಎನ್ನುವ ನಂಬಿಕೆಯಿದೆ. ಸಪ್ತ ಪವಿತ್ರ ನದಿಗಳಲ್ಲಿ ಒಂದಾದ ದಕ್ಷಿಣ ಗಂಗೆ ಎನಿಸಿದ ಗೋದಾವರಿ ನಾಸಿಕ್ ಸಮೀಪದ ತೃಯಂಬಕೇಶ್ವರಲ್ಲಿ ಹುಟ್ಟುತ್ತಾಳೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!
ನಾಸಿಕ್ ಕುಂಭಮೇಳ
ಕುಂಭಮೇಳ:
ದೇಶದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ (Kumbh Mela) ನಡೆಯುವ ಸ್ಥಳಗಳಲ್ಲಿ ನಾಸಿಕ್ ಕೂಡ ಒಂದಾಗಿದೆ. ಸಮುದ್ರಮಥನದ ಸಂದರ್ಭದಲ್ಲಿ ರಾಕ್ಷಸರಿಗೆ ಅಮೃತ ದೊರೆಯದಂತೆ ಅದನ್ನು ಬಚ್ಚಿಡಲು ಪ್ರಯತ್ನಿಸಿದರಂತೆ. ಆ ಸಂದರ್ಭದಲ್ಲಿ ಅಮೃತಕುಂಭದಿಂದ ನಾಲ್ಕು ಹನಿಗಳು ಬಿದ್ದವು. ಆ ಪ್ರದೇಶಗಳೇ- ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್. ಹೀಗಾಗಿ ಈ ನಾಲ್ಕೂ ಸ್ಥಳಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.
ಮುಂಬೈ: ರಸ್ತೆಬದಿ ನಿಂತಿದ್ದ ಕಂಟೈನರ್ ಟ್ರಕ್‌ಗೆ (Container Truck) ಕಾರೊಂದು (Car) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ನಾಸಿಕ್ (Nashik) ಜಿಲ್ಲೆಯ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ನಡೆದಿದೆ.
ಕಾರು ನಾಸಿಕ್‌ನಿಂದ ಧುಲೆ (Dhule) ಕಡೆಗೆ ತೆರಳುತ್ತಿದ್ದ ಸಂದರ್ಭ ಚಂದವಾಡ ತಾಲೂಕಿನ ಮಲ್ಸಾನೆ ಶಿವಾರ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ರಿಪೇರಿಗಾಗಿ ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧನ ಮನೆಗೆ ನುಗ್ಗಿ ಕಿಡ್ನ್ಯಾಪ್ ಮಾಡಿ ಹತ್ಯೆ
ಮೃತರನ್ನು ಕಿರಣ್ ಅಹಿರಾರಾವ್ (47), ಕೃಷ್ಣಕಾಂತ್ ಮಾಲಿ (43), ಪ್ರವೀಣ್ ಪವಾರ್ (38) ಮತ್ತು ಅನಿಲ್ ಪಾಟೀಲ್ (38) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮೂಲತಃ ಧುಲೆ ನಿವಾಸಿಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಲಕ್ನೋದಲ್ಲಿ ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ
ಮುಂಬೈ: ಗೋಮಾಂಸ ಕಳ್ಳಸಾಗಣೆ (Beef Smuggling) ಮಾಡುತ್ತಿದ್ದಾನೆ ಎಂದು ಶಂಕಿಸಿ ಗೋರಕ್ಷಕರ ಗುಂಪೊಂದು ಶನಿವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದಿರುವ ಘಟನೆ ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nashik) ನಡೆದಿದೆ.
ಮುಂಬೈನ ಕುರ್ಲಾದ ಅಫಾನ್ ಅನ್ಸಾರಿ (32) ಕೊಲೆಯಾದ ವ್ಯಕ್ತಿ. ಅನ್ಸಾರಿ ತನ್ನ ಸಹಾಯಕ ನಾಸಿರ್ ಶೇಖ್ ಜೊತೆ ಕಾರಿನಲ್ಲಿ ಮಾಂಸವನ್ನು ಸಾಗಿಸುತ್ತಿದ್ದಾಗ ಗೋರಕ್ಷಕರು ಅವರನ್ನು ಅಡ್ಡಗಟ್ಟಿ ಥಳಿಸಿದ್ದಾರೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅನ್ಸಾರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಕಾರಿನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 10-15 ಜನ ಅಪರಿಚಿತ ವ್ಯಕ್ತಿಗಳು ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ಇಬ್ಬರ ಮೇಲೆ ಗಂಭೀರ ದಾಳಿ ಮಾಡಿದ್ದಾರೆ. ಇದರಿಂದ ಅನ್ಸಾರಿ ಸಾವನ್ನಪ್ಪಿದ್ದು, ಆತನ ಸಹಾಯಕ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, 11 ಜನರನ್ನು ಈಗಾಗಲೇ ಬಂಧಿಸಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದ್ದಕ್ಕೆ ಕಲ್ಲು ಎಸೆದು ಶಕ್ತಿ ಪ್ರದರ್ಶಿಸಿದ ಮಹಿಳೆ – 5 ಸಾವಿರ ದಂಡ ಕಟ್ಟಿ ಅದೇ ಬಸ್‍ನಲ್ಲಿ ಪ್ರಯಾಣ
ಮಾರ್ಚ್‌ನಲ್ಲಿಯೂ ಇದೇ ರೀತಿಯ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿತ್ತು. ಗೋಮಾಂಸ ಸಾಗಿಸುತ್ತಿದ್ದಾನೆ ಎಂಬ ಶಂಕೆಯ ಮೇಲೆ ನಸೀಮ್ ಖುರೇಷಿ ಎಂದು ಗುರುತಿಸಲಾದ (56) ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸರಪಂಚ್ ಸುಶೀಲ್ ಸಿಂಗ್, ಗ್ರಾಮಸ್ಥರಾದ ರವಿ ಸಾಹ್ ಹಾಗೂ ಉಜ್ವಲ್ ಶರ್ಮಾರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಭೀಕರ ಅಪಘಾತ – ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮಸಣಕ್ಕೆ
ನವದೆಹಲಿ: ಆಂಜನೇಯನ ಜನ್ಮಸ್ಥಳ ಎಂದು ಪರಿಗಣಿಸಲಾಗುವ ನಾಸಿಕ್‌ನ (Nashik) ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನಾ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. 377 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಗಿರಿ (Brahmagiri) ಟ್ರೆಕ್ಕಿಂಗ್ ಪಾಯಿಂಟ್‌ನಿಂದ ಅಂಜನೇರಿ ಬೆಟ್ಟಗಳಿಗೆ (Anjaneri Hills) ಮುಂದಿನ ಎರಡು ವರ್ಷದ ಅವಧಿಯಲ್ಲಿ ರೋಪ್‌ವೇ (Ropeway) ನಿರ್ಮಿಸಲು ತಿರ್ಮಾನಿಸಿದೆ.
ಕೇಂದ್ರ ಸರ್ಕಾರದ ಪ್ರಮುಖ ‘ಪರ್ವತ್ಮಾಲಾ’ (Parvatmala) ಯೋಜನೆಯಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶುಕ್ರವಾರ ಯೋಜನೆಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ. ಅಂಜನೇರಿ ಬೆಟ್ಟಗಳು ಹನುಮಂತನ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ಇದು ಯಾತ್ರಿಕರು ಮತ್ತು ಚಾರಣಿಗರು ಭೇಟಿ ನೀಡುವ ಗುಹೆ ಮತ್ತು ಅಂಜನಿ ಮಾತಾ ದೇವಾಲಯವನ್ನು ಹೊಂದಿದೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್
ಸುಮಾರು 4,200 ಅಡಿ ಎತ್ತರದಲ್ಲಿರುವ ದೇವಾಲಯವನ್ನು ತಲುಪಲು ಓರ್ವ ವ್ಯಕ್ತಿ ಮೂರು ಪರ್ವತಗಳನ್ನು ಏರಬೇಕಾಗಿದೆ. ಈ ಹಿನ್ನೆಲೆ ರೋಪ್‌ವೇ ನಿರ್ಮಾಣವಾದರೆ 5.7 ಕಿ.ಮೀ ಉದ್ದದ ರೋಪ್‌ವೇ ಮೂರು ಪರ್ವತಗಳನ್ನು ದಾಟಿ ಕೆಲವೇ ನಿಮಿಷಗಳಲ್ಲಿ ಬೆಟ್ಟದ ತುದಿಗೆ ಕರೆದೊಯ್ಯಲಿದೆ. ಇದನ್ನೂ ಓದಿ: ವೀಲ್‌ಚೇರ್ ಕೊರತೆ – ಸ್ಕೂಟಿಯಲ್ಲೇ ಆಸ್ಪತ್ರೆಯೊಳಗೆ ರೋಗಿಯನ್ನು ಕರೆದೊಯ್ದ ವ್ಯಕ್ತಿ
ಕೇಂದ್ರವು 2024ರ ವೇಳೆಗೆ ಒಟ್ಟು 90 ಕಿ.ಮೀನ 18 ರೋಪ್‌ವೇ ಯೋಜನೆಗಳನ್ನು ಯೋಜಿಸುತ್ತಿದೆ. ಶ್ರೀನಗರದ ಶಂಕರಾಚಾರ್ಯ ದೇವಸ್ಥಾನಕ್ಕೆ 1 ಕಿ.ಮೀ ರೋಪ್‌ವೇ, ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನೂಲ್‌ನ ಶ್ರೀಶೈಲಂ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ, ಲೇಹ್ ಅರಮನೆ, ಗ್ವಾಲಿಯರ್ ಕೋಟೆ, ಕೇದಾರನಾಥ ದೇವಾಲಯ, ಉತ್ತರಾಖಂಡದ ಹೇಮಕುಂಡ್ ಸಾಹಿಬ್‌ಗೆ ಮತ್ತು ತಮಿಳುನಾಡಿನಲ್ಲಿರುವ ಜನಪ್ರಿಯ ಗಿರಿಧಾಮ ಕೊಡೈಕೆನಾಲ್‌ಗೆ 12 ಕಿ.ಮೀ ರೋಪ್‌ವೇ ಯೋಜನೆಯನ್ನು ಯೋಜಿಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ: ತೆಲಂಗಾಣ ಗೃಹ ಸಚಿವ
ಕರ್ನಾಟಕದ (Karnataka) ಉಡುಪಿ (Udupi) ಜಿಲ್ಲೆಯ ಕೊಡಚಾದ್ರಿ ಬೆಟ್ಟಗಳಿಗೆ 7 ಕಿ.ಮೀ ರೋಪ್‌ವೇ ಮತ್ತು ಹಿಮಾಚಲ ಪ್ರದೇಶದ ಕುಲುವಿನಲ್ಲಿರುವ ಬಿಜ್ಲಿ ಮಹಾದೇವ ದೇವಸ್ಥಾನಕ್ಕೆ 3 ಕಿ.ಮೀ, ತೆಲಂಗಾಣದ ಈಗಳಪೆಂಟಾದಿಂದ ಕೃಷ್ಣಾ ನದಿಗೆ ಅಡ್ಡಲಾಗಿ ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನಕ್ಕೆ ಮತ್ತೊಂದು ರೋಪ್‌ವೇ ನಿರ್ಮಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇದನ್ನೂ ಓದಿ: ರಾಜ್ಯದ ಪರ ಧ್ವನಿ ಎತ್ತದೇ ಸುಮ್ಮನಿರುವ ಬಿಜೆಪಿ ಸಂಸದರು ದಂಡಪಿಂಡಗಳು: ಬಿ.ವಿ ಶ್ರೀನಿವಾಸ್
ಮುಂಬೈ: ಅಫ್ಘಾನಿಸ್ತಾನ ಮೂಲದ 35 ವರ್ಷದ ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಮಹಾರಾಷ್ಟ್ರದ ನಾಸಿಕ್‍ನಲ್ಲಿ ಮಂಗಳವಾರ ಗುಂಡಿಕ್ಕಿ ಕೊಲ್ಲಲಾಗಿದೆ.
ಸೂಫಿ ಬಾಬಾ ಎಂದೇ ಖ್ವಾಜಾ ಸಯ್ಯದ್ ಚಿಶ್ತಿ ಅವರು ಫೇಮಸ್ ಆಗಿದ್ದರು. ಮುಂಬೈನಿಂದ ಸುಮಾರು 200 ಕಿಮೀ ದೂರದಲ್ಲಿರುವ ಯೋಲಾ ಪಟ್ಟಣದ ಎಂಐಡಿ ಪ್ರದೇಶದ ತೆರೆದ ಜಾಗದಲ್ಲಿ ಹಣೆಗೆ ಗುಂಡು ಹಾರಿಸಿ ಸೂಫಿ ಬಾಬಾನನ್ನು ಕೊಲ್ಲಲಾಗಿದೆ. ಸೂಫಿ ಬಾಬಾ ಅವರನ್ನು ಕೊಂದ ನಂತರ ಆರೋಪಿ ಬಳಸುತ್ತಿದ್ದ ಎಸ್‍ಯುವಿಯನ್ನು ವಶಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯ ಪತ್ತೆಗೆ SDRF ತಂಡ ಆಗಮನ
ಈ ಪ್ರಕರಣದ ಪ್ರಮುಖ ಆರೋಪಿ ಸೂಫಿ ಬಾಬಾನ ಚಾಲಕನೇ ಎಂದು ಹೇಳಲಾಗುತ್ತಿದೆ. ಸಯ್ಯದ್ ಚಿಶ್ತಿ ಹಲವಾರು ವರ್ಷಗಳಿಂದ ನಾಸಿಕ್‍ನ ಯೋಲಾ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಈ ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಂಭವಾಮಿ ಯುಗೇ ಯುಗೇ – ಗೀತೋಪದೇಶದ ಸಾಲನ್ನು ಪೋಸ್ಟ್ ಮಾಡಿದ್ದ ಗುರೂಜಿ ಹಂತಕ
Live Tv
[brid partner=56869869 player=32851 video=960834 autoplay=true]
ಮುಂಬೈ: ಹನುಮನ ಜನ್ಮಸ್ಥಳ ಯಾವುದು..? ಅಂಜನಾದ್ರಿನಾ? ಅಂಜನೇರಿನಾ? ತಿರುಮಲನಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಸಿಕ್‍ನಲ್ಲಿ ನಡೆಸಲಾದ ಧರ್ಮ ಸಂಸದ್‍ನಲ್ಲಿ ಭಾರೀ ಗಲಾಟೆ ನಡೆದಿದೆ.
ಹನುಮ ಜನ್ಮಸ್ಥಳದ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ. ಹಲವು ಸ್ವಾಮೀಜಿಗಳು, ಕಿಷ್ಕಿಂದೆಯ ಹನುಮಾನ್ ಜನ್ಮಭೂಮಿ ಕ್ಷೇತ್ರದ ಗೋವಿಂದಾನಂದ ಸ್ವಾಮೀಜಿ ವಿರುದ್ಧ ಮುಗಿಬಿದ್ದಿದ್ದಾರೆ. ಹಿಂದೆ ರಾವಣ ಸೀತೆಯನ್ನು ಹೊತ್ತೊಯ್ದಿದ್ದ, ಆದರೆ ಈಗ ನೀವು ಹನುಮಂತನ ಜನ್ಮಸ್ಥಳವನ್ನೇ ಹೈಜಾಕ್ ಮಾಡ್ತಿದ್ದೀರಿ ಅಂತಾ ಆರೋಪಿಸಿದ್ದಾರೆ. ಇದಕ್ಕೆ ಗೋವಿಂದಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಸುಮ್ನೆ ಮಾತಾಡೋದಲ್ಲ, ದಾಖಲೆ ಕೊಡಿ ಅಂತಾ ಸವಾಲ್ ಹಾಕಿದ್ದಾರೆ. ಈ ಹಂತದಲ್ಲಿ, ಮಹಾಂತ ಸುಧೀರದಾಸರು, ಆದಿಗುರು ಶಂಕರಾಚಾರ್ಯರನ್ನು ಕಾಂಗ್ರೆಸ್ಸಿಗ ಎಂದಿದ್ದು ಕಿಷ್ಕಿಂದೆಯ ಗೋವಿಂದಾನಂದ ಸ್ವಾಮೀಜಿಯ ಆಗ್ರಹಕ್ಕೆ ಕಾರಣವಾಯ್ತು. ಕೂಡಲೇ ಕ್ಷಮೆಗೆ ಒತ್ತಾಯಿಸಿದ್ರು. ಈ ವೇಳೆ ಮಹಾಂತ ಸುಧೀರ್ ದಾಸರು, ಮೈಕ್ ಹಿಡಿದು ಹಲ್ಲೆಗೆ ಮುಂದಾದ್ರು. ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಗೋವಿಂದಾನಂದ ಸ್ವಾಮೀಜಿ, ಸ್ವಾಮೀಜಿಗಳಿಗೆ ಅಪಮಾನ ಮಾಡ್ತೀರಾ..? ನೀವು ಈ ಧರ್ಮಸಂಸದ್‍ಗೆ ಕಳಂಕ.. ಕೂಡ್ಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ್ರು.
ಕೊನೆಗೆ ಉಳಿದವರು ಸಮಾಧಾನ ಮಾಡೋ ಕೆಲಸ ಮಾಡಿದ್ರು. ಆದರೆ ನಾನು ಹಲ್ಲೆ ಮಾಡಲು ಯತ್ನಿಸಿಲ್ಲ. ಅವರೇ ಹಲ್ಲೆ ಮಾಡಿದರು ಅಂತಾ ನಾಟಕ ಮಾಡಿದ್ದಾರೆ ಎಂದು ಸುಧೀರ್ ದಾಸರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಧರ್ಮಸಂಸದ್‍ನಲ್ಲಿ ಭಾಗವಹಿಸದಂತೆ ಗೋವಿಂದಾನಂದ ಸ್ವಾಮೀಜಿಗೆ ತಡೆ ಒಡ್ಡಲು ಮಹಾರಾಷ್ಟ್ರ ಪೊಲೀಸರು ನೋಡಿದ್ರು. ನೀವು ಹನುಮನ ಜನ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿದ್ದೀರಿ. ಇದರಿಂದ ಅಂಜನೇರಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ನೀವು ಧರ್ಮಸಂಸದ್‍ನಲ್ಲಿ ಭಾಗವಹಿಸಬೇಡಿ. ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ರು.
ಇದಕ್ಕೆ ಡೋಂಟ್‍ಕೇರ್ ಎಂದ ಸ್ವಾಮೀಜಿ ಧರ್ಮಸಂಸದ್‍ನಲ್ಲಿ ಪಾಲ್ಗೊಂಡ್ರು. ಆದರೆ ಅಲ್ಲೂ ಮಹಾರಾಷ್ಟ್ರದ ಸ್ವಾಮೀಜಿಗಳು ಕಿರಿಕ್ ಮಾಡಿದ್ರು. ಕೊನೆಗೆ ಸಭೆಯೂ ಅರ್ಧಕ್ಕೆ ಮೊಟಕಾಯ್ತು.
ಮುಂಬೈ: ಗಣಪತಿ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಹೀಗಾಗಿ ಗಣೇಶ ಚತುರ್ಥಿಯಂದು (Ganesh festival) ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಆದರೆ ಈ ಮೋದಕದ ಬೆಲೆಯನ್ನು ಕೇಳಿದವರು ಆಶ್ಚರ್ಯವಾಗುವುದರ ಜೊತೆಗೆ ವಿಶೇಷತೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸುಮಾರು 10 ದಿನಗಳ ಕಾಲ ಗಣೇಶ ಚತುರ್ಥಿ ಸಂಭ್ರಮ, ಹಾಡು, ಪೂಜೆ ಇದ್ದೇ ಇರುತ್ತದೆ. ಇದೀಗ ಈ ವರ್ಷ ನಾಸಿಕ್‌ನಲ್ಲಿರುವ ಒಂದು ಸಿಹಿತಿಂಡಿಯ ಅಂಗಡಿಯಲ್ಲಿ ಈ ಮೋದಕ ವಿಶೇಷವಾಗಿ ಗ್ರಾಹಕರನ್ನು ಸೆಳೆಯುತ್ತಿದೆ. ಮೋದಕ ಎಷ್ಟು ದುಬಾರಿಯೆಂದರೆ, ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂಪಾಯಿ ಆಗಿದೆ. ಇದನ್ನೂ ಓದಿ: ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಮೀಟೂ ಆರೋಪ!
Mumbai | Ganesh idol of Mumbaicha Raja Mandal in Ganesh Galli being taken for immersion pic.twitter.com/fn2FQiM5ax
ಮೋದಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ದೀಪಕ್ ಚೌಧರಿ, ಈ ಬಂಗಾರದ ಮೋದಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಭರ್ಜರಿ ಮಾರಾಟವಾಗುತ್ತಿದೆ. ಉಳಿದ 25 ವಿಧದ ಮೋದಕಕ್ಕಿಂತಲೂ ಇದೇ ಸಿಕ್ಕಾಪಟೆ ಸೇಲ್ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಸ್ತೆ ಬದಿಯ ಹೋಟೆಲ್‍ನಲ್ಲಿ ಟೀ ಸವಿದ ಸಿಎಂ-ವೀಡಿಯೋ ವೈರಲ್
ಗಣಪ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಗಣೇಶ ಚತುರ್ಥಿಯಂದು ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಗಣೇಶನಿಗಾಗಿ ಕೇಸರಿ, ಕಾಜು, ಮೋತಿಚೂರ್ ಮತ್ತು ಖೋಯಾ ಮೋದಕಗಳು ತಯಾರಾಗುತ್ತವೆ. ಆದರೆ ಸಾಗರ್ ಸ್ವೀಟ್ಸ್ ಎಂಬ ಅಂಗಡಿ ಮಾರುತ್ತಿರುವ ಮೋದಕದ ಹೆಸರು ಗೋಲ್ಡನ್ ಮೋದಕ (Golden Modaks). ಈ ಅಂಗಡಿಯಲ್ಲಿ ಸುಮಾರು 26 ವಿಧದ ಮೋದಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಅದರಲ್ಲಿ ಬಂಗಾರದ ಮೋದಕ ಹೆಚ್ಚಿನ ಹಣ ಗಳಿಸುತ್ತಿದೆ. ಈ ಬಂಗಾರದ ಮೋದಕವನ್ನು ಜನರು ತುಂಬ ಖುಷಿಯಿಂದ ಖರೀದಿಸುತ್ತಿದ್ದಾರೆ. ಬೆಳ್ಳಿ ಮೋದಕವೂ ಸಹ ಈ ಅಂಗಡಿಯಲ್ಲಿ ಮಾರಾಟಕ್ಕಿದ್ದು, ಅದರ ಬೆಲೆ ಕೆಜಿಗೆ 1460 ರೂಪಾಯಿ ಆಗಿದೆ.