Tag: ನಾವಿಕ

  • ಹಕ್ಕಿಗೆ ಕಾಳು ನೀಡಿದ ಧವನ್ – ಮಾಡದ ತಪ್ಪಿಗೆ ದಂಡ ಪಾವತಿಸಿದ ನಾವಿಕ

    ಹಕ್ಕಿಗೆ ಕಾಳು ನೀಡಿದ ಧವನ್ – ಮಾಡದ ತಪ್ಪಿಗೆ ದಂಡ ಪಾವತಿಸಿದ ನಾವಿಕ

    ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಾರಾಣಸಿ ಪ್ರವಾಸದಲ್ಲಿದ್ದಾರೆ. ಶಿಖರ್ ಧವನ್ ಮಾಡಿದ ತಪ್ಪಿಗೆ ನಾವಿಕ ಶಿಕ್ಷೆ ಅನುಭವಿಸುವಂತಾಗಿದೆ.

    ಗಂಗಾ ನದಿಯಲ್ಲಿ ದೋಣಿ ವಿಹಾರದ ವೇಳೆ ಶಿಖರ್ ಧವನ್ ಸೈಬಿರಿಯನ್ ಹಕ್ಕಿಗಳಿಗೆ ಆಹಾರ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶಿಖರ್ ಧವನ್ ಶೇರ್ ಸಹ ಮಾಡಿಕೊಂಡಿದ್ದರು. ಹಕ್ಕಿ ಜ್ವರದ ನಿಯಂತ್ರಣಕ್ಕಾಗಿ ಸರ್ಕಾರ ಪಕ್ಷಿಗಳಿಗೆ ಆಹಾರ ನೀಡದ ಕುರಿತು ಕೆಲ ಮಾರ್ಗಸೂಚಿಗಳನ್ನ ತಂದಿದೆ. ಆದ್ರೆ ಶಿಖರ್ ಧವನ್ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆ ನಾವಿಕ ಸೋನು ಸಹಾನಿ ಮತ್ತು ಬೋಟ್ ಮಾಲೀಕ ಪ್ರದೀಪ್ ಸಾಹಾನಿ ದಂಡ ಪಾವತಿಸಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಸೇರಿದಂತೆ ಹಲವು ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಿದೆ. ಹಾಗಾಗಿ ವಾರಾಣಸಿ ನದಿ ದಡದಲ್ಲಿರುವ ಪಕ್ಷಿಗಳಿಗೆ ಆಹಾರ ನೀಡದಂತೆ ಸ್ಥಳೀಯ ಆಡಳಿತ ಮಂಡಳಿ ಕೆಲ ನಿಯಮಗಳನ್ನ ರೂಪಿಸಿತ್ತು.

    ವಾರಾಣಸಿಗೆ ಆಗಮಿಸಿದ್ದ ಧವನ್, ಕಾಲಭೈರವ ಮಂದಿರಕ್ಕೆ ತೆರಳಿ ದರ್ಶನ ಪಡೆದು, ಸಂಜೆ ಗಂಗಾ ಆರತಿಯಲ್ಲಿಯೂ ಭಾಗಿಯಾಗಿದ್ದರು. ಗಂಗಾ ನದಿಯಲ್ಲಿ ಬೋಟಿಂಗ್ ವೇಳೆ ಹಕ್ಕಿಗಳಿಗೆ ಕಾಳು ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಫೋಟೋ ವೈರಲ್ ಬಳಿಕ ವಾರಾಣಸಿ ಕಲೆಕ್ಟರ್ ನಾವಿಕರಿಗೆ ದಂಡ ವಿಧಿಸುವಂತೆ ಆದೇಶಿಸಿದ್ದರು

  • ರಜಾದಿನ ಮುಗ್ಸಿ ಬರುತ್ತಿದ್ದಂತೆ ಶವವಾಗಿ ನೌಕಾ ಸೇನೆಯ ನಾವಿಕ ಪತ್ತೆ

    ರಜಾದಿನ ಮುಗ್ಸಿ ಬರುತ್ತಿದ್ದಂತೆ ಶವವಾಗಿ ನೌಕಾ ಸೇನೆಯ ನಾವಿಕ ಪತ್ತೆ

    ಮುಂಬೈ: ಐಎನ್‍ಎಸ್ ತಲ್ವಾರ್ ನೌಕೆಯಲ್ಲಿ ಅನುಮಾನಾಸ್ಪದವಾಗಿ 21 ವರ್ಷದ ನಾವಿಕರೊಬ್ಬರು ಮೃತಪಟ್ಟಿದ್ದಾರೆ.

    ರಾಹುಲ್ ಚೌಧರಿ(21) ಮೃತ ನಾವಿಕ. ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ತನ್ನ ಪೋಷಕರೊಂದಿಗೆ ರಜಾದಿನ ಕಳೆದು ಬಂದಿದ್ದ ರಾಹುಲ್ ಚೌಧರಿ ನಿಗೂಢವಾಗಿ ಮೃತಪಟ್ಟಿದ್ದಾರೆ.

    ಚೌಧರಿ ಹೇಗೆ ಮೃತಪಟ್ಟಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಮೆಟ್ಟಿಲನ್ನು ಹತ್ತುವ ಸಂದರ್ಭದಲ್ಲಿ ಚೌಧರಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ರಕ್ಷಣಾ ತಂಡದ ಮೂಲಗಳು ತಿಳಿಸಿವೆ.

    ರಕ್ತದ ಮಡುವಿನಲ್ಲಿ ಚೌಧರಿ ಬಿದ್ದಿದ್ದನ್ನು ನೋಡಿ ಸಹೋದ್ಯೋಗಿ ತಕ್ಷಣ ಇತರ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚೌಧರಿಯನ್ನು ಐಎನ್‍ಎಸ್ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಚೌಧರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಚೌಧರಿ ತಂದೆ ರಮೇಶ್ ಚಂದ್ರ ಹಾಗೂ ಚಿಕ್ಕಪ್ಪ ರಾಕೇಶ್ ಕುಮಾರ್ ಮುಂಬೈಗೆ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಮೃತ ಚೌಧರಿ ತಲೆಯ ಮೇಲೆ ಗಾಯದ ಗುರುತು ಬಿದ್ದಿದ್ದು, ಮೂಗು ಮತ್ತು ಕಿವಿಗಳಿಂದ ರಕ್ತ ಬರುತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಮೃತ ಚೌಧರಿ ಸಾವಿನ ತನಿಖೆಗೆ ಒಂದು ತನಿಖಾ ತಂಡವನ್ನು ನೇಮಿಸಲಾಗಿದೆ. ಇದು ಒಂದು ಆಕಸ್ಮಿಕ ಘಟನೆಯೇ ಅಥವಾ ಯಾರಾದರೂ ನೌಕೆಯಲ್ಲಿ ಅವರನ್ನು ಹತ್ಯೆ ಮಾಡಿದ್ದಾರಾ ಎನ್ನುವುದು ಖಚಿತವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಕಾನೂನಿನ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಲಿಂಗ ಪರಿವರ್ತನೆ ಮಾಡಿಸಿಕೊಂಡು ಮಹಿಳೆಯಾದ ನಾವಿಕ ನೌಕಾಸೇನೆಯಿಂದ ವಜಾ

    ಲಿಂಗ ಪರಿವರ್ತನೆ ಮಾಡಿಸಿಕೊಂಡು ಮಹಿಳೆಯಾದ ನಾವಿಕ ನೌಕಾಸೇನೆಯಿಂದ ವಜಾ

    ನವದೆಹಲಿ: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಪರಿವರ್ತನೆಯಾದ ನಾವಿಕ ಎಮ್‍ಕೆ ಗಿರಿ ಎಂಬವರನ್ನ ಭಾರತೀಯ ನೌಕಾ ಪಡೆ ಕೆಲಸದಿಂದ ವಜಾ ಮಾಡಿದೆ.

    ನಾವಿಕ ಮನೀಷ್ ಗಿರಿ ಅವರನ್ನ ವಿಶಾಖಪಟ್ಟಣಂನಲ್ಲಿ ನೌಕಾ ಸೇವೆಗೆ ನಿಯೋಜಿಸಲಾಗಿತ್ತು. ಆಗಸ್ಟ್‍ನಲ್ಲಿ ರಜೆಯಲ್ಲಿದ್ದಾಗ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದ್ರೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಹಾಗೂ ಲಿಂಗ ಬದಲಾವಣೆಗಾಗಿ ಯಾವುದೇ ಅನುಮತಿ ಪಡೆದಿರಲಿಲ್ಲ.

    ಇದೀಗ ಭಾರತೀಯ ನೌಕಾ ಪಡೆ ನೌಕಾ ನಿಯಮಗಳ ಅಡಿಯಲ್ಲಿ ಇನ್ನು ನಿಮ್ಮ ಸೇವೆಯ ಅಗತ್ಯವಿಲ್ಲ ಎಂಬ ಹೇಳಿಕೆಯೊಂದಿಗೆ ಮನೀಷ್ ಗಿರಿ ಅವರನ್ನ ಕೆಲಸದಿಂದ ತೆಗೆದುಹಾಕಿದೆ. ಈ ವ್ಯಕ್ತಿಯು ರಜೆಯಲ್ಲಿದ್ದಾಗ ತನ್ನ ಸ್ವಂತ ಇಚ್ಛೆಯಂತೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಮೂಲಕ ಅವರನ್ನು ಕೆಲಸಕ್ಕೆ ತೆಗೆದುಕೊಂಡಾಗ ಪರಿಗಣಿಸಲಾಗಿದ್ದ ಲಿಂಗ ಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಮಾರ್ಪಾಡು ಮಾಡಿದ್ದಾರೆ ಎಂದು ಹೇಳಿದೆ.

     

    ಅವರು ಭಾರತೀಯ ನೌಕೆಯಲ್ಲಿ ನಾವಿಕನಾಗಿ ಕೆಲಸಕ್ಕೆ ಸೇರುವಾಗ ಇದ್ದ ನೇಮಕಾತಿ ನಿಯಮ ಹಾಗೂ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ನೌಕಾಪಡೆ ಹೇಳಿದೆ.

    ಪ್ರಸ್ತುತ ಇರುವ ಸೇವಾ ನಿಯಮ ಮತ್ತು ನಿಬಂಧನೆಗಳ ಪ್ರಕಾರ ಲಿಂಗ ಸ್ಥಿತಿಯಲ್ಲಿ ಮಾರ್ಪಾಡು ಹಾಗೂ ವೈದ್ಯಕೀಯ ಸ್ಥಿತಿಯ ಹಿನ್ನೆಲೆಯಲ್ಲಿ ಅವರಿಗೆ ನಾವಿಕನಾಗಿ ಕೆಲಸದಲ್ಲಿ ಮುಂದುವರೆಯುವ ಅವಕಾಶವಿಲ್ಲ ಎಂದಿದೆ.

    ಇದೀಗ ಸಬಿ ಆಗಿ ಬದಲಾಗಿರುವ ಗಿರಿ, ತೃತೀಯಲಿಂಗಿಗಳಿಗೆ ಮಾಡಲಾಗುತ್ತಿರುವ ತಾರತಮ್ಯವನ್ನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.