Tag: ನಾಲ್ವರ ಬಂಧನ

  • ಹುಲಿ ಹಲ್ಲುಗಳ ಮಾರಾಟಕ್ಕೆ ಯತ್ನ- ನಾಲ್ವರ ಬಂಧನ

    ಹುಲಿ ಹಲ್ಲುಗಳ ಮಾರಾಟಕ್ಕೆ ಯತ್ನ- ನಾಲ್ವರ ಬಂಧನ

    ಮಡಿಕೇರಿ: ಹುಲಿ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಹಾಗೂ ತಿತಿಮತಿ ಪ್ರಾದೇಶಿಕ ವಲಯ ಅರಣ್ಯ ಘಟಕ ಯಶಸ್ವಿಯಾಗಿದೆ.

    ತಾಲೂಕಿನ ಸುಳುಗೋಡು ಗ್ರಾಮದ ಗಣೇಶ್ ವೈ.ಸಿ. (20), ಕೋತೂರು ಗ್ರಾಮದ ಸಂತೋಷ್ ಕೆ.ವಿ (25), ಸುಳುಗೋಡು ಗ್ರಾಮದ ಸಂತೋಷ್ ಕುಮಾರ್ ಹೆಚ್.ಆರ್ (29) ಹಾಗೂ ಚಿಕ್ಕಮಂಡೂರು ಗ್ರಾಮದ ಪೆಮ್ಮಂಡ ಪವನ್ ಪೂವಯ್ಯ ಬಂಧಿತ ಆರೋಪಿಗಳು. ಇದನ್ನೂ ಓದಿ: ಬೊಮ್ಮಾಯಿ ಮಾತಾಡೋದು ನೋಡಿದ್ರೆ ಅನುಮಾನ ಬರ್ತಿದೆ: ಸಿದ್ದರಾಮಯ್ಯ

    ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ಚೆನ್ನಂಗೊಲ್ಲಿ ಬಸ್ ತಂಗುದಾಣದ ಬಳಿ ಅಕ್ರಮವಾಗಿ ಹುಲಿ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ದಾಳಿ ನಡೆಸಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ: ಬೊಮ್ಮಾಯಿ ಗರಂ

    ಬಂಧಿತರಿಂದ ಹುಲಿಯ ಆರು ಹಲ್ಲುಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪೊನ್ನಂಪೇಟೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

  • ಕ್ಯಾಸಿನೋದಲ್ಲಿ ಗೆದ್ದ ಹಣದ ಮೇಲೆ ಕಣ್ಣಿಟ್ಟು ಬಾಲಕಿ ಕಿಡ್ನ್ಯಾಪ್- ನಾಲ್ವರು ಅರೆಸ್ಟ್

    ಕ್ಯಾಸಿನೋದಲ್ಲಿ ಗೆದ್ದ ಹಣದ ಮೇಲೆ ಕಣ್ಣಿಟ್ಟು ಬಾಲಕಿ ಕಿಡ್ನ್ಯಾಪ್- ನಾಲ್ವರು ಅರೆಸ್ಟ್

    ಬಾಗಲಕೋಟೆ: ಇಲ್ಲಿನ ನವನಗರದಲ್ಲಿ ಬಾಲಕಿಯೊಬ್ಬಳು ಟ್ಯೂಷನ್ ಮುಗಿಸಿಕೊಂಡು ಬರುವಾಗ ಚಾಕಲೇಟ್ ಕೊಡುವ ನೆಪದಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

    KIDNAP

    ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಲೋಕೇಶ್ ಜಗಲಾಸರ ಅವರು, ಗೆದ್ದಿರುವ ಕ್ಯಾಸಿನೊ ಹಣ ಹೊಡೆಯಲೆಂದು ಬಾಲಕಿ ಅಪರಹಣ ಮಾಡಿದ್ದರು. ಆರೋಪಿಗಳನ್ನು ಕೇವಲ 18 ಗಂಟೆಯಲ್ಲಿ ಬಂಧಿಸಲಾಗಿದೆ. ಗದ್ದನಕೇರಿ ಗ್ರಾಮದ ಬೀರಪ್ಪ ಬೂದಿಹಾಳ, ಪ್ರಫುಲ್ ಪಾಟೀಲ್, ಈರಣ್ಣ ದಿವಟಗಿ, ಕಮತಗಿ ಗ್ರಾಮದ ಕೃಷ್ಣಾ ದಾಸರ ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ. ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರು ವಾರಗಳ ಹಿಂದೆ ಅಪ್ಪು ಜೊತೆ ಮಾತನಾಡಿದ್ದೆ: ರಮ್ಯಾ

    POLICE JEEP

    ಬಾಲಕಿಗೆ ವಾಪಸ್ ಬಿಡಲು 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಮೊಬೈಲ್ ಕರೆ ಆಧರಿಸಿ ಪ್ರಕರಣ ಬೇಧಿಸಲಾಗಿದೆ. ಆರೋಪಿತರು ಬಾಲಕಿಯನ್ನು ಕಾರಿನಲ್ಲಿ ಹುಬ್ಬಳ್ಳಿ, ಗದಗ ಕಡೆಗಳಲ್ಲೆಲ್ಲಾ ಸುತ್ತಾಡಿ ಕೊನೆಗೆ ಬಾಲಕಿ ಮನೆ ಮುಂದೆ ಬಿಟ್ಟು ಹೋಗಿದ್ದರು. ಬಂಧಿತರಿಂದ ಎರಡು ಕಾರು, ಮೊಬೈಲ್ ಜಪ್ತಿ ಮಾಡಲಾಗಿದೆ. ಪ್ರಕರಣ ಭೇದಿಸಿದ ತಂಡದ ಕಾರ್ಯ ಶ್ಲಾಘಿಸಿ 25 ಸಾವಿರ ರೂ. ನಗದು ಬಹುಮಾನ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.  ಇದನ್ನೂ ಓದಿ: ತಂದೆಯಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗ್ಬಾರ್ದು ಅನ್ನೋ ವ್ಯಕ್ತಿತ್ವ ಅಪ್ಪುದು: ವಿ. ಮನೋಹರ್

  • ನಾಲ್ವರು ದರೋಡೆಕೋರರ ಬಂಧನ: ಮೂರು ಮೊಬೈಲ್, ಮೂರು ಬೈಕ್ ವಶ

    ನಾಲ್ವರು ದರೋಡೆಕೋರರ ಬಂಧನ: ಮೂರು ಮೊಬೈಲ್, ಮೂರು ಬೈಕ್ ವಶ

    ಕೋಲಾರ: ನಾಲ್ವರು ಹೆದ್ದಾರಿ ದರೋಡೆಕೋರರನ್ನು ಬಂಧಿಸುವಲ್ಲಿ ಕೋಲಾರ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರು ಮತ್ತು ಕೋಲಾರ ಮೂಲದ ಟಿಪ್ಪು, ಸೈಯದ್, ನಾಸೀರ್ ಪಾಶಾ ಹಾಗೂ ಸೈಯದ್ ಅಫ್ರೋಝ್ ಪಾಶಾ ಬಂಧಿತ ದರೋಡೆಕೋರರು. ಇದೇ ತಂಡದ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಅವನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ಬಂಧಿತ ದರೋಡೆಕೋರರು ಕೋಲಾರ ನಗರದ ಸುತ್ತಮುತ್ತ 3 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅವರಿಂದ ಮೂರು ದ್ವಿಚಕ್ರ ವಾಹನ, ತಲ್ವಾರ್, ಚಾಕು, ಕಬ್ಬಿಣದ ರಾಡ್ ಹಾಗೂ 3 ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೋಲಾರ ಅಷ್ಟೇ ಅಲ್ಲದೆ ಬೆಂಗಳೂರು ಹಾಗೂ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡುಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡೆಸಿದ್ದಾರೆ.