Tag: ನಾಲೆ

  • Uttara Kannada | ಪೋಷಕರ ನಿರ್ಲಕ್ಷ್ಯ – 2 ವರ್ಷದ ಮಗು ನಾಲೆಗೆ ಬಿದ್ದು ಸಾವು

    Uttara Kannada | ಪೋಷಕರ ನಿರ್ಲಕ್ಷ್ಯ – 2 ವರ್ಷದ ಮಗು ನಾಲೆಗೆ ಬಿದ್ದು ಸಾವು

    – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಕಾರವಾರ: ಪೋಷಕರ ನಿರ್ಲಕ್ಷ್ಯದಿಂದ ಆಟವಾಡುತಿದ್ದ ಎರಡು ವರ್ಷದ ಹೆಣ್ಣುಮಗು ನಾಲೆಗೆ (Canal) ಮಗು ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ಜಾಲಿ ಪಟ್ಟಣ ವ್ಯಾಪ್ತಿಯ ಆಝಾದ್ ನಗರದಲ್ಲಿ ನಡೆದಿದೆ.

    ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಹೆಣ್ಣುಮಗು ಶನಿವಾರ ಮಧ್ಯಾಹ್ನದ ವೇಳೆ ಮನೆಯ ಹೊರಗೆ ಆಟವಾಡುತಿದ್ದ ವೇಳೆ ಎದುರಿಗಿದ್ದ ಕಾಲುವೆಯೊಳಗೆ ಬಿದ್ದಿದೆ. ಸ್ಥಳೀಯರು ತಕ್ಷಣ ಮಗುವನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅಸುನೀಗಿದೆ. ಇದನ್ನೂ ಓದಿ: Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    ಘಟನೆ ಕುರಿತು ಪೋಷಕರು ಇದುವರೆಗೂ ಠಾಣೆಗೆ ದೂರು ನೀಡಿಲ್ಲ. ಇದೀಗ ಸಿಸಿ ಕ್ಯಾಮೆರಾದ ವಿಡಿಯೋ ತುಣುಕು ಹೊರಬಿದ್ದಿದ್ದು ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

  • ಐವರ ಜಲಸಮಾಧಿ ಬಳಿಕ ಎಚ್ಚೆತ್ತ ಅಧಿಕಾರಿಗಳು – ಆರಂಭವಾಯ್ತು ತಡೆಗೋಡೆ ನಿರ್ಮಾಣ ಕಾರ್ಯ

    ಐವರ ಜಲಸಮಾಧಿ ಬಳಿಕ ಎಚ್ಚೆತ್ತ ಅಧಿಕಾರಿಗಳು – ಆರಂಭವಾಯ್ತು ತಡೆಗೋಡೆ ನಿರ್ಮಾಣ ಕಾರ್ಯ

    ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು (Car) ನಾಲೆಗೆ ಬಿದ್ದು, ಐವರು ಜಲಸಮಾಧಿಯಾದ ಆಘಾತಕಾರಿ ಘಟನೆಯ ಬಳಿಕ ಇದೀಗ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ಇದೀಗ ತಡೆಗೋಡೆ (Barrier) ನಿರ್ಮಿಸುವ ಕಾರ್ಯ ಆರಂಭವಾಗಿದೆ.

    ದುರ್ಘಟನೆ ಪಾಂಡವಪುರ ತಾಲೂಕಿನ ಬನಘಟ್ಟ ಬಳಿಯ ವಿಸಿ ನಾಲೆಯಲ್ಲಿ (VC Canal) ಸಂಭವಿಸಿತ್ತು. ಭದ್ರವಾತಿ ನಿವಾಸಿಗಳಾದ ಚಂದ್ರಪ್ಪ (61), ಕೃಷ್ಣಪ್ಪ (60), ಧನಂಜಯ (55), ಬಾಬು ಹಾಗೂ ಜಯಣ್ಣ ಘಟನೆಯಲ್ಲಿ ಸಾವನ್ನಪ್ಪಿದ್ದರು. ಮೃತರು ಇಂಡಿಕಾ ಕಾರಿನಲ್ಲಿ ಮಂಗಳವಾರ ಸಂಜೆ 4:45 ರ ವೇಳೆಯಲ್ಲಿ ಮೈಸೂರಿನಿಂದ ಭದ್ರಾವತಿ ಕಡೆಗೆ ಪ್ರಯಾಣ ಬೆಳೆಸಿದ್ದರು. ಬನಘಟ್ಟದ ವಿಸಿ ನಾಲೆ ಸೇತುವೆ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ನೇರವಾಗಿ ನಾಲೆಗೆ ಉರುಳಿಬಿದ್ದಿದೆ.

    ಕಿರಿದಾದ ರಸ್ತೆ ಹಾಗೂ ತಿರುವಿದ್ದ ಕಾರಣ ಚಾಲಕನಿಗೆ ಕಾರು ನಿಯಂತ್ರಿಸಲು ಸಾಧ್ಯವಾಗಿಲ್ಲ. ಅಲ್ಲದೇ ಕೆಆರ್‌ಎಸ್ ಅಣೆಕಟ್ಟಿನಿಂದ ನಾಲೆಗೆ ನೀರು ಬಿಟ್ಟಿರುವುದರಿಂದ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಇದರಿಂದ ನಾಲೆಗೆ ಬಿದ್ದ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದರು. ಇದನ್ನೂ ಓದಿ: ನಾಪತ್ತೆಯಾಗಿ ಮೂರು ದಿನಗಳ ಬಳಿಕ ದಟ್ಟ ಅರಣ್ಯದಲ್ಲಿ ಪತ್ತೆಯಾದ 85ರ ವೃದ್ಧೆ

    ಇದೀಗ ಬಳಘಟ್ಟ ಬಳಿಯ ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಆರಂಭವಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಖುದ್ದು ಹಾಜರಿದ್ದು ಕೆಲಸ ಮಾಡಿಸುತ್ತಿದ್ದಾರೆ. ತಡೆಗೋಡೆ ನಿರ್ಮಿಸುವ ಜೊತೆಗೆ ಹೆದ್ದಾರಿ ಪಕ್ಕದಲ್ಲಿದ್ದ ಗಿಡಗಂಟೆ ತೆರವುಗೊಳಿಸಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.

    ದುರ್ಘಟನೆ ಬಳಿಕ ಇಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿ ವಲಯದ ಅಧಿಕಾರಿಗಳು ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಚಿಂತಾಮಣಿ ಮನೆಯ ಮೇಲೆ ಪೊಲೀಸ್‌ ದಾಳಿ – ಹುಲಿ ಉಗುರು ಪತ್ತೆ, ಯುವಕ ನಾಪತ್ತೆ

  • ನೃತ್ಯದಲ್ಲಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಕನಸು ಕಂಡಿದ್ದ ಬಾಲಕ ಏಡಿ ಹಿಡಿಯಲು ಹೋಗಿ ನೀರು ಪಾಲು

    ನೃತ್ಯದಲ್ಲಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಕನಸು ಕಂಡಿದ್ದ ಬಾಲಕ ಏಡಿ ಹಿಡಿಯಲು ಹೋಗಿ ನೀರು ಪಾಲು

    ಮಡಿಕೇರಿ: ನೃತ್ಯದ ಮೂಲಕ ಭಾರತ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದ ಬಾಲಕನೋರ್ವ ಬುಧವಾರ ನಾಲೆಯಲ್ಲಿ ಏಡಿ ಹಿಡಿಯಲು ಹೋಗಿ ನೀರು ಪಾಲದ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ (Harangi Reservoir) ನಾಲೆ ಬಳಿ ನಡೆದಿದೆ. ಅನಿತ್ ನಾಲೆಗೆ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾನೆ.

    ಇಂದು ಬೆಳಗ್ಗೆ 8:30ರ ಸುಮಾರಿಗೆ ಬ್ಯಾಡಗೂಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರದ ಬಳಿಯಿಂದ ಸ್ನೇಹಿತರೊಂದಿಗೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಾರಂಗಿ ನಾಲೆಯಲ್ಲಿ ಏಡಿಯೊಂದು ಅನಿತ್‌ಗೆ ಗೋಚರಿಸಿದೆ. ಈ ವೇಳೆ ಅನಿತ್ ತನ್ನ ಗೆಳೆಯರಿಗೆ ಏಡಿ ಹಿಡಿದುಕೊಂಡು ಬರುವೆ, ಸ್ವಲ್ಪ ಸಮಯ ಕಾಯಿರಿ ಎಂದು ನಾಲೆ ಸಮೀಪವೇ ಬಟ್ಟೆ, ಶಾಲಾ ಬ್ಯಾಗ್ ಇಟ್ಟು ಹೋಗಿದ್ದಾನೆ. ಆದರೆ ಆಕಸ್ಮಿಕವಾಗಿ ಕಾಲು ಜಾರಿ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಅನಿತ್ ಸ್ನೇಹಿತರು ಆತನನ್ನು ರಕ್ಷಣೆ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.

    ನಂತರ ಶಾಲಾ ಬಾಲಕರು ಹಾಗೂ ಗ್ರಾಮಸ್ಥರು ನಾಲೆಯಲ್ಲಿ ಅನಿತ್ ಕಣ್ಮರೆಯಾಗಿರುವ ವಿಷಯ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿತ್‌ನ ಹುಡುಕಾಟಕ್ಕಾಗಿ ಹಾರಂಗಿ ಜಲಾಶಯದಿಂದ ನಾಲೆಗೆ ಬಿಟ್ಟಿರುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ಅಗ್ನಿ ಶಾಮಕ ದಳದವರು ಬಾಲಕನಿಗಾಗಿ ಶೋಧ ಕಾರ್ಯ ನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಚೇಸ್ ಮಾಡಿ 1 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ಪೊಲೀಸರು!

    ನಾಲೆಯಲ್ಲಿ ಬಿದ್ದು ಮೃತಪಟ್ಟ ಬಾಲಕ ಪ್ರತಿಭಾವಂತ ವಿದ್ಯಾರ್ಥಿಯಾಗಿದು, ನೃತ್ಯ ತರಬೇತಿಯಲ್ಲೂ ಹೆಸರು ಮಾಡಿದ್ದ. ಇತ್ತೀಚೆಗೆ ಚೀನಾದಲ್ಲಿ ನಡೆದ ನ್ಯಾಷನಲ್ ಲೆವೆಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಭಾಗವಹಿಸಿದ್ದ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಥೈಲೆಂಡ್‌ನಲ್ಲಿ ನಡೆಯಲಿರುವ ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಗೂ ಭಾರತ ತಂಡದಿಂದ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದ. ಇದನ್ನೂ ಓದಿ: ಬ್ಯಾಂಕಾಕ್‌ನಿಂದ ಬೆಂಗ್ಳೂರಿಗೆ ಸಾಗಿಸ್ತಿದ್ದ ಹೆಬ್ಬಾವು, ಉಡ, ಮೊಸಳೆ ಇನ್ನಿತರ ಪ್ರಾಣಿಗಳು ವಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಅಮರಾವತಿ: ಅಪಘಾತ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ ಟ್ರಕ್‌ ಚಾಲಕನೊಬ್ಬ 3 ಕಿ.ಮೀ. ವರೆಗೂ ಸ್ವಿಮ್ಮಿಂಗ್‌ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಟ್ರಕ್‌ ಡ್ರೈವರ್‌ ಚಲ್ಲ ಕೃಷ್ಣ ಈ ಸಾಹಸ ಮಾಡಿದ ಭೂತ. ಈತ ವಿಂಜಮೂರಿಗೆ ತೆರಳುತ್ತಿದ್ದ. ವೇಗವಾಗಿ ಟ್ರಕ್‌ ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣಕ್ಕೆ ಸಿಗದೆ ಪೊದಲಕೂರು ಮಂಡಲದ ತಾಟಿಪರ್ತಿ ಬಳಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೃಷ್ಣ ವಾಹನವನ್ನು ನಿಲ್ಲಿಸದೆ ಇನ್ನಷ್ಟು ವೇಗವಾಗಿ ಓಡಿಸಿದ್ದಾನೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ 12 ಲಕ್ಷ ವಂಚಿಸಿದ 56ರ ವ್ಯಕ್ತಿ!

    ಗಾಬರಿಯಲ್ಲಿ ವಾಹನ ಚಲಾಯಿಸುತ್ತಿದ್ದ ಕೃಷ್ಣ, ಸಂಗಮ್ ಪ್ರದೇಶದಲ್ಲಿ ಮತ್ತೆ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈತನನ್ನು ಹಿಡಿಯಲೇಬೇಕು ಎಂದು ಪೊಲೀಸರು ಟ್ರಕ್‌ ಬೆನ್ನತ್ತಿದ್ದಾರೆ. ಡ್ರೈವರ್‌ ಬೆನ್ನತ್ತಿದ್ದ ಪೊಲೀಸರಿಗೆ ಕನಿಗಿರಿ ಜಲಾಶಯದ ನಾಲೆಯ ಒಡ್ಡು ಮೇಲೆ ಟ್ರಕ್‌ ನಿಂತಿರುವುದು ಕಂಡುಬಂದಿದೆ.

    ಈ ವೇಳೆ ನಾಲೆ ಕಡೆ ದೃಷ್ಟಿ ಹಾಯಿಸಿ ನೋಡಿದ ಪೊಲೀಸರಿಗೆ ಟ್ರಕ್‌ ಡ್ರೈವರ್‌ ನೀರಿನಲ್ಲಿ ಈಜುತ್ತಿರುವುದು ಕಂಡುಬಂದಿದೆ. ಆತನನ್ನು ಹಿಡಿಯಲು ಮುಂದಾದಾಗ, ಸಿಗಬಾರದು ಎಂಬ ಕಾರಣಕ್ಕೆ ನಾಲೆಯಿಂದ ದಡದ ಮೇಲಕ್ಕೆ ಬರದೇ ಸುಮಾರು 3 ಕಿ.ಮೀ ವರೆಗೂ ಈಜಿದ್ದಾನೆ. ಇದನ್ನೂ ಓದಿ: ಚಾಕಲೇಟ್ ಆಮಿಷವೊಡ್ಡಿ 4ರ ಬಾಲಕಿ ಮೇಲೆ ಅತ್ಯಾಚಾರ

    ನಾಲೆಯಲ್ಲಿ ಅಪಾಯದ ನೀರಿನ ಮಟ್ಟ ಇದ್ದಿದ್ದರಿಂದ ಪೊಲೀಸರು ಯಾರೂ ಸಹ ನೀರಿಗಿಳಿಯಲು ಮುಂದಾಗಲಿಲ್ಲ. ಕೊನೆಗೆ ಈಜುಪಟುವೊಬ್ಬನನ್ನು ಸ್ಥಳಕ್ಕೆ ಕರೆಸಿದರು. ಆತ ನಾಲೆಗೆ ದುಮುಕಿ ಕೃಷ್ಣನನ್ನು ಹಿಡಿದು ಸುರಕ್ಷಿತವಾಗಿ ದಡಕ್ಕೆ ಕರೆತಂದ. ನಂತರ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದರು.

  • ಚಾಲಕನ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ನಾಲೆಗೆ ಬಿದ್ದ ಟ್ರ್ಯಾಕ್ಟರ್

    ಚಾಲಕನ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ನಾಲೆಗೆ ಬಿದ್ದ ಟ್ರ್ಯಾಕ್ಟರ್

    – ಸ್ಥಳೀಯರಿಂದ ಚಾಲಕನ ರಕ್ಷಣೆ

    ಹಾಸನ: ಚಾಲಕನ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ನಾಲೆಗೆ ಟ್ರ್ಯಾಕ್ಟರ್ ಬಿದ್ದಿದ್ದು, ಸ್ಥಳೀಯ ರೈತರು ಟ್ರ್ಯಾಕ್ಟರ್ ಚಾಲಕನನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರು ಗ್ರಾಮದಲ್ಲಿ ನಡೆದಿದೆ.

    ದೇವಿಗೆರೆ ಗ್ರಾಮದ ಮಂಜುನಾಥ್ ಟ್ರ್ಯಾಕ್ಟರ್‍ನಲ್ಲಿ ಮಣ್ಣು ತುಂಬಿಕೊಂಡು ನಾಲೆ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ನೀರಿಗೆ ಬಿದ್ದಿದೆ. ಇದನ್ನು ಗಮನಿಸಿದ ದಿಂಡಗೂರು ಗ್ರಾಮದ ರೈತರಾದ ದಯಾನಂದ ಮತ್ತು ಹರೀಶ್ ಅವರು, ತಕ್ಷಣ ನೀರಿಗೆ ಹಾರಿ ಚಾಲಕನ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ

    ತಕ್ಷಣ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ರಕ್ಷಣಾ ಕಾರ್ಯ ನಡೆಸಿದ್ದಾರೆ. ಕ್ರೇನ್ ಮೂಲಕ ಟ್ರ್ಯಾಕ್ಟರ್ ಮೇಲೆತ್ತಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

  • ದೇವಸ್ಥಾನಕ್ಕೆ ಹೋದ 8 ಸ್ನೇಹಿತರ ಪೈಕಿ ಮೂವರು ಜಲ ಸಮಾಧಿ

    ದೇವಸ್ಥಾನಕ್ಕೆ ಹೋದ 8 ಸ್ನೇಹಿತರ ಪೈಕಿ ಮೂವರು ಜಲ ಸಮಾಧಿ

    ಮಂಡ್ಯ: ದೇವಸ್ಥಾನಕ್ಕೆ ಹರಕೆ ತೀರಿಸಲು ಹೊರಟ ಎಂಟು ಮಂದಿ ಸ್ನೇಹಿತರ ತಂಡವೊಂದು ಪೂಜೆಯ ಬಳಿಕ ಊಟ ಮಾಡಿ ಕಾಲುವೆಗೆ ಈಜಲು ಹೋಗಿ ಸಂಭವಿಸಿದ ಅವಘಡದಲ್ಲಿ ಮೂವರು ಸ್ನೇಹಿತರು ನೀರು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಮಂಡ್ಯದ ಕೆಆರ್‍ ಪೇಟೆ ತಾಲೂಕಿನ ಹೇಮಗಿರಿ ಬಳಿಯಿರುವ ಚಂದಗೋಳಮ್ಮ ದೇವಸ್ಥಾನದ ಎದುರಿರುವ ಮಂದಗೆರೆ ಬಲದಂಡಾ ನಾಲೆಯಲ್ಲಿ ಘಟನೆ ನಡೆದಿದ್ದು, ಮೈಸೂರಿನ ಬೆಲವತ್ತಮಂಟಿ ನಗರದ ಆಟೋ ಡ್ರೈವರ್ ರವಿ(27), ಗಾರೆ ಕೆಲಸಗಾರರಾದ ಕುಂಬಾರಕೊಪ್ಪಲು ನಗರದ ಯೋಗಶ್(24), ಲೋಕನಾಯಕನಗರದ ಮಂಜು(24) ನೀರು ಪಾಲಾದ ದುರ್ದೈವಿಗಳು. ಇದನ್ನೂ ಓದಿ: ನಿನ್ನ ಬಳಿ ದುಡ್ಡಿಲ್ಲ ಎಂದು ಮಜಾ ಭಾರತದ ಕಲಾವಿದನಿಗೆ ಕೈ ಕೊಟ್ಟ ಪತ್ನಿ

    ಮೈಸೂರಿನಿಂದ ಎಂಟು ಯುವಕರ ತಂಡ ಚಂದಗೋಳಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಕೋಳಿ ಹರಕೆ ಮಾಡಿ ಊಟ ತಯಾರಿಸಿ ಸವಿದಿದ್ದಾರೆ. ಬಳಿಕ ರವಿ ಎಂಬವರು ಪಕ್ಕದಲ್ಲಿದ್ದ ನಾಲೆಯಲ್ಲಿ ಈಜಲು ಮುಂದಾಗಿದ್ದಾರೆ. ಕೆಲಕಾಲ ಈಜಿದ್ದಾರೆ, ಸ್ವಲ್ಪ ಸಮಯದ ನಂತರ ಸುಸ್ತಾಗಿ ನೀರಿನಲ್ಲಿ ಮುಳುಗುತ್ತಿದ್ದ ರವಿಯನ್ನು ಕಾಪಾಡಲು ಯೋಗೇಶ್ ಎಂಬವರು ನೀರಿಗೆ ಇಳಿದಿದ್ದಾರೆ. ಆದರೆ ಯೋಗೇಶ್ ರವಿಯನ್ನು ಕಾಪಡಲು ಸಾಧ್ಯವಾಗದೇ ಮುಳುಗುವ ಸ್ಥಿತಿಗೆ ತಲುಪಿದ್ದಾರೆ. ಈ ಇಬ್ಬರನ್ನು ಕಾಪಾಡಲು ಮಂಜು ಕಾಲುವೆಗೆ ಇಳಿದಿದ್ದಾರೆ. ಮೂವರು ನೀರಿನಲ್ಲಿ ಮುಳುಗುತ್ತಿದನ್ನು ಗಮನಿಸಿ ಮತ್ತೋರ್ವ ಸೀನು ಎಂಬವರು ನೀರಿಗಿಳಿಯಲು ಪ್ರಯತ್ನಿಸಿದಾಗ ಇತರರು ಹಿಡಿದುಕೊಂಡಿದ್ದಾರೆ ಹಾಗಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ.

    ಮೂವರು ನೀರಿನಲ್ಲಿ ಮುಳುಗುತ್ತಿದ್ದವರನ್ನು ಗಮನಿಸಿ ಸ್ಥಳೀಯರು ರಕ್ಷಣೆ ಮಾಡಲು ಮುಂದಾದರು ಕೂಡ ಪಾರು ಮಾಡಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಅಧಿಕಾರಿ ಶಿವಣ್ಣ ಅವರ ನೇತೃತ್ವದ ತಂಡ ಶೋಧಕಾರ್ಯ ನಡೆಸಿದ್ದಾರೆ. ನಿನ್ನೆ ಸಂಜೆ ನೀರಿನ ಹರಿವು ಜೋರಾಗಿದ್ದರಿಂದ ಮೃತ ದೇಹಗಳು ಪತ್ತೆ ಆಗಿರಲಿಲ್ಲ, ಬಳಿಕ ರಾತ್ರಿಯಾದ್ದರಿಂದಾಗಿ ಶೋಧಕಾರ್ಯವನ್ನು ಮೊಟಕುಗೊಳಿಸಲಾಗಿತ್ತು. ಇಂದು ಬೆಳಗ್ಗೆ ಪತ್ತೆಗೆ ನಡೆದ ಶೋಧ ಕಾರ್ಯದ ವೇಳೆ ಮೂವರ ಮೃತ ದೇಹಗಳು ಪತ್ತೆಯಾಗಿದೆ. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ

    ಘಟನೆಯ ಬಳಿಕ ಹೆದರಿ ಮೂವರು ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನಿಬ್ಬರು ಕೆಆರ್‍ ಪೇಟೆ ಗ್ರಾಮಾಂತರ ಪೊಲೀಸರ ವಶದಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ನಿರಂಜನ್, ಉಪ ನಿರೀಕ್ಷಕ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಭಾರೀ ಗಾತ್ರದ ತಿಮಿಂಗಲ ಕಳೇಬರ ಪತ್ತೆ

    ಭಾರೀ ಗಾತ್ರದ ತಿಮಿಂಗಲ ಕಳೇಬರ ಪತ್ತೆ

    ಭುವನೇಶ್ವರ: ಭಾರೀ ಗಾತ್ರದ ತಿಮಿಂಗಲ ಶಾರ್ಕ್ ಕಳೇಬರವು ಒಡಿಶಾದ ಹಳ್ಳಿಯೊಂದರ ನಾಲೆಯಲ್ಲಿ ಪತ್ತೆಯಾಗಿದೆ.

    ಬಾಲಾಸೋರ್ ಜಿಲ್ಲೆಯ ಖಾಂತಪಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಂತಿಛೇರಾ ಗ್ರಾಮ ಸಮೀಪ ಕಳೆಬರ ಕಾಣಿಸಿಕೊಂಡಿದೆ. ಸಮುದ್ರದಿಂದ ಸಂಪರ್ಕ ಕಲ್ಪಿಸುವ ನಾಲೆಯೆಲ್ಲಿ ತಿಮಿಂಗಲ ಹೇಗೆ ಬಂತು ಎನ್ನುವ ಮಾಹಿತಿ ಇಲ್ಲ.

    ತಿಮಿಂಗಲದ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ನಾಲೆಯಲ್ಲಿರುವ ತಿಮಿಂಗಲ ಕಳೇಬರವನ್ನು ಹೊರಗೆ ತೆಗೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಾರೀ ಗಾತ್ರದ ತಿಮಿಂಗಲು ನೋಡಲು ಸ್ಥಳೀಯರು ಸೇರಿದ್ದರು.

    ಮೂರು ದಿನಗಳ ಹಿಂದೆ ಮೀನುಗಾರರು ಒಂದು ತಿಮಿಂಗಲವನ್ನು ಹಿಡಿದು ತಂದಿದ್ದರು. ಆದರೆ ಈ ವಿಚಾರವಾಗಿ ಸ್ಥಳೀಯರು ಭಾರಿ ವಿರೋಧವನ್ನು ವ್ಯಕ್ತಪಡಿಸಿದ ಹಿನ್ನೆಲೆ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

  • ನಾಲೆಯಲ್ಲಿ ಈಜಲು ಹೋಗಿ ಕಣ್ಣೆದುರೇ ಕೊಚ್ಚಿ ಹೋದ ಯುವಕ

    ನಾಲೆಯಲ್ಲಿ ಈಜಲು ಹೋಗಿ ಕಣ್ಣೆದುರೇ ಕೊಚ್ಚಿ ಹೋದ ಯುವಕ

    – ಹಗ್ಗ ಕೊಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ

    ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಸ್ನಾನಕ್ಕೆ ಹೋದ ಯುವಕ ನಾಲೆಯಲ್ಲಿ ಕೊಚ್ಚಿ ಹೋಗಿ ಸ್ನೇಹಿತರ ಕಣ್ಣೆದುರೇ ಸಾವಿಗೀಡಾಗಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಬಳಿ ನಡೆದಿದೆ.

    ಮೃತನನ್ನ ವಿಶ್ವಾಸ್(22) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ವಿಶ್ವಾಸ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿಶ್ವಾಸ್ ನೀರಿನಲ್ಲಿ ಮುಳುಗುವ ವೇಳೆ ಜೊತೆಗಿದ್ದ ಸ್ನೇಹಿತರು ಆತನನ್ನ ಬದುಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

    ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನ ರಕ್ಷಿಸಲು ನಾಲೆ ಮೇಲಿದ್ದ ಯುವಕರು ಆತನಿಗೆ ಹಗ್ಗ ಎಸೆಯಲು ಮುಂದಾಗಿದ್ದಾರೆ. ಆದರೆ ಅದೂ ಸಾಧ್ಯವಾಗಿಲ್ಲ. ಹರಿಯುತ್ತಿದ್ದ ನೀರಿನಲ್ಲಿ ವಿಶ್ವಾಸ್ ಕೊಚ್ಚಿಕೊಂಡು ಮುಂದಕ್ಕೆ ಹೋಗುತ್ತಿದ್ದ ಪರಿಣಾಮ ಆತನಿಗೆ ಸರಿಯಾಗಿ ಹಗ್ಗ ಕೊಡಲು ಸಾಧ್ಯವಾಗಿಲ್ಲ.

    ವಿಶ್ವಾಸ್ ಜೊತೆಗಿದ್ದ ಸ್ನೇಹಿತರಿಗೆ ಕೂಡ ಸರಿಯಾಗಿ ಈಜು ಬಾರದ ಕಾರಣ ಅವರು ನೀರಿಗಿಳಿಯಲು ಭಯಗೊಂಡು, ವಿಶ್ವಾಸ್ ಗೆ ಹಗ್ಗ ಕೊಡಲು ಪ್ರಯತ್ನಿಸಿದ್ದಾರೆ. ನಾಲೆ ಮೇಲಿಂದ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವಿಶ್ವಾಸ್ ಜೊತೆಯೇ ಹಗ್ಗ ಎಸೆಯಲು ಪ್ರಯತ್ನಿಸಿದರು ಸಾಧ್ಯವಾಗದ ಪರಿಣಾಮ ವಿಶ್ವಾಸ್ ಸ್ನೇಹಿತರ ಕಣ್ಣೆದುರೇ ಕೊನೆಯುಸಿರೆಳೆದಿದ್ದಾನೆ.

    ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತರೀಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಯುವಕನ ಮೃತದೇಹವನ್ನ ಮೇಲಕ್ಕೆತ್ತಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತರೀಕೆರೆಯ ಹಳಿಯೂರು ಗೇಟ್, ದೊರನಾಳು ಸೇರಿದಂತೆ ತಾಲೂಕಿನಲ್ಲಿ ಅಲ್ಲಲ್ಲೇ ಈ ರೀತಿಯ ದುರ್ಘಟನೆಗಳು ಆಗಾಗ್ಗೆ ಸಂಭವಿಸುತ್ತಿವೆ.

    ಈಗಾಗಲೇ ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಾಲ್ಕೈದು ಜನ ಸಾವನ್ನಪ್ಪಿದ್ದಾರೆ. ಆದ್ದರಿಂದ ಗ್ರಾಮಗಳ ಅಂಚಿನಲ್ಲಿ ಹಾದುಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗೆ ಗ್ರಾಮದ ಸಮೀಪ ಬೇಲಿ ನಿರ್ಮಿಸುವಂತೆ ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • 1,500ಕ್ಕೂ ಹೆಚ್ಚು ಲೀಟರ್ ಹಾಲನ್ನು ನಾಲೆಗೆ ಚೆಲ್ಲಿದ ಯುವಕರು

    1,500ಕ್ಕೂ ಹೆಚ್ಚು ಲೀಟರ್ ಹಾಲನ್ನು ನಾಲೆಗೆ ಚೆಲ್ಲಿದ ಯುವಕರು

    ಚಿಕ್ಕೋಡಿ/ಬೆಳಗಾವಿ: ಕೊರೊನಾ ವೈರಸ್‍ನಿಂದ ಈಗಾಗಲೇ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಹಾಲಿನ ಮೇಲೆ ಕೊರೊನಾ ಪರಿಣಾಮ ಬೀರಿದೆ. ಹಳ್ಳಿಗಳಲ್ಲಿ ರೈತರಿಂದ ಹಾಲು ಪಡೆದು ಬೇರೆ ಬೇರೆ ಕಡೆ ಸರಬರಾಜು ಮಾಡುತ್ತಿದ್ದ ಗೌಳಿ ಸಮುದಾಯ ಈಗ ಹಾಲನ್ನು ಹರಿಯುವ ನಾಲೆ ಪಾಲು ಮಾಡಿದೆ.

    ಜಿಲ್ಲೆಯ ರಾಯಭಾಗ ತಾಲೂಕಿನ ಪಾಲಭಾಂವಿಯಲ್ಲಿ 1500ಕ್ಕೂ ಹೆಚ್ಚು ಲೀಟರ್ ಹಾಲನ್ನು ಗೌಳಿ ಸಮುದಾಯದ ಯುವಕರು ನೀರು ಪಾಲು ಮಾಡಿದ್ದಾರೆ. ಈ ಹಿಂದೆ ರೈತರಿಂದ ಎಮ್ಮೆ ಹಾಲು ಲೀಟರಿಗೆ 32 ರೂಪಾಯಿಯಂತೆ ಈ ಸಮುದಾಯ ಖರೀದಿ ಮಾಡುತ್ತಿತ್ತು .ಅದೇ ರೀತಿ ಆಕಳ ಹಾಲನ್ನು 22 ರೂಪಾಯಿಯಂತೆ ಪ್ರತಿ ಲೀಟರಿಗೆ ಖರೀದಿ ಮಾಡುತ್ತಿತ್ತು.

    ಈಗ ಅದೇ ಬೆಲೆಗೆ ಗೌಳಿ ಸಮುದಾಯದ ಯುವಕರು ರೈತರಿಂದ ಹಾಲು ಖರೀದಿ ಮಾಡಿದ್ದಾರೆ. ಆದರೆ ಗೌಳಿ ಸಮುದಾಯ ಸರಬರಾಜು ಮಾಡುತ್ತಿದ್ದ ಕಂಪನಿಯ ಏಜೆಂಟರು ಕೇವಲ 10 ರೂಪಾಯಿ ಲೀಟರಿನಂತೆ ಹಾಲು ಕೊಡಿ, ಇಲ್ಲವಾದರೆ ನಿಮ್ಮ ಹಾಲು ನಮಗೆ ಬೇಡ ಎಂದು ಹೇಳಿದ್ದಾರಂತೆ. ಹೀಗಾಗಿ ಗೌಳಿ ಸಮುದಾಯದ ಯುವಕರು ಘಟಪ್ರಭಾ ಎಡದಂಡೆ ಕಾಲುವೆಗೆ ತಾವು ಸಂಗ್ರಹಸಿದ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಎಂಎಫ್ ಕೂಡ ಈ ಯುವಕರು ಸಂಗ್ರಹಿಸಿದ ಹಾಲು ಖರೀದಿಗೆ ಮುಂದಾಗದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾಗಿ ಹಾಲು ಸಂಗ್ರಹಾಗಾರರು ತಿಳಿಸಿದ್ದಾರೆ.

  • ನೀರು ಕುಡಿಯಲು ಹೋಗಿ ನಾಲೆಗೆ ಬಿದ್ದ ಅಣ್ಣ – ರಕ್ಷಿಸಲು ಹೋಗಿ ನೀರುಪಾಲಾದ ತಮ್ಮ

    ನೀರು ಕುಡಿಯಲು ಹೋಗಿ ನಾಲೆಗೆ ಬಿದ್ದ ಅಣ್ಣ – ರಕ್ಷಿಸಲು ಹೋಗಿ ನೀರುಪಾಲಾದ ತಮ್ಮ

    ದಾವಣಗೆರೆ: ನೀರು ಕುಡಿಯಲು ಹೋಗಿ ಕಾಲು ಜಾರಿ ಭದ್ರಾ ನಾಲೆಗೆ ಬಿದ್ದ ಅಣ್ಣನನ್ನ ರಕ್ಷಿಸಲು ಹೋಗಿ ತಮ್ಮ ಸಹ ನೀರು ಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ನಡೆದಿದೆ.

    ಕೃಷ್ಣಮೂರ್ತಿ (21) ಬೀರಲಿಂಗೇಶ್ (19) ಸಾವನ್ನಪ್ಪಿದ ಸಹೋದರರು. ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮದ ನಿವಾಸಿಗಳಾದ ಕೃಷ್ಣಮೂರ್ತಿ ಹಾಗೂ ಬೀರಲಿಂಗೇಶ್ ಹಬ್ಬಕ್ಕಾಗಿ ಸಂಬಂಧಿಕರ ಮೆದಿಕೆರೆ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಮೆದಿಕೆರೆ ಗ್ರಾಮದಲ್ಲಿ ಹರಿಯುವ ನಾಲೆಗೆ ನೀರು ಕುಡಿಯಲು ಹೋದಂತಹ ಸಂದರ್ಭದಲ್ಲಿ ಅಣ್ಣ ಕೃಷ್ಣಮೂರ್ತಿ ಕಾಲು ಜಾರಿ ನಾಲೆಗೆ ಬಿದ್ದಿದ್ದು, ಅಣ್ಣನನ್ನು ರಕ್ಷಿಸಲು ಹೋಗಿ ತಮ್ಮ ಬೀರಲಿಂಗೇಶ್ ಸಹ ನೀರು ಪಾಲಾಗಿದ್ದಾನೆ. ಶವಕ್ಕಾಗಿ ಹುಡುಕಾಟ ನಡೆದಿದ್ದು, ಸ್ಥಳಕ್ಕೆ ಸಂತೆಬೆನ್ನೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.