Tag: ನಾಲಗೆ

  • ಪತ್ನಿಯ ನಾಲಗೆ ಕತ್ತರಿಸಿ 10 ದಿನ ಕೂಡಿಟ್ಟು ಚಿತ್ರಹಿಂಸೆ ಕೊಟ್ಟ!

    ಪತ್ನಿಯ ನಾಲಗೆ ಕತ್ತರಿಸಿ 10 ದಿನ ಕೂಡಿಟ್ಟು ಚಿತ್ರಹಿಂಸೆ ಕೊಟ್ಟ!

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬರ್ರಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ಪತ್ನಿಯ ನಾಲಗೆ ಕತ್ತರಿಸಿ ಆಕೆಯನ್ನು 10 ದಿನಗಳ ಕಾಲ ಮನೆಯಲ್ಲೇ ಕೂಡಿ ಹಾಕಿದ ವಿಲಕ್ಷಣೀಯ ಘಟನೆ ಭಾನುವಾರದಂದು ಬೆಳಕಿಗೆ ಬಂದಿದೆ.

    ಬರ್ರಾ ಪ್ರದೇಶದ ನಿವಾಸಿ ಆಕಾಶ್ ಎಂಬಾತ ಪತ್ನಿಯ ನಾಲಗೆ ಕತ್ತರಿಸಿದ ಪತಿ. ನವೆಂಬರ್ 06 ರಂದು ಆಕಾಶ್ ಹಾಗೂ ಆತನ ಪತ್ನಿ ನಡುವೆ ವರದಕ್ಷಿಣೆ ವಿಚಾರವಾಗಿ ಜಗಳವಾಗಿತ್ತು. ಜಗಳದಿಂದ ಕೋಪಗೊಂಡ ಆಕಾಶ್ ಪತ್ನಿಯ ನಾಲಗೆಯನ್ನು ಕತ್ತರಿಸಿದ್ದಾನೆ. ಬಳಿಕ ಆಕೆಗೆ ಚಿಕಿತ್ಸೆಯನ್ನು ಕೊಡಿಸದೆ ಸುಮಾರು 10 ದಿನಗಳ ಕಾಲ ಮನೆಯಲ್ಲಿಯೇ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾನೆ. ನಂತರ ಪಾಪಿ ಪತಿ ಕೈಯಿಂದ ತಪ್ಪಿಸಿಕೊಂಡು ಪತ್ನಿ ತನ್ನ ತಂದೆಗೆ ನಡೆದ ಘಟನೆಯನ್ನು ತಿಳಿಸಿದ್ದಾಳೆ.

    ಘಟನೆ ತಿಳಿದ ಮೇಲೆ ನನ್ನ ತಂದೆ ಆಕಾಶ್ ಹಾಗೂ ಆತನ ಕುಟುಂಬದವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಆಕಾಶ್ ತಂದೆ ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ. ಅದಕ್ಕಾಗಿ ನಾವು ನೀಡಿದ ದೂರನ್ನು ಸ್ಥಳಿಯ ಪೊಲೀಸರು ಕಡೆಗಣಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಪತಿಯ ವಿರುದ್ಧ ಪತ್ನಿ ಕಾನ್ಪುರ ಹಿರಿಯ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದಾಳೆ.

    ಸದ್ಯ ಆರೋಪಿಯ ಮೇಲೆ ಕಾನ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಅದಷ್ಟು ಬೇಗ ಬಂಧಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಆದೇಶಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಿಸ್ ಮಾಡೋವಾಗ ಪತಿಯ ಅರ್ಧ ನಾಲಗೆ ಕಚ್ಚಿದ ತುಂಬು ಗರ್ಭಿಣಿ!

    ಕಿಸ್ ಮಾಡೋವಾಗ ಪತಿಯ ಅರ್ಧ ನಾಲಗೆ ಕಚ್ಚಿದ ತುಂಬು ಗರ್ಭಿಣಿ!

    ನವದೆಹಲಿ: ಪತ್ನಿಯೊಬ್ಬಳು ತನ್ನ ಪತಿ ನೋಡಲು ಚೆನ್ನಾಗಿಲ್ಲ ಎಂದು ಆತನಿಗೆ ಕಿಸ್ ಮಾಡುತ್ತಲೇ ಅರ್ಧ ನಾಲಗೆ ಕಚ್ಚಿದ ಪ್ರಕರಣವೊಂದು ಶನಿವಾರ ರಾಷ್ಟ್ರ ರಾಜಧಾನಿ ನವದೆಹಲಿ ಹೊರವಲಯದ ರಾಹೋಲದಲ್ಲಿ ನಡೆದಿದೆ.

    ಪತ್ನಿ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ತನ್ನ ಪತಿ ನೋಡಲು ಚೆನ್ನಾಗಿಲ್ಲ ಎಂದು ಆತನ ಜೊತೆ ಯಾವಾಗಲೂ ಜಗಳವಾಡುತ್ತಿದ್ದರು. ಹಾಗಾಗಿ ಆಕೆ ಪತಿಗೆ ಕಿಸ್ ಮಾಡುತ್ತಲೇ ನಾಲಿಗೆ ಕಚ್ಚಿದ್ದಾಳೆ. ಇದರ ಪರಿಣಾಮ ಪತಿ ತನ್ನ ಅರ್ಧ ನಾಲಗೆಯನ್ನು ಕಳೆದುಕೊಂಡಿದ್ದಾರೆ.

    ಪತಿ ಹಾಗೂ ಪತ್ನಿ ನಡುವೆ ಹೊಂದಾಣಿಕೆ ಇರಲಿಲ್ಲ. ಅಲ್ಲದೇ ಇಬ್ಬರೂ ಪದೇ ಪದೇ ಜಗಳವಾಡುತ್ತಿದ್ದರು. ಇಬ್ಬರೂ ಜಗಳವಾಡಿದ ನಂತರ ಮತ್ತೆ ಒಂದಾಗುತ್ತಿದ್ದರು. ಪತ್ನಿ ತನ್ನ ಪತಿಗೆ ಮತ್ತೆ ಕಿಸ್ ಮಾಡಲು ಹೋದಾಗ ಆತನ ಅರ್ಧ ನಾಲಗೆ ಕಚ್ಚಿದ್ದಾಳೆ ಎಂದು ಸ್ಥಳೀಯರು ಹೇಳಿದರು.

    ಪೊಲೀಸರು ಪತಿಯ ತಂದೆಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಪತಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಆತ ಮಾತನಾಡಲು ಆಗುತ್ತಾ? ಇಲ್ವಾ? ಎಂಬುದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಇಬ್ಬರೂ ನವೆಂಬರ್ 20, 2016ರಲ್ಲಿ ಮದುವೆಯಾಗಿದ್ದರು. ಸದ್ಯ ಪೊಲೀಸರು 8 ತಿಂಗಳ ಗರ್ಭಿಣಿ ಪತ್ನಿಯನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತನ್ನ ನಾಲಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತೆ!

    ತನ್ನ ನಾಲಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತೆ!

    ಭೋಪಾಲ್: 45 ವರ್ಷದ ಮಹಿಳೆಯೊಬ್ಬರು ದೇವಸ್ಥಾನದಲ್ಲಿ ದೇವಿಯ ಮುಂದೆಯೇ ನಾಲಗೆ ಕತ್ತರಿಸಿದ ಅರ್ಪಿಸಿದ ಅಚ್ಚರಿಯ ಘಟನೆಯೊಂದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ತರ್ಸಮಾ ಗ್ರಾಮದಲ್ಲಿ ನಡೆದಿದೆ.

    ಬಾಯಿಂದ ರಕ್ತ ಸೋರುತ್ತಿರುವಾಗಲೇ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಮಹಿಳೆಯ ಸಂಬಂಧಿಕರು ತಿಳಿಸಿದ್ದಾರೆ. ಆದ್ರೆ ಮಹಿಳೆ ಯಾವ ಬೇಡಿಕೆಯಿಟ್ಟು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿಲ್ಲ.

    ಮಹಿಳೆ ಪ್ರತಿನಿತ್ಯ ಸ್ಥಳೀಯ ಬಿಜಾಸನ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಎಂದಿನಂತೆ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಏಕಾಏಕಿ ದೇವಿಯ ಮುಂದೆ ತನ್ನ ನಾಲಗೆಯನ್ನು ಕತ್ತರಿಸಿದ್ದಾರೆ. ಕೂಡಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ.

    ಘಟನೆ ನಡೆದ ಕೂಡಲೇ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಕೂಡಲೇ ಮಹಿಳೆಯನ್ನು ಮೊರೇನಾದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಅಂತ ಪೋರ್ಸಾ ಪೊಲೀಸ್ ಠಾಣೆಯ ಉಸ್ತುವಾರಿ ಅತುಲ್ ಸಿಂಗ್ ತಿಳಿಸಿದ್ದಾರೆ. ವಿಶ್ವಾಸ ಮತ್ತು ಅತಿಯಾದ ನಂಬಿಕೆಯೇ ಮಹಿಳೆ ಈ ಕೃತ್ಯ ಎಸಗಲು ಕಾರಣವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಕುರಿತು ಮಹಿಳೆಯ ಪತಿ ರವಿ ತೋಮರ್ ಪ್ರತಿಕ್ರಿಯಿಸಿ, ನಮ್ಮ ಮದುವೆಯಾದಾಗಿನಿಂದ ಪ್ರತಿ ನಿತ್ಯ ಆಕೆ ದಿನದಲ್ಲಿ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ಸಂಜೆ ದೇವಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ನಮಗೆ ಮೂವರು ಗಂಡು ಮಕ್ಕಳಿದ್ದಾರೆ. ನನ್ನ ಪತ್ನಿ ದೇವಿಯನ್ನು ತುಂಬಾ ನಂಬುತ್ತಾಳೆ. ನಿನ್ನೆ ಮಧ್ಯಾಹ್ನದ ನಂತರ ದೇವಸ್ಥಾನಕ್ಕೆ ತೆರಳಿದ್ದ ಆಕೆ ಏಕಾಏಕಿ ತನ್ನ ನಾಲಗೆಯನ್ನು ಕತ್ತರಿಸಿಕೊಂಡು ದೇವಿಗೆ ಅರ್ಪಿಸಿದ್ದಾಳೆ ಅಂತ ಹೇಳಿದ್ದಾರೆ.

    ಈ ಘಟನೆ ನಡೆದಿರುವುದು ಇದೇ ಮೊದಲೇನಲ್ಲ, ಈ ಮೊದಲು ಅಂದ್ರೆ 2016ರಲ್ಲಿ ಛತ್ತೀಸ್ ಗಢದಲ್ಲಿ 11 ವರ್ಷದ ಬಾಲಕಿಯೊಬ್ಬಳು ತನ್ನ ನಾಲಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ್ದಳು.

  • ಅತೀ ಉದ್ದದ ನಾಲಗೆಗಾಗಿ ವಿಶ್ವ ದಾಖಲೆ ಪುಟ ಸೇರಿತು ಈ ನಾಯಿ

    ಅತೀ ಉದ್ದದ ನಾಲಗೆಗಾಗಿ ವಿಶ್ವ ದಾಖಲೆ ಪುಟ ಸೇರಿತು ಈ ನಾಯಿ

     

    ವಾಷಿಂಗ್ಟನ್: ಅತೀ ಉದ್ದವಾದ ನಾಲಗೆಯನ್ನು ಹೊಂದಿರುವ ಅಮೆರಿಕದ ನಾಯಿ ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್‍ನ ಪುಟ ಸೇರಿದೆ.

    ಮೋಚಿ ಎಂಬ ಹೆಸರಿನ ಈ ನಾಯಿಗೆ 7.30 ಇಂಚು(18.58 ಸೆ.ಮೀ) ಉದ್ದದ ನಾಲಗೆಯಿದೆ. ಸೇಂಟ್ ಬರ್ನಾರ್ಡ್ ಜಾತಿಗೆ ಸೇರಿದ 8 ವರ್ಷದ ಈ ನಾಯಿಯನ್ನ ಸೌತ್ ಡಕೋಟಾದ ಸಿಯೋಸ್ ಫಾಲ್ಸ್‍ನಲ್ಲಿ ಕಾರ್ಲಾ ಮತ್ತು ಕ್ರೇಗ್ ರಿಕರ್ಟ್ ದಂಪತಿ ಸಾಕುತ್ತಿದ್ದಾರೆ. 6 ವರ್ಷಗಳ ಹಿಂದೆ ಈ ನಾಯಿಯನ್ನ ದಂಪತಿ ರಕ್ಷಣೆ ಮಾಡಿದ್ದರು.

    ಮೋಚಿಗೆ ಪೀನಟ್ ಬಟರ್ ಎಂದರೆ ತುಂಬಾ ಇಷ್ಟವಂತೆ. ಸದ್ಯ ಅತೀ ಉದ್ದದ ನಾಲಗೆ ಹೊಂದಿರುವ ನಾಯಿ ಎಂಬ ಪಟ್ಟ ಮೋಚಿಗೆ ಸಿಕ್ಕಿದೆ. ಆದ್ರೆ ಈ ಹಿಂದೆ 17 ಇಂಚು ಉದ್ದದ ನಾಲಗೆ ಹೊಂದಿದ್ದ ಬ್ರ್ಯಾಂಡಿ ಎಂಬ ನಾಯಿ ಈ ಬಿರುದು ಪಡೆದಿತ್ತು. ಬ್ರ್ಯಾಂಡಿ 2002ರಲ್ಲಿ ಸಾವನ್ನಪ್ಪಿತ್ತು.

  • ವಾಮಾಚಾರಕ್ಕೆ ಕೋಣ ಬಲಿ: ನಾಲಗೆ ಕತ್ತರಿಸಿ ಕೊಂದೇ ಬಿಟ್ರು!

    ವಾಮಾಚಾರಕ್ಕೆ ಕೋಣ ಬಲಿ: ನಾಲಗೆ ಕತ್ತರಿಸಿ ಕೊಂದೇ ಬಿಟ್ರು!

    ಧಾರವಾಡ: ಮನೆ ಹಿಂದೆ ಕಟ್ಟಿ ಹಾಕಿದ್ದ ಕೋಣದ ನಾಲಗೆ ಕತ್ತರಿಸಿ ಬಲಿ ಪಡೆದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮಹಾಲಯ ಅಮವಾಸ್ಯೆ ಇರುವ ಕಾರಣ ದುಷ್ಕರ್ಮಿಗಳು ವಾಮಾಚಾರಕ್ಕೆ ಬಳಕೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

    ಗ್ರಾಮದ ಶರಣಪ್ಪ ಅಣ್ಣಿಗೇರಿ ಎಂಬವರ ಕೋಣದ ನಾಲಿಗೆಯನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಅಲ್ಲದೇ ಕತ್ತು ಕೊಯ್ದು ಸಾಯಿಸಲು ಕೂಡ ಪ್ರಯತ್ನಿಸಿದ್ದಾರೆ. ನಾಲಿಗೆ ಕಟ್ ಮಾಡಿದ್ದರಿಂದ ಕೋಣ ಸಾವನ್ನಪ್ಪಿದ್ದು, ಈ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.