Tag: ನಾರ್ಥನ್ ವಾರಿಯರ್ಸ್

  • 14 ಎಸೆತಗಳಲ್ಲಿಯೇ ಅರ್ಧ ಶತಕ ಸಿಡಿಸಿದ ಅಫ್ರಿದಿ- ವಿಡಿಯೋ ನೋಡಿ

    14 ಎಸೆತಗಳಲ್ಲಿಯೇ ಅರ್ಧ ಶತಕ ಸಿಡಿಸಿದ ಅಫ್ರಿದಿ- ವಿಡಿಯೋ ನೋಡಿ

    ಶಾರ್ಜಾ: ಕ್ರಿಕೆಟ್ ಮಾದರಿಗೆ ಹೊಸ ರೂಪು ನೀಡುವಂತೆ ನಡೆಯುತ್ತಿರುವ ಟಿ10 ಲೀಗ್ ಬ್ಯಾಟ್ಸ್ ಮನ್‍ಗಳ ಪಾಲಿನ ಸ್ವರ್ಗವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿರುವ ಶಾಹೀದ್ ಅಫ್ರಿದಿ ಕೇವಲ 14 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

    ಯುಎಇನಲ್ಲಿ ನಡೆಯುತ್ತಿರುವ ಟಿ10 ಕ್ರಿಕೆಟ್ ಲೀಗ್‍ನ ನಾರ್ಥನ್ ವಾರಿಯರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ರಿದಿ ಭರ್ಜರಿ ಪ್ರದರ್ಶನ ನೀಡಿದ್ದು, 17 ಎಸೆತಗಳಲ್ಲಿ 59 ರನ್ ಗಳಿಸಿದ್ದಾರೆ. ಪಂದ್ಯದ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಅಫ್ರಿದಿ 7 ಸಿಕ್ಸರ್, 3 ಬೌಂಡರಿ ಸಿಡಿಸಿದರು.

    ಟಿ10 ಟೂರ್ನಿಯಲ್ಲಿ ಅಫ್ರಿದಿ ಪಾಕ್ತೂನ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ನಾರ್ಥನ್ ವಾರಿಯರ್ಸ್ ವಿರುದ್ಧ ಗೆಲುವಿನ ಮೂಲಕ ತಂಡವನ್ನು ಫೈನಲ್ ಪ್ರವೇಶಿಸುವಂತೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾಕ್ತೂನ್ಸ್ ತಂಡ ನೀಡಿದ್ದ 135 ರನ್ ಗಳ ಬೃಹತ್ ಗುರಿಯನ್ನ ಬೆನ್ನತ್ತಿದ ನಾರ್ಥನ್ ವಾರಿಯರ್ಸ್ ತಂಡ ರೋವ್ ಮ್ಯಾನ್ ಪೊವೆಲ್ ಬಿರುಸಿನ ಬ್ಯಾಟಿಂಗ್ ಬಳಿಕವೂ ನಿಗದಿತ 10 ಓವರ್ ಗಳಲ್ಲಿ 122 ರನ್ ಗಳಿಸಿತು. ನಾರ್ಥನ್ಸ್ ಪರ ಪೊವೆಲ್ 35 ಎಸೆತಗಳಲ್ಲಿ 80 ರನ್ ಸಿಡಿಸಿದರು.

    https://www.youtube.com/watch?v=HZuLenK-PCg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv