Tag: ನಾರಿ ಶಕ್ತಿ

  • INDIA ಮೈತ್ರಿಕೂಟ ನಮ್ಮ ನಂಬಿಕೆಗೆ ಧಕ್ಕೆ ತರುತ್ತಿದೆ: ಮೋದಿ

    INDIA ಮೈತ್ರಿಕೂಟ ನಮ್ಮ ನಂಬಿಕೆಗೆ ಧಕ್ಕೆ ತರುತ್ತಿದೆ: ಮೋದಿ

    ತಿರುವನಂತಪುರಂ: ಪ್ರತಿಪಕ್ಷಗಳ INDIA ಒಕ್ಕೂಟವು ನಮ್ಮ ನಂಬಿಕೆಗಳಿಗೆ ಧಕ್ಕೆ ತರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪಿಸಿದರು.

    ಕೇರಳದಲ್ಲಿ (Kerala) ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಡಿಯಾ (INDIA Alliance) ಮೈತ್ರಿ ಕೂಟವು ನಮ್ಮ ನಂಬಿಕೆಯನ್ನು ಘಾಸಿಗೊಳಿಸುತ್ತಲೇ ಇರುತ್ತದೆ. ಅವರು ನಮ್ಮ ದೇವಸ್ಥಾನಗಳು ಮತ್ತು ಹಬ್ಬಗಳನ್ನು ಲೂಟಿಗೆ ದಾರಿಮಾಡಿಕೊಂಡಿದ್ದಾರೆ. ‘ತ್ರಿಶೂರ್ ಪೂರಂ’ನಲ್ಲಿ ನಡೆಯುತ್ತಿರುವ ರಾಜಕೀಯ ದುರದೃಷ್ಟಕರ. ಶಬರಿಮಲೆಯಲ್ಲಿ (Sabarimala) ನಡೆದಿರುವ ದುರಾಡಳಿತದಿಂದ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಇಲ್ಲಿಯ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ ಚೀತಾ ಆಶಾ

    ಇಂದು ದೇಶದಲ್ಲಿ ದೊಡ್ಡ ದೊಡ್ಡ ರಸ್ತೆಗಳು ನಿರ್ಮಾಣವಾಗುತ್ತಿವೆ. ಆಧುನಿಕ ರೂಪದಲ್ಲಿ ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಆದರೆ ಮೋದಿಯವರನ್ನು ವಿರೋಧಿಸುತ್ತೇವೆ ಎಂಬ ಕಾರಣಕ್ಕೆ ಇಂಡಿಯಾ ಮೈತ್ರಿಕೂಟ ಸರ್ಕಾರ ಇಲ್ಲಿ ಯಾವುದೇ ಕೆಲಸ ನಡೆಯಲು ಬಿಡುತ್ತಿಲ್ಲ. ಲೂಟಿಗೆ ಕೇರಳದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಬೇಕು. ಕೇಂದ್ರ ಸರ್ಕಾರದಿಂದ ಬಡವರಿಗೆ ಮತ್ತು ಮೂಲಸೌಕರ್ಯಕ್ಕೆ ಸಿಗುತ್ತಿರುವ ಹಣದ ಬಗ್ಗೆ ಯಾರೂ ಪ್ರಶ್ನಿಸುವುದು ಅವರಿಗೆ ಇಷ್ಟವಿಲ್ಲ. ಈ ಮೂಲಕ ಕೇಂದ್ರದ ಯೋಜನೆಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಸ್ವಾತಂತ್ರ್ಯದ ನಂತರ, ಎಲ್‌ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳು ‘ನಾರಿ ಶಕ್ತಿ’ಯನ್ನು ದುರ್ಬಲವೆಂದು ಪರಿಗಣಿಸಿದವು. ಅಲ್ಲದೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕಾನೂನನ್ನು ಅವರು ತಡೆಹಿಡಿದರು. ಆದರೆ ಮೋದಿ ನಿಮಗೆ ನಿಮ್ಮ ಹಕ್ಕುಗಳನ್ನು ನೀಡುವ ಭರವಸೆ ನೀಡಿದರು ಮತ್ತು ಅದನ್ನು ಈಡೇರಿಸಿದ್ದೇನೆ. ದೇಶದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ ಸರ್ಕಾರ ಇರುವವರೆಗೂ ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಸಹೋದರಿಯರು ನರಳುತ್ತಿದ್ದರು. ಆದರೆ ಅದರಿಂದ ಮುಕ್ತಿ ನೀಡುವ ಭರವಸೆ ನೀಡಿ ಪ್ರಾಮಾಣಿಕವಾಗಿ ಈಡೇರಿಸಿರುವುದಾಗಿ ಅವರು ಹೇಳಿದರು.

  • ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ

    ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ

    ನವದೆಹಲಿ: ಕರ್ತವ್ಯಪಥದಲ್ಲಿ ನಡೆಯಲಿರುವ ಗಣರಾಜೋತ್ಸವದ (Republic Day) ಪರೇಡ್‍ನಲ್ಲಿ ಭಾಗಿಯಾಗಲು ರಾಜ್ಯದ (Karnataka) ಸ್ತಬ್ಧಚಿತ್ರ (Tableau) ಒಂದೇ ವಾರದಲ್ಲಿ ಸಿದ್ಧವಾಗುತ್ತಿದೆ.

    ನಾರಿ ಶಕ್ತಿ ಪರಿಕಲ್ಪನೆಯ ಟ್ಯಾಬ್ಲೊವನ್ನು (Naari Shakti) ಕೇವಲ ಎಂಟು ದಿನಗಳಲ್ಲಿ ನಿರ್ಮಿಸಲಾಗಿದ್ದು, ಇದೀಗ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಪರೇಡ್‍ನಲ್ಲಿ ಕರ್ನಾಟಕದ ಕಲಾ ತಂಡ ಕೂಡ ಭಾಗಿಯಾಗುತ್ತಿದೆ. ಕೊಪ್ಪಳ ಚಿತ್ರದುರ್ಗ, ಬೆಂಗಳೂರಿನ 18 ಮಂದಿ ನಂದಿ ಧ್ವಜ ಕುಣಿತದ ಕಲಾವಿದರು ಈ ಬಾರಿಯ ಪರೇಡ್‍ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಮಧ್ಯೆ, ಟ್ಯಾಬ್ಲೋ ವಿಚಾರದಲ್ಲಿ ಅನಪೇಕ್ಷಿತ ರಾಜಕೀಯ ಕೂಡ ನಡೆದಿದೆ.

    ಕೊನೆ ಹಂತದಲ್ಲಿ ರಾಜ್ಯದ ಟ್ಯಾಬ್ಲೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದನ್ನು ನಾಟಕ. ಚುನಾವಣೆ ಗಿಮಿಕ್ ಎಂದು ಡಿಕೆಶಿವಕುಮಾರ್ ಇತ್ತೀಚಿಗೆ ಟೀಕಿಸಿದರು. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕರ್ನಾಟಕದ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು. ಸಣ್ಣತನ ಬಿಟ್ಟು ಒಂದಾಗಬೇಕು. ಈಗ್ಲಾದ್ರೂ ಕಾಂಗ್ರೆಸ್‍ನವರು ಪಾಠ ಕಲಿಯಲಿ ಎಂದು ಸಿಎಂ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಟೆಂಡರ್‌ ಶ್ಯೂರ್‌ ಕಾಮಗಾರಿಯಲ್ಲಿ ಭಾರೀ ಅಕ್ರಮ – ಸಿದ್ದು ವಿರುದ್ಧ ಸಾಕ್ಷ್ಯಗಳೊಂದಿಗೆ ಲೋಕಾಗೆ ಬಿಜೆಪಿ ದೂರು

    ಸತತ 13 ಬಾರಿ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋ ಇತ್ತು. ಈ ವರ್ಷ ಬೇಡ ಎಂದು ಕೇಂದ್ರ ಹೇಳಿತ್ತು. ಆದರೆ ಸಿಎಂ ಬೊಮ್ಮಾಯಿ, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಪ್ರಯತ್ನದ ಕಾರಣ ಕೊನೆ ಕ್ಷಣದಲ್ಲಿ ರಾಜ್ಯದ ಟ್ಯಾಬ್ಲೋಗೆ ಕೇಂದ್ರ ಅನುಮತಿಸಿತ್ತು. ಅಂದ ಹಾಗೆಯೇ, ದೆಹಲಿಯ ಕರ್ತವ್ಯಪಥದಲ್ಲಿ ಇಂದು ತ್ರಿವಿಧ ದಳಗಳು ಫುಲ್ ಡ್ರೆಸ್ ರಿಹರ್ಸಲ್ ನಡೆಸಿದವು. ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಕೋಲಾರದಲ್ಲಿ ಸ್ಪರ್ಧೆ- ಸಿದ್ದರಾಮಯ್ಯಗೆ ಸಿದ್ಧಗೊಂಡಿರುವ ಮನೆಯ ವಿಶೇಷತೆ ಏನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ

    ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ

    ನವದೆಹಲಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆಯರನ್ನು ಶ್ಲಾಘಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಮಹಿಳೆಯರ ಸ್ಪೂರ್ತಿದಾಯಕ ಹಾಗೂ ಸಾಧನೆಯನ್ನು ಎತ್ತಿ ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ ಕೇರಳದಲ್ಲಿ ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣ

    ಮನ್ ಕಿ ಬಾತ್ ಕಾರ್ಯಕ್ರಮದ ವಿವಿಧ ಸಂಚಿಕೆಗಳಲ್ಲಿ ನಾವು ಮಹಿಳಾ ಸಬಲೀಕರಣದ ವಿವಿಧ ಅಂಶಗಳನ್ನು ತೋರಿಸಿದ್ದೇವೆ. ತಳಮಟ್ಟದಿಂದ ಮಹಿಳೆಯರನ್ನು ಪ್ರೇರೇಪಿಸುವ ಜೀವನ ಪಯಣವನ್ನು ಪ್ರದರ್ಶಿಸಿದ್ದೇವೆ. ಮನ್ ಕಿ ಬಾತ್ ಕಾರ್ಯಕ್ರಮ ನಾರಿ ಶಕ್ತಿಯ ಸಂಭ್ರಮವನ್ನು ಆಚರಿಸಿರುವ ವೀಡಿಯೋ ಇಲ್ಲಿದೆ ಎಂದು ಮೋದಿ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

    ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಇದಕ್ಕಾಗಿ ಮಹಿಳೆಯರಿಗೆ ಘನತೆ ಹಾಗೂ ಅವಕಾಶಗಳನ್ನೂ ನೀಡಿದೆ ಎಂದಿದ್ದಾರೆ. ಇದನ್ನೂ ಓದಿ:ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ಮಹಿಳಾ ದಿನದಂದು ನಮ್ಮ ನಾರಿ ಶಕ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ನಾನು ವಂದಿಸುತ್ತೇನೆ. ಆರ್ಥಿಕ ಸೇರ್ಪಡೆಯಿಂದ ಸಾಮಾಜಿಕ ಭದ್ರತೆ, ಗುಣಮಟ್ಟದ ಆರೋಗ್ಯ ಸೇವೆಯಿಂದ ವಸತಿ, ಶಿಕ್ಷಣದಿಂದ ಉದ್ಯಮಶೀಲತೆಗೆ ನಾರಿ ಶಕ್ತಿ ಭಾರತವನ್ನು ಮುಂಚೂಣಿಯಲ್ಲಿಡಲು ಹಲವು ಪ್ರಯತ್ನಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.