Tag: ನಾರಾಯಣ ಹೃದಯಾಲಯ

  • ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ನಿಧನ

    ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ನಿಧನ

    ಬೆಂಗಳೂರು:  ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ಅನಾರೋಗ್ಯದಿಂದಾಗಿ ಬೆಂಗಳೂರಿನಲ್ಲಿ ಶನಿವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾಳೆ.

    ಜಿಟಿಡಿ ಪುತ್ರ ಜಿ.ಡಿ. ಹರೀಶ್ ಗೌಡ ಮಗಳು ಗೌರಿ(3) ಮೃತ ದುರ್ದೈವಿ. ಈಕೆ ಅನಾರೋಗ್ಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.    ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯರಾತ್ರಿ ನಿಧನ ಹೊಂದಿದ್ದಾಳೆ. ಇದನ್ನೂ ಓದಿ: ಸಿಎಂ ದಾವೋಸ್‌ ಪ್ರವಾಸ ಫಿಕ್ಸ್‌ – ಬೊಮ್ಮಾಯಿ ಜೊತೆ ಇಬ್ಬರು ಸಚಿವರೂ ಪ್ರಯಾಣ

    ಜಿಟಿ ದೇವೇಗೌಡರು ಮೈಸೂರಿನ ಪ್ರಭಾವಿ ಶಾಸಕರಾಗಿದ್ದು ಅಪಾರ ಜನಮನ್ನಣೆ ಗಳಿಸಿದ್ದಾರೆ. ರಾಜಕೀಯ ಹೊರತಾಗಿಯೂ ಜನಪರ ಸೇವೆಯಿಂದ ಗುರುತಿಸಿದ್ದಾರೆ. ಮೊಮ್ಮಗಳ ಸಾವಿನಿಂದ ಅವರ ಕುಟುಂಬ ಈಗ ಶೋಕದಲ್ಲಿದೆ.

    ವೈದ್ಯರ ಎಡವಟ್ಟು – ಆಪರೇಷನ್ ಮಾಡಿದ ಎರಡೇ ಗಂಟೆಗೆ ಬಿಚ್ಚಿಕೊಂಡ ಹೊಲಿಗೆ!

  • ಲಸಿಕೆ ಪಡೆದು ಅಪನಂಬಿಕೆ ಹೋಗಲಾಡಿಸಿದ ಡಾ. ದೇವಿಶೆಟ್ಟಿ

    ಲಸಿಕೆ ಪಡೆದು ಅಪನಂಬಿಕೆ ಹೋಗಲಾಡಿಸಿದ ಡಾ. ದೇವಿಶೆಟ್ಟಿ

    ಆನೇಕಲ್: ಈಗಾಗಲೇ ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. ಇದೇ ತಿಂಗಳು 16ರಿಂದ ಲಸಿಕೆ ಹಾಕುವ ಕೆಲಸದಲ್ಲಿ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಿರತರಾಗಿ ಇದುವರೆಗೆ ಲಕ್ಷಾಂತರ ಜನರಿಗೆ ಲಸಿಕೆ ಹಾಕಿದ್ದಾರೆ.

    ಅದೇ ರೀತಿ ಮೂರನೆ ದಿನವಾದ ಇಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನಾರಾಯಣ ಹೃದಯಾಲಯದಲ್ಲಿ ಮೊದಲ ಲಸಿಕೆಯನ್ನು ಹಾಕಲಾಯಿತು. ನಾರಾಯಣ ಹೃದಯಾಲಯದ ಮುಖ್ಯಸ್ಥ ದೇವಿಶೆಟ್ಟಿ ತಾವೇ ಸ್ವತಃ ಹಾಕಿಸಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಲಸಿಕೆಯ ಮೇಲೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಲು ಮುಂದಾಗಿದ್ದಾರೆ. ಇಂದು ಮುಂಜಾನೆ ಸುಮಾರು 9:00 ಸರಿಯಾಗಿ ನೋಡಲ್ ಆಫೀಸರ್ ಹಾಗೂ ತಾಲೂಕು ವೈದ್ಯಾಧಿಕಾರಿ ಅವರ ಸಮಕ್ಷದಲ್ಲಿ ಕೋವಿಡ್ ಲಸಿಕೆಯನ್ನು ಮೊದಲನೆಯದಾಗಿ ದೇವಿ ಶೆಟ್ಟಿಯವರು ತೆಗೆದುಕೊಂಡಿದ್ದಾರೆ.

    ಈ ಮೂಲಕ ಜನಸಾಮಾನ್ಯರಿಗೆ ಕೊವಿಡ್ ಲಸಿಕೆಯ ಮೇಲೆ ಭರವಸೆ ಮೂಡುವಂತೆ ಮಾಡಿದ್ದಾರೆ. ಜೊತೆಗೆ ಇಂದಿನಿಂದ ನಾರಾಯಣ ಹೃದಯಾಲಯದಲ್ಲಿ ಕೋವಿಡ್ ಲಸಿಕೆ ಹಾಕುತ್ತಿದ್ದು ದೇವಿ ಶೆಟ್ಟಿಯವರಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು. ಜೊತೆಗೆ ಇಂದು ಒಟ್ಟು ಮುನ್ನೂರು ಮಂದಿಗೆ ಲಸಿಕೆ ಹಾಕಲಿದ್ದು ಇಂದಿನಿಂದ ಪ್ರತಿದಿನ ಕೊವಿಡ್ ಲಸಿಕೆ ಲಭ್ಯವಿರುತ್ತದೆ. ಹಾಗಾಗಿ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

    ಇದೇ ಸಮಯದಲ್ಲಿ ಮಾತನಾಡಿದ ದೇವಿಶೆಟ್ಟಿ, ಪ್ರತಿಯೊಬ್ಬ ಭಾರತೀಯ ಲಸಿಕೆ ನಂತರ ವಿಕ್ಟರಿ ಸೈನ್ ತೋರಿಸಬೇಕು. ಭಾರತಕ್ಕೆ ಇದೊಂದು ಸುವರ್ಣಾವಕಾಶ. ಬೇರೆ ದೇಶದಲ್ಲಿ ಕೋವಿಡ್ ಇನ್ನೂ ಅಂತ್ಯ ಕಂಡಿಲ್ಲ ಆದರೆ ನಮ್ಮ ದೇಶದಲ್ಲಿ ಈಗಾಗಲೇ ಲಸಿಕೆಯ ಲಭ್ಯವಿದೆ. ಅತಿ ಹೆಚ್ಚು ವೈದ್ಯಕೀಯ ಸಿಬ್ಬಂದಿ ಇರುವ ದೇಶ ನಮ್ಮದು ಹಾಗಾಗಿ ಈ ಒಂದು ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬಹುದು. ಅತೀ ಬೇಗ ಕೊರೊನಾದಿಂದ ಮುಕ್ತಿ ಹೊಂದಬಹುದು ಎಂಬ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ. ವೈದ್ಯಾಧಿಕಾರಿ ಮಾತನಾಡಿ ಜೊತೆಗೆ ಸ್ಥಳೀಯ ವೈದ್ಯಾಧಿಕಾರಿ ಮಾತನಾಡಿ ಇಂದು ಮೂರನೆ ದಿನ 16ನೇ ತಾರೀಕು ಒಟ್ಟು 238 ಮಂದಿ ಲಸಿಕೆ ಪಡೆದಿದ್ದಾರೆ.

    ಅದೇ ರೀತಿ ಇಂದು 28 ಸೆಶನ್ಸ್ ಗಳಲ್ಲಿ 2,456 ಮಂದಿ ಇಂದು ಲಸಿಕೆ ಪಡೆಯುತ್ತಾರೆ. ಇಂದು ದೇವಿಶೆಟ್ಟಿ ಸಹ ಪಡೆದಿದ್ದು ಇದರಿಂದ ಜನರಲ್ಲಿ ಇನ್ನಷ್ಟು ನಂಬಿಕೆ ಬರುತ್ತದೆ. ಹಾಗೂ ಈ ಕೆಲಸ ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ.

  • ಹೃದಯ ಚಿಕಿತ್ಸೆಗಾಗಿ ಬಂದು ಆಟೋದಲ್ಲೇ 10 ಲಕ್ಷ ರೂ. ಬಿಟ್ಟ ವಿದೇಶಿ ಪ್ರಜೆ

    ಹೃದಯ ಚಿಕಿತ್ಸೆಗಾಗಿ ಬಂದು ಆಟೋದಲ್ಲೇ 10 ಲಕ್ಷ ರೂ. ಬಿಟ್ಟ ವಿದೇಶಿ ಪ್ರಜೆ

    – ಪೊಲೀಸ್ ಠಾಣೆಗೆ ಒಪ್ಪಿಸಿ ಮಾನವೀಯತೆ ಮೆರೆದ ಚಾಲಕ

    ಬೆಂಗಳೂರು: ಹೃದಯ ಚಿಕಿತ್ಸೆಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬಂದ ವಿದೇಶಿ ಪ್ರಜೆಯೊಬ್ಬರು 10 ಲಕ್ಷ ಹಣವನ್ನು ಆಟೊದಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ.

    ಮಾಲ್ಡೀವ್ಸ್ ನಲ್ಲಿ ನೆಲೆಸಿರುವ ಭಾಸ್ಕರ್ ಹೃದಯ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬಂದಿದ್ದಾರೆ. ಗುರುವಾರ ಚೆಕಪ್ ಮುಗಿಸಿಕೊಂಡು ಭಾಸ್ಕರ್ ಶೇಷಾದ್ರಿಪುರಂನ ಲಾಡ್ಜ್ ಗೆ ಆಟೋದಲ್ಲಿ ಬಂದಿಳಿದಿದ್ದಾರೆ.

    ಈ ವೇಳೆ ಭಾಸ್ಕರ್ ಆಟೋದಲ್ಲೇ 1.5 ಲಕ್ಷ ಇಂಡಿಯನ್ ಕರೆನ್ಸಿ ಮತ್ತು 12000 ಯುಎಸ್ ಡಾಲರ್(8.47 ಲಕ್ಷ) ಆಟೋದಲ್ಲಿ ಮರೆತು ಲಾಡ್ಜ್ ಸೇರಿಕೊಂಡಿದ್ದಾರೆ. ಆಟೋ ಚಾಲಕ ರಮೇಶ್ ಬಾಬು ಇದನ್ನು ಗಮನಿಸಿ ಪೂರ್ತಿ ಹಣವನ್ನು ಶೇಷಾದ್ರಿಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಬಗ್ಗೆ ಮಾಲ್ಡೀವ್ಸ್ ಪ್ರಜೆ ಭಾಸ್ಕರ್ ದೂರು ನೀಡಲು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಚಾಲಕ ರಮೇಶ್ ಬಾಬು ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸದ್ಯ ರಮೇಶ್ ಬಾಬು ಅವರ ಪ್ರಾಮಾಣಿಕತೆಯನ್ನು ನಗರ ಪೊಲೀಸ್ ಆಯುಕ್ತರು ಪ್ರಶಂಸಿದ್ದಾರೆ.

  • 4 ವರ್ಷದ ಬಾಲಕನಿಗೆ ಎಸ್‍ಡಿಎಂ ನಾರಾಯಣ ಹೃದಯಾಲಯದಿಂದ ಉಚಿತ ಶಸ್ತ್ರ ಚಿಕಿತ್ಸೆ

    4 ವರ್ಷದ ಬಾಲಕನಿಗೆ ಎಸ್‍ಡಿಎಂ ನಾರಾಯಣ ಹೃದಯಾಲಯದಿಂದ ಉಚಿತ ಶಸ್ತ್ರ ಚಿಕಿತ್ಸೆ

    ಧಾರವಾಡ: ಹೃದಯದ ಬಡಿತದಲ್ಲಿ ವಿಪರೀತ ಏರುಪೇರಾಗಿ ಸಾವು ಬದುಕಿನ ಮಧ್ಯೆ ಬಾಲಕ ಹೋರಾಡುತ್ತಿದ್ದ ಬಾಲಕನಿಗೆ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಾರಾಯಣ ಹೃದಯಾಲಯ ಮೆಚ್ಚುಗೆಗೆ ಪಾತ್ರವಾಗಿದೆ.

    ಸಾಮಾನ್ಯವಾಗಿ 4 ರಿಂದ 5 ವರ್ಷದ ಮಕ್ಕಳ ಹೃದಯ ಬಡಿತ ನಿಮಿಷಕ್ಕೆ 100 ಮೇಲೆ ಇರುತ್ತೆ. ಆದರೆ ದಾಂಡೇಲಿಯ 4 ವರ್ಷದ ಬಾಲಕನ ಹೃದಯ ನಿಮಿಷಕ್ಕೆ 35 ರಿಂದ 40 ಬಾರಿ ಮಾತ್ರ ಬಡಿದುಕೊಳ್ಳುತಿತ್ತು. ಇಂಥ ಬಾಲಕನ ಹೃದಯ ಶಸ್ತ್ರ ಚಿಕಿತ್ಸೆಯನ್ನ ಉಚಿತವಾಗಿ ಮಾಡುವ ಮೂಲಕ ಧಾರವಾಡದ ಎಸ್‍ಡಿಎಂ ನಾರಾಯಣ ಹೃದಯಾಲಯ ಬಾಲಕನಿಗೆ ಮತ್ತೆ ಜೀವದಾನ ಕೊಟ್ಟಿದೆ.

    ಕಳೆದ ಕೆಲ ದಿನಗಳ ಹಿಂದೆ ದಾಂಡೇಲಿಯ ಪ್ರಕಾಶ ಮತ್ತು ಅಶ್ವಿನಿ ದಂಪತಿಯ ನಾಲ್ಕು ವರ್ಷದ ಪುತ್ರ ಅಮೋಘನಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು. ಇದರಿಂದ ಅವನಿಗೆ ಕ್ರಮೇಣ ತೂಕ ಕಡಿಮೆಯಾಗಿ ಊಟ ಮಾಡಲಾಗದೇ ಬಳಲುತಿದ್ದ.

    ನಂತರ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿದ್ದು, ಶಸ್ತ್ರ ಚಿಕಿತ್ಸೆ ಮಾಡಿ, ಫೇಸ್ ಮೇಕರ್ ಕಸಿ ಮಾಡಿದ್ದಾರೆ. ಸದ್ಯ ಮಗು ಎಲ್ಲ ಮಕ್ಕಳಂತೆ ಆಟವಾಡುತ್ತಿದ್ದು, ಮೊದಲಿನಂತೆ ಊಟ ಮಾಡುತ್ತಿದ್ದಾನೆ. ಇದೇ ಶಸ್ತ್ರ ಚಿಕಿತ್ಸೆಯನ್ನು ಬೇರೆ ಆಸ್ಪತ್ರೆಗಳಲ್ಲಿ ಮಾಡಿಸಿದ್ದರೆ ನಮಗೆ 2 ಲಕ್ಷ ರೂ. ಖರ್ಚು ಬರುತಿತ್ತು. ಆದರೆ ಇಲ್ಲಿ ಬಿಪಿಎಲ್ ಕಾರ್ಡ್ ಇರುವುದರಿಂದ ಉಚಿತವಾಗಿ ಆಪರೇಷನ್ ಆಗಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.