Tag: ನಾರಾಯಣ ಭರಮನಿ

  • ಬೆಳಗಾವಿ ಡಿಸಿಪಿಯಾಗಿ ನಾರಾಯಣ ಭರಮನಿ ವರ್ಗಾವಣೆ

    ಬೆಳಗಾವಿ ಡಿಸಿಪಿಯಾಗಿ ನಾರಾಯಣ ಭರಮನಿ ವರ್ಗಾವಣೆ

    ಬೆಂಗಳೂರು: ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದ ಎಎಸ್‌ಪಿ ನಾರಾಯಣ ಭರಮನಿ (Narayan Barmani) ಅವರನ್ನು ಬೆಳಗಾವಿ ಡಿಸಿಪಿಯಾಗಿ (Belagavi DCP) ನೇಮಿಸಿ ಸರ್ಕಾರ ವರ್ಗಾವಣೆ (Transfer) ಮಾಡಿದೆ.

    ಸಾರ್ವಜನಿಕ ವೇದಿಕೆಯಲ್ಲೇ ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿ ಅವರಿಗೆ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಲು ಮುಂದಾಗಿದ್ದರು. ಇದರಿಂದ ಭರಮನಿ ಅವರು ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಸರ್ಕಾರ ಅವರ ಮನವೊಲಿಸಿದೆ. ಇದೀಗ ಧಾರವಾಡ ಹೆಚ್ಚುವರಿ ಎಸ್‌ಪಿ ಹುದ್ದೆಯಿಂದ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಹಳೇ ಕೇಸ್‌ ಕೇಳಿದ ಸುಪ್ರೀಂ – ದರ್ಶನ್‌ಗೆ ಎದುರಾಗುತ್ತಾ ಸಂಕಷ್ಟ?

    ಇನ್ನೂ ಬೆಳಗಾವಿಗೆ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ನಾರಾಯಣ ಭರಮನಿ, ಸರ್ಕಾರ ಡಿಸಿಪಿ ಮಾಡಿ ವರ್ಗಾವಣೆ ಆದೇಶ ಬಂದಿದೆ. ಬೆಳಗಾವಿ ಡಿಸಿಪಿ ಮಾಡಿ ಸರ್ಕಾರ ಆದೇಶ ಮಾಡಿದೆ. ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ನನಗೆ ಅವಕಾಶ ನೀಡಿದೆ, ಅದರ ಕಡೆ ಗಮನ ಕೊಡುತ್ತೇನೆ. ಹಿರಿಯ ಅಧಿಕಾರಿಗಳ, ಎಲ್ಲರ ಸಲಹೆ ಸೂಚನೆ ಮೇರೆಗೆ ನಾನು ಕೆಲಸ ಮಾಡುತ್ತೇನೆ. ಬೆಳಗಾವಿಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಅದು ನನಗೆ ಅನಕೂಲ ಆಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಕ್ಲು ಶಿವ ಮರ್ಡರ್ ಕೇಸ್ – ಕೊಲೆ ಮಾಡಿದ್ದು ನಾವು ಎಂದು ಐವರು ಶರಣಾಗತಿ

  • ಸಿಎಂ ಸಿದ್ದರಾಮಯ್ಯರಿಂದ ಎಎಸ್‌ಪಿಗೆ ಅಪಮಾನ – ಬಿಜೆಪಿಯಿಂದ ರಾಜಕೀಯಕ್ಕೆ ಭರಮನಿ ಎಂಟ್ರಿ?

    ಸಿಎಂ ಸಿದ್ದರಾಮಯ್ಯರಿಂದ ಎಎಸ್‌ಪಿಗೆ ಅಪಮಾನ – ಬಿಜೆಪಿಯಿಂದ ರಾಜಕೀಯಕ್ಕೆ ಭರಮನಿ ಎಂಟ್ರಿ?

    – ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಯಲು ಪ್ಲ್ಯಾನ್?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದ ಅಪಮಾನಕ್ಕೆ ಒಳಗಾದ ಎಎಸ್‌ಪಿ ನಾರಾಯಣ ಭರಮನಿ (Narayan Barmani) ಸ್ವಯಂ ನಿವೃತ್ತಿಗೆ ಮುಂದಾಗಿದ್ದು, ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ವೇದಿಕೆ ಮೇಲೆಯೇ ಸಿಎಂ ಅವರಿಂದ ಅವಮಾನಕ್ಕೊಳಗಾದ ಎಎಸ್‌ಪಿ ಭರಮನಿಯವರ ಸ್ವಯಂ ನಿವೃತ್ತಿಯ ರಾಜೀನಾಮೆ ಪತ್ರ ಹಿಂಪಡೆಯಲು ಇನ್ನೊಂದೇ ದಿನ ಬಾಕಿ ಇದೆ. ಇದೇ ತಿಂಗಳ 6 ರಂದು (ಭಾನುವಾರ) ರಾಜೀನಾಮೆ ಪತ್ರ ಹಿಂಪಡೆಯದಿದ್ದಲ್ಲಿ ರಾಜೀನಾಮೆ ಅಂಗೀಕರಿಸುವಂತೆ ಗೃಹ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಸರ್ಕಾರದಿಂದ ಮತ್ತೊಂದು ಯಡವಟ್ಟು ನಡೆ – ಎಎಸ್‌ಪಿ ಬರಮಣ್ಣಿ ಸ್ವಯಂ ನಿವೃತ್ತಿ ಅಂಗೀಕಾರಕ್ಕೆ ಸೂಚನೆ

    ಆದರೆ, ಈವರೆಗೆ ಎಎಸ್‌ಪಿ ರಾಜೀನಾಮೆ ಹಿಂಪಡೆಯದೆ ಇರೋದು ನಿವೃತ್ತಿ ಬಳಿಕ ರಾಜಕೀಯ ಎಂಟ್ರಿಗೆ ವೇದಿಕೆ ರೆಡಿ ಮಾಡಿಕೊಳ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

    ಭರಮನಿ ಅವರು ನಿವೃತ್ತಿ ಬಳಿಕ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಿಆರ್‌ಎಸ್ ಹಿಂದೆ ಚುನಾವಣೆಗೆ ನಿಲ್ಲುವ ಯೋಜನೆ ಇದೆ. ಬಿಜೆಪಿಯಿಂದ ಎಲೆಕ್ಷನ್‌ಗೆ ನಿಂತುಕೊಳ್ಳಲು ವಿಆರ್‌ಎಸ್ ಅಸ್ತ್ರ ಪ್ರಯೋಗಿಸಿದ್ದಾರಾ? ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ಅಪಮಾನ – ಸ್ವಯಂ ನಿವೃತ್ತಿಗೆ ಮುಂದಾದ ಎಎಸ್‌ಪಿ ಬರಮಣ್ಣಿ

    ಬೆಳಗಾವಿಯಲ್ಲೇ ಹೆಚ್ಚು ಅವಧಿ ಸರ್ವಿಸ್ ಮಾಡಿ ಭರಮನಿ ಅವರು ಹೆಸರು ಮಾಡಿದ್ದಾರೆ. ಜನರ ಜೊತೆ ಒಳ್ಳೆ ಒಡನಾಟ ಇಟ್ಟುಕೊಂಡಿದ್ದಾರೆ. ಹೀಗಾಗಿ, ಬೆಳಗಾವಿ ಗ್ರಾಮೀಣ ಅಥವಾ ಬೆಳಗಾವಿಯ ಯಾವುದಾದರು ಕ್ಷೇತ್ರದಿಂದ ಎಲೆಕ್ಷನ್ ಸ್ಪರ್ಧೆಯ ಪ್ಲಾನ್ ನಡೆದಿದೆ ಎನ್ನಲಾಗುತ್ತಿದೆ.

    ಈಗಲೇ ರಾಜೀನಾಮೆ ಅಂಗೀಕಾರವಾದರೆ, ಇನ್ನೂ ಎರಡೂವರೆ ವರ್ಷ ಸಮಯವಿದೆ. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳುವ ಪ್ಲಾನ್ ನಡೆದಿದೆ. ಹೀಗಾಗಿಯೇ ನಾರಾಯಣ ಭರಮನಿ ವಿಆರ್‌ಎಸ್ ಪತ್ರ ಹಿಂಪಡೆಯಲು ಸುತಾರಾಂ ಒಪ್ತಿಲ್ಲ ಎಂಬಂತೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ವೇದಿಕೆಯಲ್ಲೇ ಎಎಸ್‌ಪಿ ಮೇಲೆ ಕೈಎತ್ತಿದ ಸಿಎಂ – ಬೆಳಗಾವಿ ʻಕೈʼ ಸಮಾವೇಶದ ವೇಳೆ ಹೈಡ್ರಾಮಾ