Tag: ನಾರಾಯಣ್

  • ವಿಷ್ಣುವರ್ಧನ್ ಅವರಿಗೆ ಮಸಿ ಬಳಿಯುವಂತಹ ಕೆಲಸ ಅನಿರುದ್ಧ ಮಾಡಿರಲ್ಲ: ಎಸ್.ನಾರಾಯಣ್

    ವಿಷ್ಣುವರ್ಧನ್ ಅವರಿಗೆ ಮಸಿ ಬಳಿಯುವಂತಹ ಕೆಲಸ ಅನಿರುದ್ಧ ಮಾಡಿರಲ್ಲ: ಎಸ್.ನಾರಾಯಣ್

    ಟ ಅನಿರುದ್ಧ ಹೊಸ ಧಾರಾವಾಹಿಯನ್ನು ಘೋಷಿಸುತ್ತಿದ್ದಂತೆಯೇ ವಿರೋಧ ವ್ಯಕ್ತವಾಗಿದೆ. ಎಸ್.ನಾರಾಯಣ್ ನಿರ್ದೇಶನದ ಸೂರ್ಯವಂಶ ಧಾರಾವಾಹಿಯಲ್ಲಿ ಅನಿರುದ್ಧ ನಾಯಕನಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯನ್ನು ತಡೆಯಬೇಕು ಎಂದು ಕನ್ನಡ ಕಿರುತೆರೆ ನಿರ್ಮಾಪಕರು ಆಗ್ರಹಿಸಿದ್ದಾರೆ. ಅನಿರುದ್ಧ ಮೇಲೆ ಎರಡು ವರ್ಷಗಳ ಕಾಲ ಅಲಿಖಿತ ನಿಷೇಧ ಹೇರಿದ್ದರಿಂದ ಅವರಿಗಾಗಿ ಸೀರಿಯಲ್ ಮಾಡದಂತೆ ನಾರಾಯಣ್ ಅವರಿಗೆ ಮನವಿ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಎಸ್.ನಾರಾಯಣ್, ‘ ಅನಿರುದ್ದ ಅವರ ಬಗ್ಗೆ ಬಹಳಷ್ಟು ಆರೋಪಗಳನ್ನ ಮಾಡಿದ್ದಾರೆ.ಆ ಆರೋಪಗಳು ಸುಳ್ಳಾಗಲಿ ಅಂತ ನಾನು ಆಶಿಸುತ್ತೇನೆ. ಅನಿರುದ್ದ  ಅವರು ವಿಷ್ಣುವರ್ಧನ್ ಅಳಿಯ. ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಲ್ಲ ಅನ್ನುವುದು ನನ್ನ ನಂಬಿಕೆ. ಮಾತು ಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಇದೆ.  ಕಿರುತರೆಯ ನಿರ್ಮಾಪಕರು ನನ್ನ ಬಳಿ ಮಾತನಾಡಿ ಅವರು ಎದುರಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇಂದು ಸಂಜೆ ಸಭೆಯಲ್ಲಿ ಆ ಕುರಿತು ಮಾತನಾಡುತ್ತೇನೆ’ ಎಂದಿದ್ದಾರೆ. ಇದನ್ನೂ ಓದಿ: ‘ಅನ್ ಲಾಕ್ ರಾಘವ’ ಸಿನಿಮಾಗೆ ಕೊನೆ ಹಂತದ ಶೂಟಿಂಗ್

    ಕನ್ನಡ ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ ಅವರಿಗೆ ಎರಡು ವರ್ಷಗಳ ಕಾಲ ನಿಷೇಧ ಹೇರುವ ಕುರಿತು ತೀರ್ಮಾನ ತಗೆದುಕೊಂಡಿತ್ತು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಿರಿಕ್ ಮಾಡಿದರು ಎನ್ನುವ ಕಾರಣಕ್ಕಾಗಿ ಎರಡು ವರ್ಷಗಳ ಕಾಲ ಅನಿರುದ್ಧ ಅವರಿಗೆ ಯಾರೂ ಕೆಲಸ ಕೊಡಬಾರದು ಎಂದು ಹೇಳಲಾಗಿತ್ತು. ಆದರೆ, ಘಟನೆ ನಡೆದ ಕೆಲವೇ ತಿಂಗಳಲ್ಲೇ ಅನಿರುದ್ಧ ಮತ್ತೊಂದು ಧಾರಾವಾಹಿಗೆ ಹೀರೋ ಆಗಿ ಆಯ್ಕೆಯಾಗಿದ್ದಾರೆ.

    ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ನಡೆದ ನಂತರ ನಟ ಅನಿರುದ್ಧ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು. ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧಗಾಗಿ ಯಾರೂ ಧಾರಾವಾಹಿ ಮಾಡಬಾರದು ಎಂದು ಅಲಿಖಿತ ಫಾರ್ಮಾನು ಹೊರಡಿಸಿತ್ತು. ಯಾವುದೇ ವಾಹಿನಿಗಳು ಕೂಡ ಇವರಿಗೆ ಕೆಲಸ ಕೊಡದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಚಿತ್ರಣ ಬೇರೆ ರೀತಿಯಲ್ಲೇ ಬದಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಆಕ್ರೋಶ ಹೊರಹಾಕಿದ ಸಿಪಿಐ ಮುಖಂಡ

    ‘ಬಿಗ್ ಬಾಸ್’ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಆಕ್ರೋಶ ಹೊರಹಾಕಿದ ಸಿಪಿಐ ಮುಖಂಡ

    ಬಿಗ್ ಬಾಸ್ (Bigg Boss) ಕುರಿತಾಗಿ ಅನೇಕರು ಈ ಹಿಂದೆಯೂ ಬೇಸರ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧಿಗಳ ಆಯ್ಕೆಯ ಕುರಿತಾಗಿಯೂ ಟ್ರೋಲ್ ಮಾಡಲಾಗಿದೆ. ಆದರೆ, ಬಿಗ್ ಬಾಸ್ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸುವಂತಹ ಪ್ರಸಂಗಗಳು ನಡೆದಿರಲಿಲ್ಲ. ಇಂಥದ್ದೊಂದು ಘಟನೆಗೆ ತೆಲುಗು (Telugu) ಬಿಗ್ ಬಾಸ್ ಅಂಗಳದಲ್ಲಿ ನಡೆದಿದೆ. ಕಳೆದ ವಾರದಿಂದ ಶುರುವಾಗಿರುವ ತೆಲುಗು ಬಿಗ್ ಬಾಸ್ ಅನ್ನು ಆಂಧ್ರದ (Andhra Pradesh) ಸಿಪಿಐ (CPI) ಮುಖಂಡ ನಾರಾಯಣ್ ಅವರು ವೇಶ್ಯಾಗೃಹಕ್ಕೆ (Brothel House) ಹೋಲಿಸಿದ್ದಾರೆ.

    ತೆಲುಗು ಬಿಗ್ ಬಾಸ್ ಅನ್ನು ನಾಗಾರ್ಜುನ ನಡೆಸಿಕೊಡುತ್ತಿದ್ದಾರೆ. ಅವರಿಗೂ ಹಲವು ಪ್ರಶ್ನೆಗಳನ್ನು ಮಾಡಿರುವ ನಾರಾಯಣ್ (Narayan), ‘ಕುಟುಂಬವಲ್ಲದ, ಅಣ್ಣ ತಮ್ಮ, ಅಕ್ಕ ತಂಗಿ, ಅಣ್ಣ ತಂಗಿ ಹೀಗೆ ಯಾವುದೂ ಅಲ್ಲದ, ಪಡ್ಡೆಗಳನ್ನು ತಂದು ಒಂದೇ ಮನೆಯಲ್ಲಿ ಕೂಡಿ ಹಾಕುತ್ತೀರಿ. ಅವರೇನೂ ಮಹಾ ಸಾಧಕರಲ್ಲ. ಅಂತವರು ಸಂಬಂಧವೇ ಇಲ್ಲದ ಮನೆಯಲ್ಲಿ ಒಂದಾದರೆ ಏನಾಗುತ್ತೆ ಹೇಳಿ? ನನಗೆ ಬಿಗ್ ಬಾಸ್ ಮನೆ ವೇಶ್ಯಾಗೃಹದಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

    ನಾಗಾರ್ಜುನ್ (Nagarjuna) ಅವರಿಗೆ ಪ್ರಶ್ನೆ ಕೇಳುತ್ತಾ, ‘ನಾಗಣ್ಣ ಬಿಗ್ ಬಾಸ್ ಮನೆಯಲ್ಲಿ ಮದುವೆಯಾದವರಿಗೆ ಲೈಸೆನ್ಸ್ ಕೊಟ್ಟಿದ್ದೀರಿ. ಏನೆಲ್ಲ ಮಾಡಬೇಕೋ ಅದಕ್ಕೆಲ್ಲ ವ್ಯವಸ್ಥೆ ಮಾಡಿದ್ದೀರಿ. ಶೋಭನಾ ರೂಮ್ ಕೂಡ ರೆಡಿಯಿದೆ. ಆದರೆ, ಮದುವೆ ಆಗದೇ ಇರೋರ ಕಥೆ ಏನು? ನೂರು ದಿನಗಳ ಕಾಲ ಅವರು ಏನು ಮಾಡಬೇಕು? ಎಂದು ಕೇಳಿದ್ದಾರೆ. ನಾರಾಯಣ್ ಅವರು ಮಾತನಾಡಿದ ವಿಡಿಯೋ ತೆಲುಗು ಕಿರುತೆರೆ ಜಗತ್ತಿನಲ್ಲಿ ಸಖತ್ ವೈರಲ್ ಆಗಿದೆ.

    ಇಂತಹ ಅಸಹ್ಯಗಳನ್ನು ಒಟ್ಟು ಮಾಡಿ ಸಮಾಜದ ಮನಸ್ಥಿತಿಯನ್ನು ಹಾಳು ಮಾಡುತ್ತಿದ್ದೀರಿ. ಕೂಡಲೇ ಇಂತಹ ಶೋ ನಿಲ್ಲಿಸಬೇಕು ಎಂದು ಅವರು ಆಗ್ರಹ ಪಡಿಸಿದ್ದಾರೆ. ನಾರಾಯಣ್ ಅವರ ಈ ಮಾತಿಗೆ ಭಾರೀ ಬೆಂಬಲ ಕೂಡ ವ್ಯಕ್ತವಾಗಿದೆ. ಬಿಗ್ ಬಾಸ್ ಮನೆಯನ್ನು ಸ್ವಚ್ಚ ಮಾಡುವಂತಹ ಕೆಲಸಕ್ಕೆ ನಾರಾಯಣ್ ಕೈ ಹಾಕಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಿಯ ರೀತಿಯಲ್ಲಿ ಅಪಹರಣ – ಸ್ಯಾಂಡಲ್‍ವುಡ್ ಖಳನಟ ಅರೆಸ್ಟ್

    ಸಿನಿಮಿಯ ರೀತಿಯಲ್ಲಿ ಅಪಹರಣ – ಸ್ಯಾಂಡಲ್‍ವುಡ್ ಖಳನಟ ಅರೆಸ್ಟ್

    ಬೆಂಗಳೂರು: ಡೈಮಂಡ್ ಉದ್ಯಮಿಯನ್ನು ಸಿನಿಮಿಯ ರೀತಿಯಲ್ಲಿ ಅಪಹರಣ ಮಾಡಿದ್ದ ನಾರಾಯಣ್ ಹಾಗೂ ಆತನ ಸಹಚರರು ಪೊಲೀಸರು ಬಂಧಿಸಿದ್ದಾರೆ.

    ನಾರಾಯಣ್ ಸಿನಿಮಾದಲ್ಲಿ ಖಳನಟನಾಗಿ ಅಭಿನಯಿಸಿದ್ದ. ವೀರಪರಂಪರೆ ಸೇರಿದಂತೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದಾನೆ.

    ನಾರಾಯಣ್ ಮತ್ತು ಆತನ ಸಹಚರರು ಮಂಡ್ಯ ಮೂಲದ ವಜ್ರ ವ್ಯಾಪಾರಿಯನ್ನು ಬೆಂಗಳೂರಿನ ಯುಬಿ ಸಿಟಿ ಬಳಿ ಅಪಹರಿಸಿ ರಾತ್ರಿಯೆಲ್ಲಾ ಬೆಂಗಳೂರು ಸುತ್ತಾಡಿಸಿದ್ದಾರೆ. ಕಳೆದ ತಿಂಗಳು 21ರಂದು ಈ ಘಟನೆ ನಡೆದಿದ್ದು, ನಾರಾಯಣ್ ಮತ್ತು ಆತನ ಸಹಚರರು ಮರುದಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯನ್ನು ಬಿಟ್ಟು ಹೋಗಿದ್ದರು. ಬಳಿಕ ಉದ್ಯಮಿ ಹೈಗ್ರೌಂಡ್ಸ್ ಠಾಣೆಯಲ್ಲೇ ದೂರು ದಾಖಲಿಸಿದ್ದರು. ಇದನ್ನೂ ಓದಿ: ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಗ್ರೌಂಡ್ಸ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರಿಂದ ಬಂಧಿತ ಮೂವರು ಆರೋಪಿಗಳನ್ನು 7 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್

  • ಈ ಬಾರಿಯ ನವೆಂಬರ್ ಸಂಭ್ರಮಕ್ಕೆ ರಂಗು ತುಂಬಿಸುತ್ತಾಳೆ ರಂಗನಾಯಕಿ!

    ಈ ಬಾರಿಯ ನವೆಂಬರ್ ಸಂಭ್ರಮಕ್ಕೆ ರಂಗು ತುಂಬಿಸುತ್ತಾಳೆ ರಂಗನಾಯಕಿ!

    ಬೆಂಗಳೂರು: ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಅಭೂತಪೂರ್ವ ನಿರೀಕ್ಷೆಗಳೊಂದಿಗೆ ನವೆಂಬರ್ ಒಂದರಂದು ತೆರೆಗಾಣಲು ತಯಾರಾಗಿದೆ. ದಯಾಳ್ ಚಿತ್ರಗಳೆಂದ ಮೇಲೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಅದಕ್ಕೆ ಕಾರಣವಾಗಿರೋದು ಇದುವರೆಗೂ ಅವರು ಸೋಕುತ್ತಾ ಬಂದಿರುವ ಭಿನ್ನ ಕಥಾ ಹಂದರ. ಯಾರಿಗೇ ಆದರೂ ಇದು ಆರ್ಟ್ ಮೂವಿಗೆ ಮಾತ್ರವೇ ಹೊಂದಿಕೊಳ್ಳುವ ಕಥೆ ಎಂಬುದಕ್ಕೂ ಅವರು ಕಮರ್ಶಿಯಲ್ ಟಚ್ ಕೊಟ್ಟು ಬಿಡುತ್ತಾರೆ. ಈ ಮಾತಿಗೆ ಆ ಕರಾಳ ರಾತ್ರಿ, ತ್ರಯಂಬಕಂನಂಥಾ ಒಂದಷ್ಟು ಉದಾಹರಣೆಗಳಿವೆ. ದಯಾಳ್ ಅವರ ಈವರೆಗಿನ ಸಿನಿಮಾ ಯಾನದಲ್ಲಿಯೇ ಇದೀಗ ಬಿಡುಗಡೆಗೆ ರೆಡಿಯಾಗಿರುವ ರಂಗನಾಯಕಿ ಒಂದು ವಿಶಿಷ್ಟ ಚಿತ್ರ. ಈ ಮಾತಿಗೆ ಇತ್ತೀಚೆಗೆ ಲಾಂಚ್ ಆಗಿದ್ದ ಟ್ರೇಲರ್ ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹೀಗೆ ಸಕಾರಾತ್ಮಕ ವಾತಾವರಣದ ನಡುವೆ ಇದೇ ನವೆಂಬರ್ ಒಂದರಂದು ರಂಗನಾಯಕಿ ರಂಗ ಪ್ರವೇಶ ಮಾಡಲಿದ್ದಾಳೆ.

    ಈ ಹಿಂದೆ ಅಟೆಂಪ್ಟ್ ಟು ಮರ್ಡರ್ ಎಂಬ ಚಿತ್ರ ನಿರ್ಮಾಣ ಮಾಡಿದ್ದ ನಾರಾಯಣ್ ರಂಗನಾಯಕಿಯನ್ನು ಬಲು ಶ್ರದ್ಧೆಯಿಂದಲೇ ಬಂಡವಾಳ ಹೂಡಿ ಪೊರೆದಿದ್ದಾರೆ. ತಾವು ನಿರ್ಮಾಣ ಮಾಡುವ ಚಿತ್ರಗಳ ಸಂಖ್ಯೆಗಿಂತಲೂ ಅವೆಲ್ಲವೂ ಅಪರೂಪದವುಗಳಾಗಿರ ಬೇಕೆಂಬುದೇ ನಾರಾಯಣ್ ಅವರ ಇಂಗಿತ. ಅದಕ್ಕೆ ತಕ್ಕುದಾದ ಕಥೆಯಾದ್ದರಿಂದಲೇ ಅವರು ರಂಗನಾಯಕಿಯನ್ನು ಬಲು ಆಸ್ಥೆಯಿಂದಲೇ ನಿರ್ಮಾಣ ಮಾಡಿ ಪೊರೆದಿದ್ದಾರೆ. ಅಷ್ಟಕ್ಕೂ ಈ ಕಥೆ ತುಂಬಾನೇ ವಿಶೇಷವಾದದ್ದು ಮತ್ತು ಸೂಕ್ಷ್ಮವಾದದ್ದೆಂಬ ವಿಚಾರ ಈಗಾಗಲೇ ಪ್ರೇಕ್ಷಕರಿಗೆಲ್ಲ ತಿಳಿದು ಹೋಗಿದೆ.

    ಅತ್ಯಾಚಾರದಂಥಾ ಪೈಶಾಚಿಕ ಘಟನಾವಳಿಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಆದರೆ ಅಂಥಾ ವಿಕೃತಿಗೆ ಬಲಿಯಾದ ಹೆಣ್ಣು ಜೀವಗಳು ಈ ಸಮಾಜವನ್ನು ಎದುರಿಸೋದು ಸಾಮಾನ್ಯವಾದ ಸಂಗತಿಯಲ್ಲ. ಹಾಗೆ ಅತ್ಯಾಚಾರಕ್ಕೀಡಾದ ಹೆಣ್ಣಿನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಹಾಗಂಥಾ ಇದರ ಕಥೆ ಇಂಥಾ ನೊಂದ ಜೀವಗಳತ್ತ ಸಿಂಪಥಿ ಹರಿಸೋವಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಆ ಸಂಕಟವೇನೆಂಬುದನ್ನು ಜನರತ್ತ ದಾಟಿಸುತ್ತಲೇ ಆ ಬಗ್ಗೆ ಸಮಾಜದಲ್ಲೊಂದು ಜಾಗೃತಿ ಮೂಡಿಸೋ ಸನ್ನಿವೇಶಗಳೂ ಇಲ್ಲಿವೆ. ಇಂಥಾ ವಿಶೇಷತೆಗಳು ಇಲ್ಲದೇ ಹೋಗಿದ್ದರೆ ಈ ಚಿತ್ರ ಗೋವಾ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ.

    ಈ ಚಿತ್ರದಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಅದಿತಿ ಬಹಳಷ್ಟು ಇಷ್ಟಪಟ್ಟು ಒಪ್ಪಿಕೊಂಡಿರೋ ಚಿತ್ರವಿದು. ಅವರಿಗಿಲ್ಲಿ ಸಿಕ್ಕಿರೋದು ಸವಾಲಿನ ಪಾತ್ರ. ಅತ್ಯಾಚಾರದಂಥಾ ಬೀಭತ್ಸ ಕೃತ್ಯಕ್ಕೆ ಬಲಿಯಾದ ಹೆಣ್ಣೊಬ್ಬಳ ಮರ್ಮರವನ್ನು ಆವಾಹಿಸಿಕೊಂಡು ಅದಿತಿ ನಟಿಸಿದ್ದಾರಂತೆ. ಅದರ ಝಲಕ್ಕುಗಳು ಈಗಾಗಲೇ ಟ್ರೇಲರ್ ಮೂಲಕವೇ ಜಾಹೀರಾಗಿವೆ. ಒಟ್ಟಾರೆಯಾಗಿ ಈ ಸಿನಿಮಾ ಬಗ್ಗೆ ಆರಂಭದಿಂದಲೂ ಜನ ಆಕರ್ಷಿತರಾಗಿದ್ದರು. ಈಗಂತೂ ರಂಗನಾಯಕಿಯನ್ನು ಕಣ್ತುಂಬಿಕೊಳ್ಳುವ ಕಾತರ ಹೆಚ್ಚಾಗಿದೆ. ನವೆಂಬರ್ ಒಂದರಂದು ರಂಗನಾಯಕಿ ಎಲ್ಲರ ಕಣ್ಮುಂದೆ ಪ್ರತ್ಯಕ್ಷವಾಗಲಿದ್ದಾಳೆ.