Tag: ನಾರಾಯಣಪುರ ಎಡದಂಡೆ ಕಾಲುವೆ

  • ಎಣ್ಣೆ ಏಟಲ್ಲಿ ಕಾಲುವೆ ಕಡೆ ಬಸ್ ಚಲಾಯಿಸಿದ ಚಾಲಕ – ಪ್ರಯಾಣಿರಿಂದ ಕ್ಲಾಸ್

    ಎಣ್ಣೆ ಏಟಲ್ಲಿ ಕಾಲುವೆ ಕಡೆ ಬಸ್ ಚಲಾಯಿಸಿದ ಚಾಲಕ – ಪ್ರಯಾಣಿರಿಂದ ಕ್ಲಾಸ್

    ಯಾದಗಿರಿ: ಕುಡಿದ ಅಮಲಿನಲ್ಲಿ ಸಾರಿಗೆ ಬಸ್ ಚಲಾಯಿಸಿದ ಚಾಲಕನಿಗೆ (Driver) ಪ್ರಯಾಣಿಕರು ತರಾಟೆ ತೆಗೆದುಕೊಂಡ ಘಟನೆ ಯಾದಗಿರಿಯ ಕೆಂಭಾವಿಯಲ್ಲಿ (Kembhavi) ನಡೆದಿದೆ.

    ಜೇವರ್ಗಿ ಡಿಪೋಗೆ ಸೇರಿದ್ದ ಬಸ್ ಯಾದಗಿರಿಯಿಂದ (Yadagiri) ಕಲಬುರಗಿ (Kalaburagi) ಕಡೆಗೆ ಹೊರಟಿತ್ತು. ಬಸ್ ಚಾಲಕ ಕಾಸಿಂ ಅಮಲಿನಲ್ಲಿ ತೇಲಾಡ್ತಾ ಬಸ್ ಚಾಲನೆ ಮಾಡುತ್ತಿದ್ದ. ಚಾಲಕನ ಎಡವಟ್ಟಿಗೆ ಗಾಬರಿಗೊಂಡಿದ್ದ ಪ್ರಯಾಣಿಕರು ಕೆಂಭಾವಿಯ ನಾರಾಯಣಪುರ ಎಡದಂಡೆ ಕಾಲುವೆ ಬಳಿ ಬಸ್ ನಿಲ್ಲಿಸಿ ತರಾಟೆ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಕೇಸ್ – ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ

    ಚಾಲಕನ ಎಡವಟ್ಟಿನಿಂದ ಬಸ್ ಕಾಲುವೆಗೆ ಉರುಳಿ ಬೀಳುವ ಅಪಾಯವಿತ್ತು. ಆದರೆ ಕೂಡಲೇ ಎಚ್ಚೆತ್ತ ಪ್ರಯಾಣಿಕರು ಚಾಲಕನ ಪರಿಸ್ಥಿತಿ ಕಂಡು ಬಸ್ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಸರಿಯಾಗಿ ನಿಲ್ಲಲೂ ಆಗದಷ್ಟು ಮದ್ಯಪಾನ ಮಾಡಿ ಬಸ್ ಚಲಾಯಿಸುತ್ತಿದ್ದ ಚಾಲಕನಿಂದಾಗಿ ನಿರ್ವಾಹಕ ಅಂಬರೀಶ್ ಬಸ್ ಚಾಲನೆ ಮಾಡಿಕೊಂಡು ಪ್ರಯಾಣಿಕರನ್ನು ಕರೆದೊಯ್ದಿದ್ದಾರೆ. ಇದನ್ನೂ ಓದಿ: 50% ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ BMTC