Tag: ನಾಯಿ ಮಾಂಸ

  • ಬೆಂಗ್ಳೂರಿಗೆ ಮಾರಾಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ; ಸರ್ಕಾರದ ಕೈ ಸೇರಿದ ರಿಪೋರ್ಟ್

    ಬೆಂಗ್ಳೂರಿಗೆ ಮಾರಾಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ; ಸರ್ಕಾರದ ಕೈ ಸೇರಿದ ರಿಪೋರ್ಟ್

    – ನಾಯಿ ಮಾಂಸ ದಂಧೆ ಆರೋಪ; ವರದಿಯಲ್ಲಿ ಏನಿದೆ?

    ಬೆಂಗಳೂರು: ನಾಯಿ ಮಾಂಸ (Dog Meat) ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ರಿಪೋರ್ಟ್ ಸರ್ಕಾರದ ಕೈ ಸೇರಿದೆ. ಮಾಂಸ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSL) ಆಯುಕ್ತ ಕೆ ಶ್ರೀನಿವಾಸ್, ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ವರದಿ ಸಲ್ಲಿಸಿದ್ದಾರೆ.

    ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ಮಾರಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಆಹಾರ ಮತ್ತು ಗುಣಮಟ್ಟ ಆಯುಕ್ತಾಲಯ ವರದಿ ನೀಡಿದೆ. ಹೈದ್ರಾಬಾದ್ ಐಸಿಎಆರ್ ರಿಪೋರ್ಟ್ ಗುಣಮಟ್ಟ ಇಲಾಖೆ ಈ ವರದಿ ನೀಡಿದೆ. ಐಸಿಎಆರ್ ರಿಪೋರ್ಟ್‌ಲ್ಲಿ ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ವರದಿಯಾಗಿದೆ. ಸ್ಯಾಂಪಲ್ ಪರಿಶೀಲಿಸಿ ಐಸಿಎಆರ್ ವರದಿ ನೀಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಡಿಕೆಶಿ – ಬೆಂಗಳೂರು, ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ

    ಈ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಮಾತನಾಡಿ, ಕುರಿ ಮಾಂಸ ಎಂದು ವರದಿ ಬಂದಿದೆ. ಪ್ರಾಥಮಿಕ ಹಂತದಲ್ಲಿ 9 ಜನರಿಗೆ ಲೈಸೆನ್ಸ್ ಪಡೆದಿದ್ದರು ಎಂಬ ಹಿನ್ನೆಲೆ ನೋಟಿಸ್ ನೀಡಿ ವಿಚಾರಣೆ ಮಾಡಲಾಯಿತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲೈಸೆನ್ಸ್ ಇದೆ. ಹೀಗಾಗಿ ರಾಜಸ್ಥಾನದಿಂದ ಕುರಿ ತಂದು ಮಾರಾಟ ಮಾಡುತ್ತಿದ್ದರು. ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವನ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ?: ಕುಮಾರಸ್ವಾಮಿ ಕಿಡಿ

    ಇನ್ನು ನಾಯಿ ಮಾಂಸ ಎಂದು ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ. ನಾವು ಪೊಲೀಸರಿಗೆ ವರದಿ ನೀಡುತ್ತೇವೆ. ವದಂತಿ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು. ಇದನ್ನೂ ಓದಿ: Wayanad Landslide |ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ : ಸಿಎಂ ಘೋಷಣೆ

  • ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ – ಪರಮೇಶ್ವರ್

    ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ – ಪರಮೇಶ್ವರ್

    – ಅನಾವಶ್ಯಕ ದುರುದ್ದೇಶದಿಂದ ದೂರು: ಗೃಹಸಚಿವ

    ದಾವಣಗೆರೆ: ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ಬಂದ್ದದ್ದು, ನಾಯಿ ಮಾಂಸ (Dog Meat) ಅಲ್ಲ, ಮೇಕೆಯ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ (G Parmeshwar) ಸ್ಪಷ್ಟಪಡಿಸಿದ್ದಾರೆ.

    ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಲ್ಯಾಬ್‌ನಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ಮೇಕೆ ಮಾಂಸ?

    ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಮಾಂಸ ಮಾರಾಟ ಮಾಡುವುದು ವೃತ್ತಿ. ಅದು ನಾಯಿ ಮಾಂಸ ಅಲ್ಲ ಮೇಕೆ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಡಿಕೆಶಿ ಮನವಿ

    ರಾಜ್ಯದ ಸಂಪತ್ತು ಹಾಳಾಗುತ್ತಿದೆ, ಸಂಪತ್ತು ಲೂಟಿ ಆಗುತ್ತಿದೆ ಅಂತ ಬಿಜೆಪಿಯವರು ಪಾದಯಾತ್ರೆ ಮಾಡುತ್ತಿರುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಅವರ ಪಾದಯಾತ್ರೆ ಅನವಶ್ಯಕವಾಗಿದೆ. ಸಿಎಂ ಮೇಲೆ ಅನಾವಶ್ಯಕ ಆರೋಪ ಮಾಡಿ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಆಗಿಲ್ಲ. ಕಾನೂನು ಉಲ್ಲಂಘನೆ ಆಗಿಲ್ಲದಿದ್ದರೂ ಆಗಿದೆ ಎಂದು ಬಿಂಬಿಸಲು ಬಿಜೆಪಿಯವರು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಿಬಿಐ ತನಿಖೆ ಮಾಡಿದ್ರೆ ಬಿಎಸ್‌ವೈ ಇದ್ದಾನೋ, ಬಿವೈವಿ ಇದ್ದಾನೋ ಎಂದು ಗೊತ್ತಾಗುತ್ತೆ: ಯತ್ನಾಳ್

    ನಾವು ರಾಜ್ಯದ ಜನತೆಗೆ ಸತ್ಯ ತಿಳಿಸುವ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ಮುಖ್ಯಮಂತ್ರಿಗಳು ಒಂದು ಆಯೋಗ ನೇಮಕ ಮಾಡಿದ್ದಾರೆ. ಮುಖ್ಯಮಂತ್ರಿ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಕಾನೂನು ಬಾಹಿರ ಕೆಲಸ ಆಗಿಲ್ಲ. ವಾಲ್ಮೀಕಿ ಹಗರಣವನ್ನು ನಾವು ಜಸ್ಟಿಫೈ ಮಾಡುತ್ತಿಲ್ಲ. ವಾಲ್ಮೀಕಿ ಹಗರಣದ ಬಗ್ಗೆ ಎಸ್‌ಐಟಿ, ಸಿಬಿಐ ತನಿಖೆಯಾಗುತ್ತಿದೆ. ಅದರ ವರದಿ ಬರಲಿ. ಒಂದು ವೇಳೆ ವಾಲ್ಮೀಕಿ ಹಗರಣದಲ್ಲಿ ಮಂತ್ರಿಗಳ ಅಕೌಂಟ್ ಹಣ ಹೋಗಿದೆ ಎಂದು ಸಾಬೀತಾದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: 2010 ರಲ್ಲೇ ಸಿಎಂ ಆಗಬೇಕಿತ್ತು, ಆಗ ಅವಕಾಶ ಕೈ ತಪ್ಪಿತ್ತು: ವಿಜಯ್‌ ಶಂಕರ್‌

  • ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್‌ ರಜಾಕ್‌

    ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್‌ ರಜಾಕ್‌

    ಬೆಂಗಳೂರು: ನಾವು ನಾಯಿಯನ್ನೇ ಮುಟ್ಟಲ್ಲ, ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ. ಸ್ನಾನ ಮಾಡಿಕೊಂಡು ಹೋಗ್ತೀವಿ ಅಂತಹದ್ದರಲ್ಲಿ ನಾಯಿ ಮಾಂಸ (Dog Meat) ತಂದು ತಿನ್ನಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ ಎಂದು ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌ (Abdul Razak) ಆಕ್ರೋಶ ಹೊರಹಾಕಿದ್ದಾರೆ.

    ರಾಜಸ್ಥಾನದ ಜೈಪುರದಿಂದ (Rajasthan Jaipur) ಬೆಂಗಳೂರಿಗೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ತರಲಾಗಿದೆ. ಜೊತೆಗೆ ಬೆಂಗಳೂರಿನ ಹೋಟೆಲ್‌ಗಳಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಂದು ಶಾಕ್‌ – ಬಸ್‌ ಪ್ರಯಾಣ ದರ ಹೆಚ್ಚಿಸಲು KSRTCಯಿಂದ ಪ್ರಸ್ತಾವನೆ ಸಲ್ಲಿಕೆ

    ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತೆ. ಇವತ್ತು 2,000 ಕೆಜಿ ಮಾಂಸ ಬಂದಿದೆ. 10-12 ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದೆ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ, ಅದನ್ನ ನಾಯಿ ಅನ್ನುತ್ತಿದ್ದಾರೆ. ಈ ವ್ಯವಹಾರವನ್ನ ನಂಬಿಕೊಂಡು ಸಾವಿರಾರು ಜನ ಜೀವನ ನಡೆಸುತ್ತಿದ್ದಾರೆ. ಪುನೀತ್‌ ಕೆರೆಹಳ್ಳಿ ರೋಲ್‌ಕಾಲ್‌ ಸಿಗಲಿಲ್ಲ ಅಂತ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಜೆಪಿ ಶಾಸಕರಿಗೆ ಅನುದಾನ ಕೊಟ್ಟಿಲ್ಲ: ಎಸ್.ಆರ್.ವಿಶ್ವನಾಥ್

    ಶಶಿ, ರಿಜ್ವಾನ್‌, ಹಿಲಾಲ್‌ ಅನ್ನುವವರು ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಹಿಂದೆ ಬಿದ್ದಿದ್ದರು. ಮಾಂಸ ಸಾಗಿಸುತ್ತಿರುವ ವಿಚಾರವನ್ನ ಪುನೀತ್‌ ಕೆರೆಹಳ್ಳಿಗೆ ತಿಳಿಸಿ, ರೋಲ್‌ಕಾಲ್‌ ಮಾಡೋದಕ್ಕೆ ಮುಂದಾಗಿದ್ದರು. ಈ ಬಗ್ಗೆ ನಾನು ಕಳೆದ ಜೂನ್‌ 26ರಂದೇ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದೆ, ಎನ್‌ಸಿಆರ್‌ ಕೂಡ ಆಗಿದೆ. ನಮಗೆ ಹಿಂಸೆ ಕೊಡ್ತಿದ್ದಾರೆ ಅಂತಾ ಪೊಲೀಸರಿಗೆ ದೂರಿನ ಮೂಲಕ ತಿಳಿಸಿದ್ದೆ. ನಾವು ರೋಲ್‌ಕಾಲ್‌ಗೆ ಆಸ್ಪದ ನೀಡದೇ ಇದ್ದಿದ್ದರಿಂದ ಕುರಿ ಮಾಂಸವನ್ನು ನಾಯಿ ಮಾಂಸ ಅಂತ ಸುಳ್ಳು ಹಬ್ಬಿಸಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ – ಆಹಾರ ಸುರಕ್ಷತಾ ಅಧಿಕಾರಿಗಳಿಂದ ಸ್ಯಾಂಪಲ್ಸ್‌ ಸಂಗ್ರಹ

    ಬೆಂಗಳೂರಲ್ಲಿ ಸುಮಾರು 2 ಕೋಟಿ ಜನ ವಾಸ ಮಾಡ್ತಿದ್ದಾರೆ. ನಮ್ಮ ಬಳಿಕ 2 ಸ್ಲಾಟ್‌ಗಳಿವೆ. ಸುಮಾರು 3 ಸಾವಿರ ಛತ್ರಗಳಿಗೆ ಪ್ರತಿದಿನ ಮಾಂಸ ಬೇಕು. ನಾವು ಎಷ್ಟು ಪೂರೈಸಿದರೂ ಸಾಕಾಗಲ್ಲ. ಅದಕ್ಕಾಗಿ ರಾಜಸ್ಥಾನದ ಜೈಪುರದಿಂದ ಮಾಂಸ ತರಿಸುತ್ತಿದ್ದೇವೆ. ಅಲ್ಲಿನ ಕುರಿಗಳಿಗೆ ಬಾಲ ಉದ್ದವಾಗಿಯೇ ಇರುತ್ತದೆ. ನಾವು ನಾಯಿಯನ್ನೇ ಮುಟ್ಟಲ್ಲ. ಅಪ್ಪಿ ತಪ್ಪಿ ಸ್ವಲ್ಪ ನಾಯಿ ಟಚ್‌ ಆದ್ರೂ ಮಸೀದಿ ಒಳಕ್ಕೇ ಹೋಗಲ್ಲ. ಸ್ನಾನ ಮಾಡಿ, ಬಟ್ಟೆ ಬದಲಿಸಿ ಆಮೇಲೆ ಮಸೀದಿಗೆ ಹೋಗ್ತೀವಿ. ಅಂತಹದ್ದರಲ್ಲಿ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ ಅಂತ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಈ ವ್ಯವಹಾರವನ್ನು ಸುಮಾರು 20 ಜನ ನಿರ್ವಹಿಸುತ್ತಿದ್ದಾರೆ. ನಾನು ಡಿಸ್ಟ್ರಿಬ್ಯೂಟರ್‌ ಬರುವ ಮಾಂಸವನ್ನ ನಾನು ಆಯಾ ಮಾಲೀಕರಿಗೆ ಡಿಸ್ಟ್ರಿಬ್ಯೂಟ್‌ ಮಾಡ್ತೀನಿ. ರಾಜಸ್ಥಾನದಿಂದ ತರಿಸಿದ್ದ ಮಾಂಸವನ್ನ ಸಂಪೂರ್ಣ ಐಸ್‌ನಲ್ಲಿ ಇಡಲಾಗಿತ್ತು. ಆದ್ರೆ ರೋಲ್‌ಕಾಲ್‌ ಸಿಗಲಿಲ್ಲ ಅಂತ ಇಲ್ಲಿ ಬಂದು ಗಲಾಟೆ ಮಾಡಿದ್ದಾರೆ. ಪುನೀತ್‌ ಕೆರೆಹಳ್ಳಿ ಅಧಿಕಾರಿಯೂ ಅಲ್ಲ. ಈಗ ಅಧಿಕಾರಿಗಳು ಕೇಳಿದ ಪ್ರಶ್ನೆಗೆಲ್ಲಾ ಉತ್ತರ ಕೊಟ್ಟಿದ್ದೇವೆ. ಅಗತ್ಯ ದಾಖಲಾತಿಗಳನ್ನೂ ತೋರಿಸಿದ್ದೇವೆ. ಲ್ಯಾಬ್‌ ವರದಿ ಬಂದ ಬಳಿಕ ಪುನೀತ್‌ ಕೆರೆಹಳ್ಳಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.

  • ನಾಯಿ ಮಾಂಸ ಮಾರಾಟ ನಿಷೇಧ – ಮಸೂದೆ ಅಂಗೀಕರಿಸಿದ ದಕ್ಷಿಣ ಕೊರಿಯಾ

    ನಾಯಿ ಮಾಂಸ ಮಾರಾಟ ನಿಷೇಧ – ಮಸೂದೆ ಅಂಗೀಕರಿಸಿದ ದಕ್ಷಿಣ ಕೊರಿಯಾ

    ಸಿಯೋಲ್: ನಾಯಿ ಮಾಂಸ (Dog Meat) ಸೇವನೆ ತೆಗೆದುಹಾಕುವ ಮಸೂದೆಯನ್ನು ದಕ್ಷಿಣ ಕೊರಿಯಾ (South Korea) ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

    ದಕ್ಷಿಣ ಕೊರಿಯಾದ ಸಂಸತ್ತು ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಈ ಮಸೂದೆಯನ್ನು ಕಾನೂನಾಗಿ ಜಾರಿಗೆ ತರಲು ಪ್ರತಿಜ್ಞೆ ಮಾಡಿದ್ದರು. ಸರ್ವಾನುಮತದ ಮತದ ಮೂಲಕ ನಾಯಿ ಮಾಂಸ ನಿಷೇಧಿಸುವ ಮಸೂದೆ ಅಂಗೀಕಾರಗೊಂಡಿದೆ. ಇದನ್ನೂ ಓದಿ: ಭಾರತಕ್ಕೆ ಬರಲು ಮುಂದಾದ ಮಾಲ್ಡೀವ್ಸ್‌ ಅಧ್ಯಕ್ಷ – ವಿಪಕ್ಷದಿಂದ ಅವಿಶ್ವಾಸ ನಿರ್ಣಯ ಸಾಧ್ಯತೆ

    ಆಹಾರದ ಉದ್ದೇಶಕ್ಕಾಗಿ ನಾಯಿಯನ್ನು ಕಡಿಯುವುದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 19.12 ಲಕ್ಷ ರೂ. (30 ಮಿಲಿಯನ್ ವಾನ್) ವರೆಗೆ ದಂಡ ವಿಧಿಸುತ್ತದೆ. ನಾಯಿ ಸಂತಾನಾಭಿವೃದ್ಧಿ ಮಾಡುವುದು ಅಥವಾ ಆಹಾರಕ್ಕಾಗಿ ವಿತರಿಸುವುದು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ.

    ಮೂರು ವರ್ಷಗಳ ಗ್ರೇಸ್ ಅವಧಿಯ ನಂತರ 2027 ರಲ್ಲಿ ಕಾನೂನು ಜಾರಿಯಾಗಲಿದೆ. ನಾಯಿ ಮಾಂಸ ಉದ್ಯಮದಲ್ಲಿರುವವರಿಗೆ ವ್ಯಾಪಾರ ಬದಲಾಯಿಸಲು ಸಹಾಯ ಮಾಡಲು ಸಬ್ಸಿಡಿ ನೀಡಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಯೂನ್ ತನ್ನ ಅಧ್ಯಕ್ಷೀಯ ಪ್ರಚಾರದಲ್ಲಿ ನಾಯಿ ಮಾಂಸದ ಸೇವನೆಯನ್ನು ಕೊನೆಗೊಳಿಸಲು ವಾಗ್ದಾನ ಮಾಡಿದ್ದರು. ಇದನ್ನೂ ಓದಿ: ಲೆಬನಾನ್‌ ಗುರಿಯಾಗಿಸಿ ಇಸ್ರೇಲ್‌ನ ಭಾರೀ ದಾಳಿಯಲ್ಲಿ ಹಿಜ್ಬುಲ್ಲಾ ಸೀನಿಯರ್‌ ಕಮಾಂಡರ್‌ ಬಲಿ

    ನಾಯಿ ಮಾಂಸ ಸೇವಿಸುವ ಹಲವು ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಪ್ರಾಣಿಗಳನ್ನು ಬ್ಲಡ್ಜಿಯನಿಂಗ್, ನೇಣು ಮತ್ತು ವಿದ್ಯುದಾಘಾತದ ಮೂಲಕ ಕೊಲ್ಲುವುದು ಸೇರಿದಂತೆ ವ್ಯಾಪಾರದ ಭಾಗವಾಗಿ ಮಾಡಿಕೊಂಡಿದ್ದಕ್ಕೆ ಅಂತರರಾಷ್ಟ್ರೀಯ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.

    ಸಾಕುಪ್ರಾಣಿಗಳ ಮಾಲೀಕತ್ವ ಬೆಳೆದಿದೆ. ಸಾರ್ವಜನಿಕರು ನಾಯಿ ಮಾಂಸದಿಂದ ದೂರ ಸರಿದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸೇವನೆಯು ತೀವ್ರವಾಗಿ ಕುಸಿಯುತ್ತಿದೆ. ಶ್ವಾನಗಳನ್ನು ಸಾಕುತ್ತಿದ್ದ ರೈತರು ಮತ್ತು ರೆಸ್ಟೋರೆಂಟ್‌ ಮಾಲೀಕರು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಹಿನ್ನಡೆಯಾಗಿದೆ. ಇದನ್ನೂ ಓದಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ – ದಾಖಲೆ ಜಯದೊಂದಿಗೆ ಸತತ 5ನೇ ಬಾರಿಗೆ ಮರು ಆಯ್ಕೆ

    ದಕ್ಷಿಣ ಕೊರಿಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ 1,600 ರೆಸ್ಟೋರೆಂಟ್‌ಗಳಲ್ಲಿ ನಾಯಿ ಮಾಂಸವನ್ನು ಖಾದ್ಯವಾಗಿ ನೀಡಲಾಗುತ್ತಿದೆ. ಕೆಲವು 1,150 ನಾಯಿ ಸಾಕಣೆ ಕೇಂದ್ರಗಳು ದೇಶದಲ್ಲಿ ಉದ್ಯಮ ನಡೆಸುತ್ತಿವೆ.

  • ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

    ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

    ವಿಜಯವಾಡ: ನಿಮಗೆ ಮಟನ್ ಅಂದ್ರೆ ತುಂಬಾ ಇಷ್ಟಾನಾ..? ವೀಕೆಂಡಲ್ಲಿ ಯಾಕೆ ಮಟನ್ ಹೆಸರೇಳಿ ಬಾಯಲ್ಲಿ ನೀರೂರಿಸ್ತಿದೀರಿ ಅಂದ್ಕೋತಿದೀರಾ.. ಕಾರಣವಿದೆ, ಇನ್ಮುಂದೆ ಹೋಟೆಲ್ ಗೆ ಹೋಗಿ ನಾನ್ ವೆಜ್ ತಿನ್ನಬೇಕಾದರೆ ಸ್ವಲ್ಪ ಜಾಗರೂಕರಾಗಿರಿ. ಯಾಕೆಂದರೆ ನಿಮಗೆ ಮಟನ್ ಅಂತಾ ನಾಯಿ ಮಾಂಸವನ್ನು ಕೊಟ್ಟರೂ ಕೊಡಬಹುದು. ಅದರಲ್ಲೂ ಆಂಧ್ರದ ಮೈಲಾವರಂಗೆ ಹೋದರೆ ಮಾತ್ರ ಯಾವ ಕಾರಣಕ್ಕೂ ನಾನ್ ವೆಜ್ ತಿನ್ನಲೇಬೇಡಿ.

    ಬೀದಿ ನಾಯಿಗಳನ್ನು ಹಿಡಿದು ಹಣಕ್ಕಾಗಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೃಷ್ಣಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಜಿ.ಕೊಂಡೂರಿನ ಕೋಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಏನಿದು ಘಟನೆ?: ಕೋಡೂರು ಗ್ರಾಮದ ಕಟ್ಟಾ ಆದಿನಾರಾಯಣ ಹಾಘೂ ದೇಗು ಲಕ್ಷ್ಮಣ ರಾವ್ ಎಂಬಿಬ್ಬರು ಕೆಲ ತಿಂಗಳಿಂದ ಬೀದಿ ನಾಯಿಗಳನ್ನು ಹಿಡಿಯೋದನ್ನೇ ಕಾಯಕ ಮಾಡಿದ್ದರು. ಆದರೆ ಕಳೆದ ಶುಕ್ರವಾರ ಇವರ ನಸೀಬು ಕೆಟ್ಟಿತ್ತು. ಅಂದು ಇವರು ನಾಯಿ ಹಿಡಿದು ಮಾಂಸವನ್ನು ಮಾರಾಟ ಮಾಡಿ ನಾಯಿಯ ಚರ್ಮವನ್ನು ಎಸೆಯಲು ಹೋಗುತ್ತಿದ್ದಾಗ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಇವರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ವೇಳೆ ಇಬ್ಬರು ಖತರ್ನಾಕ್ ಗಳು ತಾವು ಇದುವರೆಗೆ 20ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಅದರ ಮಾಂಸ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

    ನಾಯಿ ಮಾಂಸವನ್ನೇ ಇವರು ಜಿಂಕೆ ಹಾಗೂ ಕುರಿ ಮಾಂಸ ಎಂದು ನಂಬಿಸಿ ಕೆಲವು ವ್ಯಕ್ತಿಗಳಿಗೆ ಹಾಗೂ ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿದ್ದರು. ನಾಯಿ ಮಾಂಸದ ರುಚಿ ಹಿಡಿದ ಕೆಲವರು ಜಿಂಕೆ ಮಾಂಸವೆಂದು ಇವರ ಬಳಿ ಪದೇ ಪದೇ ಮಾಂಸಕ್ಕಾಗಿ ಬೇಡಿಕೆ ಇಡುತ್ತಿದ್ದರು. ಪ್ರತಿ ಕೆಜಿ ನಾಯಿ ಮಾಂಸಕ್ಕೆ ಇವರು 300 ರಿಂದ 400 ರೂ. ಪಡೆಯುತ್ತಿದ್ದರು. ಈ ಮೂಲಕ ಪ್ರತಿ ನಾಯಿಯನ್ನು ಕೊಂದು ಸರಾಸರಿ 3000 ರೂ. ಆದಾಯ ಗಳಿಸುತ್ತಿದ್ದರು. ಪ್ರಾಣಿ ಕಾಯ್ದೆ ಪ್ರಕಾರ ಇವರ ವಿರುದ್ಧ ದೂರು ದಾಖಲಿಸಿ ಪೊಲಿಸರು ತನಿಖೆ ಮುಂದುವರಿಸಿದ್ದಾರೆ. ಜೊತೆಗೆ ಇವರಿಂದ ಮಾಂಸ ಖರೀದಿ ಮಾಡುತ್ತಿದ್ದವರ ವಿವರವನ್ನೂ ಪಡೆದುಕೊಂಡಿದ್ದು ಅವರ ವಿಚಾರಣೆಯೂ ನಡೆಯಲಿದೆ ಎನ್ನಲಾಗಿದೆ. ಇವರಿಬ್ಬರೂ ಮೈಲಾವರಂ ಮತ್ತು ಅಕ್ಕಪಕ್ಕದ ಹಳ್ಳಿಗಳಿಗೆ ಮಾಂಸ ಪೂರೈಸುತ್ತಿದ್ದರು.

    ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಕೊಂಡೂರು ಎಸ್‍ಐ ಜಿ.ರಾಜೇಶ್ ನಾಯಿಗಳನ್ನು ಕೊಂದಿದ್ದಕ್ಕೆ ಹಾಗೂ ಪ್ರಾಣಿ ಹಿಂಸೆಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಸದ್ಯ ಪಶುವೈದ್ಯರು ಮಾಂಸದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಕ್ರಮಕೈಗೊಳ್ಳೋದಾಗಿ ಹೇಳಿದ್ದಾರೆ.

    https://www.youtube.com/watch?v=i-BbqCr-Org