Tag: ನಾಯಿ ಮರಿ

  • ನಾಯಿ ಮರಿಗಳನ್ನು ಕೊಂದು ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ದ – ವ್ಯಕ್ತಿ ಅರೆಸ್ಟ್

    ನಾಯಿ ಮರಿಗಳನ್ನು ಕೊಂದು ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ದ – ವ್ಯಕ್ತಿ ಅರೆಸ್ಟ್

    ಹೈದರಾಬಾದ್: 2 ನಾಯಿಮರಿಗಳನ್ನು (Puppies) ಕೊಂದು, ಕೃತ್ಯದ ವೀಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ (Hyderabad) ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಮೂಕ ಪ್ರಾಣಿಗಳ ಮೇಲೆ ಕ್ರೂರ ಕೃತ್ಯ ಎಸಗಿದ ವ್ಯಕ್ತಿ ಮೊದಲ ನಾಯಿಮರಿಯನ್ನು ಮರಕ್ಕೆ ನೇತುಹಾಕಿ, ಎರಡನೆಯದನ್ನು ಕಟ್ಟಡದ 4ನೇ ಮಹಡಿಯಿಂದ ಎಸೆದು ಕೊಂದಿದ್ದಾನೆ. ಬಳಿಕ ಅದು ಜೀವಂತವಾಗಿದೆಯೇ ಎಂಬುದನ್ನು ನೋಡಲು ಕಾಲಿನಿಂದ ಒದ್ದಿದ್ದಾನೆ. ಕೃತ್ಯದ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ಕಟ್ಟೇಡನ್ ಪ್ರದೇಶದ ನಿವಾಸಿ ರೇ ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ: ಚಿರತೆ ಕಣ್ಣಾಮುಚ್ಚಾಲೆ, 15 ದಿನಗಳಿಂದ ಬೃಂದಾವನ ಕ್ಲೋಸ್ – ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

     

    ನವೆಂಬರ್ 15ರಂದು ವೀಡಿಯೋವನ್ನು ಆರೋಪಿ ಅಪ್ಲೋಡ್ ಮಾಡಿದ್ದಾನೆ. ಕೃತ್ಯ ಬೆಳಕಿಗೆ ಬಂದಂತೆ ಮೈಲಾರ್‌ದೇವಪಲ್ಲಿ ಪೊಲೀಸರು ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

    ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 429 (ಪ್ರಾಣಿಗಳನ್ನು ಕೊಲ್ಲುವ ಮೂಲಕ ದುಷ್ಕೃತ್ಯಕ್ಕೆ ಶಿಕ್ಷೆ) ಮತ್ತು ಸೆಕ್ಷನ್ 11 (ಎಲ್) ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (ಪಿಸಿಎಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ಟೀಕೆ ಮಾಡುತ್ತಿದ್ರೆ ಚಪ್ಪಲಿಯಲ್ಲಿ ಹೊಡಿತೀನಿ – ಬಿಜೆಪಿ ಸಂಸದರಿಗೆ ಕವಿತಾ ವಾರ್ನ್

    Live Tv
    [brid partner=56869869 player=32851 video=960834 autoplay=true]

  • ಮನೆಯ ಹೊರಗಡೆ ಮಲವಿಸರ್ಜನೆ ಮಾಡಿತೆಂದು ನಾಯಿಮರಿಯನ್ನು ಥಳಿಸಿದ ಭೂಪ

    ಮನೆಯ ಹೊರಗಡೆ ಮಲವಿಸರ್ಜನೆ ಮಾಡಿತೆಂದು ನಾಯಿಮರಿಯನ್ನು ಥಳಿಸಿದ ಭೂಪ

    – ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ

    ಬೆಂಗಳೂರು: ಇತ್ತೀಚೆಗಷ್ಟೇ ಕೇರಳದಲ್ಲಿ ಆನೆಗೆ ಅನಾನಸಿನಲ್ಲಿ ಸ್ಫೋಟಕ ಇಟ್ಟು ಕೊಂದ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಇದೀಗ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ನಾಯಿ ಮರಿಗೆ ಹಿಗ್ಗಾಮುಗ್ಗ ಥಳಿಸಿ ಕ್ರೌರ್ಯತೆ ಪ್ರದರ್ಶಿಸಿದ ಘಟನೆ ಬೆಳಕಿಗೆ ಬಂದಿದೆ.

    ಈ ಘಟನೆ ಕುಮಾರಸ್ವಾಮಿ ಲೇಔಟಿನಲ್ಲಿ ನಡೆದಿದ್ದು, ಆರೋಪಿಯನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ. ಆರೋಪಿ 50 ಲಕ್ಷ ದಂಡ ಕಟ್ಟಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾನೆ.

    ಸೋಮಶೇಖರ್ ಹೊರ ಬರುತ್ತಿದ್ದಂತೆಯೇ ಮೂರು ನಾಯಿಮರಿಗಳು ಆತನ ಮನೆಯ ಹೊರಗಡೆ ಮಲವಿಸರ್ಜನೆ ಮಾಡಿದ್ದವು. ಇದನ್ನು ಗಮನಿಸಿದ ಸೋಮಶೇಖರ್ ಮರದ ಕೋಲಿನಿಂದ ನಾಯಿ ಮರಿಗಳಿಗೆ ಹಿಗ್ಗಾಮುಗ್ಗ ಥಳಿಸುವ ಮೂಲಕ ಅಲ್ಲಿಂದ ಓಡಿಸಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಎರಡು ಮರಿಗಳು ಹೇಗೂ ತಪ್ಪಿಸಿಕೊಂಡು ಓಡಿ ಹೋದವು. ಆದರೆ ಒಂದು ಮಾತ್ರ ಥಳಿತಕ್ಕೊಳಗಾಗಿ ಕಾಲುನೋವಿನಿಂದ ಅಲ್ಲೇ ಅರಚುತ್ತಾ ಕುಳಿತಿತ್ತು.

    ಸೋಮಶೇಖರ್ ನೀಚ ಕೃತ್ಯವನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಬಂದು 5 ತಿಂಗಳ ನಾಯಿ ಮರಿಯನ್ನು ರಕ್ಷಿಸಿದ್ದಾರೆ. ಅಲ್ಲದೆ ನಾಯಿ ಮರಿಯನ್ನು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಬಳಿಕ ನಾವು ನಾಯಿ ಮರಿಯೊಂದನ್ನು ರಕ್ಷಣೆ ಮಾಡಿದ್ದೇವೆ ಅಂತ ಪ್ರಾಣಿ ದಯಾ ಸಂಘದವರಿಗೆ ವಿಚಾರ ಮುಟ್ಟಿಸಿದ್ದಾರೆ ನಾಯಿ ಮರಿಯ ಸ್ಥಿತಿ ಚಿಂತಾಜನಕವಾಗಿದ್ದು, ಅದರ ಮೂಗು ಊದಿಕೊಂಡಿದೆ ಎಂದು ಸಂಘದ ಕಾರ್ಯಕರ್ತ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಆಕಸ್ಮಿಕವಾಗಿ ಗರ್ಭಿಣಿ ಆನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿರಬಹುದು- ಪರಿಸರ ಸಚಿವಾಲಯ

    ಸದ್ಯ ನಾಯಿ ಮರಪಿಗೆ ಜೀವಾ ಪೆಟ್ ಕ್ಲಿನಕ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಕಾಲು ಮತ್ತು ಹಿಂಬದಿಗೆ ಗಂಭೀರ ಗಾಯಗಳಾಗಿದೆ. ಆರೋಪಿ ವಿರುದ್ಧ ಅನಿಮಲ್ ಆ್ಯಕ್ಟ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, 50 ಲಕ್ಷ ದಂಡ ವಿಧಿಸಿ ಜಾಮೀನು ನೀಡಲಾಗಿದೆ. ಇದನ್ನೂ ಓದಿ: ನದಿಗೆ ಹಾರಿದ ಯಜಮಾನನಿಗಾಗಿ 4 ದಿನಗಳಿಂದ ಸೇತುವೆ ಮೇಲೆ ಕಾಯುತ್ತಿದೆ ಶ್ವಾನ

  • ನಾಯಿ ಮರಿ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ

    ನಾಯಿ ಮರಿ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ

    ಬೆಳಗಾವಿ(ಚಿಕ್ಕೋಡಿ): ನಾಯಿಮರಿ ಜೀವ ಉಳಿಸಲು ಹೋಗಿ ಬೈಕ್ ಸವಾರನೋರ್ವ ಪ್ರಾಣ ಕಳೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಹೊರವಲಯದಲ್ಲಿ ನಡೆದಿದೆ.

    ಸೌರಭ್ ಕಾಶಾಳಕರ(24) ಮೃತ ದುರ್ದೈವಿ. ನಿಪ್ಪಾಣಿ ನಗರ ಹೊರ ವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ನಡೆದಿದೆ. ಬೈಕ್ ಸವಾರ ಸೌರಭ್ ಮಹಾರಾಷ್ಟ್ರದ ಆಜರಾದಿಂದ ಕೊಲ್ಹಾಪುರಕ್ಕೆ ಬೈಕ್‍ನಲ್ಲಿ ಪ್ರಯಾಣಿಸುವಾಗ ರಸ್ತೆ ಮಧ್ಯದಲ್ಲಿ ನಾಯಿ ಮರಿ ಬಂದಿದೆ. ಅದನ್ನು ರಕ್ಷಿಸಲು ಹೋಗಿ ಯುವಕ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

    ನಾಯಿ ಮರಿಯನ್ನ ರಕ್ಷಣೆ ಮಾಡಲು ಹೋದಾಗ ಬೈಕ ಸ್ಕಿಡ್ ಆಗಿ ಡಿವೈಡರ್‍ಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಿದ್ದಂತೆಯೇ ಹಿಂಬದಿಯಿಂದ ಬಂದ ಲಾರಿ ಆತನ ಮೈಮೇಲೆ ಹರಿದಿದೆ. ಪರಿಣಾಮ ಸೌರಭ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಪ್ಪಾಣಿ ಬಸವೇಶ್ವರ ಚೌಕ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    – ಅಡ್ಡ ಬಂದ ನಾಯಿಮರಿ ಕತ್ತು ಹಿಸುಕಿದ
    – ಪೊಲೀಸರಿಂದ ದಂತ ವೈದ್ಯ ಅರೆಸ್ಟ್

    ಲಕ್ನೋ: ಮಗಳಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲವೆಂದು ತಾಯಿಯೊಬ್ಬರು ದೂರಿದ್ದಕ್ಕೆ ಸಿಟ್ಟಿಗೆದ್ದ ದಂತ ವೈದ್ಯನೋರ್ವ ಇಬ್ಬರನ್ನೂ ಕೊಲೆ ಮಾಡಲು ಯತ್ನಿಸಿ, ಅಡ್ಡ ಬಂದ ನಾಯಿ ಮರಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಘಾಜಿಯಾಬಾದ್‍ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಆರೋಪಿಯನ್ನು ದಂತ ವೈದ್ಯ ಯಾಮಿನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಈತ ವಿಜಯನಗರದಲ್ಲಿ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದಾನೆ. ಕಳೆದ 6 ತಿಂಗಳಿನಿಂದ ವೈದ್ಯನ ಮನೆ ಬಳಿ ಇದ್ದ ಮಹಿಳೆಯೊಬ್ಬರು ತನ್ನ ಮಗಳ ಹಲ್ಲು ನೋವಿಗೆ ಈತನ ಬಳಿಯೇ ಚಿಕಿತ್ಸೆ ಕೊಡಿಸುತ್ತಿದ್ದರು. 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಬಾಲಕಿಯ ಹಲ್ಲು ನೋವು ಮಾತ್ರ ಕಡಿಮೆಯಾಗಿರಲಿಲ್ಲ.

    ಆದ್ದರಿಂದ ತಾಯಿ ಸಿದ್ದಿಕಿ ಬಳಿ ಹೋಗಿ ಜಗಳವಾಡಿದ್ದರು. ನೀವು ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ ಎಂದು ದೂರಿದ್ದರು. ಇದರಿಂದ ಸಿಟ್ಟಿಗೆದ್ದ ವೈದ್ಯ ಶನಿವಾರ ಮಹಿಳೆ ಮನೆಗೆ ನುಗ್ಗಿ ಚಾಕುವಿನಿಂದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದನು. ಈ ವೇಳೆ ಅವರನ್ನು ರಕ್ಷಿಸಲು ಮನೆಯಲ್ಲಿ ಸಾಕಿದ್ದ ನಾಯಿ ಮರಿ ಮುಂದೆ ಬಂದು, ವೈದ್ಯನ ಕಾಲಿಗೆ ಕಚ್ಚಿತು. ಇದರಿಂದ ಮತ್ತಷ್ಟು ಕೋಪಗೊಂಡ ವೈದ್ಯ ನಾಯಿ ಮರಿಯ ಕತ್ತು ಹಿಸುಕಿ ಕೊಂದು ಹಾಕಿದನು.

    ಅಷ್ಟೇ ಅಲ್ಲದೆ ಮಹಿಳೆ ಹಾಗೂ ಆಕೆಯ ಮಗಳ ಜೊತೆ ವೈದ್ಯ ಅಸಭ್ಯವಾಗಿ ವರ್ತಿಸಿದ್ದನು, ಈ ವೇಳೆ ಮಹಿಳೆ ಕಿರುಚಾಡಿ ಅಲಾರಾಂ ಹೊಡೆದಾಗ ಅಕ್ಕಪಕ್ಕದ ಮನೆಯವರು ಬಂದು ಆರೋಪಿಯನ್ನು ಹಿಡಿದರು ಎಂದು ಪೊಲೀಸರು ತಿಳಿಸಿದರು.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 354, 307 ಕಾಯ್ದೆ ಅಡಿ ಹಾಗೂ ಪ್ರಾಣಿ ಮೇಲೆ ವಿಕೃತಿ ಮೆರೆದಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶಿಸಿದ್ದಾರೆ.

  • ವೈರಲ್ ಆಯ್ತು ಮುಖದ್ಮೇಲೆ ಬಾಲ ಇರುವ ಕ್ಯೂಟ್ ನಾಯಿಮರಿ

    ವೈರಲ್ ಆಯ್ತು ಮುಖದ್ಮೇಲೆ ಬಾಲ ಇರುವ ಕ್ಯೂಟ್ ನಾಯಿಮರಿ

    ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಈಗ ಮುಖದ ಮೇಲೆ ಬಾಲವಿರುವ ಕ್ಯೂಟ್ ನಾಯಿ ಮರಿ ಸಖತ್ ವೈರಲ್ ಆಗಿದ್ದು. ಈ ನಾಯಿ ಮರಿಯನ್ನು ಕಂಡು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

    ಒಂದು ಬಾಲವಿರುವ ನಾಯಿಯನ್ನು ನೋಡಿರುತ್ತೇವೆ. ಆದರೆ ಅಮೆರಿಕದ ಮಿಸ್ಸೌರಿಯಲ್ಲಿ ಬೀದಿ ನಾಯಿ ಮರಿಯೊಂದಕ್ಕೆ ಎರಡೆರಡು ಬಾಲವಿದೆ. ಅದರಲ್ಲೂ ವಿಚಿತ್ರವೆಂದರೆ ನಾಯಿ ಮರಿಗೆ ಮುಖದ ಮೇಲೆ ಬಾಲವಿದೆ. ಈ ನಾಯಿ ಮರಿ ಹುಟ್ಟಿದಾಗಿಂದಲೇ ಮುಖದ ಮೇಲೆ ಬಾಲವಿತ್ತೆಂದು ಹೇಳಲಾಗುತ್ತಿದ್ದು, ಸದ್ಯ ಎಲ್ಲೆಡೆ ಈ ನಾಯಿ ಮರಿಯದ್ದೇ ಚರ್ಚೆ ಶುರುವಾಗಿದೆ.

    ನಾಯಿ ಮರಿಯನ್ನು ಕಂಡ ಜನರು ಇದಕ್ಕೆ ಕ್ಯೂಟ್ ಯೂನಿಕಾರ್ನ್ ಎಂದು ಕರೆಯುತ್ತಿದ್ದಾರೆ. ಯೂನಿಕಾರ್ನ್ ಎಂದರೆ ಹಣೆಯ ಮೇಲೆ ಕೊಂಬು ಇರುವ ಕುದುರೆ. ಮಕ್ಕಳ ಕಥೆಗಳಲ್ಲಿ ಬರುವ ಯೂನಿಕಾರ್ನ್‍ಗೆ ಕೊಡಿರುವಂತೆ ಈ ನಾಯಿ ಮರಿಗೆ ಹಣೆಯ ಮೇಲೆ ಬಾಲವಿದೆ. ಆದರೆ ಈ ನಾಯಿ ಮರಿಯ ಅಸಲಿ ಹೆಸರು ನಾರ್ವಲ್. ನಾಯಿ ಮರಿಯನ್ನು ಬೀದಿಯಲ್ಲಿ ಕಂಡು ಎನ್‍ಜಿಓವೊಂದು ಇದನ್ನು ರಕ್ಷಿಸಿದೆ.

    https://twitter.com/dog_rates/status/1194660457451159552

    ಈ ನಾಯಿ ಮರಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಇದನ್ನು ಮ್ಯಾಕ್ ಮಿಷನ್ಸ್ ಚಾರಿಟಿ ರಕ್ಷಣೆ ಮಾಡಿತ್ತು. ಈ ವೇಳೆ ಈ ಪುಟ್ಟ ನಾಯಿ ಮರಿಯ ಹಣೆಯ ಭಾಗದಲ್ಲಿ ಪುಟ್ಟ ಬಾಲವಿರುವುದನ್ನು ಗಮನಿಸಿದ ಸದಸ್ಯರು ಪಶು ವೈದ್ಯರ ಬಳಿ ಕರೆದೊಯ್ದಿದ್ದಾರೆ.

    ಅಲ್ಲಿ ವೈದ್ಯರು ನಾರ್ವಲ್‍ನನ್ನು ತಪಾಸಣೆ ನಡೆಸಿದ ಬಳಿಕ ನಾಯಿ ಮರಿಯ ಮುಖದ ಮೇಲಿರುವ ಬಾಲ ದೇಹಕ್ಕೆ ಜೋಡಣೆಯಾಗಿಲ್ಲ ಎಂಬುದು ತಿಳಿದು ಬಂದಿದೆ. ಇದರಿಂದ ಅದಕ್ಕೆ ಯಾವುದೇ ಅಪಾಯವಿಲ್ಲ ಎಂದು ಬಾಲವನ್ನು ಕತ್ತರಿಸದೇ ಸುಮ್ಮನೆ ಬಿಟ್ಟಿದ್ದಾರೆ.

    ಈ ಮುದ್ದಾದ ನಾಯಿ ಮರಿಯ ಫೋಟೋಗಳನ್ನು ‘ವಿ ರೇಟ್ ಡಾಗ್ಸ್’ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಅಪರೂಪದ ನಾಯಿ ಮರಿಗೆ ಕ್ಯೂಟ್‍ನೆಸ್‍ಗೆ ಪ್ರಾಣಿ ಪ್ರೀಯರು ಫಿದಾ ಆಗಿದ್ದಾರೆ. ಯೂನಿಕಾರ್ನ್ ತರಹ ಈ ನಾಯಿ ಮರಿಗೆ ಪಪ್ಪಿಕಾರ್ನ್ ಎಂದು ಪ್ರೀತಿಯಿಂದ ಕರೆದಿದ್ದಾರೆ.

  • ಅಪಘಾತದಲ್ಲಿ ಮೃತಪಟ್ಟ ಮರಿಗಾಗಿ ತಾಯಿ ಶ್ವಾನದ ಮೂಕರೋಧನೆ

    ಅಪಘಾತದಲ್ಲಿ ಮೃತಪಟ್ಟ ಮರಿಗಾಗಿ ತಾಯಿ ಶ್ವಾನದ ಮೂಕರೋಧನೆ

    ವಿಜಯಪುರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ತನ್ನ ಮರಿಗಾಗಿ ತಾಯಿ ಶ್ವಾನವೊಂದು ಮೂಕರೋಧನೆ ಪಟ್ಟ ಮನಕಲಕುವ ದೃಶ್ಯ ತಾಯಿ ಪ್ರೀತಿ ಏನು ಎನ್ನುವುದನ್ನ ಸಾರುತ್ತಿದೆ.

    ಹೌದು. ತಾಯಿಗೆ ಮಕ್ಕಳೇ ಜೀವ. ಮಕ್ಕಳ ಮೇಲೆ ತಾಯಿ ತೋರುವ ಪ್ರೀತಿಗೆ ಸಾಟಿಯಿಲ್ಲ ಎನ್ನುತ್ತಾರೆ. ಹೀಗೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಾಯಿ ಮರಿಯೊಂದು ರಸ್ತೆ ಮಧ್ಯೆ ಮೃತಪಟ್ಟಿತ್ತು. ಇದನ್ನು ಕಂಡ ತಾಯಿ ನಾಯಿ ಮರಿ ಬಿಟ್ಟು ಅತ್ತ ಇತ್ತ ಕದಲದೇ ರಸ್ತೆ ಮಧ್ಯೆಯೇ ಕೂತು ಮೂಕರೋಧನೆ ಪಡುತ್ತಿದೆ.

    ಮೃತ ಪಟ್ಟ ನಾಯಿಮರಿ ಬಳಿ ಒಂದು ಗಂಟೆಗೂ ಅಧಿಕ ಕಾಲದಿಂದ ತಾಯಿ ಶ್ವಾನ ಕೂತು ಕಣ್ಣೀರಿಡುತ್ತಿದೆ. ತನ್ನ ಮರಿ ಮೇಲಿಟ್ಟಿರುವ ಪ್ರೀತಿ ಕಂಡು ಸ್ಥಳೀಯರು ಕೂಡ ಮರುಗಿದ್ದಾರೆ.

  • ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

    ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

    ಳೆದ ಕೆಲವು ದಿನಗಳಿಂದ ಹಸುವೊಂದು ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

    ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ನಾಲ್ಕೈದು ನಾಯಿಮರಿಗಳಿಗೆ ಹಸು ತಾನಾಗಿಯೇ ಹಾಲು ನೀಡುತ್ತಿದೆ. ಸಾಮಾನ್ಯವಾಗಿ ಹಸು ನಿಂತಿದ್ದರೆ, ಅದರ ಕರು ಹಾಲು ಕುಡಿಯವಷ್ಟು ಎತ್ತರವಾಗಿರುತ್ತದೆ. ಇಲ್ಲಿ ಪುಟ್ಟ ನಾಯಿ ಮರಿಗಳಿಗೆ ಕಷ್ಟವಾಗಬಾರದು ಅಂತಾ ಗೋ ಮಾತೆ ಮಲಗಿ ಹಾಲು ನೀಡುತ್ತಿದೆ. ಘಟನೆ ನಿಖರವಾಗಿ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಮನುಷ್ಯರಲ್ಲಿ ನಾನು, ನೀನು ಎಂಬ ಭೇದ ಭಾವವಿರುತ್ತೆ ಹೊರತು ಪ್ರಾಣಿಗಳಲ್ಲಿರಲ್ಲ ಎಂಬುವುದಕ್ಕೆ ತಾಜಾ ಉದಾಹರಣೆ ಇಂದು ನಮ್ಮ ಮುಂದಿದೆ. ಕೆಲ ಪ್ರಾಣಿಗಳು ಪರಸ್ಪರ ಬದ್ಧವೈರಿಗಳಾಗಿದ್ದರು, ಒಂದಕ್ಕೊಂದು ಹಾಲುಣಿಸುವ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಜಾತಿ-ಧರ್ಮ ಎಂದು ಹೊಡೆದಾಡುತ್ತಿರುವ ಮನುಷ್ಯ ಜನ್ಮ ಕೆಲವೊಮ್ಮೆ ಮೂಕ ಪ್ರಾಣಿಗಳ ಪ್ರೀತಿ-ಸಾಮರಸ್ಯವನ್ನು ನೋಡಿ ಕಲಿಯಬೇಕಾಗುತ್ತದೆ.

    ಚೆನ್ನೈನ ಪುದುಕೊಟ್ಟೈ ಗ್ರಾಮದಲ್ಲಿ ಅನಾಥ ಮೇಕೆ ಮರಿಗೆ ಶ್ವಾನವೊಂದು ತಾಯಿಯಾಗಿತ್ತು. ಕನ್ನ ಎಂಬ ಮೇಕೆ ಮರಿ ಕೆಲ ದಿನಗಳ ಹಿಂದೆ ನಡೆದ ಗಜ ಚಂಡಮಾರುತದಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿತ್ತು. ತಬ್ಬಲಿ ಮೇಕೆಗೆ ಅದೇ ಮನೆಯಲ್ಲಿದ್ದ ಶ್ವಾನವೇ ತಾಯಿಯಾಗಿ ಆಸರೆಯಾಗಿತ್ತು.

    https://www.youtube.com/watch?v=uQca3sM_wfw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಯಿ ಮರಿ ಎತ್ತಿ ಬಿಸಾಡಿದ್ದ ವ್ಯಕ್ತಿ ವಿರುದ್ಧ ಎಫ್‍ಐಆರ್

    ನಾಯಿ ಮರಿ ಎತ್ತಿ ಬಿಸಾಡಿದ್ದ ವ್ಯಕ್ತಿ ವಿರುದ್ಧ ಎಫ್‍ಐಆರ್

    – ಮೂರು ವಾರಗಳ ನಿರಂತರ ಹೋರಾಡಿ ಕೇಸ್ ದಾಖಲಿಸಿದ ವಿದ್ಯಾರ್ಥಿಗಳು

    ಚೆನ್ನೈ: ನಾಯಿ ಮರಿಯೊಂದನ್ನು ನಿರ್ದಯವಾಗಿ ಎಸೆದಿದ್ದ ದಿನಸಿ ಅಂಗಡಿ ಮಾಲೀಕನ ವಿರುದ್ಧ ಎಫ್‍ಐಆರ್ ದಾಖಲಿಸುವಲ್ಲಿ ತಿರುಚ್ಚಿಯ ತಮಿಳುನಾಡು ಕಾನೂನು ಕಾಲೇಜು ವಿದ್ಯಾರ್ಥಿಗಳು ಯಶ್ವಸಿಯಾಗಿದ್ದಾರೆ.

    ಚೆನ್ನೈನ ಮನಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಾಲಮುರುಗನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮುರುಗನ್ ಬೇಲ್ ಪಡೆದು ಹೊರಬಂದಿದ್ದಾನೆ. ಈ ಮೂಲಕ ಕಾನೂನು ವಿದ್ಯಾರ್ಥಿಗಳು ಮೂರು ವಾರ ಹೋರಾಡಿ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಾಂದರ್ಭಿಕ ಚಿತ್ರ

    ಏನಿದು ಪ್ರಕರಣ?:
    ದುರ್ಗಾಯ್ ಅವೆನ್ಯೂ ರಸ್ತೆಯಲ್ಲಿ ಡಿಸೆಂಬರ್ 1ರಂದು ಘಟನೆ ನಡೆದಿದ್ದು, ಅಂದು ಆರೋಪಿ ಬಾಲಮುರುಗನ್ ತನ್ನ ಬೈಕ್ ಬಳಿ ನಿಂತಿರುತ್ತಾನೆ. ಈ ವೇಳೆ ನಾಯಿಯೊಂದನ್ನು ನಾಯಿಮರಿ ಹಿಂಬಾಲಿಸುತ್ತಿರುತ್ತದೆ. ತನ್ನ ಬಳಿಗೆ ನಾಯಿಮರಿ ಬರುತ್ತಿದ್ದಂತೆ, ಮುದ್ದಾಡಿ ಕರೆದಂತೆ ನಟಿಸಿದ ಆರೋಪಿ ಅದನ್ನು ಎತ್ತಿಕೊಂಡ ಜೋರಾಗಿ ರಸ್ತೆಯ ಮೇಲೆ ಎಸೆಯುತ್ತಾನೆ. ನೆಲಕ್ಕೆ ಅಪ್ಪಳಿಸಿದ ನಾಯಿ ನೋವಿನಿಂದ ಅರಚುತ್ತದೆ. ಈ ಶಬ್ದ ಕೇಳಿಸಿಕೊಂಡ ಕೆಲವು ನಾಯಿಗಳು ಸ್ಥಳಕ್ಕೆ ನಾಯಿ ಮರಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತವೆ.

    ಬಾಲಮುರುಗನ್ ಕೃತ್ಯವು ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ನೋಡಿದ್ದ ವಿದ್ಯಾರ್ಥಿನಿಯೊಬ್ಬಳು ಕಸ್ತೂರಿ ರಾಜಮಣಿ ಹಾಗೂ ಆಕೆಯ ಐವರು ಸಹಪಾಠಿಗಳಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಎಲ್ಲರು ಸೇರಿ ಡಿಸೆಂಬರ್ 14 ರಂದು ಎಂ6 ಮನಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದೂರು ಪಡೆದಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು.

    ಪೊಲೀಸರು ನಿಷ್ಕಾಳಜಿ ತೊರಿದ್ದರಿಂದ ಡಿಸೆಂಬರ್ 13ರಂದು ಕಾನೂನು ವಿದ್ಯಾರ್ಥಿಗಳು ಬ್ಯೂವ್ ಕ್ರಾಸ್ ಸಂಘಟನೆಗೆ ವಿಡಿಯೋ ನೀಡಿದ್ದರು. ಬಳಿಕ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಭೇಟಿ ಮಾಡಿದ್ದರೂ, ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ಎಲ್ಲ ಬೆಳವಣಿಗೆ ಬಳಿಕ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾಗಿ ಮನಾಲಿ ಪೊಲೀಸ್ ಠಾಣೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರಂತೆ.

    ಗಂಭೀರವಾಗಿ ಗಾಯಗೊಂಡಿರುವ ನಾಯಿಮರಿ ಚೇತರಿಸಿಕೊಳ್ಳುತ್ತಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಸನ್ 428 (ಪ್ರಾಣಿಯ ಮೇಲೆ ಹಲ್ಲೆ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಆದರೆ ಬೇಲ್ ಪಡೆದು ಆರೋಪಿ ಬಾಲಮುರುಗನ್ ಹೊರಬಂದಿದ್ದಾನೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ಸಾಂದರ್ಭಿಕ ಚಿತ್ರ

    ನವದೆಹಲಿ: ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಶನಿವಾರ ನಡೆದಿದೆ.

    ವಿಜೇಂದರ್ ರಾಣಾ ಮೃತ ದುರ್ದೈವಿ ವ್ಯಕ್ತಿ. ರಾಣಾ ಅವರ ಟೆಂಪೋ ನಾಯಿಮರಿಗೆ ತಾಗಿತ್ತೆಂದು ಸಿಟ್ಟುಗೊಂಡ ನಾಯಿಯ ಮಾಲೀಕ ಈ ಕೃತ್ಯ ಎಸಗಿದ್ದಾನೆ.

    ಏನಿದು ಘಟನೆ?:
    ರಾಣಾ ಅವರ ಟಾಟಾ ಏಸ್ ಟೆಂಪೋ ಆಕಸ್ಮತ್ತಾಗಿ ನಾಯಿಗೆ ಟಚ್ ಆಗಿದೆ. ಈ ವೇಳೆ ನಾಯಿಯ ಮಾಲೀಕ ತಗಾದೆ ತೆಗೆದಿದ್ದಾನೆ. ಇಷ್ಟು ಮಾತ್ರವಲ್ಲದೇ ಸ್ಥಳೀಯರನ್ನು ಸ್ಥಳದಲ್ಲಿ ಜಮಾಯಿಸುವಂತೆ ಮಾಡಿದ್ದಾನೆ. ಈ ವೇಳೆ ರಾಣಾ ಸಹೋದರ ಕೂಡ ಸ್ಥಳಕ್ಕೆ ದೌಡಾಯಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಅಂದರೆ ಮಧ್ಯರಾತ್ರಿ 12.50ರ ಸುಮಾರಿಗೆ ರಾಣಾ ಸಹೋದರಿ ಪೊಲೀಸರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

    ಮಾತಿನ ಚಕಮಕಿ ಮುಂದುವರೆದು ತಾರಕಕ್ಕೇರಿ ಟೆಂಪೋ ಚಾಲಕ ವಿಜೇಂದರ್ ರಾಣಾ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಕೂಡಲೇ ಅವರನ್ನು ಮಟ ರೂಪ್ ರಾಣಿ ಮಾಗ್ಗೋ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆ ಗಂಭೀರ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಇವರ ಸಹೋದರ ರಾಜೇಶ್ ಅವರಿಗೂ ಚಾಕು ಇರಿತವಾಗಿದ್ದು, ಗಾಯಗಳಾಗಿವೆ. ಸದ್ಯ ರಾಜೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ಮೂವರು ಆರೋಪಿಗಳಾದ ಅಂಕಿತ್, ಪರಸ್ ಹಾಗೂ ಅವರ ಮನೆ ಮಾಲೀಕ ದೇವ್ ಚೋಪ್ರಾ ಇದೀಗ ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv