Tag: ನಾಯಿ ಕಡಿತ

  • ಬೀದಿ ನಾಯಿಗಳ ಜನನ ನಿಯಂತ್ರಣ ವಿಫಲವಾಗಿದ್ದೇಕೆ? – ಸಂತಾನಹರಣ ನಾಯಿಗಳಿಗೆ ಟ್ರ್ಯಾಕಿಂಗ್‌ಗೆ ಚಿಪ್‌ ಅಳವಡಿಸಬೇಕೆ?

    ಬೀದಿ ನಾಯಿಗಳ ಜನನ ನಿಯಂತ್ರಣ ವಿಫಲವಾಗಿದ್ದೇಕೆ? – ಸಂತಾನಹರಣ ನಾಯಿಗಳಿಗೆ ಟ್ರ್ಯಾಕಿಂಗ್‌ಗೆ ಚಿಪ್‌ ಅಳವಡಿಸಬೇಕೆ?

    ನಾಯಿ ದಾಳಿಯ ವಿಡಿಯೋಗಳು ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ವೆ. ರಸ್ತೆಯಲ್ಲಿ ಓಡಾಡುವವರ ಮೇಲೆ, ಶಾಲಾ ಮಕ್ಕಳ ಮೇಲೆ ಅದ್ರಲ್ಲೂ ಬೆಳಗ್ಗಿನ ಜಾವ, ಮಟ ಮಟ ಮಧ್ಯಾಹ್ನ, ತಡರಾತ್ರಿಗಳಲ್ಲಿ ಒಬ್ಬಂಟಿಗರು ಸಿಕ್ಕಿಬಿಟ್ರೆ ಕಥೆ ಮುಗಿಯಿತು. ಐದಾರು ನಾಯಿಗಳು (Stray Dogs) ಒಟ್ಟಿಗೆ ಮೈಮೇಲೆ ಎರಗಿಬಿಡುತ್ತವೆ. ಇದಕ್ಕೆ ಗ್ರಾಮೀಣ ಪ್ರದೇಶಗಳೂ ಹೊರತಾಗಿಲ್ಲ. ಬೆಂಗಳೂರಿನ ಮಹಾನಗರಗಳಲ್ಲಂತೂ ಕೇಳಂಗೇ ಇಲ್ಲ. ಇದೆಲ್ಲ ಕ್ವಾಟ್ಲೆಗಳಿಗೆ ಕಡಿವಾಣ ಹಾಕಬೇಕು ಅಂತಾನೇ ಸುಪ್ರೀಂ ಕೋರ್ಟ್‌ (Supreme Court) ಹೊಸ ನೀತಿಯೊಂದನ್ನ ರೂಪಿಸಿದೆ.

    ಹಾವಳಿ ತಡೆಗೆ ನಿರ್ದಿಷ್ಟ ನೀತಿ ರೂಪಿಸಿ ರಾಜಧಾನಿ ದೆಹಲಿ ಮತ್ತು NCR (ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶ) ವಲಯದ ಎಲ್ಲ ಪ್ರದೇಶದಿಂದ ಬೀದಿ ನಾಯಿಗಳನ್ನು ಹಿಡಿದು ಶೆಡ್‌ಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆ-1960 ಹಾಗೂ ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 (ABC) ರೀತಿಯ ಕಾನೂನುಗಳು, ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳನ್ನು ನಾವು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಕಾನೂನು ಮನುಷ್ಯರ ಹಿತರಕ್ಷಣೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದು ಹೇಗೆ ಎನ್ನುವ ಬಗ್ಗೆಯೂ ತಿಳಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ನ್ಯಾ. ಜೆ.ಬಿ ಪಾರ್ದಿವಾಲಾ ಮತ್ತು ಆರ್.‌ ಮಹಾದೇವನ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಬೀದಿನಾಯಿಗಳ ನಿಯಂತ್ರಣಕ್ಕೆ ಈ ಆದೇಶ ಕೊಟ್ಟಿದೆ.

    ಇನ್ನೂ ಕರ್ನಾಟಕದ ಬೆಂಗಳೂರಿನಲ್ಲಿ (Bengaluru) ಬೀದಿ ನಾಯಿಗಳ ಸಂಖ್ಯೆ ಶೇ.10ರಷ್ಟು ತಗ್ಗಿದ್ದರೂ, ಕಡಿತ ಪ್ರಕರಣಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇವೆ. 2023ರ ಗಣತಿ ಪ್ರಕಾರ, ನಗರದಲ್ಲಿ ಶೇ 71.85ರಷ್ಟು ಬೀದಿ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ, ಪ್ರಸಕ್ತ ವರ್ಷ ಜನವರಿಯಿಂದ ಜೂನ್‌ವರೆಗೆ 13,000ಕ್ಕೂ ಹೆಚ್ಚು ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿರುವುದು ಆಘಾತಕಾರಿಯಾಗಿದೆ. ಕಳೆದ 60 ವರ್ಷಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಜನನ ನಿಯಂತ್ರಣ ವೈಫಲ್ಯಕ್ಕೆ ಕಾರಣವೇನು? ಎಂಬುದನ್ನ ತಿಳಿಯಬೇಕಿದ್ರೆ ಮುಂದೆ ಓದಿ…

    ಸಂತಾನಹರಣ ಚಿಕಿತ್ಸೆ ಕಾರ್ಯಕ್ರಮ ಶುರುವಾಗಿದ್ದು ಹೇಗೆ?
    1966ರಲ್ಲಿ ಚೆನ್ನೈನಲ್ಲಿ ಪ್ರಾಣಿಗಳಿಗೆ ಮೊದಲ ಉಚಿತ ಸಂತಾನಹರಣ ಚಿಕಿತ್ಸಾಲಯ ತೆರೆಯಲಾಯಿತು. ಅದಾದ 30 ವರ್ಷಗಳ ನಂತ್ರ ಬ್ಲೂ ಕ್ರಾಸ್‌ ಎಂಬ ಪ್ರಾಣಿ ಕಲ್ಯಾಣ ದತ್ತಿ ಸಂಸ್ಥೆಯು ಚೆನ್ನೈ ನಗರ ಪಾಲಿಕೆಗೆ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ಆರಂಭಿಸುವಂತೆ ಮನವೊಲಿಸಿತು. ಈ ಕಾರ್ಯಕ್ರಮ ಯಶಸ್ವಿಯಾದ ನಂತರ 2001ರಲ್ಲಿ ಇದನ್ನ ರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪಿಸಲಾಯಿತು. ಆದಗ್ಯೂ ಬೀದಿನಾಯಿಗಳ ಸಂಖ್ಯೆ ಬೆಳೆಯುತ್ತಾ ಹೋಯ್ತು.. ಅದರಂತೆ ಕಡಿತದ ಪ್ರಕರಣಗಳು ಹೆಚ್ಚಾಗುತ್ತಲೇ ಹೋಯ್ತು.

    ಜನನ ನಿಯಂತ್ರಣ ವಿಫಲವಾಗಿದ್ದೇಕೆ?
    WHO ನ ಮಾಜಿ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಹೇಳುವಂತೆ, ಈ ಕಾರ್ಯಕ್ರಮ ಯಾರನ್ನೂ ನಿರ್ದಿಷ್ಟ ಹೊಣೆಗಾರರನ್ನಾಗಿ ಮಾಡೋದಿಲ್ಲ. ಏಕೆಂದರೆ, ಈ ಕೆಲಸಕ್ಕೆ ಪಶುವೈದ್ಯರು, ಮೌಲ ಸೌಕರ್ಯ, ಹಣಕಾಸು ಹಾಗೂ ಮಾನವಶಕ್ತಿಯ ಕೊರತೆಯಿದೆ. ಲಸಿಕೆಗಳ ಸಂಖ್ಯೆ, ಶಸ್ತ್ರಚಿಕಿತ್ಸೆಗಳ ಸಂಖ್ಯೆ. ಅದರ ಪರಿಣಾಮದ ಬಗ್ಗೆ ಯಾವುದೇ ರಾಷ್ಟ್ರೀಯ ದತ್ತಾಂಶಗಳಿಲ್ಲ. ಹಣವನ್ನ ವಿವೇಚನೆಯಿಂದ ಬಳಸಲಾಗಿದೆಯೇ ಎಂಬುದನ್ನ ತೋರಿಸಲು ಫಲಿತಾಂಶ, ಅಧ್ಯಯನಗಳಿಲ್ಲ ಎಂದು ಹೇಳಿದ್ದಾರೆ.

    ಇನ್ನೂ ಸೆಂಟ್ರಲ್ ಡ್ರಗ್ಸ್ ಕಂಟ್ರೋಲ್ ಲ್ಯಾಬೊರೇಟರಿಯ ಮಾಜಿ ಮುಖ್ಯಸ್ಥ ಸುರಿಂದರ್ ಸಿಂಗ್ ಮಾತನಾಡ್ತಾ, ಈ ಕೆಲಸ ಶುರುವಾದಾಗ ಚೆನ್ನಾಗಿತ್ತು. ಕನಿಷ್ಠ 1 ದಶಕದ ಕಾಲ ಬೀದಿ ನಾಯಿಗಳಿಗೆ ನಿರಂತರ ಸಂತಾನಹರಣ ಚಿಕಿತ್ಸೆ ಮಾಡಿದ್ದಿದ್ದರೆ ಭಾರತವು ರೇಬಿಸ್‌ನಂತಹ ಕಾಯಿಲೆಯನ್ನು ತೊಡೆದುಹಾಕಬಹುದಿತ್ತು. ಆದ್ರೆ ಮೊದಲ 2 ವರ್ಷಗಳ ನಂತ್ರ ಅವುಗಳನ್ನು ಮೂಲ ಸೌಕರ್ಯವನ್ನು ಕೊಳ್ಳಲು ಹಣಕಾಸಿನ ಸಮಸ್ಯೆ ಎದುರಾಯ್ತು. ಆ ಬಳಿಕ ಕೆಲಸದ ವೇಗವು ಕುಂಟಿತಗೊಂಡದ್ದರಿಂದ ಜನನ ನಿಯಂತ್ರಣ ಕ್ರಮವು ವಿಫಲವಾಯ್ತು ಎಂದಿದ್ದಾರೆ.

    ದೇಶದಲ್ಲೇ ಅತಿಹೆಚ್ಚು ಬೀದಿ ನಾಯಿಗಳಿರುವ ಟಾಪ್‌-10 ಜಿಲ್ಲೆಗಳಾವುವು?
    ದೇಶದಲ್ಲೇ ಅತಿಹೆಚ್ಚು ನಾಯಿಗಳಿರುವ 10 ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು ನಗರ ಹಾಗೂ ಮೈಸೂರು ಸ್ಥಾನ ಪಡೆದುಕೊಂಡಿವೆ. ಒಡಿಶಾದ ಕಲಾಹಂಡಿಯಲ್ಲಿ 10.6 ಲಕ್ಷ ನಾಯಿಗಳಿದ್ದರೆ ಮಹಾರಾಷ್ಟ್ರದಲ್ಲಿ 2.1 ಲಕ್ಷ ನಾಯಿಗಳಿವೆ. ಇನ್ನೂ 3ನೇ ಸ್ಥಾನದಲ್ಲಿ ಬೆಂಗಳೂರು ನಗರ ಇದ್ದು, 1.4 ಲಕ್ಷ ಬೀದಿನಾಯಿ ಹೊಂದೆ. ಇನ್ನುಳಿದಂತೆ ಪ.ಬಂಗಾಳದ ಮುರ್ಷಿದಾಬಾದ್‌ 1.1 ಲಕ್ಷ, ಪಶ್ಚಿಮ ಮಿಡ್ನಾಪುರ್‌, ಪಶ್ಚಿಮ ಬುರ್ದ್ವಾನ್‌, ಪೂರ್ವ ಬುರ್ದ್ವಾನ್‌ನಲ್ಲಿ ತಲಾ 1 ಲಕ್ಷ, ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ 90 ಸಾವಿರ, ಪ.ಬಂಗಳದ ಉತ್ತರ 24 ಪರಗಣಗಳಲ್ಲಿ 90 ಸಾವಿರ ಮತ್ತು ಜಮ್ಮುವಿನಲ್ಲಿ 90 ಸಾವಿರ ಬೀದಿ ನಾಯಿಗಳಿವೆ ಎಂದು ತಿಳಿದುಬಂದಿದೆ.

    ಮಹಾರಾಷ್ಟ್ರದಲ್ಲೇ ನಾಯಿ ಕಡಿತ ಕೇಸ್‌ ಹೆಚ್ಚು 
    ದೇಶದ ಹಲವು ರಾಜ್ಯಗಳಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. 2024ರಲ್ಲಿ ಮಹಾರಾಷ್ಟ್ರದಲ್ಲಿ 4.85 ಲಕ್ಷ, ತಮಿಳುನಾಡಿನಲ್ಲಿ 4.80 ಲಕ್ಷ, ಗುಜರಾತ್‌ನಲ್ಲಿ 3.92 ಲಕ್ಷ, ಕರ್ನಾಟಕದಲ್ಲಿ 3.61 ಲಕ್ಷ, ಬಿಹಾರದಲ್ಲಿ 2.63 ಲಕ್ಷ, ಆಂಧ್ರಪ್ರದೇಶದಲ್ಲಿ 2.45 ಲಕ್ಷ, ಅಸ್ಸಾಂನಲ್ಲಿ 1.66 ಲಕ್ಷ, ಉತ್ತರ ಪ್ರದೇಶದಲ್ಲಿ 1.64 ಲಕ್ಷ, ರಾಜಸ್ಥಾನದಲ್ಲಿ 1.40 ಲಕ್ಷ, ಬಿಹಾರದಲ್ಲಿ ಪ್ರಕರಣಗಳು ವರದಿಯಾಗಿವೆ.

    2025ರ ಅಂಕಿಅಂಶ ಗಮನಿಸುವುದಾದ್ರೆ, ಕಳೆದ 6 ತಿಂಗಳಲ್ಲಿ ಕರ್ನಾಟಕದಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬಿಸ್ ಸಾವುಗಳು ದಾಖಲಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ. 2024 ರಲ್ಲಿ, ರಾಜ್ಯದಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬಿಸ್ ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರಿಂದ ಜೂನ್ 30 ರವರೆಗೆ ಕರ್ನಾಟಕದಲ್ಲಿ 2,31,091 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರ ಪೈಕಿ 19 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,69,672 ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬಿಸ್ ಸಾವುಗಳು ವರದಿಯಾಗಿದ್ದವು.

    ಜನನ ನಿಯಂತ್ರಣಕ್ಕೆ ಏನು ಮಾಡಬೇಕು?
    ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮಕ್ಕೆ ಸೂಕ್ತ ಹಣಕಾಸು ಒದಗಿಸದೇ ಇರುವುದೇ ಕಳವಳಕ್ಕೆ ಕಾರಣವಾಗಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಪ್ರತಿ ನಾಯಿಗೆ 1,650 ರೂ.ಗಳ ವರೆಗೆ ಶಿಫಾರಸು ಮಾಡಿದೆ. ಇದರಲ್ಲಿ ನಾಯಿ ಹಿಡಿಯುವವರಿಗೆ, ಸಂತಾನಹರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ ನಂತರದ ನಿರ್ವಹಣೆ ಮತ್ತು ಲಸಿಕೆಗಾಗಿ ಪ್ರತಿ ನಾಯಿಗೆ ನಿಗದಿಪಡಿಸಿರುವ 200 ರೂ. ಇದರಲ್ಲೇ ಬರುತ್ತದೆ. ಅಂದಾಜಿನ ಪ್ರಕಾರ ದೇಶಾದ್ಯಂತ 6 ಕೋಟಿ ಬೀದಿ ನಾಯಿಗಳಿದ್ದು, ಮಂಡಳಿ ನಿಗದಿ ಮಾಡಿದ ಹಣದಿಂದ ಜನನ ನಿಯಂತ್ರಣಕ್ಕೆ ಕಡಿವಾಣ ಹಾಕುವುದು ಕಷ್ಟಕರ ಹೀಗಾಗಿ ಸ್ಮಾರ್ಟ್‌ ನವೀನ ವಿದಾನಗಳನ್ನು ಹುಡುಕಬೇಕಿದೆ ಎನ್ನುತ್ತಾರೆ ತಜ್ಞರು.

    ಜನನ ನಿಯಂತ್ರಣಕ್ಕೆ ತಜ್ಞರ ಸಲಹೆಗಳೇನು?
    * ಹೆಣ್ಣು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಜೊತೆಗೆ ಜನರು ಮತ್ತು ಸಂಘಸಂಸ್ಥೆಗಳು ನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ಅವುಗಳ ಜವಾಬ್ದಾರಿ ನಿರ್ವಹಿಸುವಂತೆ ಸರ್ಕಾರ ಮಾಡಬೇಕು.
    * ಬಹಳ ಜನಕ್ಕೆ ತಮ್ಮ ಸ್ಥಳೀಯ ನಾಯಿಗಳ ಮೌಲ್ಯ ತಿಳಿದಿರುವುದಿಲ್ಲ. ಸ್ವಲ್ಪ ಮಟ್ಟಿಗೆ ಅವುಗಳ ಮೌಲ್ಯ ಕಂಡುಕೊಂಡ್ರೆ ಭದ್ರತೆ ಅಥವಾ ಬಾಂಬ್‌ ಸ್ಕ್ವಾಡ್‌ಗಳಿಗೆ ಬಳಸಬಹುದಲ್ಲವೇ?
    * ದೆಹಲಿ, ಚೆನ್ನೈ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಂತಾನಹರಣಗೊಂಡ ಪ್ರಾಣಿಗಳನ್ನು ಟ್ರ್ಯಾಕಿಂಗ್‌ ಮೂಲಕ ಖಚಿಪಡಿಸಿಕೊಳ್ಳಬೇಕು. ಅದಕ್ಕಾಗಿ ಮೈಕ್ರೋಚಿಪ್‌ಗಳಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. RFID ಸಾಧನವಾದ ಮೈಕ್ರೋಚಿಪ್ ಶಾಶ್ವತ ID ಯಾಗಿ ಕಾರ್ಯನಿರ್ವಹಿಸುತ್ತದೆ. ನಾಯಿಯ ಚರ್ಮದ ಅಡಿಯಲ್ಲಿ ಈ ಚಿಪ್‌ ಅಳವಡಿಸಬಹುದಾಗಿದೆ.
    * ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್ (HSI) ನಂತಹ ಸಂಸ್ಥೆಗಳು ಸಂಪೂರ್ಣ ABC ಪ್ರಕ್ರಿಯೆ ಸುಗಮಗೊಳಿಸಲು ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕಿದೆ ಅನ್ನೋದು ತಜ್ಞರ ಸಲಹೆ. ಇದರೊಂದಿಗೆ ಸಂತಾನೋತ್ಪತ್ತಿ ಪ್ರಕ್ರಿಯೆ ತಡೆಯುವ ಪ್ರತಿಕಾಯಗಳನ್ನು ಉತ್ಪಾದಿಸುವ ಇಮ್ಯುನೊಕಾಂಟ್ರಾಸೆಪ್ಷನ್ ಸೇರಿದಂತೆ ಶಸ್ತ್ರಚಿಕಿತ್ಸೆಯಲ್ಲದ ಗರ್ಭನಿರೋಧಕಗಳ ಪತ್ತೆ ಕಾರ್ಯದಲ್ಲಿ ಹೆಚ್‌ಎಸ್‌ಐ ತೊಡಗಿದೆ.

  • ದೇಶದಲ್ಲಿ ಹೆಚ್ಚಾಗ್ತಿದೆ ನಾಯಿ ಕಡಿತ, ರೇಬಿಸ್ ಆತಂಕ! – ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ?

    ದೇಶದಲ್ಲಿ ಹೆಚ್ಚಾಗ್ತಿದೆ ನಾಯಿ ಕಡಿತ, ರೇಬಿಸ್ ಆತಂಕ! – ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ?

    ಭಾರತದಲ್ಲಿ ನಾಯಿ ಕಡಿತದ (Dog Bite) ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಮಕ್ಕಳು, ವೃದ್ಧರು, ವಯಸ್ಕರು ಎನ್ನದೇ ನಾಯಿಗಳ ದಾಳಿಗೆ ಒಳಗಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ರೇಬಿಸ್‌ನಿಂದ ಸಾಯುವವರ ಸಂಖ್ಯೆಯೂ ಏರುತ್ತಿರುವುದು ಆತಂಕ ಮೂಡಿಸಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ನ್ಯಾಯಾಲಯಗಳು ಎಚ್ಚರಿಸುತ್ತಿವೆ. ನಾಯಿಗಳ ಹಾವಳಿ ತಪ್ಪಿಸಲು ಸರ್ಕಾರಗಳು ಕೂಡ ಹಲವಾರು ಕ್ರಮಗಳನ್ನು ಕೈಗೊಂಡಿವೆ. ಮನೆ ಹೊರಾಂಗಣದಲ್ಲಿ ಆಟ ಆಡುವಾಗ ಮಕ್ಕಳು ಹೆಚ್ಚಾಗಿ ದಾಳಿಗೆ ಒಳಗಾಗುತ್ತಿರುವುದು ಕಳವಳ ಉಂಟು ಮಾಡಿದೆ. ಕೆಲವು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ. ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ.

    ದೇಶಾದ್ಯಂತ ನಾಯಿಗಳ ದಾಳಿ ಪ್ರಕರಣಗಳೆಷ್ಟು? ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ? ಸುಪ್ರೀಂ ಕೋರ್ಟ್ ಸೂಚನೆ ಏನು? ನಾಯಿಗಳ ಹಾವಳಿ ತಪ್ಪಿಸಲು ಸರ್ಕಾರಗಳು ಕೈಗೊಂಡ ಕ್ರಮಗಳೇನು? ಇಲ್ಲಿದೆ ವಿವರ. ಇದನ್ನೂ ಓದಿ: ಬೆಂಗಳೂರಲ್ಲಿ ಬೀದಿ ನಾಯಿಗಳ ದಾಳಿಗೆ ವೃದ್ಧ ಬಲಿ?

    ಸಾಂದರ್ಭಿಕ ಚಿತ್ರ

    ದೇಶದಲ್ಲಿ 37 ಲಕ್ಷ ನಾಯಿ ಕಡಿತ
    2024 ರಲ್ಲಿ 37 ಲಕ್ಷ ಹೆಚ್ಚು ನಾಯಿ ಕಡಿತ ಪ್ರಕರಣಗಳು ಹಾಗೂ ರೇಬಿಸ್‌ನಿಂದ 54 ಸಾವುಗಳು ವರದಿಯಾಗಿವೆ. ರಾಷ್ಟ್ರೀಯ ರೇಬಿಸ್ (Rabies) ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಸಂಗ್ರಹಿಸಿದ ಅಂಕಿಅಂಶ ಇದಾಗಿದ್ದು, ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸವಾಲಾಗಿ ಪರಿಣಮಿಸಿದೆ. 2022 ಮತ್ತು 2024 ರ ನಡುವೆ ಭಾರತದಲ್ಲಿ ನಾಯಿ ಕಡಿತದ ಘಟನೆಗಳು ಸುಮಾರು ಶೇ.70 ರಷ್ಟು ಹೆಚ್ಚಾಗಿದೆ. ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸುವಲ್ಲಿ ವ್ಯವಸ್ಥಿತ ವೈಫಲ್ಯ ಇದಾಗಿದೆ. ಈ ಅವಧಿಯಲ್ಲಿ ರೇಬಿಸ್‌ನಿಂದ ಉಂಟಾದ ಸಾವುಗಳು ಸಹ ತೀವ್ರ ಏರಿಕೆಯನ್ನು ಕಂಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, 2030ರ ಹೊತ್ತಿಗೆ ಸಂಪೂರ್ಣವಾಗಿ ರೇಬಿಸ್ ನಿರ್ಮೂಲನೆ ಮಾಡುವ ಗುರಿ ಹೊಂದಿದೆ.

    ವೃದ್ಧರು, ಮಕ್ಕಳೇ ಹೆಚ್ಚು
    ಬೀದಿ ನಾಯಿಗಳ (Stray Dogs) ದಾಳಿಗೆ ವೃದ್ಧರು ಮತ್ತು ಮಕ್ಕಳೇ ಹೆಚ್ಚು ತುತ್ತಾಗುತ್ತಿದ್ದಾರೆ. ದೈಹಿಕ ಸಾಮರ್ಥ್ಯ, ಮುನ್ನೆಚ್ಚರಿಕೆ, ಅರಿವಿನ ಕೊರತೆ ಕಾರಣದಿಂದ ದಾಳಿಗೆ ತುತ್ತಾಗುತ್ತಾರೆ. ಚಿಕ್ಕ ಮಕ್ಕಳಿಗೆ ನಾಯಿಗಳು ತಲೆ, ಕುತ್ತಿಗೆ ಅಥವಾ ಮುಖಕ್ಕೆ ಕಚ್ಚುವ ಸಾಧ್ಯತೆ ಹೆಚ್ಚು. ಇದರಿಂದ ಗಾಯಗಳು ಹೆಚ್ಚು ತೀವ್ರ ಮತ್ತು ಆಘಾತಕಾರಿಯಾಗಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, 2024 ರ ಜನವರಿ ಮತ್ತು ಡಿಸೆಂಬರ್ ನಡುವೆ ಭಾರತದಾದ್ಯಂತ ನಾಯಿಗಳ ದಾಳಿಗೆ ಒಳಗಾದವರಲ್ಲಿ 15 ವರ್ಷದೊಳಗಿನ ಮಕ್ಕಳೇ ಹೆಚ್ಚಿದ್ದಾರೆ. ಮನೆಯ ನೆರೆಹೊರೆ, ಶಾಲಾ ವಲಯ ಅಥವಾ ಹೊರಾಂಗಣದಲ್ಲಿ ಆಟವಾಡುವಾಗ ಬೀದಿ ನಾಯಿಗಳ ದಾಳಿ ಹೆಚ್ಚು ನಡೆದಿವೆ. ಇದನ್ನೂ ಓದಿ: ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ: ಬಿಬಿಎಂಪಿ ಸ್ಪಷ್ಟನೆ

    ದೈಹಿಕ ದುರ್ಬಲತೆ, ದೃಷ್ಟಿ ಸಮಸ್ಯೆ, ಶ್ರವಣ ದೋಷ ಕಾರಣಕ್ಕೆ ವಯಸ್ಸಾದವರು ನಾಯಿ ಕಡಿತಕ್ಕೆ ಗುರಿಯಾಗುತ್ತಾರೆ. ಬೀದಿ ಪ್ರಾಣಿಗಳ ಆಕ್ರಮಣವನ್ನು ಮೊದಲೇ ಅರಿಯಲು ಅಥವಾ ದಾಳಿಯಿಂದ ತಪ್ಪಿಸಿಕೊಳ್ಳಲು ತಕ್ಕ ಪ್ರತಿಕ್ರಿಯೆ ನೀಡುವುದು ಅವರಿಂದ ಕಷ್ಟವಾಗುತ್ತದೆ. ವಾಕಿಂಗ್ ಏಡ್‌ಗಳ ಬಳಕೆಯು ಬೀದಿ ನಾಯಿಗಳನ್ನು ಬೆದರಿಸಲು ಸಹಾಯಕವಾಗಬಹುದು. ಆದರೆ, ಆರೋಗ್ಯ ಪರಿಸ್ಥಿತಿ ಹಾಗೂ ರೋಗನಿರೋಧಕ ಶಕ್ತಿ ಕೊರತೆಯು ವೃದ್ಧರಿಗೆ ಸಣ್ಣ ಪ್ರಮಾಣದ ನಾಯಿ ಕಡಿತ ಕೂಡ ಗಂಭೀರವಾಗಿ ಪರಿಣಮಿಸಬಹುದು. ದಾಳಿಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ವೃದ್ಧರಲ್ಲಿ ಇರುವುದಿಲ್ಲ. ಹೀಗಾಗಿ, ಇವರು ಕೂಡ ಹೆಚ್ಚಿನ ದಾಳಿಗಳಿಗೆ ಒಳಗಾಗುತ್ತಾರೆ.

    ರೇಬಿಸ್ ಆತಂಕ
    ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲಿ ರೇಬಿಸ್ ಕೂಡ ಒಂದು. ನಾಯಿ ಕಡಿತವೇ ರೇಬಿಸ್‌ಗೆ ಮೂಲ ಕಾರಣ. ಒಮ್ಮೆ ರೇಬಿಸ್ ತಗುಲಿದರೆ, ಗುಣವಾಗಲ್ಲ. ರೇಬಿಸ್‌ನಿಂದ ಜಾಗತಿಕವಾಗಿ ಪ್ರತಿವರ್ಷ ಸುಮಾರು 50 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತವು ಜಾಗತಿಕ ರೇಬಿಸ್ ಸಾವುಗಳಲ್ಲಿ 36% ರಷ್ಟನ್ನು ಹೊಂದಿದೆ. 2023 ರಲ್ಲಿ ದೇಶದಲ್ಲಿ ನಾಯಿ ಕಡಿತದಿಂದ 286 ಸಾವುಗಳಾಗಿವೆ. 2024 ರಲ್ಲಿ 48 ರೇಬಿಸ್ ಸಾವುಗಳು ವರದಿಯಾಗಿವೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 18,000 ರಿಂದ 20,000 ಜನರು ರೇಬಿಸ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಇದು ಹೆಚ್ಚಾಗಿ ನಾಯಿ ಕಡಿತದಿಂದ ಉಂಟಾಗುತ್ತಿದೆ. ಕೆಲವೊಮ್ಮೆ ಬೆಕ್ಕು ಕಡಿತದಿಂದಲೂ ರೇಬಿಸ್ ಸೋಂಕು ಹರಡುವ ಅಪಾಯವಿದೆ.

    ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ?
    ಕಳೆದ ಆರು ತಿಂಗಳಲ್ಲಿ ಕರ್ನಾಟಕದಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬಿಸ್ ಸಾವುಗಳು ದಾಖಲಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ. 2024 ರಲ್ಲಿ, ರಾಜ್ಯದಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬಿಸ್ ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IಆSP) ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರಿಂದ ಜೂನ್ 30 ರವರೆಗೆ ಕರ್ನಾಟಕದಲ್ಲಿ 2,31,091 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರ ಪೈಕಿ 19 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,69,672 ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬಿಸ್ ಸಾವುಗಳು ವರದಿಯಾಗಿದ್ದವು. ಇದನ್ನೂ ಓದಿ: ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    ವಿಜಯಪುರದಲ್ಲಿ ಅತಿ ಹೆಚ್ಚು ಕೇಸ್
    ವಿಜಯಪುರದಲ್ಲಿ ಅತಿ ಹೆಚ್ಚು ನಾಯಿ ಕಡಿತದ ಪ್ರಕರಣಗಳು (15,527) ವರದಿಯಾಗಿವೆ. ನಂತರ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿ 13,831 ಕೇಸ್, ಹಾಸನ (13,388), ದಕ್ಷಿಣ ಕನ್ನಡ (12,524), ಮತ್ತು ಬಾಗಲಕೋಟೆ (12,392) ದಾಖಲಾಗಿವೆ. ಬೆಂಗಳೂರು ಗ್ರಾಮಾಂತರದಲ್ಲಿ 4,408 ಹಾಗೂ ಬೆಂಗಳೂರು ನಗರವು 8,878 ಪ್ರಕರಣಗಳನ್ನು ವರದಿ ಮಾಡಿದೆ. ಗಮನಾರ್ಹವಾಗಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಥವಾ ಬೆಂಗಳೂರು ಗ್ರಾಮಾಂತರದಲ್ಲಿ ಯಾವುದೇ ರೇಬಿಸ್ ಸಾವುಗಳು ವರದಿಯಾಗಿಲ್ಲ. ಯಾದಗಿರಿ (1,132), ಚಾಮರಾಜನಗರ (1,810) ಮತ್ತು ಕೊಡಗು (2,523) ನಲ್ಲಿ ನಾಯಿ ಕಡಿತದ ಪ್ರಕರಣಗಳು ಕಡಿಮೆ ವರದಿಯಾಗಿವೆ.

    ಬೆಂಗಳೂರಲ್ಲಿ ನಾಯಿ ಕಡಿತಕ್ಕೆ ವೃದ್ಧ ಬಲಿ
    ಈಚೆಗೆ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ 71 ವರ್ಷದ ಸೀತಪ್ಪ ಎಂಬವರು ಮೃತಪಟ್ಟಿದ್ದಾರೆ. ಸೀತಪ್ಪ ಅವರು ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತಿದ್ದಾಗ 8ರಿಂದ 9 ಬೀದಿನಾಯಿಗಳು ದಾಳಿ ಮಾಡಿವೆ. ಕೈ, ಕಾಲಿನ ಅರ್ಧ ಮಾಂಸವನ್ನೇ ಕಚ್ಚಿ ತಿಂದಿವೆ. ಅಷ್ಟೇ ಅಲ್ಲದೇ, ಮುಖಕ್ಕೂ ಕಚ್ಚಿವೆ. ನಾಯಿಗಳ ದಾಳಿಗೆ ವೃದ್ಧ ಬಲಿಯಾಗಿದ್ದಾರೆ. ಮೃತರ ಕುಟುಂಬಸ್ಥರಿಗೆ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಬಿಬಿಎಂಪಿ ಘೋಷಿಸಿದೆ. ಬೀದಿನಾಯಿಗಳ ಸಂತಾನೋತ್ಪತ್ತಿ ಹೆಚ್ಚಳವಾಗಿರುವುದು ಇಂತಹ ಪ್ರಕರಣಗಳಿಗೆ ಕಾರಣವಾಗಿದೆ. ಬೀದಿ ನಾಯಿಗಳ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

    ನಾಯಿ ಕಡಿತ ನಿಯಂತ್ರಣ ಹೇಗೆ?
    ಜಾಗೃತಿ ಮೂಡಿಸುವುದು, ನಾಯಿ ಕಡಿತಕ್ಕೆ ಒಳಗಾದವರಿಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ತರಬೇತಿ ನೀಡುವುದು, ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸಲು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಆಡಳಿತಗಳಿಗೆ ಸೂಚನೆ ನೀಡುವುದರಿಂದ ನಿಯಂತ್ರಣ ಸಾಧ್ಯವಾಗುತ್ತದೆ. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು. ರೇಬಿಸ್ ಹರಡುವಿಕೆಯನ್ನು ತಡೆಗಟ್ಟಲು ನಿಯಮಿತವಾಗಿ ಲಸಿಕೆ ಹಾಕಬೇಕು.

    ರೇಬಿಸ್‌ಗೆ ಬೆಂಗಳೂರಲ್ಲೇ ಹೆಚ್ಚು ಸಾವು
    ಈ ವರ್ಷದ ಜನವರಿ ಮತ್ತು ಜೂನ್ ನಡುವೆ ವರದಿಯಾದ 19 ರೇಬಿಸ್ ಸಾವುಗಳಲ್ಲಿ, ಬೆಂಗಳೂರು ನಗರವು ಅತಿ ಹೆಚ್ಚು ಒಂಬತ್ತು ಪ್ರಕರಣಗಳನ್ನು ಹೊಂದಿದೆ. ನಂತರ ಬೆಳಗಾವಿ ಐದು, ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಪ್ರತಿ ಬೀದಿ ನಾಯಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಲಸಿಕೆ ಹಾಕುವುದು ಪ್ರಮುಖ ಪ್ರಾಯೋಗಿಕ ಸವಾಲಾಗಿದೆ. ರೋಗಿಗಳು ಚಿಕಿತ್ಸೆ ಪಡೆಯಲು ವಿಳಂಬ ಮಾಡಿದ್ದರಿಂದ ಸಾವಾಗಿರುವುದು ತಿಳಿದುಬಂದಿದೆ.

  • ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು

    ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು

    ಬಳ್ಳಾರಿ: ನಗರದಲ್ಲಿ ಕಳೆದ 2 ತಿಂಗಳ ಹಿಂದೆ ಅಷ್ಟೇ ನಾಯಿ ಕಡಿತಕ್ಕೆ (Dog Bite) ಇಬ್ಬರು ಅಮಾಯಕ ಬಾಲಕರು ಬಲಿಯಾಗಿದ್ದರು. ಘಟನೆ ಮಾಸುವ ಮುನ್ನವೇ ಮತ್ತೊಂದು ಹುಚ್ಚು ನಾಯಿ ದಾಳಿ ಘಟನೆ ವರದಿಯಾಗಿದೆ.

    ರಾತ್ರಿ ತಮ್ಮ ಮನೆ ಮುಂದೆ ಮಲಗಿದ್ದವರ ಮೇಲೆ ನಾಯಿ ದಾಳಿ ಮಾಡಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದ 2 ತಿಂಗಳ ಹಿಂದೆ ಬಳ್ಳಾರಿ (Bellary) ಬಾದನಟ್ಟಿ ಗ್ರಾಮದಲ್ಲಿ ಇಬ್ಬರು ಮಕ್ಕಳ ಮೇಲೆ ನಾಯಿ ದಾಳಿ ಮಾಡಿದ್ದು, ಇದರಿಂದ ಇಬ್ಬರು ಮಕ್ಕಳು ಅಸುನೀಗಿದ್ದರು. ಈಗ ಮತ್ತೆ ನಾಯಿ ದಾಳಿಯಿಂದಾಗಿ ಬಳ್ಳಾರಿಯ ಜನತೆ ಬೆಚ್ಚಿ ಬಿದ್ದಿದೆ. ಮಂಗಳವಾರ ಮುಂಜಾನೆ ಬಳ್ಳಾರಿಯ ಕೌಲ್ ಬಜಾರ್ ವ್ಯಾಪ್ತಿಯ ವಾರ್ಡ್ ನಂಬರ್ 30 ರಲ್ಲಿ ವಟ್ಟಲಗೇರಿ ಏರಿಯಾದಲ್ಲಿ ನಾಯಿ ದಾಳಿ ಮಾಡಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಹುಚ್ಚು ನಾಯಿ ದಾಳಿ ಮಾಡಿದ್ದು, 25 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮನೆ ಮುಂದೆ ರಾತ್ರಿ ಮಲಗಿದ್ದ ಜನರ ಮೇಲೆ ನಾಯಿ ದಾಳಿ ಮಾಡಿದ್ದು, 6 ಮಹಿಳೆಯರು 7 ಮಕ್ಕಳು ಸೇರಿದಂತೆ ಒಟ್ಟು 25 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ. ನಾಯಿ ಕಡಿತದ ಬಳಿಕ ಬಳ್ಳಾರಿ ಜಿಲ್ಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ನಾಯಿ ದಾಳಿಗೊಳಗಾದ ಜನರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಸರ್ಕಾರದಿಂದ ಮಹತ್ವದ ನಿರ್ಧಾರ

    ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 21 ಜನರಿಗೆ ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದಾಜಿನ ಪ್ರಕಾರ ಬಳ್ಳಾರಿಯಲ್ಲಿ ಸುಮಾರು 10,000ಕ್ಕೂ ಅಧಿಕ ಬೀದಿ ನಾಯಿಗಳಿವೆ. ನಾಯಿಗಳ ಸಂತಾನ ತಡೆಗಟ್ಟಲು ಬಳ್ಳಾರಿ ಮಹಾನಗರ ಪಾಲಿಕೆ ವಿಫಲವಾಗಿದೆ. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೀದಿನಾಯಿ ಕಚ್ಚಿ ಬಾಲಕ ಸಾವು

    ಬೀದಿನಾಯಿ ಕಚ್ಚಿ ಬಾಲಕ ಸಾವು

    ಚಿತ್ರದುರ್ಗ: ಬೀದಿನಾಯಿ ಕಡಿದು 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಬಿಳಿಕಲ್ಲು ನಾಯಕರ ಹಟ್ಟಿಯಲ್ಲಿ ನಡೆದಿದೆ.

    ಬಡಾವಣೆಯ ಕೇಶವ ಹಾಗೂ ರೇಖಾ ದಂಪತಿಯ ಪುತ್ರ ಯಶವಂತ್(8) ನಾಯಿಯ ಕಡಿತಕ್ಕೊಳಗಾಗಿ ಸಾವನ್ನಪ್ಪಿದ ಬಾಲಕ. ಕಳೆದ 2 ದಿನಗಳ ಹಿಂದೆ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿಯೊಂದು ಯಶವಂತ್‌ನ ಕಣ್ಣಿಗೆ 5-6 ಬಾರಿ ಕಚ್ಚಿತ್ತು. ಪರಿಣಾಮ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಯಶವಂತ್ ಕುಸಿದು ಬಿದ್ದಿದ್ದ. ಇದನ್ನೂ ಓದಿ: ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ನೂರಾರು ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ

    ಯಶವಂತ್‌ನನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪೋಷಕರು ಚಿಕಿತ್ಸೆ ಕೊಡಿಸಿದರು. ಆದರೆ ನಾಯಿ ಬಾಲಕನ ಕಣ್ಣಿಗೆ ಕಚ್ಚಿರುವುದರಿಂದ ವಿಷ(ನಂಜು) ಬಾಲಕನ ಮೆದುಳಿಗೆ ಏರಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಇದನ್ನೂ ಓದಿ: 5ನೇ ಮಹಡಿ ಕಿಟಕಿಯಿಂದ ಬೀಳುತ್ತಿದ್ದ 2 ವರ್ಷದ ಕಂದಮ್ಮನನ್ನು ರಕ್ಷಿಸಿದ – ನಮ್ಮ ಹೀರೋ ಎಂದ ನೆಟ್ಟಿಗರು

    ಈ ಹಿನ್ನೆಲೆಯಲ್ಲಿ ಯಶವಂತ್‌ನನ್ನು ಪೋಷಕರು ಶನಿವಾರ ರಾತ್ರಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯಶವಂತ್ ಮೃತಪಟ್ಟಿದ್ದಾನೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]