Tag: ನಾಯಿಮರಿ

  • ಖರ್ಗೆ ಕುಟುಂಬಕ್ಕೆ ನಾಯಿಮರಿ ಗಿಫ್ಟ್ ಕೊಟ್ಟ ರಾಹುಲ್ ಗಾಂಧಿ

    ಖರ್ಗೆ ಕುಟುಂಬಕ್ಕೆ ನಾಯಿಮರಿ ಗಿಫ್ಟ್ ಕೊಟ್ಟ ರಾಹುಲ್ ಗಾಂಧಿ

    ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ನಾಯಿಮರಿ ಗಿಫ್ಟ್ ಕೊಟ್ಟಿದ್ದಾರೆ.

    ‘ವೋಟ್ ಚೋರಿ’ (ಮತಗಳ್ಳತನ) ವಿರೋಧಿ ಅಭಿಯಾನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಖರ್ಗೆಯವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ: ಸೆ.9ಕ್ಕೆ ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ – ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ

    ಭೇಟಿ ಸಂದರ್ಭದಲ್ಲಿ ಖರ್ಗೆ (Mallikarjun Kharge) ಕುಟುಂಬಕ್ಕೆ ಮುದ್ದಾದ ನಾಯಿಮರಿಯನ್ನು ಗಿಫ್ಟ್ ಆಗಿ ರಾಹುಲ್ ಗಾಂಧಿ ನೀಡಿದ್ದಾರೆ. ಖರ್ಗೆ ಕುಟುಂಬದ ಮಕ್ಕಳು ನಾಯಿಮರಿ ಜೊತೆ ಆಟವಾಡಿದರು.

    ಆಗಸ್ಟ್ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಇದನ್ನೂ ಓದಿ: 800 ವರ್ಷ ಹಳೆಯ ಸೂಗೂರೇಶ್ವರ ದೇವಸ್ಥಾನಕ್ಕೆ ತಟ್ಟದ ಗ್ರಹಣ ದೋಷ – ವಿಶಿಷ್ಟ ವಾಸ್ತುಶಿಲ್ಪವೇ ಇಲ್ಲಿ ಶ್ರೀರಕ್ಷೆ

  • ನಾಯಿಮರಿಗಳ ಬಾಲ, ಕಿವಿ ಕತ್ತರಿಸಿ ಸ್ನ್ಯಾಕ್ಸ್ ಮಾಡಿ ತಿಂದ ಕುಡುಕ

    ನಾಯಿಮರಿಗಳ ಬಾಲ, ಕಿವಿ ಕತ್ತರಿಸಿ ಸ್ನ್ಯಾಕ್ಸ್ ಮಾಡಿ ತಿಂದ ಕುಡುಕ

    ಲಕ್ನೋ: ಕುಡುಕನೊಬ್ಬ ಮದ್ಯ (alcohol) ಸೇವಿಸಿದ ಅಮಲಿನಲ್ಲಿ 2 ನಾಯಿಮರಿಗಳ (Puppy) ಬಾಲ (Tail) ಮತ್ತು ಕಿವಿಗೆ (Ear) ಉಪ್ಪು ಸವರಿ ಸ್ನ್ಯಾಕ್ಸ್ ತಿಂದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಬರೇಲಿ ಜಿಲ್ಲೆಯ ಫರೀದ್‍ಪುರ ಪ್ರದೇಶದ ಎಸ್‍ಡಿಎಂ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ. ಆರೋಪಿ ಮುಖೇಶ್ ವಾಲ್ಮೀಕಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಈ ಅಮಾನವೀಯ ಕೃತ್ಯ ಎಸಗಿದ್ದಾನೆ.

    ALCOHOL

    ಕುಡುಕ ಮುಖೇಶ್ 2 ನಾಯಿ ಮರಿಗಳ ಒಂದು ಕಿವಿ ಹಾಗೂ ಬಾಲವನ್ನು ಕತ್ತರಿಸಿ ಮದ್ಯದೊಂದಿಗೆ ಸೇವಿಸಿದ್ದಾನೆ. ಇದರಿಂದಾಗಿ 2 ನಾಯಿ ಮರಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವೆರೆಡು ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿವೆ. ಇದನ್ನೂ ಓದಿ: ಮದ್ಯಕ್ಕೆ ಸಾಲ ಕೊಡಲ್ಲ ಎಂದಿದ್ದಕ್ಕೆ ಮಹಿಳೆಯನ್ನು ಕೊಲೆ ಮಾಡಿದ ನೆರೆಮನೆಯಾತ

    ಘಟನೆಗೆ ಸಂಬಂಧಿಸಿ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಸದಸ್ಯ ಧೀರಜ್ ಪಾಠಕ್ ಎಂಬಾತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳ ಕುಟ್ಟಿ ಫೋಟೋಗೆ ಮನಸೋತ ಶಿಕ್ಷಕ – ಮ್ಯಾಟ್ರಿಮೊನಿ ಹೆಸರಲ್ಲಿ ಲಕ್ಷ ಲಕ್ಷ ಪೀಕಿದ ಯುವತಿ

    Live Tv
    [brid partner=56869869 player=32851 video=960834 autoplay=true]

  • ಬಿಗ್‍ಬಾಸ್ ಮನೆಗೆ ಬಂತು ನಾಯಿಮರಿ!

    ಬಿಗ್‍ಬಾಸ್ ಮನೆಗೆ ಬಂತು ನಾಯಿಮರಿ!

    ಇಷ್ಟು ದಿನ ಸ್ಪರ್ಧಿಗಳಷ್ಟೇ ಇದ್ದ ಬಿಗ್‍ಬಾಸ್ ಮನೆಗೆ ನಿನ್ನೆ ನಾಯಿ ಮರಿಯೊಂದು ಎಂಟ್ರಿ ನೀಡಿತ್ತು. ಬಿಗ್‍ಬಾಸ್ ಕಾರ್ಯಕ್ರಮ ಶುರುವಾದಾಗಿನಿಂದಲೂ ವಿವಿಧ  ಟಾಸ್ಕ್‌ಗಳನ್ನು ನೀಡಿದ್ದ ಬಿಗ್‍ಬಾಸ್, ನಿನ್ನೆ ಮನೆಯ ಸದಸ್ಯರಿಗೆ ವಿಭಿನ್ನವಾದ ಟಾಸ್ಕ್ ನೀಡಿದ್ದಾರೆ.

    ಯೆಸ್, ನಿನ್ನೆ ಮನೆಯ ಸದಸ್ಯರಿಗೆ ಬಿಗ್‍ಬಾಸ್ ಕೃತಕ ನಾಯಿಮರಿಯೊಂದನ್ನು ಕಳುಹಿಸಿದ್ದರು. ಆ ನಾಯಿಯನ್ನು ಮನೆಯ ಸದಸ್ಯರು ಪ್ರೀತಿಯಿಂದ ನೋಡಿಕೊಳ್ಳಬೇಕಾಗಿತ್ತು. ಆ ನಾಯಿಮರಿಗೆ ಕೋಪಬಂದಾಗ ಬೋಗಳುತ್ತದೆ. ಬೇಸರವಾದಾಗ ಅಳುತ್ತದೆ. ಹಾಗಾಗಿ ಅದಕ್ಕೆ ಕೋಪ ಹಾಗೂ ಅಳು ಬರದಂತೆ ನೋಡಿಕೊಳ್ಳಬೇಕು ಹಾಗೂ ಸದಸ್ಯರು ಬಜರ್ ಆದ ನಂತರ ಒಬ್ಬೊಬ್ಬರಾಗಿ ನಾಯಿಮರಿಯನ್ನು ವರ್ಗಾಯಿಸಿ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.

    ಅದರಂತೆ ಮೊದಲಿಗೆ ದಿವ್ಯಾ ಸುರೇಶ್ ಎತ್ತಿಕೊಂಡು ಕುಣಿದಾಡುತ್ತಾ ನೋಡಿಕೊಳ್ಳುತ್ತಾರೆ. ಜೊತೆಗೆ ನಾಯಿ ಮರಿಯೊಂದಿಗೆ ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುತ್ತಾರೆ. ಬಳಿಕ ದಿವ್ಯಾ ಸುರೇಶ್, ಶುಭಾಗೆ ನಾಯಿ ಮರಿಯನ್ನು ವರ್ಗಾಯಿಸುತ್ತಾರೆ. ಆಗ ಶುಭ ನಾಯಿಮರಿಯೊಂದಿಗೆ ಮಾತನಾಡುತ್ತಾ ಆಟ ಆಡಿಸುತ್ತಾರೆ. ನಂತರ ಕಿಚನ್ ಏರಿಯಾಗೆ ಹೋಗಿ ನಾಯಿಮರಿ ವೈಷ್ಣವಿ ಅಕ್ಕ ಚಿಕನ್ ಕೊಡಿ ಎಂದು ನಾಯಿ ತರ ಮುದ್ದು-ಮುದ್ದಾಗಿ ಮಾತನಾಡುತ್ತಾರೆ. ಆಗ ಎಲ್ಲರೂ… ನಾಯಿಮರಿಗೆ ಚಿಕನ್ ಬೇಕಾ ಅಥವಾ ನಿನಗೆ ಬೇಕಾ ಎಂದು ದಿವ್ಯಾ ಉರುಡುಗ, ವೈಷ್ಣವಿ ಶುಭಾರನ್ನು ಕೇಳುತ್ತಾರೆ.

    ನಂತರ ಶುಭಾಯಿಂದ ನಾಯಿಮರಿಯನ್ನು ವೈಷ್ಣವಿ ಸ್ವೀಕರಿಸಿ ಆಟ ಆಡಿಸುತ್ತಿರುತ್ತಾರೆ. ಈ ವೇಳೆ ರಘು ಕೂಡ ನಾಯಿ ಜೊತೆ ಆಟವಾಡುತ್ತಾರೆ. ಆಗ ಮಂಜು ಕೂಡ ಆಟವಾಡಲು ಹೋದಾಗ ನಾಯಿಮರಿ ಬೋಗಳುತ್ತದೆ. ಈ ವೇಳೆ ಮಂಜು, ಥೂ ನಿನ್ನ ಜನ್ಮಕ್ಕೆ ಬೆಂಕಿ ಇಕ್ಕ, ಇಷ್ಟು ಕಷ್ಟಪಟ್ಟು ಆಟ ಆಡಿಸಲು ಬಂದರೆ ಬೋಗಳುತ್ತಿಯಾ? ಎಂದು ಬೈಯ್ಯುತ್ತಾರೆ. ಇದನ್ನು ಕಂಡು ಮನೆಯ ಸದಸ್ಯರೆಲ್ಲ ಎರ್ರಾಬಿರ್ರಿ ನಗ್ತಾರೆ.

  • ನಾಯಿಮರಿಗಳ ಮೇಲೆ ಲೈಂಗಿಕ ದೌರ್ಜನ್ಯ – ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ನಾಯಿಮರಿಗಳ ಮೇಲೆ ಲೈಂಗಿಕ ದೌರ್ಜನ್ಯ – ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ಚೆನ್ನೈ: ನಾಯಿಮರಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ 30 ವರ್ಷದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ಘಟನೆ ನಡೆದ ಎರಡು ವಾರಗಳ ನಂತರ ಸಿಸಿಟಿವಿ ಆಧಾರಿಸಿ ದೂರು ನೀಡಿದ್ದರು. ಆರೋಪಿಯನ್ನು ಚೆನ್ನೈನ ಮಾಧವರಾಮ್ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ.

    ಈತ ಮಾರ್ಚ್ 14 ರಂದು ಮಾಧವರಾಮ್ ಸಮೀಪದ ಮಾರ್ಥೂರಿನ ಖಾಲಿ ಮೈದಾನದಲ್ಲಿ ನಾಲ್ಕು ನಾಯಿಮರಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಧವರಾಮ ಮಿಲ್ಕ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಪ್ರಾಣಿ ಹಕ್ಕುಗಳ ಕಾರ್ಯಕರ್ತ ಸಾಯಿ ವಿಘ್ನೇಶ್ ನೀಡಿದ ದೂರಿನ ಆಧಾರದ ಮೇರೆಗೆ ನಗರದ ಪೊಲೀಸರು ಭಾಸ್ಕರ್ ಮೇಲೆ ಅಶ್ಲೀಲ ಕೃತ್ಯಗಳನ್ನು ಎಸಗುವ ಆರೋಪಗಳಿಗೆ ಅನುಗುಣವಾಗಿ ಐಪಿಸಿ ಸೆಕ್ಷನ್ 294 ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿ ಭಾಸ್ಕರ್ ನನ್ನು ಜೈಲಿಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಕಾನೂನಿನ ತಜ್ಞರನ್ನು ಸಂಪರ್ಕಿಸಿದ ನಂತರ ಈ ಕುರಿತು ಎಫ್‍ಐಆರ್ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

    ಕಳೆದ ತಿಂಗಳು ಎಮ್‍ಎಂಡಿಎ ಕಾಲೋನಿಯ ಅಡ್ಡ ರಸ್ತೆಯಲ್ಲಿ ನಾಯಿಮರಿಗಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಒಂದು ತಿಂಗಳ ಅಂತರದಲ್ಲಿ ಮತ್ತೆ ಖಾಲಿ ಪ್ರದೇಶದಲ್ಲಿ ನಾಯಿಮರಿಗಳಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆರೋಪಿ ಅಲ್ಲಿಂದ ಓಡಿಹೋಗಿದ್ದನು. ನಾನು ದೂರು ಸಲ್ಲಿಸುವವರೆಗೂ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವಿಘ್ನೇಶ್ ಹೇಳಿದ್ದಾರೆ.

    https://www.facebook.com/almightyanimalcaretrust/posts/1247765012041725

    ಈ ಬಗ್ಗೆ ವಿಘ್ನೇಶ್ ಅವರು ಎರಡು ವಾರಗಳ ಹಿಂದೆಯೇ Almighty Animal Care Trust ಎಂಬ ಫೇಸ್‍ಬುಕ್ ಪೇಜಿನಲ್ಲಿ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿದ್ದರು. ಆರೋಪಿ ಭಾಸ್ಕರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾಗ ಸಾಕ್ಷಿಗಾಗಿ ಆ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ಆರೋಪಿಯ ಕೃತ್ಯ ಸೆರೆಯಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಇನ್ನೋವಾ ಕಾರಿನಲ್ಲಿ ಬಂದು ನಾಯಿ ಕಳ್ಳತನ!

    ಇನ್ನೋವಾ ಕಾರಿನಲ್ಲಿ ಬಂದು ನಾಯಿ ಕಳ್ಳತನ!

    ರಾಮನಗರ: ಇನ್ನೋವಾ ಕಾರಿನಲ್ಲಿ ಬಂದ ಕಳ್ಳರು ಮನೆಯ ಮುಂದೆ ಆಟವಾಡುತ್ತಿದ್ದ ನಾಯಿ ಮರಿಯನ್ನು ಕದ್ದೋಯ್ದ ಘಟನೆ ಇಲ್ಲಿನ ಭುವನೇಶ್ವರಿ ನಗರದಲ್ಲಿ ನಡೆದಿದೆ.

    ಭುವನೇಶ್ವರಿ ನಗರದ ನಿವಾಸಿ ಹರ್ಷ ಎಂಬವರಿಗೆ ಸೇರಿದ್ದ 25 ಸಾವಿರ ರೂ. ಮೌಲ್ಯದ ಸಿಟ್ಜ್ ನಾಯಿಮರಿಯನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಮಾಲೀಕರು ಘಟನೆ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಏನಿದು ಪ್ರಕರಣ?:
    ಹರ್ಷ ಅವರ ಮನೆಯ ಮುಂದೆ ಇದೇ ತಿಂಗಳ 16ರಂದು ರಾತ್ರಿ ಸಿಟ್ಜ್ ನಾಯಿಮರಿ ಆಟವಾಡುತ್ತಿತ್ತು. ಈ ವೇಲೆ ಇಲ್ಲಿಗೆ ಇನೋವಾ ಕಾರಿನಲ್ಲಿ ಬಂದಿದ್ದ ಕಳ್ಳರು, ನಾಯಿಮರಿಯನ್ನು ಕದ್ದು ಪರಾರಿಯಾಗಿದ್ದಾರೆ. ನಾಯಿಮರಿ ಕಾಣೆಯಾಗಿದ್ದರಿಂದ ಮಾಲೀಕ ಹರ್ಷ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳ್ಳರ ಕೃತ್ಯ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೈಲು ಹರಿದರೂ, ಯಾವುದೇ ಚಿಂತೆ ಇಲ್ಲದೇ ಹಳಿಯಿಂದ ಎದ್ದು ಹೋದ ನಾಯಿಮರಿ- ವೈರಲ್ ವಿಡಿಯೋ ನೋಡಿ

    ರೈಲು ಹರಿದರೂ, ಯಾವುದೇ ಚಿಂತೆ ಇಲ್ಲದೇ ಹಳಿಯಿಂದ ಎದ್ದು ಹೋದ ನಾಯಿಮರಿ- ವೈರಲ್ ವಿಡಿಯೋ ನೋಡಿ

    ಮಂಗಳೂರು: ಅದೃಷ್ಟ ಇದ್ದರೆ ರೈಲಿನಡಿಗೆ ಬಿದ್ದರೂ ಬದುಕಿ ಬರಬಹುದು ಎನ್ನುವುದಕ್ಕೆ ನೈಜ ನಿದರ್ಶನ ಆಗುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

    ಪುತ್ತೂರಿನ ಕಬಕ ರೈಲು ನಿಲ್ದಾಣದ ಬಳಿ ನಾಯಿ ಮರಿಯೊಂದು ಹಳಿ ಮೇಲೆ ಹೋಗುತ್ತಿದ್ದಾಗ ರೈಲು ಅದೇ ಟ್ರಾಕ್ ಮೇಲೆ ಆಗಮಿಸಿದೆ. ರೈಲು ನಾಯಿ ಮರಿಯ ಮೇಲೆಯೇ ಹರಿದು ಹೋಗಿದೆ. ಆದರೆ ನಾಯಿಮರಿ ಭಯದಿಂದಲೇ ಹಳಿಯ ಮಧ್ಯಭಾಗದಲ್ಲಿ ಕುಂಟುತ್ತಾ ನಡೆಯತೊಡಗಿದೆ. ಸ್ವಲ್ಪ ಮುಂದೆ ಹೋಗಿ, ಹಳಿಯ ನಡುವಿನ ಖಾಲಿ ಜಾಗದಲ್ಲಿ ಮಲಗಿದ್ದು, ರೈಲಿನ ಅಷ್ಟೂ ಬೋಗಿಗಳು ತನ್ನ ಮೇಲಿಂದ ಹಾದುಹೋಗುವವರೆಗೂ ಮಲಗಿಬಿಟ್ಟಿತ್ತು.

    ಕೊನೆಗೆ ರೈಲು ಹೋಯಿತು ಎನ್ನುವಷ್ಟರಲ್ಲಿ, ಬದುಕಿದೆಯಾ ಬಡ ಜೀವ ಅನ್ನುವಂತೆ ಅಲ್ಲಿಂದ ಓಡಿ ಹೋಗಿದೆ. ಈ ಘಟನೆಯಲ್ಲಿ ನಿಲ್ದಾಣದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=nz5hHbk_l4Y

  • ಮೋರಿಗೆ ಎಸೆದಿದ್ದ ನಾಯಿ ಮರಿಗೆ ಆಸರೆಯಾದ ರೆಬಲ್!

    ಮೋರಿಗೆ ಎಸೆದಿದ್ದ ನಾಯಿ ಮರಿಗೆ ಆಸರೆಯಾದ ರೆಬಲ್!

    -ವಾಕಿಂಗ್ ಬಂದಿದ್ದಾಗ ನಾಯಿಮರಿಯನ್ನು ರಕ್ಷಿಸಿ ಮಾಲೀಕನಿಗೆ ನೀಡಿದ ಶ್ವಾನ

    ಬೆಂಗಳೂರು: ಆಗತಾನೇ ಹುಟ್ಟಿದ ಬೀದಿನಾಯಿಮರಿಯನ್ನು ಗೋಣಿಚೀಲದಲ್ಲಿ ಕಟ್ಟಿ ಮೋರಿಗೆ ಎಸೆದ ಪಾಪಿಗಳಿಗೆ ಮೂಕಪ್ರಾಣಿಯೊಂದು ಅದನ್ನು ಬದುಕಿಸಿ ಪ್ರೀತಿ ಕಲಿಸಿದ ರೋಚಕ ಘಟನೆ ಕುರುಬರಹಳ್ಳಿಯಲ್ಲಿ ನಡೆದಿದೆ.

    ಹೌದು. ಆಗ ತಾನೆ ಅಮ್ಮನ ಗರ್ಭದಿಂದ ಹೊರಬಂದಿದ್ದ ನಾಯಿ ಮರಿಗೆ ಹೊಟ್ಟೆ ಹಸಿವು ಹೊಸ ಪ್ರಪಂಚ ಏನು ಗೊತ್ತಾಗುತ್ತಿರಲಿಲ್ಲ. ಅಮ್ಮನ ಮಡಿಲಿಗೆ ತಡಕಾಡುತ್ತಿತ್ತು. ಆದರೆ ಮರಿಗೆ ಅಮ್ಮ ಯಾಕೆ ಸಿಗುತ್ತಿರಲಿಲ್ಲ. ಹಾಲು ಬೇಕು ಆದ್ರೇ ಅಮ್ಮನ ಕೂಗೋಣ ಅಂದರೆ ಗಂಟಲಿನಿಂದ ಸ್ವರನೇ ಹೊರಬರುತ್ತಿರಲಿಲ್ಲ. ಅಷ್ಟರಲ್ಲಿ ಅದ್ಯಾರೋ ನಾಯಿ ಮರಿಯನ್ನು ಎತ್ತುಕೊಂಡ್ರು. ನಾಯಿ ಮರಿ ನಂಗಿನ್ನು ಕಣ್ಣುಬಿಡೋಕೆ ಆಗಿತ್ತಿಲ್ಲ ಅದಕ್ಕೆ ಇವರು ನನ್ನ ಎತ್ತು ಕೊಂಡಿದ್ದಾರೆ ಎಂದು ಭಾವಿಸಿಕೊಂಡಿದೆ. ಆದರೆ ಅಮ್ಮನ ಹಾಲು ಕುಡಿಯುವ ಭಾಗ್ಯವೂ ಇಲ್ಲದ ನಾಯಿ ಮರಿಯನ್ನು ಆ ಮನುಷ್ಯ ಚೀಲದೊಳಗೆ ಹಾಕಿಕೊಂಡು ಎಲ್ಲೋ ಕರೆದುಕೊಂಡು ಹೋದನು.

    ಚೀಲದಲ್ಲಿ ಕಟ್ಟಿದ್ದರಿಂದ ನಾಯಿ ಮರಿಗೆ ಉಸಿರಾಡಲು ಅಸಾಧ್ಯವಾಗಿತ್ತು. ಅಲ್ಲದೇ ಗಬ್ಬುನಾಥ ಬೀರೋ ಮೋರಿ ಪಕ್ಕ ಎಸೆದು ಹೋಗಿದ್ದರು. ಪಾಪ ನಾಯಿ ಮರಿ ಅಮ್ಮನ ನೆನೆದು ನಾನೇನು ತಪ್ಪು ಮಾಡ್ದೆ ಅಂತಾ ಎಸೆದುಹೋಗಿದ್ದಾರೆ. ನಂಗೆ ಯಾಕೆ ಹಿಂಸೆ ಕೊಡ್ತಿದ್ದಾರೆ ಎಂದು ಪರಿತಪಿಸುತ್ತಿತ್ತು. ಅಷ್ಟರಲ್ಲಿ ಮರಿಗೆ ಹೊಸ ಅಮ್ಮನಾಗಿ ಈ ಕ್ಯೂಟ್ ರೆಬಲ್ ಬಂದಿದೆ. ಮಾಲೀಕನೊಂದಿಗೆ ಮರಿಯನ್ನು ಎಸೆದ ದಾರಿಯಲ್ಲಿಯೇ ವಾಕಿಂಗ್ ಬಂದ ರೆಬಲ್ ಅದ್ಯಾಗೋ ಏನೋ ನಾಯಿ ಮರಿಯ ಬಳಿ ಬಂದಿದೆ. ಅವನದು ಅಮ್ಮನ ಮನಸು ಅನಿಸುತ್ತೆ. ನಾಯಿ ಮರಿಯನ್ನು ಕಚ್ಚಿ ಕೊಂದು ಬಿಡ್ತಾನೆ ಎಂದು ಅನ್ನಿಸುತ್ತಿತ್ತು. ಆದರೆ ರೆಬಲ್ ಮೆಲ್ಲನೆ ಮರಿಯನ್ನು ಗೋಣಿಚೀಲ ಬಾಯಲ್ಲಿ ಕಚ್ಚಿ ಮೋರಿಯಿಂದ ಹೊರತಂದು ದೂರದಲ್ಲಿ ನಿಂತಿದ್ದ ಆತನ ಮಾಕಲೀಕನಿಗೆ ತಂದೊಪ್ಪಿಸುತ್ತದೆ.

    ನಾಯಿಮರಿಯನ್ನು ಬದುಕಿಸಿದ ರೆಬಲ್ ಈಗ ಅದಕ್ಕೆ ತಾಯಿಯಾಗಿದೆ. ಮರಿಯನ್ನು ಹಾಲು ಕುಡಿಯದಂತೆ ಬೀದಿಲಿ ಎಸೆದ ಮಾನವೀಯತೆ ಮರೆತ ಮನುಷ್ಯ ಜೀವಗಳಿಗೆ ರೆಬಲ್ ಚಾಟಿಬೀಸಿದ್ದಾನೆ. ಮರಿಯನ್ನು ಪರಮೇಶ್ ಎಂಬವರು ಸಾಕ್ತೀನಿ ಅಂತಾ ಮುಂದೆ ಬಂದಿದ್ದಾರೆ. ಮರಿಗೆ ಅಮ್ಮನ ನೆನಪಾದ್ರೂ ಮುದ್ದು ಮುದ್ದಾಗಿ ಆಡುವ ರೆಬಲ್ ಎಲ್ಲವನ್ನು ಮರೆಸುತ್ತಾನೆ. ಇದೀಗ ಬ್ರೀಡ್ ನಾಯಿ ರೆಬಲ್, ಬೀದಿನಾಯಿಮರಿಗೆ ಆಸರೆಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪಘಾತದಲ್ಲಿ ಸಾವನ್ನಪ್ಪಿದ ಮರಿಯ ಬಳಿ ರೋಧಿಸಿದ ತಾಯಿ ನಾಯಿ

    ಅಪಘಾತದಲ್ಲಿ ಸಾವನ್ನಪ್ಪಿದ ಮರಿಯ ಬಳಿ ರೋಧಿಸಿದ ತಾಯಿ ನಾಯಿ

    ತುಮಕೂರು: ತನ್ನ ಮರಿಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದನ್ನು ಕಂಡ ತಾಯಿ ನಾಯಿ ವೇದನೆ ಪಟ್ಟ ಮನಕಲಕುವ ಘಟನೆ ತುಮಕೂರಿನಲ್ಲಿ ನಡೆದಿದೆ.

    ನಗರದ ಹನುಮಂತಪುರದಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಯಿ ಮರಿಯೊಂದು ಸಾವನಪ್ಪಿತ್ತು. ಇದನ್ನು ಕಂಡ ತಾಯಿ ನಾಯಿ ತನ್ನ ಮರಿಯ ಮೈ ಸವರಿ ಒಂದೇ ಸಮನೆ ರೋಧಿಸಿದೆ. ನಡುರಸ್ತೆಯಲ್ಲಿ ಬಿದ್ದ ಮೃತದೇಹವನ್ನು ಬೇರೆಡೆ ಸಾಗಿಸಿ ತಾಯಿ ನಾಯಿ ಪ್ರಯತ್ನಿಸುತ್ತಿತ್ತು. ಹಾಗಾಗಿ ತನ್ನ ಇತರ ಬಳಗವನ್ನು ಕರೆದಿದ್ದು, ಸಾಧ್ಯವಾಗಲಿಲ್ಲ.

    ನಾಯಿಯ ಕಷ್ಟ ಕಂಡ ಪೀಟರ್ ಎಂಬವರು ನಾಯಿಮರಿಯ ಮೃತದೇಹವನ್ನು ಬೇರೆಡೆ ಸಾಗಿಸಿದ್ದಾರೆ. ಆಗ ತಾಯಿ ನಾಯಿ ಮೃತದೇಹದ ಹಿಂದೆ ಓಡಿಹೋಗುತ್ತಿದ್ದುದು ಕಂಡರೆ ಹೆತ್ತಕರುಳಿನ ನೋವಿನ ಅರಿವಾಗುತ್ತಿತ್ತು.

  • ಮೊಸಳೆಗಳಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದ ಕ್ರೂರಿ

    ಮೊಸಳೆಗಳಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದ ಕ್ರೂರಿ

    ಜಕಾರ್ತಾ: ನಿರ್ದಯಿ ವ್ಯಕ್ತಿಯೊಬ್ಬ ಮೊಸಳೆಗಳಿಂದ ತುಂಬಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ ಎನ್ನಲಾಗಿದೆ.

    ವ್ಯಕ್ತಿ ಬ್ಯಾಗಿನಿಂದ ನಾಯಿಮರಿಯನ್ನ ತೆಗೆದುಕಂಡು ನದಿಯ ಕಡೆಗೆ ಹೋಗಿದ್ದಾನೆ. ಆತ ನಾಯಿಮರಿಯ ಕತ್ತನ್ನು ಹಿಡಿದುಕೊಂಡಿದ್ದು, ಹಿಂದೆ ಇದ್ದವರು ನಗುತ್ತಾ, ಕೂಗಾಡುತ್ತಾ ಆತನನ್ನು ಪ್ರೋತ್ಸಾಹಿಸಿದ್ದಾರೆ. ನಂತರ ಆ ವ್ಯಕ್ತಿ ನಾಯಿಮರಿಯನ್ನ ಕೆರೆಯೊಳಗೆ ಎಸೆದಿದ್ದಾನೆ. ನಾಯಿಮರಿ ಒದ್ದಾಡುತ್ತಾ ದಡದ ಕಡೆಗೆ ಈಜಲು ಯತ್ನಿಸಿದೆ. ಆದ್ರೆ ಅದರ ಪುಟ್ಟ ಕಾಲಿನಿಂದ ಈಜಲು ಸಾಧ್ಯವಾಗಿಲ್ಲ. ನಂತರ ಮೊಸಳೆಯೊಂದು ಬಂದು ನಾಯಿಮರಿಯನ್ನ ತಿಂದಿದೆ.

    ನಾಯಿಮರಿಯನ್ನ ಕೆರೆಗೆ ಎಸೆದ ವ್ಯಕ್ತಿ ಯಾರು ಹಾಗೂ ಆತ ಈ ರೀತಿ ಮಾಡಿದ್ದು ಯಾಕೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಅಮಾನವೀಯವಾಗಿ ನಾಯಿಮರಿಯನ್ನ ಮೊಸಳೆ ಬಾಯಿಗೆ ಕೊಟ್ಟ ಆತನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಕಿಡಿ ಕಾರಿದ್ದಾರೆ.

    https://www.youtube.com/watch?v=bb4HkBQdeTg

  • ಮೃತ ಪತ್ನಿಯನ್ನ ಬದುಕಿಸ್ತೀನೆಂದು ನಾಯಿಮರಿ, ಹಾವುಗಳನ್ನ ತಿನ್ನುತ್ತಿದ್ದ ವೃದ್ಧ

    ಮೃತ ಪತ್ನಿಯನ್ನ ಬದುಕಿಸ್ತೀನೆಂದು ನಾಯಿಮರಿ, ಹಾವುಗಳನ್ನ ತಿನ್ನುತ್ತಿದ್ದ ವೃದ್ಧ

    ಲಕ್ನೋ: ವೃದ್ಧ ವ್ಯಕ್ತಿಯೊಬ್ಬ ತನ್ನ ಮೃತ ಹೆಂಡತಿಯನ್ನ ಬುದುಕಿಸುತ್ತೀನಿ ಅಂತ ನಾಯಿಮರಿ ಹಾಗೂ ಹಾವುಗಳನ್ನ ತಿನ್ನುತ್ತಿದ್ದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ನಾಯಿ ಮತ್ತು ಹಾವನ್ನು ತಿನ್ನುತ್ತೇನೆಂದು ಹೇಳಿದ ವೃದ್ಧನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಉತ್ತರಪ್ರದೇಶದ ಜಗದೀಶ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿಕಾಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ನೌರಂಗಿ ಲಾಲ್ ಎಂಬ ಹೆಸರಿನ ಬಾಬಾ ಕೆಲ ಸಮಯದಿಂದ ಇಲ್ಲಿನ ಬೀದಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ. ನಾಯಿಗಳನ್ನ ಬಲಿ ಕೊಟ್ಟು ಅದರ ಮಾಂಸವನ್ನ ತಿನ್ನುತ್ತಿದ್ದ. ಈ ರೀತಿ ಮಾಡೋದ್ರಿಂದ ನನಗೆ ಶಕ್ತಿ ಬರುತ್ತದೆ. ನಾನು ಹಾವುಗಳನ್ನೂ ಕೂಡ ತಿಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಈವರೆಗೆ ಈತ ನಾಲ್ಕು ನಾಯಿಮರಿಗಳನ್ನ ತಿಂದಿದ್ದಾನೆ. ಗುಡಿಸಲಿನಲ್ಲಿ ನಾಯಿಮರಿಗಳನ್ನ ಸುಟ್ಟಿರುವುದು ಪತ್ತೆಯಾಗಿದೆ.

    ವ್ಯಕ್ತಿಯ ಬಾಯಿಯಿಂದ ಈ ಮಾತುಗಳು ಹೊರಬರುತ್ತಿದ್ದಂತೆ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾರ್ವಜನಿಕರು ಬಾಬಾ ನ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ.

    ಈ ಬಗ್ಗೆ ಮನೋವೈದ್ಯರೊಬ್ಬರು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೆಲವೊಮ್ಮೆ ಒಂಟಿಯಾಗಿರುವವರು ತಮ್ಮ ಕಲ್ಪನಾ ಲೋಕದಲ್ಲಿ ಜೀವಿಸುತ್ತಿರುತ್ತಾರೆ. ನೈಜ ಜಗತ್ತಿಗೂ ತಮ್ಮ ಮನಸ್ಸಿನಲ್ಲಿ ನಿರ್ಮಿಸಿಕೊಂಡಿರುವ ಕಲ್ಪನಾ ಜಗತ್ತಿಗೂ ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುತ್ತಾರೆ. ಇಂತಹವರಿಗೆ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.

    ಆರೋಪಿ ವ್ಯಕ್ತಿಯ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಸದ್ಯ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಪ್ರಕರಣದ ಸಂಬಂಧ ತಜ್ಞ ವೈದ್ಯರನ್ನ ಸಂಪರ್ಕಿಸಿದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.