Tag: ನಾಯಕ ವಿರಾಟ್ ಕೊಹ್ಲಿ

  • ಸೋಲು, ಗೆಲುವು ಜೀವನದ ಒಂದು ಭಾಗ – ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ ಸಂದೇಶ

    ಸೋಲು, ಗೆಲುವು ಜೀವನದ ಒಂದು ಭಾಗ – ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ ಸಂದೇಶ

    ನವದೆಹಲಿ: 2019ರ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿರುವ ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ರವಾನಿಸಿದ್ದಾರೆ. ಸೋಲು ಗೆಲುವು ಜೀವನದ ಒಂದು ಭಾಗ ಎಂದು ಹೇಳಿಸುವ ಪ್ರಧಾನಿಗಳು ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಆಟಗಾರರ ಕಠಿಣ ಶ್ರಮವನ್ನು ಪ್ರಶಂಸಿರುವ ಮೋದಿ ಅವರು, ಇಂದಿನ ಪಂದ್ಯದಲ್ಲಿ ಬೇಸರದ ಫಲಿತಾಂಶ ಲಭಿಸಿದೆ. ಆದರೆ ಪಂದ್ಯದ ಅಂತಿಮ ಕ್ಷಣದವರೆಗೂ ಆಟಗಾರರು ತೋರಿದ ಹೋರಾಟ ಸ್ಫೂರ್ತಿ ನೀಡುತ್ತದೆ. ಇಡೀ ಟೂರ್ನಿಯಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹೆಮ್ಮೆ ಎನಿಸಿದೆ. ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಶುಭವಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

    ಇತ್ತ ನಾಯಕ ವಿರಾಟ್ ಕೊಹ್ಲಿ ಅವರು ಕೂಡ ಟ್ವೀಟ್ ಮಾಡಿದ್ದು, ತಂಡಕ್ಕೆ ಬೆಂಬಲ ನೀಡಿದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಗೆಲುವು ಪಡೆಯಲು ಸಂಪೂರ್ಣ ಪ್ರಯತ್ನ ಹಾಕಿದ್ದು, ಫಲಿತಾಂಶದಿಂದ ನಿಮ್ಮಂತೆಯೇ ನಾವೆಲ್ಲರೂ ನಿರಾಸೆಗೊಂಡಿದ್ದೇವೆ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 45 ನಿಮಿಷಗಳ ಕೆಟ್ಟ ಪ್ರದರ್ಶನಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂತು ಎಂದಿದ್ದಾರೆ. ಅಲ್ಲದೇ ನ್ಯೂಜಿಲೆಂಡ್ ಆಟಗಾರರು ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.

  • ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ಪ್ರಯಾಸ್ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದು, ಆ ಮೂಲಕ ಐಪಿಎಲ್ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪ್ರಯಾಸ್ ಪಾದಾರ್ಪಣೆ ಮಾಡಿದ್ದಾರೆ. 16 ವರ್ಷ 157 ದಿನಗಳ ವಯಸ್ಸಿಗೆ ಪ್ರಯಾಸ್ ಐಪಿಎಲ್ ಆಡುವ ಅವಕಾಶ ಪಡೆದಿದ್ದು, ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ರೆಹಮಾನ್ ಯಂಗೆಸ್ಟ್ ಪ್ಲೇಯರ್ ಎಂಬ ಹೆಗ್ಗಳಿಕೆ ಪಡೆದಿದ್ದರು.

    ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ತಂಡದಲ್ಲಿ ಬದಲಾವಣೆ ಮಾಡುವ ಮೂಲಕ ಪ್ರಯಾಸ್‍ಗೆ ಅವಕಾಶ ನೀಡಿ, ಉತ್ತಮ ಆಟಗಾರ ಎಂದು ಹೇಳಿದ್ದಾರೆ. ಅಂದಹಾಗೇ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಪ್ರಯಾಸ್ ರೇ ಬರ್ಮನ್‍ರನ್ನ ಬರೋಬ್ಬರಿ 1.5 ಕೋಟಿ ರೂ ನೀಡಿ ಆರ್ ಸಿಬಿ ಖರೀದಿ ಮಾಡಿತ್ತು.

    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದರು. ‘ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

    ಇದುವರೆಗೂ 9 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿರುವ ಪ್ರಯಾಸ್ ಯಾವುದೇ ವಿಕೆಟ್ ಪಡೆಯದೆ 56 ರನ್ ನೀಡಿದ್ದರು.

  • ಅನುಷ್ಕಾ ಜೊತೆಗಿರುವ ಫೋಟೋ ಹಾಕಿ ನಾವು ಹೋಗಿ ಬರುತ್ತೇವೆ ಎಂದ ವಿರಾಟ್ ಕೊಹ್ಲಿ

    ಅನುಷ್ಕಾ ಜೊತೆಗಿರುವ ಫೋಟೋ ಹಾಕಿ ನಾವು ಹೋಗಿ ಬರುತ್ತೇವೆ ಎಂದ ವಿರಾಟ್ ಕೊಹ್ಲಿ

    ಮೌಂಟ್ ಮೌಂಗಾನೆ: ನ್ಯೂಜಿಲೆಂಡ್ ವಿರುದ್ಧ 3-0 ಸರಣಿ ಸಾಧಿಸಿ, ಜಯದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಪ್ರವಾಸ ಆರಂಭಿಸಿದ್ದಾರೆ.

    2 ಏಕದಿನ ಮತ್ತು ಟಿ 20 ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಎರಡು ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಸೋಮವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 74 ಎಸೆತ ಎದುರಿಸಿ 6 ಬೌಂಡರಿ, 1 ಸಿಕ್ಸರ್ ಸಿಡಿಸುವ ಮೂಲಕ 60 ರನ್‍ಗಳನ್ನು ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ನ್ಯೂಜಿಲೆಂಡ್ ಗೆಲ್ಲಲು 244 ರನ್ ಗಳ ಗುರಿಯನ್ನು ಪಡೆದ ಭಾರತ 3 ವಿಕೆಟ್ ನಷ್ಟಕ್ಕೆ 245 ರನ್ ಹೊಡೆದು 7 ವಿಕೆಟ್ ಗಳಿಂದ ಗೆದ್ದು ಸಂಭ್ರಮಿಸಿತ್ತು.

    ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿ ಗೆಲುವು ಸಾಧಿಸಿದ್ದರಿಂದ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಹೀಗಾಗಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಇರುವ ಫೋಟೋ ಹಾಕಿ, ನಾವು ಹೋಗಿ ಬರುತ್ತೇವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಿವೀಸ್‍ನಲ್ಲಿ ಟೀಂ ಇಂಡಿಯಾಗೆ ಅಗ್ನಿ ಪರೀಕ್ಷೆ

    ಕಿವೀಸ್‍ನಲ್ಲಿ ಟೀಂ ಇಂಡಿಯಾಗೆ ಅಗ್ನಿ ಪರೀಕ್ಷೆ

    ಆಕ್ಲೆಂಡ್: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಸೀಸ್ ಸರಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಸದ್ಯ ನ್ಯೂಜಿಲೆಂಡ್ ಸವಾಲು ಎದುರಿಸಲು ಸಿದ್ಧತೆ ನಡೆಸಿದೆ.

    ನ್ಯೂಜಿಲೆಂಡ್ ವಿರುದ್ಧ 5 ಏಕದಿನ ಪಂದ್ಯಗಳ ಟೂರ್ನಿ ಬುಧವಾರದಿಂದ ಆರಂಭವಾಲಿದ್ದು, ಟೀಂ ಇಂಡಿಯಾ ನೇರ ಆಸ್ಟ್ರೇಲಿಯಾದಿಂದ ಕಿವೀಸ್‍ಗೆ ಸೋಮವಾರ ಬಂದಿಳಿದಿದೆ. ಏಕದಿನ ಸರಣಿಯ ಬಳಿಕ 3 ಪಂದ್ಯಗಳ ಟಿ20 ಸರಣಿ ಫೆಬ್ರವರಿ 6ರಿಂದ ಆರಂಭವಾಗಲಿದೆ.

    ಟೀಂ ಇಂಡಿಯಾ ತಂಡದಲ್ಲಿ ಆರಂಭಿಕರಾದ ಧವನ್, ರೋಹಿತ್ ಶರ್ಮಾ ಸೇರಿದಂತೆ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಶಕ್ತಿ ತುಂಬಲಿದ್ದಾರೆ. ಇದರೊಂದಿಗೆ ಮಾಜಿ ನಾಯಕ ಎಂಎಸ್ ಧೋನಿ ಆಸೀಸ್ ಸರಣಿಯಲ್ಲಿ ಬ್ಯಾಟಿಂಗ್ ಫಾರ್ಮ್‍ಗೆ ಮರಳಿರುವುದು ತಂಡದ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

    ಕಿವೀಸ್ ಸವಾಲು: ನ್ಯೂಜಿಲೆಂಡ್ ತಂಡ ಇತ್ತೀಚೆಗೆ ಆಡಿದ ಶ್ರೀಲಂಕಾ ಟೂರ್ನಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಅಲ್ಲದೇ ಕಳೆದ 19 ಏಕದಿನ ಪಂದ್ಯಗಳಲ್ಲಿ 14 ಜಯಗಳಿಸಿದ್ದರೆ, 4ರಲ್ಲಿ ಮಾತ್ರ ಸೋಲುಂಡಿದೆ. ಒಂದು ಪಂದ್ಯ ರದ್ದಾಗಿದೆ. ಇತ್ತ ಆಸ್ಟ್ರೇಲಿಯಾ ತಂಡದ ಒಳಗಿನ ಗೊಂದಲಗಳು ತಂಡದ ಪ್ರದರ್ಶನದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡಿತ್ತು. ಆದರೆ ಕಿವೀಸ್ ತಂಡ ಬಲಿಷ್ಠವಾಗಿದ್ದು, ಕೊಹ್ಲಿ ನಾಯಕತ್ವದ ಯುವ ಪಡೆ ಕಠಿಣ ಸವಾಲು ಎದುರಿಸಬೇಕಿದೆ.

    2014 ರಲ್ಲಿ ಕಿವೀಸ್ ಪ್ರವಾಸ ಮಾಡಿದ್ದ ಟೀ ಇಂಡಿಯಾ ಏಕದಿನ ಸರಣಿಯಲ್ಲಿ 0-4 ಅಂತರದಿಂದ ಸೋಲು ಕಂಡಿತ್ತು. ಸರಣಿಯಲ್ಲಿ 1 ಪಂದ್ಯ ಮಾತ್ರ ಟೈ ಆಗಿತ್ತು. ಅಲ್ಲದೇ ಕೀವಿಸ್ ನೆಲದಲ್ಲಿ 35 ಏಕದಿನ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಕೇವಲ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಿವೀಸ್ ಆಟಗಾರರ ಬಗ್ಗೆ ಎಚ್ಚರಿಕೆ ಮನೋಭಾವ ಹೊಂದಿದ್ದು, ಕಳೆದ ಕೆಲ ವರ್ಷಗಳಿಂದ ಕಿವೀಸ್ ಸ್ಥಿರ ಪ್ರದರ್ಶನವನ್ನು ನೀಡುತ್ತಿದ್ದು, ಪಂದ್ಯ ಸ್ಪರ್ಧಾತ್ಮಕವಾಗಿರಲಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

    ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದು ಪ್ರಮುಖ ಹಿನ್ನಡೆಯಾಗಿದ್ದು, ಕಳೆದ 9 ಪಂದ್ಯಗಳಲ್ಲಿ ಧವನ್ ಕೇವಲ 35 ರನ್ ಮಾತ್ರ ಸಿಡಿಸಿದ್ದಾರೆ. ಅಲ್ಲದೇ ಹಾರ್ದಿಕ್ ಪಾಂಡ್ಯ ಅಮಾನತಿನಲ್ಲಿರುವುದು ಕೂಡ ತಂಡಕ್ಕೆ ಸಮಸ್ಯೆ ಆಗಿದೆ. ಇತ್ತ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿಗೆ ಯುವ ಬೌಲರ್ ಗಳಾದ ಮೊಹಮ್ಮದ್ ಸಿರಾಜ್ ಅಥವಾ ಖಲೀಲ್ ಅಹ್ಮದ್ ಸಾಥ್ ನೀಡಲಿದ್ದಾರೆ.

    ಇತ್ತ ಕಿವೀಸ್ ತಂಡ ಬಲಿಷ್ಠ ಆರಂಭಿಕರನ್ನು ಹೊಂದಿದ್ದು, ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ನಲ್ಲಿಯೂ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಲಾಕೀ ಫೆರ್ಗುಸೊನ್ ಉತ್ತಮ ಲಯದಲ್ಲಿದ್ದಾರೆ.

    ಇತ್ತಂಡಗಳು ಇಂತಿದೆ:
    ಇಂಡಿಯಾ : ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಶಿಖರ್ ಧವನ್, ಎಂಎಸ್ ಧೋನಿ, ಕೇದರ್ ಜಾಧವ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಖಲೀಲ್ ಅಹ್ಮದ್, ರವೀಂದ್ರ ಜಡೇಜಾ, ವಿಜಯ್ ಶಂಕರ್, ಸುಭ ಮನ್ ಗಿಲ್.

    ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಟಾಮ್ ಲ್ಯಾಥಂ, ಮಾರ್ಟಿನ್ ಗುಪ್ಟಿಲ್, ಮ್ಯಾಟ್ ಹೆನ್ರಿ, ಕಾಲಿನ್ ಮನ್ರೊ, ಹೆನ್ರಿ ನಿಕೋಲಸ್, ಮಿಚೆಲ್ ಸ್ಯಾಂಟ್ನಾರ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್ಹೋಮ್, ಡೌಗ್ ಬ್ರೇಸ್ವೆಲ್, ಲಾಕೀ ಫೆರ್ಗುಸೊನ್.

    ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 7.30ಕ್ಕೆ ಆರಮಭವಾದರೆ, ಟಿ20 ಪಂದ್ಯಗಳು ಮಧ್ಯಾಹ್ನ 12.30 ರಿಂದ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳಿಗೆ ಫಿಟ್‍ನೆಸ್ ಟಿಪ್ಸ್ ಹೇಳಿಕೊಟ್ಟ ಕೊಹ್ಲಿ

    ಅಭಿಮಾನಿಗಳಿಗೆ ಫಿಟ್‍ನೆಸ್ ಟಿಪ್ಸ್ ಹೇಳಿಕೊಟ್ಟ ಕೊಹ್ಲಿ

    ನವದೆಹಲಿ: ಇತ್ತೀಚೆಗೆ ಫಿಟ್‍ನೆಸ್ ಚಾಲೆಂಜ್ ಸ್ವೀಕರಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಅಭಿಮಾನಿಗಳಿಗೆ ಫಿಟ್ ನೆಸ್ ಟಿಪ್ಸ್ ಹೇಳಿಕೊಟ್ಟಿದ್ದಾರೆ.

    ಶುಕ್ರವಾರ ಮಧ್ಯಾಹ್ನ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು, ಸದಾ ಫಿಟ್ ಆಗಿರಲು ಏನೂ ಬೇಕಾದರೂ ಮಾಡುವ ನನಗೆ, ನನ್ನ ನೆಚ್ಚಿನ ಲಿಫ್ಟ್ ಮಾಡಲು ಹಾತೊರೆಯುತ್ತೇನೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ಕೊಹ್ಲಿ ಪವರ್ ಲಿಫ್ಟ್ ಮಾಡಿದ್ದು, ಅಪ್ಲೋಡ್ ಆದ 4 ಗಂಟೆಯಲ್ಲೇ ವಿಡಿಯೋ 7.32 ಲಕ್ಷ ಲೈಕ್ಸ್ ಪಡೆದುಕೊಂಡಿದೆ.

    ವಿಂಡೀಸ್ ಟೂರ್ನಿಯಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಕೊಹ್ಲಿ ಹ್ಯಾಟ್ರಿಕ್ ಶತಕ, ಒಟ್ಟು 453 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 899 ಅಂಕಗಳೊಂದಿಗೆ ಕೊಹ್ಲಿ ಮೊದಲ ಸ್ಥಾನ ಪಡೆದಿದ್ದು, ರೋಹಿತ್ ಶರ್ಮಾ 871 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರ ನಡುವೆ 64 ಅಂಕಗಳ ವ್ಯತ್ಯಾಸವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BprCnRLABic/