Tag: ನಾಯಕರು

  • ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ: ಸಿ.ಟಿ ರವಿ ಕಿಡಿ

    ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ: ಸಿ.ಟಿ ರವಿ ಕಿಡಿ

    ಚಿಕ್ಕಮಗಳೂರು: ಹೊಟ್ಟೆಯೊಳಗೆ ವಿಷ ಇಟ್ಕೊಂಡಿರೋ ಎರಡು ಪಕ್ಷ ಒಟ್ಟಾಗಿ ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಂಡು ಈಗ ಬಿಜೆಪಿಯನ್ನೇ ದೋಷಿಸುತ್ತಿದ್ದಾರೆ ಅಂತ ಶಾಸಕ ಸಿ.ಟಿ ರವಿ ಮೈತ್ರಿ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೈತ್ರಿ ಸರ್ಕಾರ ಜನ ಬಯಸಿದ್ದಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ನೀಚ ಮುಖ್ಯಮಂತ್ರಿ ಅಂತ ಹೇಳಿದ್ದರು. ನಾನು ಎಂದಿಗೂ ಸಿದ್ದರಾಮಯ್ಯಗೆ ಆ ರೀತಿ ಹೇಳುವುದಿಲ್ಲ. ರಾಜಕೀಯವಾಗಿ ವಿರೋಧ ಇರಬಹುದು ಆದ್ರೆ ವೈಯಕ್ತಿಕವಾಗಿ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಇರಡು ಪಕ್ಷ ಮೈತ್ರಿ ಮಾಡಿಕೊಂಡಿದೆ ಅಷ್ಟೇ. ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತದೆ. ಅವರವರ ಒಳ ಮುನಿಸುಗಳನ್ನು ಮುಚ್ಚಿಟ್ಟು ಎಲ್ಲದಕ್ಕೂ ಬಿಜೆಪಿ ಅವರನ್ನು ದೂರುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈತ್ರಿ ಸರ್ಕಾರ ಬಂದ ಮೇಲೆ ನಾನೊಬ್ಬ ಸಾಂದರ್ಭಿಕ ಶಿಶು, ಅಸಹಾಯಕತೆಯಲ್ಲಿದ್ದೇನೆ, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇನೆ, ಕ್ಲರ್ಕ್‍ಗಿಂತ ಕಡೆಯಾಗಿದ್ದೇನೆ ಅಂತ ಸಿಎಂ ಕುಮಾರಸ್ವಾಮಿಯವರೇ ಹೇಳಿದ್ದರು. ಇತೀಚೆಗೆ ಎ.ಟಿ ರಾಮಸ್ವಾಮಿ ಅವರು ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಿದ್ರೆ ಹುಷಾರ್ ಅಂತ ಹೇಳಿದ್ದರು. ರೇವಣ್ಣ ಅವರು ನಮ್ಮ ಸಚಿವ ಖಾತೆ ಬಗ್ಗೆ ಒತ್ತಡ ಹೇರೋಕೆ ಅವರ್ಯಾರು ಅಂತ ಹೇಳಿಕೆ ನೀಡಿದ್ದರು. ರಾಜಕೀಯ ಹೇಗೆ ಮಾಡಬೇಕು ಗೊತ್ತಿದೆ ಅದನ್ನ ಜೆಡಿಎಸ್‍ನಿಂದ ಕಲಿಯಬೇಕಾಗಿಲ್ಲ ಅಂತ ದಿನೇಶ್ ಗುಂಡುರಾವ್ ಹೇಳಿದ್ದರು. ಇದ್ಯಾವುದನ್ನು ನಾವು ಹೇಳಿದ್ದಲ್ಲ ಮೈತ್ರಿ ನಾಯಕರೇ ಮಾತನಾಡಿದ್ದು. ಇಷ್ಟೆಲ್ಲ ಪರಸ್ಪರ ವಿರೋಧ ಇಟ್ಟುಕೊಂಡಿರುವವರು ಹೇಗೆ ಉತ್ತಮ ಸರ್ಕಾರ ನಡೆಸ್ತಾರೆ ಅಂತ ಪ್ರಶ್ನಿಸಿದರು.

    ಸರ್ಕಾರ ಉರುಳಿಸುವ ಕೆಲಸ ನಾವು ಮಾಡ್ತಿಲ್ಲ. ಅವರೇ ಮಾಡಿಕೊಳ್ಳುತ್ತಿದ್ದಾರೆ. ನಾವು ಸರ್ಕಾರ ಬೀಳಲಿ ಅಂತನೇ ಕಾಯುತ್ತಿದ್ದೇವೆ. ಅದನ್ನೆ ಜನರು ಬಯಸುತ್ತಿದ್ದಾರೆ. ಶಾಸಕರು ಸಭೆಗಳಿಗೆ ಹೋಗಿಲ್ಲ ಅಂದರೆ ನಮ್ಮನ್ನ ಯಾಕೆ ದೂರುವುದು. ಬಿಜೆಪಿಯವರು ಗುರುಗ್ರಾಮಕ್ಕೆ ಹೋದರೆ ಮೈತ್ರಿ ನಾಯಕರಿಗೆ ಭಯ ಯಾಕೆ? ಅವರಲ್ಲಿನ ಬಂಡಾಯ ಶಮನ ಮಾಡುವುದು ನಮ್ಮ ಕೆಲಸವಲ್ಲ. ನಾವು ಕಾಂಗ್ರೆಸ್ ಹೈಕಮಾಂಡಲ್ಲ. ಸರ್ಕಾರ ಬಿದ್ರೆ ಜನರಿಗೂ ಖುಷಿಯಾಗುತ್ತೆ ಜೊತೆಗೆ ನಮಗೂ ಖುಷಿಯಾಗುತ್ತೆ ಎಂದರು.

    ಬಳಿಕ ಬಿಜೆಪಿ ಶಾಸಕರು ಮೈತ್ರಿ ನಾಯಕರ ಜೊತೆ ಸೇರುವ ಕುರಿತಾಗಿ ಪ್ರತಿಕ್ರಿಯಿಸಿ, ಮೈತ್ರಿ ನಾಯಕರಿಗೆ ಅವರ ಶಾಸಕರನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ. ಮತ್ತೆ ನಮ್ಮ ಶಾಸಕರ ಮೇಲೆ ಹೇಗೆ ಕೈಹಾಕುತ್ತಾರೆ. ಮೈತ್ರಿ ಸರ್ಕಾರ 7 ತಿಂಗಳುಗಳಲ್ಲಿ ಮಾಡಿರುವ ಒಳ್ಳೆ ಕೆಲಸಗಳನ್ನು ಪಟ್ಟಿ ಮಾಡಿಸಿ. ಜಗಳ ಮಾಡುವುದನ್ನು ಬಿಟ್ಟರೆ ಏನೂ ಕೆಲಸ ಮಾಡಿಲ್ಲ ಅಂತ ಸಿ.ಟಿ ರವಿ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯ ಕೈ ನಾಯಕರನ್ನು ಪಂಚರಾಜ್ಯಗಳ ಚುನಾವಣೆಗೆ ಬಳಸಲು ಹೈಕಮಾಂಡ್ ಚಿಂತನೆ

    ರಾಜ್ಯ ಕೈ ನಾಯಕರನ್ನು ಪಂಚರಾಜ್ಯಗಳ ಚುನಾವಣೆಗೆ ಬಳಸಲು ಹೈಕಮಾಂಡ್ ಚಿಂತನೆ

    ಬೆಂಗಳೂರು: ದೇಶದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ರಾಜ್ಯದ ನಾಯಕರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

    ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಮತ್ತು ಛತ್ತೀಸ್‍ಗಡ ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಧಿಪತ್ಯ ಸಾಧಿಸಲು ರಾಜ್ಯದ ಪ್ರಮುಖ ನಾಯಕರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ರಾಜ್ಯದ ದಲಿತ ಮುಖಂಡ ಹಾಗೂ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಹಿಂದುಳಿದ ವರ್ಗಗಳ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಚುನಾವಣೆ ನಿರ್ವಹಣೆಕಾರ ಎಂದೇ ಹೆಸರು ಪಡೆದಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರನ್ನು ಆಯಾ ರಾಜ್ಯಗಳ ಉಸ್ತುವಾರಿಗಳನ್ನಾಗಿ ನೇಮಿಸಲು ಹೈಕಮಾಂಡ್ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸಿದ್ದು, ಶೀಘ್ರವೇ ರಾಜ್ಯಗಳನ್ನು ಹಂಚಿಕೆ ಮಾಡಿ ಉಸ್ತುವಾರಿ ವಹಿಸಲಿದೆ. ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಚುನಾವಣೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅಲ್ಲದೇ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಪೂರಕ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಚುನಾವಣೆಯಲ್ಲಿ ಪ್ರಚಾರ ಸೇರಿದಂತೆ ನಿರ್ವಹಣೆಗೆ ರಾಜ್ಯದ ನಾಯಕರನ್ನು ಬಳಸಿಕೊಂಡು, ಅಧಿಕಾರ ಸ್ಥಾಪಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೇಂದ್ರ ಸಚಿವ ಅನಂತ್ ನಿಧನಕ್ಕೆ ಕಾಂಗ್ರೆಸ್ ನಾಯಕರ ಸಂತಾಪ

    ಕೇಂದ್ರ ಸಚಿವ ಅನಂತ್ ನಿಧನಕ್ಕೆ ಕಾಂಗ್ರೆಸ್ ನಾಯಕರ ಸಂತಾಪ

    ಬೆಂಗಳೂರು: ಕೇಂದ್ರ ಸಚಿವ ಎಚ್.ಎನ್. ಅನಂತಕುಮಾರ್ ಅವರು ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕಾಂಗ್ರೆಸ್ ನಾಯಕರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಕಾಂಗ್ರೆಸ್ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರು ಅನಂತ್ ಅವರ ನಿಧನಕ್ಕೆ ಟ್ವಿಟ್ಟರಿನಲ್ಲಿ, “ಕೇಂದ್ರ ಸಚಿವ ಶ್ರೀ ಅನಂತ್ ಸಚಿವ ಜೀ ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿರುವ ಸುದ್ದಿ ಕೇಳಿ ನಾನು ವಿಷಾಧಿಸುತ್ತೇನೆ. ಅನಂತ್ ಅವರ ಸ್ನೇಹಿತರು ಹಾಗೂ ಕುಟುಂಬದವರಿಗೆ ನಾನು ಸಮಾಧಾನ ತಿಳಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

    ಅನಂತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗುತ್ತಿದೆ. ಅವರು ತಮ್ಮ ತಲೆಮಾರಿನ ಅತ್ಯುನ್ನತ ರಾಜಕೀಯ ಪ್ರತಿಭೆಗಳ ಪೈಕಿ ಒಬ್ಬರಾಗಿದ್ದರು. ಜ್ಞಾನ, ಅನುಭವ ಮತ್ತು ಬುದ್ಧಿ ಅದ್ಭುತ ಪರಿಣಾಮಗಳನ್ನು ಬಳಸಿದ ಚರ್ಚಾಗಾರಾಗಿದ್ದರು. ಅವರು ಕುಟುಂಬಕ್ಕೆ ಹಾಗೂ ಸಹದ್ಯೋಗಿಗಳಿಗೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಡಿಸಿಎಂ ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.

    ಡಿ.ಕೆ ಶಿವಕುಮಾರ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ಅನಂತ್ ಕುಮಾರ್ ಅವರ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಯಿತು ಹಾಗೂ ತುಂಬಾ ನೋವಾಯಿತು. ಅನಂತ್ ಅವರು ನಮ್ಮ ದೇಶವನ್ನು ಹಲವು ಸಾಮಥ್ರ್ಯಗಳಲ್ಲಿ ಸೇವೆ ಸಲ್ಲಿಸಿದ ಸಂಸತ್‍ನ ಸದಸ್ಯ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಆಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಬಿಜೆಪಿಯ ಅಗ್ರಪಂಕ್ತಿಯ ನಾಯಕ ಮತ್ತು 1996 ರಿಂದಲೂ ಸತತವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಶ್ರೀ ಅನಂತ್ ಕುಮಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರು ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ. ದುಃಖವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬದವರಿಗೆ ನೀಡಲೆಂದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

    ಅನಂತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಆಘಾತ ಹಾಗೂ ದುಃಖವಾಗಿದೆ. ಅವರು ಕರ್ನಾಟಕದ ಬಿಜೆಪಿ ಪಕ್ಷದಲ್ಲಿ ಅತೀ ಎತ್ತರದ ನಾಯಕರಾಗಿದ್ದರು. ಅವರು ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೆ.ಜೆ ಜಾರ್ಜ್ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರಚಾರಕ್ಕೆ ಬಾರದ ಕೈ ನಾಯಕರು-ಕ್ರಮ ಕೈಗೊಳ್ಳಲು ಮುಂದಾದ ಡಿಸಿಎಂ

    ಪ್ರಚಾರಕ್ಕೆ ಬಾರದ ಕೈ ನಾಯಕರು-ಕ್ರಮ ಕೈಗೊಳ್ಳಲು ಮುಂದಾದ ಡಿಸಿಎಂ

    ಬಾಗಲಕೋಟೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಕೈ ನಾಯಕರು ಹಿಂದೇಟು ಹಾಕುತ್ತಿರುವುದರಿಂದ ಡಿಸಿಎಂ ಪರಮೇಶ್ವರ್ ಅಸಮಾಧಾನಗೊಂಡಿದ್ದು, ಅಲ್ಲದೇ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಪ್ತರ ಬಳಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಹೌದು, ಜಮಖಂಡಿ ಉಪಚುನಾವಣೆಯಲ್ಲಿ ಕೈ ಪಡೆ ಶತಾಯಗತಾಯ ಗೆಲುವು ಸಾಧಿಸಲೇಬೇಕೆಂದು ಹರಸಾಹಸ ಪಡುತ್ತಿದೆ. ಆದರೆ ಅಭ್ಯರ್ಥಿ ಪರ ಪ್ರಚಾರ ಮಾಡಲು ಪಕ್ಷದ ಪ್ರಮುಖರೇ ನಿರಾಸಕ್ತಿ ತೋರುತ್ತಿದ್ದಾರೆ. ಅಲ್ಲದೇ ಹಾಲಿ, ಮಾಜಿ ಸಚಿವರು ಹಾಗೂ ಶಾಸಕರು ಸಹ ಪ್ರಚಾರಕ್ಕೆ ಬರುತ್ತಿಲ್ಲ.

    ಸಚಿವರು ಮತ್ತು ಶಾಸಕರ ನಡೆಯಿಂದ ಡಿಸಿಎಂ ಅಸಮಾಧಾನಗೊಂಡಿದ್ದು, ಪ್ರಚಾರಕ್ಕೆ ಬಾರದೇ ಇರುವ ನಾಯಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಪ್ತರ ಬಳಿ ಮಾತನಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹಾಲಿ ಸಚಿವರಾದ ಯು ಟಿ ಖಾದರ್, ಜಮೀರ್ ಅಹ್ಮದ್ ಸಚಿವ ಹಾಗೂ ಮಾಜಿ ಸಚಿವರಾಗಿದ್ದ ಎಸ್ ಆರ್ ಪಾಟೀಲ್, ವಿನಯ್ ಕುಲಕರ್ಣಿ ಹಾಗೂ ವೀರಕುಮಾರ್ ಪಾಟೀಲ್. ಶಾಸಕರಾದ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಪ್ರಸಾದ ಅಬ್ಬಯ್ಯ, ರೂಪಾ ಶಶಿಧರ್, ಬೈಲಹೊಂಗಲ ಮಾಂತೇಶ್ ಕೌಜಲಗಿ, ಶಿವರಾಮ ಹೆಬ್ಬಾರ್, ಇಂಡಿ ಕ್ಷೇತ್ರದ ಯಶವಂತರಾವ್ ಪಾಟೀಲ್ ಹಾಗೂ ಹುಕ್ಕೇರಿ ಶಾಸಕ/ಮುಖ್ಯ ಸಚೇತಕರಾದ ಗಣೇಶ್ ಹಾಗೂ ಮಾಜಿ ಶಾಸಕರಾದ ಸಿಎಸ್ ನಾಡಗೌಡ, ಎಸ್.ಜಿ. ನಂಜಯ್ಯನಮಠ, ಹಂಪನಗೌಡ ಬಾದರ್ಲಿ ಹಾಗೂ ಹುನಗುಂದದ ವಿಜಯಾನಂದ ಕಾಶಪ್ಪನವರ್ ಸಹ ಪ್ರಚಾರದಿಂದ ಗೈರಾಗಿದ್ದಾರೆ.

    ಇವರಲ್ಲದೇ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೀಣಾ ಕಾಶಪ್ಪನವರು ಹಾಗೂ ವಿಧಾನಪರಿಷತ್ ಸದಸ್ಯರಾದ ವಿವೇಕ್‍ರಾವ್ ಪಾಟೀಲ್ ಹಾಗೂ ಸುನೀಲ್ ಗೌಡ ಪಾಟೀಲ್ ಸಹ ಪ್ರಚಾರಕ್ಕೆ ಆಗಮಿಸಿಲ್ಲ.

    ಈ ಮೇಲ್ಕಂಡ ಕೈ ಮುಖಂಡರು ಅಕ್ಟೋಬರ್ 22 ರಿಂದ ಜಮಖಂಡಿ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕಿತ್ತು. ಅಲ್ಲದೇ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಾಯಕರಿಗೆ ಉಸ್ತುವಾರಿಯನ್ನು ನೀಡಿತ್ತು. ಸಮುದಾಯವಾರು ಮತ ಸೆಳೆಯಲು, ಜಾತಿಯಾಧಾರದ ಮೇಲೆ ಕಾಂಗ್ರೆಸ್ ಮುಖಂಡರನ್ನು ನೇಮಿಸಿತ್ತು.

    ಕಳೆದ ಬಾರಿಯ ವಿಧಾನಸಭಾ ಚುನವಾಣೆಯಲ್ಲಿ ಕೈ ತಪ್ಪಿದ್ದ ಮತಗಳನ್ನು ಸೆಳೆಯಲು ಕಾಂಗ್ರೆಸ್ ರಣತಂತ್ರ ಹೆಣೆದಿತ್ತು. ಅಲ್ಲದೇ ಜಾತಿವಾರು ಮತಗಳನ್ನು ಸೆಳೆಯಲು ಆಯಾ ಸಮುದಾಯದ ಮುಖಂಡರನ್ನೇ ನೇಮಿಸಿತ್ತು. ಇದರ ಮೂಲಕ ಕಡಿಮೆ ಮತ ಬಿದ್ದ ಭಾಗದಲ್ಲಿ ಮತ ಕ್ರೋಢೀಕರಣ ಮಾಡುವ ಜವಬ್ದಾರಿಯನ್ನು ಪಕ್ಷದ ಪ್ರಮುಖ ನಾಯಕರಿಗೆ ನೀಡಿತ್ತು.

    ಪ್ರಚಾರಕ್ಕೆ ಗೈರಾಗಿ ಕಾಂಗ್ರೆಸ್ಸಿನ ರಣತಂತ್ರಕ್ಕೆ ಸ್ವ-ಪಕ್ಷೀಯರೇ ಬೆಂಬಲ ಸೂಚಿಸಿಲ್ಲದ್ದರಿಂದ ಡಿಸಿಎಂ ಪರಮೇಶ್ವರ್ ಎಲ್ಲಾ ಮುಖಂಡರ ಮೇಲೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಕೆಪಿಸಿಸಿಗೆ ದೂರನ್ನು ನೀಡಿ, ಮುಂಬರುವ ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರಾವಳಿಯಲ್ಲಿ ಮರಳಿಗಾಗಿ ಬರ- ಜನನಾಯಕರಿಗೆ ಜನರಿಂದಲೇ ಕ್ಲಾಸ್!

    ಕರಾವಳಿಯಲ್ಲಿ ಮರಳಿಗಾಗಿ ಬರ- ಜನನಾಯಕರಿಗೆ ಜನರಿಂದಲೇ ಕ್ಲಾಸ್!

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮರಳಿನ ಬಿಸಿ ವಿಪರೀತವಾಗಿದೆ. ಜನಕ್ಕೆ ಮರಳು ಸಿಗದಿರೋದ್ರಿಂದ ಸಮಸ್ಯೆ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ನೆಮ್ಮದಿ ಕೆಡಿಸಿದೆ. ಜನನಾಯಕರು ಸಾರ್ವಜನಿಕವಾಗಿ ಓಡಾಡದ ಪರಿಸ್ಥಿತಿ ಎದುರಾಗಿದೆ. ಸಚಿವ- ಸಂಸದರನ್ನು ಸಿಕ್ಕ ಸಿಕ್ಕಲ್ಲಿ ಜನ ಅಡ್ಡ ಹಾಕಿ ಪ್ರಶ್ನೆ ಮಾಡುತ್ತಿದ್ದಾರೆ. ಸಾರ್ವಜನಿಕರು, ಸಾಂಪ್ರದಾಯಿಕದಾಗಿ ಮರಳು ತೆಗೆಯುವವರು, ಲಾರಿ ಮಾಲಕರು, ಚಾಲಕರು ಜನಪ್ರತಿನಿಧಿಗಳನ್ನು ಬೇತಾಳದಂತೆ ಬೆನ್ನತ್ತುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲೆಲ್ಲಾ ಜನನಾಯಕರಿಗೆ ಮುತ್ತಿಗೆ ಹಾಕಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸುತ್ತಿದ್ದಾರೆ.

    ಹೌದು. ಕರಾವಳಿಯಲ್ಲಿ ಮರಳುಗಾರಿಕೆಗೆ ಅನುಮತಿಯಿಲ್ಲದ ಕಾರಣ ಮರಳಿನ ಬಿಸಿ ವಿಪರೀತವಾಗಿದೆ. ವಿವಾದ ಹಸಿರು ನ್ಯಾಯಪೀಠದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಆದ್ರೆ ಉಡುಪಿಯಲ್ಲಿ ಜನಪ್ರತಿನಿಧಿಗಳು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಕ್ಕಸಿಕ್ಕಲ್ಲಿ ಅಡ್ಡಹಾಕ್ತಿರುವ ಜನರು ಬಿಸಿ ಮುಟ್ಟಿಸ್ತಿದ್ದಾರೆ.

    ಸಂಸದೆ ಶೋಭಾ ಕರಂದ್ಲಾಜೆಗೆ ಮರಳು ಲಾರಿ ಮಾಲಕರು, ಕಾರ್ಮಿಕ ಸಂಘದವರು ಘೇರಾವ್ ಹಾಕಿದ್ದಾರೆ. ಕುಂದಾಪುರದ ಕೋಟೇಶ್ವರದಲ್ಲಿ ಈ ಘಟನೆ ನಡೆದಿದ್ದು, ನೀವು ಉಡುಪಿ ಚಿಕ್ಕಮಗಳೂರಿನ ಸಂಸದೆಯಾದರೂ ಬೆಂಗಳೂರಲ್ಲೇ ಇರುತ್ತೀರಿ. ಇಲ್ಲಿನ ಜನರ ಸಮಸ್ಯೆ ನಿಮಗೆ ಬಿದ್ದೇ ಹೋಗಿಲ್ಲ ಅಂತ ಕಿಡಿಕಾರಿದ್ದಾರೆ.


    ಉಡುಪಿಯ ಸಾಸ್ತಾನ ಬಳಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಮುತ್ತಿಗೆ ಹಾಕಿದ ಟಿಪ್ಪರ್ ಮಾಲೀಕರು, ನೀವೂ ನಮ್ಮೊಂದಿಗೆ ಕುಳಿತು ಪ್ರತಿಭಟಿಸಿ ಅಂತಾ ಕ್ಲಾಸ್ ತಗೊಂಡ್ರು.

    ಅಕ್ಟೋಬರ್ 15ಕ್ಕೆ ಮರಳು ಸಮಸ್ಯೆ ಸರಿಮಾಡಿಕೊಡುತ್ತೇನೆ ಎಂದು ಹೇಳಿದ್ದ ಸಚಿವೆ ಜಯಮಾಲಾ ಅವರಿಗೂ ಮುತ್ತಿಗೆ ಹಾಕಿದ್ದಾರೆ. ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡಿ ಅಂತಾ ಪ್ರತಿಭಟನಾಕಾರರು ಒತ್ತಾಯಿಸಿದಾಗ ಅದು ನನ್ನಿಂದ ಸಾಧ್ಯವಿಲ್ಲ ಅಂತಾ ಜಯಮಾಲಾ ಜಾರಿಕೊಂಡ್ರು. ಬಿಜೆಪಿ ನಾಯಕ ಜಯಪ್ರಕಾಶ್ ಹೆಗ್ಡೆಯವರನ್ನು ಮರಳು ಕೊಡಿಸಿ ಸ್ವಾಮಿ ಅಂತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾಕಾರರು ಅಡ್ಡ ಹಾಕಿದ್ದಾರೆ.

    ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಬ್ಯಾರಿಕೇಡ್ ಇಟ್ಟು ತಡೆದಿದ್ದಾರೆ. ಈ ಸಂದರ್ಭ ಮರಳು ಲಾರಿ ಮಾಲಕರು ಮತ್ತು ಕಾರ್ಮಿಕರ ನಡುವೆ ಜಟಾಪಟಿಯಾಗಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಮರಳು ಬಿಸಿಯಿಂದಾಗಿ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಜನರ ಕೈಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಕುಮಾರಸ್ವಾಮಿ ಕಣ್ಣೀರು ವಿಚಾರ: ಕೆಪಿಸಿಸಿಯಿಂದ ಕೈ ನಾಯಕರಿಗೆ ನೋಟಿಸ್

    ಸಿಎಂ ಕುಮಾರಸ್ವಾಮಿ ಕಣ್ಣೀರು ವಿಚಾರ: ಕೆಪಿಸಿಸಿಯಿಂದ ಕೈ ನಾಯಕರಿಗೆ ನೋಟಿಸ್

    ಬೆಂಗಳೂರು: ಸಿಎಂ ಕುಮಾರಸ್ವಾಮಿಯವರು ಕಣ್ಣೀರ ವಿಚಾರಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂಬ ಹೇಳಿಕೆ ನೀಡಿದ್ದ ಇಬ್ಬರು ಕೈ ನಾಯಕರಿಗೆ ಕೆಪಿಸಿಸಿ ನೋಟಿಸ್ ಜಾರಿಗೊಳಿಸಿದೆ.

    ರಾಮನಗರದಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿಯವರು ಕಣ್ಣೀರು ಹಾಕಿದ್ದರ ಕುರಿತು ಪ್ರತಿಕ್ರಿಯಿಸಿದ್ದ ಕೈ ನಾಯಕರುಗಳಾದ ಮಾಜಿ ಸ್ಪೀಕರ್ ಕೋಳಿವಾಡ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣನವರಿಗೆ ಕೆಪಿಸಿಸಿ ನೋಟಿಸ್ ಜಾರಿಗೊಳಿಸಿದೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆ ಕಣ್ಣೀರಿಗೆ ಕಾಂಗ್ರೆಸ್ಸಿಗರೇ ಕಾರಣ: ಮಾಜಿ ಸ್ಪೀಕರ್ ಕೋಳಿವಾಡ

    ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ಮೈತ್ರಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಟೀಕೆ ನಡೆಸಿದ್ದರು. ಅಲ್ಲದೇ ಮಾಜಿ ಸ್ಪೀಕರ್ ಕೋಳಿವಾಡ ಸಹ ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂಬುದಾಗಿ ಹೇಳಿಕೆ ನೀಡಿದ್ದರು. ಇವರ ಈ ಹೇಳಿಕೆಯಿಂದಾಗಿ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗಿತ್ತು. ಇದನ್ನೂ ಓದಿ: ಸಂಪುಟ ರಚನೆಯಾದ ಒಂದು ವಾರದಲ್ಲೇ ಸಮ್ಮಿಶ್ರ ಸರ್ಕಾರ ಪತನ : ಕೈ ಮಾಜಿ ಶಾಸಕ ರಾಜಣ್ಣ ಭವಿಷ್ಯ

    ಈ ಹಿನ್ನೆಲೆಯಲ್ಲಿ ಕೆಪಿಸಿಸಿಯು ಇಬ್ಬರೂ ನಾಯಕರುಗಳಿಗೆ ನೀವು ಪಕ್ಷಕ್ಕೆ ಮುಜುಗರ ತರುವಂತೆ ಹೇಳಿಕೆ ನೀಡುತ್ತಿದ್ದು, ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಾರದು ಯಾಕೆ ಎಂದು ಕಾರಣ ಕೇಳಿ ನೋಟಿಸ್ ನೀಡಿದೆ. ಅಲ್ಲದೇ ಈ ನೋಟಿಸ್ ಗೆ ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.

  • ಯಡಿಯೂರಪ್ಪಗೆ ವಯಸ್ಸಾಗಿದೆ ಏನೇನೋ ಮಾತಾಡ್ತಾರೆ: ರಾಮಲಿಂಗಾರೆಡ್ಡಿ

    ಯಡಿಯೂರಪ್ಪಗೆ ವಯಸ್ಸಾಗಿದೆ ಏನೇನೋ ಮಾತಾಡ್ತಾರೆ: ರಾಮಲಿಂಗಾರೆಡ್ಡಿ

    ಚಿಕ್ಕಬಳ್ಳಾಪುರ: ಮಾಜಿ ಸಿಎಂ ಯಡಿಯೂರಪ್ಪಗೆ ವಯಸ್ಸಾಗಿದೆ, ಹೀಗಾಗಿ ಅವರು ಏನೇನೋ ಮಾತಾಡುತ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

    ಮಹದಾಯಿ ವಿಚಾರದಲ್ಲಿ ನೀರು ಬಿಡದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒತ್ತಡ ಇದೆ ಎನ್ನುವ ಯಡಿಯೂರಪ್ಪನವರ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಹೀಗಾಗಿ ಏನೇನೋ ಮಾತಾಡ್ತಾರೆ. ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದು, ಅವರದ್ದು ಡ್ರಾಮಾ ಟ್ರೂಪ್ ಇದ್ದಂತೆ. ರಾಜ್ಯದ ನಾಯಕರು ಕೇವಲ ಪಾತ್ರಧಾರಿಗಳು. ಡ್ರಾಮಾ ಟ್ರೂಪ್ ನ ಹೆಡ್ ದೆಹಲಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಹದಾಯಿ ವಿಚಾರದಲ್ಲಿ ಸದ್ಯ ಗೋವಾ ಸಿಎಂ ಪರಿಕ್ಕರ್ ಗೆ ಸಿದ್ದರಾಮಯ್ಯ ಪತ್ರ ಬರೆದರೆ ಪ್ರತ್ಯುತ್ತರ ಇಲ್ಲ. ಆದರೆ ಯಡಿಯೂರಪ್ಪ ಪತ್ರ ಬರೆದ ಮಾರನೇ ದಿನವೇ ಪತ್ರ ಬರುತ್ತೆ. ಇದೆಲ್ಲಾ ಅಮಿತ್ ಶಾ ಹಾಗೂ ರಾಜ್ಯದ ಬಿಜೆಪಿ ನಾಯಕರು ನಡೆಸಿರೋ ಚುನಾವಣಾ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.