ಲಂಡನ್: ಟೆಸ್ಟ್ ಸರಣಿಗಳಲ್ಲಿ ಸತತ ಸೋಲು ಕಂಡ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಜೋ ರೂಟ್ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ಆಶಸ್ ಟೆಸ್ಟ್ ಸರಣಿಯಲ್ಲಿ ಸತತ ಸೋಲು ಕಂಡ ಬಳಿಕ ಜೋ ರೂಟ್ ಟೆಸ್ಟ್ ನಾಯಕತ್ವ ತ್ಯಜಿಸಿದ್ದಾರೆ. ನಾನು ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಇಂಗ್ಲೆಂಡ್ ತಂಡದ ನಾಯಕತ್ವ ತ್ಯಜಿಸುತ್ತಿದ್ದೇನೆ. ಪ್ರಸ್ತುತ ನಾಯಕತ್ವದಿಂದ ಕೆಳಗಿಳಿಯಲು ಸರಿಯಾದ ಸಮಯವೆಂದು ಭಾವಿಸಿದ್ದೇನೆ ಎಂಬುದಾಗಿ ಜೋ ರೂಟ್ ತಿಳಿಸಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೇಳಿಕೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಪಾಂಡ್ಯ ಆಲ್‍ರೌಂಡರ್ ಆಟ ರಾಜಸ್ಥಾನ ಪರದಾಟ – ಮುಂದುವರಿದ ಗುಜರಾತ್ ಗೆಲುವಿನ ಓಟ
2027ರಲ್ಲಿ ಅಲೆಸ್ಟರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಜೋ ರೂಟ್ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆ ಬಳಿಕ ಭಾರತ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು 4-1 ಅಂತರದಲ್ಲಿ ಗೆದ್ದು ಸಂಭ್ರಮಿಸಿದ್ದರು. 2020ರಲ್ಲಿ ಸೌತ್ ಆಫ್ರಿಕಾ ವಿರುದ್ಧ 3-1 ಅಂತರದಲ್ಲಿ ಸರಣಿ ಗೆದ್ದು ನಾಯಕತ್ವದ ಉತ್ತುಂಗದಲ್ಲಿದ್ದರು. ಆ ಬಳಿಕ ಸತತ ಸೋಲುಗಳನ್ನು ಕಂಡ ಇಂಗ್ಲೆಂಡ್ ತಂಡ ಪ್ರತಿಷ್ಠಿತ ಸರಣಿಗಳನ್ನು ಕೈಚೆಲ್ಲಿ ಮಂಕಾಗಿತ್ತು. ನಂತರ ರೂಟ್ ನಾಯಕತ್ವ ತ್ಯಜಿಸಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಇದೀಗ ಸ್ವತಃ ರೂಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಇದನ್ನೂ ಓದಿ: ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ
ರೂಟ್ ಈವರೆಗೆ ನಾಯಕನಾಗಿ ಇಂಗ್ಲೆಂಡ್ ತಂಡವನ್ನು 64 ಪಂದ್ಯಗಳಲ್ಲಿ ಮುನ್ನಡೆಸಿದ್ದು, 27 ಪಂದ್ಯಗಳಲ್ಲಿ ಜಯ, 26 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. 14 ಶತಕ, 26 ಅರ್ಧಶತಕ ಸಹಿತ 5,295 ರನ್ ಸಿಡಿಸಿದ್ದಾರೆ.
ಮುಂಬೈ: ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ತೊರೆಯಬಹುದು ಎಂದು ಎಂದು ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರೋಹಿತ್ ಈಗಾಗಲೇ ಮುಂಬೈಗೆ ಐದು ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಅದನ್ನು ಮರೆಯುವಂತಿಲ್ಲ. ಅವರು ಕೂಡಾ ವಿರಾಟ್ ಕೊಹ್ಲಿಯಂತೆಯೇ ನಾಯಕತ್ವವನ್ನು ತೊರೆಯಬಹುದು. ಸ್ವಲ್ಪ ವಿಶ್ರಾಂತಿ ಪಡೆದು ಶುದ್ಧ ಬ್ಯಾಟರ್ ಆಗಿ ಆಡಬಹುದು. ತಂಡದ ನಾಯಕನಾಗಿ ಪೊಲಾರ್ಡ್‍ಗೆ ಜವಾಬ್ದಾರಿಯನ್ನು ವಹಿಸಬಹುದು ಎಂದು ನಾನು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: 74 ಎಸೆತಗಳಲ್ಲಿ 165 ರನ್ ಚಚ್ಚಿದ ಉತ್ತಪ್ಪ, ದುಬೆ – ಚೆನ್ನೈಗೆ 23 ರನ್‌ಗಳ ಜಯ
ಐಪಿಎಲ್ 2022 ರಲ್ಲಿ ರೋಹಿತ್ ಎಲ್ಲಾ ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದಾರೆ. ಭಾರತಕ್ಕಾಗಿ ಆಡಿದಾಗ ಅವರ ಸ್ಟ್ರೈಕ್-ರೇಟ್ ಉತ್ತಮವಾಗಿರುತ್ತದೆ. ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ತಂಡದ ಬಗ್ಗೆ ಕಡಿಮೆ ಯೋಚಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ನಾವು ಭಾರತೀಯ ಕ್ರಿಕೆಟ್‍ನಲ್ಲಿ ಕಾಣುವ ರೋಹಿತ್ ಅವರನ್ನು ಐಪಿಎಲ್‍ನಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ರೋಹಿತ್ ಐಪಿಎಲ್ 2022 ಕ್ಕೆ ನಂತರ ನಿವೃತ್ತಿ ಹೊಂದಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ: ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಿಎಸ್‍ಕೆ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡಬಾರದಿತ್ತು. ರವೀಂದ್ರ ಜಡೇಜಾ ತಮ್ಮ ಫಾರ್ಮ್‍ನತ್ತ ಗಮನ ಹರಿಸಬೇಕಾಗಿದೆ. ಐಪಿಎಲ್ 2022ರ ಮೊದಲು ಧೋನಿ ಸಿಎಸ್‍ಕೆ ನಾಯಕತ್ವದಿಂದ ಕೆಳಗಿಳಿದಿದ್ದು, ಈ ಋತುವಿನಲ್ಲಿ ಇನ್ನೂ ತಮ್ಮ ಮೊದಲ ಗೆಲುವು ದಾಖಲಿಸದ ರವೀಂದ್ರ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಳೆದ ವರ್ಷ ಬೆಂಚ್ ಬಿಸಿ ಮಾಡಿದ ಆಟಗಾರರು ಈ ಬಾರಿ ಮ್ಯಾಚ್ ವಿನ್ನರ್ಸ್
ಪ್ರಸ್ತುತ ಐಪಿಎಲ್ 2022ರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತನ್ನ ಆರಂಭಿಕ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿದೆ. ಇದು ಫ್ರಾಂಚೈಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ಚೆನ್ನೈ ಟೂರ್ನಿಯಲ್ಲಿ ನಾಲ್ಕು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆದರೆ ಈ ಋತುವಿನಲ್ಲಿ ಜಯದ ಲಯ ಕಂಡುಕೊಳ್ಳಲು ಹೆಣಗಾಡುತ್ತಿದೆ ಎಂದರು. ಇದನ್ನೂ ಓದಿ: ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರೂ. 7 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದ ಫಾಫ್ ಡು ಪ್ಲೆಸಿಸ್ ಅವರು ತಮ್ಮ ಸಂಪೂರ್ಣ ಐಪಿಎಲ್ ವೃತ್ತಿಜೀವನವನ್ನು ಸಿಎಸ್‍ಕೆಯೊಂದಿಗೆ ಕಳೆದಿದ್ದರು. ಅವರು ಈ ಹಿಂದೆ ಚೆನ್ನೈನ 2021 ರ ಐಪಿಎಲ್ ವಿಜಯೋತ್ಸವದಲ್ಲಿ 59 ಎಸೆತಗಳಲ್ಲಿ 86 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದ್ದರು. ಕೆಕೆಆರ್ ವಿರುದ್ಧದ ಫೈನಲ್‍ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಸಹ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.
ರವೀಂದ್ರ ಜಡೇಜಾ ಅವರ ಮೇಲೆ ಯಾವುದೇ ನಾಯಕತ್ವದ ಒತ್ತಡವನ್ನು ಹೇರದೆ ಆಟಗಾರನಾಗಿಯೇ ಆಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಹರಾಜಿನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನಾಗಲು ಸಿದ್ಧರಾಗಿದ್ದಾರೆ.
ಈ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ತಂಡದ ಮಾಜಿ ನಾಯಕನಾಗಿದ್ದರು. ಆದರೆ ರಾಹುಲ್ ಅವರೀಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಿಡ್ ಆಗಿದ್ದಾರೆ. ಈ ಹಿನ್ನೆಲೆ ಪಂಜಾಬ್ ತಂಡವು ನಾಯಕನನ್ನು ಬದಲಾಯಿಸಲು ನಿರ್ಧರಿಸಿದೆ. ಇದನ್ನೂ ಓದಿ:Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್
ಐಪಿಎಲ್ 2021 ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಕೆಎಲ್ ರಾಹುಲ್ ಬದಲಿಗೆ ಭಾರತೀಯ ಆಟಗಾರನನ್ನು ಚುಕ್ಕಾಣಿ ಹಿಡಿಯಲು ಪಂಜಾಬ್ ತಂಡವು ಉತ್ಸುಕವಾಗಿದೆ. ಅವರು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು 12 ಕೋಟಿ ರೂ. ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ.
ಮಯಾಂಕ್ ಅವರಿಗೆ ಅಷ್ಟೇನು ಹೆಚ್ಚಿನ ನಾಯಕತ್ವದ ಅನುಭವವಿಲ್ಲ. ಐಪಿಎಲ್ 2022ರ ಮೆಗಾ ಹರಾಜಿನ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪೈಪೋಟಿ ನೀಡಿ, ಧವನ್ ಅವರನ್ನು 8.25 ಕೋಟಿ ರೂ. ನೀಡಿ ಖರೀದಿಸಲು ಪಿಬಿಕೆಎಸ್ ಯಶಸ್ವಿಯಾಗಿದೆ.
ಶಿಖರ್ ಧವನ್ ತಂಡದಲ್ಲಿರುವುದಕ್ಕೆ ಪಂಜಾಬ್ ತಂಡವು ತುಂಬಾ ಉತ್ಸುಕವಾಗಿದೆ. ಧವನ್ ಹೆಗಲ ಮೇಲೆ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಲು ತಂಡದ ನಿರ್ವಾಹಕರು ಈಗಾಗಲೇ ಕಾದು ಕುಳಿತಿದ್ದಾರೆ. ತಂಡದ ಮುಖ್ಯ ಕೋಚ್, ಪ್ರವರ್ತಕರು ಎಲ್ಲರೂ ಪಂಜಾಬ್ ಕಿಂಗ್ಸ್ ನಾಯಕನ ಆಯ್ಕೆ ವಿಚಾರವಾಗಿ ಧವನ್ ಪರವಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ವೆಬ್‍ಸೈಟ್ ವೊಂದು ತಿಳಿಸಿದೆ. ಇದನ್ನೂ ಓದಿ: ಫುಟ್ಬಾಲ್ ಆಟಗಾರ ಸೂರಜಿತ್ ಸೇನ್‍ಗುಪ್ತಾ ಇನ್ನಿಲ್ಲ
ಭಾನುವಾರ ಹರಾಜು ಮುಗಿದ ನಂತರ ಪಿಬಿಕೆಎಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರನ್ನು ಹೊಸ ನಾಯಕನ ನೇಮಕದ ಬಗ್ಗೆ ಕೇಳಲಾಗಿತ್ತು. ಈ ವೇಳೆ ಕುಂಬ್ಳೆ ಅವರು, ಧವನ್ ಹೆಸರನ್ನು ಬಹಿರಂಗಪಡಿಸಿದ್ದರು. ಧವನ್ ಅವರು ತಂಡಕ್ಕೆ ಉತ್ತಮ ಆಟಗಾರರಾಗಿದ್ದಾರೆ. ಅವರ ಪ್ರಬುದ್ಧತೆಯು ತಂಡದ ಇತರ ಸದಸ್ಯರ ಮೇಲೆ ಪರಿಣಾಮ ಬೀರಲಿದೆ. ತಂಡದ ಪ್ರತಿಯೊಬ್ಬ ಆಟಗಾರರು ಈ ಅನುಭವಿ ಆಟಗಾರನಿಂದ ಕಲಿಯಬಹುದು. ಅವರು ತಂಡಕ್ಕೆ ಎಲ್ಲ ರೀತಿಯಲ್ಲೂ ಪರಿಪೂರ್ಣ ನಾಯಕರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕತ್ವ ತೊರೆಯಲು ವಿರಾಟ್ ಕೊಹ್ಲಿ ಅವರನ್ನು ಒತ್ತಾಯಿಸಲಾಗಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾರೆ.
ನಾಯಕತ್ವ ತೊರೆಯಲು ಕೊಹ್ಲಿಗೆ ಇಷ್ಟವಿರಲಿಲ್ಲ. ಬಲವಂತದಿಂದ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಇದು ಕೊಹ್ಲಿಗೆ ಒಳ್ಳೆಯ ಸಮಯವಲ್ಲ. ಆದರೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ. ಕೊಹ್ಲಿ ಶ್ರೇಷ್ಠ ವ್ಯಕ್ತಿ ಮತ್ತು ಉತ್ತಮ ಕ್ರಿಕೆಟಿಗ. ವಿಶ್ವದ ಇತರ ಆಟಗಾರರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಿಲ್ಲ: ಗಂಗೂಲಿ
ಇನ್ನೊಬ್ಬರ ನಾಯಕತ್ವದಲ್ಲೂ ಕೊಹ್ಲಿ ಆಟಗಾರರಾಗಿ ಮುಂದುವರಿಯುತ್ತಾರೆ. ಆಟದಲ್ಲಿ ಫಾರ್ಮ್ ಆಗಿದ್ದವರು ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಈಗಿನ ಸಂದರ್ಭದ ಕುರಿತು ಯಾರ ಬಗ್ಗೆಯೂ ಕಹಿ ಭಾವನೆ ಹೊಂದದೇ, ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಮುಂದೆ ಸಾಗಿ. ಎಲ್ಲರನ್ನೂ ಕ್ಷಮಿಸಿ, ಮುಂದೆ ಸಾಗಿರಿ ಎಂದು ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ಟೆಸ್ಟ್ ಮುಂದಿನ ನಾಯಕನ ಕುರಿತು ಮಾತನಾಡಿದ ಅವರು, ಈ ಬಗ್ಗೆ ಬಿಸಿಸಿಐ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ ಎಂದಿದ್ದಾರೆ. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್
ಕಳೆದ ವರ್ಷ ಕೊಹ್ಲಿ, ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ನಂತರ ಕಳೆದ ವಾರ ಭಾರತ ಟೆಸ್ಟ್ ನಾಯಕತ್ವದಿಂದಲೂ ಹೊರನಡೆದರು.
ನವದೆಹಲಿ: ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಅನೇಕ ಕ್ರಿಕೆಟಿಗರು ಹಾಗೂ ಮಾಜಿ ಆಟಗಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಂತೆಯೇ ಗೌತಮ್ ಗಂಭೀರ್ ಅವರು ಪ್ರತಿಕ್ರಿಯಿಸಿ, ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ ಎಂದು ಹೇಳಿದ್ದಾರೆ.
ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ. ಎಂ.ಎಸ್.ಧೋನಿ ಅಂತಹವರು ತಮ್ಮ ನಾಯಕತ್ವವನ್ನು ಬಿಟ್ಟು ವಿರಾಟ್ ಕೊಹ್ಲಿಗೆ ಅವಕಾಶ ನೀಡಿದರು. ವಿರಾಟ್ ನಾಯಕತ್ವದಲ್ಲಿಯೂ ಆಟಗಾರನಾಗಿ ಧೋನಿ ಆಡಿದ್ದಾರೆ. ಅವರು ಮೂರು ಬಾರಿ ಐಸಿಸಿ ಟ್ರೋಫಿ ಹಾಗೂ ಐಪಿಎಲ್ ಟ್ರೋಫಿಗಳನ್ನೂ ಗೆದ್ದುಕೊಟ್ಟಿದ್ದಾರೆ ಎಂದು ಗಂಭೀರ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಸೋಲನುಭವಿಸಿದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಮೂಲಕ ಅವರು ಭಾರತ ತಂಡದ ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದಂತಾಗಿದೆ. ಈಗ ಟೀಂ ಇಂಡಿಯಾದ ಮೂರು ಮಾದರಿ ತಂಡಕ್ಕೂ ರೋಹಿತ್ ಶರ್ಮಾ ನಾಯಕ ಎಂದು ಬಿಸಿಸಿಐ ಘೋಷಿಸಿದೆ. ಇದನ್ನೂ ಓದಿ: ಕೊಹ್ಲಿ ಯಾವುದೇ ವಿವಾದದಲ್ಲಿರಲು ಬಯಸುವುದಿಲ್ಲ: ಬಾಲ್ಯದ ಕೋಚ್
ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು. ಇದೀಗ ಕೊಹ್ಲಿಗೆ ಟಿ20 ಜೊತೆಗೆ ಏಕದಿನ ತಂಡದ ನಾಯಕತ್ವದಿಂದಲು ಕೆಳಗಿಸಲು ಬಿಸಿಸಿಐ ಪ್ಲಾನ್ ಮಾಡಿದೆ ಎಂದು ಮೂಲಗಳಿಂದ ವರದಿಯಾಗಿದೆ.
ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಸೋಲಿನಿಂದಾಗಿ ಸೆಮಿಫೈನಲ್‍ನಿಂದ ಬಹುತೇಕ ಹೊರಬಿದ್ದರುವ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ವಿರಾಟ್ ಕೊಹ್ಲಿ ನಡೆಯ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ವಿರಾಟ್ ಕೊಹ್ಲಿ ನಾಯನಾಗಿ ತೆಗೆದುಕೊಂಡು ನಿರ್ಧಾರವನ್ನು ಹಲವರು ಪ್ರಶ್ನಿಸಿದ್ದರು. ಈ ಎಲ್ಲದರ ನಡುವೆ ಈವರೆಗೆ ನಾಯಕನಾಗಿ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿರುವ ಕೊಹ್ಲಿ ನಾಯಕತ್ವದ ಬಗ್ಗೆ ಬಿಸಿಸಿಐ ಕೂಡ ಯೋಚನೆ ಮಾಡುತ್ತಿದ್ದು, ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನು ಕೆಳಗಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ
ಒಬ್ಬ ಬ್ಯಾಟ್ಸ್‌ಮ್ಯಾನ್ ಆಗಿ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದ್ದ ಕೊಹ್ಲಿ ನಾಯಕನಾಗಿ ತಂಡವನ್ನು ನಿರ್ವಹಿಸುತ್ತಿರುವುದನ್ನು ಬಿಸಿಸಿಐ ಗಮನಿಸಿ ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿಸಿ ಟೆಸ್ಟ್ ನಾಯಕತ್ವದಲ್ಲಿ ಮಾತ್ರ ಮುಂದುವರಿಸಲು ಮಾತುಕತೆ ನಡೆದಿದೆ ಎಂದು ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: 14 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿದ ರೋಹಿತ್, ರಾಹುಲ್ ಜೋಡಿ
ವಿರಾಟ್ ಕೊಹ್ಲಿ ಸಿಮೀತ ಓವರ್ ಗಳ ಕ್ರಿಕೆಟ್ ನಾಯಕತ್ವದಿಂದ ಹೊರ ನಡೆದರೆ ನಾಯಕರಾಗಿ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ರಿಷಬ್ ಪಂತ್ ಹೆಸರು ಕೇಳಿ ಬರುತ್ತಿದೆ. ಜೊತೆಗೆ ಟಿ20 ವಿಶ್ವಕಪ್ ಮುಗಿದ ಬಳಿಕ ರಾಹುಲ್ ದ್ರಾವಿಡ್ ಕೋಚ್ ಆಗಿ ಟೀಂ ಇಂಡಿಯಾಗೆ ಸೇರ್ಪಡೆಗೊಳ್ಳುವುದರಿಂದಾಗಿ ಮಹತ್ವದ ಬದಲಾವಣೆ ಮುನ್ಸೂಚನೆ ಬಿಸಿಸಿಐ ಕೊಟ್ಟಿದೆ. ಇದೀಗ ನಾಯಕತ್ವದ ಬಗ್ಗೆ ಎದ್ದಿರುವ ಪ್ರಶ್ನೆಗೆ ಕೆಲದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ: ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ
ಮಡಿಕೇರಿ: ಸಿಎಂ ಬದಲಾವಣೆ ವಿಚಾರ ಇನ್ನೂ ಕೂಡ ತಣ್ಣಗೆ ಆಗಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಬಿಜೆಪಿಯ ಭಿನ್ನಭಿಪ್ರಾಯವನ್ನು ಸರಿದೂಗಿಸಲು ಪ್ರಯತ್ನ ಪಡುತ್ತಿದ್ದರು ಕೂಡ ಅತೃಪ್ತಿಯ ಬೆಂಕಿ ಹೊಗೆಯಾಡುತ್ತಲೇ ಇದೆ. ಈ ನಡುವೆ ನಾನು ವ್ಯಕ್ತಿ ಪೂಜೆ ಮಾಡುವವನಲ್ಲ ಎನ್ನುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಬೇಕು ಎನ್ನೋ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್, ನಾನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ನಾನು ಪಕ್ಷದ ಪರವಾಗಿದ್ದೇನೆ, ಪಕ್ಷದ ವಿಚಾರವನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಮಾತನಾಡಿದ್ದೇನೆ. ಪಕ್ಷ ಎಂದ ಮೇಲೆ ಜಗಳಗಳು ಇದ್ದದ್ದೇ. ಅದನ್ನು ಪಕ್ಷದ ಒಳಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಬಹಿರಂಗ ಚರ್ಚೆ ಮಾಡೋದಿಲ್ಲ ಎಂದರು.
ಶಾಸಕ ಹೆಚ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ ವಿಷಯಕ್ಕಾಗಲಿ, ಅವರ ವಿರುದ್ಧ ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದ ವಿಷಯಕ್ಕಾಗಲಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಮತ್ತು ಸಿಎಂ ಬದಲಾವಣೆ ವಿಚಾರದಲ್ಲಿ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ
ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನೂ ನಿಭಾಯಿಸುತ್ತದೆ:
ರಾಜ್ಯ ನಾಯಕತ್ವ ಬದಲಾವಣೆ ವಿಚಾರವಾಗಿ ಮಡಿಕೇರಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಒಂದು ಮನೆ ಎಂದ ಮೇಲೆ ವೈಮನಸ್ಸು ಇದ್ದೇ ಇರುತ್ತದೆ. ಅದನ್ನು ಮನೆ ಒಳಗೆ ಬಗೆಹರಿಸಿಕೊಳ್ಳುತ್ತೇವೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನೂ ನಿಭಾಯಿಸುತ್ತದೆ ಎಂದರು.
ರಾಜ್ಯಕ್ಕೆ ಬಂದಿರುವ ಅರುಣ್ ಸಿಂಗ್ ಅವರೊಂದಿಗೆ ಪ್ರತ್ಯೇಕ ಸಭೆ ವಿಚಾರ ಹಿನ್ನೆಲೆಯಲ್ಲಿ ನಿನ್ನೆ ನನ್ನ ಇಲಾಖೆಯ ಕಾರ್ಯವೈಖರಿ ಅಭಿವೃದ್ಧಿ ಕುರಿತು ವರದಿ ನೀಡಿದ್ದೇನೆ. ಬೇರೆ ರಾಜಕೀಯವಾಗಿ ನಾನು ಯಾವುದೇ ವರದಿ ನೀಡಿಲ್ಲ. ಹೆಚ್ ವಿಶ್ವನಾಥ್ ಅವರು ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ವಿಶ್ವನಾಥ್ ವಿರುದ್ಧ ಮಾತನಾಡುವಷ್ಟು ದೊಡ್ಡವಳಲ್ಲ ಹೈಕಮಾಂಡ್ ಎಲ್ಲಾವವನ್ನು ನಿರ್ಧಾರ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು: ಸಿಎಂ ಯಡಿಯೂರಪ್ಪ ಹಾಗೂ ಅವ್ರ ಕುಟುಂಬ ವಿರುದ್ದ ಮಾತನಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ದ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ – ವಿಶ್ವನಾಥ್ ಆರೋಪ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ನಾಲಿಗೆ ಸಂಸ್ಕೃತಿ ಸರಿಯಿಲ್ಲ. ನಿನ್ನೆ ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡಿದಾಗ ನಾವೆಲ್ಲಾ ಸ್ವಯಂ ಪ್ರೇರಣೆಯಿಂದ ವಿಶ್ವನಾಥ್ ವಿರುದ್ದ ಮಾತಾಡಿದ್ದೇವೆ. ಅವರಿಗೆ ಎಲೆಕ್ಷನ್‍ಗೆ ನಿಲ್ಲಬೇಡಿ ಅಂದ್ರೂ ಅವರು ನಿಂತರು. ಸೋತ ಮೇಲೆ ಸಿಎಂ ಯಡಿಯೂರಪ್ಪ ಅವರನ್ನ ಎಂಎಲ್‍ಸಿ ಮಾಡಿದರು. ಆದರೂ ಸಿಎಂ ವಿರುದ್ಧ, ಅವರ ಕುಟುಂಬದ ವಿರುದ್ಧ ಮಾತನಾಡಬಾರದು ಅಂತಾ ಹೇಳಿದ್ದೇವೆ. ರಾಜಕಾರಣದಲ್ಲಿ ಹಿರಿಯರು, ಆದರೆ ಅವರ ನಾಲಿಗೆ ಸಂಸ್ಕೃತಿ ಸರಿಯಿಲ್ಲ. ಎಚ್. ವಿಶ್ವನಾಥ್ ಆಡಿಯೋ ವೀಡಿಯೋ ಎಲ್ಲಾ ಇದೆ. ಅದನ್ನ ಕೇಳಿಸಿಕೊಂದರೆ ಸಾಕು ಅವರು ಎಂತಹವರು ಅಂತ ಗೊತ್ತಾಗುತ್ತದೆ. ಅವರ ಬಗ್ಗೆ ಮಾತನಾಡಿದ್ರೆ ನಮ್ಮ ಬಾಯಿ ಹೊಲಸಾಗುತ್ತೆದೆ ಎಂದು ಕಿಡಿಕಾರಿದ್ದಾರೆ.
ಎಲ್ಲೋ ಇದ್ದ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದು ಅಧ್ಯಕ್ಷಗಿರಿ ಕೊಟ್ಟ ದೇವೇಗೌಡರು, ಕುಮಾರಸ್ವಾಮಿ ವಿರುದ್ಧವೇ ಮಾತನಾಡುತ್ತಾರೆ. ಈಗ ಯಡಿಯೂರಪ್ಪ, ಅವರ ಕುಟುಂಬದ ಬಗ್ಗೆ ಮಾತನಾಡ್ತಾರೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ವಿಜಯೇಂದ್ರ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಶ್ವನಾಥ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಯಾವುದೇ ಕಿಕ್ ಬ್ಯಾಕ್ ಪಡೆದಿಲ್ಲ. ಪಾರದರ್ಶಕವಾಗಿ ಟೆಂಡರ್ ಆಗಿದೆ. ಎಲ್ಲಾ ವಿವರವೂ ವೆಬ್‍ಸೈಟ್ ನಲ್ಲಿರುತ್ತೆ. ಅದನ್ನ ನೋಡಿದ್ರೆ ಎಲ್ಲರಿಗೂ ಗೊತ್ತಾಗುತ್ತದೆ. ಹತಾಶೆಯಿಂದ ವಿಶ್ವನಾಥ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
– ಯಡಿಯೂರಪ್ಪ ನವರಿಗೆ ಮೊದಲು ಶಕ್ತಿ ಇತ್ತು ಈಗ ಇಲ್ಲ – ನಾನು ಹಳ್ಳಿ ಹಕ್ಕಿ ಸ್ವಚ್ಛಂದವಾಗಿ ಹಾಡುತ್ತೇನೆ ಹಾರುತ್ತೇನೆ ಬೆರೆಯುತ್ತೇನೆ – ಜಯಲಕ್ಷ್ಮಿ ಗಂಡ ಅವನಿಗೆ ಸಂಸ್ಕಾರ, ಸಂಸ್ಕೃತಿ ಇದ್ಯಾ
ಬೆಂಗಳೂರು: ಪ್ರತಿಪಕ್ಷಗಳು ಆಡಳಿತ ಪಕ್ಷಗಳ ಮೇಲೆ ಆರೋಪ ಮಾಡುವುದು ಸಾಮಾನ್ಯ. ಅದರೆ ಈ ಬಾರಿ ಆಡಳಿತ ಪಕ್ಷದ ಶಾಸಕರಾದ ವಿಶ್ವನಾಥ್ ಅವರು ಸ್ವಪಕ್ಷದ ನಾಯಕರ ಮೇಲೆಯೇ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್ ಅವರು, ನನ್ನಂತ ಹುಚ್ಚನ ತ್ಯಾಗದಿಂದ ಬಿಡಿಎ ಅಧ್ಯಕ್ಷನಾಗಿ ಎಸ್.ಆರ್.ವಿಶ್ವನಾಥ್ ದೋಚುತ್ತಿದ್ದಾನೆ. ಕೊರೊನಾ ಮೊದಲ ಅಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಾಕಿದ ಹಾಕಿದ 10 ಸಾವಿರ ಬೆಡ್ ಫ್ಯಾನ್ ಎಲ್ಲಾ ಏನಾಯ್ತು ವಿಶ್ವನಾಥ್ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್
ನೀನೇ ಉಸ್ತುವಾರಿ ಯಾಗಿದ್ದೆ ನೀವೆಲ್ಲ ಭ್ರಷ್ಟರು. ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರವಾಗಿದೆ. 20 ಸಾವಿರ ಕೋಟಿಯ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹಣಕಾಸು ಇಲಾಖೆ ಹಾಗೂ ಯಾವುದೇ ಬೋರ್ಡ್ ಕ್ಲಿಯರೆನ್ಸ್ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಸಚಿವರು ಮಾತನಾಡುತ್ತಿದ್ದಾರೆ. ಯಾವ ಸಚಿವರು ಸಮಾಧಾನದಿಂದ ಇದ್ದಾರೆ ಹೇಳಿ? ಯಡಿಯೂರಪ್ಪ ಮಕ್ಕಳಿಂದ ಮೊದಲು ಜೈಲಿಗೆ ಹೋಗಿದ್ದರು ಎರಡನೇ ಬಾರಿಗೆ ಹೀಗಾಗ ಬಾರದು ಅನ್ನೋದು ನಮ್ಮ ಆಶಯ. ಯಡಿಯೂರಪ್ಪನವರದು ಇ.ಡಿಯಲ್ಲಿ ಕೇಸಿಲ್ವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?
ರೇಣುಕಾಚಾರ್ಯ ಜಯಲಕ್ಷ್ಮಿ ನರ್ಸ್ ಕಥೆ ಏನಾಯ್ತು? ಹಾಲಪ್ಪ ಊಟಕ್ಕೆ ಕರೆದ ಸ್ನೇಹಿತನ ಹೆಂಡತಿಯನ್ನು ಅತ್ಯಾಚಾರ ಮಾಡಲು ಹೋಗಿ ಸಚಿವ ಸ್ಥಾನವನ್ನು ಕಳೆದುಕೊಂಡವನು ಅವನು ಎಂದು ಬಹಿರಂಗವಾಗಿ ಕಿಡಿಕಾರಿದರು.
ನಾನು ನಿನ್ನೆ ಅರುಣ್ ಸಿಂಗ್ ಭೇಟಿ ಮಾಡಿ ರಾಜ್ಯದಲ್ಲಿ ಪಕ್ಷದ ರಾಜಕಾರಣ ಹಾಗೂ ಸರ್ಕಾರದ ಆಡಳಿತದ ಬಗ್ಗೆ ಹೇಳಿದ್ದೇನೆ. ಇನ್ನು 22 ತಿಂಗಳು ಮಾತ್ರ ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಹೀಗೆ ಹೋದರೆ ಹಿನ್ನಡೆ ಆಗುತ್ತೆ ಅಂತ ಹೇಳಿದ್ದೇನೆ. ಅಲ್ಲದೆ 2024 ರ ಲೋಕಸಭೆ ಚುನಾವಣೆಗೂ ಎಫೆಕ್ಟ್ ಆಗುತ್ತೆ ಅಂತ ಹೇಳಿದ್ದೇನೆ. ಇದಕ್ಕೆಲ್ಲ ‘ನಾಯಕತ್ವವೇ ಕಾರಣ, ನಾಯಕತ್ವವೇ ಮುಖ್ಯ ಎಂದು ತಿಳಿಸಿದ್ದೇನೆ. 104 ರ ಜೊತೆಗೆ 17 ಸೇರಿ ಸರ್ಕಾರ ಆಗಿರೋದು ಅಂದಿದ್ದೇನೆ. ಸತ್ಯ ಹೇಳದಿದ್ದರೆ ಪಕ್ಷಕ್ಕ ದ್ರೋಹ ಮಾಡಿದಂತಾಗುತ್ತದೆ ಎಂದು ಸತ್ಯವನ್ನು ಹೇಳಿದ್ದೇನೆ ಎಂದರು.
ಡೈನಸ್ಟಿ ರೂಲ್, ಡೈನಸ್ಟಿ ಕರಪ್ಷನ್ ಬಗ್ಗೆ ಮೋದಿಯವರು ಮಾತನಾಡಿದ್ದಾರೆ. ಇಲ್ಲಿ ಅದು ಆಗುತ್ತಿದೆ. ಅದರ ಬಗ್ಗೆ ಇದ್ದ ವಿಚಾರ ಹೇಳಿದ್ದೇನೆ. 75 ವರ್ಷ ಮೀರಿದವರ ಬಗ್ಗೆ ನಮ್ಮ ಪಕ್ಷದಲ್ಲೇ ಲಕ್ಣ್ಮಣ ರೇಖೆ ಇದೆ. ಅದು ದಾಟಿದ ಮೇಲೆ ವಯಸ್ಸು ಸಹಕರಿಸಲ್ಲ. ಯಡಿಯೂರಪ್ಪ ನವರಿಗೆ ಮೊದಲು ಶಕ್ತಿ ಇತ್ತು ಈಗ ಇಲ್ಲ. ಶಕ್ತಿ ಪೀಠದ ಪ್ರಭಾವಳಿ ಕಡಿಮೆ ಆಗುತ್ತಿದೆ. ಪಕ್ಷದ ಸಿದ್ಧಾಂತ ಹಾಗೂ ಕಾರ್ಯಕ್ರಮದ ವಿರುದ್ದ ಮಾತನಾಡಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ದ್ರಾಕ್ಷಿ ಹುಳಿ ಎನ್ನುವ ನರಿ ಜಾಯಮಾನಕ್ಕೆ ಸೇರಿದವರು: ಹೆಚ್‍ಡಿಕೆ
ಈಶ್ವರಪ್ಪನವರೇ 104 ಹೆಚ್ಚಿರಬಹುದು ಆದರೆ ಬಹುಮತ ಆಗಿದ್ದು ನಾವು ಬಂದಮೇಲೆ. ಅಷ್ಟು ಸಣ್ಣ ಪೊಲಿಟಿಕಲ್ ಮ್ಯಾಥಮ್ಯಾಟಿಕ್ಸ್ ಅರ್ಥ ಆಗಲ್ವಾ? ಇದು ಕುಟುಂಬ ರಾಜಕಾರಣದ ಗಿರಾಕಿನೆ. ಈಶ್ವರಪ್ಪ ಗವರ್ನರ್ ಹತ್ತಿರ ಹೋಗಿದ್ದು ಯಾಕೆ? ಸುಮ್ಮನೆ ಹುಚ್ಚು ಹುಚ್ಚಾಗಿ ಮಾತಾಡಬೇಡಿ. ಇವತ್ತಲ್ಲ ನಾಳೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಯಡಿಯೂರಪ್ಪ ಬದಲಾಗ್ತಾರೆ. ಸತ್ಯ ಹೇಳೋರು ಒಬ್ಬರು ಬೇಕಲ್ವಾ ನಾನು ಸತ್ಯ ಹೇಳುತ್ತಿದ್ದೀನಿ. ಬಂದವರು ಯಾರು ಸಂತೋಷವಾಗಿಲ್ಲ ಒಬ್ಬೊಬ್ಬರನ್ನೆ ಮಾತಾಡಿಸಿ ಗೊತ್ತಾಗುತ್ತೆ ಎಂದರು.
ಸಿದ್ದರಾಮಯ್ಯ, ಕುಮಾರಸ್ವಾಮಿ ವಿಪಕ್ಷವಾಗಿ ಜಿಂದಾಲ್ ವಿಚಾರದಲ್ಲಿ ನಿಮ್ಮ ಸ್ಟಾಂಡ್ ಏನು? ಎಲ್ಲರೂ ಕಿಕ್ ಬ್ಯಾಕ್ ತಗೊಂಡು ಕೂತಿದ್ದಾರೆ. ಮೂರು ಪಾರ್ಟಿಯ ಸರ್ಕಾರ ಇದು. ಯೋಗೇಶ್ವರ್ ಹೇಳಿದ್ದು ಸರಿ ಇದೆ. ನಾನು ಹಳ್ಳಿ ಹಕ್ಕಿ ಸ್ವಚ್ಛಂದವಾಗಿ ಹಾಡುತ್ತೇನೆ, ಹಾರುತ್ತೇನೆ ಬೆರೆಯುತ್ತೇನೆ. ನನ್ನ ಟುವ್ವಿ ಟುವ್ವಿ ಅವರಿಗೆ ಕರ್ಕಶವಾಗಿ ಕೇಳುತ್ತೆ. ಕೇಳುವರ ಕಿವಿ ಸರಿ ಇಲ್ಲ ಅಷ್ಟೆ. ಶೇ.80 ರಷ್ಟು ಶಾಸಕರು ಒಳಗೆ ಹೋಗಿ ನಾಯಕತ್ವ ಬದಲಾವಣೆ ಬೇಕು ಎಂದು ಹೇಳಿದ್ದಾರೆ. ಆದರೆ ಹೊರಗೆ ಬಂದು ಹೇಳಲು ಧೈರ್ಯ ಇಲ್ಲ ಎಂದು ಹೇಳಿದರು.