Tag: ನಾಯಕ

  • ಸಿರಿಯಾ ಘರ್ಷಣೆಯಲ್ಲಿ ಐಸಿಸ್ ನಾಯಕ ಸಾವು

    ಸಿರಿಯಾ ಘರ್ಷಣೆಯಲ್ಲಿ ಐಸಿಸ್ ನಾಯಕ ಸಾವು

    ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಗುರುವಾರ ತನ್ನ ನಾಯಕ ಅಬು ಹುಸೇನಿ ಅಲ್ ಖುರೇಶಿ (Abu al-Hussein al-Husseini al-Qurashi) ಸಾವನ್ನಪ್ಪಿರುವುದಾಗಿ ದೃಢಪಡಿಸಿದೆ. ವಾಯುವ್ಯ ಸಿರಿಯಾದಲ್ಲಿ (Syria) ನಡೆದ ಘರ್ಷಣೆಯಲ್ಲಿ ಐಸಿಸ್ ನಾಯಕ (ISIS Leader) ಸಾವನ್ನಪ್ಪಿರುವುದಾಗಿ ತಿಳಿಸಿದೆ.

    ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಂಘಟನೆ ವಕ್ತಾರರು, ಇಡ್ಲಿಬ್ ಪ್ರಾಂತ್ಯದಲ್ಲಿ ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್ ಶಾಮ್‌ನೊಂದಿಗೆ ನಾಯಕ ನೇರ ಸಂರ್ಘರ್ಷ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿಗೆ ಕೊಲ್ಲಲ್ಪಟ್ಟಿರುವುದಾಗಿ ತಿಳಿಸಿದ್ದಾರೆ.

    ನಾಯಕನ ಸಾವಿನ ಬಳಿಕ ಉಗ್ರ ಸಂಘಟನೆ ಹೊಸ ನಾಯಕನನ್ನು ಘೋಷಿಸಿದೆ. ಅಬು ಹಫ್ಸನ್ ಅಲ್ ಹಶಿಮಿ ಅಲ್ ಖುರೇಶಿ ಸಂಘಟನೆಯ 5ನೇ ನಾಯಕನಾಗಿ ಮುಂದುವರಿಯಲಿದ್ದಾನೆ ಎಂದು ಹೇಳಿದೆ. ಇದನ್ನೂ ಓದಿ: Expressway ರೂಲ್ಸ್ ಬ್ರೇಕ್ – ಚಾಲಕರಿಂದ 7 ಲಕ್ಷ ರೂ. ದಂಡ ವಸೂಲಿ

    ಅಬು ಹುಸೇನಿ ಅಲ್ ಖುರೇಶಿ ಸಾವಿಗೂ ಮುನ್ನ ಇನ್ನೂ ಮೂವರು ಐಸಿಸ್ ನಾಯಕರು ಸಾವನ್ನಪ್ಪಿದ್ದಾರೆ. ಅಬು ಹಸನ್ ಅಲ್ ಹಶಿಮಿ ಅಲ್ ಖುರೇಶಿ ಕಳೆದ ನವೆಂಬರ್‌ನಲ್ಲಿ, ಅಬು ಇಬ್ರಾಹಿಂ ಅಲ್ ಖುರೇಶಿಯನ್ನು 2022ರ ಏಪ್ರಿಲ್‌ನಲ್ಲಿ ಹಾಗೂ ಅಬು ಬಕರ್ ಅಲ್ ಬಗ್ದಾದಿ 2019ರ ಅಕ್ಟೋಬರ್‌ನಲ್ಲಿ ಕೊಲ್ಲಲಾಗಿತ್ತು. ಇದನ್ನೂ ಓದಿ: ಪೊಲೀಸ್‌ ವರ್ಗಾವಣೆ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರಿಗೆ ಏನು ಕೆಲಸ? – ಹೆಚ್‌ಡಿಕೆಯಿಂದ ಮಿಡ್‌ನೈಟ್‌ ಬಾಂಬ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಂಕ್ರಾಂತಿ ಹಬ್ಬ’ಕ್ಕೆ ಹೊಸ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಆಸ್ಕರ್ ಕೃಷ್ಣ

    ‘ಸಂಕ್ರಾಂತಿ ಹಬ್ಬ’ಕ್ಕೆ ಹೊಸ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಆಸ್ಕರ್ ಕೃಷ್ಣ

    ನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ನಿರ್ದೇಶನದ (Direction) ಸಿನಿಮಾದಲ್ಲಿ ನಾಯಕನಾಗಿ ನಟಿಸುವವರ ಸಂಖ್ಯೆ ತೀರಾ ಕಡಿಮೆ. ಅವರಲ್ಲಿ ಆಸ್ಕರ್ ಕೃಷ್ಣ (Oscar Krishna) ಕೂಡ ಒಬ್ಬರು. ಸ್ಕರ್ ಸಿನಿಮಾದ ಮೂಲಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದವರು ಇದೀಗ ‘ಕೃತ್ಯ’ ಸಿನಿಮಾದ ಮೂಲಕ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ (Poster) ಅನ್ನು ಸಂಕ್ರಾಂತಿ ಹಬ್ಬದ ದಿನದಂದು ರಿಲೀಸ್ ಮಾಡಿದ್ದಾರೆ.

    ಈ ಹಿಂದೆ ಕೃಷ್ಣ ಅವರು ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸಬಿಟ್ಟ’ ಚಿತ್ರದಲ್ಲೂ ನಾಯಕರಾದರು. ಎರಡನೇ ಬಾರಿ ಕೃತ್ಯ ಸಿನಿಮಾದ ಮೂಲಕ ಮತ್ತೆ ನಾಯಕರಾಗುತ್ತಿರುವುದು ವಿಶೇಷ. ಈ ಹಿಂದೆ ಇದೇ ಸಿನಿಮಾದ ಪೋಸ್ಟರ್ ಅನ್ನು ಶ್ರೀಮುರಳಿ ಬಿಡುಗಡೆ ಮಾಡಿ, ಕೃತ್ಯದ ಕೆಲ ವಿಷಯಗಳನ್ನೂ ಹಂಚಿಕೊಂಡಿದ್ದರು. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ’ಆಸ್ಕರ್’, ’ಮಿಸ್ ಮಲ್ಲಿಗೆ’ ’ಮೋನಿಕಾ ಈಸ್ ಮಿಸ್ಸಿಂಗ್’ ’ಮನಸಿನ ಮರೆಯಲಿ’ ಹಾಗೂ ಇತ್ತೀಚಿನ ’ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸುಬಿಟ್ಟ’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಆಸ್ಕರ್ ಕೃಷ್ಣ’ಕೃತ್ಯ’ ಸಿನಿಮಾಗೆ ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣ ಮತ್ತು ನಾಯಕನ ಸ್ಥಾನವನ್ನೂ ಅಲಂಕರಿಸಿರುವುದು ವಿಶೇಷ. ಗೌತಮ್‌ ರಾಮಚಂದ್ರ ಈ ಚಿತ್ರದ ಸಹ ನಿರ್ಮಾಪಕ. ಆಸ್ಕರ್‌ ಕೃಷ್ಣರೊಂದಿಗೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಗೌತಮ್‌ ರಾಮಕೃಷ್ಣರವರು ಸಾಫ್ಟ್‌ವೇರ್ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರ ಜೊತೆ ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೋಹಿತ್‍ಗೆ ಗೇಟ್‍ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?

    ರೋಹಿತ್‍ಗೆ ಗೇಟ್‍ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?

    ಮುಂಬೈ: ಟೀಂ ಇಂಡಿಯಾದ (Team India) ನಾಯಕರಾಗಿದ್ದ ರೋಹಿತ್ ಶರ್ಮಾರ (Rohit Sharma) ನಾಯಕತ್ವಕ್ಕೆ ಕುತ್ತು ಬಂದಿದೆ. ಮೂಲಗಳ ಪ್ರಕಾರ ಇದೀಗ ರೋಹಿತ್ ಶರ್ಮಾರನ್ನು ಏಕದಿನ ಮತ್ತು ಟಿ20 ಮಾದರಿ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ (Hardik Pandya) ನಾಯಕತ್ವದ ಪಟ್ಟ ಕಟ್ಟಲು ಬಿಸಿಸಿಐ (BCCI) ಚಿಂತಿಸಿದೆ ಎಂದು ವರದಿಯಾಗಿದೆ.

    ರೋಹಿತ್ ಶರ್ಮಾ ನಾಯಕತ್ವದ ಜೊತೆಗೆ ಬ್ಯಾಟಿಂಗ್‍ನಲ್ಲೂ ಸತತ ವಿಫಲರಾಗುತ್ತಿದ್ದಾರೆ. ಹಾಗಾಗಿ ಟೆಸ್ಟ್ (Test) ತಂಡದ ನಾಯಕತ್ವದಲ್ಲಿ ರೋಹಿತ್‍ರನ್ನು ಮುಂದುವರಿಸಿ, ಸೀಮಿತ ಓವರ್‌ಗಳ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಲು ಬಿಸಿಸಿಐ ಸಿದ್ಧತೆಯಲ್ಲಿದೆ. ನಿನ್ನೆ ನಡೆದ ಬಿಸಿಸಿಐ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಪಾಂಡ್ಯ ಜೊತೆ ಬಿಸಿಸಿಐನ ಹಿರಿಯ ಅಧಿಕಾರಿಗಳು ಚರ್ಚಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಮೊದಲ ಪಂದ್ಯದ ಮ್ಯಾಚ್ ವಿನ್ನರ್‌ಗಿಲ್ಲ ಎರಡನೇ ಟೆಸ್ಟ್‌ನಲ್ಲಿ ಅವಕಾಶ – ಕುಲ್‍ದೀಪ್‍ಗೆ ಕೊಕ್, ಉನಾದ್ಕಟ್‍ಗೆ ಬುಲಾವ್

    ಹಾರ್ದಿಕ್ ಪಾಂಡ್ಯ ಐಪಿಎಲ್‍ನಲ್ಲಿ (IPL) ಗುಜರಾತ್ ಟೈಟಾನ್ಸ್‌ನ್ನು (GT) ತಮ್ಮ ನಾಯಕತ್ವದಲ್ಲಿ ಚಾಂಪಿಯನ್ ಮಾಡಿದ ಬಳಿಕ ಬಿಸಿಸಿಐ ಕಣ್ಣಿಟ್ಟಿದೆ. ಈಗಾಗಲೇ ರೋಹಿತ್ ಶರ್ಮಾ ಏಷ್ಯಾಕಪ್ (Asia Cup) ಸೇರಿದಂತೆ ಟಿ20 ವಿಶ್ವಕಪ್‍ನಲ್ಲೂ (T20 World Cup) ತಂಡವನ್ನು ಫೈನಲ್‍ಗೇರಿಸುವಲ್ಲಿ ವಿಫಲರಾಗಿದ್ದರೂ ಹಾಗಾಗಿ ಬಿಸಿಸಿಐ ಭವಿಷ್ಯದ ದೃಷ್ಟಿಯಿಂದ ಪಾಂಡ್ಯಗೆ ಸೀಮಿತ ಓವರ್‌ಗಳ ನಾಯಕತ್ವ ನೀಡುವ ಕುರಿತು ಒಲವು ತೋರಿದೆ.

    ಪಾಂಡ್ಯ ಈ ಹಿಂದೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಸರಣಿಯನ್ನು ಭಾರತ 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನೂ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಗೆದ್ದಿತ್ತು. ಬಳಿಕ ಪಾಂಡ್ಯ ನಾಯಕತ್ವದ ಮೇಲೆ ಬಿಸಿಸಿಐ ಭರವಸೆ ಇಟ್ಟಿದೆ. ಇದನ್ನೂ ಓದಿ: ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್

    ಪಾಂಡ್ಯ 2022ರಲ್ಲಿ ಟೀಂ ಇಂಡಿಯಾ ಪರ ಒಟ್ಟು 27 ಪಂದ್ಯಗಳನ್ನು ಆಡಿದ್ದು, 25 ಇನ್ನಿಂಗ್ಸ್‌ಗಳಲ್ಲಿ 33.72ರ ಸರಾಸರಿಯಲ್ಲಿ 607 ರನ್ ಬಾರಿಸಿದ್ದಾರೆ. ಟಿ20 ಮಾದರಿಯಲ್ಲಿ ಮೂರು ಅರ್ಧ ಶತಕಗಳು ಸಹಿತ 20 ವಿಕೆಟ್‍ಗಳನ್ನು ಪಡೆದಿದ್ದಾರೆ. ಏಕದಿನ ಮಾದರಿಯಲ್ಲಿ 3 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 100 ರನ್ ಗಳಿಸಿದ್ದಾರೆ. ಜೊತೆಗೆ 6 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತಂಡಕ್ಕಾಗಿ ನೀಡಿದ್ದಾರೆ. ಹಾಗಾಗಿ ಬಿಸಿಸಿಐ ಪಾಂಡ್ಯರಿಗೆ ವೇತನ ಗ್ರೇಡ್‍ನಲ್ಲಿ, ಸಿ ಗ್ರೇಡ್‍ನಿಂದ ಎ ಗ್ರೇಡ್‍ಗೆ ಬಡ್ತಿ ನೀಡಿದೆ ಎಂದು ಮೂಲಗಳಿಂದ ವರದಿಯಾಗಿದೆ. ಈ ಎಲ್ಲದರ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಉತ್ತರ ಪ್ರದೇಶದಲ್ಲಿ ಎಸ್‍ಪಿ ನಾಯಕನ ಬರ್ಬರ ಹತ್ಯೆ

    ಉತ್ತರ ಪ್ರದೇಶದಲ್ಲಿ ಎಸ್‍ಪಿ ನಾಯಕನ ಬರ್ಬರ ಹತ್ಯೆ

    ಲಕ್ನೋ: ಉತ್ತರ ಪ್ರದೇಶದ ಪಿಜಿಐ ಪೊಲೀಸ್ ಠಾಣಾ ವ್ಯಾಪ್ತಿಯ ರೇವ್ತಾಪುರ್ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್‍ಪಿ) ಮುಖಂಡರೊಬ್ಬರನ್ನು ಬರ್ಬರವಾಗಿ ಥಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗಂಭೀರ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ರೋಹಿತ್ (26) ಮೇಲೆ ಸಚಿನ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಕಬ್ಬಿಣದ ಕೋಲುಗಳು, ಹರಿತವಾದ ಆಯುಧಗಳು ಮತ್ತು ಲಾಠಿಗಳಿಂದ ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ಅವರನ್ನು ತಕ್ಷಣ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು

    ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಸಚಿನ್ ಮತ್ತು ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರೋಹಿತ್ ಎಸ್‌ಪಿ ಯುವ ಘಟಕದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಸಚಿನ್, ಶಿವಕುಮಾರ್ ಮತ್ತು ಇತರರು ತನ್ನ ಮಗನ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿದ್ದಾರೆ ಎಂದು ಮೃತರ ತಾಯಿ ಊರ್ಮಿಳಾ ದೇವಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ತಂದೆ, ಅಣ್ಣನಿಂದ ಅತ್ಯಾಚಾರ – ಅಜ್ಜ, ಚಿಕ್ಕಪ್ಪನಿಂದ ಕಿರುಕುಳ

    ಸಚಿನ್‍ಗೆ ರೋಹಿತ್ ಜೊತೆ ಹಳೆ ವೈಷಮ್ಯವಿದ್ದು, ಹಲವು ಬಾರಿ ಬೆದರಿಕೆ ಹಾಕಿದ್ದ ಎಂದು ಅವರ ತಾಯಿ ಆರೋಪಿಸಿದ್ದಾರೆ. ರೋಹಿತ್ ಆರು ತಿಂಗಳ ಹಿಂದೆ ಮದುವೆಯಾಗಿದ್ದರು.

    ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಂಟೋನ್ಮೆಂಟ್ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅರ್ಚನಾ ಸಿಂಗ್ ತಿಳಿಸಿದ್ದಾರೆ.

  • ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ – ರೋಹಿತ್ ಶರ್ಮಾಗೆ ನಾಯಕ ಪಟ್ಟ

    ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ – ರೋಹಿತ್ ಶರ್ಮಾಗೆ ನಾಯಕ ಪಟ್ಟ

    ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದ್ದು, ನಾಯಕತ್ವವನ್ನು ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವಹಿಸಿಕೊಳ್ಳಲಿದ್ದಾರೆ.

    ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಅಂತಾರಾಷ್ಟ್ರೀಯ ಸರಣಿಯ ಮೂರು ಪಂದ್ಯಗಳು ಜೈಪುರ, ರಾಂಚಿ, ಕೋಲ್ಕತ್ತದಲ್ಲಿ ನಡೆಯಲಿವೆ. ಟೆಸ್ಟ್‌ನ ಎರಡು ಪಂದ್ಯಗಳು ಕಾನ್ಪುರ, ಮುಂಬೈನಲ್ಲಿ ನಡೆಯಲಿವೆ. ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಯ ದೃಷ್ಟಿ ತೆಗೆದ ಮಂಜಮ್ಮ ಜೋಗತಿ!

    ಯಾರಿಗೆಲ್ಲ ಸ್ಥಾನ?
    ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್. ಇದನ್ನೂ ಓದಿ: ನ.11 ಕ್ಕೆ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ಸರ್ಕಾರ ಆದೇಶ

     

  • ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಸೌಂಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕ್ಯಾಪ್ಟನ್‍ಶಿಪ್ ನಿರ್ವಹಿಸುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನಗೆ ನಾಯಕತ್ವದ ಪಾಠ ಹೇಳಿಕೊಟ್ಟ ಗುರುವಿನ ದಾಖಲೆ ಮುರಿದಿದ್ದಾರೆ.

    ವಿರಾಟ್ ಕೊಹ್ಲಿ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟಾಸ್ ಆದ ಬೆನ್ನಲ್ಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ದಾಖಲೆಯನ್ನು ಮುರಿದಿದ್ದಾರೆ. ಧೋನಿ ಇವರೆಗೆ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರೆ, ವಿರಾಟ್ ಕೊಹ್ಲಿ 61ನೇ ಪಂದ್ಯದಲ್ಲಿ ನಾಯಕತ್ವ ವಹಿಸುವ ಮೂಲಕ ತನ್ನ ನಾಯಕತ್ವದ ಗುರುವಿನ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ದಾಖಲೆ ಬರೆದ ವಿರಾಟ್ ಕೊಹ್ಲಿ

    ಧೋನಿ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 27 ಪಂದ್ಯದಲ್ಲಿ ಜಯ, 18 ಪಂದ್ಯ ಸೋಲು ಮತ್ತು 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ವಿರಾಟ್ ಒಟ್ಟು 61 ಪಂದ್ಯ 36 ಪಂದ್ಯ ಜಯ, 14 ಪಂದ್ಯ ಸೋಲು, 10 ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದ ಚುಕ್ಕಾನಿ ಹಿಡಿದಿದ್ದರು. ಬಳಿಕ ತಂಡವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಂ 1 ಸ್ಥಾನಕ್ಕೇರಿಸಿ, ಇದೀಗ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ಗೆ ಏರಿಸಿದ ಕೀರ್ತಿ ವಿರಾಟ್‍ಗೆ ಸಲ್ಲುತ್ತದೆ. ಇದನ್ನೂ ಓದಿ: WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

    ಕೊಹ್ಲಿ ನಾಯಕತ್ವ ಮಾತ್ರವಲ್ಲದೆ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ವೈಯಕ್ತಿಕವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ವೇಗವಾಗಿ 7500ಕ್ಕೂ ಅಧಿಕ ರನ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ 144 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದರೆ, ಬಳಿಕ ಸುನಿಲ್ ಗಾವಸ್ಕರ್ 154 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದ್ದರು. ಇದೀಗ ಕೊಹ್ಲಿ 92 ಟೆಸ್ಟ್ ಪಂದ್ಯದಿಂದ 7500 ರನ್ ಸಿಡಿಸಿ ಮಿಂಚಿದ್ದಾರೆ.

  • ಸಿದ್ದರಾಮಯ್ಯ ನಿಜವಾದ ಜನ ನಾಯಕ, ನೀವೆಂತ ಜನ ನಾಯಕ – ಹೆಚ್‍ಡಿಕೆಗೆ ಜಮೀರ್ ಗೇಲಿ

    ಸಿದ್ದರಾಮಯ್ಯ ನಿಜವಾದ ಜನ ನಾಯಕ, ನೀವೆಂತ ಜನ ನಾಯಕ – ಹೆಚ್‍ಡಿಕೆಗೆ ಜಮೀರ್ ಗೇಲಿ

    – ತೋಟದ ಮನೆ ಸೇರಿಕೊಳ್ಳಲು ಜನ ಎರಡೆರಡು ಬಾರಿ ಸಿಎಂ ಮಾಡಿದ್ದಾ..?

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ನಿಜವಾದ ಜನ ನಾಯಕ. ನೀವೆಂತ ಜನ ನಾಯಕ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಟಕ್ಕರ್ ನೀಡಿದ್ದಾರೆ.

    ಚಾಮರಾಜಪೇಟೆಯಲ್ಲಿ ಮಾತನಾಡಿದ ಜಮೀರ್ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರನ್ನು ಹೋಲಿಕೆ ಮಾಡಿ ಕುಮಾರಸ್ವಾಮಿಯವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ನಿಜವಾದ ಜನ ನಾಯಕ ಎಂದು ಹಾಡಿ ಹೊಗಳಿದ್ದಾರೆ. ಜೆಡಿಎಸ್ ಕ್ವಾರಂಟೈನ್ ಆಗಿದೆ. ಏನಾಗಿದೆ ಜೆಡಿಎಸ್ ಹೋಂ ಕ್ವಾರಂಟೈನ್ ಆಗಿದೆ. ಒಂದು ಮಾತು ಹೇಳ್ತೀನಿ ಮೊದಲಿಂದ ನಾನು ಕುಮಾರಸ್ವಾಮಿ ಹೋಗು ಬಾ ಅಂತ ಏಕವಚನದಲ್ಲೇ ಮಾತನಾಡುತ್ತಾ ಇದ್ದಿದ್ದು. ಈಗ ಅವರು ಎರಡೆರಡು ಬಾರಿ ಸಿಎಂ ಆಗಿದ್ದಾರೆ ಅವರನ್ನು ಕುಮಾರಣ್ಣ ಅಂತಾನೆ ಕರಿಯೋಣ ಬಿಡಿ ಎಂದು ಕಿಚಾಯಿಸಿದ್ದಾರೆ. ಇದನ್ನೂ ಓದಿ: ಫ್ರೀ ವ್ಯಾಕ್ಸಿನ್ ನೀಡ್ತಿರೋದು ನಾನು, ನನ್ನ ಫೋಟೋ ಹಾಕಬೇಕು ಅಲ್ವಾ?- ಜಮೀರ್

    ಕುಮಾರಸ್ವಾಮಿಯವರು ಮೊನ್ನೆ ಹೇಳಿದ್ದಾರೆ ಎಲ್ಲಾ ಸಹವಾಸ ಬಿಟ್ಟು ತೋಟದ ಮನೆ ಸೇರಿಕೊಂಡಿದ್ದೀನಿ ಅಂತ. ತೋಟದ ಮನೆ ಸೇರಿಕೊಳ್ಳಿ ಅಂತ ಜನ ಎರೆಡೆರಡು ಬಾರಿ ಸಿಎಂ ಮಾಡಿದ್ದ ನಿಮ್ಮನ್ನು, ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಈ ಸಂದರ್ಭದಲ್ಲಿ ತೋಟ ಸೇರಿಕೊಳ್ಳೋದ. ನಮ್ಮ ನಾಯಕ ಸಿದ್ದರಾಮಯ್ಯ ನೋಡಿ ಜನರ ಮಧ್ಯೆ ಇದ್ದಾರೆ. ಅವರಿಗು ಎರಡೆರಡು ಬಾರಿ ಆರೋಗ್ಯ ಸರಿ ಇರಲಿಲ್ಲ. ನೀವು ಹೊರಗೆ ಬರಬೇಡಿ ಎಂದು ಹೇಳಿದ್ದೆವು. ಆದರೂಕೇಳಲಿಲ್ಲ ಆಸ್ಪತ್ರೆಗೆ ಹೋಗಿ ಬಂದ ಎರಡೇ ದಿನಕ್ಕೆ ಹೊರಗೆ ಬಂದರು. ಇದು ಜನ ನಾಯಕ ಅಂದರೆ. ಹೀಗೆ ಇರಬೇಕು ಹೆದರಿ ಮನೆಯಲ್ಲಿ ಕೂರೋದಲ್ಲ ಜನರ ಮಧ್ಯೆ ಬಂದು ಕಷ್ಟ ಸುಖ ಕೇಳಬೇಕು ಎಂದರು.

    ಬನ್ನಿ ಸಾರ್ ಹೋಗೋಣ ಜನರ ಮಧ್ಯೆ. ನಾನು ನಿಮ್ಮನ್ನು ಕರೀತಿಲ್ಲ ಜನರೇ ನಿಮ್ಮನ್ನ ಕರಿಬೇಕು ಅಂತಾರೆ. ಅದಕ್ಕೆ ನಿಮ್ಮನ್ನೆ ಕರಿತೀನಿ ಬೇರೆಯವರನ್ನು ಕರಿರಿ ಅಂದ್ರೆ ಅವರನ್ನೇ ಕರೀತಿನಿ. ಆದರೆ ಜನ ಸಿದ್ದರಾಮಯ್ಯ ಅವರನ್ನು ಕರಿರಿ ಅಂತಾರೆ. ನನ್ನ ಹಾಗೂ ಕುಮಾರಸ್ವಾಮಿ ನಡುವಿನ ಫ್ಲ್ಯಾಟ್ ಗಲಾಟೆಯಲ್ಲಿ ನನಗೆ ಯಾರು ಎಚ್ಚರಿಕೆ ಕೊಟ್ಟಿಲ್ಲ ಆ ವಿವಾಧ ಬಗೆಹರಿದಿದೆ ಎಂದು ಸ್ಪಷ್ಟನೆ ನೀಡಿದರು.

  • ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1

    ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ 13 ದೇಶಗಳ ನಾಯಕರ ಪೈಕಿ ಶೇ.66 ಅಂಕಗಳೊಂದಿಗೆ ನಂ 1 ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಹಲವು ದೇಶಗಳ ನಾಯಕರನ್ನು ಹಿಂದಿಕ್ಕಿದ್ದಾರೆ.

    ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ಈ ರೇಟಿಂಗ್‍ನ್ನು ಮೋದಿಗೆ ನೀಡಿದೆ. ಈ ಸಂಸ್ಥೆ ಪ್ರತಿ ವರ್ಷ ವಿಶ್ವದ ಅಗ್ರಗಣ್ಯ ನಾಯಕರ ಬಗ್ಗೆ ರೇಟಿಂಗ್ ಕಲೆಹಾಕುತ್ತದೆ. ಈ ಪೈಕಿ ಮೋದಿ ಅವರಿಗೆ ಶೇ.66 ರೇಟಿಂಗ್ ಪಡೆದುಕೊಂಡು ಮೊದಲ ಸ್ಥಾನ ಪಡೆದಿದ್ದಾರೆ. ಮೋದಿ ಅವರು ಭಾರತದಲ್ಲಿ ಕೊರೊನಾ ಎರಡನೇ ಅಲೆಯನ್ನು ದಿಟ್ಟವಾಗಿ ಎದುರಿಸಲು ತೆಗೆದುಕೊಂಡ ನಿರ್ಧಾರ ಮತ್ತು ದೇಶವನ್ನು ಮುನ್ನಡೆಸುತ್ತಿರುವ ರೀತಿಗೆ ಈ ರೇಟಿಂಗ್ ಬಂದಿದೆ ಎಂದು ವರದಿಯಾಗಿದೆ. ಈ ನಡುವೆ ಶೇ.28 ರೇಟಿಂಗ್ ಮೋದಿಯವರ ವಿರುದ್ಧ ಬಂದಿದೆ. ಇದನ್ನೂ ಓದಿ: ಕೃಷಿ ಕಾನೂನು ವಾಪಸ್ ಪಡೆಯಲ್ಲ: ಕೇಂದ್ರ ಕೃಷಿ ಸಚಿವ ತೋಮರ್

    ಮೋದಿ ಬಳಿಕ ಅಧಿಕ ರೇಟಿಂಗ್ ಪಡೆದವರ ಪೈಕಿ ಶೇ. 65 ರೇಟಿಂಗ್ ನೊಂದಿಗೆ ಇಟಲಿಯ ಪ್ರಧಾನಿ ಮಾರಿಯೋ ದಾರ್ಗಿ ಎರಡನೇ ಸ್ಥಾನದಲ್ಲಿದ್ದಾರೆ. ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ 63 ರೇಟಿಂಗ್ ಪಡೆದರೆ, ಶೇ 54 ರೇಟಿಂಗ್ ಪಡೆದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ 4ನೇ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶೇ.53 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದ್ದಾರೆ. ಯುಎಸ್ ನ ಅಧ್ಯಕ್ಷ ಜೋ ಬಿಡೆನ್ ಶೇ. 53 ರೇಟಿಂಗ್ ಪಡೆದು ಆರನೇ ಸ್ಥಾನ ಪಡೆದುಕೊಂಡಿದ್ದಾರೆ.

  • ಭಾರತ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಕೋವಿಡ್‍ಗೆ ಬಲಿ

    ಭಾರತ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಕೋವಿಡ್‍ಗೆ ಬಲಿ

    ಉಡುಪಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಮಹೇಶ್ ಶೇಖರ ಪದ್ದು ಬಂಗೇರ ಕೋವಿಡ್‍ಗೆ ಬಲಿಯಾಗಿದ್ದಾರೆ.

    ಎಂಬತ್ತರ ದಶಕದಲ್ಲಿ ದೇಶದ ಫುಟ್ಬಾಲ್ ತಂಡವನ್ನು ಮುನ್ನಡೆಸಿದ್ದ ಉಡುಪಿ ಮೂಲದ ಶೇಖರ್ ಪದ್ದು ಬಂಗೇರ ಅವರಿಗೆ 74 ವರ್ಷ ವಯಸ್ಸಾಗಿತ್ತು. ಚಿಕ್ಕಂದಿನಲ್ಲೇ ಉಡುಪಿಯಿಂದ ಮುಂಬೈಗೆ ತೆರಳಿ ಅವರು ಜೀವನ ರೂಪಿಸಿಕೊಂಡಿದ್ದರು. ಭಾರತ ತಂಡದ ಗೋಲ್ ಕೀಪರ್ ಹಾಗೂ ಕ್ಯಾಪ್ಟನ್ ಕೂಡ ಆಗಿದ್ದ ಶೇಖರ್, ಮೂಲತಃ ಉಡುಪಿಯ ಬಡಾನಿಡಿಯೂರಿನವರು. ಶೇಖರ್ ಬಹುಕಾಲ ಮುಂಬೈಯಲ್ಲೇ ವಾಸವಾಗಿದ್ದರು. ಹಲವು ಪ್ರತಿಷ್ಠಿತ ಕ್ಲಬ್-ಸಂಸ್ಥೆಗಳಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿದ್ದು, ಈಗಲೂ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಸಿನಿಮಾ ಮಾತ್ರವಲ್ಲ, ಫುಟ್ಬಾಲ್ ಫೀಲ್ಡ್‌ನಲ್ಲೂ ಸನ್ನಿ ಕಮಾಲ್

    ಮುಂಬೈನಲ್ಲಿ ಇದ್ದಾಗಲೇ ಶೇಖರ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಕೆಲ ತಿಂಗಳ ಹಿಂದೆ ಮುಂಬೈನಿಂದ ಉಡುಪಿಗೆ ಆಗಮಿಸಿದ್ದರು. ಬಳಿಕ ಇಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಶೇಖರ್ ಮೃತಪಟ್ಟಿದ್ದಾರೆ. ಉಡುಪಿಯ ನಗರದ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ವಿಧಿವತ್ತಾಗಿ ಅಂತಿಮ ಸಂಸ್ಕಾರ ಪ್ರಕ್ರಿಯೆ ನಡೆಯಿತು.

  • ಉಚಿತವಾಗಿ ಬಿಡಲು ಒಪ್ಪದ ಟೋಲ್ ಸಿಬ್ಬಂದಿ- ಬಿಜೆಪಿ ಮುಖಂಡನಿಂದ ಹಲ್ಲೆ

    ಉಚಿತವಾಗಿ ಬಿಡಲು ಒಪ್ಪದ ಟೋಲ್ ಸಿಬ್ಬಂದಿ- ಬಿಜೆಪಿ ಮುಖಂಡನಿಂದ ಹಲ್ಲೆ

    ಕೋಲಾರ: ನಗರದ ಗಡಿಯಲ್ಲಿರುವ ಟೋಲ್‍ನಲ್ಲಿ ಉಚಿತವಾಗಿ ತಮ್ಮ ಕಾರನ್ನು ಬಿಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮುಖಂಡ ಟೋಲ್ ಸಿಬ್ಬಂದಿ ಹಾಗೂ ನಿವೃತ್ತ ಯೋಧನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

    ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಟೋಲ್ ಬಳಿ ಘಟನೆ ನಡೆದಿದ್ದು, ಬಿಜೆಪಿ ಮುಖಂಡ ಹಲ್ಲೆ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಿಜೆಪಿ ಸ್ಥಳೀಯ ಮುಖಂಡ ವಿಶ್ವನಾಥ ರೆಡ್ಡಿ ಹಾಗೂ ಆತನ ಸಹಚರರು ತಮ್ಮ ಪರಿಚಯದ ಪ್ರಭಾವಿ ವ್ಯಕ್ತಿಯೊಬ್ಬರ ಕಾರನ್ನು ಟೋಲ್ ಕಟ್ಟಿಸಿಕೊಳ್ಳದೆ ಉಚಿತವಾಗಿ ಬಿಡಲು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಉಚಿತವಾಗಿ ಬಿಡಲು ಟೋಲ್ ಸಿಬ್ಬಂದಿ ಒಪ್ಪಿಲ್ಲ, ಹೀಗಾಗಿ ಟೋಲ್ ಭದ್ರತೆಗೆ ನಿಯೋಜನೆ ಮಾಡಲಾಗಿದ್ದ ನಿವೃತ್ತ ಯೋಧ ವಿಜಯ್ ಮೇಲೆ ಹಲ್ಲೆ ಮಾಡಲಾಗಿದೆ.

    ಯೋಧನ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದದಲ್ಲಿ ವೈರಲ್ ಅಗಿದೆ. ಟೋಲ್ ಸಿಬ್ಬಂದಿಯೊಂದಿಗೆ ಸ್ಥಳೀಯ ಮುಖಂಡರ ನಡೆದುಕೊಂಡ ರೀತಿಗೆ ಆಕ್ರೊಶ ವ್ಯಕ್ತವಾಗಿದೆ.