Tag: ನಾಯಂಡಹಳ್ಳಿ

  • ಬೆಂಗಳೂರಿನ ಗುಜುರಿ ಅಂಗಡಿಯಲ್ಲಿ ಅಗ್ನಿ ಅವಘಡ

    ಬೆಂಗಳೂರಿನ ಗುಜುರಿ ಅಂಗಡಿಯಲ್ಲಿ ಅಗ್ನಿ ಅವಘಡ

    ಬೆಂಗಳೂರು: ಗುಜುರಿ ಅಂಗಡಿಯೊಂದು ಹೊತ್ತಿ ಉರಿದಿರುವ ಘಟನೆ ಮೈಸೂರು ರಸ್ತೆಯ ನಾಯಂಡಹಳ್ಳಿ( Nayanda Halli) ಬಳಿ ನಡೆದಿದೆ.

    ಇಂದು ಮುಂಜಾನೆ ಸುಮಾರು 5:30ರಲ್ಲಿ ಗುಜುರಿ ಅಂಗಡಿಗೆ ಬೆಂಕಿ ತಗುಲಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ತೀವ್ರ ಬೆಂಕಿಯ ಪರಿಣಾಮ ಗುಜುರಿ ಅಂಗಡಿಯಲ್ಲಿದ್ದ ವೆಸ್ಟೇಜ್ ಎಲ್ಲವೂ ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ಮೋದಿಯವರು ಪಿತ್ರಾರ್ಜಿತ ಆಸ್ತಿಯಿಂದ ಜಾಹೀರಾತುಗಳಿಗೆ ದುಡ್ಡು ನೀಡುತ್ತಿದ್ದಾರೆಯೇ: ದಿನೇಶ್ ಗುಂಡೂರಾವ್ ಪ್ರಶ್ನೆ

    ಮುಂಜಾನೆಯಲ್ಲಿ ಅಂಗಡಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಪಾಯವಾಗಿಲ್ಲ. ಅದರೆ ಘಟನೆಯಿಂದ ತೀವ್ರ ನಷ್ಟವಾಗಿದೆ. ಕೂಡಲೇ ಸ್ಥಳಕ್ಕೆ 4 ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಆಪರೇಷನ್‌ ಕಾಂಗ್ರೆಸ್‌ – ಕೊತ್ತುರು ಬಾಂಬ್‌ಗೆ ಸಮೃದ್ಧಿ, ವೆಂಕಟಶಿವಾರೆಡ್ಡಿ ಸ್ಪಷ್ಟನೆ

     

  • ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ- ಹೊತ್ತಿ ಉರಿದ ಪ್ಲಾಸ್ಟಿಕ್ ಗೊಡಾನ್

    ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ- ಹೊತ್ತಿ ಉರಿದ ಪ್ಲಾಸ್ಟಿಕ್ ಗೊಡಾನ್

    ಬೆಂಗಳೂರು: ಬೆಂಕಿ ಅವಘಡ (Fire accident) ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಾಯಂಡಹಳ್ಳಿಯ (Nayandahalli) ಪ್ರಮೋದ್ ಲೇಔಟ್ ಬಳಿಯ ಪ್ಲಾಸ್ಟಿಕ್ ಗೊಡಾನ್‍ನಲ್ಲಿ ಸಂಭವಿಸಿದೆ.

    ರಾತ್ರಿ ಸಮಯದಲ್ಲಿ ಬೆಂಕಿ ಗೊಡಾನ್‍ಗೆ ತಗಲಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂರು ಎಕರೆ ಇರುವ ಪ್ಲಾಸ್ಟಿಕ್ ಗೊಡಾನ್ ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ದಟ್ಟ ಹೊಗೆ ಆವರಿಸಿದೆ. ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು (Fire Department) ಆಗಮಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿವೆ. ಇದನ್ನೂ ಓದಿ: ಚರ್ಚ್ ಮೇಲೆ ಗುಂಡಿನ ದಾಳಿ 7 ಮಂದಿ ಸಾವು- ಹಲವರಿಗೆ ಗಾಯ

    ಗೊಡಾನ್‍ನಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು ಹಾಗೂ ನಾಲ್ಕಕ್ಕೂ ಹೆಚ್ಚು ಗೂಡ್ಸ್ ವಾಹನಗಳು ಸುಟ್ಟು ಹೋಗಿದ್ದು, 50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಗೊಡಾನ್‍ನ ಕಾರ್ಮಿಕರು ಅಲ್ಲೇ ನಿದ್ರೆಗೆ ಜಾರಿದ್ದು, ಬೆಂಕಿ ಹೊತ್ತಿಕೊಂಡಿದ್ದು ಗಮನಕ್ಕೆ ಬಂದಿಲ್ಲ. ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಬಿಬಿಎಂಪಿ ಮಾರ್ಷಲ್‍ಗಳು ಹೋಗಿ ಕಾರ್ಮಿಕರನ್ನು ಎಚ್ಚರಿಸಿದ್ದಾರೆ. ಒಳಗಿದ್ದ ಗ್ಯಾಸ್ ಸಿಲಿಂಡರ್‌ಗಳನ್ನು ಹೊರಗೆ ಹಾಕಿಸಿ ಅನಾಹುತದ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ.


    ಈ ಹಿಂದೆ ಸ್ಥಳೀಯರು ಗೊಡಾನ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಅನುಮತಿ ನೀಡಿದ್ದ ಬಿಬಿಎಂಪಿ ವಿರುದ್ಧ ಮತ್ತೆ ಜನ ತಿರುಗಿ ಬಿದ್ದಿದ್ದಾರೆ. ಸ್ಥಳಕ್ಕೆ ಬ್ಯಾಟರಾಯನಪುರ (Byatarayanapura) ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕಾರು, ಬೈಕ್‌ಗೆ ಡಿಕ್ಕಿ – ಸವಾರ ಆಸ್ಪತ್ರೆ ದಾಖಲು

  • ನಮ್ಮ ಮೆಟ್ರೋ ಕಂಬದಲ್ಲಿ ಬಿರುಕು ಮೂಡಿದ್ಯಾಕೆ : ಇಲ್ಲಿದೆ ಪ್ರಮುಖ ಕಾರಣಗಳು

    ನಮ್ಮ ಮೆಟ್ರೋ ಕಂಬದಲ್ಲಿ ಬಿರುಕು ಮೂಡಿದ್ಯಾಕೆ : ಇಲ್ಲಿದೆ ಪ್ರಮುಖ ಕಾರಣಗಳು

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಕಳಪೆ ಕಾಮಗಾರಿ ನಡೆದಿದ್ಯಾ ಎನ್ನುವ ಅನುಮಾನ ಈಗ ಎದ್ದಿದೆ.

    ಮೆಟ್ರೋ ಮಾರ್ಗದ ಒಂದು ಕಂಬದಲ್ಲಿ ಬಿರುಕು ಮೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರು ವಿವಿಧ ವಿಶ್ಲೇಷಣೆ ನೀಡಿದ್ದು ಕಳಪೆ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

    ಬಿರುಕು ಮೂಡಲು ಕಾರಣವಾದ ಅಂಶಗಳು ಏನಿರಬಹುದು?
    – ಮೆಟ್ರೋ ಕಾಮಗಾರಿ ಅತ್ಯಂತ ಗುಣಮಟ್ಟದಿಂದ ಕೂಡಿರಲೇಬೇಕು. ಇದರ ಪಿಲ್ಲರ್, ಜಾಯಿಂಟ್ ಭಾಗ, ಟ್ರ್ಯಾಕ್ ಆಯಸ್ಸು ಬರೋಬ್ಬರಿ 60 ವರ್ಷ ಇರಬೇಕು. ಹೀಗಾಗಿ ಉದ್ಘಾಟನೆಯಾದ 7 ವರ್ಷಕ್ಕೆ ಬಿರುಕು ಬಿಡಲು ಸಾಧ್ಯವೇ ಇಲ್ಲ. ಆದರೆ ಇದು ಕಳಪೆ ಕಾಮಗಾರಿಯ ಸಂಕೇತ ಎನ್ನುವುದು ಸ್ಪಷ್ಟವಾಗುತ್ತದೆ.

    – ಮೆಟ್ರೋ ಪಿಲ್ಲರ್ ಮೇಲಿನ ಲೋಡ್ ನಿಗದಿತ ಸಾಮರ್ಥ್ಯ ಕ್ಕಿಂತ ಹೆಚ್ಚಾಗಿದೆ. ಮೆಟ್ರೋ ರೈಲಿಗೆ ಹೆಚ್ಚುವರಿ ಕೋಚ್ ಈಗ ಹಾಕಲಾಗಿದೆ. ಲಾಭದ ದೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಮೆಟ್ರೋ ಓಡಾಟದಿಂದ ಪಿಲ್ಲರ್ ಗಳ ಮೇಲಿನ ಒತ್ತಡ ಹೆಚ್ಚಾಗಿರಬಹುದು. ಇದರಿಂದಾಗಿ ಬಿರುಕು ಬಿಟ್ಟಿರಬಹುದು.

    – ಪ್ರತಿ ವರ್ಷಕ್ಕೆ ಪಿಲ್ಲರ್ ಬೀಮ್, ಟ್ರ್ಯಾಕ್, ಪಿಲ್ಲರ್ ಗಳ ಗುಣಮಟ್ಟದ ಪರಿಶೀಲನೆ ಮಾಡಬೇಕು. ಆದರೆ ಬಿರುಕು ಬಿಟ್ಟ ಮೇಲೆ ನಮ್ಮ ಮೆಟ್ರೋ ಎಚ್ಚೆತ್ತುಕೊಂಡಿದೆ. ಇವರೆಗೂ ಯಾವುದೇ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಟ್ರೋ ಕಾಮಗಾರಿಯಲ್ಲಿ ಗೋಲ್‍ಮಾಲ್ ನಡೆದಿದೆ.

    – ಕೇವಲ ಟ್ರಿನಿಟಿ ಸರ್ಕಲ್‍ನ 155 ಪಿಲ್ಲರ್ ಬಳಿ ಮಾತ್ರವಲ್ಲ. ಟ್ರಿನಿಟಿ ಪಕ್ಕದ ಪಿಲ್ಲರ್ ಕೂಡ ಶಿಥಿಲವಾಸ್ಥೆಯಲ್ಲಿದ್ದು, ಸಿಮೆಂಟ್ ಕಿತ್ತು ಹೋಗಿದೆ. ಕೆಲವಡೆ ತೇಪೆ ಹಚ್ಚಿರುವ ಕಾಮಗಾರಿಯೂ ಕಾಣುತ್ತದೆ. ಅಷ್ಟೇ ಅಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಇರುವ ಕಾರಣ ಪಿಲ್ಲರ್ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿರುವ ಸಾಧ್ಯತೆಯಿದೆ.

    ರಾತ್ರಿ ಕಾರ್ಯಾಚರಣೆ:
    ಮೆಟ್ರೋ ದುರಸ್ತಿ ಆರಂಭವಾಗಲಿದ್ದು, ಸಂಚಾರಕ್ಕೆ ಅಸ್ತವ್ಯಸ್ತವಾಗದಂತೆ ಮಧ್ಯರಾತ್ರಿಯೇ ಕಾಮಗಾರಿ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈಗ ಕಾಮಗಾರಿ ನಡೆಸಿದರೆ ಮೆಟ್ರೋ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ರಾತ್ರಿ ಹನ್ನೊಂದು ಗಂಟೆಗೆ ಮೆಟ್ರೋ ಸಂಪೂರ್ಣ ಸಂಚಾರ ನಿಲ್ಲಲ್ಲಿದೆ. ಈ ವೇಳೆ ದುರಸ್ತಿ ಕಾರ್ಯ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ಮೂಲಗಳು ತಿಳಿಸಿವೆ.

    https://youtu.be/KoPKGJPuua8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ದಿನದ ಹಿಂದೆಯೇ ನನ್ನ ಗಮನಕ್ಕೆ ಬಂದಿದೆ: ಸಿಎಂ ಎಚ್‍ಡಿಕೆ

    ಮೂರು ದಿನದ ಹಿಂದೆಯೇ ನನ್ನ ಗಮನಕ್ಕೆ ಬಂದಿದೆ: ಸಿಎಂ ಎಚ್‍ಡಿಕೆ

    ಬೆಂಗಳೂರು: ಮೆಟ್ರೋ ಮಾರ್ಗದ ಒಂದು ಕಂಬದಲ್ಲಿ ಬಿರುಕು ಮೂಡಿದ ಬಗ್ಗೆ ನನಗೆ ಮೂರು ದಿನಗಳ ಹಿಂದೆಯೇ ಮಾಹಿತಿ ಬಂದಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

    ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್ ನಲ್ಲಿ ಬಿರುಕು ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಜ್ಞರ ಜೊತೆಗೆ ಮಾತುಕತೆ ನಡೆಸಿ ತನಿಖೆಗೆ ಆದೇಶ ನೀಡಿರುವೆ. ಬೈಯಪ್ಪನಹಳ್ಳಿ ಮೈಸೂರು ರಸ್ತೆ ಸಂಚಾರ ಸ್ಥಗಿತಕ್ಕೂ ಸೂಚನೆ ನೀಡಿರುವೆ. ಯಾವುದೇ ಕಾರಣಕ್ಕೂ ಅನಾಹುತ ಸಂಭವಿಸದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದರು.

    ಈಗಾಗಲೇ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಮೆಟ್ರೋ ವೇಗವನ್ನು ಕಡಿಮೆ ಮಾಡಿ ಸಂಚಾರ ನಡೆಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಚ್ಚರಿಕೆ ಉದ್ದೇಶದಿಂದ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದೇನೆ. ಅಲ್ಲದೆ ತಕ್ಷಣವೇ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿರುವೆ ಎಂದು ಕುಮಾರಸ್ವಾಮಿ ಹೇಳಿದರು.

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡಿರುವ ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದಾಗ, ನನಗೆ ಮಾಹಿತಿಯಿಲ್ಲ. ಈ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದರು.

    https://www.youtube.com/watch?v=KoPKGJPuua8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ ದರೋಡೆಕೋರರ ಅಟ್ಟಹಾಸ – ಯುವಕನನ್ನು ಕೊಂದು ಮೊಬೈಲ್, ಪರ್ಸ್ ಕಳ್ಳತನ

    ಬೆಂಗ್ಳೂರಲ್ಲಿ ದರೋಡೆಕೋರರ ಅಟ್ಟಹಾಸ – ಯುವಕನನ್ನು ಕೊಂದು ಮೊಬೈಲ್, ಪರ್ಸ್ ಕಳ್ಳತನ

    ಬೆಂಗಳೂರು: ಮೊಬೈಲ್ ದೋಚುವ ನೆಪದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿ ಮೆಟ್ರೋ ನಿಲ್ದಾಣ ಬಳಿ ನಡೆದಿದೆ.

    ತಡರಾತ್ರಿ 11.40ರ ಸುಮಾರಿಗೆ ಮೆಟ್ರೋ ನಿಲ್ದಾಣ ಮುಂಬಾಗದಲ್ಲಿ ನಡೆದುಕೊಂಡು ಬರುತ್ತಿದ್ದ ಯುವಕನನ್ನು ಮೊಬೈಲ್ ರಾಬರಿ ಮಾಡುವ ದುಷ್ಕರ್ಮಿಗಳು ಚಾಕುವಿನಿಂದ ಎದೆಗೆ ಇರಿದು ಕೊಲೆ ಮಾಡಿ ಮೊಬೈಲ್ ಮತ್ತು ಪರ್ಸ್ ದೋಚಿದ್ದಾರೆ. ಯುವಕನ ಯಾರು? ಎಲ್ಲಿಯವರು? ಎಂಬುದರ ಬಗ್ಗೆ ತಿಳಿದುಬಂದಿಲ್ಲ.

    ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

  • ಯಮ ಗುಂಡಿಯಾಯ್ತು, ರಾಜಕಾಲುವೆ ಆಯ್ತು, ಸಿಲಿಕಾನ್ ಸಿಟಿಯಲ್ಲಿವೆ ಡೆಡ್ಲಿ ಅಂಡರ್‍ಪಾಸ್‍ಗಳು!

    ಯಮ ಗುಂಡಿಯಾಯ್ತು, ರಾಜಕಾಲುವೆ ಆಯ್ತು, ಸಿಲಿಕಾನ್ ಸಿಟಿಯಲ್ಲಿವೆ ಡೆಡ್ಲಿ ಅಂಡರ್‍ಪಾಸ್‍ಗಳು!

    ಬೆಂಗಳೂರು: ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಾಹನ ಸವಾರರು ಎಚ್ಚರಕೆಯಿಂದ ಸಂಚರಿಸಬೇಕಾಗಿದೆ. ಯಾಕಂದ್ರೆ ಸರ್ಕಾರ ಕಟ್ಟಿರೋ ಹೈಟೆಕ್ ಅಂಡರ್ ಪಾಸ್‍ಗಳು ಮೈಮೇಲೆ ಬೀಳುವ ಸಂಭವಗಳಿವೆ.

    ಹೌದು. ಸಿಲಿಕಾನ್ ಸಿಟಿಯ ಟ್ರಾಫಿಕ್ ಕಡಿಮೆ ಮಾಡಲು ನಿರ್ಮಾಣಗೊಂಡಿರೋ ಅಂಡರ್‍ಪಾಸ್‍ಗಳು ಮೃತ್ಯುಕೂಪವಾಗಿ ಪರಿಣಮಿಸಿವೆ. ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಅನ್ನೋ ಜಾರ್ಜ್ ಸಾಹೇಬ್ರು ಸ್ವಲ್ಪ ಅಂಡರ್‍ಪಾಸ್‍ಗಳತ್ತ ಗಮನಹರಿಸಬೇಕಾಗಿದೆ. ಕಾವೇರಿ ಜಂಕ್ಷನ್ ಅಂಡರ್‍ಪಾಸ್, ಲೀ ಮೆರೆಡಿಯನ್ ಅಂಡರ್‍ಪಾಸ್, ಹೌಸಿಂಗ್ ಬೋಡ್ ಅಂಡರ್‍ಪಾಸ್, ನಾಯಂಡಹಳ್ಳಿ ಅಂಡರ್‍ಪಾಸ್ ಸೇರಿದಂತೆ ಇತರೆ ಅಂಡರ್‍ಪಾಸ್‍ಗಳು ಕಳಪೆ ಕಾಮಗಾರಿಯಿಂದಾಗಿ ಬೀಳುವ ಹಂತಕ್ಕೆ ತಲುಪಿದೆ. ಈ ಎಲ್ಲಾ ಅಂಡರ್‍ಪಾಸ್‍ಗಳ ಗೋಡೆ ಗೋಡೆಗಳಲ್ಲೂ ನೀರು ಸೋರುತ್ತಿದ್ದು ಯಾವುದೇ ಕ್ಷಣದಲ್ಲಾದ್ರು ಕುಸಿದು ಬೀಳುವ ಆತಂಕ ಕಾಡುತ್ತಿದೆ.

    ಕಾವೇರಿ ಜಂಕ್ಷನ್ ಅಂಡರ್‍ ಪಾಸ್: ಬೆಂಗಳೂರಲ್ಲಿ ಯಾವಾಗ ಮಳೆ ಬಂದ್ರೂ ಮೊದಲು ನೀರು ನಿಲ್ಲೋದು ಇದೇ ಅಂಡರ್‍ಪಾಸ್‍ನಲ್ಲಿ. ಹತ್ತಾರು ಅಲ್ಲ ನೂರಾರು ವಾಹನಗಳು ಈ ಅಂಡರ್‍ಪಾಸ್‍ನಲ್ಲಿ ಸಿಲುಕಿ ಪ್ರಾಣ ಉಳಿಸಿಕೊಳ್ಳೋಕೆ ಒದ್ದಾಡಿದ್ದಾರೆ. ಇದನ್ನ ಬರೀ 48 ಗಂಟೆಯಲ್ಲಿ ಕಟ್ಟಿ ಮೀಸೆ ತಿರುವಿದ್ದವರು ಈ ಕಡೆ ತಲೆ ಹಾಕಿಲ್ಲ. ಅಂಡರ್‍ಪಾಸ್ ಸೋರ್ತಿದ್ದು ಯಾವಾಗ ಬೀಳುತ್ತೋ ಗೊತ್ತಿಲ್ಲ. ಕಾವೇರಿ ಜಂಕ್ಷನ್ ಅಂಡರ್ ಪಾಸ್ ತಪ್ಪಿಸಿಕೊಂಡು ಸ್ಯಾಂಕಿ ಕೆರೆ ಹತ್ತಿರದಲ್ಲಿರೋ ಲೀ ಮೆರಿಡಿಯನ್ ಅಂಡರ್‍ಪಾಸ್ ಹತ್ರ ಅಪ್ಪಿತಪ್ಪಿನೂ ಹೋಗ್ಬೇಡಿ. ಈ ಅಂಡರ್‍ಪಾಸ್ ಕೂಡ ಸೋರುತ್ತಿದ್ದು ಈಗಾಗ್ಲೇ ಬಿರುಕು ಬಿಟ್ಟಿವೆ.

    ಹೌಸಿಂಗ್‍ ಬೋರ್ಡ್ ಅಂಡರ್‍ ಪಾಸ್: ಇದನ್ನ ಕಟ್ಟಿ 6 ತಿಂಗಳು ಕಳೆದಿಲ್ಲ. ಅದಾಗ್ಲೇ ಗೋಡೆಗಳೆಲ್ಲಾ ಬಿರುಕುಬಿಟ್ಟಿವೆ. ನೀರು ಸೋರುತ್ತಿದ್ದು ಅಂಡರ್‍ಪಾಸ್ ಕೆಳಗೆ ನಿಲ್ತಿದೆ. ಸಿದ್ದರಾಮಯ್ಯನವರೇ ಉದ್ಘಾಟಿಸಿದ್ದ ಈ ಅಂಡರ್‍ಪಾಸ್ ಈಗ ಡೆಡ್ಲಿ ಅಂಡರ್‍ಪಾಸ್ ಆಗಿದೆ.

    ನಾಯಂಡಹಳ್ಳಿ ಅಂಡರ್‍ ಪಾಸ್ ಜೊತೆ ಫ್ಲೈ ಓವರ್ ಕೆಳಗೆ ಹೋದ್ರೆ ನಿಮ್ಮ ಪ್ರಾಣ ಹಾರಿಹೋಗೋದು ನಿಶ್ಚಿತ. ಇಷ್ಟೆಲ್ಲಾ ತೂತುಗಳಿದ್ರೂ ಬಿಬಿಎಂಪಿಯವರು ತಲೆಕೆಡಿಸಿಕೊಳ್ಳುತ್ತಿಲ್ಲ. ಅಂಡರ್ ಪಾಸ್ ಬಿದ್ದು ಅದರೊಳಗೆ ಸಿಲುಕಿ ಮೃತಪಟ್ಟರೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ತಾರೆ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಂದ ಇರಬೇಕಾಗಿದೆ.

    ಈಗಾಗಲೇ ರಾಜಾಕಾಲುವೆಯ ಕಳಪೆ ಕಾಮಗಾರಿಯಿಂದ 5 ಜನರ ಬಲಿಯಾಗಿದೆ. ಈ ಅಂಡರ್‍ಪಾಸ್‍ಗಳಿಂದಾಗಿ ಇನ್ನಷ್ಟು ಬಲಿಯಾಗೋ ಪ್ರಸಂಗ ಬಂದಿದೆ. ವಿವಿಐಪಿಗಳು ಓಡಾಡೋ ಅಂಡರ್‍ಪಾಸ್‍ಗಳ ಕಥೆಯೇ ಹೀಗಾದ್ರೆ ಇನ್ನು ಜನಸಮಾನ್ಯರು ಓಡಾಡೋ ಅಂಡರ್‍ ಪಾಸ್‍ಗಳ ಸ್ಥಿತಿ ಏನು ಎಂಬುದು ಜನರ ಪ್ರಶ್ನೆ.

  • ಬೆಂಗಳೂರಿನ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ – ಲಾರಿ ಹರಿದು ಸವಾರೆ ದಾರುಣ ಸಾವು

    ಬೆಂಗಳೂರಿನ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ – ಲಾರಿ ಹರಿದು ಸವಾರೆ ದಾರುಣ ಸಾವು

    ಬೆಂಗಳೂರು: ನಗರದ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗುಂಡಿಗೆ ಬಿದ್ದ ಪರಿಣಾಮ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ನಾಯಂಡನಹಳ್ಳಿ ಸಿಗ್ನಲ್ ಬಳಿ ನಡೆದಿದೆ. ಮೃತ ದುರ್ದೈವಿ ಮಹಿಳೆಯನ್ನು 52 ವರ್ಷದ ರಾಧಾ ಎಂಬುವುದಾಗಿ ಗುರುತಿಸಲಾಗಿದೆ.

    ಬೈಕ್ ನಲ್ಲಿ ತನ್ನ ಅಳಿಯ ರವಿಕುಮಾರ್ ಜೊತೆ ಜೊತೆ ರಾಧಾ ಕಾಡುಗೋಡಿಯಿಂದ ರಾಮನಗರಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಿಗ್ನಲ್ ಬಳಿ ಚಿಕ್ಕ-ಚಿಕ್ಕ ಜಲ್ಲಿಯಿಂದಾಗಿ ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲೇ ನಿರ್ಮಾಣವಾದ ಗುಂಡಿಗೆ ಬಿದ್ದಿದೆ. ಈ ವೇಳೆ ಅಳಿಯ ಎಡಭಾಗಕ್ಕೆ ಬಿದ್ದ ಪರಿಣಾಮ ಸಾವಿನಿಂದ ಪಾರಾಗಿದ್ದಾರೆ. ಆದ್ರೆ ಹಿಂಬದಿಯಲ್ಲಿ ಕುಳಿತಿದ್ದ ಅತ್ತೆ ಬಲ ಬದಿಗೆ ಬಿದ್ದಿದ್ದು, ಕೂಡಲೇ ಹಿಂದಿನಿಂದ ಬರುತ್ತಿದ್ದ ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಅವರ ಮೇಲೆ ಹರಿದಿದೆ.

    ಘಟನೆಯಿಂದ ಬೈಕ್ ಸವಾರ ರಾಧಾ ಅಳಿಯ ರವಿಕುಮಾರ್‍ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಾಧಾ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಬಳಿಕ ಸ್ಥಳೀಯರು ಜಮಾಯಿಸಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದಾರೆ.

    ಸಿಟಿ ಮಾರ್ಕೆಟ್ ಮೇಲ್ಸೇತುವೆಯ ರಸ್ತೆ ಗುಂಡಿಯು ಅಕ್ಟೋಬರ್ 2ರಂದು ರಾತ್ರಿ ಎರಡು ಜೀವಗಳನ್ನು ಬಲಿ ಪಡೆದಿತ್ತು. ಮರುದಿನ ಬೆಳಿಗ್ಗೆ ಅದೇ ಪ್ರದೇಶದಲ್ಲಿ ಬೈಕ್‍ನಿಂದ ಬಿದ್ದು ಮತ್ತಿಬ್ಬರು ಗಾಯಗೊಂಡಿದ್ದರು. ಜಗಜೀವನ್ ರಾಮನಗರದ ಅಂಥೋಣಿ ಜೋಸೆಫ್ (55) ಹಾಗೂ ಪತ್ನಿ ಸಗಾಯ್ ಮೇರಿ (52) ಮೃತಪಟ್ಟಿದ್ದು, ಅವರ ಆರು ವರ್ಷದ ಮೊಮ್ಮಗಳು ಅಕ್ಯೂಲಾ ಶೆರಿನ್ ಪ್ರಾಣಾಪಾಯದಿಂದ ಪಾರಾಗಿದ್ದಳು.