Tag: ನಾಮಿನೇಷನ್

  • ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

    ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

    ತೆಲುಗಿನ ಖ್ಯಾತ ನಟ ಬಾಲಯ್ಯ (Balayya) ನಿನ್ನೆ ನಾಮ ಪತ್ರ ಸಲ್ಲಿಸಿದ್ದಾರೆ.  ಟಿಡಿಪಿ ಅಭ್ಯರ್ಥಿಯಾಗಿ ಈ ಬಾರಿ ಅವರು ಸ್ಪರ್ಧಿಸಿದ್ದಾರೆ. ಕರ್ನಾಟಕದ ಗಡಿಯ ಹಿಂದೂಪುರ ವಿಧಾನಸಭಾ ಕ್ಷೇತ್ರದಲ್ಲಿ ಅವರು ಗೆಲುವನ್ನು ಅರಸಿ ಹೊರಟಿದ್ದಾರೆ.

    ಈಗಾಗಲೇ ಹಿಂದೂಪುರ (Hindupur) ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಬಾಲಯ್ಯ, ನಾಮಪತ್ರ ಸಲ್ಲಿಸಿದಾಗ ತಮ್ಮ ಆಸ್ತಿಯನ್ನೂ (Property) ಘೋಷಣೆ ಮಾಡಿದ್ದು, ತಮಗಿಂತಲೂ ಪತ್ನಿಯ ಆಸ್ತಿಯೇ ಹೆಚ್ಚಾಗಿರುವುದು ಕಂಡು ಬಂದಿದೆ. 9 ಕೋಟಿ ರೂಪಾಯಿ ಸಾಲವನ್ನು ತೋರಿಸಿದ್ದರೆ, 81 ಕೋಟಿ ರೂಪಾಯಿ ಆಸ್ತಿಯನ್ನು ಬಾಲಯ್ಯ ಹೊಂದಿದ್ದಾರೆ.

     

    ಬಾಲಯ್ಯ ಅವರ ಪತ್ನಿ ವಸುಂಧರಾ 140 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದು, ಬಾಲಯ್ಯ ಪುತ್ರ ಮೋಕ್ಷಜ್ಞ ಹೆಸರಿನಲ್ಲಿ 58 ಕೋಟಿ ರೂಪಾಯಿ ಆಸ್ತಿ ಇದೆ. ಒಟ್ಟಾರೆ ಬಾಲಯ್ಯ ಅವರ ಕುಟುಂಬದ ಆಸ್ತಿ 280.64 ಕೋಟಿ ರೂಪಾಯಿ ಘೋಷಣೆ ಆಗಿದೆ.

  • ನಾಮಿನೇಟ್ ಮಾಡುವ ಅಧಿಕಾರ ಪಡೆದ ಸ್ನೇಹಿತ್

    ನಾಮಿನೇಟ್ ಮಾಡುವ ಅಧಿಕಾರ ಪಡೆದ ಸ್ನೇಹಿತ್

    ಬೆಳಿಗ್ಗೆಯಷ್ಟೇ ತಮಾಷೆಯ ಟಾಸ್ಕ್‌ನಲ್ಲಿ ನಕ್ಕು ನಲಿದಿದ್ದ ಬಿಗ್‌ಬಾಸ್ (Bigg Boss Kannada) ಸ್ಪರ್ಧಿಗಳ ಮುಖದಲ್ಲಿ ನಾಮಿನೇಷನ್ (Nomination) ಹೀಟ್ ಎದ್ದು ಕಾಣುತ್ತಿದೆ. ಅದರ ಒಂದು ಝಲಕ್‌, JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿದೆ.

    ‘ವಿಶೇಷ ಅಧಿಕಾರದ ಅಂಗವಾಗಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್ ಅವರಿಗಷ್ಟೇ ಇರುತ್ತದೆ’ ಎಂದು ಬಿಗ್‌ಬಾಸ್ ಹೇಳಿದ್ದಾರೆ. ವಿಶೇಷ ಅಧಿಕಾರದ ಆಸನದ ಮೇಲೆ ಸ್ಟೈಲಿಶ್ ಆಗಿ ಕೂತಿರುವ ಸ್ನೇಹಿತ್ (Snehith) ಅವರ ಎದುರು ಮನೆಯ ಸದಸ್ಯರು, ತಮ್ಮನ್ನು ಸೇವ್ ಮಾಡಿ ಎಂದು ಸ್ನೇಹಿತ್ ಅವರಿಗೆ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

    ತನಿಷಾ (Tanisha Kuppunda) ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

     

    ವರ್ತೂರ್ ಮಾತಿನಿಂದ ಖುಷಿಯಾಗಿ ನಮ್ರತಾ ಕೇಕೆ ಹಾಕಿದ್ದರೆ, ತನಿಷಾಗೆ ಶಾಕ್ ಆಗಿದೆ. ‘ವರ್ತೂರು ಅವರು ಮೊದಲ ದಿನದಿಂದಲೇ ಹೀಗೆ ಮಾತಾಡಿದ್ದರೆ ನಾನು ಒಪ್ಕೋತಾ ಇದ್ದೆ’ ಎಂದು ಕೋಪ ಮಾಡಿಕೊಂಡಿದ್ದಾರೆ. ಸ್ನೇಹಿತ್‌ ಕೈಗೆ ಸಿಕ್ಕಿರುವ ವಿಶೇಷ ಅಧಿಕಾರ ಹೇಗೆ ಕೆಲಸ ಮಾಡುತ್ತದೆ? ಯಾರ ನೆತ್ತಿಮೇಲೆ ತೂಗುಗತ್ತಿಯಾಗುತ್ತದೆ? ಯಾರಿಗೆ ಅಭಯಹಸ್ತವಾಗಿ ಬದಲಾಗುತ್ತದೆ? ಕಾದು ನೋಡಬೇಕು.

  • ಆಸ್ಕರ್ ಪ್ರಶಸ್ತಿ 2024: ರೇಸ್ ನಲ್ಲಿ ಮಲಯಾಳಂ ‘2018’ ಹೆಸರಿನ ಸಿನಿಮಾ

    ಆಸ್ಕರ್ ಪ್ರಶಸ್ತಿ 2024: ರೇಸ್ ನಲ್ಲಿ ಮಲಯಾಳಂ ‘2018’ ಹೆಸರಿನ ಸಿನಿಮಾ

    ಳೆದ ಸಲ ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗಾಗಿ ಆಸ್ಕರ್ (Oscar) ಪ್ರಶಸ್ತಿ ಬಂದಿತ್ತು. ಈ ಬಾರಿ ದಕ್ಷಿಣದ ಮತ್ತೊಂದು ಸಿನಿಮಾ ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ (Nomination) ಆಗಿದೆ.  ಮಲಯಾಳಂನ 2018 ಹೆಸರಿನ ಚಿತ್ರ ಈ ಬಾರಿ ಆಸ್ಕರ್ ಪ್ರಶಸ್ತಿಗಾಗಿ ಸೆಣಸಲಿದೆ. ಈ ವಿಷಯವನ್ನು ಆಸ್ಕರ್ ಆಯ್ಕೆ ಸಮಿತಿ ಅಧ್ಯಕ್ಷ, ಕನ್ನಡದವರೇ ಆಗಿರುವ ಗಿರೀಶ್ ಕಾಸರವಳ್ಳಿ ತಿಳಿಸಿದ್ದಾರೆ.

    ಟೊವಿನೋ ಥಾಮಸ್ ನಟನೆಯ 2018 ಹೆಸರಿನ ಮಲಯಾಳಂ (Malayalam) ಸಿನಿಮಾ ವಿಶೇಷ ಕಥಾವಸ್ತುವನ್ನು ಹೊಂದಿದೆ. ಕೇರಳದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅತಿವೃಷ್ಠಿ ಸೃಷ್ಟಿಸಿದ ಆವಾಂತರವನ್ನು ಆಧರಿಸಿದ ಚಿತ್ರಿಸಲಾಗಿದೆ. ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಈ ಸಿನಿಮಾವನ್ನು ಕಾಸರವಳ್ಳಿ ಅಧ್ಯಕ್ಷತೆಯ ಕಮೀಟಿಯು ಆಸ್ಕರ್ ಪ್ರಶಸ್ತಿ ಸ್ಪರ್ಧೆಗಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮೂಲಕ ನಡೆಯುತ್ತದೆ. ಇದು ಪ್ರತಿ ವರ್ಷವೂ ಒಂದು ಸಿನಿಮಾವನ್ನು ಆಯ್ಕೆ ಮಾಡಿ, ಸರಕಾರವೇ ಉಳಿದ ವೆಚ್ಚವನ್ನು ಭರಿಸಿ ಕಳುಹಿಸುತ್ತದೆ. ಖಾಸಗಿಯಾಗಿ ಯಾವ ಸಿನಿಮಾಗಳು ಬೇಕಾದರೂ ಸ್ಪರ್ಧಿಸಬಹುದಾಗಿದೆ.

     

    ಬಲಗಮ್, ದಿ ಕೇರಳ ಸ್ಟೋರಿ, ಆಗಸ್ಟ್ 16 ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳನ್ನು ನೋಡಿರುವ ಸದಸ್ಯರು ಕೊನೆಗೆ 2018: ಎವರಿ ಒನ್ ಇಸ್ ಎ ಹೀರೋ ಚಿತ್ರವನ್ನು ಆಯ್ಕೆ ಮಾಡಿದ್ದಾರೆ. ಆಸ್ಕರ್ ನಾಮಿನೇಷನ್ ಯಾದಿಗೆ ಈ ಸಿನಿಮಾ ಸೇರ್ಪಡೆ ಆಗಬೇಕಾದರೆ, ಆಸ್ಕರ್ ಕಮೀಟಿ ಕೂಡ ಈ ಸಿನಿಮಾ ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಮಿನೇಷನ್ ಲಿಸ್ಟ್ ನಲ್ಲಿ ಇಲ್ಲ ‘ದಿ ಕಾಶ್ಮೀರ್ ಫೈಲ್ಸ್’ : ಬಾಯ್ಕಾಟ್ ಆಸ್ಕರ್ ಎಂದ ಫ್ಯಾನ್ಸ್

    ನಾಮಿನೇಷನ್ ಲಿಸ್ಟ್ ನಲ್ಲಿ ಇಲ್ಲ ‘ದಿ ಕಾಶ್ಮೀರ್ ಫೈಲ್ಸ್’ : ಬಾಯ್ಕಾಟ್ ಆಸ್ಕರ್ ಎಂದ ಫ್ಯಾನ್ಸ್

    ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ನಡೆದ ಆಸ್ಕರ್ ಪ್ರಶಸ್ತಿಯ ನಾಮ ನಿರ್ದೇಶನ ಘೋಷಣೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಸಂಜೆ 7 ಗಂಟೆಯ ಹೊತ್ತಿಗೆ ಈ ಪ್ರಕ್ರಿಯೆ ನಡೆದಿದ್ದು ಭಾರತದ ಹಲವು ಸಿನಿಮಾಗಳ ನಾಮಿನೇಷನ್ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ನಿರೀಕ್ಷಿಸಲಾಗಿತ್ತು. ಅದರಲ್ಲೂ ದಿ ಕಾಶ್ಮೀರ್ ಫೈಲ್ ನಾಮ ನಿರ್ದೇಶನ ಪಟ್ಟಿಯಲ್ಲಿ ಇರಲಿದೆ ಎಂದೇ ನಂಬಲಾಗಿತ್ತು. ನಂಬಿಕೆ ಹುಸಿಯಾಗಿದೆ.

    ಈ ಬಾರಿಯ ಆಸ್ಕರ್ ಪ್ರಶಸ್ತಿಗಾಗಿ ಕನ್ನಡದ ಸಿನಿಮಾಗಳಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ, ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರಗಳು ಕೂಡ ಇದ್ದವು. ಜೊತೆಗೆ ತೆಲುಗು ಸಿನಿಮಾ ರಂಗದಿಂದ ಆರ್.ಆರ್.ಆರ್, ತಮಿಳಿನಿಂದ ಇರುವಿನ್ ನಿಲಳ್ ಹಾಗೂ ರಾಕೆಟ್ರಿ ದಿ ನಂಭಿ ಎಫೆಕ್ಟ್ ಚಿತ್ರಗಳು ಸ್ಪರ್ಧೆ ಮಾಡುತ್ತಿವೆ. ಹಿಂದಿಯಿಂದ ಗಂಗೂಬಾಯಿ ಕಾಠಿಯಾವಾಡಿ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳಿವೆ. ಗುಜರಾತಿನಿಂದ ಛೆಲ್ಲೋ ಶೋ, ಚಿತ್ರವೊಂದನ್ನು ಕಳುಹಿಸಲಾಗಿದೆ. ಮಿ ವಸಂತ್ ರಾವ್, ದಿ ನೆಕ್ಸ್ಸಟ್ ಮಾರ್ನಿಂಗ್, ತುಜೆ ಸಾಥಿ ಕಹಿ ಸೇರಿದಂತೆ ಭಾರತದಿಂದಲೇ ಹಲವು ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು. ಆದರೆ, ಈ ಸಿನಿಮಾಗಳ ಪೈಕಿ ಕೇವಲ ಮೂರು ಚಿತ್ರಗಳು ನಾಮಿನೇಷನ್ ಪಟ್ಟಿಯಲ್ಲಿವೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಮತ್ತು ಆಲ್ ದಟ್ ಬ್ರೀಥ್ಸ್, ದಿ ಎಲಿಫೆಂಟ್ ವಿಸ್ಪರ್ಸ್‍ ಕಿರುಚಿತ್ರಗಳು ನಾಮ ನಿರ್ದೇಶನಗೊಂಡಿವೆ. ಆದರೆ, ದಿ ಕಾಶ್ಮೀರ್ ಫೈಲ್ಸ್ ಇಲ್ಲ ಎನ್ನುವ ಕಾರಣಕ್ಕಾಗಿ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಆಸ್ಕರ್ ಹ್ಯಾಶ್ ಟ್ಯಾಗ್ ಮೂಲಕ ಬಹಿಷ್ಕರಿಸಿ ಎಂದು ಅಭಿಮಾನ ನಡೆಸಿದ್ದಾರೆ. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

    ಈ ಬಾರಿಯ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು.  ಮುನ್ನೂರು ಸಿನಿಮಾಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ನಾಮಿನೇಷನ್ ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಆಸ್ಕರ್ ಪ್ರಶಸ್ತಿಗಾಗಿ ಆಯ್ಕೆ ನಡೆಯುತ್ತದೆ. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಮಾರ್ಚ್ 12ರಂದು ಘೋಷಿಸಲಾಗುವುದು. ಇಂದು ಕೇವಲ ನಾಮ ನಿರ್ದೇಶನಗೊಂಡ ಸಿನಿಮಾಗಳನ್ನು ಮಾತ್ರ ಘೋಷಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಜೆ 7ಕ್ಕೆ ‘ಆಸ್ಕರ್’ ನಾಮಿನೇಷನ್ ಲಿಸ್ಟ್ ಪ್ರಕಟ: ಕನ್ನಡ ಸಿನಿಮಾಗಳಿಗೆ ಸಿಗಲಿದೆಯಾ ಅವಕಾಶ?

    ಸಂಜೆ 7ಕ್ಕೆ ‘ಆಸ್ಕರ್’ ನಾಮಿನೇಷನ್ ಲಿಸ್ಟ್ ಪ್ರಕಟ: ಕನ್ನಡ ಸಿನಿಮಾಗಳಿಗೆ ಸಿಗಲಿದೆಯಾ ಅವಕಾಶ?

    ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ಇಂದು ಆಸ್ಕರ್ (Oscar) ಪ್ರಶಸ್ತಿಯ ನಾಮ ನಿರ್ದೇಶನ (Nomination) ಘೋಷಣೆ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 7 ಗಂಟೆಯ ಹೊತ್ತಿಗೆ ಈ ಪ್ರಕ್ರಿಯೆ ನಡೆಯಲಿದ್ದು, ಯಾವೆಲ್ಲ ಸಿನಿಮಾಗಳು ನಾಮಿನೇಷನ್ ಆಗಲಿವೆ ಎನ್ನುವ ಕುತೂಹಲ ಮೂಡಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ, ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರಗಳು ಕೂಡ ಈ ಬಾರಿ ರೇಸ್ ನಲ್ಲಿ ಇರುವುದರಿಂದ ನಾಮ ನಿರ್ದೇಶನ ಪಟ್ಟಿಯಲ್ಲಿ ಇವುಗಳಿಗೆ ಸ್ಥಾನ ಸಿಗಲಿದೆಯಾ ಎಂದು ಕಾದು ನೋಡಬೇಕು.

    ಈ ಬಾರಿಯ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಮುನ್ನೂರು ಸಿನಿಮಾಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ನಾಮಿನೇಷನ್ ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಆಸ್ಕರ್ ಪ್ರಶಸ್ತಿಗಾಗಿ ಆಯ್ಕೆ ನಡೆಯುತ್ತದೆ. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಮಾರ್ಚ್ 12ರಂದು ಘೋಷಿಸಲಾಗುವುದು. ಇಂದು ಕೇವಲ ನಾಮ ನಿರ್ದೇಶನಗೊಂಡ ಸಿನಿಮಾಗಳನ್ನು ಮಾತ್ರ ಘೋಷಿಸಲಾಗುತ್ತದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

    ಕನ್ನಡದಿಂದ ಕಾಂತಾರ (Kantara)ಮತ್ತು ವಿಕ್ರಾಂತ್ ರೋಣ (Vikrant Rona) ಸ್ಪರ್ಧೆಯಲ್ಲಿ ಇದ್ದರೆ, ತೆಲುಗು ಸಿನಿಮಾ ರಂಗದಿಂದ ಆರ್.ಆರ್.ಆರ್ (RRR), ತಮಿಳಿನಿಂದ ಇರುವಿನ್ ನಿಲಳ್ ಹಾಗೂ ರಾಕೆಟ್ರಿ ದಿ ನಂಭಿ ಎಫೆಕ್ಟ್ ಚಿತ್ರಗಳು ಸ್ಪರ್ಧೆ ಮಾಡುತ್ತಿವೆ. ಹಿಂದಿಯಿಂದ ಗಂಗೂಬಾಯಿ ಕಾಠಿಯಾವಾಡಿ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳಿವೆ. ಗುಜರಾತಿನಿಂದ ಛೆಲ್ಲೋ ಶೋ, ಚಿತ್ರವೊಂದನ್ನು ಕಳುಹಿಸಲಾಗಿದೆ. ಮಿ ವಸಂತ್ ರಾವ್, ದಿ ನೆಕ್ಸ್ಸಟ್ ಮಾರ್ನಿಂಗ್, ತುಜೆ ಸಾಥಿ ಕಹಿ ಸೇರಿದಂತೆ  ಭಾರತದಿಂದಲೇ ಹಲವು ಚಿತ್ರಗಳು ಸ್ಪರ್ಧಾ ಕಣದಲ್ಲಿ ಇವೆ. ಇವುಗಳಲ್ಲಿ ಯಾವೆಲ್ಲ ಚಿತ್ರಗಳು ನಾಮಿನೇಷನ್ ಸುತ್ತಿಗೆ ಅರ್ಹತೆ ಪಡೆಯುತ್ತವೆ ಎನ್ನುವುದು ಸಂಜೆ 7 ಗಂಟೆಯ ನಂತರ ಗೊತ್ತಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋಲ್ಡನ್ ಪಾಸ್ ಬಳಸಿ ನಾಮಿನೇಷನ್ ನಿಂದ ಬಚಾವ್ ಆದ ಶುಭಾ

    ಗೋಲ್ಡನ್ ಪಾಸ್ ಬಳಸಿ ನಾಮಿನೇಷನ್ ನಿಂದ ಬಚಾವ್ ಆದ ಶುಭಾ

    ಪ್ರತಿವಾರ ಬಿಗ್‍ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುವಂತೆ ಈ ವಾರವೂ ನಡೆಯಿತು. ಈ ವಾರ ಮನೆಯಿಂದ ಹೊರಹೋಗಬೇಕೆಂದು ದೊಡ್ಮನೆ ಸದಸ್ಯರು ಲ್ಯಾಗ್ ಮಂಜು, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಅರವಿಂದ್ ಹೆಸರನ್ನು ಸೂಚಿಸಿದ್ದರು. ಅಲ್ಲದೇ ಈ ಮೊದಲನೇ ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕ್ ನೇರವಾಗಿ ನಾಮಿನೇಟ್ ಆಗಿದ್ದರು.

    ಈ ಎಲ್ಲದರ ಮಧ್ಯೆ ವಾರದ ಕ್ಯಾಪ್ಟನ್ ಆಗಿದ್ದ ರಘು, ಶುಭಾ ಪೂಂಜಾ ಬಳಿ ಗೋಲ್ಡನ್ ಪಾಸ್ ಇದೆ. ಅದನ್ನು ಅವರು ಬಳಸುತ್ತಾರೋ ಇಲ್ಲವೋ ಎಂಬ ಕೂತೂಹಲ ಇರುವುದರಿಂದ ನಾನು ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತೇನೆ ಎಂದು ಸೂಚಿಸಿದ್ದರು.

    ಅದರಂತೆ ಸುದೀಪ್ ಅನುಪಸ್ಥಿತಿಯಲ್ಲಿ ಬಿಗ್‍ಬಾಸ್ ಕಾರ್ಯಕ್ರಮ ಎಂದಿನಂತೆ ನಡೆಯಿತು. ಈ ವೇಳೆ ಬಿಗ್‍ಬಾಸ್ ಶುಭಾ ಗೋಲ್ಡನ್ ಪಾಸ್ ಬಳಸಿ ನಾಮಿನೇಷನ್‍ನಿಂದ ಹೊರಬರಲು ಇಚ್ಛಿಸುತ್ತೀರಾ ಎಂದು ಕೇಳಿದ್ದಾರೆ. ಆಗ ಶುಭಾ, ಹೌದು ನಾನು ಗೋಲ್ಡನ್ ಪಾಸ್ ಬಳಸುತ್ತೀನಿ ಎಂದು ಹೇಳಿ, ಈ ವಾರ ಡೈರೆಕ್ಟ್ ನಾಮಿನೇಷನ್ ನಿಂದ ಹೊರಬಂದಿದ್ದಾರೆ.

    ಬಿಗ್‍ಬಾಸ್ ನೀಡಿದ್ದ ವಿಶೇಷ ಗೋಲ್ಡನ್ ಪಾಸ್ ಬಳಸಿಕೊಳ್ಳದೇ ಕಳೆದ ವಾರ ನಾಮಿನೇಟ್ ಆಗಿ ರಾಜೀವ್ ದೊಡ್ಮನೆಯಿಂದ ಹೊರ ಬಂದಿದ್ದರು. ಈ ವೇಳೆ ರಾಜೀವ್ ಮನೆಯಿಂದ ಹೊರಗೆ ಬರುವ ಮುನ್ನ ನಟಿ ಶುಭಾ ಪೂಂಜಾಗೆ ತಮಗೆ ದೊರೆತಿದ್ದ ಗೋಲ್ಡನ್ ಪಾಸ್ ನೀಡಿದ್ದರು. ಅಲ್ಲದೆ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಶುಭಾ ಕೈನಲ್ಲಿದ್ದ ಗೋಲ್ಡನ್ ಪಾಸ್ ಮೇಲೆ ಒಂದು ಕಣ್ಣಿತ್ತು. ಆದರೆ ಇದೀಗ ಶುಭಾ ಗೋಲ್ಡನ್ ಪಾಸ್ ಬಳಸುವ ಮೂಲಕ ದೊಡ್ಮನೆಯಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ.

  • ಮಂಡ್ಯ ಆಯ್ತು, ಈಗ ಕಲಬುರಗಿಯಲ್ಲೂ ಮೂವರು ಜಾಧವ್

    ಮಂಡ್ಯ ಆಯ್ತು, ಈಗ ಕಲಬುರಗಿಯಲ್ಲೂ ಮೂವರು ಜಾಧವ್

    ಕಲಬುರಗಿ: ಮತದಾರರಲ್ಲಿ ಗೊಂದಲ ಮೂಡಿಸಲು ಮಂಡ್ಯದಲ್ಲಿ ಮೂರು ಜನ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಇತ್ತ ಕಲಬುರಗಿ ಜಿಲ್ಲೆಯಲ್ಲೂ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಮತ ವಿಭಜಿಸಲು, ಜಾಧವ್ ಹೆಸರಿನ ಮೂವರು ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

    ಕಲಬುರಗಿ ಲೋಕಸಭಾ ಕಣದಲ್ಲಿ ಶಂಕರ್ ಜಾಧವ್, ವಿಠಲ್ ಜಾಧವ್ ಹಾಗೂ ವಿಜಯ್ ಜಾಧವ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಡಾ.ಉಮೇಶ್ ಜಾಧವ್ ಮತಗಳು ಒಡೆಯಲು ವಿಪಕ್ಷಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಲಬುರಗಿಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರೂ, ವಿಠಲ್ ಜಾಧವ್ ಎಂಬವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವುದಾಗಿ ಅವರ ಅಫಡವಿಟ್ ನಲ್ಲಿ ಹೇಳಿದ್ದಾರೆ. ಇದು ಇದೀಗ ಹಲವು ಗೊಂದಲಗಳಿಗೆ ಕಾರಣವಾಗಿದೆ.

  • ಮಂಡ್ಯದಲ್ಲಿ ಜೆಡಿಎಸ್ ಹಬ್ಬ – ಸಾಗರದಂತೆ ಹರಿದು ಬಂದ ಜನರು

    ಮಂಡ್ಯದಲ್ಲಿ ಜೆಡಿಎಸ್ ಹಬ್ಬ – ಸಾಗರದಂತೆ ಹರಿದು ಬಂದ ಜನರು

    ಮಂಡ್ಯ: ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಜೆಡಿಎಸ್ ಕಾರ್ಯಕರ್ತರು ಹಬ್ಬದಂತೆ ಸಂಭ್ರಮಿಸುತ್ತಿದ್ದು, ಸುಮಾರು ಎರಡು ಕಿಲೋ ಮೀಟರ್ ವರೆಗೂ ರ‍್ಯಾಲಿಯಲ್ಲಿ ಹೊರಟಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ನಿಖಿಲ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರ ಜೊತೆಗೆ ಕಾಳಿಕಾಂಬ ದೇವಸ್ಥಾನದ ಆವರಣದಿಂದ ರ‍್ಯಾಲಿ ಪ್ರಾರಂಭಿಸಿದ್ದು, ಡೊಳ್ಳು ಕುಣಿತ, ಪಟ ಕುಣಿತ, ಗೊಂಬೆ ಕುಣಿತಗಳ ಜೊತೆ ನಿಖಿಲ್ ಪ್ರಚಾರದ ರ‍್ಯಾಲಿ ಹೊರಟಿದೆ.

    ಸುಮಾರು ಎರಡು ಕಿಲೋ ಮೀಟರ್ ರ‍್ಯಾಲಿ ಹೋಗಲಿದ್ದು, ನಿಖಿಲ್ ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ನಿಂತು ಕಾರ್ಯಕರ್ತರಿಗೆ ಕೈ ಬೀಸುತ್ತಿದ್ದಾರೆ. ನಿಖಿಲ್ ತೆರೆದ ವಾಹನ ಹಿಂದೆ, ಮುಂದೆ ಮತ್ತು ಅಕ್ಕ-ಪಕ್ಕದಲ್ಲಿ ಜನ ಸೇರಿದ್ದಾರೆ. ಎತ್ತ ನೋಡಿದರೂ ಬರೀ ಜನರೇ ಕಾಣಿಸುತ್ತಿದ್ದಾರೆ. ಬಿಸಿಲು ಎಂದು ನೋಡದೇ ಜನರು ನಿಖಿಲ್ ಎಂದು ಕೂಗುತ್ತಾ ಒಂದು ರೀತಿ ಮಂಡ್ಯದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ.

    ರ‍್ಯಾಲಿಗಾಗಿ ಎರಡು ಲಾರಿ ಸಿದ್ಧತೆ ಮಾಡಿಕೊಂಡಿದ್ದು, ಜೆಡಿಎಸ್ ಬ್ಯಾನರ್ ನಿಂದ ಅಲಂಕಾರ ಮಾಡಲಾಗಿದೆ. ಲಾರಿ ಸುತ್ತ ಹಾಕಿರುವ ಬ್ಯಾನರ್ ನಲ್ಲಿ ನಿಖಿಲ್ ಕುಮಾರ್ ರಾರಾಜಿಸುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರ ಫೋಟೋ ಕೂಡ ಇದೆ. ಉಳುವ ಯೋಗಿಯ ನೋಡಲ್ಲಿ ಹಾಡಿಗೆ ಹಸಿರು ಸೀರೆ ಉಟ್ಟು, ಹೊರೆ ಹೊತ್ತ ಮಹಿಳೆಯರಿಂದ ನೃತ್ಯದ ಮೂಲಕ ಮನರಂಜನೆ ನೀಡಲಾಗುತ್ತಿದೆ.

    ಭದ್ರತೆ:
    ಭದ್ರತೆಗಾಗಿ ಒಬ್ಬರು ಎಸ್‍ಪಿ, 10 ಡಿವೈಎಸ್‍ಪಿ, 20 ಸಿಪಿಐ, 35 ಪಿಎಸ್‍ಐ, 800 ಜನ ಸಿಬ್ಬಂದಿ, 5 ಡಿಆರ್ ಸಿಬ್ಬಂದಿ ಮತ್ತು 5 ಕೆಎಸ್‍ಆರ್ ಪಿ ನಿಯೋಜನೆ ಮಾಡಲಾಗಿದೆ. ನಿಖಿಲ್ ನಾಮಪತ್ರ ಸಲ್ಲಿಕೆ ನಂತರ ಕಾವೇರಿ ಉದ್ಯಾನವನದ ಬಳಿ ಬೃಹತ್ ಬಹಿರಂಗ ಭಾಷಣ ಮಾಡಲಿದ್ದಾರೆ. ಬಹಿರಂಗ ಭಾಷಣ ವೀಕ್ಷಿಸಲು ಬೃಹತ್ ಎಲ್‍ಇಡಿ ಪರದೆ ಅಳವಡಿಕೆ ಮಾಡಲಾಗಿದೆ. ಸುಮಾರು ಹತ್ತು ಎಲ್‍ಇಡಿ ಅಳವಡಿಕೆ ಮಾಡಲಾಗಿದ್ದು, ಪಾರ್ಕ್ ಸುತ್ತ ಬ್ಯಾರಿಕೇಡ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್ ನಲ್ಲಿ ನಿಖಿಲ್ ಫೋಟೋ ಹಿಡಿದು ಜಯಕಾರ ಕೂಗುತ್ತಾ ಜೆಡಿಎಸ್ ಕಾರ್ಯಕರ್ತರ ಸಂಭ್ರಮಿಸುತ್ತಿದ್ದಾರೆ.

  • ಬಾಯಾರಿದ ಜೋಡೆತ್ತುಗಳಿಗೆ ರೈತನಿಂದ ಬಾಟಲಿ ನೀರು!

    ಬಾಯಾರಿದ ಜೋಡೆತ್ತುಗಳಿಗೆ ರೈತನಿಂದ ಬಾಟಲಿ ನೀರು!

    ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದು, ಮಂಡ್ಯದಲ್ಲಿ ಜನಸಾಗರವೇ ಹರಿದುಬಂದಿದೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಕಿಕ್ಕಿರಿದ ಜನರ ಮಧ್ಯೆ ಜೋಡೆತ್ತುಗಳು ಸಾಗಿದ್ದವು. ಸುಡುಬಿಸಿಲಿನಿಂದಾಗಿ ದಣಿದು ಬಾಯಾರಿದ್ದ ಜೋಡೆತ್ತುಗಳಿಗೆ ರೈತ ಬಾಟಲಿ ನೀರು ಕುಡಿಸಿರುವುದು ನೆರೆದಿದ್ದ ಜನರ ಗಮನಸೆಳೆಯಿತು.

    ನಿಖಿಲ್ ಅವರು ತಾವು ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ನಗರದ ಕಾಳಿಕಾಂಬ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಾಳಿಕಾಂಬ ದೇವಸ್ಥಾನದ ಆವರಣದಿಂದ ರ‍್ಯಾಲಿ ಪ್ರಾರಂಭಿಸಿದ್ದು, ಡೊಳ್ಳು ಕುಣಿತ, ಪಟ ಕುಣಿತ, ಗೊಂಬೆ ಕುಣಿತಗಳ ಜೊತೆ ನಿಖಿಲ್ ಪ್ರಚಾರ ಕೈಗೊಳ್ಳಲಾಗಿದೆ.

    ಸುಮಾರು ಎರಡು ಕಿಲೋ ಮೀಟರ್ ರ್ಯಾಲಿ ಹೋಗಲಿದ್ದು, ನಿಖಿಲ್ ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ನಿಂತು ಅವರನ್ನು ಹಿಂಬಾಲಿಸುತ್ತಿರುವ ಜನರಿಗಾಗಿ ಕೈ ಬೀಸುತ್ತಿದ್ದಾರೆ. ನಿಖಿಲ್ ತೆರೆದ ವಾಹನ ಹಿಂದೆ, ಮುಂದೆ ಮತ್ತು ಅಕ್ಕ-ಪಕ್ಕದಲ್ಲಿ ಕಿಕ್ಕಿರಿದ್ದಷ್ಟು ಜನರು ಸಾಗರದಂತೆ ಬಂದಿದ್ದಾರೆ. ಎತ್ತ ನೋಡಿದರೂ ಬರೀ ಜನರೆ ಕಾಣಿಸುತ್ತಿದ್ದಾರೆ. ಬಿಸಿಲು ಎಂದು ನೋಡದೆ ಜನರು ನಿಖಿಲ್ ಎಂದು ಕೂಗುತ್ತಾ ಒಂದು ರೀತಿ ಮಂಡ್ಯದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ.

    ಎರಡು ಲಾರಿಯಲ್ಲಿ ರ‍್ಯಾಲಿ:
    ರ್ಯಾಲಿಗಾಗಿ ಎರಡು ಲಾರಿ ಸಿದ್ಧತೆ ಮಾಡಿಕೊಂಡಿದ್ದು, ಜೆಡಿಎಸ್ ಬ್ಯಾನರ್‍ನಿಂದ ಅಲಂಕಾರ ಮಾಡಲಾಗಿದೆ. ಲಾರಿ ಸುತ್ತ ಹಾಕಿರುವ ಬ್ಯಾನರ್‍ನಲ್ಲಿ ನಿಖಿಲ್ ಕುಮಾರ್ ರಾರಾಜಿಸುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರ ಫೋಟೋ ಕೂಡ ಇದೆ. ಜೊತೆಗೆ ಉಳುವ ಯೋಗಿಯ ನೋಡಲ್ಲಿ ಹಾಡಿಗೆ ಹಸಿರು ಸೀರೆ ಉಟ್ಟು, ಹೊರೆ ಹೊತ್ತ ಮಹಿಳೆಯರಿಂದ ನೃತ್ಯದ ಮೂಲಕ ಮನರಂಜನೆ ನೀಡಲಾಗುತ್ತಿದೆ.

    ಭದ್ರತೆ:
    ಭದ್ರತೆಗಾಗಿ ಒಬ್ಬರು ಎಸ್‍ಪಿ, 10 ಡಿವೈಎಸ್‍ಪಿ, 20 ಸಿಪಿಐ, 35 ಪಿಎಸ್‍ಐ, 800 ಜನ ಸಿಬ್ಬಂದಿ, 5 ಡಿಆರ್ ಸಿಬ್ಬಂದಿ ಮತ್ತು 5 ಕೆಎಸ್‍ಆರ್‍ಪಿ ನಿಯೋಜನೆ ಮಾಡಲಾಗಿದೆ. ನಿಖಿಲ್ ನಾಮಪತ್ರ ಸಲ್ಲಿಕೆ ನಂತರ ಕಾವೇರಿ ಉದ್ಯಾನವನದ ಬಳಿ ಬೃಹತ್ ಬಹಿರಂಗ ಭಾಷಣ ಮಾಡಲಿದ್ದಾರೆ. ಬಹಿರಂಗ ಭಾಷಣ ವೀಕ್ಷಿಸಲು ಬೃಹತ್ ಎಲ್‍ಇಡಿ ಪರದೆ ಅಳವಡಿಕೆ ಮಾಡಲಾಗಿದೆ. ಸುಮಾರು ಹತ್ತು ಎಲ್‍ಇಡಿ ಅಳವಡಿಕೆ ಮಾಡಲಾಗಿದ್ದು, ಪಾರ್ಕ್ ಸುತ್ತ ಬ್ಯಾರಿಕೇಡ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.