Tag: ನಾಮಿನೇಟ್

  • ಆಸ್ಕರ್ ಪ್ರಶಸ್ತಿ2024: ನಾಮಿನೇಷನ್ಸ್ ಪಟ್ಟಿ ಪ್ರಕಟ

    ಆಸ್ಕರ್ ಪ್ರಶಸ್ತಿ2024: ನಾಮಿನೇಷನ್ಸ್ ಪಟ್ಟಿ ಪ್ರಕಟ

    ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಟ್ಟಿ ಪ್ರಕಟವಾಗಿದೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಸಂದಿವೆ. ಆದರೆ, ಈ ಬಾರಿ ಆಸ್ಕರ್ ನಾಮಿನೇಟ್ ಪಟ್ಟಿಯಲ್ಲಿ ಭಾರತದ ಯಾವುದೇ ಸಿನಿಮಾಗಳು ಇರದೇ ಇರುವುದು ಸಹಜವಾಗಿಯೇ ನಿರಾಸೆ ತಂದಿದೆ. ಹಾಗಂತ ತೀರಾ ನಿರಾಸೆ ಪಟ್ಟುವಂಥದ್ದು ಇಲ್ಲ. ಭಾರತೀಯ ಮಹಿಳೆ ನಿರ್ದೇಶನ ಮಾಡಿರುವ, ಭಾರತದಲ್ಲೇ ನಿರ್ಮಾಣವಾದ, ವಿದೇಶಿ ಸಂಸ್ಥೆ ತಯಾರಿಸಿದ ಡಾಕ್ಯುಮೆಂಟರಿ ನಾಮ ನಿರ್ದೇಶನ ಪಟ್ಟಿಯಲ್ಲಿದೆ.

    ಅತ್ಯುತ್ತಮ ಸಿನಿಮಾ ಪಟ್ಟಿಯಲ್ಲಿ ದಿ ಜೋನ್ ಆಫ್ ಇಂಟರೆಸ್ಟ್, ಬಾರ್ಬಿ, ಮಾಸ್ಟ್ರೊ, ಓಪನ್ ಹೈಮರ್, ಅನಾಟಮಿ ಆಫ್ ಎ ಫಾಲ್ ಸೇರಿದಂತೆ ಹಲವು ಚಿತ್ರಗಳು ಕಾಣಿಸಿಕೊಂಡಿದ್ದರೆ, ಅತ್ಯುತ್ತಮ ನಟ ವಿಭಾಗದಲ್ಲಿ ಜೆಫ್ರಿ ರೈಟ್, ಬ್ರ್ಯಾಡ್ಲಿ ಕೂಪರ್, ಪಾಲ್ ಗಿಯಾಮಟ್ಟಿ, ಕೋಲ್ಮನ್ ಡೆಮಿನಿಗೋ ಸೇರಿದಂತೆ ಹಲವು ಕಲಾವಿದರು ಇದ್ದಾರೆ.

    ನಿರ್ದೇಶನದ ವಿಭಾಗದಲ್ಲಿ ಕ್ರಿಸ್ಟೊಫರ್ ನೋಲನ್, ಜಸ್ಟಿನ್ ಟ್ರೈಟ್, ಜೊನಥನ್ ಗ್ಲೆಜರ್, ಯೊಗೊರ್ಸ್ ಲ್ಯಾಂತಿಮೋಸ್ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಕ್ಯಾರಿ  ಮುಲ್ಲಿಗನ್, ಆನೆಟ್ ಬೆನಿಂಗ್, ಎಮ್ಮ ಸ್ಟೊನ್, ಸಾಂಡ್ರಾ ಹುಲ್ಲರ್ ಮೊದಲಾದವರು ಇದ್ದಾರೆ.

  • ಸಾನ್ಯ ಐಯ್ಯರ್ ವಿಚಾರವಾಗಿ ಭದ್ರಕಾಳಿ ಮೇಲೆ ಶಪಥ ಮಾಡಿದ ಆರ್ಯವರ್ಧನ್ ಗುರೂಜಿ

    ಸಾನ್ಯ ಐಯ್ಯರ್ ವಿಚಾರವಾಗಿ ಭದ್ರಕಾಳಿ ಮೇಲೆ ಶಪಥ ಮಾಡಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ (Bigg Boss) ಮನೆಯ ಕೆಲವರನ್ನು ‘ಮಗ’, ‘ಮಗಳು’ ಎಂದು ಪ್ರೀತಿಯಿಂದ ಕರೆಯುತ್ತಾರೆ ಆರ್ಯವರ್ಧನ್ ಗುರೂಜಿ. ಅಂತಹ ಮಕ್ಕಳೇ ಇಂದು ತಿರುಗಿ ಬೀಳುವಂತಹ ಪ್ರಸಂಗಗಳು ದೊಡ್ಮನೆಯಲ್ಲಿ ನಡೆಯುತ್ತಿವೆ. ಅದರಲ್ಲೂ ಗುರೂಜಿ (Aryavardhan Guruji) ಯಾರನ್ನೂ ಅಭಿಮಾನದಿಂದ, ಅಕ್ಕರೆಯಿಂದ ಕರೆಯುತ್ತಿದ್ದರೋ ಅಂಥವರು ಗುರೂಜಿ ಬೆನ್ನಿಗೆ ಚೂರಿ ಹಾಕುತ್ತಿದ್ದಾರಂತೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬೇಜಾರಾಗಿದೆ ಎಂದಿದ್ದಾರೆ.

    ದಿನವೂ ಒಂದೇ ತಟ್ಟೆಯಲ್ಲಿ ತಿಂದರೂ, ನಾಮಿನೇಷನ್ (nominated) ವಿಚಾರದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರು ವಿಭಿನ್ನವಾಗಿಯೇ ಯೋಚಿಸುತ್ತಾರೆ. ತಾನು ಸೇಫ್ ಆಗಿ ಇದ್ದರೆ ಸಾಕು ಎಂದೇ ಯೋಚನೆ ಮಾಡುತ್ತಾರೆ. ಸಾನ್ಯ ಅಯ್ಯರ್ (Sanya Iyer) ಮತ್ತು ಆರ್ಯವರ್ಧನ್ ಗುರೂಜಿ ವಿಚಾರದಲ್ಲೂ ಅದೇ ಆಯಿತು. ನಾಮಿನೇಷನ್ ಪ್ರಕ್ರಿಯೆ ನಡೆದಾಗ, ನೇರವಾಗಿ ನಾನು ಆರ್ಯವರ್ಧನ್ ಗುರೂಜಿಯನ್ನು ನಾಮಿನೇಟ್ ಮಾಡುವೆ ಎಂದು ಸಾನ್ಯ ಹೇಳಿದರು. ನಿಜಕ್ಕೂ ಇದು ಶಾಕಿಂಗ್ ವಿಚಾರವಾಗಿತ್ತು ಗುರೂಜಿಗೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಮನೆಯ ಕ್ಯಾಪ್ಟನ್ ಆಗಿದ್ದ ಸಾನ್ಯಗೆ ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಗುರೂಜಿಯನ್ನು ಅವರು ಆಯ್ಕೆ ಮಾಡಿಕೊಂಡರು. ಇದರಿಂದ ಕೋಪ ಮಾಡಿಕೊಂಡ ಗುರೂಜಿ, ‘ಈ ಸೇಡನ್ನು ನಾನು ತೀರಿಸಿಕೊಳ್ಳದೇ ಬಿಡುವುದಿಲ್ಲ. ಮುಂದೊಂದು ದಿನ ನನಗೆ ಅಧಿಕಾರ ಬಂದರೆ, ಸಾನ್ಯರನ್ನು ನಾಮಿನೇಟ್ ಮಾಡುತ್ತೇನೆ ಎಂದು ಭದ್ರಕಾಳಿ ಮೇಲೆ ಶಪಥ ಮಾಡಿದರು ಆರ್ಯವರ್ಧನ್ ಗುರೂಜಿ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ ರೂಪೇಶ್ ಮತ್ತು ಗುರೂಜಿ

    ಬಿಗ್ ಬಾಸ್ ಮನೆಯಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ ರೂಪೇಶ್ ಮತ್ತು ಗುರೂಜಿ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಅರಿವಿಗೆ ಬಾರದೇ ದೊಡ್ಮನೆ ಸದಸ್ಯರು ಗಲಿಬಿಲಿಗೊಂಡಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ನಡವಳಿಕೆ. ಮೊದಲ ವಾರ ಸೈಲೆಂಟ್ ಆಗಿದ್ದವರು, ಎರಡನೇ ವಾರಕ್ಕೆ ಅಬ್ಬರಿಸುತ್ತಿದ್ದಾರೆ. ಕಿಚ್ಚನ ಪಂಚಾಯತಿಯಲ್ಲಿ ಕೆಲವರ ಬಣ್ಣ ಬಯಲಾಗುತ್ತಿದ್ದಂತೆಯೇ ಅವರನ್ನು ಇತರರು ನೋಡುವ ರೀತಿಯೇ ಬದಲಾಗಿದೆ.

    ಈ ನಡುವೆ ಎರಡನೇ ವಾರದ ನಾಮಿನೇಟ್ ಪ್ರಕ್ರಿಯೆ ಕೂಡ ನಡೆದಿದ್ದು, ಇಬ್ಬರು ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಮೊದಲನೇ ವಾರದಲ್ಲೇ ಮನೆಯಿಂದ ಹೊರ ನಡೆದ ಐಶ್ವರ್ಯ ಪಿಸ್ಸೆಗೆ (Aishwarya Pisse) ಬಿಗ್ ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು. ಮನೆಯಿಂದ ಆಚೆ ಹೋಗುವಾಗ ಒಬ್ಬರನ್ನು ನಾಮಿನೇಟ್ ಮಾಡಿ ಎಂದು ತಿಳಿಸಿದ್ದರು. ಹಾಗಾಗಿ ಆರ್ಯವರ್ಧನ್ ಗುರೂಜಿಯನ್ನು (Aryavardhan Guruji) ಐಶ್ವರ್ಯ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಇದೇ ರೀತಿಯಾಗಿಯೇ ಮತ್ತೊಂದು ವಿಶೇಷ ಅಧಿಕಾರ ಸಿಕ್ಕಿದ್ದು ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ವಿನೋದ್ ಗೊಬ್ರಗಾಲಗೆ. ವಿನೋದ್ (Vinod Gobragala) ಕೂಡ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನು ಹೊಂದಿದ್ದರಿಂದ ಅವರು ರೂಪೇಶ್ ರಾಜಣ್ಣ ಅವರ ಹೆಸರು ಸೂಚಿಸಿದ್ದರು. ಹೀಗಾಗಿ ಗುರೂಜಿ ಜೊತೆಗೆ ನೇರವಾಗಿ ರೂಪೇಶ್ ರಾಜಣ್ಣ (Rupesh Rajanna) ಕೂಡ ನಾಮಿನೇಟ್ ಆಗಿದ್ದಾರೆ.

    ಗುರೂಜಿ ಮತ್ತು ರೂಪೇಶ್ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ನಾಮಿನೇಟ್  (Nominate)ಆಗಿದ್ದಾರೆ. ಇವರ ಜೊತೆ ಇತರರ ಏಳು ಜನರು ನಾಮಿನೇಟ್ ಯಾದಿಯಲ್ಲಿ ಇದ್ದಾರೆ. ಒಟ್ಟು ಒಂಭತ್ತು ಜನರ ಮೇಲೆ ಈ ಬಾರಿ ನಾಮಿನೇಟ್ ತೂಗುಕತ್ತಿ ತೂಗುತ್ತಿದೆ. ಈ ಒಂಭತ್ತು ಜನರಲ್ಲಿ ಯಾರು ಎರಡನೇ ವಾರಕ್ಕೆ ಮನೆಯಿಂದ ಆಚೆ ಬರಲಿದ್ದಾರೆ ಎನ್ನುವುದು ಕುತೂಹಲ.  

    Live Tv
    [brid partner=56869869 player=32851 video=960834 autoplay=true]

  • ಮೊದಲ ವಾರದಲ್ಲೇ 12 ಜನರನ್ನು ನಾಮಿನೇಟ್ ಮಾಡಿ ಶಾಕ್ ಕೊಟ್ಟ ಬಿಗ್ ಬಾಸ್

    ಮೊದಲ ವಾರದಲ್ಲೇ 12 ಜನರನ್ನು ನಾಮಿನೇಟ್ ಮಾಡಿ ಶಾಕ್ ಕೊಟ್ಟ ಬಿಗ್ ಬಾಸ್

    ದೊಡ್ಮನೆಯ ಕಾಳಗ ಶುರುವಾಗಿದೆ. ಇನ್ನೂ ಬಿಗ್ ಬಾಸ್  (Bigg Boss Season 9) ಮನೆಗೆ ಬಂದ ಮೇಲೆ ಕಡೆಯ ದಿನಗಳವರೆಗೂ ಕಾಣಿಸಿಕೊಳ್ಳಬೇಕು ಎಂಬುದು ಪ್ರತಿ ಸ್ಪರ್ಧಿಯ ಆಸೆಯಾಗಿರುತ್ತದೆ. ಇದೀಗ ಮೊದಲ ವಾರವೇ 12 ಜನರನ್ನು ನಾಮಿನೇಟ್  ಆಗಿ ಡೇಂಜರ್ ಜೋನ್ ನಲ್ಲಿದ್ದಾರೆ‌.

    ಕಿರುತೆರೆ ಲೋಕದ ಬಿಗ್ ಶೋ ಬಿಗ್ ಬಾಸ್ ಸೀಸನ್ 9ನಲ್ಲಿ ಒಟ್ಟು 18 ಜನರಿಗೆ ಅವಕಾಶ ಸಿಕ್ಕಿದೆ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಆಟ ಶುರುವಾದ ಮೊದಲ ದಿನವೇ ನಾಮಿನೇಷನ್​  ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ ಪಿಸೆ, ಪ್ರಶಾಂತ್​ ಸಂಬರ್ಗಿ (Prashant Sambargi) , ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​ (Sanya Iyer), ಮಯೂರಿ, ರೂಪೇಶ್​ ರಾಜಣ್ಣ (Rupesh Rajanna), ಕ್ಯಾವ್ಯಶ್ರೀ ಅವರು ನಾಮಿನೇಟ್​ ಆಗಿದ್ದಾರೆ. ಇದನ್ನೂ ಓದಿ:ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    ನಾಮಿನೇಟ್​ ಆದವರು ಪ್ರತಿ ಟಾಸ್ಕ್​ ಕೂಡ ಚೆನ್ನಾಗಿ ಆಡಲೇ ಬೇಕಾಗುತ್ತದೆ. ಮನೆಯ ಸದಸ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ? ವೀಕ್ಷಕರನ್ನು ಎಷ್ಟರಮಟ್ಟಿಗೆ ಮನರಂಜಿಸುತ್ತಾರೆ ಎಂಬುದೆಲ್ಲವೂ ಪರಿಗಣನೆಗೆ ಬರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಆಟ ಆಡಲು ಎಲ್ಲರೂ ಸಜ್ಜಾಗಿದ್ದಾರೆ. ಇನ್ನೂ ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್​, ನೇಹಾ ಗೌಡ, ರೂಪೇಶ್​ ಶೆಟ್ಟಿ ಸದ್ಯಕ್ಕೆ ಸೇಫ್​ ಆಗಿದ್ದಾರೆ.

    ಇನ್ನೂ ಪ್ರವೀಣರು ಮತ್ತು ನವೀನರು ಎಂಬ ಹೊಸ ಮಾದರಿಯನ್ನು ಈ ಬಾರಿ ಬಿಗ್​ ಬಾಸ್​ನಲ್ಲಿ ಪರಿಚಯಿಸಲಾಗಿದೆ. ಹೊಸಬರನ್ನು ಮತ್ತು ಹಳಬರನ್ನು ಜೋಡಿಯಾಗಿಸಿ ಟಾಸ್ಕ್​ಗಳನ್ನು ಆಡಿಸಲಾಗುತ್ತಿದೆ. ಮೊದಲ ದಿನ ನಡೆದ ಟಾಸ್ಕ್​ನಲ್ಲಿ ಪ್ರಶಾಂ​ತ್ ಸಂಬರ್ಗಿ ಹಾಗೂ ವಿನೋದ್​ ಗೊಬ್ಬರಗಾಲ ಜೋಡಿ ವಿನ್​ ಆಗಿದೆ. ಫಸ್ಟ್​ ಟಾಸ್ಕ್​ ಗೆದ್ದಿದ್ದಕ್ಕಾಗಿ ಏನಾದರೂ ಕೊಡಿ ಎಂದು ಬಿಗ್​​ ಬಾಸ್​ ಬಳಿ ಪ್ರಶಾಂತ್​ ಸಂಬರ್ಗಿ ಮನವಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈ ವಾರ ಔಟ್ ಆಗಲ್ಲ ಸೋನು ಶ್ರೀನಿವಾಸ್ ಗೌಡ: ಲಕ್ಕಿ ಹುಡುಗಿಯಾದ ಸೋನು

    ಈ ವಾರ ಔಟ್ ಆಗಲ್ಲ ಸೋನು ಶ್ರೀನಿವಾಸ್ ಗೌಡ: ಲಕ್ಕಿ ಹುಡುಗಿಯಾದ ಸೋನು

    ವಾರ ವಾರದಿಂದ ಬಿಗ್ ಬಾಸ್ ಮನೆ ರಂಗೇರುತ್ತಿದೆ. ಎರಡು ವಾರಗಳ ಕಾಲ ದೊಡ್ಮನೆಯಲ್ಲಿ ನಾನಾ ರೀತಿಯ ಆಟಗಳನ್ನು ಆಡುತ್ತಿರುವ ಸ್ಪರ್ಧಿಗಳು ವಾರಂತ್ಯದ ಕಿಚ್ಚನ ಪಂಚಾಯತಿಗಾಗಿ ಭಯದಿಂದಲೇ ಕಾಯುತ್ತಾರೆ. ಆಯಾ ವಾರ ಮನೆಯಲ್ಲಿ ಉಳಿದುಕೊಳ್ಳುವವರು ಯಾರು, ಮನೆಯಿಂದ ಹೊರ ಬರುವವರು ಯಾರು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ತಾನು ಸೇಫ್ ಆಗಿ ಮನೆಯಲ್ಲೇ ಉಳಿಯಲಿ ಎನ್ನುವುದು ಬಹುತೇಕ ಆಸೆ. ಆದರೆ, ಒಬ್ಬರು ಮನೆಯಿಂದ ಹೊರ ಹೋಗಲೇಬೇಕಾದ ಅನಿವಾರ್ಯ.

    ಈಗಾಗಲೇ ಮನೆಯಿಂದ ಇಬ್ಬರು ಎಲಿಮಿನೇಷನ್ ಆಗಿ ಹೊರ ಬಂದಿದ್ದಾರೆ. ಇಬ್ಬರಿಗೆ ಗಾಯವಾಗಿದ್ದರಿಂದ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ. ಒಟ್ಟು ನಾಲ್ಕು ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಬಂದಿದ್ದು ಆಗಿದೆ. ಇದೀಗ ಉಳಿದವರ ಮಧ್ಯ ಪೈಪೋಟಿ ನಡೆದಿದೆ. ಈ ಬಾರಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಅವರಲ್ಲಿ ಯಾರು ಹೊರ ಬರುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಆದರೆ, ಸತತವಾಗಿ ಎರಡು ವಾರಗಳ ಕಾಲ ನಾಮಿನೇಟ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈ ವಾರ ಬಚಾವ್ ಆಗಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ಈ ವಾರ ನಾಮಿನೇಟ್ ಪ್ರಕ್ರಿಯೆಗಾಗಿ ಬಿಗ್ ಬಾಸ್ ಎರಡು ಬಾಕ್ಸ್ ಕಳುಹಿಸಿದ್ದರು. ಒಂದು ಬಾಕ್ಸ್ ನಲ್ಲಿ ಕಣ್ಣಿನ ಚಿತ್ರ ಮತ್ತೊಂದು ಬಾಕ್ಸ್ ನಲ್ಲಿ ಕನ್ಫೆಷನ್ ರೂಮ್ ಎಂದು ಬರೆಯಲಾಗಿದೆ. ಕಣ್ಣಿನ ಚಿತ್ರ ಇದ್ದವರು ನೇರವಾಗಿ, ಕನ್ಫೆಷನ್ ರೂಮ್ ಅಂತ ಇದ್ದರೆ ಕನ್ಫೆಷನ್ ರೂಮ್ ಗೆ ತೆರಳಿ ನಾಮಿನೇಟ್ ಮಾಡಬೇಕಿತ್ತು. ಚೈತ್ರಾ, ಜಯಶ್ರೀ, ಆರ್ಯವರ್ಧನ್, ನಂದಿನಿ, ಅಕ್ಷತಾ, ರೂಪೇಶ್, ಸೋಮಣ್ಣ ಹೀಗೆ ಏಳು ಜನರು ವೋಟು ಪಡೆದುಕೊಂಡು ನಾಮಿನೇಟ್ ಆದರು. ಆದರೆ, ಸೋನು ಶ್ರೀನಿವಾಸ್ ಗೌಡಗೆ ಯಾರೂ ವೋಟು ಮಾಡದೇ ಇರುವ ಕಾರಣಕ್ಕಾಗಿ ಸೇಫ್ ಆದರು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಮನೆಯಿಂದ ಹೊರನಡೆದ ಮತ್ತೊಬ್ಬ ಸೆಲೆಬ್ರಿಟಿ

    ಬಿಗ್ ಮನೆಯಿಂದ ಹೊರನಡೆದ ಮತ್ತೊಬ್ಬ ಸೆಲೆಬ್ರಿಟಿ

    – ಕೈ ಹಿಡಿಯದ ಬಿಗ್‍ಮನೆ ಅಭಿಮಾನಿಗಳು

    ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯಕ್ಕೆ ಮನೆಯಿಂದ ಒಬ್ಬರು ಹೊರಗೆ ಹೋಗಬೇಕು. ಮೊದಲವಾರ ಧನುಶ್ರೀ ಹೊರ ನಡೆದಿದ್ದರು. 2ನೇ ವಾರ ಯಾರು ಮನೆಯಲ್ಲಿ ತನ್ನ ಆಟವನ್ನು ಮುಗಿಸಿ ಹೊರ ನಡೆಯುತ್ತಾರೆ ಎನ್ನುವ ಪ್ರಶ್ನಗೆ ಉತ್ತರ ಸಿಕ್ಕಿದೆ.

    ಹೌದು. ಈ ಬಾರಿ ನಿರ್ಮಲಾ ಚೆನ್ನಪ್ಪ ಬಿಗ್‍ಬಾಸ್‍ಮನೆಯ ಜರ್ನಿಯನ್ನು ಮುಗಿಸಿದ್ದಾರೆ. ಮನೆಯಲ್ಲಿರುವ ಸದಸ್ಯರುಗಳಲ್ಲಿ ನಿರ್ಮಲಾ ಕೊಂಚ ವಿಭಿನ್ನವಾಗಿಯೇ ಇರುತ್ತಿದ್ದರು. ಒಬ್ಬರೇ ಹೆಚ್ಚಾಗಿ ಇರುತ್ತಿದ್ದರು. ಅವರು ನಡೆದುಕೊಳ್ಳುವ ರೀತಿ, ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಅತೀ ಹೆಚ್ಚು ಚರ್ಚೆಗೊಳಗಾದ ಸದಸ್ಯರುಗಳಲ್ಲಿ ನಿರ್ಮಲಾ ಕೂಡ ಒಬ್ಬರು. ನಾಮಿನೇಷನ್‍ನಲ್ಲಿ ಹೆಚ್ಚು ಮತ ಕೂಡಾ ನಿರ್ಮಲಾ ಅವರಿಗೆ ಬಿದ್ದಿದ್ದವು. ಆದರೂ ಬಿಗ್‍ಬಾಸ್ ವೀಕ್ಷಕರು ನಿರ್ಮಲಾ ಚೆನ್ನಪ್ಪ ಅವರು ಕೈ ಹಿಡಿಯಲಿಲ್ಲ.

    ನಿರ್ಮಲಾ ಮನೆಯಲ್ಲಿ ಇರುವಷ್ಟು ದಿನ ಸಖತ್ ಆ್ಯಕ್ಟಿವ್ ಆಗಿದ್ದರು. ಜಗಳ, ಮಾತು, ಅಡುಗೆ ಮನೆ ವಿಚಾರ ಹೀಗೆ ನಾನಾ ವಿಷಯಗಳ ಕುರಿತಾಗಿ ಧ್ವನಿ ಎತ್ತುವ ಸದಸ್ಯೆಯಾಗಿದ್ದರು. ಆದರೆ ಮನೆಯಲ್ಲಿ ಇವರ ಆಟ ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಎಂದು ಅನ್ನಿಸುತ್ತದೆ ಮನೆಯಿಂದ ಗೇಟ್‍ಪಾಸ್ ಕೊಟ್ಟಿದ್ದಾರೆ.

    ಒಂದೇ ಬಟ್ಟೆಯಲ್ಲಿ ಒಂದು ವಾರ ಇದ್ದ ನಿರ್ಮಲಾ!
    ಒಂದು ವಾರ ಒಂದೇ ಬಟ್ಟೆಯಲ್ಲಿ ಕಳೆದಿದ್ದರು. ಬಿಗ್‍ಬಾಸ್ ಬಟ್ಟೆ ಕಳಿಸುತ್ತಿದ್ದಂತೆ ಮಧ್ಯರಾತ್ರಿ ಸೀರೆ ಧರಿಸಿ ಮೇಕಪ್ ಹಾಕಿ ಮೂಲೆಯಲ್ಲಿ ಕ್ಯಾಮೆರಾ ಮುಂದೆ ಕುಳಿತು ಒಬ್ಬರೇ ಮಾತನಾಡುತ್ತಿರುವುದು ಮನೆಯವರಿಗೆ ಭಯ ತರಿಸಿತ್ತು. ಈ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು.

    ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ಗೀತಾ, ಚಂದ್ರಕಲಾ ಮೋಹನ್, ವಿಶ್ವನಾಥ್, ನಿರ್ಮಲಾ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆದರೆ ಇವರುಗಳ ಪೈಕಿ ನಿರ್ಮಲಾ ತನ್ನ ಆಟವನ್ನು ಮನೆಯಲ್ಲಿ ಮುಗಿಸಿ ಹೊರಬಂದಿದ್ದಾರೆ.

  • ಈ ವಾರ ಎಲಿಮಿನೇಷನ್ ಇಲ್ಲ, ಆದ್ರೂ ನಾಲ್ವರು ನಾಮಿನೇಟ್

    ಈ ವಾರ ಎಲಿಮಿನೇಷನ್ ಇಲ್ಲ, ಆದ್ರೂ ನಾಲ್ವರು ನಾಮಿನೇಟ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಪ್ರತಿವಾರವೂ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುತ್ತಾರೆ. ಆದರೆ 13ನೇ ವಾರ ಎಲಿಮಿನೇಷನ್ ಇಲ್ಲ. ಆದರೂ ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ನಾಲ್ವರು ನಾಮಿನೇಟ್ ಆಗಿದ್ದಾರೆ.

    ಮನೆಯ ಸದಸ್ಯರ ಅನುಸಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಪ್ರಿಯಾಂಕಾ ಮತ್ತು ಚಂದನ್ ಆಚಾರ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಆದರೆ ಇವರಲ್ಲಿ ಒಬ್ಬ ಸ್ಪರ್ಧಿಯೂ ಮನೆಯಿಂದ ಹೋಗಲ್ಲ. ಯಾಕೆಂದರೆ ಈ ವಾರ ಎಲಿಮಿನೇಷನ್ ಇಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹಾಗಾಗಿ ಈ ವಾರ ಯಾರನ್ನೂ ಮನೆಯಿಂದ ಕಳುಹಿಸಲ್ಲ.

    ಬಿಗ್‍ಬಾಸ್ ಸ್ಪರ್ಧಿಗಳ ಮನಸ್ಥಿತಿಯನ್ನು ತಿಳಿದುಕೊಳ್ಳಲು ನಾಮಿನೇಷನ್ ಪ್ರಕ್ರಿಯೆ ಮಾಡಿದ್ದಾರೆ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿಲ್ಲ. ಚಂದನಾ ಮನೆಯಿಂದ ಹೊರ ಹೋಗುವಾಗ ಪ್ರಿಯಾಂಕಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇನ್ನೂ ಕ್ಯಾಪ್ಟನ್ ಕಿಶನ್ ಹಾಗೂ ಕಳೆದ ವಾರವೇ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದಿರುವ ಕುರಿ ಪ್ರತಾಪ್, ವಾಸುಕಿ ವೈಭವ್‍ರನ್ನು ಮನೆಯ ಸದಸ್ಯರು ನಾಮಿನೇಟ್ ಮಾಡುವಂತಿರಲಿಲ್ಲ. ಕೊನೆಗೆ ಮನೆಯ ಸದಸ್ಯರು ಈ ವಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ಹರೀಶ್ ರಾಜ್ ನಾಲ್ವರನ್ನು ಮನೆಯಿಂದ ಹೊರ ಹೋಗಲು ನಾಮಿನೇಟ್ ಮಾಡಿದ್ದರು.

    ಆಗ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಕಿಶನ್‍ಗೆ ಒಂದು ವಿಶೇಷ ಅವಕಾಶವನ್ನು ಕೊಟ್ಟಿದ್ದರು. ಅದೇನೆಂದರೆ ನಾಮಿನೇಟ್ ಆಗಿರುವ ಒಬ್ಬರನ್ನು ಸೇಫ್ ಮಾಡುವ ಅವಕಾಶವನ್ನು ಬಿಗ್‍ಬಾಸ್ ಕೊಟ್ಟಿದ್ದರು. ಅದರಂತೆ ಕಿಶನ್, ಹರೀಶ್ ರಾಜ್ ಅವರನ್ನು ಸೇಫ್ ಮಾಡಿದ್ದಾರೆ. ಕೊನೆಯಲ್ಲಿ ಈ ವಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನ್ ಆಚಾರ್ ಹಾಗೂ ಪ್ರಿಯಾಂಕಾ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಯಾರೂ ಮನೆಯಿಂದ ಹೊರ ಹೋಗುವುದಿಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇರುತ್ತದೆ.

  • ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಬೆಂಗಳೂರು: ಬಿಗ್ ಬಾಸ್ ಸೀಸನ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಪ್ರೀತಿ ಇದೆ ಎಂದು ಗಾಸಿಪ್ ಹರಿದಾಡುತ್ತಿದೆ. ಅದರಂತೆಯೇ ಅವರಿಬ್ಬರು ಬಿಗ್ ಬಾಸ್ ಮೆನಯಲ್ಲಿ ಯಾವಾಗಲೂ ಒಟ್ಟಿಗೆ ಇದ್ದು ಟಾಸ್ಕ್ ಮಾಡುತ್ತಿರುತ್ತಾರೆ.

    ಈ ವಾರ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅವರು ಕ್ಯಾಪ್ಟನ್ ಆಗಿದ್ದರು. ಆದರೆ ಮನೆಯಿಂದ ಹೊರ ಹೋಗಲು ರಾಕೇಶ್ ಕೂಡ ನಾಮಿನೇಟ್ ಆಗಿದ್ದರು. ಆದ ಕಾರಣ ಬಿಗ್ ಬಾಸ್ ಒಂದು ವಿಶೇಷವಾದ ಅಧಿಕಾರವನ್ನು ರಾಕೇಶ್‍ಗೆ ಕೊಟ್ಟಿದ್ದರು.

    ಈ ವಾರ ಜಯಶ್ರೀ, ಕವಿತಾ, ಆ್ಯಂಡಿ, ಮುರಳಿ, ಅಕ್ಷತಾ, ರಶ್ಮಿ ಮತ್ತು ರಾಕೇಶ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಬಿಗ್‍ಬಾಸ್ ಕೊಟ್ಟ ವಿಶೇಷ ಅಧಿಕಾರದಲ್ಲಿ ರಾಕೇಶ್, ನಾಮಿನೇಟ್ ಯಿಂದ ತಮ್ಮನ್ನು ಸೇವ್ ಮಾಡಿಕೊಳ್ಳಬಹುದಿತ್ತು ಅಥವಾ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಿತ್ತು. ಆಗ ರಾಕೇಶ್ ಮುರಳಿ ಅವರನ್ನು ಸೇವ್ ಮಾಡಿದರು.

    ರಾಕೇಶ್ ಮುರಳಿಯನ್ನು ಸೇವ್ ಮಾಡಿದ ತಕ್ಷಣ ಬೇಸರ ಮಾಡಿಕೊಂಡ ಅಕ್ಷತಾ ಕೋಪಗೊಂಡು ಬಾತ್‍ರೂಮಿಗೆ ಹೋಗಿ ಜಯಶ್ರೀ ಅವರನ್ನು ಅಪ್ಪಿಕೊಂಡು ಗಳಗಳನೇ ಅತ್ತಿದ್ದಾರೆ. ಈ ವೇಳೆ ನಾನಾಗಿದ್ದರೆ ಅವರನ್ನೇ ಉಳಿಸುತ್ತಿದ್ದೆ ಎಂದು ಹೇಳಿಕೊಂಡು ಅತ್ತಿದ್ದಾರೆ.

    ರಾಕೇಶ್ ಸ್ಪರ್ಧಿಗಳಿಗಾಗಿ ಒಂದು ಆಟ ಆಡಿಸಲು ಎಲ್ಲರನ್ನು ಕರೆದಿದ್ದರು. ಆಗ ಅಕ್ಷತಾ ಸ್ನಾನಕ್ಕೆಂದು ಬಾತ್‍ರೂಮಿಗೆ ಹೋಗಿದ್ದರು. ರಾಕೇಶ್ ಕರೆಯಲು ಹೋಗಿದ್ದಾರೆ. ಆಗ ರಾಕೇಶ್ ಮೇಲೆ ಕೋಪಗೊಂಡು ಗುಡುಗಿದ್ದಾರೆ. ಕೆಲ ಸಮಯ ಬಾತ್‍ರೂಮಿನಲ್ಲಿಯೇ ಕುಳಿತ ಅಕ್ಷತಾ ಜೋರು ಜೋರಾಗಿ ಕೂಗಿ ಅತ್ತರು. ಕೊನೆಗೆ ಅಕ್ಷತಾ ಬಳಿ ಹೋದ ಆ್ಯಂಡಿ ಸಮಾಧಾನ ಮಾಡಿ ಹೊರ ತಂದರು. ನಾನು ಮನೆಯವರ ವಿರೋಧ ಕಟ್ಟಿಕೊಂಡಿದ್ದೇನೆ. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಕ್ಷಮೆ ಕೇಳಬೇಕು ಎಂದು ಬಿಗ್‍ಬಾಸ್ ಬಳಿ ಕೇಳಿಕೊಂಡರು.

    ದಿನಪೂರ್ತಿ ರಾಕೇಶ್ ಮೇಲೆ ಮುನಿಸಿಕೊಂಡಿದ್ದ ಅಕ್ಷತಾ, ಮನೆಯ ಲೈಟ್ ಆಫ್ ಆಗುತ್ತಿದ್ದಂತೆ ಮತ್ತೆ ಆತನೊಂದಿಗೆ ಗುಸು ಗುಸು ಚರ್ಚೆಯಲ್ಲಿ ಭಾಗಿಯಾದ್ರು. ನನ್ನನ್ನು ಯಾಕೆ ಸೇವ್ ಮಾಡಿಲ್ಲ ಅಂತ ಸೂಕ್ತವಾದ ಕಾರಣ ಕೊಡು ಎಂದು ಅಕ್ಷತಾ ಕೇಳಿದ್ರು. ತನ್ನ ನಿರ್ಣಯವನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಬೆಳಗ್ಗೆಯಿಂದ ರಾಕೇಶ್ ಮಾಡತೊಡಗಿದ್ದು ಸಂಚಿಕೆಯಲ್ಲಿ ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

    ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

    ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಈ ವಾರ ಸ್ಪರ್ಧಿ ರಾಕೇಶ್ ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ನಾಮಿನೇಶನ್ ನಡೆಯುತ್ತೆ. ಈ ವಾರ ಕೂಡ ನಾಮಿನೇಶನ್ ನಡೆದಿದ್ದು, ಆಂಡ್ರ್ಯೂ, ಶಶಿ ಹಾಗೂ ಧನರಾಜ್ ಮೂವರು ರಾಕೇಶ್ ಅವರನ್ನು ನಾಮಿನೇಟ್ ಮಾಡಿದರು. 3 ವೋಟ್ ಪಡೆದು ರಾಕೇಶ್ ನಾಮಿನೇಟ್ ಆಗಿದ್ದರು.

    ನಾಮಿನೇಶನ್ ನಂತರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳಿಗೆ ಚಟುವಟಿಕೆಯನ್ನು ನೀಡಿದರು. `ನನ್ ಬಲೂನೇ ಸ್ಟ್ರಾಂಗು ಗುರು’ ಎಂದು ಟಾಸ್ಕ್ ನೀಡಿ ಯಾರ ಬಲೂನ್ ಕೊನೆಯವರೆಗೂ ಒಡೆಯದೇ ಹಾಗೇ ಇರುತ್ತದೆಯೋ ಅವರು ಸೇಫ್ ಆಗಬಹುದು. ಅಷ್ಟೇ ಅಲ್ಲದೇ ಸೇಫ್ ಆಗಿರುವ ಸ್ಪರ್ಧಿಯನ್ನು ನಾಮಿನೇಟ್ ಮಾಡಬಹುದು ಎಂದು ಬಿಗ್‍ಬಾಸ್ ಕಡೆಯಿಂದ ಆದೇಶ ಬಂತು.

    ರಾಕೇಶ್ ಈ ಟಾಸ್ಕ್ ನಲ್ಲಿ ಭಾಗವಹಿಸಿ ಕೊನೆಯವರೆಗೂ ಬಲೂನ್ ಒಡೆಯದೇ ನೋಡಿಕೊಂಡರು. ಬಳಿಕ ಈ ಟಾಸ್ಕ್ ನಲ್ಲಿ ಗೆದ್ದು ಅವರು ಸೇಫ್ ಆದರು. ಸೇಫ್ ಆದ ನಂತರ ರಾಕೇಶ್ ಅವರು ಜಯಶ್ರೀಯನ್ನು ನಾಮಿನೇಟ್ ಮಾಡಿದರು.

    ಈ ವಾರ ಬಿಗ್‍ಬಾಸ್ ಮನೆಯಲ್ಲಿ ಜಯಶ್ರೀ, ಆಂಡ್ರ್ಯೂ, ಸೋನು, ಅಕ್ಷತಾ, ಧನರಾಜ್, ನವೀನ್, ರ‍್ಯಾಪಿಡ್ ರಶ್ಮಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಿಂದ ಯಾರೂ ಹೊರಬೀಳಲಿದ್ದಾರೆ ಎಂಬುದು ಶನಿವಾರ ಕಿಚ್ಚ ಸುದೀಪ್ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಹೇಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv