Tag: ನಾನ್‍ವೆಜ್

  • ಪ್ರೆಷರ್ ಕುಕ್ಕರ್‌ನಲ್ಲಿ ಮಾಡಿ ಸಿಂಪಲ್ ಪಂಜಾಬಿ ಚಿಕನ್ ಕರಿ

    ಪ್ರೆಷರ್ ಕುಕ್ಕರ್‌ನಲ್ಲಿ ಮಾಡಿ ಸಿಂಪಲ್ ಪಂಜಾಬಿ ಚಿಕನ್ ಕರಿ

    ಪ್ರೆಷರ್ ಕುಕ್ಕರ್‌ನಲ್ಲಿ ಸುಲಭವಾಗಿ ಮಾಡಬಹುದಾದ ಚಿಕನ್ ಕರಿ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಪಂಜಾಬಿ ಚಿಕನ್ ಕರಿಯನ್ನು ಪಂಜಾಬ್‌ನ ಮನೆಗಳಲ್ಲಿ ಯಾವಾಗಲೂ ತಯಾರಿಸಲಾಗುತ್ತದೆ. ಈ ರೆಸಿಪಿಯಲ್ಲಿ ಹೆಚ್ಚಿನ ಆಡಂಬರತೆ ಏನೂ ಇಲ್ಲ. ಆದರೆ ಇದರ ರುಚಿ ಅದ್ಭುತ ಎನ್ನದೇ ಇರಲು ಸಾಧ್ಯವಿಲ್ಲ. ತಂದೂರಿ ರೊಟ್ಟಿ, ಕುಲ್ಚಾ, ಜೀರಾ ರೈಸ್ ಅಥವಾ ಯಾವುದೇ ಪಂಜಾಬಿ ಅಡುಗೆಗಳೊಂದಿಗೆ ಇದು ಸೂಪರ್ ಎನಿಸುತ್ತದೆ. ಈ ಸಿಂಪಲ್ ಚಿಕನ್ ಕರಿ ರೆಸಿಪಿ ನೀವೂ ಮಾಡಿ ಆಸ್ವಾದಿಸಿ.

    ಬೇಕಾಗುವ ಪದಾರ್ಥಗಳು:
    ಕತ್ತರಿಸಿದ ಚಿಕನ್ – ಅರ್ಧ ಕೆಜಿ
    ಹೆಚ್ಚಿದ ಈರುಳ್ಳಿ – 2
    ಸಣ್ಣಗೆ ಹೆಚ್ಚಿದ ಟೊಮೆಟೊ – 2
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 5
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಸೀಳಿದ ಹಸಿರು ಮೆಣಸಿನಕಾಯಿ – 2
    ಮೊಸರು – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ದಾಲ್ಚಿನಿ ಎಲೆ – 1

     

    ಲವಂಗ – 2
    ದಾಲ್ಚಿನಿ – 2
    ಏಲಕ್ಕಿ – 1
    ಕಾಶ್ಮೀರಿ ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – 1 ಟೀಸ್ಪೂನ್
    ಕಸೂರಿ ಮೇಥಿ ಪುಡಿ – ಅರ್ಧ ಟೀಸ್ಪೂನ್
    ನಿಂಬೆ ರಸ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ತುಪ್ಪ – 2 ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್ ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಚಿಕನ್ ಚೌ ಮಿನ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ಅನ್ನು ಉಪ್ಪು, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ರಸದೊಂದಿಗೆ ಮ್ಯಾರಿನೇಟ್ ಮಾಡಿ, ಅದನ್ನು ಮುಚ್ಚಿ ಮತ್ತು 1 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ.
    * ಪ್ರೆಷರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ದಾಲ್ಚಿನಿ ಎಲೆ, ಏಲಕ್ಕಿ, ಲವಂಗ ಮತ್ತು ದಾಲ್ಚಿನಿ ಸೇರಿಸಿ, ಹುರಿಯಿರಿ.
    * ನಂತರ ಜೀರಿಗೆ ಸೇರಿಸಿ, ಪರಿಮಳವನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದಾಗ, ಉರಿಯನ್ನು ಕಡಿಮೆ ಮಾಡಿ ಈರುಳ್ಳಿ ಸೇರಿಸಿ. ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಈಗ ಶುಂಠಿ ಪೇಸ್ಟ್ ಹಾಗೂ ತುರಿದ ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ.
    * ಬಳಿಕ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಹಾಗೂ ಟೊಮೆಟೊ ಹಾಕಿ ಎಣ್ಣೆ ಬಿಡುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
    * ಈಗ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಸೇರಿಸಿ. ಎಲ್ಲವನನ್ನೂ 1 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
    * ಚಿಕನ್ ನೀರು ಬಿಡಲು ಪ್ರಾರಂಭಿಸಿದಾಗ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಸೇರಿಸಿ.
    * ಈಗ ಸ್ಥಿರತೆ ನೋಡಿಕೊಂಡು 1-2 ಕಪ್ ಬೆಚ್ಚಗಿನ ನೀರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಪ್ರೆಷರ್ ಕುಕ್ಕರ್‌ನ ಮುಚ್ಚಳ ಹಾಕಿ 2 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
    * ಒತ್ತಡ ಕಡಿಮೆಯಾದ ಬಳಿಕ ಮುಚ್ಚಳ ತೆರೆದು, ಅದಕ್ಕೆ ಕಸೂರಿ ಮೇಥಿ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
    * ಇದೀಗ ಪಂಜಾಬಿ ಚಿಕನ್ ಕರಿ ತಯಾರಾಗಿದ್ದು, ತಂದೂರಿ ರೋಟಿ ಅಥವಾ ಜೀರಾ ರೈಸ್ ಜೊತೆ ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ಗ್ರೀಕ್ ಲೆಮನ್ ಚಿಕನ್

  • ಟ್ರೈ ಮಾಡಿ ಗ್ರೀಕ್ ಲೆಮನ್ ಚಿಕನ್

    ಟ್ರೈ ಮಾಡಿ ಗ್ರೀಕ್ ಲೆಮನ್ ಚಿಕನ್

    ಗ್ರೀಕ್ ಲೆಮನ್ ಚಿಕನ್ (Greek Lemon Chicken) ಅನ್ನು ಚಿಕನ್ ಬ್ರೆಸ್ಟ್ ತುಂಡುಗಳಿಂದ ಮಾಡಲಾಗುತ್ತದೆ. ನಿಂಬೆ ರಸ, ಆಲಿವ್ ಎಣ್ಣೆಯ ಸ್ವಾದ ನಿಮಗೆ ಖಂಡಿತವಾಗಿಯೂ ಹೊಸ ರುಚಿಯ ಅನುಭವ ನೀಡುತ್ತದೆ. ಚಿಕನ್‌ನಿಂದ ಹೊಸದಾಗಿ ಏನಾದರೂ ಸಿಂಪಲ್ ಆಗಿ ಅಡುಗೆ ಮಾಡಲು ಬಯಸುವವರು ಈ ರೆಸಿಪಿಯನ್ನು ಖಂಡಿತಾ ಟ್ರೈ ಮಾಡಿ. ಗ್ರೀಕ್ ಚಿಕನ್ ಲೆಮನ್ ಮಾಡೋದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

    ಬೇಕಾಗುವ ಪದಾರ್ಥಗಳು:
    ಚಿಕನ್ ಬ್ರೆಸ್ಟ್ – 1 ಕೆ.ಜಿ
    ಆಲಿವ್ ಎಣ್ಣೆ – ಅರ್ಧ ಕಪ್
    ನಿಂಬೆ ಸಿಪ್ಪೆಯ ತುರಿ – 1 ಟೀಸ್ಪೂನ್
    ನಿಂಬೆ ಹಣ್ಣಿನ ರಸ – ಕಾಲು ಕಪ್
    ಜೇನುತುಪ್ಪ – 1 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಓರಿಗಾನೋ – 2 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್ ಇದನ್ನೂ ಓದಿ: ಹಂದಿ ಮಾಂಸ ಪ್ರಿಯರಿಗಾಗಿ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಬೌಲ್‌ನಲ್ಲಿ ಆಲಿವ್ ಎಣ್ಣೆ, ನಿಂಬೆ ಸಿಪ್ಪೆಯ ತುರಿ, ನಿಂಬೆ ರಸ, ಜೇನುತುಪ್ಪ, ಬೆಳ್ಳುಳ್ಳಿ, ಓರಿಗಾನೋ, ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ.
    * ಈ ಮಿಶ್ರಣಕ್ಕೆ ಚಿಕನ್ ತುಂಡುಗಳನ್ನು ಹಾಕಿ, ಮಿಕ್ಸ್ ಮಾಡಿ.
    * ಈಗ ಬೌಲ್ ಅನ್ನು 1 ಗಂಟೆ ಫ್ರಿಜ್‌ನಲ್ಲಿ ಇಟ್ಟು ಮ್ಯಾರಿನೇಟ್ ಆಗಲು ಬಿಡಿ.
    * ಈಗ ಗ್ರಿಲ್ ಅಥವಾ ಗ್ರಿಲ್ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
    * ಚಿಕನ್ ತುಂಡುಗಳನ್ನು ಗ್ರಿಲ್‌ನಲ್ಲಿಟ್ಟು, ಬೇಯಿಸಿಕೊಳ್ಳಿ.
    * ಚಿಕನ್‌ನ ಪ್ರತಿ ಬದಿಗಳನ್ನು 5-7 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಈ ಚಿಕನ್ ಅನ್ನು ಗ್ರಿಲ್‌ನಿಂದ ತೆಗೆದು, 5 ನಿಮಿಷ ತಣ್ಣಗಾಗಲು ಬಿಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ, ಗ್ರೀಕ್ ಲೆಮನ್ ಚಿಕನ್ ಅನ್ನು ಬಡಿಸಿ. ಇದನ್ನೂ ಓದಿ: ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ

  • ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ

    ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ

    ಕ್ಕಳು ಯಾವಾಗಲೂ ರಸ್ತೆ ಬದಿ ಸಿಗುವ ಚೈನೀಸ್ ಅಡುಗೆಗಳಿಗೆ ಹಠ ಹಿಡಿಯೋದು ಸಹಜ. ಆದರೆ ಆ ಆಹಾರಗಳ ಸ್ವಚ್ಛತೆ ಬಗ್ಗೆ ಸವಾಲು ಮೂಡುವುದೂ ಸತ್ಯ. ಮನೆಯಲ್ಲಿಯೂ ಚೈನೀಸ್ ಆಹಾರಗಳನ್ನು ತಯಾರಿಸಬಾರದು ಎಂದೇನಿಲ್ಲ. ನಾವು ಈಗಾಗಲೇ ಚೈನೀಸ್ ಅಡುಗೆಗಳ ಹಲವಾರು ರೆಸಿಪಿಗಳನ್ನು ತಿಳಿಸಿಕೊಟ್ಟಿದ್ದೇವೆ. ಇಂದು ಕೂಡಾ ಒಂದು ಚೈನೀಸ್ ನಾನ್‌ವೆಜ್ ಅಡುಗೆ ಹೇಳಿಕೊಡುತ್ತೇವೆ. ಸೂಪರ್ ಟೇಸ್ಟ್ ಆಗಿರುವ ಆರೆಂಜ್ ಚಿಕನ್ (Orange Chicken) ರೆಸಿಪಿ ನೀವೊಮ್ಮೆ ಟ್ರೈ ಮಾಡಿ ಮಕ್ಕಳಿಗೆ ನೀಡಿ.

    ಬೇಕಾಗುವ ಪದಾರ್ಥಗಳು:
    ಚಿಕನ್ – ಅರ್ಧ ಕೆಜಿ (ಮೂಳೆಗಳಿಲ್ಲದ ಚರ್ಮ ರಹಿತ ತುಂಡುಗಳು)
    ಮೊಟ್ಟೆ – 2
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
    ಮೈದಾ ಹಿಟ್ಟು – ಅರ್ಧ ಕಪ್
    ಕಾರ್ನ್ ಫ್ಲೋರ್ – ಅರ್ಧ ಕಪ್
    ಎಣ್ಣೆ – ಹುರಿಯಲು ಬೇಕಾಗುವಷ್ಟು
    ಬಿಳಿ ಎಳ್ಳು – 1 ಟೀಸ್ಪೂನ್
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ಆರೆಂಜ್ ಸಾಸ್ ತಯಾರಿಸಲು:
    ಎಣ್ಣೆ – 2 ಟೀಸ್ಪೂನ್
    ತುರಿದ ಶುಂಠಿ – 2 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಕಿತ್ತಳೆ ರಸ – 1 ಕಪ್
    ಸೋಯಾ ಸಾಸ್ – ಕಾಲು ಕಪ್
    ಕಂದು ಸಕ್ಕರೆ – ಅರ್ಧ ಕಪ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ವಿನೆಗರ್ – 2 ಟೀಸ್ಪೂನ್
    ಎಳ್ಳೆಣ್ಣೆ – 1 ಟೀಸ್ಪೂನ್
    ನೀರು – ಅರ್ಧ ಕಪ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್ ಇದನ್ನೂ ಓದಿ: ಹಂದಿ ಮಾಂಸ ಪ್ರಿಯರಿಗಾಗಿ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಮೊಟ್ಟೆ ಒಡೆದು ಕಲಡಿ ಬದಿಗಿಡಿ.
    * ಇನ್ನೊಂದು ಬಟ್ಟಲಿನಲ್ಲಿ ಉಪ್ಪು, ಕರಿಮೆಣಸಿನ ಪುಡಿ, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಈಗ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ, ಬಿಸಿ ಮಾಡಿಕೊಳ್ಳಿ.
    * ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿದ ಚಿಕನ್ ಅನ್ನು ಒಂದೊಂದೇ ಮೊಟ್ಟೆಯಲ್ಲಿ ಅದ್ದಿ, ಬಳಿಕ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಬಳಿಕ ಬಿಸಿ ಮಾಡಿದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
    * ಚಿಕನ್ ತುಂಡುಗಳು ಬೇಯುವವರೆಗೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ 5 ನಿಮಿಷ ಫ್ರೈ ಮಾಡಿ, ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್‌ನಲ್ಲಿ ಹರಡಿ. ಎಲ್ಲಾ ಚಿಕನ್ ತುಂಡುಗಳನ್ನೂ ಹೀಗೇ ಪುನರಾವರ್ತಿಸಿ.
    * ಈಗ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಹುರಿದುಕೊಳ್ಳಿ.
    * ಬಳಿಕ ಕಿತ್ತಳೆ ರಸ, ಸೋಯಾ ಸಾಸ್, ಕಂದು ಸಕ್ಕರೆ, ಕೆಂಪು ಮೆಣಸಿನ ಪುಡಿ, ವಿನೆಗರ್, ಎಳ್ಳೆಣ್ಣೆ ಸೇರಿಸಿ, ಕುದಿಸಿ.
    * ಈಗ ಸಣ್ಣ ಬೌಲ್ ತೆಗೆದುಕೊಂಡು ಅದರಲ್ಲಿ ಕಾರ್ನ್ ಫ್ಲೋರ್ ಹಾಗೂ ಅರ್ಧ ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪ್ಯಾನ್‌ಗೆ ಸೇರಿಸಿ, 2-3 ನಿಮಿಷ ಬೇಯಿಸಿ.
    * ಸಾಸ್ ದಪ್ಪವಾಗುತ್ತಾ ಬಂದಂತೆ ಫ್ರೈ ಮಾಡಿ ಇಟ್ಟಿದ್ದ ಚಿಕನ್ ತುಂಡುಗಳನ್ನು ಸೇರಿಸಿ, ಮಿಶ್ರಣ ಮಾಡಿ.
    * ಈಗ ಸ್ಪ್ರಿಂಗ್ ಆನಿಯನ್ ಹಾಗೂ ಬಿಳಿ ಎಳ್ಳನ್ನು ಸೇರಿಸಿ, ಮಿಶ್ರಣ ಮಾಡಿ.
    * ಇದೀಗ ಚೈನೀಸ್ ಸ್ಟೈಲ್‌ನ ಆರೆಂಜ್ ಚಿಕನ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಮಕ್ಕಳಂತೂ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನೂ ಓದಿ: ಚಹಾ ಸಮಯದಲ್ಲಿ ಆನಂದಿಸಿ ರುಚಿರುಚಿಯಾದ ಚಿಕನ್ ಬಾಲ್ಸ್