ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದ ನಟ ನಾನಾ ಪಾಟೇಕರ್ (Nana Patekar) ಕೊನೆಗೂ ಕ್ಷಮೆ (Apologized) ಕೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ಫೋಟೋಗಾಗಿ ಅಭಿಮಾನಿಯೊಬ್ಬ ಪಾಟೇಕರ್ ಬಳಿ ಬಂದಿದ್ದ, ಅಭಿಮಾನಿಗೆ ಫೋಟೋ ಕೊಡುವ ಬದಲು, ಕಪಾಳಕ್ಕೆ ಬಾರಿಸಿದ್ದರು ನಾನಾ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನಾನಾ ಪಾಟೇಕರ್ ಅಭಿಮಾನಿಯ ಕೆನ್ನೆಗೆ ಹೊಡೆದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಆ ವಿಡಿಯೋ ವೈರಲ್ ಕೂಡ ಆಗಿತ್ತು. ಅನೇಕರು ನಾನಾ ನಡೆಯನ್ನು ಖಂಡಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು ಸಿನಿಮಾದ ದೃಶ್ಯ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ, ಅದು ಸಿನಿಮಾದ ವಿಡಿಯೋ ಅಲ್ಲ ಎನ್ನುವುದನ್ನು ನಾನಾ ಒಪ್ಪಿಕೊಂಡಿದ್ದಾರೆ.
ಅಭಿಮಾನಿಗೆ ಹೊಡೆದಿರುವುದು ನನಗೂ ನೋವಾಗಿದೆ. ಅವರು ನನ್ನ ಸಿನಿಮಾ ತಂಡದವರು ಅಂದುಕೊಂಡಿದ್ದೆ. ಆ ನಂತರ ನಾನು ಅವರನ್ನು ಹುಡುಕಿ ಕ್ಷಮೆ ಕೇಳೋಣ ಅಂದುಕೊಂಡಿದ್ದೆ. ಆದರೆ, ಅವರು ಭಯದಿಂದ ಓಡಿದ್ದರು. ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ. ನಾನು ಎಂದೂ ಆ ರೀತಿ ಮಾಡಿದವನು ಅಲ್ಲ ಎಂದು ನಾನಾ ಪಾಟೇಕರ್ ವಿಡಿಯೋವೊಂದನ್ನು ಮಾಡಿ ಕ್ಷಮೆ ಕೇಳಿದ್ದಾರೆ.
ಪಂಚಭಾಷೆಯಲ್ಲಿ ತಯ್ಯಾರಾಗುತ್ತಾ ಪ್ಯಾನ್ ಇಂಡಿಯಾ ತುಂಬೆಲ್ಲಾ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಮಧ್ಯೆ ಕನ್ನಡದಲ್ಲಿ ನಿರ್ಮಾಣಗೊಂಡು ಬಿಡುಗಡೆಯ ಹೊಸ್ತಿಲಲ್ಲಿರುವ `ಇನಾಮ್ದಾರ್’ (Inamdar) ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಳ್ತಿದೆ. ಹೌದು, ಟ್ರೇಲರ್ ನೋಡಿ ಇಂಪ್ರೆಸ್ ಆಗಿರುವ ಪರಭಾಷಾ ಸಿನಿಮಾ ಮಂದಿ `ಇನಾಮ್ದಾರ್’ ಚಿತ್ರದ ಹಕ್ಕುಗಳನ್ನು ತಮ್ಮ ಸ್ವಾದೀನಕ್ಕೆ ಪಡೆಯಲು ಮುಂದೆ ಬರುತ್ತಿದ್ದಾರಂತೆ. ಈ ಕುರಿತು ಸಂತೋಷ ಹಂಚಿಕೊಂಡ ಚಿತ್ರದ ನಿರ್ದೇಶಕರಾದ ಸಂದೇಶ್ ಶೆಟ್ಟಿ (Sandesh Shetty) ಆಜ್ರಿಯವರು `ಇನಾಮ್ದಾರ್’ ಸೃಷ್ಟಿಸಲಿರುವ ಸಂಚಲನ ಹಾಗೂ ತಲ್ಲಣದ ಬಗ್ಗೆ ಮಾತಿಗಿಳಿದರು. ಹೆಸರಾಂತ ಹಿರಿಯ ನಟ ನಾನಾ ಪಾಟೇಕರ್ ಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿರುವ ಕುರಿತು ಮಾಹಿತಿ ಹೊರಹಾಕಿದರು. ಪಂಕಜ್ ತ್ರಿಪಾಠಿ ಹಾಗೂ ನಾನಾ ಪಾಟೇಕರ್ (Nana Patekar) ಇಬ್ಬರನ್ನೂ ಸೇರಿಸಿ ಸಿನಿಮಾ ಮಾಡಲಿದ್ದು, ಬಾಲಿವುಡ್ ನಿರ್ಮಾಪಕರು ಬಂಡವಾಳ ಹೂಡಲು ಮುಂದೆ ಬಂದಿರುವುದಾಗಿ ಹೇಳಿಕೊಂಡರು.
ಸಂದೇಶ್ ಶೆಟ್ಟಿ ಆಜ್ರಿ ಕರಾವಳಿ ಭಾಗದ ನಿರ್ದೇಶಕರು. ಕಳೆದ ಮೂರು ವರ್ಷಗಳ ಹಿಂದೆ `ಕತ್ತಲೆ ಕೋಣೆ’ ಎಂಬ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ ಮಾಡಿದ್ದರು. ಈಗ ಭಿನ್ನ ಕಥಾಹಂದರವುಳ್ಳ `ಇನಾಮ್ದಾರ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲು ರೆಡಿಯಾಗಿದ್ದಾರೆ. ಟೀಸರ್ ನಲ್ಲಿ ದಟ್ಟಕಾನನ ಹಾಗೂ ಬುಡಕಟ್ಟು ಜನಾಂಗದ ದರ್ಶನ ಮಾಡಿಸಿ ಸಿನಿಮಾಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದ್ದರು. ಕೌತುಕದ ಜೊತೆಗೆ ಕಿಕ್ ಇರಲೆಂದು `ಸಿಲ್ಕು ಮಿಲ್ಕು’ ಸುಂದರಿನಾ ಕಣಕ್ಕಿಳಿಸಿದ್ದರು. ಆಕೆ ಅಖಾಡವನ್ನ ಕಬ್ಜ ಮಾಡಿಕೊಂಡ ಬೆನ್ನಲ್ಲೇ ಈಗ ಟ್ರೈಲರ್ ಹೊರಬಿದ್ದಿದೆ. ಮಾಸ್, ಕ್ಲಾಸ್ ಎನ್ನದೇ ಎಲ್ಲಾ ವರ್ಗದ ಸಿನಿಮಾ ಪ್ರೇಮಿಗಳನ್ನ ತನ್ನತ್ತ ಸೆಳೆಯುತ್ತಿದೆ. ಅಚ್ಚರಿಯೆಂಬಂತೆ `ಇನಾಮ್ದಾರ್’ಗೆ ಪರಭಾಷೆಯಲ್ಲಿಯೂ ಬೇಡಿಕೆ ಹೆಚ್ಚುತ್ತಿದೆ. ಡಬ್ಬಿಂಗ್ ರೈಟ್ಸ್ ಕೊಳ್ಳಲು ಹಲವರು ಮುಂದೆ ಬಂದಿದ್ದು `ಇನಾಮ್ದಾರ್’ ತಂಡಕ್ಕೆ ಹೊಸ ಹುರುಪು ತುಂಬಿದೆ. ಕನ್ನಡದ ಜೊತೆಗೆ ಬೇರೆ ಭಾಷೆಗೂ ಸಿನಿಮಾನ ಡಬ್ ಮಾಡಿ ರಿಲೀಸ್ ಮಾಡುವ ಪ್ಲ್ಯಾನ್ ನಿರ್ದೇಶಕರಿಗಿದೆ.
ಇನ್ನೂ `ಇನಾಮ್ದಾರ್’ ಚಿತ್ರಕ್ಕಾಗಿ ನಿರ್ದೇಶಕ ಸಂದೇಶ್ ಶೆಟ್ಟಿ ಎರಡು ವರ್ಷ ಶ್ರಮಪಟ್ಟಿದ್ದಾರೆ. ಛತ್ರಪತಿ ಶಿವಾಜಿ ಮಹರಾಜ್ ರಿಂದ ಇನಾಮ್ ಪಡೆದಂತಹ ವಂಶಸ್ಥರನ್ನು ಸಂಪರ್ಕ ಮಾಡಿ ಮಾಹಿತಿ ಕಲೆಹಾಕಿರುವ ನಿರ್ದೇಶಕರು, ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಬರೆದಿರುವ `ಶಿವಾಜಿ ಮೂಲ ಕನ್ನಡದ ನೆಲ’ ಪುಸ್ತಕವನ್ನು ಆಧಾರಗ್ರಂಥವನ್ನಾಗಿಸಿಕೊಂಡು `ಇನಾಮ್ದಾರ್’ ಚಿತ್ರ ಕಟ್ಟಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಛತ್ರಪತಿ ಶಿವಾಜಿಯನ್ನು ಆರಾಧಿಸುವ ಇನಾಮ್ದಾರ್ ಕುಟುಂಬ ಹಾಗೂ ಕರಾವಳಿಯಲ್ಲಿ ಸಾಕ್ಷಾತ್ ಶಿವನನ್ನು ಪೂಜಿಸುವ ಕಾಡು ಜನರ ನಡುವೆ ನಡೆಯುವ ವರ್ಣಸಂಘರ್ಷದ ಕಥೆಯನ್ನು ಸಿನಿಮಾವಾಗಿಸಿದ್ದಾರೆ. ಕೆಳಜಾತಿಯವರ ಮೇಲೆ ಮೇಲ್ವರ್ಗದ ದಬ್ಬಾಳಿಕೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಸಮಾನತೆ-ಸೌಹಾರ್ದತೆ ಬರೀ ಬಾಯಿಮಾತಿಗಷ್ಟೇ ಸೀಮಿತವಾಗಿರಬಾರದು, ಅದು ಜಾರಿಯಾಗ್ಬೇಕು ಎನ್ನುವ ನಿಟ್ಟಿನಲ್ಲಿಯೇ ಶೆಟ್ರು ಅಖಾಡಕ್ಕಿಳಿದಿದ್ದಾರೆ. ತನ್ನ ಕನಸಿನ `ಇನಾಮ್ದಾರ್’ ಮೂಲಕ ಕರಾಳತೆಯನ್ನು ಬಟಾಬಯಲು ಮಾಡಿ ಜನರನ್ನೂ ಜಾಗೃತಗೊಳಿಸ್ತೇನೆ ಎಂತಲೂ ತಿಳಿಸಿದ್ದಾರೆ.
ಇಂತಹದ್ದೊಂದು ಸಾಹಸಕ್ಕೆ ಕೈಹಾಕಿರುವ ಸಂದೇಶ್ ಶೆಟ್ಟಿ, ಸ್ಯಾಂಡಲ್ವುಡ್ನ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ, ಚಿತ್ರಕಲಾ ರಾಜೇಶ್ ಸೇರಿದಂತೆ ಹಲವರನ್ನ ಒಟ್ಟುಗೂಡಿಸಿದ್ದಾರೆ. ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕರಡಿ ಕಾಮ ಮತ್ತು ಕಮರಕಾಳ ಈ ಎರಡು ಪಾತ್ರಗಳನ್ನೂ ಪೋಷಣೆ ಮಾಡಿದ್ದಾರೆ. ಸಿನಿದುನಿಯಾದಲ್ಲಿ ತಮ್ಮದೊಂದು ಛಾಪು ಮೂಡಿಸಲೇಬೇಕು ಅಂತ ಪಣತೊಟ್ಟಿರುವ ಸಂದೇಶ್ ಗೆ ನೆಗೆಟೀವ್ ಶೇಡ್ ಪಾತ್ರಗಳಲ್ಲಿ ಗುರ್ತಿಸಿಕೊಳ್ಳಬೇಕು ಎನ್ನುವ ಹೆಬ್ಬಯಕೆ. ಅದನ್ನು ತಮ್ಮದೇ ನಿರ್ದೇಶನದ ಚಿತ್ರದಲ್ಲಿ ಈಡೇರಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಮೂರ್ನಾಲ್ಕು ಗಂಟೆಗಳ ಕಾಲ ಮೇಕಪ್ ಹಾಕಿಸಿಕೊಂಡು ನಟಿಸುವುದರ ಜೊತೆಗೆ ಘಟಾನುಘಟಿ ತಾರೆಯರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಳೆಬೇರು-ಹೊಸ ಚಿಗುರು ಎನ್ನುವಂತೆ ಸೀನಿಯರ್ಸ್ ಜೊತೆಗೆ ಜೂನಿಯರ್ಸ್ ಗಳು ಇದ್ದಾರೆ. ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ, ಸಂಜು ಬಸಯ್ಯ ಜೊತೆಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಮಿಂಚಿದ್ದಾರೆ. `ಸಿಲ್ಕು ಮಿಲ್ಕು’ ಸಾಂಗ್ ಮೂಲಕ ಎಸ್ತರ್ ಎಕ್ಕಾಮಕ್ಕಾ ಕಿಕ್ ಕೊಟ್ಟಿದ್ದಾರೆ. ಬುಡಕಟ್ಟು ಜನಾಂಗದ ಹೆಣ್ಣುಮಗಳ ಪಾತ್ರದಲ್ಲಿ ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದಾರೆ. ರಂಜನ್ ಛತ್ರಪತಿ ನಾಯಕನಟನಾಗಿ ಧಗಧಗಿಸಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ `ಇನಾಮ್ದಾರ್’ ಶೂಟಿಂಗ್ ನಡೆದಿದೆ. ಚಿತ್ರದಲ್ಲಿ ಒಟ್ಟು 6 ಫೈಟ್ ಸೀಕ್ವೆನ್ಸ್ ಗಳಿದ್ದು ಥ್ರಿಲ್ಲರ್ ಮಂಜು ಅವರು 5 ಆ್ಯಕ್ಷನ್ ಸೀಕ್ವೆನ್ಸ್ ನ ಕಂಪೋಸ್ ಮಾಡಿಕೊಟ್ಟಿದ್ದಾರೆ. ನಿರ್ದೇಶನ, ನಟನೆ ಜೊತೆಗೆ ಟೈಗರ್ ಫೈಟ್ ಸೀಕ್ವೆನ್ಸ್ ಸಂಯೋಜನೆ ಮಾಡಿದ್ದಾರಂತೆ ಡೈರೆಕ್ಟರ್ ಸಂದೇಶ್ ಶೆಟ್ಟಿ. ಈಗಾಗಲೇ ಟ್ರೇಲರ್ ನಲ್ಲಿ ಟೈಗರ್ ಫೈಟ್ ಸೀಕ್ವೆನ್ಸ್ ಝಲಕ್ ಹೊರಬಿದ್ದಿದೆ. ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗೆ ಶಕ್ತಿತುಂಬಿದೆ. ಮುರುಳಿ ಕ್ಯಾಮೆರಾ ಕೈಚಳಕ ತೋರಿದ್ದು, ಶಿವರಾಜ್ ಮೇಹು ಸಂಕಲನ ತೋರಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿಯವರ ಸ್ನೇಹಿತ ನಿರಂಜನ್ ಶೆಟ್ಟಿ ತಲ್ಲೂರು `ಇನಾಮ್ದಾರ್’ಗೆ ಬಂಡವಾಳ ಹೂಡಿದ್ದು, ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಹಾಗೂ ತಸ್ಮೈ ಪ್ರೊಡಕ್ಷನ್ ನಿರ್ಮಾಣದಲ್ಲಿ ಅದ್ದೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದು, ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದೆ. ಇದೇ ಅಕ್ಟೋಬರ್ 27ರಂದು ಚಿತ್ರ ತೆರೆಗಪ್ಪಳಿಸಲಿದೆ.
ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿರುವುದಾಗಿ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಘೋಷಿಸಿದ್ದಾರೆ. ಇಂಥದ್ದೊಂದು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದಿರುವ ಅವರು, ಇದು ಅವರ 534ನೇ ಸಿನಿಮಾ ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾ ಆಕರ್ಷಕ ಮತ್ತು ಸ್ಫೂರ್ತಿದಾಯಕ ಎಂದು ಹೆಮ್ಮೆಪಟ್ಟಿದ್ದಾರೆ. ಶೂಟಿಂಗ್ ಸೆಟ್ ನಿಂದಲೇ ಕ್ಲ್ಯಾಪ್ ಬೋರ್ಡ್ ಹಿಡಿದುಕೊಂಡಿರುವ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೇ, ಈ ಸಿನಿಮಾ ವಿವಾದವಾದಾಗ ನಿರ್ದೇಶಕರ ಪರವಾಗಿ ನಿಂತಿದ್ದರು. ಈಗ ಮತ್ತೆ ವಿವೇಕ್ ಜೊತೆ ಮತ್ತೊಂದು ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಈ ನಿರ್ದೇಶಕರ ಜೊತೆ ಮತ್ತೆ ಮತ್ತೆ ಸಿನಿಮಾ ಮಾಡುವ ಇಂಗಿತವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಮತ್ತೆ ಮತ್ತೆ ಈ ರೀತಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದೂ ಅವರು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ಉದ್ಘಾಟನೆಗೊಂಡ 4ನೇ ದಿನಕ್ಕೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿ ಪುಡಿ
ಸದ್ಯ ದಿ ವಾಕ್ಸಿನ್ ವಾರ್ ಸಿನಿಮಾದ ಶೂಟಿಂಗ್ ಲಖನೌದಲ್ಲಿ ನಡೆದಿದೆ. ಈ ಸಿನಿಮಾದಲ್ಲಿ ನಾಯಕನಾಗಿ ನಾನಾ ಪಾಟೇಕರ್ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಗೋಪಾಲ್ ಸಿಂಗ್, ದಿವ್ಯಾ ಸೇಠ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ವಿವೇಕ್ ಅಗ್ನಿಹೋತ್ರಿ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ನಟ ನಾನಾ ಪಾಟೇಕರ್, ದಿ ಕಾಶ್ಮೀರ್ ಫೈಲ್ಸ್ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ದಟ್ಟವಾಗಿಯೇ ಕೇಳಿ ಬರುತ್ತಿದೆ. ಸದ್ಯ ವಿವೇಕ್ ಅಗ್ನಿಹೋತ್ರಿ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ನಾಯಕನಾಗಿ ನಾನಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಧಿಕೃತವಾಗಿ ವಿವೇಕ್ ಅಗ್ನಿಹೋತ್ರಿಯಾಗಲಿ, ನಾನಾ ಪಾಟೇಕರ್ (Nana Patekar) ಆಗಲಿ ಈ ವಿಷಯವನ್ನು ಹೇಳದೇ ಇದ್ದರೂ, ಈ ಸುದ್ದಿಯಂತೂ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ಇಂಥದ್ದೊಂದು ಜೋಡಿ ಒಟ್ಟಾಗಿ ಸಿನಿಮಾ ಮಾಡಲು ಸಾಧ್ಯವಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಹಾಗಾಗಿ ಈ ಸುದ್ದಿ ಗಾಸಿಪ್ ಅಂತಾನೂ ಹೇಳಲಾಗುತ್ತಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ಸಿನಿಮಾ ವಿಚಾರದಲ್ಲಿ ಅವರು ನಟ, ಇವರು ನಿರ್ದೇಶಕ. ಹೇಳುವ ಕಥೆಗೂ ಮತ್ತು ಖಾಸಗಿ ಜೀವನಕ್ಕೂ ಸಂಬಂಧವಿಲ್ಲ. ಹಾಗಾಗಿ ಒಟ್ಟಾಗಿ ಸಿನಿಮಾ ಮಾಡುವುದರಲ್ಲಿ ಯಾವುದೇ ತೊಂದರೆ ಆಗಲಾರದು. ಈ ರೀತಿಯ ಜೋಡಿಯು ಒಟ್ಟಾಗಿ ಸಿನಿಮಾ ಮಾಡಿದರೆ, ಅಲ್ಲೊಂದು ಬೇರೆ ರೀತಿಯ ಸಂದೇಶ ಕೂಡ ಹೋಗಬಹುದು ಎನ್ನುತ್ತಾರೆ ಹಲವರು. ಯಾರು ಏನೇ ಹೇಳಿದರೂ, ವಿವೇಕ್ ಸಿನಿಮಾ ಮಾಡಲು ಒಪ್ಪಿಕೊಂಡರೂ, ನಾನಾ ಇದಕ್ಕೆ ಒಪ್ಪುತ್ತಾರಾ ಕಾದು ನೋಡಬೇಕು.
ದಿ ವ್ಯಾಕ್ಸಿನ್ ವಾರ ಸಿನಿಮಾದ ಸ್ಕ್ರಿಪ್ಟ್ ಮುಗಿದಿದೆ. ಇನ್ನಷ್ಟೇ ಚಿತ್ರತಂಡ ಶೂಟಿಂಗ್ ಗೆ ಹೊರಡಬೇಕು. ಕೋವಿಡ್ ವೇಳೆಯಲ್ಲಿ ನಡೆದ ಘಟನೆಯನ್ನೇ ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ವಿವೇಕ್. ಇದೊಂದು ದೇಶವೇ ಹೆಮ್ಮೆ ಪಡುವಂತಹ ಸಿನಿಮಾವಾಗಲಿದೆ ಎಂದು ಈ ಹಿಂದೆಯೇ ವಿವೇಕ್ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ನಲ್ಲಿ ಮೀಟೂ ಭಯ ಹುಟ್ಟಿಸಿದ್ದ ನಟಿ ತನುಶ್ರೀ ದತ್ತ, ಮತ್ತೆ ಈ ವಿಷಯವನ್ನು ನೆನಪಿಸಿದ್ದಾರೆ. ಹಾರ್ನ್, ಓಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಾವು ನಾನಾ ಪಾಟೇಕರ್ ಜೊತೆ ನಟಿಸುವಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಹೇಳಿಕೊಂಡಿದ್ದರು. ಆ ದೌರ್ಜನ್ಯ ಆಗಿದ್ದು ನಾನಾ ಅವರಿಂದ ಎಂದು ದೂರು ದಾಖಲಿಸಿದ್ದರು.
ಇದೀಗ ಮತ್ತೆ ತನುಶ್ರೀ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದೆ. ನನಗೆ ಏನಾದರೂ ಪ್ರಾಣಹಾನಿಯಾದರೆ, ಅದಕ್ಕೆ ನಾನಾ ಕಾರಣ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಬಾಲಿವುಡ್ ಮಾಫಿಯಾ ಬಗ್ಗೆಯೂ ಮಾತನಾಡಿರುವ ಅವರು, ಸುಶಾಂತ್ ಸಿಂಗ್ ಸಾವಿನಲ್ಲಿ ಕೇಳಿ ಬಂದ ಹೆಸರುಗಳೇ ಬಾಲಿವುಡ್ ಮಾಫಿಯಾದಲ್ಲಿ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಶ್ವೇತಾ ಶ್ರೀವಾಸ್ತವ್
ಬಾಲಿವುಡ್ ಮಾಫಿಯಾ ಕುರಿತು ಹೆಚ್ಚಿನ ಮಾಹಿತಿಯನ್ನೂ ಹಂಚಿಕೊಂಡಿರುವ ತನುಶ್ರೀ, ‘ಈ ಮಾಫಿಯಾದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಯಾರ ಸಿನಿಮಾ ನೋಡಬೇಕು, ಯಾವ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ದ್ವೇಷಿಸಬೇಕು ಹೀಗೆ ಎಲ್ಲವನ್ನೂ ಈ ಮಾಫಿಯಾ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಅವರಿಂದಾಗಿ ತಾನು ಎಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ ಎಂದೂ ಹೇಳಿದ್ದಾರೆ.
ತನುಶ್ರೀ ಕೇವಲ ನಾನಾ ಪಾಟೇಕರ್ ಮೇಲಷ್ಟೇ ಆರೋಪ ಮಾಡಿಲ್ಲ. ಎರಡು ವರ್ಷಗಳ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೇಲೆಯೂ ಆರೋಪ ಮಾಡಿದ್ದರು. ಸಹನಟನ ಜೊತೆ ಬೆತ್ತಲೆಯಾಗಿ ನೃತ್ಯ ಮಾಡಲು ಅವರು ನನಗೆ ಪ್ರಚೋದಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಕೂಡ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು.
Live Tv
[brid partner=56869869 player=32851 video=960834 autoplay=true]
ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣ ನೆಲಕಚ್ಚಿದ್ದು, ಈ ಸಂಬಂಧ ಸರಿಯಾದ ಸಾಕ್ಷಿ ಸಿಕ್ಕದ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಕೈಬಿಟ್ಟಿದ್ದಾರೆ.
ಕಳೆದ ವರ್ಷ ನಟಿ ತನುಶ್ರೀ ದತ್ತಾ ನಾನಾ ಪಾಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಈ ಸಂಬಂಧ ನಾನಾ ಪಾಟೇಕರ್ ವಿರುದ್ಧ ಯಾವುದೇ ಆಧಾರ ಸಿಗದ ಹಿನ್ನೆಲೆ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಭಾರತದಲ್ಲಿನ ಮೊದಲ ಮೀ ಟೂ ಪ್ರಕರಣ ಸೋಲು ಕಂಡಿದೆ.
ಈ ಹಿಂದೆ ತನುಶ್ರೀ ಅವರು ನಾನಾ ಪಾಟೇಕರ್ ವಿರುದ್ಧ ಪ್ರಕರಣ ಕೈಬಿಟ್ಟಿರುವುದು ಸುಳ್ಳು, ಸುಮ್ಮನೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಮೀಟೂ ಪ್ರಕರಣ ಬಯಲಿಗೆ ಬಂದ ಬಳಿಕ ಪಾಟೇಕರ್‍ಗೆ ಬಾಲಿವುಡ್‍ನಲ್ಲಿ ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಆದ್ದರಿಂದ ಅವರ ಬೆಂಬಲಿಗರು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಈ ಪ್ರಕರಣದಿಂದ ಪಾಟೇಕರ್ ಅವರ ಮಾನ ಹರಾಜಾಗಿದೆ. ಅವರ ನಿಜ ಮುಖವನ್ನು ಮರೆಮಾಚಿ, ಸಮಾಜದ ಎದುರು ಸಜ್ಜನರ ರೀತಿ ಗುರುತಿಸಿಕೊಳ್ಳಲು ಈ ಪ್ರಯತ್ನಗಳು ನಡೆಯುತ್ತಿದೆ. ಪಾಟೇಕರ್ ಸಮಾಜದಲ್ಲಿ ಎಲ್ಲರೆದುರು ಕಳೆದುಕೊಂಡ ಗೌರವವನ್ನ ಮತ್ತೆ ಪಡೆಯಲು ಈ ರೀತಿ ಸುಳ್ಳು ಸುದ್ದಿಯಲ್ಲಿ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕಳೆದ ವರ್ಷ ತನುಶ್ರೀ ದತ್ತಾ ನಟ ನಾನಾ ಪಾಟೇಕರ್ ವಿರುದ್ಧ ತಮ್ಮ ಚಿತ್ರ ‘ಹಾರ್ನ್ ಓಕೆ ಪ್ಲೀಸ್’ನ ವಿಶೇಷ ಹಾಡಿನ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಆರೋಪಿಸಿದ್ದರು. ಡ್ಯಾನ್ಸ್ ಮಾಡುವ ವೇಳೆ ನನಗೆ ಮುಜುಗರವಾಗುವಂತ ಸ್ಟೆಪ್ಸ್‍ಗಳನ್ನು ಹಾಕಲು ಒತ್ತಾಯಿಸುತ್ತಿದ್ದರು ಎಂದು ಮೀಟೂ ಅಭಿಯಾನದ ಅಡಿಯಲ್ಲಿ ಆರೋಪಿಸಿ, ದೂರು ನೀಡಿದ್ದರು. ಅಲ್ಲದೆ ಈ ರೀತಿ ಕಿರುಕುಳ ಕೊಟ್ಟಿದ್ದಕ್ಕೆ ನಾನಾ ಪಾಟೇಕರ್ ಅವರ ಮಾತುಗಳನ್ನು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ಕೂಡ ಕೇಳಿರಲಿಲ್ಲ. ಬಳಿಕ ತನುಶ್ರೀ ಅವರು ಚಿತ್ರದಿಂದ ಹೊರನಡೆದಿದ್ದರು. ಬಳಿಕ ರಾಖಿ ಸಾವಂತ್ ಆ ಹಾಡಿಗೆ ನಾನಾ ಪಾಟೇಕರ್ ಜೊತೆ ಹೆಜ್ಜೆ ಹಾಕಿದ್ದರು.
ತನುಶ್ರೀ ದತ್ತ ಅವರೇ ಬಾಲಿವುಡ್‍ನಲ್ಲಿ ಮೀ ಟೂ ಅಭಿಯಾನದಲ್ಲಿ ಮೊದಲು ಧ್ವನಿ ಎತ್ತಿದ ನಟಿಯಾಗಿದ್ದು, ಆ ನಂತರ ಬಹಳಷ್ಟು ನಟಿಯರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಆಗ ಬಾಲಿವುಡ್‍ನ ಹಿರಿಯ ಸ್ಟಾರ್ ನಟರ ಹೆಸರುಗಳು ಕೂಡ ಮೀಟೂ ಪ್ರಕರಣಗಳಲ್ಲಿ ಕೇಳಿಬಂದಿತ್ತು.
Tanushree Dutta alleged harassment case against Nana Patekar: Mumbai Police files a B Summary report in the case. A 'B summary' report is filed when police can not find evidence in support of the complaint and are unable to continue the investigation. pic.twitter.com/tVOof7WTX0